ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಾಯಿ,ಅತ್ತೆ,ಸೊಸೆ,ಮಗಳು
ಈ ಪಾತ್ರಗಳಷ್ಟೇ ಸಾಕೆ
ನಿನ್ನದೇ ಹೆಸರು ಬೇಡವೇ?

ಅಡುಗೆ,ಪಾತ್ರೆ,ಪೊರಕೆ
ಇವುಗಳಷ್ಟೇ ಸಾಕೆ ಕೆಲಸಕ್ಕೆ
ನಿನ್ನ ಕೌಶಲ್ಯಕ್ಕೆ ಸಾಣೆ ಬೇಡವೇ ?

ಮಕ್ಕಳು,ಪತಿ,ಮನೆಯವರ
ಲಾಲನೆ ಪಾಲನೆಯಷ್ಟೇ ಸಾಕೆ
ನಿನ್ನ ಮನದಾಸೆಗಳ ಲಾಲನೆ ಬೇಡವೆ?

ಮನದ ಬೇಡಿಕೆ,ಪೂರೈಕೆಗಳಗೆ
ಅಂಗಲಾಚುವದಷ್ಟೇ ಸಾಕೆ
ಸ್ವಾಭಿಮಾನದ ಗಳಿಕೆ ಬೇಡವೆ?

ಪುಟ್ಟ ಬಾವಿಯಿಂದ ಹೊರಗೆ ಜಿಗಿದುನೋಡಮ್ಮೆ
ವಿಶಾಲ ಜಗದ ಹರವು ಕಂಡೀತು
ಮುಂದೆ ನಿನ್ನ ಹೆಸರೂ ಕೇಳೀತು…


About The Author

1 thought on “ಗಂಗಾ ಚಕ್ರಸಾಲಿ ಅವರ ಕವಿತೆ-ಇಷ್ಟೇ ಸಾಕೆ…!”

  1. ಮನದ ಭಾವಕೆ ನಿಮ್ಮ ಅಕ್ಷರದ ಸ್ಫೂರ್ತಿ
    ತುಂಬಾ ಚೆನ್ನಾಗಿ ಮೂಡಿಬಂದಿದೆ ಕವನ ಮೇಡಂ

    ಮೀನಾಕ್ಷಿ ಸೂಡಿ

Leave a Reply

You cannot copy content of this page

Scroll to Top