ಸಮುದ್ರದ ಆಳವನ್ನು ನಿಖರವಾಗಿ ಹೇಳಲು ಎಷ್ಟು ಸಾಧ್ಯ? ಬಸವ ಕ್ರಾಂತಿಯ ಜ್ಞಾನದ ಕಿಡಿಗೆ ಹನ್ನೆರಡನೆಯ ಶತಮಾನದಲ್ಲಿ; ಅಗಾಧವಾದ ಬೆಳಕೊಂದು ಜಗತ್ತಿಗೆ “ಅರಿವೇ ಗುರು” ಎಂಬ ಕೀರ್ತಿಗೆ ಕಾರಣವಾದ; “ಜಗಜ್ಯೋತಿ ಬಸವೇಶ್ವರರು” ನಮಗೆಲ್ಲ ದಾರಿದೀಪ!.ಮಾನವೀಯ ಮೌಲ್ಯಗಳನ್ನು ಉತ್ತಿ ಬಿತ್ತಿಬೆಳೆಯೋ ಕಲೆಯನ್ನು ಅರಗಿಸಿಕೊಳ್ಳುವ; ಜನಾಂಗ ಉದಯಿಸಿತು ಎಂಬ ಆಶಾ ಮನೋಭಾವ ಹೊಂದಿದ್ದ ಸಮಯವದು.ಕಲುಷಿತಗೊಂಡ ಸಮಾಜ ಸುಧಾರಿಸಿಕೊಳ್ಳುವ  ಹಂತ ತಲುಪಲು ಹೊಸಹೊಳಹು ಕಂಡಂತೆ.ಆಗೆಲ್ಲ “ಕಾಯಕವೇ ಕೈಲಾಸ ” ಎಂಬ ಉಕ್ತಿಯಂತೆ ಮನದಲ್ಲಿ ಭಕುತಿಯ ಭಾವ,ಸಹಿಷ್ಣುತೆ ಎಲ್ಲವನ್ನೂ ಅಪ್ಪಕೊಂಡಂತ ಕಾಲವು ಮಾನವ ಸರಿಯಾದ ಅಥವಾ ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದಾನೆ.ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ತನ್ನ ಹೊಟ್ಟೆ ತುಂಬಿಸಲು ಏನೆಲ್ಲಾ ಹರಸಾಹಸ ಮಾಡುತ್ತಾನೆ. ಒಬ್ಬ ವ್ಯವಸಾಯ ಮಾಡುತ್ತಾನೆ, ಒಬ್ಬ ಮರದ ಕೆಲಸ ಮಾಡುತ್ತಾನೆ, ಇನ್ನೊಬ್ಬ ಚಿನ್ನದ ಕೆಲಸ ಮಾಡುತ್ತಾನೆ, ಮತ್ತೊಬ್ಬ ಬಟ್ಟೆ ಹೊಲೆಯುತ್ತಾನೆ, ಮಗದೊಬ್ಬ ಚಪ್ಪಲಿ ಹೊಲೆಯುತ್ತಾನೆ ಹೀಗೆ… ಬದುಕಲೊಂದು ನೆಪ- ಈ ಕಾಯಕ. ಮಾದಿಗ, ಕಮ್ಮಾರ ಕುಂಬಾರ, ಒಕ್ಕಲಿಗ ಯಾರೇ ಆಗಲಿ ಅವರು ತಮ್ಮ ಕಾಯಕವನ್ನು ಮನಮೆಚ್ಚುವಂತೆ ಮಾಡಿದರೆ ಅದೇ ಸ್ವರ್ಗ! ಎಂಬುದು ಬಸವಣ್ಣನವರ ತತ್ವ. ಇದರಿಂದಲೇ ‘ಕಾಯಕವೇ ಕೈಲಾಸ’ ಎಂಬ ನುಡಿ ನುಡಿದವರು ಬಸವಣ್ಣನವರು. ಬದುಕು “ಕೈ ಕೆಸರಾದರೆ ಬಾಯಿ ಮೊಸರು “, ಗಾದೆಯ ಮಾತಿನಂತೆ ಹಸಿದವನಿಗೆ ಗೊತ್ತು ಹಸಿವಿನ ಬೆಲೆ.ಎಷ್ಟೆಲ್ಲ ಜೀವಂತ ಉದಾಹರಣೆಗಳು ನಡೆದರೂ,ಬುದ್ದಿ ಮಾತ್ರ ಕಲಿಯುತ್ತಿಲ್ಲ ಎಂಬುದು ದುರಂತ.ಕಣ್ಮುಂದೆ ನಡೆಯುವ ಸಾಕ್ಷಿಗಿಂತ ಬೇರೆ ಬೇಕಾ????

