ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕಾಣದ ದೈವವ ನಂಬುತ ನಾ
ನಿನ್ನೇ ಮುಚ್ಚಿದೆ ಹೊದಿಕೆ ಹೊದಿಸಿ
ನಿನ್ನ ತತ್ವ ದೈವತ್ವ ಅರಿಯದೆ
ಮೆರೆದೆ ನನಗೆ ನಾನೆ ಜಗದಿ

ನೀ ನನ್ನೊಳಗಿನ ನಾ ನೀನು
ಇರುವೆ ಜೊತೆಗೆ ಜೀವಗಂಟ
ಧೇಯಧ್ಹಾದಿಯ ಮಾರ್ಗಕೆ
ದೀಪವಾಗುವೆ ದಾರಿಗುಂಟ

ನಾ ಎಂದರೆ ನೀ ಬೈಯುವೆ
ನೈಜ ತತ್ವವ ಅರಿಸುವೆ
ಧಿಕ್ಕರಿಸಿ ನಡೆದರೂ ನಾ ಮುಂದೆ
ತಪ್ಪಿನ ಶಿಕ್ಷೆಗೆ ಕಾಯುವೆ

ಅರಿಸಿ ಕಲಿಸಿ ನಡೆಸಿ ಮೆರೆಸಿ
ನನ್ನ ತನವ ಉಳಿಸುವೆ
ಮಾನಾಪಮಾನ ಸುಖಃ ದುಃಖದೊಳಗೂ
ಕಾಯುತ ಸದಾ ಹಿಂದಿರುವೆ

ನೀನಿದ್ದರೆ ನಾ ನಾನಿದ್ದರೆ ನೀ
ಈ ಜಡದ ದೇಹಕೆ ಚಾಲಕ
ಅರಿಯಬೇಕು ಇದನು ಮೊದಲು
ಇದುವೇ ಜಗದ ತಾರ್ಕಿಕ

ಸತ್ಯವೆಂದೂ ಸಾಯುವದಿಲ್ಲಾ ಸತ್ತರೂ ನಾ
ಉಳಿಸಿಬಿಡುವೆ ನೀ ಇರದಿದ್ದರೂ ನಾ
ನೀ ಸತ್ಯ ನಾ ಮಿಥ್ಯ ಇದೊಂದೆ ಸತ್ಯ
ಕ್ಷಣ ಕ್ಷಣಿಸುವದಂತೂ ನಿತ್ಯ ಪ್ರತಿನಿತ್ಯ

ನೀ ಇದ್ದರೆ ನಾನಿಲ್ಲಾ ನಾ ಇದ್ದರೆ ನೀನಿಲ್ಲಾ
ತತ್ವ ಸಾರಿದವರೆಷ್ಟೊ
ಮರತೇ ಬಾಳುತಿಹೆವು ಜಗದಿ
ಬಯಸಿ ಬಯಸಿ ಅಷ್ಟೂ


About The Author

3 thoughts on “ಪ್ರಮೋದ ಜೋಶಿ ಅವರ ಕವಿತೆ “ನಾ…ನೀ””

  1. “ನಾ–ನೀ” ಎಂಬ ಕಲ್ಪನೆಯ ಮೂಲಕ ಅಹಂಕಾರ, ಆತ್ಮಜ್ಞಾನ ಮತ್ತು ಸತ್ಯದ ಹುಡುಕಾಟ ಸುಂದರವಾಗಿ ಮೂಡಿಬಂದಿದೆ.
    ಭಾಷೆ ಸರಳವಾಗಿದ್ದರೂ ಅರ್ಥದಲ್ಲಿ ಆಳವಿದ್ದು ಓದುಗನನ್ನು ಆತ್ಮಾವಲೋಕನಕ್ಕೆ ಕರೆದುಕೊಳ್ಳುತ್ತದೆ.
    ತತ್ವಚಿಂತನೆ ಮತ್ತು ಜೀವನದ ವಾಸ್ತವಿಕತೆಯನ್ನು ಒಂದೇ ದಾರಿಯಲ್ಲಿ ಕೊಂಡೊಯ್ದಿರುವುದು ಕವಿತೆಯ ಶಕ್ತಿ.
    ಒಟ್ಟಾರೆ ಇದು ಮನಸ್ಸಿನಲ್ಲಿ ದೀರ್ಘಕಾಲ ಪ್ರತಿಧ್ವನಿಸುವ, ಚಿಂತನೆಗೆ ಪ್ರೇರೇಪಿಸುವ ಉತ್ತಮ ಕೃತಿ.

  2. Excellent elaboration of realest & mythological collaboration .
    ವಾಸ್ತವಿಕ ಮತ್ತು ಪೌರಾಣಿಕ ಸಹಯೋಗದ ಅತ್ಯುತ್ತಮ ವಿವರಣೆ.
    – Manjunath Hosalli.

Leave a Reply

You cannot copy content of this page

Scroll to Top