Category: ಕಾವ್ಯಯಾನ
-

ಉಷಾರಾಣಿ ಗುರುಪ್ರಸಾದ್ ಅವರ ಕವಿತೆ”ಪ್ರೀತಿಯ ದೀಪ”
ಕಾವ್ಯ ಸಂಗಾತಿ ಉಷಾರಾಣಿ ಗುರುಪ್ರಸಾದ್ “ಪ್ರೀತಿಯ ದೀಪ” ಪ್ರಕೃತಿಯ ಮಡಿಲಲಿ ಮೂಡಿದ ರಂಗು,ಹೃದಯದ ಗೋಡೆಯ ಮೇಲೆ ಹೊಸ ತರಂಗು.ಮುಂಜಾವಿನ ಮಂಜಲಿ ಅರಳಿದ ಹೂವು,ಮರೆಸಿದೆ ಎದೆಯಲಿ ಮೂಡಿದ ನೋವು. ಕುಂಚದ ತುದಿಯಲಿ ಮೂಡಿದ ರೂಪ,ಮನದ ಕತ್ತಲಿಗೆಪ್ರೀತಿಯ ದೀಪ.ಕಣ್ಣಿನ ಭಾಷೆಗೆಸಿಗದ ಅರ್ಥ,ಭಾವನೆಗಳೆಲ್ಲವೂ ಪೂರ್ಣ ಸಮರ್ಥ. ಬಾನಿನ ಅಂಚಲಿ ಕಾಮನಬಿಲ್ಲು,ಹೃದಯ ಅಂಗಳದಿನಿನ್ನ ಹೆಜ್ಜೆಯ ಸದ್ದು.ಕನಸಿನ ಲೋಕದಸುಂದರ ಮದ್ದು,ಒಲುಮೆಯ ತೋಟದ ಸಿಹಿ ಸವಿ ಮುದ್ದು ಉಷಾರಾಣಿ ಗುರುಪ್ರಸಾದ್,
-

ಕಾವ್ಯ ಸುಧೆ ಅವರ ಕವಿತೆ “ಮಾಯಾಜಾಲ”
ಕಾವ್ಯ ಸಂಗಾತಿ ಕಾವ್ಯ ಸುಧೆ “ಮಾಯಾಜಾಲ” ನಿನ್ನೊಲುಮೆ ಭಾವದ ತೇರನು ಏರುತಾಹಾದಿಗುಂಟ ಹೂವ ಹಾಸಿ ಕಾದೆನುಇರುಳ ಒಂದು ಜಾವ ಕಳೆಯಲುನೆಟ್ಟ ನೋಟ ನಿನ್ನ ಜಾಡ ಅರಿಯದೆಮೂಕ ಮನದಿ ಮೌನ ರೋದನೆ ಯಾಕೋ ಬರದೆ ಹೋದೆ ನೀನುಅರಿಯದಾದೆ ಕಾರಣ, ಬೇಕು ಬೇಡಎನದೆ ಹೋದೆ ಕಾಣದಾಗೆ ತಲ್ಲಣನಿನ್ನ ಮಧುರ ನೆನಪು ಮರುಕಳಿಸಿಈಟಿಯಂಗಿರಿದು ಎದೆಗೆ ನೋವ ಬಿತ್ತರ ಭಾವಗೀತೆಯಂತೆ ನಲಿದ ಬಾಳಿನಲ್ಲಿತೊರೆದು ಹೋದೆ ಇರಿಸಿ ಬಾಧೆಮಾಯವಾದೆಯೇಕೆ ಮಾಯಾಮೃಗದಂತೆಕೈಗೆ ಸಿಗದೆ ಸುಳಿವು ಕೂಡ ನೀಡದೆ ಹೋದೆಕೆಣಕಿ ಶೋಧೆ ಸಿಲುಕಿಸೆನ್ನ ಜಾಲದಲಿ…..!! ಕಾವ್ಯ ಸುಧೆ.
-

