ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಗ್ಗಿಯ ಸಂಭ್ರಮ

ಚಂದ್ರು ಪಿ ಹಾಸನ್

CHANDRU HASSAN

Paddy harvesting suffers setback in Amphan-battered Bengal - The Hindu  BusinessLine

ಬಂದಿತು ಸಡಗರದ ಸಂಕ್ರಾಂತಿ
ತಂದಿತು ರೈತರಿಗೆ ವಿಶ್ರಾಂತಿ
ಬಾನಲ್ಲಿ ಭಾನುದೇವನ ಚಲನೆ
ಭುವಿಯಲ್ಲಿ ಸುಗ್ಗಿರಾಯನ ಆಗಮನೆ

ವರ್ಷವಿಡೀ ಬೆವರುಹರಿಸಿ ದುಡಿದು
ಹರುಷದಿ ಒಟ್ಟುಗೂಡಿಸಿ ಕುಣಿದು
ಎಲ್ಲೆಲ್ಲೂ ಸುಗ್ಗಿಯ ಸಂಭ್ರಮ
ಇದು ರೈತನ ಸಾರ್ಥಕ ಶ್ರಮ

ಎಳ್ಳುಬೆಲ್ಲವ ಪರಸ್ಪರ ಬೀರಿ
ಸ್ನೇಹದೊಳು ಸರಸರ ಸೇರಿ
ಸಿಹಿಸಿಹಿ ಪದಗಳು ಕಟ್ಟುತ್ತಾ
ಕುಣಿದ ರೈತನು ಹಿಗ್ಗಿ ಹಿಗ್ಗುತ್ತಾ

ಕೋಟಿ ವಿದ್ಯೆಗಳೆಷ್ಟೋ ಮೇಟಿ
ನಿನ್ನ ವಿದ್ಯೆಗೆ ಯಾವುದಯ್ಯ ಸಾಟಿ
ಬೆವರ ಹನಿಯ ಸುರಿಸಿ ಸುರಿಸಿದೆ
ಎಲ್ಲೆಡೆ ಜೀವಕ್ಕೆ ಚೈತನ್ಯವ ಹರಿಸಿದೆ

ಸುಗ್ಗಿಯ ಹಬ್ಬವು ಧರೆಯಲ್ಲಿ
ಹಿಗ್ಗುತ ಸೇರುವ ನಾವಿಲ್ಲಿ
ಹುಗ್ಗಿಯ ಎಲ್ಲೆಡೆ ಹಂಚೋಣ
ಸಗ್ಗವ ಭುವಿಗೆ ತರೋಣ


About The Author

2 thoughts on “ಸುಗ್ಗಿಯ ಸಂಭ್ರಮ”

  1. ಸುಗ್ಗಿಯ ವಿಶೇಷತೆ ಸಾರುವ
    ಸೊಗಸಾದ ಕವನ ಸರ್
    ಹಬ್ಬದ ಶುಭಾಶಯಗಳು

    1. ಚಂದ್ರು ಪಿ ಹಾಸನ್

      ಧನ್ಯವಾದಗಳು ಗೆಳೆಯರೇ,

      ತಮಗೂ ಕೂಡ ಹಬ್ಬದ ಶುಭಾಶಯಗಳು

Leave a Reply

You cannot copy content of this page

Scroll to Top