ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ಕಂಡ ಕನಸುಗಳು ನನಸಾಗಬೇಕು ಎಂದೇನೂ ಇಲ್ಲಬಯಸಿದುದೆಲ್ಲಾ ಸಿಕ್ಕು ಬಿಡಬೇಕು ಎಂದೇನೂ ಇಲ್ಲ ಅವ ಬಂದಾಗ ನಕ್ಕು ಹೋಗುವಾಗ ಅಳುವ ಕಾಲ ಕಳೆದಿದೆಸಮಯ ಎಂದಿಗೂ ನನ್ನ ಪರವಿರಬೇಕು ಎಂದೇನೂ ಇಲ್ಲ ಮೌನಕ್ಕೆ ಅಗಾಧವಾದ ಶಕ್ತಿಯಿದೆಯೆಂದು ನನಗೆ ತಿಳಿದಿದೆಮನದ ಭಾವಗಳ ಮಾತಲ್ಲೇ ಹೇಳಬೇಕು ಎಂದೇನೂ ಇಲ್ಲ ಮಾತಾಡಿದ ಮಾತು ಮರೆತಿಲ್ಲ ಮನದ ತುಂಬಾ ತುಂಬಿದೆರೂಪು ಕಣ್ಣಲ್ಲಿದೆ ಕಣ್ಣೆದುರೇ ಇರಬೇಕು ಎಂದೇನೂ ಇಲ್ಲ ಬದುಕನ್ನು ಬಂದಂತೆ ಸ್ವೀಕರಿಸುತ್ತಾ ಬಂದಿದ್ದಾಳೆ ಅರುಣಾಎಲ್ಲಾ ಕಥೆಗಳು ಸುಖಾಂತ್ಯವಾಗಬೇಕು ಎಂದೇನೂ ಇಲ್ಲ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ.ರೇಖಾ ಉದಯ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ ಗಜಲ್ ಮಳೆಯ ಹನಿಯೊಂದು ಮುತ್ತಿಕ್ಕಿತ್ತು ಧರೆಗೆಕಾನನದ ಹೂವೊಂದು ಅರಳಿತ್ತು ಕೊನೆಗೆ ಪ್ರಕೃತಿ ಸೊಬಗ ಸವಿಯಲು ಕಾದು ನಿಂತಿಹೆಹರ್ಷದಿ ನವಿಲೊಂದು ನರ್ತಿಸಿತ್ತು ಮಳೆಗೆ ಅಲ್ಲೊಂದು ಕುಹೂ ಗಾನ ಮೈಮರೆಸಿತ್ತು ಕ್ಷಣನಿನ್ನೊಲವಿನ ಓಲೆಯೊಂದು ತಲುಪಿತ್ತು ನನಗೆ ಮೇಘ ಸಂದೇಶದೊಳು ರವಾನಿಸುವ ತವಕಪ್ರೇಮದ ಬಾಣವೊಂದು ಚುಚ್ಚುತ್ತಿತ್ತು ಎದೆಗೆ ಒಲವಿನ ಜಾಲದೊಳು ಸಿಲುಕಿಹಳು ರೇಖೂಮಳೆಬಿಲ್ಲ ಬಣ್ಣವೊಂದು ಸಿಂಗರಿಸಿತ್ತು ಮುಡಿಗೆ ರೇಖಾಕ್ಷರ 

ಡಾ.ರೇಖಾ ಉದಯ ಅವರ ಗಜಲ್ Read Post »

ಕಾವ್ಯಯಾನ

ಎನ್.ಜಯಚಂದ್ರನ್ ದಾಂಡೇಲಿ ಅವರ ಕವಿತೆ”ಕಣ್ಣೆದುರಿನ ಸತ್ಯ”

