ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಡಾ. ಭಾಗ್ಯವತಿ ಅಮರೇಶ್ವರ ಅವರ ಗಜಲ್

ಕಾವ್ಯ ಸಂಗಾತಿ ಡಾ. ಭಾಗ್ಯವತಿ ಅಮರೇಶ್ವರ ಗಜಲ್ ನಿನ್ನ ಮೌನ ಸಹವಾಸ ಬೇಡ ಅನ್ನುವಂತಿದೆ ಮಾತಾಡು ಸಖಿನಿನ್ನ ಇಣುಕು ನೋಟ ಕಾಡುವಂತಿದೆ ಮಾತಾಡು ಸಖಿ ದಿನ ದಿನವೂ ನನ್ನ ಸುತ್ತ ಸುಳಿಯುತ್ತಿದ್ದವಳು ನೀನುನಿನ್ನ ಕಣ್ಣು ಮುಚ್ಚಾಲೆ ಕೊಲ್ಲುವಂತಿದೆ ಮಾತಾಡು ಸಖಿ ನೀ ಬರೆದ ಓಲೆಯ ಪದಗಳು  ನನ್ನ ಮನ ತುಂಬಿ ನಲಿದಾಡುತ್ತಿದ್ದವುನಿನ್ನ ಸಂದೇಶ ಬರದೆ ಮನ ಮೂಕವಾದಂತಿದೆ ಮಾತಾಡು ಸಖಿ ನಡೆವ ಹೆಜ್ಜೆಗೆ ಅಡಿಗಡಿಗೆ ದಾರಿ ತೋರಿಸಿದವಳು ನೀನುನಿನ್ನ ಬೆಳಕಿಲ್ಲದೆ ಕಣ್ಣು ಕುರುಡಾದಂತಿದೆ ಮಾತಾಡು ಸಖಿ ನೀನಿಲ್ಲದೆ ಬದುಕ ಬಲ್ಲೆನಾದರೂ ಸಗ್ಗವಿಲ್ಲ ಆ ಬಾಳಲ್ಲಿಭಾಗ್ಯದ ನಿನ್ನ ನುಡಿಯಿಲ್ಲದೆ ಮೌನ ನರಕದಂತಿದೆ ಮಾತಾಡು ಸಖಿ. ಡಾ. ಭಾಗ್ಯವತಿ ಅಮರೇಶ್ವರ

ಡಾ. ಭಾಗ್ಯವತಿ ಅಮರೇಶ್ವರ ಅವರ ಗಜಲ್ Read Post »

ಕಾವ್ಯಯಾನ

ಡಾ. ದಾನಮ್ಮ ಝಳಕಿ ಅವರ ಕವಿತೆ ” ಒಳ ಸುಳಿವು”

ಕಾವ್ಯ ಸಂಗಾತಿ ಡಾ. ದಾನಮ್ಮ ಝಳಕಿ ” ಒಳ ಸುಳಿವು” ಮೌನಮರೆಯಲಿ ಮಾತೊಂದು ಮೊಳಗುವುದುಮನದಾಳದ ನೋವು ಕಣ್ಣಲಿ ಕರಗುವುದು;ನಗುವಿನ ಹಿಂದೆ ಅಡಗಿದ ಕಣ್ಣೀರ ಹನಿಯೇ,ಬದುಕಿನ ಸತ್ಯಕ್ಕೆ ನೀಡುವ ಒಳ ಸುಳಿವೇ. ಹೊರಗಿನ ಬೆಳಕಿಗೆ ನೆರಳೊಂದು ಜೊತೆಯಲಿ,ಒಳಗಿನ ಕತ್ತಲೆಗೆ ದೀಪವೊಂದು ಹೃದಯದಲಿ;ಕಳೆದುಹೋದ ದಾರಿಯ ಹೆಜ್ಜೆ ಗುರುತಿನಲಿ,ನಾಳೆಯ ಪಯಣದ ಸುಳಿವಿದೆ ಆತ್ಮದಲಿ. ಕಾಣದ ಕನಸೊಂದು ಕಣ್ಣೊಳಗೆ ನಿಲ್ಲುವುದುಹೇಳದ ಭಾವ ಉಸಿರಾಗಿ ಹರಿಯುವುದುಪದಗಳಿಗಿಂತ ಮೌನವೇ ಸತ್ಯ ಹೇಳುವಾಗಮನವೇ ಮನಸ್ಸಿಗೆ ಕನ್ನಡಿ ಹಿಡಿಯುವಾಗ ಜಗವನು ಅರಿಯಲು ಮೊದಲು ನಿನ್ನನು ಅರಿತು ಒಳಗಿನ ಧ್ವನಿಯನು ಕೇಳು ಕ್ಷಣವೊಂದು ನಿಂತು ಹೊರಗೆ ಹುಡುಕಿದ ಸತ್ಯ ಒಳಗೇ ಹೊಳೆಯುವುದು ನೀನೇ ನಿನ್ನ ದಾರಿ ಎಂದು ಒಳ ಸುಳಿವು ನೀಡುವುದು. ಡಾ. ದಾನಮ್ಮ ಝಳಕಿ

