ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

“ನಮಗ ಮಳೆ ಯಾಕ ಬೇಕು” ಡಾ.ಶಿವಕುಮಾರ್ ಮಾಲಿಪಾಟೀಲ

ಕಾವ್ಯ ಸಂಗಾತಿ ಡಾ.ಶಿವಕುಮಾರ್ ಮಾಲಿಪಾಟೀಲ “ನಮಗ ಮಳೆ ಯಾಕ ಬೇಕು” *ಫಲವತ್ತಾದ ಭೂಮಿ ರಿಯಲ್ ಎಸ್ಟೇಟ್ ಮಾಡಿವಿ**ಹೊಲ ಗದ್ದೆ ಮುಚ್ಚಿ ಬಂಗಲೆ ,ಬಾರ್ ಕಟ್ಟಿವಿ**ಕೆರೆ,ಬಾವಿ ಮುಚ್ಚಿ ಮೆಟ್ರೋಮಾಲ್ ಕಟ್ಟಿವಿ**ಇನ್ವೆಸ್ಟ್ ಕರ್ನಾಟಕ ಹೆಸರಲ್ಲಿ ಬಂಡವಾಳ ಶಾಹಿಗಳಿಗೆ  ಸಾವಿರಾರು ಎಕರೆ ಭೂಮಿ ಕೊಟ್ಟಿವಿ ಹಿಂಗಿದ್ದಾಗ**ನಮಗ ಮಳೆ ಯಾಕೆ ಬೇಕು?*  *ವಿಂಡ್ ಪ್ಯಾನ್ , ಸೋಲಾರ್*,*ರಿಯಲ್ ಎಸ್ಟೇಟ್ , ರೇಸಾಲ್ಟ್ ಫ್ಯಾಕ್ಟರಿಗಳ ಹೆಸರಲಿ ಹೊಲ ಬರಡು ಮಾಡಿವಿ**ಅಭಿವೃದ್ಧಿ ಹೆಸರಲ್ಲಿ ಸಿಕ್ಕ ಸಿಕ್ಕಂಗ ಗಿಡ ಮರಗಳ ಕಡದಿವಿ**ಹಿಂಗಿದ್ದಾಗ  ನಮಗ ಮಳೆ ಯಾಕೆ ಬೇಕು?* *ಹಳ್ಳಿ ಯಾರಿಗೆ ಬೇಕಾಗೈತಿ?**ಊರು ಗೌಡನಿಗೆ ನಗರದಲ್ಲಿ ಸೆಕ್ಯೂರಿಟಿ ಗಾರ್ಡ ನೌಕರಿ ಸಿಕ್ಕೈತಿ**ನಾಯಕರು ನೀರಾವರಿ ಇಲಾಖೆ ಬೇಡ ,  ನಗರಾಭಿವೃದ್ಧಿ ಇಲಾಖೆ ಬೇಕು ಅಂತಾರ ಹಿಂಗಿದ್ದಾಗ  ನಮಗ ಮಳೆ ಯಾಕ ಬೇಕು?* *ದನ ಕರು , ಹೈನದ ಚಿಂತಿಯಾಕ*,*ಹಾಲು ಮೊಸರು ತುಪ್ಪ  ಪ್ಯಾಕೇಜ್ ನಲ್ಲಿ ಸಿಗತೈತೆ**ಹಬ್ಬದಾಗ ಸೆಗಣಿ ಬೇಕೆಂದರೆ online ನಲ್ಲಿ ಸಿಗತೈತೆ**ಒಕ್ಕಲುತನ ಎಲ್ಲರಿಗೂ ಬ್ಯಾಡ ಆಗೈತೆ ಹಿಂಗಿದ್ದಾಗ  ನಮಗ ಮಳೆ ಯಾಕೆ ಬೇಕು?* *ಯೋಚಿಸುವುದಕ್ಕೆ AI ,ChatGPT ಐತೆ**ಕೆಲಸ ಮಾಡಾಕ Robots ಅದಾವು**ಬದುಕಲು ಸರಕಾರ ಉಚಿತ ಭಾಗ್ಯಗಳ ಕೊಟ್ಟೈತೆ*,*ಮಹಿಳೆಯರು ತಿರಿಗ್ಯಾಡಲು ಬಸ್ ಫ್ರೀ ಬಿಟ್ಟೈತೆ**ಅಡಿಗೆ ಮಾಡೋದೆ ಬೇಕಿಲ್ಲ , Zomato ,Swiggy ಹೊಟ್ಟೆ ತುಂಬಿಸಿ ಬಿಡತಾವು**ಹಿಂಗಿದ್ದಾಗ  ನಮಗ ಮಳೆ ಯಾಕ ಬೇಕು?* *ಕುಡಿಯಾಕ ನೀರು ಬೇಕೆಂದರೆ**ಖಗ್ರಾಸ ಹಳ್ಯಾಗು  ಬಾಟಲ್ ನೀರು ಸಿಗತೈತೆ**ನೀರ ಸಿಗದಿದ್ದರೂ ಬೀರಂತು ಸಿಕ್ಕ ಸಿಗತೈತೆ**ಸರಕಾರ ಮುಜರಾಯಿ , ಸರಾಯಿ ಹಣ ಮೇಲೆ ನೆಡಿತೈತೆ ಅಂದರೆ  ನಮಗ ಮಳೆ ಯಾಕ ಬೇಕು?* *ರೊಕ್ಕ ಬೇಕೆಂದರೆ ಪೊನ್ ಪೇ , ಗೂಗಲ್ ಪೇ ಐತೆ**ಟೈಮ್ ಪಾಸ್ ಮಾಡಾಕ* *WhatsApp ,FB , Instagram ಐತೆ ,reels ಮಾಡಿ ಬಿಡಾಕ social media ಐತೆ* *ಜನರು ಜಗಳಾಡಾಕ ಜಾತಿ ಧರ್ಮ ಅದಾವು**ಹಸಿರು , ಕೆಸರಿನಲ್ಲಿ ನಾಯಕರಿಗೆ ಅಧಿಕಾರ ಸಿಗತೈತೆ**ಬರಗಾಲ ಬಂದರೂ ಅನುದಾನ ಸಿಗತೈತೆ ಹಿಂಗಿದ್ದಾಗ  ನಮಗ ಮಳೆ ಯಾಕ ಬೇಕು?* ಡಾ.ಶಿವಕುಮಾರ್ ಮಾಲಿಪಾಟೀಲ 

