ಅಂಕಣ ಸಂಗಾತಿ

ಅಮೃತ ವಾಹಿನಿಯೊಂದು

ಅಮೃತಾ ಮೆಹೆಂದಳೆ

ನಿನ್ನ ಪ್ರೀತಿಯ ರಂಗಲ್ಲಿ

ಬೆರೆತುಹೋದ ಗುಂಗಲ್ಲಿ

ನಿನ್ನ ಪ್ರೀತಿಯ ರಂಗಲ್ಲಿ ಬೆರೆತುಹೋದ ಗುಂಗಲ್ಲಿ …

ಎಕ್ ಮನ್ ಥಾ ಮೇರೆ ಪಾಸ್
ವೋ ಅಬ್ ಖೋನೇ ಲಗಾ ಹೆ
ಪಾಕರ್ ತುಝೆ ಹಾಯ್ ಮುಝೆ
ಕುಛ್ ಹೋನೇ ಲಗಾ ಹೆ
ಏಕ್ ತೇರೆ ಭರೋಸೆ ಪೆ..

ನನ್ನ ಮಾತು ಕೇಳುತ್ತಿತ್ತು ಈ ಮನಸ್ಸು ಇಲ್ಲಿಯವರೆಗೂ. ಆದರೀಗ, ಊಹೂಂ..ಅದೆಲ್ಲಿ ಕಳೆದುಹೋಗಿದೆಯೋ ಏನೋ.. ಆದರೆ ಮತ್ತೇನನ್ನೋ ಪಡೆದುಕೊಂಡು ಬಿಟ್ಟಿದೆ ಗೊತ್ತಾ? ನಿನ್ನ ಪಡೆದ ಮೇಲೆ ಏನಾಗಿದೆ ಗೊತ್ತಾ? ಎಲ್ಲ ಕಳೆದುಕೊಂಡ ನನ್ನ ಪ್ರಜ್ಞೆ ನಿನ್ನನ್ನೇ ನಂಬಿ, ಇಡೀ ಬದುಕನ್ನು ಹೀಗೇ ಕಳೆಯಬೇಕೆಂದು ಹಟ ಮಾಡುತ್ತಿದೆ!
ಯೆ ಉಮ್ರ್ ಗುಝರ್ ಜಾಯೆ
ತೇರೆ ಸಾಥ್ ಗುಝರ್ ಜಾಯೆ..

ತಪ್ಪು ತಿಳಿಯಬೇಡ ನೀನು ಕನಸಿನಲ್ಲಿ ಕಂಡರೆ
ಬೇರೆ ಏನೋ ಹೇಳುವಾಗ ಕಣ್ಣು ತುಂಬಿಬಂದರೆ..


ಅದು ಹಾಗೇ ಕಣೋ, ಕನಸಲ್ಲಿ ನೀನು ಬಂದರೆ ನಾಚಿಕೆಯಾಗಿ ಸಾಯುವಂತಾಗತ್ತೆ. ಎದುರಿಗೆ ಬಂದರೆ ಮಾತುಗಳೆಲ್ಲ ಭಾವುಕವಾಗಿ, ತೊದಲಿ ಕಣ್ಣೀರಾಗತ್ತೆ. ಇಲ್ಲದ ನಿನ್ನನ್ನೂ ಪಕ್ಕದಲ್ಲೇ ಇರುವ ಹಾಗೆ ಕಲ್ಪಿಸಿಕೊಂಡು ಮಾತಾಡಿಬಿಡುತ್ತೇನೆ. ತುಂಟ ಯೋಚನೆಗಳಿಗೆ ಕೆನ್ನೆ ಬಿಸಿಯಾಗಿಬಿಡತ್ತೆ.
ಈ ಮನಸಿಗೆ ಭಾಸವು ಇಲ್ಲೇ ನೀನು ನನ್ನ ಕೂಗಿದಂತೆ..
ಸಣ್ಣ ಸಲ್ಲಾಪವನ್ನು ಒಂಟಿಯಾಗಿ ನಡೆಸುತ್ತ
ನಾ ನಿಂತೆ..