ಜಯಶ್ರೀ ಭ. ಭಂಡಾರಿ ಅವರ ಕವಿತೆ “ಅವ್ವ ನೀನಿನ್ನು ಇರಬೇಕಿತ್ತು.”
ಕಾವ್ಯ ಸಂಗಾತಿ ಜಯಶ್ರೀ ಭ. ಭಂಡಾರಿ “ಅವ್ವ ನೀನಿನ್ನು ಇರಬೇಕಿತ್ತು.” ಮಕ್ಕಳೆಲ್ಲ ತವರಿಗೆ ಬಂದರೆಏನ್ ಸಡಗರ ಈ ಅವ್ವಗವಯಸ್ಸು ಮರುತ ಸಣ್ಣ ಹುಡುಗಿ ಆಗಿಬಿಡುತ್ತಿದ್ಲುರವೆ ಉಂಡೆ ಖಾರದ ಮಂಡಾಳ ಮುಂದಿಟ್ಟು ತಿನ್ನು ತಿನ್ನು ಅಂತಒಂದೇ ವರಾತ ಹಚ್ಚತಿದ್ಲು ಅವ್ವ ಅದಕ್ಕೆ ನೀನು ಇನ್ನಷ್ಟು ದಿನ ಇರಬೇಕಿತ್ತು. ಈಗ ಅಲ್ಲಿ ರವೆ ಉಂಡಿನೂ ಇಲ್ಲ ಮಂಡಾಳನು ಇಲ್ಲ ಬರೀ ಶೂನ್ಯ ನಿನ್ನ ಕೈ ರುಚಿ ತಿನ್ನೋ ಭಾಗ್ಯನು ಇನ್ನಿಲ್ಲ ಏನ್ ಚಂದ ನಿನ್ ಮಾತು ಏನ್ ಚೆಂದ ನಿನ್ನ ನಗುಹಣೆ ತುಂಬಾ ಕುಂಕುಮ…
-

ಮಾಲಾ ಚೆಲುವನಹಳ್ಳಿ ಅವರ”ಮಳೆಗೊಂದು ಮನವಿ”
ಕಾವ್ಯ ಸಂಗಾತಿ ಮಾಲಾ ಚೆಲುವನಹಳ್ಳಿ “ಮಳೆಗೊಂದು ಮನವಿ” ಬಾ ಮಳೆಯೇ ಬಾಕಂಗಾಲಾದ ರೈತರಬದುಕಿಗೆ ಬೆಂಗಾವಲಾಗಿ ಬಾ ಮಿಂಚುತ್ತಾ, ಗುಡುಗುತ್ತಾಆಮಿಷ ತೋರದೇ ಬಾ, ತೋರುತ್ತಾ, ಹಾರುತ್ತಾಹಂಗಿಸಿ, ಅಣಕಿಸದೇ ಬಾ, ನೊಂದು ಹೋದ ರೈತರಬೆಂದೆದೆಯ ಬೃಂದಾವನ ಮಾಡು ಬಾ ನಿಕೃಷ್ಟವಾದ ಬಡವರಬದುಕ ಉಥ್ಕೃ ಷ್ಟವಾಗಿಸಲು ಬಾ, ಮೇರೆ ಮೀರಿ ಮೆರೆಯುತ್ತಿರುವಸೂರ್ಯನ ತಾಪ ನೀಗಿಸಲು ಬಾ, ಇಳೆಯರಸಿ ನಾ ಕಾಯುತಿರುವೆಮಳೆಯರಸ ನೀ ಬಂದು ಸೇರೆನ್ನ ಮಾಲಾ ಚೆಲುವನಹಳ್ಳಿ
-

