ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ನಟರಾಜ್ ಆರ್ಯ ಅವರ ಕವಿತೆ “ಅರಳಿಯ ನೆರಳು”

ಕಾವ್ಯ ಸಂಗಾತಿ ಡಾ. ನಟರಾಜ್ ಆರ್ಯ “ಅರಳಿಯ ನೆರಳು” ಬೆಟ್ಟ ಗುಡ್ಡದ ತೋಳಲಿಕೆರೆಯೂರ ಕೇರಿ;ಅರಳಿಯ ನೆರಳಲಿಊರು ಉಸಿರಾಡಿತು. ಕರುಗಳ ಮೊರೆ,ಒಲೆ ಹೊಗೆ,ಒನಕೆಯ ತಾಳಕೆಬೆಳಗು ಮೂಡಿತು. ಹುಟ್ಟು ಬಂದರೆಅರಳಿಯ ಕೆಳಗೆ;ಸಾವು ಬಂದರೂಅರಳಿಯ ಕೆಳಗೆ. “ಅರಳಿ ಕಡೀಬೇಡಯ್ಯ…ಒಳಗ ದೇವರಿರ್ತಾರೆ…”ಹಿರಿಯರ ನುಡಿಗಾಳಿಯಲಿ ತೇಲಿತು. ಹೊನ್ನಯ್ಯನ ಕೊಡಲಿಬೇರಿಗೆ ಇಳಿಯಿತು. ಕೊಂಬೆ ಮುರಿಯಿತು.ಗೂಡು ಉದುರಿತು.ಮರಿ ಬಿತ್ತು.ಊರು ಮೌನವಾಯಿತು. ತಾಯಿಹಕ್ಕಿ ಅತ್ತಿತು;ಗಾಳಿ ನಿಟ್ಟುಸಿರಿಟ್ಟಿತು;ಅರಳಿಯ ಎಲೆಗಳುಮಾತಿಲ್ಲದೆ ಉದುರಿದವು. ಅರಳಿ ಬಿದ್ದ ಮೇಲೆಬಿಸಿಲು ಹರಡಿತು;ಕೇರಿಯ ದಾರಿಯಲಿನೆರಳು ಕಳೆದುಹೋಯಿತು. ಹೂವಯ್ಯಕಣ್ಣು ಮುಚ್ಚಿದ. ಅರಳಿ ಬಿದ್ದ ಜಾಗದಲ್ಲಿಇಂದಿಗೂಗಾಳಿ ಬೀಸಿದರೆಮೌನ ಅಲುಗಾಡುತ್ತಿದೆ. ಡಾ. ನಟರಾಜ್ ಆರ್ಯ

ಡಾ. ನಟರಾಜ್ ಆರ್ಯ ಅವರ ಕವಿತೆ “ಅರಳಿಯ ನೆರಳು” Read Post »

