ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕರುನಾಡಿನ ಮನ ಮನೆಗಳಲಿ ನಿತ್ಯ
ರಾರಾಜಿಸಿದವರು ಕುವೆಂಪು
ಅರ್ಬಿಯಂತೆಯೆ ಉತ್ಕೃಷ್ಟ ಬರೆಹಗಳ
ಹರಿಸಿದವರು ಕುವೆಂಪು

ಶ್ರೀರಾಮಾಯಣ ದರ್ಶನಂ ಗ್ರಂಥವನು
ಮಲೆಕಾನನಗಳರಳಿಸಿದರೆ
ಪ್ರೇಮಕಾಶ್ಮೀರದೊಳಗೆ ಸುಂದರ ನವಿಲನು
ಕುಣಿಸಿದವರು ಕುವೆಂಪು

ಮೊದಲು ಜ್ಞಾನಪೀಠ ಪ್ರಶಸ್ತಿಯನ್ನು
ಮುಡಿಗೇರಿಸಿಕೊಂಡವರಿವರು
ಭಾಷೆಯ ಉಳಿಸುವ ವಿಚಾರ ಕ್ರಾಂತಿಗೆ
ಆಹ್ವಾನಿಸಿದವರು ಕುವೆಂಪು

ಮನುಜಮತ ವಿಶ್ವಪಥಗಳ ಸತ್ವವನು
ಸಾರಿದ ಮಹಾನ್ ಚೇತನ
ಸಾಹಿತ್ಯದ ಶ್ರೇಷ್ಟತೆಗಾಗಿ ಚೇತನ್ಯದ
ಹನಿಯಾದವರು ಕುವೆಂಪು

ಮಲೆಗಳಲಿ ಮದುಮಗಳ ಸ್ವಚ್ಛಂದ
ಪರಿಚಯ ಮಾಡಿಸಿದರು ಅಭಿ
ಕಲಾತಪಸ್ವಿಯಾಗಿ ಮೆರೆದು ಪಕ್ಷಿಕಾಶಿಯ
ತೋರಿಸಿದವರು ಕುವೆಂಪು


About The Author

Leave a Reply

You cannot copy content of this page

Scroll to Top