ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂ ಗಾತಿ

ತೇಲುವ ವಲಸೆ ಚಿತ್ರಗಳು

ಬಿ.ಶ್ರೀನಿವಾಸ

India's Coronavirus Lockdown Means Millions Of Migrant Workers Can't Earn A  Living : Goats and Soda : NPR

ಹುಡುಗ ಹಾರಿಬಿಟ್ಟ ಪಾರಿವಾಳದ ಕಣ್ಣುಗಳುದುರಿಸಿದ ಹನಿಯಲ್ಲೂ ಅವೇ ಚಿತ್ರಗಳು

ಇಂದು ನಿನ್ನೆಯದಲ್ಲ
ನೆತ್ತರಿಗೂ
ಬೆವರಿಗೂ
ಇರುವೆ ನಂಟು

ರಾಚುತ್ತದೆ ನೆತ್ತರು
ಬಸಿಯುತ್ತದೆ ಬೆವರು
ಗುರಿ ಒಂದೇ

ಮಗ ಮನೆ ಸೇರಲಿಯೆಂದು ಕಾತರಿಸುವ ಅವ್ವ,
ಉಗ್ರರ ಪಟ್ಟಿಗೂ ಮುನ್ನ.

ಮನೆಯೆದುರಿಗೇ ಬಂದು ನಿಂತಿದೆ
ಉಸಿರು ಕಟ್ಟಿದಾಗಲೇ ಬಡಿಯಲು ನಿಂತವರ ಅಂತರಂಗ!

ತೋಯ್ದು ತೇಲಬೇಕಿತ್ತು
ಬೀದಿ
ಸುದ್ದಿಗಳಿಗೆ ಇದ್ದಿದ್ದರೆ ಅಂತಃಕರಣ!


About The Author

1 thought on “ತೇಲುವ ವಲಸೆ ಚಿತ್ರಗಳು”

  1. S D Doddachikkannanavar

    ಕಣ್ಣ ಹನಿ ಹನಿಗಳಲಿ
    ಆತಂಕದ ಛಾಯೆ
    ಹೊಡ ಮೂಡಿದ
    ಅಂತಃಕರಣದ
    ಆತಂಕ ..
    ತುಂಬಾ ಸುಂದರವಾಗಿ ಮೂಡಿ ಬಂದಿದೆ ಸರ್

Leave a Reply

You cannot copy content of this page

Scroll to Top