ಕಾವ್ಯಯಾನ, ಗಝಲ್

ಜಯಂತಿ ಸುನಿಲ್‌ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್‌ ಗಜಲ್ ಮರೆಯಲಾಗುತ್ತಿಲ್ಲಾ ನಿನ್ನೂರಿನ ವಿಳಾಸವನು ದೊರೆಯೆಎಣಿಸಲಾಗುತ್ತಿಲ್ಲಾ ನೀ ಮಾಡಿದ ಗಾಯಗಳನು ದೊರೆಯೆ!! ಯಾರಿಗೇಳಿದರೆ ತಾನೇ ಕಳೆದೀತು,ಇಳಿದೀತು ಈ ದು:ಖ?ಹುಡುಕಲಾಗುತ್ತಿಲ್ಲಾ ಅಂತಹವನೊಬ್ಬ ಚಿಕಿತ್ಸಕನನು ದೊರೆಯೆ!! ಯಾರಿಗೆ ಗೊತ್ತಿತ್ತು,ಪ್ರೇಮದ ನಶೆಯೆಂದುಕೊಂಡೆತಿಳಿಯಲಾಗುತ್ತಿಲ್ಲಾ ನೀ ವಿಷವುಣಿಸಿ ಕೊಲ್ಲುವ ಕಲೆಯನು ದೊರೆಯೆ!! ನಗುವ ಅಭ್ಯಾಸವಿದ್ದವಳಿಗೆ ಅಳುವಿನ ಅಭ್ಯಂಜನ ಮಾಡಿಸಿದೆಒರೆಸಲಾಗುತ್ತಿಲ್ಲಾ ಕಡಲಂತೆ ಉಕ್ಕುವ ಕಂಬನಿಯನು ದೊರೆಯೆ!! ಪ್ರೀತಿಗೆ ಇಷ್ಟೊಂದು ಶಕ್ತಿಯೇ? ತಲಾಷೇ ಬೇಕಿಲ್ಲಾನಂಬಲಾಗುತ್ತಿಲ್ಲಾ ಹೀಗೂ ಸಾಯಬಹುದೆಂಬ ಸತ್ಯವನು ದೊರೆಯೆ!! ಮನಸ್ಸನ್ನು ಮುಟ್ಟಿ ನೋಡಿದರೆ ತಿಳಿಯ ಬಹುದಿತ್ತುಉಳಿಸಿಕೊಳ್ಳಲಾಗುತ್ತಿಲ್ಲಾ ನಿನಗೆ ಶಾಶ್ವತ ಪ್ರೀತಿಯನು ದೊರೆಯೆ!! ಬದುಕು ತೆರೆದಿಡುವ ಪಠ್ಯದೊಳಗೆ ಪ್ರೇಮ ಒಂದು ಭಾಗವೆಂಬುದ ಮರೆತೆಕಲಿಯಲಾಗುತ್ತಿಲ್ಲಾ ಇಷ್ಟಾದರೂ ಜಯಾ, ದ್ರೋಹ ಮಾಡುವುದನು ದೊರೆಯೆ!! ಜಯಂತಿ ಸುನಿಲ್

ಜಯಂತಿ ಸುನಿಲ್‌ ಅವರ ಗಜಲ್ Read Post »

ಕಾವ್ಯಯಾನ

ನಿರಂಜನ ನಾಯಕ ಅವರಕವಿತೆ “ನಾ ಯಾವುದ ನಂಬಲಿ?”

ಕಾವ್ಯ ಸಂಗಾತಿ ನಿರಂಜನ ನಾಯಕ “ನಾ ಯಾವುದ ನಂಬಲಿ?” ನಾ ಯಾವುದ ನಂಬಲಿ?ಕಣ್ಣಿಗೆ ರಾಚುವ ಬಣ್ಣದ ಭ್ರಮೆಯನ್ನೋ?ಕರ್ಣಕೆ ಅಪ್ಪಳಿಸುವ ಹುಸಿ ಪದಗಳ ಸದ್ದನ್ನೋ?ಇವೆಲ್ಲವ ಮೀರಿಆ ಎದೆಯಾಳದಿ ತುಡಿಯುವ ಪ್ರಜ್ಞೆಯ ದನಿಯನ್ನೋ? ದಮನಿಸುವ ಸಿಂಹಾಸನದ ದರ್ಪವನ್ನೋ?ಬೀದಿಯಲಿ ಧಗಧಗಿಸುವ ಕಿಚ್ಚಿನ ಜ್ವಾಲೆಯನ್ನೋ?ಎದೆಯತ್ತ ಗುರಿಯಿಟ್ಟ ಬಂದೂಕಿನ ನಾಲಗೆಯನ್ನೋ?ಅಥವಾನೆಲದ ಮೇಲೆ ಹೆಪ್ಪುಗಟ್ಟಿದ ನಿಸ್ಸಹಾಯಕ ನೆತ್ತರ ಗುರುತನ್ನೋ? ನಂಬಿಕೆ ಬೆಲೆಗೆ ಬಿಕರಿಯಾದ ಸರಕಾದಾಗ,ನನ್ನ ನಂಬಿಕೆಗಳು ಮಾರಾಟವಾಗಿ,ನನ್ನತನದ ಗುರುತನ್ನೇ ಕಳೆದುಕೊಂಡಾಗ…ನಾ ಬರಿಯ ಅಧಿಕಾರದ ಗುರುತಾದೆ!ಇಷ್ಟೆಲ್ಲದರ ನಡುವೆ ಕಳೆದುಹೋದನಾನು ಯಾರು?ನಾನು ಯಾರು? ನಿರಂಜನ ನಾಯಕ

ನಿರಂಜನ ನಾಯಕ ಅವರಕವಿತೆ “ನಾ ಯಾವುದ ನಂಬಲಿ?” Read Post »

