ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಟಿ.ಪಿ.ಉಮೇಶ್‌ ಅವರ “ನೀ ನನ್ನ ಅಪೂರ್ಣ ಕವಿತೆ!”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್‌ “ನೀ ನನ್ನ ಅಪೂರ್ಣ ಕವಿತೆ!” ನಿನ್ನನ್ನು ನಿನ್ನನ್ನಷ್ಟೇ ಬರೆಯಲುಎಷ್ಟೋ ಕವಿತೆಗಳು ನನ್ನೊಳಗೆ ಕಾಯುತ್ತಿವೆ!ಪ್ರತಿ ಬಾರಿಯುಭಾವನೆಗಳು ಎದೆಯ ತುಂಬಿಕಣ್ಗಳ ಅರಳಿಸಿ ಬೆರಳಿಗೆ ತಾಗಿಅಕ್ಷರಗಳಾಗದೆ ನಿಂತು ಬಿಡುತ್ತವೆ!ನೀನಿಲ್ಲದ ಪ್ರತಿ ದಿನದಮನೆಯ ಒಳಗಿನ ಮೌನದಂತೆ! ನೀನು ದೂರವಾದ ಮೇಲೆಚಂದ್ರನಿದ್ದರೂ ಇರುಳಿಗೆ ಬೆಳಕಿಲ್ಲ!ಮಳೆಯಾದರೂ ಮಣ್ಣಿನ ಪರಿಮಳವಿಲ್ಲ!ಹೂವು ಅರಳಿದರೂ ಸುಗಂಧವಿಲ್ಲ! ನನ್ನ ಮನೆಯ ದಾರಿಯಲ್ಲಿಪ್ರತಿಕ್ಷಣವೂ ಹಾದುಹೋಗುವ ಗಾಳಿನಿನ್ನ ಹೆಜ್ಜೆಗಳ ಸುದ್ದಿಯನ್ನೇ ಹೊತ್ತು ತರಬಹುದೆಂದುಮನಸ್ಸು ಇನ್ನೂ ಕಾಯುತ್ತಾ ಇಣುಕಿ ನೋಡುತ್ತಿದೆ! ವಿರಹನೀನು ಇಲ್ಲದಿರುವುದಕ್ಕಿಂತ!ನೀನು ಇದ್ದ ಮೈಮನ ಈ ಮನೆಯೆಲ್ಲನಿನ್ನ ನೆನಪಿನಿಂದ ತುಂಬಿಹೋಗಿರುವುದು! ಗಾಢ ಮೌನನನ್ನ ಹಗಲು ರಾತ್ರಿಗಳ ಮೇಲೆಇಳಿಯದ ಮಳೆಯ ಮೋಡದಂತೆ!ಮಳೆ ಸುರಿಯದೆ ಆಕಾಶವೆಲ್ಲಭಾರವಾಗಿಯೇ ಉಳಿದಂತೆ! ನಿನ್ನನ್ನು ಮರೆಯಲು ಹೊರಟಪ್ರತಿ ಆಲೋಚನೆಯು ಪ್ರತಿ ನಡೆಯುಮತ್ತೆ ನಿನ್ನ ನೆನಪಿನ ಬಳಿಗೇ ಬಂದು ನಿಲ್ಲಿಸುತ್ತದೆ!ದಾರಿ ತಪ್ಪಿದ ನದಿಯೊಂದು ಹುಚ್ಚು ಕುದುರೆಯಾಗಿಸಮುದ್ರವನ್ನೇ ಹುಡುಕುವಂತೆ! ಒಮ್ಮೆ ನೀನುನನ್ನೆಲ್ಲ ದಿನಗಳ ಬೆಳಗಾಗಿದ್ದೆ!ಈಗ ಅದೇ ದಿನಗಳುಸೂರ್ಯೋದಯವನ್ನೇ ಮರೆತಿರುವದೀರ್ಘ ಸಂಜೆಯಂತಾಗಿ ಸುದೀರ್ಘ ಇರುಳಂತಿವೆ! ನಿನ್ನ ಹೆಸರನ್ನು ಬರೆದಾಗಪೆನ್ನಿನ ಮಸಿ ಮಾತ್ರ ಕಾಗದದ ಮೇಲೆ ಮೂಡುವುದಿಲ್ಲ!ನನ್ನೊಳಗೆ ಮೌನವಾಗಿ ಉಳಿದಿರುವವಿರಹದ ಕಣ್ಣೀರುಸಾಲುಸಾಲುಗಳಾಗಿ ಜಾರಿ ಮನ ಹಗುರಾಗಬೇಕಿದೆ! ನಿನ್ನನ್ನು ಒಂದೇ ಕವಿತೆಯಲ್ಲಿ ಬರೆಯಲು ಸಾಧ್ಯವಿಲ್ಲನೀನು ಕೇವಲ ಒಂದು ನೆನಪಲ್ಲ!ನನ್ನ ಉಸಿರು ಉಸಿರಿನಲ್ಲೂಮತ್ತೆ ಮತ್ತೆ ಹುಟ್ಟುವನನ್ನದೇ ಅಪೂರ್ಣ ಕವಿತೆ! ಟಿ.ಪಿ.ಉಮೇಶ್