ನಮಗೆಲ್ಲ ಗೊತ್ತಿದೆ,ಜ್ಞಾನದ ಮೂಲ ಯಾವುದೆಂದು;ಅಧ್ಯಯನಗಳು ಸಾಹಿತ್ಯದ ತಿರುಳುಗಳನ್ನು ಹೊತ್ತ ಕಣಜಗಳು ಎಂದರೆ “ಪುಸ್ತಕಗಳು ಮಸ್ತಕದ ಪುಟಗಳಾಗಿ ಪರಿವರ್ತಿಸುವ ಕಲೆಯನ್ನು ಹೊಂದಿವೆ.
“ಪುಸ್ತಕಗಳನ್ನು ಜ್ಞಾನದ ಹಣತೆಯಂತ ಕರೆಯುತ್ತಾರೆ” ಅವುಗಳ ಬಳಕೆ ಮಾಡುವ ಓದುಗರು ಪ್ರತಿಶತ ಹೆಚ್ಚು ಕಡಿಮೆ ತಕ್ಕಡಿಯಲ್ಲಿ ತೂಗುವಂತ ಸ್ಥಿತಿ ಎದುರಾಗಿದೆ.ಕಾರಣ ಆಸಕ್ತಿ,ಅಭಿರುಚಿಯ ಮೇಲೆ ಪ್ರಭಾವ ಬೀರುತ್ತದೆ.’ಅಂಬೇಡ್ಕರ್’ ರಂತಹ ಮಹಾನ್ ಮೇಧಾವಿ ಪುಸ್ತಕ ಪ್ರೇಮಿ,ಜ್ಞಾನದ ಕಣಜ,ದೇಶ ಕಂಡ ಅಪ್ರತಿಮ ಸಾಧಕ…ಅವರಂತೆ ಎಡೆಬಿಡದೆ ಕಷ್ಟ ಪಟ್ಟು, ಇಷ್ಟ ಪಟ್ಟು ಓದಿ,ಓದಿನ ಮೂಲಕವೇ ಜಗತ್ತಿಗೆ ಚಿರಪರಿಚಿತರಾಗಿರುವುದು; ಯುವ ಪೀಳಿಗೆಗೆ ಮಾದರಿ!. ಎಂಟು ಜ್ಞಾನ ಪೀಠ ಪುರಸ್ಕೃತರು ನಮ್ಮ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆಗಳನ್ನು ನೆನೆದರೆ ಸಾಕು ಜೀವನ ಪಾವನವಾಗುತ್ತದೆ.
ನಾವ್ಯಾಕೆ ಅವರ ಹಾದಿಯಲ್ಲಿ ನಡೆಯುತ್ತಿಲ್ಲ?… ಅವರಂತೆ ಜಗತ್ತಿಗೆ ಜ್ಞಾನದ ಹೊರತು ಮತ್ತೇನು ಬೇಕಿಲ್ಲ ಎಂಬ ಅರಿವನ್ನು ಹೊಂದುವಂತಹ ಪೀಳಿಗೆಗಳು ಸಾಗರೋಪಾದಿಯಲ್ಲಿ ಬೆಳೆದರೆ ಎಷ್ಟು ಚೆನ್ನ? ಶಿಕ್ಷಣ ನೀಡುವ ಕೇಂದ್ರಗಳು’,ಅಕ್ಷರ‌’ ಜ್ಞಾನದ ಅಕ್ಷಯ ಪಾತ್ರಗಳಾಗಬೇಕೆ?, ಪ್ರತಿಭಾವಂತರ ಹಣೆಬರಹ ಕಿತ್ತು ತಿನ್ನುವ ರಕ್ತಬೀಜಾಸುರಗಳಾಗಿ,ಹಣ ದೋಚುವ ( ಡೋನೆಶನ್) ಪಡೆಯುವ ಮೂಲಕ  ಬಹುಪಾಲು ಬಡವರಿಗೆ ಕೈಗೆಟುಕುವ ಬೆಲೆಯಲ್ಲಿ ಶಿಕ್ಷಣ ಸಿಗದೆ ವಂಚಿತರಾಗಿ ಬದುಕುವಂತಹ ಸಮಯವೆಂದರೆ ತಪ್ಪಿಲ್ಲ!.

