ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಭಾಗ್ಯ ಸಂ ಕೋಟಿ ಅವರ ಕವಿತೆ “ಮೌನದೊಳಗೆ ಏನೆಲ್ಲಾ”

ಕಾವ್ಯ ಸಂಗಾತಿ ಭಾಗ್ಯ ಸಂ ಕೋಟಿ “ಮೌನದೊಳಗೆ ಏನೆಲ್ಲಾ” ಮೌನವೆಂದರೆ ಶೂನ್ಯವಲ್ಲಮನದ ಬೆಳಕು ಹೇಳದ ನಿಶಬ್ದ ನಾದಹೇಳಲಾಗದ ಆಳವಾದ ಹಾಡು ಗದ್ದಲದಲ್ಲಿ ಕಳೆದುಹೋದ ಸತ್ಯನಿಶ್ಚಲದಲ್ಲಿ ಕಾಣುವ ನಿತ್ಯ ಕಣ್ಣೀರಲ್ಲಿ ಮರೆಯಾದ ಕಥೆನಗುಮುಖದ ಹಿಂದಿನ  ವ್ಯಥೆ ಮೌನವು ಸಹನೆಯ ಸುಹಾಸನೆಸಮಾಧಾನದ ಪ್ರೇರಣೆ ಹ್ರದಯದ ಹಂಬಲಆತ್ಮದೊಳಗಿನ ನಂಬಲ ಅಹಂಕಾರ ಶಮನವಾದಾಗಆಂತರಿಕ ಶಾಂತಿ ಅರಳುವಾಗ ಮಾತು ಮೀರಿದ ಭಾಷೆಮಾನವೀಯತೆ ಉಳಿಸುವ  ಆಶೆ ಮೌನ ಅರಿತ ಮನದೊಳಗೆಜೀವನವೇ ಕಾವ್ಯವಾಯಿತು ಮೌನವೆಂದರೆ ಖಾಲಿತನವಲ್ಲಮನದ ಆಳದ  ಅಲೆ  ಮೌನದಲ್ಲಿಯೇ  ಸಾಧನೆ ಮೌನದಲ್ಲಿಯೇ ಶಿಖಿರ ಭಾಗ್ಯ  ಸಂ ಕೋಟಿಜಮಖಂಡಿ

ಭಾಗ್ಯ ಸಂ ಕೋಟಿ ಅವರ ಕವಿತೆ “ಮೌನದೊಳಗೆ ಏನೆಲ್ಲಾ” Read Post »

ಕಾವ್ಯಯಾನ

ಪೃಥ್ವಿ ಬಸವರಾಜ್‌ ಕವಿತೆ “ಪಂಜರದ ಹಕ್ಕಿ”

ಕಾವ್ಯ ಸಂಗಾತಿ ಪೃಥ್ವಿ ಬಸವರಾಜ್‌ “ಪಂಜರದ ಹಕ್ಕಿ” ಎಲ್ಲರಂತೆ ರೆಕ್ಕೆ ಬಿಚ್ಚಿ ಆಕಾಶ ಮುಟ್ಟುವ ಕನಸು ನನಗೂ ಇತ್ತು,ಆದರೆ ನನ್ನ ದಾರಿಯ ತಿರುವುಗಳನ್ನು ನನ್ನ ಹೆಜ್ಜೆಗಳು ಬರೆಯಲಿಲ್ಲ.ನಗುವಿನ ಹಿಂದೆ ಮರೆತಿದ್ದ ಸಾವಿರ ಪ್ರಶ್ನೆಗಳು ಮಾತಾಗಲಿಲ್ಲ,ಮೌನವೇ ನನ್ನ ಭಾಷೆಯಾಗಿ ಹೃದಯದೊಳಗೆ ನೆಲೆಸಿತು. ಪಂಜರವು ಕಬ್ಬಿಣದಿಂದ ಕಟ್ಟಿದ್ದಲ್ಲ, ಸಂಪ್ರದಾಯದ ನೋಟಗಳಿಂದ ಹೆಣೆದಿತ್ತು;ರಕ್ಷಣೆ ಎಂಬ ಹೆಸರಿನಲ್ಲಿ ನನ್ನ ಕನಸುಗಳ ಕಿಟಕಿಗಳು ನಿಧಾನವಾಗಿ ಮುಚ್ಚಿಕೊಂಡವು.ನಾನು ಹಾರಲು ಬಯಸಿದ್ದು ಆಕಾಶವನ್ನು ಗೆಲ್ಲಲು ಅಲ್ಲ,ನನ್ನದೇ ದಿಕ್ಕನ್ನು ಒಮ್ಮೆ ನಾನು ಆರಿಸಿಕೊಳ್ಳಲು ಮಾತ್ರ. ಪ್ರೀತಿಯೂ ಬೇಕು… ಗೌರವವೂ ಬೇಕು… ಆದರೆ ಉಸಿರಾಡುವಷ್ಟು ಸ್ವಾತಂತ್ರ್ಯವೂ ಬೇಕು.ಹಕ್ಕಿಗೆ ಪಂಜರ ಎಷ್ಟೇ ಬಂಗಾರವಾದರೂ, ಅದು ಆಕಾಶವಾಗುವುದಿಲ್ಲ.ಒಂದು ದಿನ ನನ್ನ ರೆಕ್ಕೆಗಳ ಸದ್ದನ್ನು ಲೋಕ ಕೇಳುತ್ತದೆ—ಏಕೆಂದರೆ ಹೆಣ್ಣಿನ ಕನಸುಗಳಿಗೆ ಧರ್ಮವಿಲ್ಲ… ಅವಕ್ಕೂ ಆಕಾಶವೇ ಗಡಿ. ಪೃಥ್ವಿ ಬಸವರಾಜ್‌