ಹಮೀದಾಬೇಗಂ ದೇಸಾಯಿ ಅವರ ಗಜಲ್
ಕಾವ್ಯಸಂಗಾತಿ ಹಮೀದಾಬೇಗಂ ದೇಸಾಯಿ ಗಜಲ್ ಮರಳ ಹೆಜ್ಜೆಗಳನು ಕಡಲು ಅಳಿಸಿದಂತಾಗಿದೆ ಈ ಬದುಕುಇರುಳು ಕಂಡ ಬಾವಿಗೆ ಹಗಲು ಬಿದ್ದಂತಾಗಿದೆ ಈ ಬದುಕು ತಣ್ಣಗೆ ಉರಿಯುವ ಬೂದಿಮುಚ್ಚಿದ ಕೆಂಡ ಇದಲ್ಲವೇಕೆಸರಿನಲಿ ಅವಿತ ಮುಳ್ಳಿನ ಮೊನೆಯಂತಾಗಿದೆ ಈ ಬದುಕು ಸಂತೈಸುವ ಕೈಗಳೇ ಬಸಿರಿಗೆ ಕೊಳ್ಳಿ ಇಟ್ಟು ನಗುತಿವೆಕತ್ತಲೆಯ ಗರ್ಭದಿ ಬೆಳಕು ಕಳೆದಂತಾಗಿದೆ ಈ ಬದುಕು ಹಗಲು ವೇಷಧಾರಿಗಳ ಮೋಜು ಬಲುಜೋರು ಇಲ್ಲಿಸತ್ತ ಹೆಣಗಳ ಸಿಂಗಾರ ನೋಡುವಂತಾಗಿದೆ ಈ ಬದುಕು ಭಾವಗಳ ರೆಕ್ಕೆ ಮುರಿದು ಬೆತ್ತಲೆಯಾಗಿವೆ ನೊಂದು ಬೇಗಂಪ್ರೀತಿಯನು ಎದೆಯ ಗೋರಿಯಲಿ…
-

“ಶಿರಬಾಗಿದರೆ ಆಶೀರ್ವಾದ” ಕವಿತಾ ಶ್ರೀನಿವಾಸ್ ನಾಯಕ್
ವಿಶೇಷ ಸಂಗಾತಿ ಕವಿತಾ ಶ್ರೀನಿವಾಸ್ ನಾಯಕ್ “ಶಿರಬಾಗಿದರೆ ಆಶೀರ್ವಾದ” ಶಿರಬಾಗಿದರೆ ಆಶೀರ್ವಾದ ಈ ನಾಲ್ಕು ಪದಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಯ ದೊಡ್ಡ ತತ್ವ ಅಡಗಿದೆ. ಹಿರಿಯರು, ಗುರುಗಳು ಮತ್ತು ದೇವರಿಗೆ ತಲೆಬಾಗಿ ನಮಸ್ಕರಿಸುವುದು ಕೇವಲ ಒಂದು ಪದ್ಧತಿಯಲ್ಲ, ಅದು ನಮ್ಮ ಅಂತರಂಗದ ಅಹಂಕಾರವನ್ನು ಅಳಿಸಿ, ದೊಡ್ಡವರ ಜ್ಞಾನ ಮತ್ತು ಶಕ್ತಿಯನ್ನು ನಮ್ಮದಾಗಿಸಿಕೊಳ್ಳುವ ಒಂದು ಪ್ರಕ್ರಿಯೆ.ಅಹಂಕಾರದ ವಿಸರ್ಜನೆ :-ಮನುಷ್ಯನ ಶಿರಸ್ಸು ಅಹಂಕಾರದ ಕೇಂದ್ರ ಎಂದು ಹೇಳಲಾಗುತ್ತದೆ. ನಾನು, ನನ್ನದು ಎಂಬ ಭಾವನೆಗಳು ನಮ್ಮ ತಲೆಯಲ್ಲಿ ತುಂಬಿರುತ್ತವೆ. ನಾವು ಯಾವಾಗ ಹಿರಿಯರ…
-