ಕಾವ್ಯ ಸಂಗಾತಿ ಎನ್.ಜಯಚಂದ್ರನ್ ದಾಂಡೇಲಿ “ಕಣ್ಣೆದುರಿನ ಸತ್ಯ” ಕೇಳಿ…!ಇದು ಕಥೆಯಲ್ಲ…ಕಲ್ಪನೆಯೂ ಅಲ್ಲ…ನಮ್ಮ ಕಣ್ಣೆದುರೇ ಪ್ರತಿದಿನ ನಡೆಯುವಕಟು ಸತ್ಯ! ರಸ್ತೆಯ ಬದಿಯಲ್ಲಿಹಸಿವಿನಿಂದ ಅಳುವ ಮಗುವನ್ನುನೋಡಿದ ಕಣ್ಣುಗಳೇ…ಮೊಬೈಲ್ ಪರದೆಯ ಮೇಲೆನಗುವಿನ ಚಿಹ್ನೆಗಳನ್ನು ಹುಡುಕುತ್ತಿವೆ! ಒಂದು ಕಡೆಅನ್ನ ಕಸದ ಬುಟ್ಟಿಗೆ ಬೀಳುತ್ತಿದೆ…ಮತ್ತೊಂದು ಕಡೆಒಂದು ತುತ್ತಿಗಾಗಿಪ್ರಾಣವೇ ಒಣಗುತ್ತಿದೆ! ಹೆಣ್ಣಿನ ಕಣ್ಣೀರಿಗೆಬೆಲೆ ಕಟ್ಟುವ ಸಮಾಜ…ಅವಳ ಕನಸುಗಳಿಗೆ ಮಾತ್ರಬೆಲೆಯೇ ಇಲ್ಲ!ನ್ಯಾಯದ ಮಾತು ದೊಡ್ಡದು…ನ್ಯಾಯದ ನಡೆ ಮಾತ್ರಇನ್ನೂ ಕುಂಟುತ್ತಲೇ ಇದೆ! ಮರವನ್ನು ಕಡಿಯುವ ಕೊಡಲಿಯೇಬಿಸಿಲಿಗೆ ನೆರಳು ಹುಡುಕುತ್ತಿದೆ.ಪ್ರಕೃತಿಯನ್ನು ಗಾಯಗೊಳಿಸಿದ ಮನುಷ್ಯ,ಪ್ರಳಯ ಬಂದಾಗಆಕಾಶವನ್ನೇ ಪ್ರಶ್ನಿಸುತ್ತಿದ್ದಾನೆ! ಧರ್ಮದ ಹೆಸರಿನಲ್ಲಿಗೋಡೆಗಳನ್ನು ಕಟ್ಟಿದ್ದೇವೆ…ಮಾನವೀಯತೆಯ ಹೆಸರಿನಲ್ಲಿಒಂದು ಸೇತುವೆಯನ್ನಾದರೂ ಕಟ್ಟಿದ್ದೇವೆಯೇ? ಕಣ್ಣೆದುರಿನ ಸತ್ಯವನ್ನುಮುಚ್ಚಲು ಸಾಧ್ಯವಿಲ್ಲ!ಮೌನದಿಂದಬದಲಾವಣೆ ಬರಲಾರದು! ಎದ್ದೇಳಿ!ಪ್ರಶ್ನಿಸಿ!ಅನ್ಯಾಯದ ಮುಂದೆತಲೆಬಾಗಬೇಡಿ! ಒಂದು ಧ್ವನಿಸಾವಿರ ಧ್ವನಿಗಳಿಗೆ ದಾರಿ.ಒಂದು ಹೆಜ್ಜೆಹೊಸ ಸಮಾಜದ ಆರಂಭ. ನೆನಪಿರಲಿ…ಸತ್ಯಕ್ಕೆ ಕಣ್ಣುಗಳಿಲ್ಲ,ಆದರೆಅದನ್ನು ನೋಡುವ ಕಣ್ಣುಗಳುನಮ್ಮಲ್ಲಿರಬೇಕು! ಕಣ್ಣೆದುರಿನ ಸತ್ಯವನ್ನುಕಂಡು ಮೌನವಾಗಬೇಡಿ…ಕಂಡು ಬದಲಾಗಿ…ಕಂಡು ಬದಲಾಯಿಸಿ…ಏಕೆಂದರೆ,ನಾಳೆಯ ಇತಿಹಾಸನಮ್ಮ ಇಂದಿನ ಧೈರ್ಯದಿಂದಲೇ ಬರೆಯಲ್ಪಡುತ್ತದೆ! ಎನ್.ಜಯಚಂದ್ರನ್. ದಾಂಡೇಲಿ