ಪೃಥ್ವಿ ಬಸವರಾಜ್‌ ಕವಿತೆ “ಪಂಜರದ ಹಕ್ಕಿ” Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಅವರ ಕವಿತೆ “ಕನ್ನಡಿ ಬದುಕುಗಳ ಮುನ್ನುಡಿ”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಕನ್ನಡಿ ಬದುಕುಗಳ ಮುನ್ನುಡಿ” ನಾನೋ ಗೋಡೆಯ ಮೇಲೆ ನೇತು ಹಾಕಿದಸಾಮಾನ್ಯವಾದ ಗಾಜಿನ ಕನ್ನಡಿಯಾಗಿದ್ದೆಯಾರ ಮುಖವನ್ನೂಸುಂದರವೆಂದು ಕುರೂಪವೆಂದು ಹೇಳಿರಲಿಲ್ಲಕಾಣಿಸಿದ್ದಷ್ಟೇ ಸತ್ಯವೆಂದುಕೊಂಡಿದ್ದೆಅದಷ್ಟನ್ನೇ ತೋರುತ್ತಿದ್ದೆ! ಅದೊಂದು ದಿನಈ ಅಂಗಡಿಯವನು ಬಂದು ಖರೀದಿಸಿದಹಸೆ ಹಾಕಿದ್ದ ಅವನ ಗೋಡೆಗೆಅಂದವಾದ ಕನ್ನಡಿಯಾದೆತಮ್ಮನ್ನ ನೋಡಿಕೊಳ್ಳುವ ಬಣ್ಣದವರಿಗೆಬೆಲೆಪಟ್ಟಿಯು ತಗುಲಿತುನನ್ನ ಸತ್ಯಕ್ಕೂಒಂದಷ್ಟು ದರ ನಿಗದಿಯಾಯಿತು! ನನ್ನ ಮುಂದೆ ನಿಂತವರುತಮ್ಮ ಮುಖ ನೋಡಿಕೊಳ್ಳಲಿಲ್ಲತಮಗೆ ಬೇಕಾದ ಮುಖವನ್ನೇನನ್ನ ಮೇಲೆಲ್ಲಾ ಹುಡುಕಿದರು! ತಮ್ಮ ಮುಖದ ಮೇಲಿದ್ದಕಲೆ ಕಂಡರೆನನ್ನನ್ನೇ ದೂಷಿಸಿದರು!ತಮ್ಮ ಮುಖದ ಮೇಲಿದ್ದಅಂದ ಕಂಡರೆತಮ್ಮದೇ ಸೌಂದರ್ಯವೆಂದರು!ನನ್ನ ಬೆಲೆಯೇನೂ ಕಡಿಮೆಯಾಗಲಿಲ್ಲ!ನೆಲೆಯೂ ಬದಲಾಗಲಿಲ್ಲ! ಒಬ್ಬನೋ ಆಯ ತಪ್ಪಿನನ್ನ ಮೇಲೆ ಬಿದ್ದು ಒಡೆದುಹಾಕಿದತನ್ನ ಮುಖದ ನಗ್ನ ಸತ್ಯತನಗೇ ಇಷ್ಟವಾಗಲಿಲ್ಲವೆಂದು! ಮತ್ತೊಬ್ಬನು ತನ್ನ ಬಳಸಿದ ಬಟ್ಟೆಯಿಂದನನ್ನನ್ನು ಮುಚ್ಚಿಟ್ಟತನ್ನೆಲ್ಲಾ ಕುರೂಪಹೊರಗೆ ಕಾಣಬಾರದೆಂದು! ಕೆಲಸವಿರದ ಮಾತಿಗರು ಕೂತುಣ್ಣುವ ಬುದ್ಧಿಗರುನನ್ನ ಮುಂದೆ ನಿಂತುಆಗಾಗ ಉಪದೇಶಿಸುತ್ತಾರೆಸತ್ಯವನ್ನೇ ತೋರಿಸು ಎಂದು!ಸತ್ಯ ತೋರಿಸಿದ ಕ್ಷಣನನ್ನ ಮೇಲೆ ತಮ್ಮದೇ ಬಟ್ಟೆ ಹೊದಿಸುತ್ತಾರೆ! ನಾನೀಗ ಕನ್ನಡಿಯಲ್ಲಕಾಲದ ಸಾಕ್ಷಿ!ಜೀವಗಳ ಕಾಣಿಸೊ ನಿರ್ಜೀವ ಅಕ್ಷಿ! ಮುಖಗಳು ಬದಲಾಗುತ್ತಿವೆಮುಖವಾಡಗಳು ಬದಲಾಗುತ್ತಿವೆತಮ್ಮನ್ನೇ ನೋಡಿಕೊಳ್ಳುವ ಧೈರ್ಯ ಮಾತ್ರಮೆಚ್ಚಿಕೊಳ್ಳುವ ಅಭಿಮಾನ ಮಾತ್ರ ಯಾರಲ್ಲು ಇಲ್ಲ! ಕನ್ನಡಿಇಹದ ಬದುಕುಗಳ ಮುನ್ನುಡಿಸುಳ್ಳು ಹೇಳಲು ಕಲಿತಿಲ್ಲ!ಸತ್ಯ ತೋರಲು ಮರೆತಿಲ್ಲ! ಟಿ.ಪಿ.ಉಮೇಶ್ ಚಿತ್ರದುರ್ಗ