ಡಾ. ದಾನಮ್ಮ ಝಳಕಿ ಅವರ ಕವಿತೆ ” ಒಳ ಸುಳಿವು” Read Post »

ಕಾವ್ಯಯಾನ

“ತ್ರಿವರ್ಣದ ನೆರಳಿನಲ್ಲಿ” ಎನ್.ಜಯಚಂದ್ರನ್

ಕಾವ್ಯ ಸಂಗಾತಿ ಎನ್.ಜಯಚಂದ್ರನ್ “ತ್ರಿವರ್ಣದ ನೆರಳಿನಲ್ಲಿ” 140  ವರುಷಗಳ ಹಿಂದೆಹೊತ್ತಿ ಉರಿದಿತ್ತು ಒಂದು ಕನಸು,ಬಂಧನದ ಕತ್ತಲೆಯನ್ನು ಸೀಳಿಬೆಳಕಾಗಿತ್ತು  ಸ್ವಾತಂತ್ರ್ಯದ ಬೆಳಗು. ತಾಯ್ನಾಡಿನ ಮಣ್ಣಿಗಾಗಿನಡೆದವು ಮೋಹನದಾಸ್ ಕರಮಚಂದ ಗಾಂಧಿ ಜೊತೆಗೆ ಸಾವಿರ ಹೆಜ್ಜೆಗಳು,ತ್ಯಾಗದ ದಾರಿಯಲ್ಲಿ ಮೂಡಿದವುಅಸಂಖ್ಯಾತ ವೀರರ ಹೆಜ್ಜೆ ಗುರುತುಗಳು. ಗಾಂಧಿ ಕೈಯಲ್ಲಿ ಆಯುಧವಿರಲಿಲ್ಲ,ಹೃದಯದಲ್ಲಿ ಮಾತ್ರ ಧೈರ್ಯವಿತ್ತು;ತುಟಿಯಲ್ಲಿ  ಅಜಾದಿಯ  ಹಂಬಲ ;ಕಣ್ಣಿನಲ್ಲಿ ಭಾರತವಿತ್ತು. ಜೈಲಿನ ಕತ್ತಲ ಕೋಣೆಗಳಲ್ಲೂ ನೆಹರು ಅವರಸ್ವಾತಂತ್ರ್ಯದ ಹಾಡು ಮೊಳಗಿತು,ತಾಯಿಯ ಮಡಿಲು ತೊರೆದ ಮಗನಹೆಜ್ಜೆ ದೇಶದ ದಾರಿಯಾಯಿತು. ಆ ದಿನದ ತ್ಯಾಗದ ಹನಿಗಳುಇಂದು ನಮ್ಮ ಧ್ವಜದ ಬಣ್ಣಗಳಾಗಿವೆ;ಆ ವೀರರ ಕನಸುಗಳೇಇಂದು ನಮ್ಮ ಸ್ವತಂತ್ರ ಉಸಿರಾಗಿವೆ. ನೂರಾಮೂವತ್ತು  ವರ್ಷಗಳು ಕಳೆದುಹೋದರೂಆ ನೆನಪುಗಳುಕ್ವಿಟ್ ಇಂಡಿಯಾ ಚಳುವಳಿ ಹಳೆಯದಲ್ಲ,ಪ್ರತಿ ಆಗಸ್ಟ್‌ನ ಗಾಳಿಯಲ್ಲೂಅವರ ತ್ಯಾಗದ ಸುಗಂಧ ಕಡಿಮೆಯಾಗದು. ತ್ರಿವರ್ಣ ಧ್ವಜ ಹಾರುವಾಗಮನದೊಳೊಂದು ಪ್ರಶ್ನೆ ಮೂಡಲಿ—“ನಾವು ಪಡೆದ ಸ್ವಾತಂತ್ರ್ಯವನ್ನುಮುಂದಿನ ಪೀಳಿಗೆಗೆ ಹೇಗೆ ನೀಡಲಿ?” ಸ್ವಾತಂತ್ರ್ಯವೆಂದರೆ ಕೇವಲ ಹಬ್ಬವಲ್ಲ,ಅದು ಹೊಣೆಗಾರಿಕೆಯ ಬೆಳಕು;ದೇಶದ ಮಣ್ಣನ್ನು ಪ್ರೀತಿಸುವಪ್ರತಿಯೊಬ್ಬ ಹೃದಯದ ಸಂಕಲ್ಪ. ವೀರರ ಕನಸುಗಳು ನಗುವಂತೆ,ಭಾರತದ ಭವಿಷ್ಯ ಬೆಳಗುವಂತೆ,ಎಂಭತ್ತು ವರ್ಷಗಳ ನೆನಪಿನ ಮುಂದೆನಾವು ತಲೆಬಾಗಿ ಪ್ರತಿಜ್ಞೆ ಮಾಡೋಣ. “ನೆಲದ ಜನ  ಮೊದಲು,  ನಂತರ, ವಿವಿಧತೆಯಲ್ಲಿಏಕತೆ ನಮ್ಮ ಶಕ್ತಿ,ಸ್ವಾತಂತ್ರ್ಯ ನಮ್ಮ ಉಸಿರು,ಭಾರತ ನಮ್ಮ ಹೆಮ್ಮೆ! ಎನ್.ಜಯಚಂದ್ರನ್ .ದಾಂಡೇಲಿ.ಹಿರಿಯ ಪತ್ರಕರ್ತರು.