ಈಗಲಾದರೂ ನನ್ನ ಮನಸ್ಸಿನ ಭಾವನೆ ನಿನಗರ್ಥವಾಗಿರಬಹುದಾ? ನಿನ್ನ ಹೆಸರನ್ನೇ ಜಪಿಸುತ್ತಿರುವ ವಿಷಯ ಇನ್ನಾದರೂ ತಿಳಿದಿರಬಹುದಾ? ಅಥವಾ ಏನೂ ತಿಳಿದೇ ಇಲ್ಲದೆ, ನಿನ್ನ ಮನಸ್ಸಿಂದ ನನ್ನ ಹೆಸರೇ ಅಳಿಸಿ ಹೋಗುತ್ತಿರಬಹುದಾ?
ಮನಸಲ್ಲೆ ಅಂದ ಮಾತು ತಡವಾಗಿ ಕೇಳಿತೇನು
ಗೊತ್ತಿಲ್ಲದೆ ನಾ ಗೀಚಲೇ ಹೆಸರೊಂದನು
ಅಳಿಸುವ ಮುನ್ನವೇ

ಮೆ ಜಬ್ ಸೆ ತೇರೆ ಪ್ಯಾರ್ ಕೆ
ರಂಗೋಮೆ ರಂಗೀ ಹೂ
ಜಾಗತೇ ಹುಎ ಸೋಯೀ ರಹಿ
ನೀಂದೋಮೇ ಜಗೀ ಹೂ..

ನಿದ್ದೆಯಲ್ಲೂ ಎಚ್ಚರ, ಎದ್ದಿರುವಾಗಲೂ ಮಂಪರು ಇದೆಲ್ಲ ಎಂಥ ಮೋಡಿಯೋ? ನಿನ್ನ ಪ್ರೀತಿಯ ರಂಗಿನಲ್ಲಿ ಬೆರೆತುಹೋದ ಗುಂಗಿನಲ್ಲಿ ಹೀಗಾಗುತ್ತಿದೆಯೋ! ಈ ಸ್ವಪ್ನದಲ್ಲಿ ಮೈಮರೆತಿರುವಾಗ ಝಲ್ಲೆಂದುಬಿಡುತ್ತದೆ ಹೃದಯ. ನೀನೇ ತುಂಬಿರುವ ಈ ಪ್ರೇಮದ ಕನಸನ್ನು ಯಾರಾದರೂ ಕಿತ್ತುಕೊಂಡುಬಿಟ್ಟರೆ? ಓಹ್, ಆ ಊಹೆಗೇ ತತ್ತರಿಸಿ ಹೋಗುವೆ..
ಮೇರೆ ಪ್ಯಾರ್ ಭರೆ ಸಪ್ನೆ
ಕಹಿ ಕೋಯಿ ನಾ ಛೀನ್ ಲೆ
ದಿಲ್ ಸೋಚ್ಕೆ ಘಬರಾಯೆ..

ಪ್ರತಿಸಲ ಬಾಗಿಲ ಸದ್ದಿಗೆ ಎದೆಯಲಿ ಸ್ಪಂದನ
ತೆರೆದರೆ ಬೀಸುವ ಗಾಳಿಯು ಹೇಳಿದೆ ಸಾಂತ್ವನ
ನನ್ನ ವಿರಹವು ನಿನ್ನಿಂದ ಇನ್ನೂ ಚಂದ
ವಿವರಿಸಲಾರೆ ಎಲ್ಲ ನಾ ದೂರದಿಂದ..

ಒಂದಿನ ನೀ ನನ್ನ ಮನೆಯ ಕದ ತಟ್ಟದೇ ಇರಲಾರೆಯಾ? ಬಾಗಿಲು ತೆಗೆದಾಗಲೆಲ್ಲ ತಣ್ಣನೆ ಸಂತೈಸುವ ತಂಗಾಳಿಯ ಹಾಗೆ ನನ್ನ ಬದುಕಿಗೆ ಬರಲಾರೆಯಾ? ಬಂದು ಓಲೈಸಲಾರೆಯಾ? ನಿನ್ನಿಂದ ಎಲ್ಲವನ್ನೂ ಮುಚ್ಚಿಟ್ಟಿರುವ ನಾನು ಒಂದ್ಯಾವುದೋ ಸುಂದರ ಸಂಜೆ ನನ್ನ ಪ್ರೀತಿ, ವಿರಹ, ಕೋಪ, ತರಲೆ, ಕನಸು, ಕಹಿ ಎಲ್ಲವನ್ನೂ ಹೇಳಿಬಿಡಬಲ್ಲೆನಾ? ಗೊತ್ತಿಲ್ಲ. ನಿನ್ನೊಡನೆ ಕಳೆದ ಕ್ಷಣಗಳಲ್ಲಿ ಯಾವುದೊಂದನ್ನೂ ಮರೆಯದೆ ಮೆಲುಕು ಹಾಕುತ್ತಿರುವ ನಾನು ಮರೀಚಿಕೆಯ ಹಿಂದೆ ಓಡುತ್ತಿರುವೆನಾ ಎಂಬ ದಿಗಿಲೂ ಕಾಡುತ್ತದೆ ಕಣೋ..
ನೆನಪನ್ನು ರಾಶಿ ಹಾಕಿ ಎಣಿಸುತ್ತ ಕೂರಲೇನು
ಕನ್ನಡಿಯಲಿ ನಾ ಹುಡುಕಲೆ ನಗುವೊಂದನು
ಉರಿಸುವ ಮುನ್ನವೇ..