ಟಿ.ಪಿ.ಉಮೇಶ್ ಅವರ ಕವಿತೆ “ಕನ್ನಡಿ ಬದುಕುಗಳ ಮುನ್ನುಡಿ” Read Post »

ಕಾವ್ಯಯಾನ

ಕಾವ್ಯ ಸುಧೆ ಅವರ ಕವಿತೆ “ತೊಟ್ಟಿಲು”

ಕಾವ್ಯ ಸಂಗಾತಿ ಕಾವ್ಯ ಸುಧೆ ಅವರ ಕವಿತೆ “ತೊಟ್ಟಿಲು” ಹಳ್ಳಿ ಮನೆಗಳಲ್ಲೂ ತೊಟ್ಟಿಲು,ಅದನ್ನು ತೂಗುವ ಕೈಗಳೂ ಕಾಣೆಯಾಗಿರುವ ಇಂದಿನ ದಿನಮಾನದಲ್ಲಿ ಹೀಗೊಂದು……. ಹೈ ಟೆಕ್ ತೊಟ್ಟಿಲು ! ಸೆನ್ಸರ್ ಇರುವ ತೊಟ್ಟಿಲದು ಸ್ಮಾರ್ಟ್ ಗೂಡುಸ್ವಿಂಗ್ ಮೋಟಾರು ಮೂಲಕ ಜೋಲಿ ಆಡುಲಾಲಿ ಹಾಡು ಪ್ಲೇ ಆಗೋ ಬ್ಲೂಟೂತ್ ಸ್ಪೀಕರ್ಲೈಟ್ ಡಿಮ್ ಆಗಿರೋ ನೈಟ್ ಮೋಡ್ ಫೀಚರ್ ಬೇಬಿ ಅತ್ತ ಕೂಡಲೇ ನೋಟಿಫಿಕೇಷನ್ ಶುರುಬಿಸಿಯೋ ತಣ್ಣಗೋ 2 ಇನ್ 1 ಟೆಂಪರೇಚರುಫೋನ್ ವೈಫೈ ಮೂಲಕ ಮಾಹಿತಿ ಕೊಡುವಿಡಿಯೋ ಕಾಲ್ ನಲ್ಲಿ ಮುದ್ದು ಮುಖ ನೋಡು ರೋಬೋ ಕೈ ತೂಗಾಡಿಸಿ ಮಲಗಿಸುವುದು,ರಿದಮ್ ಪ್ರಕಾರ ಲಾಲಿ ಬದಲಾಯಿಸುವುದು.ತಂತ್ರಜ್ಞಾನದ ಜೊತೆ ತಾಯಿ ಪ್ರೀತಿ ಸೇರು,ತೊಟ್ಟಿಲು 2.0 ಆದರೂ ಮಾಯೆ ಹಸಿರು…!!. ಕಾವ್ಯ ಸುಧೆ.