ಟಿ.ಪಿ.ಉಮೇಶ್ ಚಿತ್ರದುರ್ಗ ಅವರ ಕವಿತೆ “ಮಳೆಗೆ ನೆಲದ ಮೇಲೆ ಪ್ರೇಮವಿತ್ತೋ”
ಕಾವ್ಯ ಸಂಗಾತಿ ಟಿ.ಪಿ.ಉಮೇಶ್ ಚಿತ್ರದುರ್ಗ “ಮಳೆಗೆ ನೆಲದ ಮೇಲೆ ಪ್ರೇಮವಿತ್ತೋ” ಅಗೋ ಅದಾವ ಮೋಡ ಮೊದಲು ಕಣ್ಣೀರಿಟ್ಟಿತೊ?ಅದಾವ ಗಾಳಿ ಅದನ್ನು ಹೊತ್ತು ತಂದಿತೊ?ಅದಾವ ಎಲೆ ಚಿಗುರು ಮೊದಲು ತೇವಗೊಂಡಿತೊ?ಅದಾವ ಮಣ್ಣು ಅದನ್ನು ತನ್ನದಾಗಿಸಿಕೊಂಡಿತೊ?ಜಾರಿದ ಹನಿಗಳ ಲೆಕ್ಕ ಹಿಡಿದಷ್ಟುಸುಲಭವಲ್ಲಆಕಾಶದ ಮನಸ್ಸಿನ ಆಳ ಅಗಲ ಅರಿಯುವುದು! ತೇಲಿದ್ದು ಸಾಕೆಂದು ಸುರಿದವೊ?ಬರುವ ದಾರಿಯಲ್ಲೇ ಕರಗಿದವೊ?ಎಲೆಯ ತುದಿಯಲ್ಲಿ ನಿಂತು ತೂಗುವಹನಿಗಳ ನಡುಕವನ್ನು ಓದಿದಷ್ಟುಸುಲಭವಲ್ಲಬೀಳದ ಹನಿಯ ಕನಸು ಅರ್ಥಮಾಡಿಕೊಳ್ಳುವುದು! ನೆಲ ಮುಟ್ಟದ ಮಳೆಹನಿಯ ವ್ಯಥೆಮೋಡದೊಳಗೆ ಉಳಿದ ಮಳೆಹನಿಯ ಮಾತುಯಾರ ಕಿವಿಗು ಸಂಪೂರ್ಣ ಕೇಳುವುದಿಲ್ಲ! ಯಾರೋ…
-

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಕಾವ್ಯಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ದೇಹವೀಣೆಯಿದು ನಿಲ್ಲದೆ ಕಂಪಿಸುತಿದೆ ನೀ ನುಡಿಸದೇಮನ ಮಂದಾರವಿದು ತಾಪದಿ ಮರುಗುತಿದೆ ನೀ ಬರದೇ ನೆನಪಿನಂಗಳದ ತುಂಬ ಕನಸುಗಳ ಬಣ್ಣದ ರಂಗೋಲಿಜೀವತಂತಿಯಿದು ಬಿಗಿದು ಗಟ್ಟಿಗೊಂಡಿದೆ ನೀ ಬಾರಿಸದೇ ದುಃಖ ಉಮ್ಮಳಿಸಿ ಕಣ್ಣೀರ ಹನಿ ಧಾರೆಯಾಗಿ ಸುರಿಯುತಿವೆಸ್ಪರ್ಶಸುಖವಿಲ್ಲದೆ ರಕ್ತ ಹೆಪ್ಪುಗಟ್ಟಿ ಕೊಲ್ಲುತಿದೆ ನೀ ಸೋಕದೇ ತಂಗಾಳಿಯ ಚಾಮರವೂ ಸುಡುತಿದೆ ಕ್ಷಣ ಕ್ಷಣ ಪ್ರತಿಕ್ಷಣವಿರಹವೇದನೆ ಒಂದೇ ಸವನೇ ಬಾಧಿಸುತಿದೆ ನೀ ಸೇರದೇ ಬಾನ ಬಯಲಲ್ಲೆಲ್ಲಾ ಒಲವಿನೋಲೆಯ ಅಕ್ಷರಗಳ ಕಲರವಎದೆಪುಟದಚ್ಚಾದ ಪ್ರೇಮದ ಚಿತ್ರ ಕೊರೆಯುತಿದೆ ನೀ…
-