ಕಾವ್ಯಯಾನ

ಶ್ರೀದೇವಿ. ಮ.ಗುಮ್ಮಗೋಳ “ಬಾನು-ಭೂಮಿ(ಇಂಗ್ಲೀಷನ sonnet/ಸುನೀತ ಮಾದರಿಯ ಪದ್ಯ)”

ಕಾವ್ಯ ಸಂಗಾತಿ ಶ್ರೀದೇವಿ. ಮ.ಗುಮ್ಮಗೋಳ “ಬಾನು-ಭೂಮಿ (ಇಂಗ್ಲೀಷನ sonnet/ಸುನೀತ ಮಾದರಿಯ ಪದ್ಯ)” ಬಾನಿನ ಬಾನು ಕಣ್ಣ‌ ತೆರೆದು ನೋಡಿದಭುವಿಯು ಭವದಿಂದ‌ ನಮಸ್ಕರಿಸಿದಳುತಳುಕಿ ಬಳುಕಿ ಗಿಡಬಳ್ಳಿಗಳ ನಾಚಿಸಿದಳುಆಗಸ ಬೊಗಸೆ ಪ್ರೀತಿ ಬೇಡಿದ ಮಿಥುನ ರಾಗಕೆ ಮಳೆಯ ಸ್ಪುರಿಸಿದಹಸಿರಿನಲಿ ಉಸಿರಾಗಿ ಜೀವ ಅಂಕುರಿಸಿತುಇಳೆಯಲಿ ಬೆಳೆಯ ಸಮೃದ್ಧಿ ಆವರಿಸಿತುಲೋಕಕೆ ಸಂತೋಷದ ಹೊಳೆ ಹರಿಸಿದ ಪರಿಸರವ ಪರಿಭ್ರಮಿಸುತ ಜ್ಞಾನಿಸಿದಸಂವತ್ಸರ ಋತುಗಳ ಕಾವ್ಯ ಬರೆದಜಗವನಾಳುವ ಒಡೆಯನಾಗಿ ಮೆರೆದಸಂಜೆಯಲಿ ದ್ಯಾನಸ್ಥನಾಗಿ ಬುದ್ದ ಎನಿಸಿದ ತೆರೆದು ನೋಡುವ ನೋಟವಿದುಪ್ರಕೃತಿ ಹೇಳುವ ಪಾಠವಿದು ಶ್ರೀದೇವಿ. ಮ.ಗುಮ್ಮಗೋಳ

ಶ್ರೀದೇವಿ. ಮ.ಗುಮ್ಮಗೋಳ “ಬಾನು-ಭೂಮಿ(ಇಂಗ್ಲೀಷನ sonnet/ಸುನೀತ ಮಾದರಿಯ ಪದ್ಯ)” Read Post »

ಕಾವ್ಯಯಾನ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್ ಮಾತು ಮನವ ಕೆದುಕುವಾಗ ಮೌನವೇ ಉತ್ತಮಸತ್ಯ ಬದುಕು ಕದಡುವಾಗ ಮೌನವೇ ಉತ್ತಮ ಸಂಭಾಷಣೆ ಸಂಪ್ರೀತಿಯಿಂದ ಕೂಡಿದರೆ ರಸಗವಳನುಡಿಯಲಿ ಹುಡಿ ಹಾರುವಾಗ ಮೌನವೇ ಉತ್ತಮ  ಮಾತು ಹೃದಯ ಹೃದಯಗಳನು ಕಟ್ಟಿ ಆಳಬಹುದುಅರಿಕೆಯಿಂದ ಅಪಾಯವೆಂದಾಗ ಮೌನವೇ ಉತ್ತಮ  ನುಡಿದರೆ ಈ ಜಗವು ಮೆಚ್ಚಿ ಹಾರ ಹಾಕುವಂತಿರಬೇಕು ನಡೆ ನುಡಿಗಳು ಬೇರೆಯಾದಾಗ ಮೌನವೇ ಉತ್ತಮ ಒಲವು ಗೆಲುವುಗಳು ಸೇಡಿನ ಕಿಡಿಯಲಿ ಸುಡುತಿವೆ ಸಾಕಿಜ್ಯೋತಿ ಬೆಳಗದೆ ಬೂದಿಯಾದಾಗ ಮೌನವೇ ಉತ್ತಮ ಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್ Read Post »