ಎನ್.ಜಯಚಂದ್ರನ್ ದಾಂಡೇಲಿ ಅವರ ಕವಿತೆ”ಕಣ್ಣೆದುರಿನ ಸತ್ಯ” Read Post »

ಕಾವ್ಯಯಾನ

“ಬಿಕರಿಯಾದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ

ಕಾವ್ಯ ಸಂಗಾತಿ “ಬಿಕರಿಯಾದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ ಬಿಕರಿಯಾದ ಪ್ರೀತಿ ಅಂದ್ರೆ ಗೊತ್ತೇನು!ಇದ್ದದ್ದೆಲ್ಲವನ್ನೂ ಕೊಟ್ಟುಒಂದು ನಗುವಿಗೆ ಕಾಯೋದುಅದು ಬರದಾಗ ಎದೆ ಖಾಲಿ ಆಗೋದು. ನಿನಗೊ ಪ್ರತಿ ಮಾತಿಗೂ ಅರ್ಥಕಂಡುಕೊಳ್ಳುವ ತವಕಅವರೊ ಪ್ರತಿ ಮಾತಿಗೂ ಬೆಲೆ ಕಟ್ಟಿದ್ರುನೀನು ಕಣ್ಣೀರಲ್ಲಿ ಹೆಸರು ಬರೆದೆಅವರು ಅದನ್ನ ಮಳೆಗೆ ಕೊಟ್ಟು ಹೋದ್ರು. ಒಲವಿನ ಪ್ರೀತಿ ಕೇಳಿದ್ದೇನು?ಸಿಗೋದು ಸುಳ್ಳಿನ ವ್ಯಾಪಾರ ಆಯ್ತು.ನಾನಿಲ್ಲವಾ ಎಂದಿದ್ದ ಕೈ,ಬಿಟ್ಟು ಹೋಗೋವಾಗ “ನಿನ್ನ ತಪ್ಪು”ಅಂದಿತ್ತು ಅದರಲ್ಲಿ ಅಚ್ಚರಿ ಏನಿಲ್ಲ. ಆದ್ರೂ ನಿನಗೆ ಗೊತ್ತಾ?ಬಿಕರಿಯಾದ ಪ್ರೀತಿ ನಿನ್ನನ್ನು ಚಿಕ್ಕದಾಗಿಸಲ್ಲಅದು ನಿನ್ನ ದೊಡ್ಡತನಕ್ಕೆ ಸಾಕ್ಷಿಯಾಕಂದ್ರೆ ಪ್ರೀತಿಸೋಕೆ ಧೈರ್ಯಬೇಕಲ್ಲವೆ ಮೋಸ ಮಾಡೋಕೆ ಅಲ್ಲ. ಅದಕೇಕೆ ಅಳುವೆ ಅಳುವುದಾದರೆಮನಸಾರೆ ಎದೆ ಹಗುರಾಗುವವರೆಗೆ ಅಳುಆಮೇಲೆ ಆ ಕಣ್ಣೀರನ್ನೇ ಶಕ್ತಿಮಾಡ್ಕೊಂಡು ಬಿಡು ಅದರಲ್ಲೆನಗೋದನ್ನ ಕಲಿತುಬಿಡು. ಬಿಕರಿಯಾದ ಪ್ರೀತಿಗೇಕೆ ಅಳುವೆನಿನ್ನನ್ನು ನಿಜವಾಗಿ ಪ್ರೀತಿಸೋಒಲವಿಗಾಗಿ ಕಾಯೋದಾ?ಕಾಯುವುದಾದರೆ ಇನ್ನೆಷ್ಟು ದಿನ.!?ಬರಬಹುದೆಂಬ ಊಹೆಯ ಬಿಟ್ಟು ಬಿಡು. ಊಹಿಸಿರೊದೆಲ್ಲವೂ ಇಲ್ಲಿ ನೈಜವಾಗಿನಡೆಯುವುದಿಲ್ಲ ಊಹೆಯೊಳುಬದುಕುತ್ತಿದ್ದರೆ ಅದು ಬದುಕಲ್ಲಬದುಕಿನ್ನು ಬಿಕರಿಯಾಗುವುದಕ್ಕಿಂತಮೊದಲೆ ನಿನ್ನ ನೀನು ಪ್ರೀತಿಸುವುದನ್ನಕಲಿತುಬಿಡು. ಕಲ್ಪನಾ ಎಸ್ ಪಾಟೀಲಕಾವ್ಯಧರೆ

“ಬಿಕರಿಯಾದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ Read Post »

ಕಾವ್ಯಯಾನ

ಡಾ.ಲತಾ ಎ. ಆರ್ ಬಾಳೆಹೊನ್ನೂರು “ಲಂಚಾವತಾರ”

ಕಾವ್ಯಸಂಗಾತಿ ಡಾ.ಲತಾ ಎ. ಆರ್ ಬಾಳೆಹೊನ್ನೂರು “ಲಂಚಾವತಾರ” ಅಮಾಯಕರ ಜೀವ ಹಿಂಡುವ ಅಧಿಕಾರಕೊಡಲಿಲ್ಲ ಯಾರಿಗೂ ಪ್ರೀತಿಯ ಸಹಕಾರಮೆರೆದರು ತೋರಿಸಿ ಹಣದ ಅಹಂಕಾರಮರೆತರು ಸೊಕ್ಕಿನಲಿ ಪ್ರೇಮದ ಮಮಕಾರ ಕೊನೆಗಾಲದ ನೋವ ನೀ ಅನುಭವಿಸುವೆಹುಟ್ಟು ಸಂಭ್ರಮ ಸಾವು ನಿಗೂಢ ಅರಿವೆಸಾವಿನಲಿ ಕಾಯುವುದಿಲ್ಲ ನಿನ್ನ ಹಣವೇಒಂದು ದಿನ ಶವವಾಗಿ ಮಣ್ಣಲ್ಲಿ ಕೊಳೆಯುವೆ ಹೊತ್ತೋಯ್ಯುವುದಿಲ್ಲ ಮರಣದ ಕೊನೆಯಲ್ಲಿಬೆಳಕಾಗು ದೀನ ದಲಿತರ ಸೇವೆಯಲಿಕಾಯಕದಿ ಕೈಲಾಸ ನೋಡುವೆ ನೀನಿಲ್ಲಿದುರಹಂಕಾರದಿ ಮಣ್ಣು ಲೋಕದ ಬಯಲಲಿ ದುರಾಸೆಯ ಬದುಕಿನಲಿ ಮಾನವನ ಜೀವನಅತಿ ಆಸೆಯಲಿ ಮಾಡದಿರು ಮೋಸತನಕಾಣಬೇಕಿದೆ ನೂತನ ಜೀವನ ಪಾವನಲಂಚಾವತಾರದ ನೀಚ ರಕ್ಕಸರಿಗೆ ಈ ಕವನ ಡಾ.ಲತಾ ಎ. ಆರ್ ಬಾಳೆಹೊನ್ನೂರು

ಡಾ.ಲತಾ ಎ. ಆರ್ ಬಾಳೆಹೊನ್ನೂರು “ಲಂಚಾವತಾರ” Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ  ಅವರ ಕವಿತೆ ” ಕಂಗಳ ಹೊಳಪು”