ಡಾ.ಲತಾ ಎ. ಆರ್. ಬಾಳೆಹೊನ್ನೂರು ಕವಿತೆ “ಸವಿಗಾನ”
ಕಾವ್ಯಸಂಗಾತಿ ಡಾ.ಲತಾ ಎ. ಆರ್. ಬಾಳೆಹೊನ್ನೂರು “ಸವಿಗಾನ” ಹೃದಯದಲಿ ವೀಣೆಯ ತಂತಿ ಮೀಟಿದೆಸುಖ ಸ್ವಪ್ನದ ಸವಿಗಾನ ನುಡಿಸಿದೆಮಧುರ ಮಮತೆಯ ಭಾವ ಬಿಂಬಿಸಿದೆಒಡಲಿನೊಳಗೆ ಬಿಸಿ ಅನುಭವ ಮೊಳಗಿಸಿದೆ ನೀ ನೀಡಿದ ಪ್ರೀತಿ ಕಾಣಿಕೆ ಮರೆಯಲಾರೆಎಂದೆಂದೂ ಜೊತೆಯ ಪಾತ್ರ ತೊರೆಯಲಾರೆಭರವಸೆಯ ಜೊತೆಗಾರ ಬಾಳಲಿ ನೀನಾಸರೆನೆನಪಿಡುವೆ ಸದಾಕಾಲ ಮರೆಯದೆ ಮನಸಾರೆ ನಂಬಿಕೆಯ ನಡೆಯಲಿ ಸದಾ ನನ್ನೊಂದಿಗಿರುಬದುಕಲಿ ಬದುಕುವ ಭರವಸೆ ನೀನಾಗಿರುಯಾವ ಜನ್ಮದ ಋಣವೋ ತಿಳಿದಿರುಕೈ ಹಿಡಿದು ಬಾಳಲಿ ಮುನ್ನಡೆಸುತ್ತಿರು ಮುಗಿಯುವ ಪಯಣದಲಿ ಕಾವ್ಯವಾಗಿರುನಾ ಬರೆವ ಕವಿತೆಯಲಿ ಹಸಿರಾಗಿರುನೆಮ್ಮದಿಯ ಬದುಕಿಗೆ ನಿರಾಳ ಉಸಿರಾಗಿರುನಾ…
-

“ಭೂದೇವಿಯಮದುವೆ” ಶ್ರೀದೇವಿ ಗುಮ್ಮಗೋಳ
ಕಾವ್ಯ ಸಂಗಾತಿ ಶ್ರೀದೇವಿ ಗುಮ್ಮಗೋಳ “ಭೂದೇವಿಯಮದುವೆ” (ಜಾನಪದ ಶೈಲಿಯಲ್ಲಿ ಬರೆದ ಗೀತೆ)ಮಳೆರಾಯ ಮದುಮಗ ಬಂದಾನಭೂದೇವಿಗ ಮದುವ್ಯಾಗಕ ನಿಂದಾನ| ಮೋಡಗಳ ದಿಬ್ಬಣ ಹೊತ್ತ ಬಂದಾನಸುರಗಿನೀರ ಬರಬರ ಸುರಸ್ಯಾನ| ಭೂದೇವಿಗೆ ಮನಸೋತು ಕರಿಗ್ಯಾನಮುತ್ತು ಹನಿಗಳ ಹೂಹಾರ ಹಿಡಿದಾನ| ರೈತ ಬೀಗನ್ನ ಹಂದರಕ ಕರೆದಾನಜೊಡೆತ್ತಿನ್ಯಾಗ ಸಾರೂಟ ಹೊರಟಾಣ| ಜೋಳಗ್ಯಾಗ ಮುತ್ತಿನ ಜೋಳ ಹಿಡದಾನಬಸವಣ್ಣ ನೇಗಿಲ ಹೊತ್ತಾನ| ಬಸವಣ್ಣ ಬಿತ್ತುತ ನೇಯ್ಗಿ ನೇಯ್ದಾನಭೂದೇವಿಯ ಹಸಿರು ಸೀರೆಯ ಉಟ್ಟಾಳ| ಹಸಿರು ಉಸುರಾಗಿ ಫಲವಾಗಿ ನಿಂತಾಳದವಸದ ಉಡಿ ತಂದೇನಿ ಅಂದಾಳ| ಹಿಗ್ಗಿ ಹಿರಿದು ಊರ ಮಂದಿನನಮ್ಮಣ್ಣ…