ಕಾವ್ಯಯಾನ

ಹೆಬಸೂರ ರಂಜಾನ್ ಅವರ ಕವಿತೆ “ಖಾಲಿ”

ಕಾವ್ಯ ಸಂಗಾತಿ ಹೆಬಸೂರ ರಂಜಾನ್ “ಖಾಲಿ” ನಿನ್ನ ಎದೆ ಖಾಲಿ ಇದೆಅದು ಇಂಚುಗಳ ಅಳತೆಗೆ ಒಗ್ಗುವುದುಅಲ್ಲಿ ತಲೆಯಾನಿಸಿ ನಿಟ್ಟುಸಿರುವೇನೆಂದರೆಅಲ್ಲಿ ಮೊಳೆಗಳನ್ನು ಜಡಿಯಲಾಗಿದೆ ನಿನ್ನ ಎದೆ ಬರಡಾಗಿದೆಅಲ್ಲಿ ಸದಾ  ಜಿನುಗುವ ಪಸೆಬತ್ತಿಹೋಗಿದೆನಿನ್ನ ಎದೆಗೂ ಮೊಲೆಗಳು ಮೂಡಿರಬೇಕಿತ್ತುಹಸಿದ ಹಾಲುಗಲ್ಲುಗಳತುಟಿಗಳಲಿ  ಎದೆ ಹಾಲು ಜಿನುಗುತ್ತಿತ್ತು ನಿನ್ನದೆಯ ರೋಮಗಳನುಸವರುತ್ತಿದ್ದರೆಮುಳ್ಳುಗಳು ಪರುಚುತ್ತಿವೆಅದೆಷ್ಟು ವರುಷಗಳ ರಕ್ತದ ದಾಹವಿದೆ ಅವುಗಳಿಗೆ ನಿನ್ನ ಬೆರಳುಗಳ ಸಹವಾಸಸಾಕುಲಾಠಿಗಳನ್ನೆ ಪಠಿಸುತ್ತೀವೆನಾಲಿಗೆಯ ತುಂಬ ಸಿಡಮದ್ದಿನ ವಾಸನೆಯ ಘಮಲು ತುಂಬಿದೆ ಸಾಕು ದೊರೆಯೇನಿನ್ನನಾಟಕದ ಕೊನೆಯ ಅಂಕನಟಿಸುವ ಆ ಪಟ್ಟುಗಳ ಗತ್ತು ಬಿನ್ನಾಣಎಲ್ಲವನ್ನೂ ಅರಿತಿರುವೆ ಹಸುಳೆಗಳು ಬೀದಿಗಳಿದಿವೆಈಗಲಾದರೂ ನಟಿಸುವುದು ಸಾಕುಒಂದು ಕಡ್ಡಿ ಸಾಕು ಹೊತ್ತಿ ಉರಿಯಲು ಮಕ್ಕಳಿದ್ದರೆ ಗೊತ್ತಾಗುತ್ತಿತ್ತುಅಪ್ಪನ ಎದೆಯೊಳಗೆ ಮೊಲೆಗಳಿವೆ..ಅಳತೆಗಳಿಲ್ಲ..!ಹೆಬಸೂರ ರಂಜಾನ್

ಹೆಬಸೂರ ರಂಜಾನ್ ಅವರ ಕವಿತೆ “ಖಾಲಿ” Read Post »

ಕಾವ್ಯಯಾನ

ಬಾಗೇಪಲ್ಲಿ  ಅವರ ಕವಿತೆ “ಗಾಜು”