ಟಿ.ಪಿ.ಉಮೇಶ್‌ ಅವರ “ನೀ ನನ್ನ ಅಪೂರ್ಣ ಕವಿತೆ!” Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ರೀತಿ, ರಿವಾಜು ಎಂದೆಲ್ಲಾ ಸಂತಸಕೆ ಒಡ್ಡು ಕಟ್ಟಿದವಳು ನಾನುಕನಸುಗಳಿಗೆ ಪರದೆ ಹಾಕಿ ಇರುಳು ಕಳೆದವಳು ನಾನು ಬದುಕಿನ ಇಳಿ ಸಮಯದಿ ನೀ ಅತಿಥಿಯಂತೆ ಬಂದಿರುವಿ ಏನುಸಂಜೆಯ ಸೊಬಗಿಗೆ ಮರುಳಾಗದಿರಲು ಕಿಟಕಿ ಮುಚ್ಚಿದವಳು ನಾನು ಯಾರು ಎಷ್ಟು ಕರೆದರೂ,ತಿರುಗಿ ನೋಡದೆನ್ನ ಜೀವಎದೆಯ ಕದಕೆ ಅಗುಳಿ ಹಾಕಿ , ಬೀಗ ಜಡಿದವಳು ನಾನು ನೀ ಒಲವಿನ ಓಲೆ ಬರೆದು, ಓಲೈಸಿಕೊಳ್ಳುವೆ ಹೇಗೆ ನನ್ನನುಮೊಹಬ್ಬತ್ತಿನ ಶಹರಿನಲಿ ವಿಳಾಸ ಇಲ್ಲದವಳು ನಾನು  ಬಂಡೆಯಂತಹ ವಾಣಿಯನು ಕರಗಿಸುವ ಹಠವು ವ್ಯರ್ಥಯಾವ ಪ್ರೇಮ ಶಿಲ್ಪಿ ಕಟೆದರೂ ಪ್ರೇಯಸಿ ಆಗದವಳು ನಾನುವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ಶಾಲಿನಿ ಕೆಮ್ಮಣ್ಣು ಅವರ ಕವಿತೆ “ಭಾವ ತರ್ಪಣ”

