ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸವಿ ಸವಿ ಸಂಕ್ರಮಣ

ಅರುಣಾ ರಾವ್

ಇರುವೆಗಳು ಸಾಲಾಗಿ ಬರುತಲಿವೆಯಿತ್ತಲೆ
ಕಣದಲ್ಲಿ ಗೋಪುರದ ಬೆಳೆ ರಾಶಿಯತ್ತಲೇ

ತಲೆ ಮೇಲೆ ಗಂಗಮ್ಮನ ಹೊತ್ತ ಭೂಮಿ ಒಕ್ಕಲು
ಕೋಲೆ ಬಸವಣ್ಣನನ್ನು ಹಿಡಿದಿರುವ ಹೈಕಳು

ಕರಡಿಯನು ಬೀದಿಗಳಲಿ ಕುಣಿಸುತ್ತ ತಕತಕ
ಬರುತಲಿದೆ ಸುಗ್ಗಿ ಕಾಲ ನಲಿವೀನ ಥೈತಕ

ಕಣಿ ಹೇಳುವ ಕೊರವಂಜಿ ಬಾಗಿಲಲ್ಲಿ ನಿಂತಿರೆ
ಬಳೆಗಾರ ಚೆನ್ನಯ್ಮ ಮಲ್ಹಾರವ ಇಳುಕಿರೆ

ಕಣಗಳಲಿ ಕೋಲಾಟ ಬಯಲಾಟದ ಸಂಭ್ರಮ
ಗೆಣಸು ಕಬ್ಬು ಸೊಗಡವರೆ ಕಂಪದು ಘಮಘಮ

ಕಡಲೆ ಕಾಳು ಎಳ್ಳು ರಾಗಿ ಧಾನ್ಯಗಳ ರಾಶಿ
ಪ್ರಸವದಲ್ಲೂ ನಗುವ ಇಳೆಯು ನಿತ್ಯ ಷೋಡಶಿ

ಮನೆಗಳಿಗೆ ತೆರತೆರಳಿ ಎಳ್ಳುಬೆಲ್ಲ ಬೀರೊ ಕಾತರ
ಕೋಪ ದ್ಚೇಷ ವೈಷಮ್ಯಗಳ ಓಡಿಸುವ ಸಡಗರ

ಮೃಗಪಕ್ಷಿಗಳಿಗೂ ಕೂಢ ಬಂದಿತಿದೋ ಸಂಕ್ರಾಂತಿ 
ಸಮೃದ್ಧಿ ಸಂತೃಪ್ತಿ ಸಂಬಂಧ ಸಂಗಮದ ಉತ್ಕ್ರಾಂತಿ


About The Author

Leave a Reply

You cannot copy content of this page

Scroll to Top