ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹತ್ತಿರ ಬಂದರೆ ಭಾವ
ಕೊರೆಯುವುದು ಜೀವ
ನಾಳೆಯೆಂಬ ಅರಿವ ನವ
ಉತ್ಸಾಹವ ಕದ್ದು ಬಿಟ್ಟ ಹಾವ
ಹಾಗಾಗಿ ದೂರವೇ ಒಳಿತು
ನಿಂತು ನೋಡಲು
ಹತ್ತಿರವಿರಲಿ ದೂರವಿರಲಿ
ಶುಭವಿರಲಿ ಅಪಾಯವಿರಲಿ
ಹತ್ತಿರ ನಿಂತು ನೋಡಬೇಕು
ಎಂದುಕೊಂಡರೂ
ದೂರವೇ ಚೆಂದ ನೋಡಲು
ಎಲ್ಲಿಯವರೆಗೆ ನಿಲುವು ನಮ್ಮದು
ಅದು ಒಂದೊಂದು ಪರಮಾಪ್ತ
ಪ್ರಭಾತಕ್ಕೊಂದು ಸೂರ್ಯೋದಯ
ಪ್ರತಿಯಾಗಿ ಸಂಜೆಗೊಂದು ಅಸ್ತ
ನಡುವೆ ಸಮಚಿತ್ತ ಬದುಕಿಗೆ
ಪ್ರಕಟ ಭಾವಕ್ಕಿಂತ ಅಪ್ರಕಟಿತ ಹೆಚ್ಚು
ಮನದ ಮಾತು ಸಂಬಂಧದಲ್ಲಿ
ಅರ್ಥ ಪ್ರಶ್ನೆ ಉತ್ತರ ಎಲ್ಲವೂ
ಸರಿ ಇದ್ದರೆ ಜಾಗೃತ ಸ್ಥಿತಿ
ದೃಷ್ಟಿ ಸೃಷ್ಟಿ ಎಲ್ಲಕ್ಕಿಂತ ಸಹಜ
ಬದುಕಿನ ನಡೆ ನುಡಿಯುವ ಮಾತು
ಜನ್ಯವಾಗುವ ಕ್ಷಣ ಕಾಲ ದಿನಗಳೊಳಗೆ
ಇಷ್ಟ ಕಷ್ಟದ ಆಪ್ತ ಬದುಕು ಭಾವಗಳು
ಸೋತರೂ ಸೋಲದಿದ್ದರೂ
ಅನುಭವಿಸಬೇಕು ಆರಾಧಿಸಬೇಕು
ಮಾತಿಲ್ಲದ ಮೌನದಿಂದ
ಹಿತದೊಳಗೆ ಸಾಗಬೇಕು
ಆತ್ಮವಾಗಬೇಕು ಅರಿವೊಳಗೆ
ಏನಾದರೂ ನೋಡಬೇಕು ನಗುವನ್ನು ನಗುವಿನೊಳಗೆ ಅಡಗಿದ
ಮಣ್ಣ ಸಗ್ಗವನ್ನು ಬದುಕ ಪರಿಯನ್ನು ಕಣ್ಣ ಕನ್ನಡಿಯಲ್ಲಿ ತಿಳಿವಿಗೆ ಹಾಗೇ
ಮತ್ತೆ ಮತ್ತೆ………….


About The Author

1 thought on “ನಾಗರಾಜ ಬಿ.ನಾಯ್ಕ ಕವಿತೆ -ದೂರ ನಿಂತು ನೋಡಬೇಕು………”

  1. ಸಾಹಿತ್ಯ ಕೊಡುವ ಸುಖವನ್ನು, ದೂರದಿ ನಿಂತು ನೋಡಿ ಅನುಭವಿಸಲಾಗುವುದಿಲ್ಲ. ಅದನ್ನು ಓದಿ ತಿಳಿದುಕೊಳ್ಳಬೇಕು. , ಅನುಭವಿಸಬೇಕು. ಕೆಲವೊಮ್ಮೆ ಕೆಲವನ್ನು ದೂರದಿಂದ ನೋಡಿದಾಗಲೇ ಚಂದ … ಇನ್ನು ಕೆಲವನ್ನು ಸನಿಹದಲ್ಲಿ ನಿಂತು ಅನುಭವಿಸುವುದೇ, ಹಿತವಾಗಿರುತ್ತದೆ. ಮಾತಿನೊಳಗಿನ ಮೌನ, ಮೌನದೊಳಗಿನ ಮಾತು, ಬದುಕಿನ ಖುಷಿಯನ್ನು ಹೆಚ್ಚಿಸುತ್ತದೆ.
    ಹೇಳಿದರೂ …ಕೇಳಿದರೂ.. ಹೇಳದೆ, ಕೇಳದೆ ಉಳಿದ ಭಾವ, ಮೀಟುವುದು ಹೃದಯವನ್ನ. ನಗು ಅರಳುವ ಪರಿಗೆ, ಜೀವದೊಲವಿನ ಬೆಸುಗೆ.. ಅನಂತ.. ಮತ್ತೆ ಮತ್ತೆ ಕಾಡುವುದು ಕವಿತೆಯ ಆಂತರ್ಯ. ..

    ನಾನಾ ಬಾಡ

Leave a Reply

You cannot copy content of this page

Scroll to Top