ಕಾವ್ಯ ಸಂಗಾತಿ ಶಾಲಿನಿ ಕೆಮ್ಮಣ್ಣು “ಭಾವ ತರ್ಪಣ” ಸಂಜೆ ಮುಗಿಲ ಬಣ್ಣದಿಂದ  ಬಿರಿದ ಇಂದ್ರ ಚಾಪದಂತೆ,ಮೌನರಾಗ ತಂತಿಯಲ್ಲಿ ಮಿಡಿವ ಭಾವ ಶ್ರಾವ್ಯ ನೀನು.ನಾ ಮರೆಯ ಹೊರಟರೂ ಮನಸು ನಿನ್ನೇ ಕರೆದಂತೆ,ಮರೆತ ಕ್ಷಣ ರಾಗವಾಗಿ ಮಿಡಿವೆ ನನ್ನ ಮನದಿ ನೀನು. ಪ್ರತಿ ರಾತ್ರಿ ಕನಸಲಿ ಮನದ ಕದವ ತೆರೆದವನೇ,ನನ್ನ ಪ್ರೇಮ ದೇಗುಲದಿ ಬೆಳಗೋ ದಿವ್ಯ ದೀಪ್ತಿ ನೀ.ಉಸಿರ ಪ್ರತಿ ಸ್ಪಂದನದಲಿ ಮಧುರ ಗೀತೆಯಾದವನೇ,ನನ್ನ ಶೂನ್ಯದಾಗಸದಿ ಮಿನುಗೋ ಚೈತ್ರದ ಚುಕ್ಕಿ ನೀ. ಮಾತು ಮರೆತ ಹೃದಯಕೆ ನಿನ್ನ ಹೆಸರೇ ಪಲ್ಲವಿ,ಕನಸ  ಕಣ್ಣ ನೈದಿಲೆಗೆ ನಿನ್ನ ರೂಪವೇ ಚಂದಿರ.ನನ್ನ ಭಾವ ನಂದನಕೆ ನೀನೆ ಒಲವ ಭೈರವಿ,ನನ್ನ ಉಸಿರ ತಾಳಕೆ ನೀನೇ ಮಧುರ ಸಪ್ತಸ್ವರ. ಬರಿದಾದ ಮನದೊಳಗೆ  ನಿಂತೆ ನೀ ವಸಂತವಾಗಿ,ಹೂವಿನ ದಳದಲಿ ಉಳಿದ ಮಂಜಿನ ಹನಿಯಂತೆ.ಕಳೆದುಹೋದ ಕ್ಷಣಗಳೆಲ್ಲ  ಮರಳಿವೆ ಕಾವ್ಯವಾಗಿ,ಕಣ್ಣಂಚಿನ ಹನಿಯೊಂದು ನಿನ್ನ ಕಥೆಯ ಹೇಳಿದಂತೆ. ಶಾಲಿನಿ ಕೆಮ್ಮಣ್ಣು

ಶಾಲಿನಿ ಕೆಮ್ಮಣ್ಣು ಅವರ ಕವಿತೆ “ಭಾವ ತರ್ಪಣ” Read Post »

ಕಾವ್ಯಯಾನ

  ಎನ್.ಜಯಚಂದ್ರನ್ ಅವರಕವಿತೆ “ನುಡಿ ನಮನ”

ಕಾವ್ಯ ಸಂಗಾತಿ   ಎನ್.ಜಯಚಂದ್ರನ್ “ನುಡಿ ನಮನ” ನುಡಿಗೆ ನಮನ!ಎಂದು ಮೈಕ್ ಹಿಡಿದ ಕ್ಷಣ,ಸುಳ್ಳಿಗೂ ಸಿಗುತ್ತದೆ ಹೊಸ ಜನ್ಮ. ವೇದಿಕೆಯ ಮೇಲೆ ವಿನಯದ ಪ್ರವಚನ,ವೇದಿಕೆಯಿಂದ ಇಳಿದ ಮೇಲೆ ಅಹಂಕಾರದ ಪ್ರದರ್ಶನ!ಮುಖಾಮುಖಿ “ಮಹಾನುಭಾವರೇ…”,ಬೆನ್ನು ತಿರುಗಿದೊಡನೆ…“ಅವನಾ? ಬಿಡ್ರಿ!” ಎನ್ನುವ ಅಭಿನಯ. ಚಪ್ಪಾಳೆ ಹೊಡೆಯುವ ಕೈಗಳಿಗೆ ಗೊತ್ತು,ಯಾರಿಗೆ ಹೊಡೆಯಬೇಕು ಎಂದು;ಸತ್ಯಕ್ಕೆ ಅಲ್ಲ,ಹುದ್ದೆಗೆ… ಅಧಿಕಾರಕ್ಕೆ… ಪ್ರಭಾವಕ್ಕೆ! ಹೂಗುಚ್ಛಗಳ ರಾಶಿ,ಶಾಲುಗಳ ಮಳೆ,ಹೊಗಳಿಕೆಯ ಹೊಳೆ…ಆದರೆ,ಒಂದು ನೇರ ಮಾತು ಹೇಳುವ ಧೈರ್ಯಎಲ್ಲೋ ದಾರಿಯಲ್ಲಿ ಕಳೆದುಹೋಗಿದೆ. ಇಂದು,ನುಡಿಗೆ ಬೆಲೆ ಇಲ್ಲ,ನುಡಿಯ ಮಾರ್ಕೆಟಿಂಗ್ಗೆ ಬೆಲೆ!ಸತ್ಯಕ್ಕೆ ವೇದಿಕೆ ಇಲ್ಲ,ಸತ್ಯವನ್ನು ಅಲಂಕರಿಸುವವರಿಗೆ ಮಾತ್ರ ವೇದಿಕೆ! “ನಿಮ್ಮ ಸೇವೆ ಅನನ್ಯ!”ಎಂದು ಹೊಗಳುವವರೇ,ನಾಳೆ ಮತ್ತೊಬ್ಬರ ಸೇವೆ “ಅದ್ವಿತೀಯ”ಎಂದು ಹಾಡುವರು.ಹೊಗಳಿಕೆಯೂ ಈಗಟೆಂಡರ್ ಪದ್ಧತಿಯಲ್ಲಿ ನಡೆಯುತ್ತಿದೆ! ನುಡಿ ನಮನದ ಸಮಾರಂಭ ಮುಗಿಯುತ್ತದೆ,ಫೋಟೋಗಳು ಫೇಸ್‌ಬುಕ್‌ಗೆ ಹೋಗುತ್ತವೆ,ಪತ್ರಿಕೆಗಳಲ್ಲಿ ಸುದ್ದಿಯಾಗುತ್ತದೆ.ಆದರೆ…ನುಡಿಯಲ್ಲಿ ಹೇಳಿದ  ‘ಒಂದೇ ಒಂದು ಮಾತು ‘ಬದುಕಿನಲ್ಲಿ ಕಾಣುವುದಿಲ್ಲ. “ನುಡಿ ನಮನ”  ಫಲಕ ಮಾತ್ರ ದೊಡ್ಡದು,ಒಳಗಿರುವ ನುಡಿ ಮಾತ್ರಅಕ್ಷರಗಳ ಅನಾಥಾಶ್ರಮ ! ಎನ್.ಜಯಚಂದ್ರನ್