“ತ್ರಿವರ್ಣದ ನೆರಳಿನಲ್ಲಿ” ಎನ್.ಜಯಚಂದ್ರನ್ Read Post »

ಕಾವ್ಯಯಾನ

ಶಿವರಾಜ ಅರಳಿ ಅವರಕವಿತೆ “ಮಾಸದ ಹೊಸ್ತಿಲು”

ಕಾವ್ಯ ಸಂಗಾತಿ ಶಿವರಾಜ ಅರಳಿ “ಮಾಸದ ಹೊಸ್ತಿಲು” ಎದೆಯ ತಿದಿಯೊತ್ತಿ ಗಿರಕಿಸುವಸಂಕಟದ ಆಂತಯು೯ದ್ಧಕ್ಕೆವಿರಾಮದ ಮುಲಾಮುಕೇವಲ ನೆಪ ಮಾತ್ರಆಗಾಗ ಬೆನ್ನಹುರಿಯಿಂದಿಳಿದುಹೊಕ್ಕಳು ಬಳ್ಳಿ ಸುತ್ತುವಋತುವಿನ ಆಟಕ್ಕೇನು ಗೊತ್ತುಹಸಿ ಕಣ್ಣ ಹೆಂಗಳೆಯರಚೀತ್ಕಾರದ ಆತ೯ನಾದ. ಮಾಸದ ಹೊಸ್ತಿಲಲಿಕಾದು ಕೆಂಡವಾದ ಬೇನೆಕನಸುಗಳನ್ನು ಜೀವಂತ ಸುಡುತ್ತದೆಎದೆಯ ಭಾವಗಳುಸ್ರಾವದ ಹರಿವಿನ ತೀವ್ರತೆಗೆಕೊಚ್ಚಿ ಹೋಗುವುದೊಂದೇ ಬಾಕಿಇಲ್ಲಿ ಹೃದಯದ ಭಾಷೆಒಮ್ಮೊಮ್ಮೆ ತಣ್ಣಗೆ ಮಲಗುತ್ತದೆವಿಧಿಯಿಲ್ಲದೆ… ಬಂಧಿಸಿಟ್ಟ ಗೂಡು ಹಕ್ಕಿಗೆಬೇಲಿಯ ದದಿ೯ಲ್ಲನಿಷಿದ್ಧ ನೆತ್ತಿಗೆನೆರಳ ಚಾಚುವ ಕೈಗಳಿಲ್ಲಹಳತು ಹೊಸತಾಗುವ ಜೀವ ಭಾವಹಗಲು ದಾಟಿದರೂಇರುಳು ಸರಿದರೂಮಾಸಕ್ಕೊಮ್ಮೆ ಮೊಳೆತುನೋವ ಹೊರಬೇಕು ಆವತ೯ದಲ್ಲಿ ಶಿವರಾಜ ಅರಳಿ

