ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನೊಳಗೆ ನಾನು ಕಳೆದು ಹೋಗಿರುವೆ
ಜಗದ ಸಂತೆಯನು ಮರೆತೇ ಬಿಟ್ಟಿರುವೆ
ಏಕಾಂತವನ್ನು ಅಪ್ಪಿಕೊಂಡಿರುವೆ
ಮೌನಕ್ಕಿಂತಲೂ ಮೌನದಲಿ
ನನ್ನೊಳಗೆ ಧ್ಯಾನಿಸುತ್ತಿರುವೆ
ಕತ್ತಲೊಳಗೂ ಬೆಳಕ ಹುಡುಕುತ್ತಲಿರುವೆ
ಕಣ್ಣೆದಿರಿನ ಮಾಯೆಗೆ ಸೋಲದೆ
ಸಂಬಂಧಗಳ ಬಲೆಯೊಳಗೆ ಸಿಲುಕದೆ
ಸೋಲು ಗೆಲುವುಗಳ ಲೆಕ್ಕಾಚಾರವ
ಮಾಡದೆ
ಸಾಗುವೆನು ಹೀಗೆ ಮುಂದೆ
ಹಿಂತಿರುಗಿ ನೋಡದೆ
ಎಲ್ಲವೂ ಗೌಣ ಎನಿಸುತಿದೆ
ಉಸಿರೊಳಗಿದೆ ನಿಟ್ಟುಸಿರ ಬಾರ
ತುಂಡರಿಸ ಬೇಕಿದೆ ನೋವಿನ ದಾರ
ಹುಡುಕಿ ಕೊಳ್ಳ ಬೇಕಿದೆ
ನೆಮ್ಮದಿಯ ತಾಣ
ಸೋಲದೆ ಮುನ್ನಡೆಯುವೆನು
ಈ ಬಾರಿ
ಕಂಡುಕೊಳ್ಳುವೆನು ಹೊಸ ದಾರಿ
ಗೆಲ್ಲಲೇ ಬೇಕೆಂಬ ಹುಚ್ಚಲ್ಲ
ಸೋಲಬಾರದೆಂಬ ಕಿಚ್ಚಷ್ಟೇ
ಸೋತು ಗೆಲ್ಲುವೆನು
ನೋವ ಮರೆಯುವೆನು
ಅತೃಪ್ತಿಯ ಕಿಡಿಯ ಆರಿಸಿ
ಸಂತೃಪ್ತಿಯ ಹೊಸ ಬೆಳಕಿನಲ್ಲಿ
ಪ್ರಜ್ವಲಿಸುವೆನು
ಕಿರಣವಾಗಿ ಉಳಿಯುವೆನು
ನೆಮ್ಮದಿಯ ಹೊಂದುವೆನು


About The Author

1 thought on “ನಾಗರಾಜ ಜಿ. ಎನ್. ಬಾಡ ಕವಿತೆ-ಹುಡುಕಾಟ…”

  1. ಕವನದ ಸಾಲುಗಳ ಆಪ್ತತೆ ಅನುಬಂಧ ಎನಿಸುತ್ತದೆ. ಇದ್ದು ಇಲ್ಲವಾಗುವ ಕಾಲದ ನಡುವೆ ಇದ್ದು ನಗಬೇಕು. ಜಗದ ಸಂತೆಯಲ್ಲಿ ನಮ್ಮ ನೆಮ್ಮದಿಯ ಉಸಿರಾಗಿಸಿ ಬದುಕಬೇಕು. ಮೌನದಿ ಸಮಾಧಾನ ಒಳ್ಳೆಯದು. ಸಂಬಂಧಗಳು , ಸೋಲು ಗೆಲುವುಗಳು ನಮ್ಮ ಸುತ್ತಿಕೊಳ್ಳುವವು. ಆದರೂ ಸಾಗಲೇಬೇಕು. ನಮ್ಮ ಇಷ್ಟದ ಜೊತೆಗೆ ಒಂದು ಸದೃಢ ಹರುಷವಾಗಿ ಸಾಗಬೇಕು. ಹೊಸತನದ ನೆಮ್ಮದಿಗೆ ನಾವು ಸಾಗಲೇಬೇಕು ಎಂದು ಆಶಿಸುವ ಕವನದ ಸಾಲುಗಳು ಚೆನ್ನಾಗಿದೆ. ಬದುಕಿನ ಸರಳ ಸೂಕ್ಷ್ಮ ಸಂವೇದನೆ ಇದರ ಒಡಲಲ್ಲಿ ಅಡಗಿದೆ. ಮನದಿ ಮೂಡಿದ ಸುಂದರ ಸಾಲುಗಳು ಆಪ್ತವಾಗಿದೆ……….

Leave a Reply

You cannot copy content of this page

Scroll to Top