ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹೆಣ್ಣು ; ಮತ್ತವಳ ಕನಸು

ಡಾ. ಸುರೇಖಾ ರಾಠೋಡ್

280 Girl & Woman Art ideas | art, female art, painting

ಓದಬೇಕು ಹೆಣ್ಣು
ತನ್ನ ಅಸ್ತಿತ್ವ ಸ್ಥಾಪಿಸುವುದಕ್ಕಾಗಿ

ಓದಬೇಕು ಹೆಣ್ಣು
ತನ್ನ ತಾನು ಗುರುತಿಸಿಕೊಳ್ಳುವುದಕ್ಕಾಗಿ…

ಓದಬೇಕು ಹೆಣ್ಣು
ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವುದಕ್ಕಾಗಿ…

ಓದಬೇಕು ಹೆಣ್ಣು
ಸ್ವಾವಲಂಬಿಯಾಗುವುದಕ್ಕಾಗಿ..

ಓದಬೇಕು ಹೆಣ್ಣು
ಜ್ಞಾನ ಪಡೆಯುವುದಕ್ಕಾಗಿ…

ಓದಬೇಕು ಹೆಣ್ಣು
ಸಮಾಜದಲ್ಲಿರುವ ಅಸಮಾನತೆಯ ಅರಿಯುವುದಕ್ಕಾಗಿ…

ಓದಬೇಕು ಹೆಣ್ಣು
ಉದ್ಯೋಗ ಪಡೆಯುವುದಕ್ಕಾಗಿ….

ಓದಬೇಕು ಹೆಣ್ಣು
ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯುವುದಕ್ಕಾಗಿ….

ಓದಬೇಕು ಹೆಣ್ಣು
ಸಮಾಜದಲ್ಲಿರುವ ಅಜ್ಞಾನವ ಅಳಿಸಿಹಾಕುವುದಕ್ಕಾಗಿ…

ಓದಬೇಕು ಹೆಣ್ಣು
ನಾಯಕತ್ವ ಗುಣಗಳನ್ನು ಬೆಳಿಸಿಕೊಳ್ಳುವುದಕ್ಕಾಗಿ…

ಓದಬೇಕು ಹೆಣ್ಣು
ತನ್ನ ಹಕ್ಕುಗಳನ್ನು ಅರಿತುಕೊಳ್ಳುವುದಕ್ಕಾಗಿ…

ಓದಬೇಕು ಹೆಣ್ಣು
ಸ್ವತಂತ್ರವಾಗಿ ಬದುಕುವುದಕ್ಕಾಗಿ…

ಓದಬೇಕು ಹೆಣ್ಣು
ಅನಿಸಿದ್ದನ್ನು ಅಭಿವ್ಯಕ್ತಿ ಪಡಿಸುವುದಕ್ಕಾಗಿ…

ಓದಬೇಕು ಹೆಣ್ಣು
ತನ್ನ ಜೀವನದ ಎಲ್ಲಾ ನಿರ್ಧಾರಗಳನ್ನು ತಗೆದುಕೊಳ್ಳುವುದಕ್ಕಾಗಿ…

ಓದಬೇಕು ಹೆಣ್ಣು
ಲಿಂಗ ಅಸಮಾನತೆಯ ಅಳಿಸಿಹಾಕುವುದಕ್ಕಾಗಿ…
ಸಮಾನತೆ ಸಾಧಿಸುವುದಕ್ಕಾಗಿ…
……..

.

About The Author

Leave a Reply

You cannot copy content of this page

Scroll to Top