ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮುದುಕ ಮತ್ತು ಡಾಕ್ಟರ್ ಸಾಹೇಬ

ಬಿ.ಶ್ರೀನಿವಾಸ

Sold for £260,000, Mahatma Gandhi's glasses set to transform seller's life  | Latest News India - Hindustan Times

ಸೀಳು ಬಿದ್ದ ದೇಶ
ಮುರಿದ ಕನ್ನಡಕದ ಫ್ರೇಮಿನ
ಗಾಜಿನಲಿ

ಎಲ್ಲಿ ಬಿತ್ತೋ…
ತಿರುಗದೆ ನಿಂತ ಸೊಂಟದ ಗಡಿಯಾರ
ಯಾರಿಗೆ ಬಿತ್ತೋ…
ಅಹಿಂಸೆಯ ಕೋಲು!

ಧ್ಯಾನಕೂ
ಮೌನಕೂ
ಐವತ್ತಾರಿಂಚುಗಳಷ್ಟೇ ಅಲ್ಲ

ಇರುವೆ
ಗಾತ್ರವಾದರೂ ಸರಿ

ಬುದ್ಧನ ಕರುಣೆ ಬಟ್ಟಲು
ಕೈಯ್ಯಲ್ಲಿರಬೇಕು ಅಷ್ಟೆ.

ಮುದುಕ ಚಡಪಡಿಸುತ್ತಿದ್ದಾನೆ
ಡಾಕ್ಟರ್ ಸಾಹೇಬ ಸಂತೈಸುತ್ತಿದ್ದಾನೆ.


About The Author

Leave a Reply

You cannot copy content of this page

Scroll to Top