  ಎನ್.ಜಯಚಂದ್ರನ್ ಅವರಕವಿತೆ “ನುಡಿ ನಮನ” Read Post »

ಕಾವ್ಯಯಾನ

ಜಯಶ್ರೀ.ಭ.ಭಂಡಾರಿ ಅವರ ಕವಿತೆ “ನಿಸರ್ಗದಲ್ಲೊಂದು ಮನೆ.”

ಕಾವ್ಯ ಸಂಗಾತಿ ಜಯಶ್ರೀ.ಭ.ಭಂಡಾರಿ “ನಿಸರ್ಗದಲ್ಲೊಂದು ಮನೆ.” ಊರ ಹೊರಗೊಂದು ಮನೆಯ ಕಟ್ಟಿಸಿ ನೆರೆ ಹೊರೆಗಳಿಂದ ದೂರ ಬೆಟ್ಟ ಸಮೀಪಸುತ್ತಮುತ್ತಲು ಹಸಿರ ಪೈರು ಪಚ್ಚೆಗಳು ಕಬ್ಬು ಬಾಳೆ ಮಾವು ಬೇವು ಇಲ್ಲಿಹವು. ಆ ಜನಸಂದಣಿಯಿಂದ ತಪ್ಪಿಸಿಕೊಂಡು ಬ್ರಾಹ್ಮಿ ಮುಹೂರ್ತದಿ ಎದ್ದು ಆಕಳಿಸುತಹಕ್ಕಿ ಪಕ್ಷಿಗಳ ಸಿಹಿ ಕಲರವ ಅಪ್ಪಿಕೊಂಡುಎಷ್ಟೆಲ್ಲ ಜೇನದನಿ ಚಿಲಿಪಿಲಿ ಗಾನ ನಮನ. ನಿತ್ಯದ ಜಂಜಾಟಗಳು ನೋಡಲು ಸಿಗಲ್ಲ ಬೆಳಗಿನ ಕಸಬರಿಗೆಯ ಸದ್ದು ಇಲ್ಲವೇ ಇಲ್ಲ ಗದ್ದೆಯಲಿ ನೀರಿನ ಕಾರಂಜಿಯ ಬುಗ್ಗೆಗಳುಮೊಗ್ಗು ಅರಳಿದಂತೆ ಮನಸ್ಸು ಬೀಗುವುದು ಕುಳಿರ್ಗಾಳಿಯ ಬೆಳಗಿನ ವಾಯು ವಿಹಾರ ಕಾಡಂಚಿನ ದಿಬ್ಬಣದಿ ನವಿಲುಗಳ ನರ್ತನ ಸರ್ರನೆ ಏರಿಳಿಯುವ ಅಳಿಲು ಚಮತ್ಕಾರ ಪಿಳಿಪಿಳಿ ಕಣ್ ಬಿಡುವ ಮೊಲಗಳ ಸತ್ಕಾರ. ಬನಶಂಕರಿ ತೋಟದಿ ತರೆವಾರಿ ಸಸ್ಯಗಳು ಬಣ್ಣ ಬಣ್ಣದ ಪುಷ್ಪಗಳ ಘಮ ಪರಿಮಳ ಹಸಿರ ಹಾಸು ಕೈ ಹಿಡಿದು ನಡೆಸುವುದುಮೂಡನದಿ ಬೆಳಕು ಚೆಲ್ಲುವ ಕಿರಣಗಳು. ಅದೆಷ್ಟು ಹೊತ್ತು ಮೈ ಮರೆತು ಕುಳಿತಿಹೆವು ಸಮಯ ಸರಿದದ್ದು ತಿಳಿಯದೆ ಹೋದೆವು ಎಲೆಯ ಮಂಜಿನ ಹನಿಗಳು ಕರಗಿದವುನಿಸರ್ಗ ರಮಣೀಯತೆಗೆ ಕಣ್ಮನ ತಣಿದವು ಜಯಶ್ರೀ.ಭ.ಭಂಡಾರಿ.