ಶಿವರಾಜ ಅರಳಿ ಅವರಕವಿತೆ “ಮಾಸದ ಹೊಸ್ತಿಲು” Read Post »

ಕಾವ್ಯಯಾನ, ಗಝಲ್

ಜಯಶ್ರೀ.ಭ.ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ ಜಯಶ್ರೀ.ಭ.ಭಂಡಾರಿ ಅವರ ಗಜಲ್ ಹುಸಿ ಕೋಪ ಮರೆತು ಎಲ್ಲರೊಂದಿಗೆ ಬೆರೆಯುವುದೇ ಮಾತು.ತುಸು ದೂರ ಇದ್ದವರ ಹತ್ತಿರ ಕರೆಯುವುದೇ ಮಾತು. ಸುಮ್ಮನೇ ಜಗಳ ಮಾಡಿ ದ್ವೇಷ ಸಾಧಿಸುವುದು ಸರಿಯೇ.ಬಿಮ್ಮನೆ ಮುಖ ಊದಿಸಿದರೆ ಅಗಲಿ ತೊರೆಯುವದೇ ಮಾತು. ಸಿಹಿಯ ‌ದ್ವನಿ ಕೇಳುಗನ ಮನ ತಣಿಸುವುದು ನೋಡು.ಕಹಿಯ ಕಂಠ ನೋವ ನೀಡುತ ಕೊರೆಯುವುದೇ ಮಾತು. ಒಂದಾಗಿ ಚಂದದಿ ಬಾಳುತ ಸಾಗುವುದೇ ರಸಮಯ ಜೀವನ.ಬಂಧನದಿ ಭುವಿಗೆ ಹೊಂದಿಕೊಳ್ಳದಿರೆ ವಿಷ ಎರೆಯುವುದೇ ಮಾತು ಹೃದಯ ಪರಸ್ಪರ ಮಿಡಿದರೆ ಒಲವಿನ ಜಯ ಸಿಗುವುದುಮಧುರ ಬಾಂಧವ್ಯ ಬೆಸೆದರೆ ಸಂಕಟ ಮರೆಯುವುದೇ ಮಾತು ಜಯಶ್ರೀ.ಭ.ಭಂಡಾರಿ.

ಜಯಶ್ರೀ.ಭ.ಭಂಡಾರಿ ಅವರ ಗಜಲ್ Read Post »

ಕಾವ್ಯಯಾನ

ಹಮೀದ್ ಹಸನ್ ಮಂಗಳೂರು ಅವರ ಕವಿತೆ “ವಿಕೋಪ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಂಗಳೂರು “ವಿಕೋಪ” ಮಾನವೀಯತೆಯೇಮಾನವನ ನಿಜ ಧರ್ಮವಯ್ಯ,!ಅಶಾಂತಿ ಅನೀತಿ ಅಸಹಿಷ್ಣುತೆಯಾವ ರೀತಿಯ ಧರ್ಮವಯ್ಯ,!      ದೇವಾಲಯ ಮಸ್ಜಿದ್     ಕೆಡವುದೇ ಅಧರ್ಮವಯ್ಯ,?!     ಧರ್ಮ ಧರ್ಮಗಳ ಮಧ್ಯೆ     ಕಂದಕ ಸೃಷ್ಟಿಸುವುದು ಕೆಡುಕಯ್ಯ,! ಕೆಡುಕೇ ಅಧರ್ಮ ಹಾದಿಯುಸಮಾಜಕ್ಕೆ ಮಾರಕ ಕಳಂಕವಯ್ಯ!,ದುರಾಡಳಿತೆಯ ತಂತ್ರವುಲೋಕ ಅವಸಾನದ ಲಕ್ಷಣವಯ್ಯ,! ಕಣ್ಣಾರೆ ಕಂಡ ಸತ್ಯವಿದುಮುಂದೆ ಎಚ್ಚರಿಕೆಯಿಂದ ಬಾಳಯ್ಯ,!ಪ್ರಕೃತಿ ವಿಕೋಪವು ಇದಲ್ಲಪರಮಾತ್ಮನ ತಾಳ್ಮೆಯ ಲೋಪವಯ್ಯ.!       ಹಮೀದ್ ಹಸನ್ ಮಂಗಳೂರು.