ಜೀತೀ ಹು ತುಮ್ಹೆ ದೇಖ್ ಕೆ
ಮರ್ ತೀ ಹೂ ತುಮ್ಹೀಪೆ..

ನಾನು ದಿನ ಕಳೆಯುತ್ತಿರುವುದೇ ನಿನ್ನ ನೋಡುತ್ತ, ನಿನಗಾಗಿ ಜೀವ ಬಿಡುತ್ತಾ, ನೀನಿರುವಲ್ಲೇ ನನ್ನ ಇಡೀ ಲೋಕವನ್ನು ಕಟ್ಟಿಕೊಳ್ಳುತ್ತಾ, ನಿರೀಕ್ಷೆಗಳ ಹೂವರಳಿಸುತ್ತಾ. ಆ ಹೂವು ಬಾಡಿ ಹೋಗುವುದಿಲ್ಲ ತಾನೇ?
ಕಹಿ ಅಪ್ನಿ ಉಮ್ಮೀದೋಂಕಾ
ಕೋಯಿ ಫೂಲ್ ನಾ ಮುರ್ಝಾಯೇ..

ಬಂದ್ ಕರ್ಕೆ ಝರೋಕೋಂಕೋ
ಝರಾ ಬೈಠಿ ಜೋ ಸೋಚನೆ
ಮನ್ ಮೆ ತುಮ್ಹೀ ಮುಸಕಾಯೇ
..
ಕಣ್ಣಿನ ಕಿಟಕಿಯನ್ನು ಬಿಗಿಯಾಗಿ ಮುಚ್ಚಿದರೂ ಅದ್ಹೇಗೋ ಮನಸ್ಸಿನ ಬಾಗಿಲನ್ನು ದೂಡಿ ಒಳಗಡಿಯಿಟ್ಟುಬಿಟ್ಟಿರುವೆಯಲ್ಲ!
ಅಖಿಯೋಂಕೆ ಝರೋಕೋಂಸೆ
ಮೇನೆ ದೇಖಾ ಜೋ ಸಾವರೆ
ತುಂ ದೂರ್ ನಝರ್‌ ಆಯೆ..

ಕಣ್ಣ ಕಿಟಕಿಯಿಂದ ನಾನು ಹಾಗೆ ದಿಟ್ಟಿಸಿ ನೋಡಿದಾಗೆಲ್ಲಾ ನೀ ಯಾಕೋ ಕಾಣುವೆ ದೂರ ದೂರ?

ಯಾಕೋ ಭಯವಾಗತ್ತೆ ಕಣೋ, ನಿನ್ನನ್ನು ನಾನಿನ್ನೂ ಸರಿಯಾಗಿ ಅರಿತೇ ಇಲ್ಲ, ಆಗಲೇ ಪರವಶಳಾಗಿ ಹೋಗಿದ್ದೇನಲ್ಲಾ! ನನ್ನೆಲ್ಲವನ್ನು ನಿನಗೊಪ್ಪಿಸಿ ಬಂದು ಬಿಟ್ಟಿರುವೆನಲ್ಲ!
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ..

ನೀರಿನ ಮೇಲೆ ಬರೆದ ಅಕ್ಷರಗಳ ಹಾಗೆ ಮನಸಿನ ಪುಟಗಳಲ್ಲಿ ಬರೆದ ಹನಿಗವನಗಳೂ ಸಹ. ಅದೆಲ್ಲ ಹರಿದುಹೋದರೆ? ಕಲಸಿಹೋದರೆ? ಕರಗಿಹೋದರೆ? ಮರೆತುಹೋದರೆ? ಪ್ರೇಮದ ಕಣ್ಣು ತೆರೆದೇ ಇದ್ದರೂ ಇದೆಲ್ಲ ಆಗುವ ಮೊದಲೇ ನಾ ಕಣ್ಮರೆಯಾಗಿಹೋದರೆ?
ಕಣ್ಮುಚ್ಚಿಯೇ ನಾನೋದಲೆ ಪುಟವೊಂದನು
ಹರಿಯುವ ಮುನ್ನವೇ..


ಅಮೃತಾ ಮೆಹೆಂದಳೆ

2003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ ಕವಿತೆ ೨೦೧೯” ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ, ಪ್ರವಾಸದಲ್ಲಿ

Leave a Reply

Back To Top