ಕಲ್ಪನಾ ಎಸ್ ಪಾಟೀಲ”ನಮ್ಮ ಕನಸಿನ ಮನೆ”
ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ನಮ್ಮ ಕನಸಿನ ಮನೆ” ಈ ಮನಸು ಕನಸಲ್ಲೆ ಮನೆ ಕಟ್ಟುತಿತ್ತುಒಂದೊಂದಾಗಿ ಕೋಣೆಯ ಅಡಿಪಾಯ ಹಾಕಿಸಿನಮ್ಮ ಕನಸಿನ ಮನೆ*ತ್ತುಇಟ್ಟಿಗೆಗಳ ಒಂದರ ಮೇಲೊಂದು ಏರಿಸಿತ್ತುಪ್ರೀತಿ ಪ್ರೇಮವೆಂಬ ಗಟ್ಟಿತನದ ಸಿಮೆಂಟಿತ್ತು. ಶುದ್ಧ ಗಾಳಿ ಬೆಳಕು ಬರುವಂತೆಮನೆ ಮುಂದೆ ಗಿಡ ನೆಡುವಂತೆನೆರಳಿನಾಸರೆ ಹಕ್ಕಿ ಪಿಕ್ಕಿಗಳು ಪಡೆದಂತೆನಮ್ಮ ತಲೆಯ ಮೇಲೊಂದು ಸೂರಂತೆ. ಒಂದು ಸ್ವಂತಕ್ಕೆ ಮೇಲೊಂದು ಬಾಡಿಗೆಗೆಪುಟ್ಟ ಗ್ರಂಥಾಲಯ ಒಂದು ಒಳಗೆಒಳಾಂಗಣ ಹೊರಾಂಗಣ ಆಟಕೆ ಮಕ್ಕಳಿಗೆವಿಶ್ರಾಂತಿ ಕೋಣೆ ಬಂದ ಅತಿಥಿಗಳಿಗೆ. ಪುಟ್ಟ ಗೂಡಿನ ಕನಸೊಂದ ಕಂಡಿಹೆನುಬ್ಯಾಂಕಲ್ಲಿ ಕೊಡುವರಂತೆ ಕಟ್ಟಲು ಲೋನುಮಳೆರಾಯ ಒಳ ಬಂದು ಸೋಕಿದನುಕನಸಿಂದ ವಾಸ್ತವಕೆ ದೂಡಿದ ಮನವನು. ಕಲ್ಪನಾ ಎಸ್ ಪಾಟೀಲ
ಕಲ್ಪನಾ ಎಸ್ ಪಾಟೀಲ”ನಮ್ಮ ಕನಸಿನ ಮನೆ” Read Post »