ಕಾವ್ಯ ಸುಧೆ ಅವರ ಕವಿತೆ “ತೊಟ್ಟಿಲು” Read Post »

ಕಾವ್ಯಯಾನ

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ದಫನ್ ಮಾಡುವ ಮುನ್ನ,ಕಫ಼ನ್ ಸರಿಸಿ ನನ್ನನೊಮ್ಮೆ ನೋಡೆಂದು ಅವನಿಗೆ ಹೇಳಿಬಿಡಿನಿಂತ ಉಸಿರೂ, ಅವನ ಹೆಸರ ಉಸುರುವುದನೊಮ್ಮೆ ಕೇಳೆಂದು ಅವನಿಗೆ ಹೇಳಿಬಿಡಿ ನನ್ನವರೆನಿಸಿಕೊಂಡವರ ಹುಸಿ ಮಾತುಗಳು ಮುಗಿಲು ಮುಟ್ಟುತಿರುವವುಎರಡೇ ಪದಗಳಲ್ಲಾದರೂ ಪ್ರೀತಿಯನೊಮ್ಮೆ ಹೇಳೆಂದು ಅವನಿಗೆ ಹೇಳಿಬಿಡಿ ಹಿಂದಿರುಗಿ ಬರಲು, ಹಾದಿಯಿಲ್ಲದ ಊರಿನೆಡೆಗೆ ಸಾಗಿದೆ ಪಯಣಜನಾಜಾ ಹೊತ್ತವರ ಹತ್ತಿರ ಸುಳಿದೊಮ್ಮೆ ಹೋಗೆಂದು ಅವನಿಗೆ ಹೇಳಿಬಿಡಿ ನನ್ನೊಲವನು ದಿಟ್ಟಿಸಿದರೇ, ದೃಷ್ಠಿಯಾದಿತೆಂದು, ಎಂದೂ ನಾ ಕಣ್ಣೆತ್ತಲಿಲ್ಲನಾ ಹಗಲಲಿ ಬದುಕುತಿದ್ದ ಕನಸನೊಮ್ಮೆ ಬಾಳೆಂದು ಅವನಿಗೆ ಹೇಳಿಬಿಡಿ ನಿನ್ನ ನಜರಲಿ , ತನ್ನನು ಕಾಣಲು ತವಕದಿ ಕಾದಳು ಈ ವಾಣಿ ಅನುದಿನ ಒಂದೇ ಕ್ಷಣ ಎದುರು ನಿಂತು, ಹಿಡಿ ಮಣ್ಣನೊಮ್ಮೆ ಹಾಕೆಂದು ಅವನಿಗೆ ಹೇಳಿಬಿಡಿ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ರಾಜೇಶ್ವರಿ ಪ್ರಕಾಶ ಅವರ ಕವಿತೆ “ಸಾಧನೆ”

