ಕಾವ್ಯ ಸಂಗಾತಿ
ವಿಶಾಲಾ ಆರಾಧ್ಯ
ಕೃಷ್ಣ ಅಂದರೆ ಕೃಷ್ಣ
ರಾಧೆಯೊಡನೆ ಹೋಲಿಯಾಟ
ರಂಗು ರಂಗು ನೀಡಿದ
ಮೋಹದಿಂದ ಕೊಳಲ ನುಡಿಸಿ
ವಸಂತ ರಾಗ ಹಾಡಿದ
ಯಮುನ ತೀರದಲ್ಲಿ ನಡೆದು
ನವಿಲುಗರಿಯ ತೋರಿದ
ಸಮಾಸಾಟಿಯಾಗಿ ರಾಧೆಗೆ
ನವಿರು ಭಾವ ತುಂಬಿದ
ಜಲದೆ ನಲಿದ ಗೋಪಿಕೆಯರೆಡೆಗೆ
ಓರೆನೋಟ ಬೀರಿದ
ರಾಧೆಯಿಂದ ದೂರವಾಗುವ
ನೆಪವನವನು ಹುಡುಕಿದ
ರಾಧೆ ಕರೆದು ಆಟವಾಡುತ
ಅವಳ ಕಣ್ಣು ಮುಚ್ಚಿದ
ಬಳಿ ಸರಿದ ಗೋಪಿಕೆಯ
ನಯದಿ ಕೆನ್ನೆ ಕಚ್ಚಿದ!