ಕಾವ್ಯ ಸಂಗಾತಿ ಬಾಗೇಪಲ್ಲಿ   “ಗಾಜು” ನಂಬಿಕೆ ಗಾಜಿ ನಂತೆನಮ್ಮನೋಟ ಒಳ ತೂರಿ ಹೋಗುವಷ್ಟು ಸ್ಪಷ್ಟ ಸ್ವಚ್ಛ ಜಾಗ್ರತೆ ರಹಿತ ನಮ್ಮ ಸ್ಪರ್ಶ ನೆನಪಿಡಲು ಅದು ಬಲು ಸೂಕ್ಷ್ಮ ಮೊದಲ ಬಾರಿಯ ಅಂತ ಸ್ಪರ್ಶಕೆ ಒಡೆಯದೆ ಉಳಿದಿದೆಎಲ್ಲಿಯವರೆಗೆ? ಒಂದು ಸಾಮಾನ್ಯ ದಿನ ಬಹು ಸಣ್ಣ ಒತ್ತಡಕೆ ಅದರಲಿ ಬಿರುಕು ಕಾಣಲೂ ಬಹುದುನಮ್ಮ ಸಂಬಂಧಗಳೂ ಬಹುಶಃ ಹಾಗೆಯೇ! ಅದು ನಮಗರಿವಿಗೆ ಬರುವುದು ಸರಿಪಡಿಸ ಹೋದಾಗಅದು ಆಗಲೇ ಬಿರಕು ಬಿಟ್ಟಿದೆ ಎಂದು.(ಮು.ಪು ವಿನ ಆಂಗ್ಲ ಬರಹದ ಕನ್ನಡೀಕರಣ.) ಬಾಗೇಪಲ್ಲಿ  

ಬಾಗೇಪಲ್ಲಿ  ಅವರ ಕವಿತೆ “ಗಾಜು” Read Post »

ಕಾವ್ಯಯಾನ

ಡಾ.ಡೋ.ನಾ.ವೆಂಕಟೇಶ ಕವಿತೆ “ಝಲಕು”

ಕಾವ್ಯ ಸಂಗಾತಿ ಡಾ.ಡೋ.ನಾ.ವೆಂಕಟೇಶ “ಝಲಕು” ಬರೆಯುವುದಕ್ಕೆ ಏನಿಲ್ಲ ಎಲ್ಲ ಬರೀ ಮೌನಎದೆಯೊಳಗೆ ಬೆಟ್ಟನೆತ್ತಿ ಮೇಲೆ ಹಸಿರು ಕಾಡುಬರೆಯುವುದಕ್ಕೆ ಏನಿಲ್ಲ ಕಣ್ಣ ಹೊಳಪುಶುಭ್ರಾಕಾಶದ ಝಲಕುಆಸೆ ತುಂಬಿದ ಮೆಲುಕುಬರೆಯುವುದಕ್ಕೆ ಏನಿಲ್ಲ ಬಿಟ್ಟು ಹೋದ ಹಾದಿಗುಂಟ ಪುವಾಸನೆಆಘ್ರಾಣಿಸುವ ಶಕ್ತಿಬರಡುಬಿಡು  ಬರೆಯಲೇನಿಲ್ಲ ಹೀಗೇ ಮಾತಿಲ್ಲ ಕಥೆಯಿಲ್ಲಜನ್ಮಗಳಾಚೆ ಧಾರಾವಾಹಿ!ಇಂದು ಇಂದಿಗೆ ನಾಳೆಯಿಲ್ಲ. ಹೀಗೇ ಬಿಡು ಬರೆಯಲೇನಿಲ್ಲ!! ಡಾ.ಡೋ.ನಾ.ವೆಂಕಟೇಶ

ಡಾ.ಡೋ.ನಾ.ವೆಂಕಟೇಶ ಕವಿತೆ “ಝಲಕು” Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಗಜಲ್(ರವಿ ಸರ್ ಅವರ ಗಜಲ್ ಒಂದರಿಂದ ಪ್ರೇರಿತ ) ಬಣ್ಣವಿಲ್ಲವೆಂದು ಬಯ್ಯುವ ಬಿಳಿ ಪುಟದೊಳಗೂ ತುಸು ಚಂದವಿದೆಲೋಪಗಳಿವೆಯೆಂದು ನಾ  ಜರಿವ ಜಗದೊಳಗೂ ತುಸು ಚಂದವಿದೆ ಎಲ್ಲಾ ರಾಗಗಳನು, ಯಾರು ಹಾಡುವವರಿದ್ದಾರಿಲ್ಲಿ ಹೇಳುಯಾರೂ ಗುನುಗುನಿಸದ ಪದ್ಯದೊಳಗೂ ತುಸು ಚಂದವಿದೆ ಆಕಾಶಕ್ಕೂ, ಅನುದಿನ ಆನಂದ ನೀಡಲು ಸಾಧ್ಯವಾಗುವುದೇಕಪ್ಪೆಂದು ಕಡೆಗಣಿಸಿದ ಮೋಡದೊಳಗೂ ತುಸು ಚಂದವಿದೆ ವರ್ಣನೆಗೂ ನಿಲುಕದ  ಮಾತುಗಳಿಗಿಲ್ಲಿ ಬರವಿಲ್ಲ ನಿಜಪದಗಳಿಂದ ಮುನಿಸಿಕೊಂಡ ಮೌನದೊಳಗೂ ತುಸು ಚಂದವಿದೆ ಜಂಜಾಟವಿಲ್ಲದ ಜೀವನ ಬರೀ ಕಲ್ಪನೆಯಷ್ಟೇ ವಾಣಿನೋವು ತುಂಬಿದ ನಯನದೊಳಗೂ ತುಸು ಚಂದವಿದೆ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ವನಜ ಮಹಾಲಿಂಗಯ್ಯ ಕವಿತೆ “ಮಳೆಯೇ ಬಾ”