ಕಾವ್ಯ ಸಂಗಾತಿ ರಾಜೇಶ್ವರಿ ಪ್ರಕಾಶ “ಸಾಧನೆ” ಚಿಂತನ ಮಂಥನ ಮಾಡು ಮನವೇಅರಿವಿನ ಪೊರೆಯ ಕಿತ್ತೆಸೆದು ನಾನಾ ವಿಧದ ಅಭಿರುಚಿ ಇರಲುರಸಸ್ವಾದನೆ ನಿನಗಿಹುದು ತಡೆಯುವರಾರು ನೀ ಸಾಗುತಿರಲುನಿನ್ನ  ಸಾಧನೆ  ದೃಢ ವಾಗಿರಲು ಕಲ್ಲುಮುಳ್ಳಿನ ದಾರಿಯಿದುಮೆಟ್ಟಿ ಸಾಗು ನೀ ಛಲವಿರಲು ದಿಟ್ಟ ಹೆಜ್ಜೆಯನಿಟ್ಟು  ಮುನ್ನಡೆಅಟ್ಟ ಬೆಟ್ಟವೂ ಚಿಕ್ಕದೆ ನಿನ್ನೊಳಗಣ ಬಲವ ಕಾಣುನಿನಗೆ ಶಕ್ತಿಸ್ಫೂರ್ತಿಯದೇ ಒಮ್ಮೆ ಏರಿ ನೋಡು ಗುರಿಶಿಖರಕಷ್ಟ ಕೋಟಲೆಗಳು ಅದೋ ತೃಣ ಸಮಾನಸಾಧನೆಗೈದೆ ಅದೇ ನಿನ್ನ ಅಭಿಮಾನ. ರಾಜೇಶ್ವರಿ ಪ್ರಕಾಶ.

ರಾಜೇಶ್ವರಿ ಪ್ರಕಾಶ ಅವರ ಕವಿತೆ “ಸಾಧನೆ” Read Post »

ಕಾವ್ಯಯಾನ, ಗಝಲ್

ಜಯಶ್ರೀ.ಭ.ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ ಜಯಶ್ರೀ.ಭ.ಭಂಡಾರಿ ಗಜಲ್ ಹಸಿರ ಹುಲ್ಲಿನ ಮೇಲೆ ನವಿರು ಬೆಳಕು ಬೀರುತಿದೆ ಉಸಿರಲಿ ಬೆರೆದ ಜೋಡಿಗೆ ಪವನ ಹರಸಿದಂತೆ ತೋರುತಿದೆ. ದೂರದಲಿ ಹೆಂಚಿನ ಮನೆ ಇದ್ದರೆ ಅದೆಷ್ಟು ಚೆಂದವಲ್ಲವೇ ಕರಗಳ ಚಾಚಿ ಮಲಗಿದ ದೃಶ್ಯ ಮೋಜು ತರುತಿದೆ. ಎತ್ತರದ ಮರಗಳು ಸೂರ್ಯನ ಕಿರಣಗಳ ಬಾಚಿ ತಬ್ಬಿಕೊಂಡಿವೆ.ಉತ್ತರದ ದಿಕ್ಕಿನಲಿ ಉದ್ದಕ್ಕೆ ದಾರಿ ಸ್ವಾಗತ ಕೋರುತಿದೆ. ಮಂಗಳದ ಕೋಮಲೆಗೆ ಸುಖದ ದಾಂಪತ್ಯ ನಾಂದಿ ಹಾಡಿದೆಅಂಗಳದ ರಾತ್ರಿರಾಣಿ ಮದಿರೆಯಲಿ  ಕನಸು ಕರಗಿ ಸೋರುತಿದೆ. ಜೀವನದ ಸಿಹಿಕಹಿಗಳ ಅರಿವು ಜಯದ ಸೋಪಾನ ತೂಗುವುದು ಪಾವನದ ಬದುಕು ದಾಂಪತ್ಯಕ್ಕೆ ಅಡಿಯಿಟ್ಟು ಸಂಭ್ರಮ ಏರುತಿದೆ.ಶ್ರೀಜಯ.ಭ.ಭಂಡಾರಿ.

ಜಯಶ್ರೀ.ಭ.ಭಂಡಾರಿ ಅವರ ಗಜಲ್ Read Post »

ಕಾವ್ಯಯಾನ

ಎನ್.ಜಯಚಂದ್ರನ್ ಅವರ ಕವಿತೆ “ಧರೆಯ ದಿವ್ಯಾಭಿಷೇಕ”