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ  “ಕಂಗಳ ಹೊಳಪು” ಹೂವಿನ ಪರಿಮಳ ಬಣ್ಣದಲ್ಲಿರದೆಸುಗಂಧವನೇ ಸೂಸುತಿದೆಸಹನೆಯ ತೊರೆದು ನಡೆಯಲು ಜಗದಲ್ಲಿಪ್ರೀತಿಯೇ ಸೋಲುತಿದೆ. ಕಾಡಿನ ದಾರಿಯು ನಾಡನು ಸೇರಲು ಪ್ರಕೃತಿಯೇ ನಗುತಲಿದೆತಿರುಗುವ ಮನುಜನ ಕಂಡು ಭೂಮಿಯೂ ತಿರುಗುತ ನೋಡುತಿದೆ. ಕಂಗಳ ಹೊಳಪಿಗೆ ಮುತ್ತನು ಹುಡುಕಲುಮನಸ್ಸು ಕಡಲಾಳಕ್ಕೆ ಇಳಿಯುತಿದೆಬೆಳದಿಂಗಳ ಚುಕ್ಕಿಯು ಮೆಲ್ಲನೆ ಭೂಮಿಗೆ ಜಾರುತಿದೆ. ಸ್ವರಗಳು ಪ್ರಾಸವ ಸೇರಿ ಛಂದಸ್ಸಿನಲ್ಲಿ ಅಡಗುತಿವೆಭಾವಗಳೆಲ್ಲವೂ ಲಯದಲ್ಲಿ ಸೇರಿ ಸಾಹಿತ್ಯವನ್ನು ನೀಡುತಿವೆ. ಮನ್ಸೂರ್ ಮುಲ್ಕಿ 

ಮನ್ಸೂರ್ ಮುಲ್ಕಿ  ಅವರ ಕವಿತೆ ” ಕಂಗಳ ಹೊಳಪು” Read Post »

ಕಾವ್ಯಯಾನ, ಗಝಲ್

ಡಾ.ಹಸೀನಾ ಹೆಚ್.ಕೆ. ಶಿವಮೊಗ್ಗ ಅವರ ಗಜಲ್

ಕಾವ್ಯ ಸಂಗಾತಿ ಡಾ.ಹಸೀನಾ ಹೆಚ್.ಕೆ. ಶಿವಮೊಗ್ಗ ಗಜಲ್ *ಸಪ್ತ* ಸಾಗರ ದಾಟಿ ಪರ್ಯವಸಾನಗೊಂಡ *ಹಾದಿಯಿದು* ಪ್ರೇಮ*ಗುಪ್ತ* ಬಯಕೆಯ ಮೀಟಿ ಆಲಾಪಗೊಂಡ *ಶೃತಿಯಿದು* ಪ್ರೇಮ ಹೃದಯದಂಗಳದಲ್ಲಿ ಮಲ್ಲಿಗೆ ಬಳ್ಳಿ ನೆಟ್ಟವನು ನೀನಲ್ಲವೆ ಒಡೆಯ*ಸುಪ್ತ* ಮನವ ಮತ್ತೆ ಮತ್ತೆ ತೀಡಿ *ಲಯಗೊಂಡ* ಭಾವವಿದು ಪ್ರೇಮ ತನ್ನ ತಾ ಅರಿವಿನ ಮೊರೆಗೆ ಕಿವಿ ತೆರೆದು ಕೇಳಿದವರಾರು?*ಕ್ಲುಪ್ತ* ಕಲ್ಪನೆ ಕಟಿ ಕಟಿದು ಕೆನೆಗೊಂಡ *ಚತ್ರವಿದು* ಪ್ರೇಮ ಸುಟ್ಟು ಬೂದಿಯಾಗುವ ಹಂಬಲಕೆ ಕೊನೆ ಮೊದಲಿಲ್ಲ ಗೆಳತಿ*ತಪ್ತ* ಸ್ವರವ ಕುಡಿ ಕುಡಿದು ಹದಗೊಂಡ *ಗುನುಗಿದು* ಪ್ರೇಮ ಜಗದಲಿ ಅದೆಷ್ಟು ಮಧುಪಾತ್ರೆಗಳು ಬರಿದಾಗಿವೆ ನೋಡು ಹಸೀನಾ..*ತೃಪ್ತ* ಹೃದಯವ ಹುರಿದು ಮೆದುಮಾಡಿಕೊಂಡ *ನೈವೇದ್ಯವಿದು* ಪ್ರೇಮ -ಡಾ.ಹಸೀನಾ ಹೆಚ್.ಕೆ, ಶಿವಮೊಗ್ಗ

