ಡಾ.ಶಶಿಕಾಂತ.ಪಟ್ಟಣ ರಾಮದುರ್ಗ “ನನ್ನವರು ಸಾಯುವುದು”
ಕಾವ್ಯ ಸಂಗಾತಿ ಡಾ.ಶಶಿಕಾಂತ.ಪಟ್ಟಣ ರಾಮದುರ್ಗ “ನನ್ನವರು ಸಾಯುವುದು“ ನನ್ನವರು ಸಾಯುವುದು ಗುಂಡಿನಿಂದಲ್ಲಎದೆ ಹಣೆ ಸೀಳಿದ್ದುಪಿಸ್ತೂಲು ಬಂದೂಕಿನಿಂದಲ್ಲ.ರುಂಡ ಮುಂಡ ಕತ್ತರಿಸಿದ್ದುಚಾಕು ಲಾಂಗುಗಳಲ್ಲ.ಸತ್ಯವಂತ ಸಾಯುವುದುದುಷ್ಟ ಹಂತಕರಿಂದಲ್ಲ.ಸಜ್ಜನ ಹೇಡಿಗಳಿಂದ ಅವರು ಇದ್ದಾಗ ಬೆಂಬಲಿಸಲಿಲ್ಲ.ಬೆನ್ನು ತಟ್ಟಿ ಕೈಜೋಡಿಸಲಿಲ್ಲ.ಸತ್ತಾಗ ಬಿಕ್ಕಿ ಬಿಕ್ಕಿ ಅಳುತ್ತೇವೆ.ಮಾನವ ಸರಪಳಿ ಪ್ರತಿಭಟನೆ.ಟಿವಿ ಪತ್ರಿಕೆಯಲ್ಲಿ ಭಾರಿ ಸುದ್ಧಿಆಕ್ರೋಶ ಅಬ್ಬರಹಂತಕರ ಹಿಡಿಯಲು ಸಮಿತಿಸರಕಾರ ಮಲಗುತ್ತದೆ.ಕೊಳಕು ವ್ಯವಸ್ಥೆ ನಾವೂ ಮಲಗುತ್ತೇವೆ . ಸತ್ಯವಂತ ಸಾಯುತ್ತಾನೆ.ಬದುಕಿನಿದ್ದಕ್ಕೂ ಹೋರಾಡುತ್ತಾನೆಸತ್ಯ ಶಾಂತಿ ಹಕ್ಕಿಗಾಗಿ.ಇದ್ದಾಗಲೂ ಒಬ್ಬಂಟಿಗಸತ್ತಾಗಲೂ ಒಬ್ಬನೇಸಾವು ಬೆನ್ನು ಬಿಡಲಿಲ್ಲ.ಸತ್ತವರಿಗೆ ಸಂತನ ಪಟ್ಟ ಕಟ್ಟಿ.ಕೊರಳಲ್ಲಿ ಬೋರ್ಡ್ ಹಾಕುತ್ತೇವೆ. ಅವರು ಸಾಯುವುದು ಗುಂಡಿನಿಂದಲ್ಲ.ನಮ್ಮ ಉದಾಸೀನ ಮೌನದಿಂದ. ಡಾ.ಶಶಿಕಾಂತ.ಪಟ್ಟಣ ರಾಮದುರ್ಗ
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ “ನನ್ನವರು ಸಾಯುವುದು” Read Post »