ಕಾವ್ಯ ಸಂಗಾತಿ ಎನ್.ಜಯಚಂದ್ರನ್ “ಧರೆಯ ದಿವ್ಯಾಭಿಷೇಕ” ನೀಲಗಗನದ ನುಣುಪಿನ ಹಾಳೆಯಲಿಕರಿಮೋಡಗಳ ಕಲಾಸಂಗಮ;ಮಿಂಚಿನ ಬೆರಳಲಿ ಬರೆದ ಕವಿತೆಗೆಗುಡುಗಿನ ನಾದವೇ ಮಂಗಳಗಾನ. ಮಳೆ ಬಂದರೆ—ಭೂಮಿಯ ಮಸ್ತಕದಲಿ ಮುತ್ತಿನ ತಿಲಕ,ಮಣ್ಣಿನ ಮಡಿಲಲಿ ಪರಿಮಳದ ಪರಿಮಳ,ಒಣಗಿದ ಜೀವದ ಎದೆಯೊಳಗೆಆಶೆಯ ಅಂಕುರದ ನವಚೇತನ. ಪ್ರತಿ ಹನಿಯೂಸ್ವರ್ಗದ ಕಲಶದಿಂದ ಜಾರಿದ ಅಮೃತಬಿಂದು;ಪ್ರತಿ ತುಂತುರುವೂಪ್ರಕೃತಿಯ ವೀಣೆಯ ತಂತಿಯಲಿ ಮೂಡಿದ ರಾಗ. ಗುಡ್ಡಗಳು ಹಸಿರಿನ ಶಾಲು ಆವರಿಸಿದರೆ,ಕಣಿವೆಗಳು ನಗುವಿನ ಹಾರ ತೊಟ್ಟವು;ಜಲಪಾತಗಳು ಬೆಳ್ಳಿಯ ಜಡೆಯಾಗಿಬಂಡೆಗಳ ಭುಜದ ಮೇಲೆ ಹರಿದವು. ನದಿಯು ನಾಚಿದ ನವವಧುವಾಗಿತಿರುವು ತಿರುವಿನಲ್ಲಿ ತಾಳ ಹಾಕಿದಳು;ಗಾಳಿಯು ಕೊಳಲಾಗಿ ನುಡಿದಾಗಮರಗಳು ಭಕ್ತರಂತೆ ತಲೆದೂಗಿದವು. ನವಿಲು ನೀಲಾಂಬರದ ನರ್ತಕನಾಗಿಮೋಡಗಳ ರಂಗಮಂದಿರದಲ್ಲಿ ಕುಣಿದಿತು;ಕೋಗಿಲೆಯ ಕಂಠದ ಕಾವ್ಯಗಾನಕ್ಕೆವನದ ಹೃದಯವೇ ತಾಳವಾಯಿತು. ರೈತನ ಕಣ್ಣಲಿ ಮಳೆಯೊಂದುಸಂಪತ್ತಿನ ಕನಸಾಗಿ ಅರಳಿತು;ಹೊಲದ ಪ್ರತಿಯೊಂದು ಮಣ್ಣುಕಣವೂಸುವರ್ಣ ಧಾನ್ಯಗಳ ಭವಿಷ್ಯ ಬಿತ್ತಿತು. ಮಳೆಯೇ…ನೀ ಕೇವಲ ಜಲಧಾರೆಯಲ್ಲ,ಕರುಣೆಯ ಕಡಲು;ನೀ ಕೇವಲ ಋತುವಲ್ಲ,ಸೃಷ್ಟಿಯ ಪುನರ್ಜನ್ಮ. ನೀ ಸುರಿದರೆಒಣಗಿದ ಬದುಕು ಹಸಿರಾಗುತ್ತದೆ,ಬತ್ತಿದ ಹೃದಯ ಗೀತವಾಗುತ್ತದೆ,ಬರಿದ ಭೂಮಿ ಭರವಸೆಯಾಗುತ್ತದೆ,ಮಾನವನ ಮನವು ಮಾನವೀಯತೆಯಿಂದ ತೇವವಾಗುತ್ತದೆ. ಬಾ ಮಳೆಯೇ,ನಿನ್ನ ಅಮೃತಧಾರೆಯ ಆಲಿಂಗನದಲ್ಲಿಈ ಧರೆ ಸದಾ ನಲಿಯಲಿ;ನಿನ್ನ ವೈಭವದ ವಂದನೆಯಲ್ಲಿಪ್ರಕೃತಿಯ ಪ್ರತಿಯೊಂದು ಉಸಿರೂಅನಂತ ಕಾವ್ಯವಾಗಿ ಅರಳಲಿ! ಎನ್.ಜಯಚಂದ್ರನ್