ಡಾ.ಹಸೀನಾ ಹೆಚ್.ಕೆ. ಶಿವಮೊಗ್ಗ ಅವರ ಗಜಲ್ Read Post »

ಕಾವ್ಯಯಾನ

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ “ಒಲವಮುಖಗಳು”

ಕಾವ್ಯ ಸಂಗಾತಿ ಸಂತೆಬೆನ್ನೂರು ಫೈಜ್ನಟ್ರಾಜ್ “ಒಲವಮುಖಗಳು” 1ಹೊಳಿ ಮಗ್ಗುಲ ಕಲ್ಲುಚಿಗುರದು, ಒಣಗದುನೀನಿದ್ದೂ ನನ್ನಂತೆ..!2ರೆಕ್ಕೆ ನಂಬಿ ಹೊಂಟ ಹಕ್ಕಿ…ಒಲವುನಿನ್ನನ್ನೇ…ನಂಬಿದೆಮರದ ಕೊಂಬೆ ಬೇಕೀಗ…3ಸಿಮೆಂಟು ರೋಡೇ ಎರಡುತಿಂಗಳಿಗೆ ಸೀಳಿದೆ…ಒಲವಿಗೀಗವ್ಯಾಲಿಡಿಟಿ ಕಡಿಮೆ ಅಂತಿದ್ರಪ..4ಹಣದ ಹಿಂದೆ ಗಿರಕಿ ಹೊಡೆವಜಗತ್ತಿಗೆ ಒಲವಿನಭಾಷೆ ಹೊಸದು; ಕಾಗುಣಿತದ ಅರಿವಿಲ್ಲ5ಅವ್ವ ಮುನಿಸಿಕೊಂಡಾಗೆಲ್ಲಾಅಪ್ಪ ತುತ್ತು ಜಾಸ್ತಿ ಉಣ್ತಿದ್ದ;ಒಲವಿಗೆ ಹೊಸ ವ್ಯಾಖ್ಯಾನ ಅಂತ ಅವ್ವನ ಸಮಜಾಯಿಷಿ!6ಮಸಣ ದೂರ ಕಣೋ ಇಲ್ಲಿಂದಲೇ ಹೂಒಗೆವೆ ದಾರಿಯಲ್ಲಿಜೊತೆಗಿದ್ದೇನೆ ಅಂದುಕೋ ಒಲವ ಹುಡುಗಾ..7ಬೆರಳು ಸೋಕದೆಯೂ ಒಲವ ಉಣಬಡಿಸಿದರಾಜಕುಮಾರನೆದುರುಮೇಲೆ ಬಿದ್ದು ಹೊರಳಾಡಿದ ಈಗಿನ ಪ್ರೀತಿ ಸಪ್ಪೆ ಸಂತೆಬೆನ್ನೂರು ಫೈಜ್ನಟ್ರಾಜ್