ಜಯಶ್ರೀ.ಭ.ಭಂಡಾರಿ ಅವರ ಕವಿತೆ “ನಿಸರ್ಗದಲ್ಲೊಂದು ಮನೆ.” Read Post »

ಕಾವ್ಯಯಾನ

ಚಂದ್ರಕಲಾ. ಎಂ.ಆಲೂರು ಅವರ ಕವಿತೆ “ಶಿಕ್ಷಕರ ಪಾಡು “

ಕಾವ್ಯ ಸಂಗಾತಿ ಚಂದ್ರಕಲಾ. ಎಂ.ಆಲೂರು “ಶಿಕ್ಷಕರ ಪಾಡು “ ಪಾಠ ಮಾಡುವುದು ಶಿಕ್ಷಕರ ಕಾರ್ಯ,ಶಿಕ್ಷಕರಿಗೆ ಸವಾಲುಗಳು ಅನಿವಾರ್ಯ. ಕೋಲ್ಹಡಿಯುವಾಗಿಲ್ಲ ಈಗಿನ ಶಿಕ್ಷಕ,ಹೊಡೆಯುವುದು ಬೈಯುವುದು ನಿಶಿದ್ಧ. ಪ್ರೀತಿಯಿಂದ ಮುದ್ದಿಸಿ ಹೇಳಿಕೊಡಬೇಕು ಪಾಠ,ಮೈದಾನದ ಮಣ್ಣು ಮುಟ್ಟಿ ಆಡುವ್ಹಂಗಿಲ್ಲ ಆಟ. ಶಿಕ್ಷಕರ ಮಾತಿಗೆ ಬಿಡಿಗಾಸಿನ ಗೌರವವಿಲ್ಲ,ಮಕ್ಕಳು ತಪ್ಪು ಮಾಡಿದರು ದಂಡಿಸುವ ಹಕ್ಕಿಲ್ಲ. ಪರೀಕ್ಷೆಯಲ್ಲಿ ಉತ್ತರ ಬರೆಯದಿದ್ದರೂ, ಮಾಡಬೇಕು ಪಾಸು,ಒಂದರಿಂದ ಒಂಬತ್ತರವರೆಗೆ ಮಾಡಬಾರದಂತೆ ನಪಾಸು. ಚಂದ್ರಕಲಾ. ಎಂ.ಆಲೂರು