ಎನ್.ಜಯಚಂದ್ರನ್ ಅವರ ಕವಿತೆ “ಧರೆಯ ದಿವ್ಯಾಭಿಷೇಕ” Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ತಪ್ಪು ಯಾರದೇ ಆಗಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆಸರಿ ನಿಮ್ಮದೇ ಇದ್ದಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ನಾ ನೀ ಅವರಿವರು ಮೇಲು ಕೀಳು ಬಿಟ್ಟುಹಾಕಿಹಿಂದೆ ಏನೇ ನಡೆದಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ಸೇಡಿನಿಂದೇ ಕೇಡು ಕೋಪ ತಾಪ ಸುಟ್ಟು ಹಾಕಿಅರಿಯದ ಪ್ರಮಾದವಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ತಪ್ಪಿ ಆಡಿದ ಮಾತು ಕೊಟ್ಟ ಭಾಷೆ ಬದಲಾಗದುಸರಿ ತಪ್ಪುಗಳು ತೆಪ್ಪಗಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ಕಲಹಗಳು ಇಂದಿನವಲ್ಲ ಬಾಳು ಕಟ್ಟಿದಂದಿನವುತೆರವು ಕೊಡುವುದಾಗಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ನಾಗರೀಕನೆನಿಸಿದ್ದೆ ಈ ನಾಲಿಗೆಯ ನಲಿವಿನಿಂದಅವರೇ ದೊಡ್ಡವರಾಗಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ಅನುಳ ಅಂತರಂಗದಿ ಪ್ರಶಾಂತತೆ ಮನೆ ಮಾಡಲಿಆತುರದ ಎಡರುತೊಡರಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಾವ್ಯಯಾನ

ಕಾರ್ತಿಕ್ ಭಟ್ ಬಳಗುಳಿ ಅವರ ಕವಿತೆ “ನನ್ನೆದೆಯ ಗೂಡಿನಲ್ಲಿ”

ಕಾವ್ಯ ಸಂಗಾತಿ ಕಾರ್ತಿಕ್ ಭಟ್ ಬಳಗುಳಿ “ನನ್ನೆದೆಯ ಗೂಡಿನಲ್ಲಿ”‌ ನನ್ನೆದೆಯ ಗೂಡಲ್ಲಿ ಧಗಧಗಿಸುತಿದೆಬೆಂಕಿಯ ಜ್ವಾಲೆಹೊತ್ತಿ ಉರಿಯುತ್ತಿದೆಕೆನ್ನಾಲಿಗೆಆರಿಸಬೇಕಿದೆಜ್ವಾಲಾಮುಖಿಯಾಗುವ ಮುನ್ನ….ದಡಕ್ಕೆ ಬಂದು ಅಪ್ಪಳಿಸಿ ಬರುವ ಅಲೆದಡವನ್ನು ಸ್ವಚ್ಚಗೊಳಿಸುವಂತೆ……. ನನ್ನೆದೆಯ ಗೂಡನ್ನ ಆರಿಸಬೇಕಿದೆಆಹುತಿಯಾಗುವ ಮುನ್ನಹೊಗೆಯಾಡುತ್ತಿದೆಸುಟ್ಟುಹೋಗಿರಬಹುದೇ ಸುಡುತ್ತಿರುವ ಬೆಂಕಿಗೆಮಳೆ ಹನಿಯ ಸಿಂಚನಹರಿಸಬೇಕಿದೆ….ಆರಿಸಬೇಕಿದೆನನ್ನೊಡಲ ಕಾವನ್ನ…. ದೂರದಲ್ಲೆಲ್ಲೋ ಬರುತಲಿದೆಸುಟ್ಟ ವಾಸನೆತಂಪಾಗಿಸಬೇಕಿದೆಬಿಸಿಯಾದ ಒಡಲ ಕಾವನ್ನಆರಿಸಬೇಕಿದೆದೀಪ ಆರುವ ಮುನ್ನ…….ಹದಗೊಳಿಸಿ ಬಿತ್ತಬೇಕಿದೆಪ್ರೀತಿಯೆಂಬ ಬೀಜವನ್ನ …..ಮತ್ತೇ ನಳನಳಿಸಿ ಕುಣಿಯುವಂತೆಮಾಡಬೇಕಿದೆ ನನ್ನೆದೆಯ ಗೂಡನ್ನ….. ಕಾರ್ತಿಕ್ ಭಟ್ ಬಳಗುಳಿ

ಕಾರ್ತಿಕ್ ಭಟ್ ಬಳಗುಳಿ ಅವರ ಕವಿತೆ “ನನ್ನೆದೆಯ ಗೂಡಿನಲ್ಲಿ” Read Post »

You cannot copy content of this page

Scroll to Top