ಹಮೀದ್ ಹಸನ್ ಮಂಗಳೂರು ಅವರ ಕವಿತೆ “ವಿಕೋಪ” Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿ ಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿ ಮಠ ಗಜಲ್ ನಿನ್ನ ಸಂತೈಕೆಗಾಗಿ ಹಲುಬಿ, ಹಂಬಲಿಸಿ ಸೋತು ಹೋದೆಸಿಗದ ಆದರವನ್ನು ಅರಸಿ , ಆಗ್ರಹಿಸಿ ಸೋತು ಹೋದೆ ನಿನ್ನ ಹೆಗಲಾಗಲು,ನನ್ನ ಹಗಲಿರುಳು ನೀಡಿದೆ ನಗುತನಿನ್ನ ನಜರಿಗೆ ನಾ ಬರಲು ಆಶಿಸಿ, ಆಕರ್ಷಿಸಿ ಸೋತು ಹೋದೆ ಒಂದಲ್ಲ,ಎರಡಲ್ಲ,ಎಷ್ಟೋ ವಸಂತ ಕಳೆದೆವು ಜೊತೆಗೆನಿನ್ನ ಕಣ್ಣುಗಳಲಿ ನನ್ನನು ಕನಸಿಸಿ ಸೋತು ಹೋದೆ ನೀ ಅನ್ಯರಿಗೆ ತೋರುವ ಕಾಳಜಿ ದಿನವೂ ನೋಡುವೆ ನಲ್ಲಹುಸಿ ಮಾತಲ್ಲಾದರೂ ಹಸಿಯಾಗಲು ತವಕಿಸಿ ಸೋತು ಹೋದೆ ಬಲು ಕಷ್ಟವೇ ಇದ್ದಿರಬೇಕು ವಾಣಿ,ಪ್ರೀತಿಯನು ಪ್ರೀತಿಸುವುದುನಾನಿಲ್ಲದ ನಿನ್ನ ಜಗದಲಿ ನನ್ನನು ಅಂದಾಜಿಸಿ ಸೋತು ಹೋದೆಗಜಲ್ನಿನ್ನ ಸಂತೈಕೆಗಾಗಿ ಹಲುಬಿ, ಹಂಬಲಿಸಿ ಸೋತು ಹೋದೆಸಿಗದ ಆದರವನ್ನು ಅರಸಿ , ಆಗ್ರಹಿಸಿ ಸೋತು ಹೋದೆ ನಿನ್ನ ಹೆಗಲಾಗಲು,ನನ್ನ ಹಗಲಿರುಳು ನೀಡಿದೆ ನಗುತನಿನ್ನ ನಜರಿಗೆ ನಾ ಬರಲು ಆಶಿಸಿ, ಆಕರ್ಷಿಸಿ ಸೋತು ಹೋದೆ ಒಂದಲ್ಲ,ಎರಡಲ್ಲ,ಎಷ್ಟೋ ವಸಂತ ಕಳೆದೆವು ಜೊತೆಗೆನಿನ್ನ ಕಣ್ಣುಗಳಲಿ ನನ್ನನು ಕನಸಿಸಿ ಸೋತು ಹೋದೆ ನೀ ಅನ್ಯರಿಗೆ ತೋರುವ ಕಾಳಜಿ ದಿನವೂ ನೋಡುವೆ ನಲ್ಲಹುಸಿ ಮಾತಲ್ಲಾದರೂ ಹಸಿಯಾಗಲು ತವಕಿಸಿ ಸೋತು ಹೋದೆ ಬಲು ಕಷ್ಟವೇ ಇದ್ದಿರಬೇಕು ವಾಣಿ,ಪ್ರೀತಿಯನು ಪ್ರೀತಿಸುವುದುನಾನಿಲ್ಲದ ನಿನ್ನ ಜಗದಲಿ ನನ್ನನು ಅಂದಾಜಿಸಿ ಸೋತು ಹೋದೆ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿ ಮಠ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ರತ್ನರಾಯ ಮಲ್ಲ ಅವರ ಗಜಲ್