ತಾವು ಕಲಿತ ಸರಕಾರಿ ಶಾಲೆಯನ್ನು ಮರೆತು ಬಿಡುತ್ತಾರೆ.ಕನ್ನಡದ ಪ್ರತಿಬಿಂಬ ಸರಕಾರಿ ಶಾಲೆಗಳು ಇವತ್ತು ವರ್ಷದಿಂದ ವರ್ಷಕ್ಕೆ ಶಾಲೆಗಳು ಇಳಿಮುಖವಾಗುತ್ತಿರುವುದು,ಬಿಕೋ …ಅನ್ನುತ್ತಿರುವುದು    ಹಾಗೂ ತುಂಬಿ ತುಳುಕುತ್ತಿಲ್ಲವೆಂಬುವುದು ಸ್ವಲ್ಪ ನೋವೆ.ಉಚಿತ ಸೌಲಭ್ಯಗಳು ಮಕ್ಕಳ ಪ್ರಗತಿಗೆ,ಉಚಿತ ಕಡ್ಡಾಯದ ಸದುಪಯೋಗ ಪಡೆದು ಯಶಸ್ಸು ಪಡೆದವರು ಕಣ್ಮುಂದೆ ಉದಾ.ಸಾಕಷ್ಟಿದೆ. ಹೀಗಾದಾಗ ಉಳ್ಳವರು ದೇವಾಲಯ ಕಟ್ಟುವರಯ್ಯ ಎಂಬ ಮಾತು….ಬಡವರು ಏನು ತಾನೆ ಕಟ್ಯಾರು?….. ಹೊಟ್ಟೆ ತುಂಬುವುದೇ ದೊಡ್ಡ ಸಾಹಸ ಇರುವಾಗ, ಅಂತಸ್ತಿನ ಹಂಗಿನಲ್ಲಿ ಮಕ್ಕಳಿಗೆ ನೈಜ ಮೌಲ್ಯ ಬಿತ್ತದೇ….ಮೂಢನಂಬಿಕೆ ಅಳಿಸದೇ….ಸಂಬಂಧಗಳನ್ನು ಗಾಳಿಗೆ ತೂರಿ ವಿಭಕ್ತ ಕುಟುಂಬಗಳತ್ತ ಮುಖಮಾಡುತ್ತಿರುವ ಮತ್ತು ನಗರಗಳತ್ತ ಹೆಚ್ಚು ವಾಲುತ್ತಿರುವುದು ಸತ್ಯ.ಇಂತಹ ಸಮಯದಲ್ಲಿ ಯಾವ ಅರಿವನ್ನು ಎಲ್ಲಿ ಬೆಳಗಬೇಕು ಎಂಬುದನ್ನು ಯೋಚಿಸುವಷ್ಟು ವೇಳೆ ಯಾರಿಗಿದೆ? ತಮಗಷ್ಟು ಒಳ್ಳೆಯದಾದರೆ ಸಾಕು ಎನ್ನುವರ ನಡುವೆ ವೈಚಾರಿಕತೆಯ ವ್ಯಕ್ತಿತ್ವ ಬೆಳಗಬೇಕಿದೆ‌‌ ಅಷ್ಟೇ.