ಚಂದ್ರಕಲಾ. ಎಂ.ಆಲೂರು ಅವರ ಕವಿತೆ “ಶಿಕ್ಷಕರ ಪಾಡು “ Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಬರಿದಾದ ನನ್ನಯ ಬಾಳಿಗೆ ಬಂಗಾರವೇ ನೀನಾದೆ ಸಖಿಕಂಗಾಲಾದ ಭಾವ ಬಳ್ಳಿಗೆ ಇಂಗಾಲವೇ ನೀನಾದೆ ಸಖಿ ನನ್ನೆಲ್ಲ ಕಷ್ಟ ಸುಖಗಳಲ್ಲೂ ಅರ್ಧ ಪಾಲು ನಿನ್ನದೇ ಬಿಡುಉಸಿರಿಗೆ ಹೆಸರಾಗಿರುವ ಆಮ್ಲಜಕನವೇ ನೀನಾದೆ ಸಖಿ ನಾ ನೀ ಯಾರೊಬ್ಬರೂ ಇರದಿದ್ದರೆ ಜೀವನವೇ ನಿಸ್ಸಾರಸಸಾರವಲ್ಲದ ಸಂಸಾರಕೆ ಸಾರಜನಕವೇ ನೀನಾದೆ ಸಖಿ ಜತುನದಿ ಕಾದಿಟ್ಟ ಪೀರುತಿ ರತುನವಿದೆ ಎದೆಯಾಳದಲಿಆಶ್ರು ಗ್ರಂಥಿ ಪ್ರಚೋದಿಸುವ ಗಂಧಕವೇ ನೀನಾದೆ ಸಖಿ ನೀನಿರದೇ ಈ ಮಹಾಂತನ ಬಾಳು ಸಂಪೂರ್ಣವಾಗದುಎದೆ ತಳಮಳಕೆ ತುಕ್ಕು ತಂದ ಕಬ್ಬಿಣವೇ ನೀನಾದೆ ಸಖಿಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಜಯಶ್ರೀ ಭ.ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ ಜಯಶ್ರೀ ಭ.ಭಂಡಾರಿ ಗಜಲ್ ಹುಣ್ಣಿಮೆಯ ಚಂದಿರ ಬಾನಲಿ ಬಂದಿಹನು ಗೆಳೆಯ.ತಣ್ಣನೆಯ ಗಾಳಿಯಲಿ ಅಲೆಗಳ ತಂದಿಹನು ಗೆಳೆಯ. ಸಮುದ್ರದ ಮಧ್ಯದಲಿ ಮೋಹಕ ಬೆಳಕು ಹರಡಿದೆಯಲ್ಲವೇಕೌಮುದಿಯ ಸೊಬಗ‌‌ ಬೀರುತ ನಿಂದಿಹನು ಗೆಳೆಯ ಎತ್ತರದ ಸಾಲಿನಲಿ ಮಿನುಗುವ ದೀಪಗಳು ಕಾಣುತಿವೆ ಉತ್ತರದ ದಿಕ್ಕಿನಲಿ ಮಾರುತ ಕುಂದಿಹನು ಗೆಳೆಯ. ಒಟ್ಟಾಗಿ ಹೆಜ್ಜೆಗಳ ಸೇರಿಸುತ ಮೆಟ್ಟಿಲುಗಳ ಏರೋಣ ಪಟ್ಟಾಗಿ ಗೆಜ್ಜೆಯ ನಾದದಲಿ ಮಿಂದಿಹನು ಗೆಳೆಯ ಶಶಿಯ ಸನಿಹ ಜಯಳಿಗೆ ಲಜ್ಜೆಯ ತೋರಿದೆ ನಿಶೆಯ ಒಲವೇ ಸಂಭ್ರಮ ಎಂದಿಹನು ಗೆಳೆಯ  ಜಯಶ್ರೀ ಭ.ಭಂಡಾರಿ.

ಜಯಶ್ರೀ ಭ.ಭಂಡಾರಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ರತ್ನರಾಯಮಲ್ಲ ಅವರ ಗಜಲ್

