ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್
ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಗಜಲ್ ಸಿಡಿಲು ಅಬ್ಬರಿಸಿದರೂ ಮಳೆಯು ಭರವಸೆಹುಟ್ಟಿಸಿದೆ ಗೆಳೆಯಾಮಿಡಿದು ಅಂತರಂಗದಲಿ ಮೂಡಿದ ಭಾವಗಳಮುಟ್ಟಿಸಿದೆ ಗೆಳೆಯಾ ಸುರಿದ ಧಾರೆಯೊಳಗೆ ಮಿಂದ ಇಳೆಯಲಿತಂಪಿನ ಸಿಂಚನವಲ್ಲವೇಹರಿದು ಧಾರಾಕಾರವಾಗಿ ನದಿಯ ಸೇರುವಾಸೆಮೆಟ್ಟಿಸಿದೆ ಗೆಳೆಯಾ ವಸಂತ ತರುಲತೆಗಳಲಿ ಹಸಿರು ರಂಗವಲಿಎರಚುತ ಬಂದನುಹೊಸತು ಕನಸುಗಳ ಬಿತ್ತಲು ಆಸೆಗಳಕಟ್ಟಿಸಿದೆ ಗೆಳೆಯಾ ಕುಣಿದ ವಸುಂಧರೆಯ ಒಡಲು ಹರುಷದತೋರಣ ಬಿಡಿಸಿದೆತಣಿದ ರೈತಾಪಿವರ್ಗಕೆ ಮೂಡಿದ ಭಯವನುಅಟ್ಟಿಸಿದೆ ಗೆಳೆಯಾ ರಾಧೆಯ ಮನದಂಗಳದ ತೋಟದಿ ನಲಿದಿವೆಬಣ್ಣಬಣ್ಣದ ಹೂವುಗಳುಮಧುರ ಅನುಭೂತಿಯಲಿ ಬದುಕ ಮೌಲ್ಯವಗಿಟ್ಟಿಸಿದೆ ಗೆಳೆಯಾ ಅನುರಾಧಾ ರಾಜೀವ್ ಸುರತ್ಕಲ್
ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್ Read Post »