ಜಗತ್ತು ವಿಶಾಲವಾಗುತ್ತ ಹೋದರೂ…ಬದುಕಿನ ಚಿಂತನೆಗಳು ಇನ್ನೂ  ವಿಕಸಿತ ಮನೋಭಾವದಿಂದ ಹೊರಬರದಿರುವುದು,ನಾವೆಷ್ಟು ಸದೃಢರಾಗಿದ್ದೆವೆ ಎಂಬ ಪ್ರಶ್ನೆಗೆ ನಿಖರವಾದ ಉತ್ತರ ಸಿಕ್ಕದಿರುವುದೇ ದುರಾದೃಷ್ಟ!.ಈಗಲೂ ಕೂಡ ಅದೇ ಹಸಿವಿದೆ,ನೋವಿದೆ,ಬಡತನವಿದೆ, ಪರಿಸ್ಥಿತಿಗಳು ಕೆಲವೊಂದು ಕಡೆ ಚಿಂತಾಜನಕವಿದೆ,ನಿರುದ್ಯೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ.ಅದಕ್ಕಾಗಿ ಕಳ್ಳತನ, ದರೋಡೆ, ಸುಲಿಗೆ,ಕೊಲೆಗಳು ಅವ್ಯಾಹತವಾಗಿ ನಡೆಯುತ್ತಿರುವುದು ಸಮಾಜದ ಇನ್ನೊಂದು ಮುಖ ಅಂತ್ಯದತ್ತ ವಾಲುತ್ತಿರುವುದು ಸ್ಪಷ್ಟವಾಗಿ ಕಾಣಬಹುದು.ಸುತ್ತಿ ಬಳಸಿ ನಿಂತವರು, ಮೌನವಾಗಿ ಮೂಲೆ ಸೇರುವ ಆತಂಕ ಇದ್ದಿದ್ದೆ.

ಒಟ್ಟಾರೆ ಹೇಳುವುದಾದರೆ,ಸಾಗರಗಳು ತುಂಬುವುದು ನದಿಗಳ ಜೀವನೋತ್ಸಾಹದಿಂದ….ತನ್ನೆಲ್ಲ ಅಂತಃರಸತ್ವಗಳನ್ನು ಧಾರೆಯೆರೆದು, ನೂರಾರು ಕಿ.ಮೀಟರ್ ಕ್ರಮಿಸಿ,ದಾರಿಯುದ್ದಕ್ಕೂ ಜನಜೀವನ ಕಟ್ಟಿಕೊಟ್ಟು ನಿಸ್ವಾರ್ಥದಿಂದ ತನ್ನ ಜೀವನವನ್ನು ಉಪ್ಪಿನೊಂದಿಗೆ ಬೆರೆತು ಜಲಜೀವಿಗಳಿಗೆ ಉಸಿರು ನೀಡುವ ನದಿಯ ಹನಿಗಳು ಇಡೀ ಪ್ರಪಂಚದ ನಾಡಿಗಳು ಎಂದರೆ ತಪ್ಪಿಲ್ಲ…ಹಾಗೆಯೇ‌..ಸಾಧಕರು,ಸಾಧನೆಗಳು ಎಲ್ಲವೂ  ಸುಮ್ಮನೇ ಬರೋದಿಲ್ಲ….ಅದರಂತೆ ಮೈಗಳ್ಳರು, ನಯವಂಕರಿಗೇನು ಕಡಿಮೆಯಿಲ್ಲ..ಜ್ಞಾನದ ಬೆನ್ನು ಹತ್ತುವ ಹಟ ಎಲ್ಲರಿಗೂ ಇದ್ದರೆ ಅದಕ್ಕೊಂದು ಬೆಲೆ.ವಿನಾಶದತ್ತ ಸಾಗುವ ಮನಸ್ಸುಗಳು, ಸಕಾರಾತ್ಮಕವಾಗಿ ಚಿಂತಿಸುವತ್ತ ಸಾಗಿದರೆ ಒಳ್ಳೆಯದಾದಿತು.ಬದುಕಿನ ಮಜಲುಗಳು ನೂರಾರು;ಅವನ್ನು ತನ್ನ ಕಾಲಗರ್ಭದಲ್ಲಿ ಬಚ್ಚಿಟ್ಟ ಪ್ರಕೃತಿಯು;ಎಷ್ಟೋ ಕಾಲಾಂತರಗಳಿಂದ ಪರಿವರ್ತನೆಯಾದ ಕ್ಷಣಗಳನ್ನು ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸಿ ಮುನ್ನಡೆಯುವುದೇ ಜೀವನದ ಬಹುಮುಖ್ಯ ಭಾಗವಾಗಿದೆ…


Leave a Reply

Back To Top