ಕಾವ್ಯ ಸಂಗಾತಿ ರತ್ನರಾಯ ಮಲ್ಲ ಅವರ ಗಜಲ್ ನನ್ನೆದೆಯಲಿ ಅರಳಿದ ಚಿತ್ರವ ವರ್ಣಿಸಲು ಪದಗಳು ಸೋಲುತಿವೆಭಾವದ ಕುಲುಮೆಯಲಿ ಗಜಲ್ ರಚಿಸಲು ಪದಗಳು ಸೋಲುತಿವೆ ದಿನವೂ ನಿನ್ನ ಕಾಣುತಿರುವೆ ಅವನಿಗೆ ಬೆಳಕಾಗಿರುವ ನೇಸರನಲಿಹೃದಯದಲಿ ನಿನ್ನ ಇರುವಿಕೆ ತೋರಿಸಲು ಪದಗಳು ಸೋಲುತಿವೆ ಪ್ರೇಮದ ಹಸಿವು ನೀಗಿಸಲು ನಿನ್ನ ಅಂತರಂಗದ ಕದ ತಟ್ಟುತಿರುವೆನಿನ್ನಧರಗಳ ಸವಿ ಪುಟದಲಿ ಜೋಡಿಸಲು ಪದಗಳು ಸೋಲುತಿವೆ ಪ್ರೀತಿಸುತಿಲ್ಲ ಅಕ್ಷರಗಳಲಿ ನಿನ್ನನು ಉಸಿರಾಡುತಿರುವೆ ಬೇಬಿಮಾನನ್ನಾರುಮೆಯ ಆಳದ ಅಳತೆ ತಿಳಿಸಲು ಪದಗಳು ಸೋಲುತಿವೆ ಮಲ್ಲಿಗೆ ಸುಮದಂತೆ ನೆನಪು ದೂರವಿದ್ದರೂ ಕನಸಲಿ ಅರಳುವುದುಅಂತರದಲಿ ಜಿನುಗುವ ಕಂಬನಿ ರಮಿಸಲು ಪದಗಳು ಸೋಲುತಿವೆ ರತ್ನರಾಯಮಲ್ಲ

ರತ್ನರಾಯ ಮಲ್ಲ ಅವರ ಗಜಲ್ Read Post »

