ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಂಕ್ರಾಂತಿ

ರತ್ನಾ.ಗಿ.ಬದಿ

Sankranti festival celebrations at Ayodhya grounds

ತೇರನು ಏರಿ ಬಂದ ನೇಸರ
ಮಾಗಿ ಚಳಿ ನೋಡು ಎಂದವರ
ಈ ಸಂಕ್ರಾಂತಿ ಎಬ್ಬಿಸಿ ಎಲ್ಲರ
ಮನವ ತಣಿಸುವ ನೀನು ಬಾರ

ಎಣ್ಣೆ ,ಸ್ನಾನ ಕೊರೆದ ಮೈಗಿಲ್ಲಿ
ಎಲ್ಲೆಡೆ ಹರುಷ ದೀವಿಗೆ ಕರದಲ್ಲಿ
ಎಳ್ಳು, ಬೆಲ್ಲ ನೈವೇದ್ಯ ದೇವಗಿಲ್ಲಿ
ಅನ್ನದಾತನ ಮೊಗ ಖುಷಿ ಇಲ್ಲಿ

ಎಳ್ಳು, ಹೋಳಿಗೆ ,ಕಬ್ಬು
,ಬೆತ್ತಾಸ
ಎಲ್ಲರ ಮನೆ ,ಹಸು ಮಂದಹಾಸ
ಬೆಳ್ಳಿ ಎರಡೆತ್ತು ಭೂಮಿಗೆ ಹೊಸ
ಹೊಲದಲ್ಲಿ ಹಕ್ಕಿ ಆರಿಸಿವೆ ಕಸ

ಮನೆ ಮುಂದೆ ರಂಗೋಲಿ ಚಂದ
ಜಗಕೆ ಸಂಕ್ರಾಂತಿ ಹಬ್ಬ ಚಂದ
ಮಕರ ಸಂಕ್ರಾಂತಿ ಈಗ ಅಂದ
ಒಮಿಕ್ರಾನ್ ಓಡ್ಲಿ ಕಾಲಿಗೆ ಬುದ್ಧಿ ಹೇಳಲಿ ದೇವನಿನ್ನಿಂದ


About The Author

1 thought on “ಸಂಕ್ರಾಂತಿ”

Leave a Reply

You cannot copy content of this page

Scroll to Top