ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ನೂರಅಹ್ಮದ ನಾಗನೂರ

ಬೆಳ್ಳಿಯ ಮಂಜಿಗೆ ಚಿನ್ನದ ಜ್ವಾಲೆಗಳಿಂದ ವಿದಾಯ ಹೇಳುತ್ತೇನೆ
ಗೋದಿಯ ಕಿವಿಯೋಲೆಗಳಿಂದ ಗದ್ದೆಯಲ್ಲಿ ಸಿಂಗರಿಸಿಕೊಳ್ಳುತ್ತೇನೆ

ಮನದಲಿ ಶಾಂತಿ ನೆಲೆಸಿದೆ ಆಕಾಶದಲಿ ಸಂಕ್ರಾತಿ ಸಂಭ್ರಮಿಸಿದೆ
ಮೂಡಗಾಳಿ ಹೊರಟಿದೆ ಗಾಳಿಪಟದೊಂದಿಗೆ ಹಕ್ಕಿ ಹಾರಿಸುತ್ತೇನೆ

ಸೂರ್ಯನು ಉತ್ತರರಾಣಿ ಪೊಂಗಲ್ ಕಿಚಡಿ ದಕ್ಷಿಣಾದಿ ಭರಣಿ
ನೆಲ ಜಲದಲಿ ಹರಿದು ಎಳ್ಳುಬೆಲ್ಲ ಹಸಿರಿನ ಕಾಂತಿ ತಿನಿಸುತ್ತೇನೆ

ಹೂವುಗಳೊಂದಿಗಿನ ಗೆಳೆತನವು ಮುಳ್ಳುಗಳಿಗೆ ಶಿಕ್ಷೆಯಾಗಿಸಿದೆ
ಭರವಸೆಯ ದೀಪವು ಬರುತಿರುವುದನ್ನು ನಾನು ನೋಡುತ್ತೇನೆ

ದುಃಖದ ಹೃದಯಕೆ ಸುಖದೌಷಧ ಹೇಗಾದರೂ ತರಿಸಬಹುದು
ಬಿಸಿಲ ಹವೆಯಲ್ಲಿಯೂ ತಂಪ ಹವಾಗುಣದ ಸುಗ್ಗಿ ತರಿಸುತ್ತೇನೆ

ನೂರ್ ಹೊಸಉತ್ಸಾಹ ತಂದಿತು ದೀಪೋತ್ಸವದ ಬೆಳಕು ಬೆಳಗಲಿ
ಮೋಡವು ಹಾರಾಡುತಿವೆ ಸೌಂದರ್ಯದ ರಶ್ಮಿಗಳನು ತರುತ್ತೇನೆ


About The Author

Leave a Reply

You cannot copy content of this page

Scroll to Top