ಅನುವಾದ, ಕಾವ್ಯಯಾನ

“ನಿನ್ನೆಯೊಳಗೆ” ಕವಿತೆ ತೆಲುಗು ಮೂಲ:ರಾಜಾಬಾಬು ಕಂಚರ್ಲ,ಕನ್ನಡಕ್ಕೆ:ಧನಪಾಲ‌ ನಾಗರಾಜಪ್ಪ

ಅನುವಾದ ಸಂಗಾತಿ “ನಿನ್ನೆಯೊಳಗೆ” ತೆಲುಗು ಮೂಲ:ರಾಜಾಬಾಬು ಕಂಚರ್ಲಕನ್ನಡಕ್ಕೆ:ಧನಪಾಲ‌ ನಾಗರಾಜಪ್ಪ ಜೀವನವನ್ನು ದಾಟಿಕೊಂಡು ಹೊರಟಿದ್ದೇನೆಎಲ್ಲೋ, ಎಂದೋ…ನನ್ನ ಭವಿಷ್ಯವನ್ನೇಕಳೆದುಹೋಗುವಂತೆ ಬಿಟ್ಟು ಬಂದವನಂತೆ ಎದುರಾದವರುನಗುತ್ತಾ ಮಾತಾಡಿಸುವರುಕಾಲವು ಮಾತ್ರನನ್ನ ಕೈ ಹಿಡಿದುಮುಂದಕ್ಕೆ ಎಳೆದೊಯ್ಯುತ್ತಿದೆ ಆದರೂ…ನನ್ನೊಳಗಿನ ಒಂದು ಸಣ್ಣ ತುಣುಕುಇಂದಿಗೂ ಅಲ್ಲೇ ನಿಂತಿದೆನೀನು ಕೊನೆಯ ಸಲಕಂಡ ಆ ಹೊಸ್ತಿಲ ಬಳಿ ನೀನು…ಮೌನದೊಳಗೆ ಮುಳುಗಿಹೋದೆನಾನು ಮಾತ್ರನನಗಿಷ್ಟವಾದ ನಿನ್ನೆಯೊಳಗೆನಡೆಯುತ್ತಾ ಹೊರಟುಹೋದೆ ದಿನಗಳು ಕಳೆದವುಋತುಗಳು ಬದಲಾದವುಮನುಷ್ಯರು ಬದಲಾಗಿಬಿಟ್ಟರು ಆದರೆ… ನನ್ನೊಳಗೆಇನ್ನೂ ಒಂದು ಬಾಗಿಲು ಮಾತ್ರಇಂದಿಗೂ ತೆರೆದೇ ಇದೆನೀನು ಮರಳಿ ಬರಬಹುದೆಂಬ ನಿರೀಕ್ಷೆಯಿಂದಲ್ಲನಾನು ಕಳೆದುಕೊಂಡನನ್ನ ನಿನ್ನೆಯನ್ನುಎಂದಾದರೂ ಮತ್ತೆಪಡೆಯುವೆನೇನೋ ಎಂಬ ನಿರೀಕ್ಷೆಯಿಂದ!! ತೆಲುಗು ಮೂಲ : ರಾಜಾಬಾಬು ಕಂಚರ್ಲಕನ್ನಡಾನುವಾದ : ಧನಪಾಲ‌ ನಾಗರಾಜಪ್ಪ

“ನಿನ್ನೆಯೊಳಗೆ” ಕವಿತೆ ತೆಲುಗು ಮೂಲ:ರಾಜಾಬಾಬು ಕಂಚರ್ಲ,ಕನ್ನಡಕ್ಕೆ:ಧನಪಾಲ‌ ನಾಗರಾಜಪ್ಪ Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಬೆಳಗಾವಿ ಗಜಲ್ ಒಡವೆ ತೊಡುವ ಆಸೆಯಲಿ  ಕಿವಿ ಚುಚ್ಚಿಸಿಕೊಳ್ಳುತಿರುವೆನುಮರೆಯಾಗಲೆಂದು ಮಣ್ಣಿನಲಿ ಮುಖ ಮುಚ್ಚಿಸಿಕೊಳ್ಳುತಿರುವೆನು ಇರುವ ಗಾಯಗಳ ಲೆಕ್ಕ ಸಾಲದಾಯಿತು ಈ ಜೀವನಕೆನಯವಂಚಕರ  ನಾಲಿಗೆಯಲಿ ಬಾಳ ಕೊಚ್ಚಿಸಿಕೊಳ್ಳುತಿರುವೆನು ಪುಟ ತಿರುವಿದಷ್ಟು ಪೂರ್ಣ ವಿರಾಮವಿರದ ಸಾಲುಗಳಿವೆಬೇಡವಾಗಿರುವ ಬದುಕಿನಲಿ ವಿಧಿ ಮೆಚ್ಚಿಸಿಕೊಳ್ಳುತಿರುವೆನು ಬೆವರು ಬಸಿದರೆ ಸಾಲದೇನು ಈ  ಹಾಳು ಜನುಮಕೆರಕುತ ಸುರಿಸಿ  ಭಕುತಿಯಲಿ ದೈವ ನೆಚ್ಚಿಸಿಕೊಳ್ಳುತಿರುವೆನು ನಡೆದ ದಾರಿಯಲಿ ನರಳುತಿವೆ  ಜ್ಯೋತಿ  ಹೆಜ್ಜೆ ಗುರುತುಗಳುಸುಮ್ಮನಿರದೆ  ಗದ್ದಲದಲಿ ಹಾವು ಕಚ್ಚಿಸಿಕೊಳ್ಳುತಿರುವೆನುಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್ Read Post »

You cannot copy content of this page

Scroll to Top