ಕಾವ್ಯ ಸಂಗಾತಿ ರತ್ನರಾಯಮಲ್ಲ ಅವರ ಗಜಲ್ ಅನುದಿನವೂ ನಿನ್ನ ಜೊತೆ ಕಾಲ ಕಳೆಯಲು ಹಂಬಲಿಸುತಿರುವೆನಿನ್ನಯ ಮಡಿಲಲಿ ಮಗುವಾಗಿ ಮಲಗಲು ಹಂಬಲಿಸುತಿರುವೆ ದೂರವನ್ನು ದೂರಲಾಗದೆ ಮಂಡಿಯೂರಿ ಕುಳಿತಿರುವೆ ಉಸಿರೆ  ನಮ್ಮ ಮೈಮನಗಳ ಸಾನಿಧ್ಯದಿ ಪೂಜಿಸಲು ಹಂಬಲಿಸುತಿರುವೆ ಏಳೇಳು ಲೋಕ ಕೇಳುವಂತೆ ಕೂಗುವ ಆಸೆ ಲವ್ ಯು ಎಂದುಜಗದಗಲಕೂ ಆರುಮೆ ಕಂಪನು ಹರಡಲು ಹಂಬಲಿಸುತಿರುವೆ ಬೇಬಿಮಾ ನಿನ್ನ ಹೆಸರನೆ ಜಪಿಸುತಿರುವೆ ಅವನಿಯಲಿ ಜೀವಿಸಲುಹಗಲಿರುಳು ನಾನು ಉಸಿರಾಡುವ ಉಸಿರಲು ಹಂಬಲಿಸುತಿರುವೆ ಅಡಗಿದೆ ಕಾಲದ ತೆಕ್ಕೆಯಲಿ ಕಿವಿಗೊಡು ಹೃದಯದ ರಿಂಗಣಕೆತನುಮನದಿ ಮಲ್ಲಿಗೆ ಸುಮವಾಗಿ ಅರಳಲು ಹಂಬಲಿಸುತಿರುವೆ ರತ್ನರಾಯಮಲ್ಲ

ರತ್ನರಾಯಮಲ್ಲ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಜಯಂತಿ. ಕೆ.ವೈ. ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ. ಕೆ.ವೈ. ಗಜಲ್ ಯಾರು ಯಾವಾಗ ಈ ನೆಲಕೆ ವಿದಾಯ ಹೇಳುವರೋ ಗೊತ್ತಿಲ್ಲಯಾವ್ಯಾವ ಕ್ಷಣಗಳನು ಹೇಗೆ ಕಳೆವರೋ ಗೊತ್ತಿಲ್ಲ ಬಾಲ್ಯದಾ  ಚಣಗಳ ಮರೆವರೋ ಗೊತ್ತಿಲ್ಲಅಮ್ಮನಾ ಮಡಿಲು ಮೀರಿ ಬೆಳೆವರೋ ಗೊತ್ತಿಲ್ಲ ಯೌವನದ ಉತ್ಸಾಹದಲಿ    ಎಲ್ಲವನೂ ಸಾಧಿಸುವರೋ ಗೊತ್ತಿಲ್ಲಉಲ್ಲಾಸದ ಚಣಗಳೊಂದಿಗೇಮಾಗುವರೋ  ಗೊತ್ತಿಲ್ಲ ಮಾಗಿದಾ ಹಾಗೆಲ್ಲ  ದಿನವಿಡೀ  ದುಡಿವರೋ ಗೊತ್ತಿಲ್ಲಮರೆಯಾದ ಸಂತೋಷವ ಅರಸುವರೋ ಗೊತ್ತಿಲ್ಲ ದುಡಿತದಲೆ ದಿನ  ಕಳೆದು ಬಿಡುವರೋ  ಗೊತ್ತಿಲ್ಲಸಂತಸವ ಮರೆತು ಬದುಕುವರೋ ಗೊತ್ತಿಲ್ಲ ಕಾಣೆಯಾದ ಆಪ್ತೇಷ್ಟರ ನಲ್ಮೆ ಹುಡುಕುವರೋ  ಗೊತ್ತಿಲ್ಲಹಮ್ಮು ಬಿಮ್ಮುಗಳಲ್ಲಿ ಅವಿತ ಅಕ್ಕರೆಯ ತಡಕಾಡುವರೋ ಗೊತ್ತಿಲ್ಲ ಬದುಕ ಪ್ರೀತಿಯು ಬತ್ತದಂತೆ ಕಾಯ್ದು ಉಳಿಸುವರೋ ಗೊತ್ತಿಲ್ಲ‘ಜಯೂ’ನ ಒಲವ ಒರತೆಯನು ಹೇಗೆ ಚಿಮ್ಮಿಸುವರೋ ಗೊತ್ತಿಲ್ಲ! ಜಯಂತಿ ಕೆ ವೈ

ಜಯಂತಿ. ಕೆ.ವೈ. ಅವರ ಗಜಲ್ Read Post »

You cannot copy content of this page

Scroll to Top