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ “ಒಲವಮುಖಗಳು” Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಹೊಸ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ತಾ ಪಾಲಿಸದೇ ಇತರರಿಗೆ ಉಪದೇಶ ನೀಡುವುದು ವ್ಯರ್ಥಇತರರಿಗೆ ಹೋಲಿಸಿಕೊಂಡು ಬಾಳ್ವೆ ಮಾಡುವುದು ವ್ಯರ್ಥ ಆಕಾಶದಲ್ಲಿ ಹಕ್ಕಿ ನೀರಲ್ಲಿ ಮೀನು ಬದಲಾಗಬಾರದು ಸ್ಥಾನಅವರು ಇವರಂತೆ ನಾನಾಗುವೆನೆಂದು ಆಡುವುದು ವ್ಯರ್ಥ ಯಾರ ಮೆಚ್ಚುಗೆಗೋ ಇಚ್ಛೆಗೋ ಬಲಿಯಾಗದಿರಲಿ ಬಾಳುಇಂದು ಗೈಯುವ ಕಾಯಕವ ನಾಳೆಗೆ ದೂಡುವುದು ವ್ಯರ್ಥ ಕುಣಿಯೋವಾಗ ಜೊತೆಗಿದ್ದವರು ಕೊನೆತನಕ ಬರಲಾರರುಅವರಿವರನ್ನು ನಂಬಿಕೊಂಡು ಹೆಜ್ಜೆಯ ಇಡುವುದು ವ್ಯರ್ಥ ಕುಂಬಾರ ಕಂಡಿದ್ದು ಸಾಸಿವೆ ಕಾಣಬೇಕಿರುವುದು ಸಾಗರವೇಮರೀಚಿಕೆಯ ಬೆನ್ನತ್ತಿ ಸುಮ್ಮನೆ ಕಾಲ ದೂಡುವುದು ವ್ಯರ್ಥ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಹೊಸ ಗಜಲ್ Read Post »

ಕಾವ್ಯಯಾನ

ಉಷಾರಾಣಿ ಗುರುಪ್ರಸಾದ್ ಕವಿತೆ “ಒಲವಿನಾಸರೆ”

ಕಾವ್ಯ ಸಂಗಾತಿ ಉಷಾರಾಣಿ ಗುರುಪ್ರಸಾದ್ “ಒಲವಿನಾಸರೆ” ಬರಡು ಬಿರುಕು ನೆಲಕೆ   ,ನೀ ತಂದೆ ಪ್ರೀತಿಯಸ್ನೇಹ ಸಿಂಚನ.ಕತ್ತಲೆಯ ಹಾದಿಯಲಿ ಕೈಹಿಡಿದು,ಬೆಳಗಿಸಿದೆ ಒಲವಿನಶುಭ್ರ ಹಗಲನು. ಸೋತು ಕುಳಿತಾಗ ಸನಿಹ ಬಂದು,ನೀನಾದೆ ಒಲವಿನಾಸರೆ.ನಿನ್ನ ನಗುವಿನ ಮುಗ್ಧ ನೋಟಕೆ,ಕರಗುವುದು ಮನದ  ಬೇಸರ. ಮಾತುಗಳೇ ಇಲ್ಲದ ಮೌನದಲ್ಲೂ,ಭಾವನೆಗಳ ಅರಿತ ಜೀವ ನೀನು.ಕೋಟಿ ಜನ್ಮದಪುಣ್ಯದಂತೆ ಸಿಕ್ಕ,ನನ್ನ ಬಾಳಿನ ಬೆಳಕು ನೀನು.  ಇದ್ದು ಬಿಡು   ಜೊತೆಯಾಗಿ,ಕೊನೆಯವರೆಗೆಇರಲಿ ಈ ಪ್ರೀತಿಯ  ಭಾವ ಬಂಧನ.ನಿನ್ನೊಲವಿನ ಆಸರೆಯ ನೆರಳಲ್ಲೇ,ಸಾಗಲಿ ನನ್ನೀ ಜೀವನ.  ಉಷಾರಾಣಿ ಗುರುಪ್ರಸಾದ್

ಉಷಾರಾಣಿ ಗುರುಪ್ರಸಾದ್ ಕವಿತೆ “ಒಲವಿನಾಸರೆ” Read Post »

You cannot copy content of this page

Scroll to Top