ಕಾವ್ಯ ಸಂಗಾತಿ ವನಜ ಮಹಾಲಿಂಗಯ್ಯ “ಮಳೆಯೇ ಬಾ” ಮೋಡಗಳೇ ಎಲ್ಲಿಗೆ ಹೋದಿರಿ,  ನಮ್ಮ ಊರ ನೀವು ಮರೆತೆರಾ?  ಬಾವಿಯಲ್ಲೂ ಒಂದನಿ ನೀರಿಲ್ಲ,  ಕೆರೆಯಲ್ಲೂ  ಹನಿ ನೀರಿಲ್ಲ. ಅಡಿಕೆ ಬಾಳೆ ತೆಂಗು ಒಣಗುತಿದೆಆದರೆ ಅಲ್ಲಿ….ರಾಜಕೀಯ ಕುಣಿದಾಡುತಿದೆಬಡವನ ಕೂಗು ಕೇಳಲವರಿಗೆ ಸಮಯವೆಲ್ಲಿದೆ?ನಿನಗಾದರೂ ಕೇಳಲಿ ರೈತರ ಕೂಗು ಮಳೆಯೇ ಬಾ ಮಳೆಯೇ ಬಾ ಮಳೆಯೇಬಾ ಬೇಗ ಭೂಮಿ ಕಾದಾರಿದೆ. ಬೆಳೆ ಇಲ್ಲದೆ ರೈತ ಅಳುತಿರುವ,ಮಗುವಿಗೆ ನೀರಿಲ್ಲದೆ ತಾಯಿ ಪರಿತಪಿಸುವ,  ಒಣಗಿದ ಮರದ ಕೆಳಗೆ ಹಕ್ಕಿಯೂ ಸುಮ್ಮನಿದೆ,  ಮಳೆಯೇ ಬೇಗ ಬಾ, ನಮ್ಮ ಕಣ್ಣೀರು ಒರೆಸು.  ಬಾ ಮಳೆಯೇ ಬಾ ಮಳೆಯೇಬಾ ಬೇಗ ಭೂಮಿ ಕಾದಾರಿದೆ. ಭೂಮಿ ತಾಯಿ ಬಾಯಾರಿದ್ದಾಳೆ,  ಬಿತ್ತಿದ ಬೀಜ ಕಾಯುತ್ತಿದೆ,  ಒಂದೇ ಒಂದು ಹನಿ ಮಳೆಗಾಗಿ,  ಇಡೀ ಊರೇ ಕೈಮುಗಿದು ನಿಂತಿದೆ. ಮಳೆಯೇ ಬಾ, ಮಳೆಯೇ ಬಾ,  ಜೀವನಕ್ಕೆ ಜೀವ ತುಂಬಲು ಬಾ ಭುವಿಗೆ .ನೀನು ಬಂದರೆ  ನಮಗೆಲ್ಲ ಅನ್ನ ನೀರುನೀ ಬಾರದಿದ್ದರೆ  ನಮಗೆಲ್ಲಿ  ಬದುಕು ಬಾ ಮಳೆಯೇ ಬಾ ಮಳೆಯೇಬಾ ಬೇಗ ಭೂಮಿ ಕಾದಾರಿದೆ. ವನಜ ಮಹಾಲಿಂಗಯ್ಯ 

ವನಜ ಮಹಾಲಿಂಗಯ್ಯ ಕವಿತೆ “ಮಳೆಯೇ ಬಾ” Read Post »

You cannot copy content of this page

Scroll to Top