ಪರವಿನ ಬಾನು ಯಲಿಗಾರ “ಹೊಸ ವರ್ಷ”
ಕಾವ್ಯ ಸಂಗಾತಿ ಪರವಿನ ಬಾನು ಯಲಿಗಾರ “ಹೊಸ ವರ್ಷ” ಮದಿರೆಯ ಮತ್ತಿನಲ್ಲಿ ತೇಲುವವರು ,ಮಂಗಾಟದ ಮಂಪರಿನಲ್ಲೆ ಇರುಳಕಳೆಯುವವರು ,ಹಾದಿ ಬೀದಿಯಲಿ ಬಿದ್ದು ಹೊರಳಾಡುವವರು ,ಮೈ ಮನದ ಮಲೀನತೆಯಲಿಮುಳುಗಿದವರು ,ಸಂಭ್ರಮಿಸುವ ಹೊಸ ವರ್ಷ… ಹೊತ್ತಿನ ತುತ್ತಿಗೆ ಹಾತೊರೆಯುವವರು ,ಹಲುಬುವ ಹಸುಳೆಗೆ ಹಾಲುಣಿಸಲುಹೆಣಗುವವರು ,ಹೊತ್ತಿ ಉರಿಯುವ ಬಿಸಿಲಲಿಬೇಯುವವರು ,ಕೋರೆವ ಚಳಿಯಲಿ ಚಡಪಡಿಸುವವರು ,ಮೈ ಮಾನ ಮುಚ್ಚಲು ಏಗುವವರು ,ಬೇಸರಿಸಿದರೆ ಬೇಯದಿರುವ ಕೂಳುಎಂದು ನಿಟ್ಟುಸಿರು ಬಿಡುವವರು , ಎಷ್ಟು ಹೊಸ ವರ್ಷ ಬಂದರೆನು , ಹೋದರೆನುಇಂತಹ ಶಾಪಗ್ರಸ್ತರಿಗೆ ಎಂದು ಬರುವುದು ಹೊಸ ವರ್ಷ ?ಇವರೆಂದು ಕಾಣುವುದು ಹೊಸ ಕನಸ ?ಪರವಿನ ಬಾನು ಯಲಿಗಾರ
ಪರವಿನ ಬಾನು ಯಲಿಗಾರ “ಹೊಸ ವರ್ಷ” Read Post »