“ನಮಗ ಮಳೆ ಯಾಕ ಬೇಕು” ಡಾ.ಶಿವಕುಮಾರ್ ಮಾಲಿಪಾಟೀಲ Read Post »

ಕಾವ್ಯಯಾನ

ಪರವಿನಬಾನು ಯಲಿಗಾರ “ನಮ್ಮ ಬದುಕೆಂಬ ಬಾನು”

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ “ನಮ್ಮ ಬದುಕೆಂಬ ಬಾನು” ಅಪ್ಪಾ ಹಗಲಿನ ಸೂರ್ಯನಂತೆ ,ಸಲಿಗೆ , ಸಾಮೀಪ್ಯ ಇರದ ,ಹತ್ತಿರ ಹೋಗಲು ಒಂದು ರೀತಿಯ ಭೀತಿ ,ಮಾತಿನಲ್ಲಿ ಬಿಗಿಯಾದ ಗತ್ತು , ಗಾಂಭೀರ್ಯ.ಒಮ್ಮೆ ತಣ್ಣಗಿನ ಮುಖ ಛಾಯೆ ,ಮರು ಘಳಿಗೆ ಕೆಂಡಾಮಂಡಲ ,ಆದರೂ ಅವನಿಲ್ಲದೆ ಬಾನು ಇಲ್ಲಬದುಕು ಇಲ್ಲ……. ಅವ್ವಾ ರಾತ್ರಿಯ ಚಂದಿರನಂತೆ ,ಸದಾ ಸುಸೂವ ಚಂದ್ರಿಕೆಯ ತಂಪು ,ಮಂದವಾಗಿ ಬೆಳಗುವಳು ನಿರಂತರ .ಎಂದೂ ಕುಪಿತಳಾಗದ ಹಸನ್ಮುಖಿ ,ಮಕ್ಕಳನು ಮುದ್ದಿಸಿ , ಬಾಚಿ ತಬ್ಬುವಳು ,ಅಪ್ಪಾ ಇದ್ದಾಗ ಅವಳಿಗೆ ಸ್ವತಂತ್ರ ಇಲ್ಲ……. ನಾವು ಮಕ್ಕಳು ಅವರಿಬ್ಬರ ಬೆಳಕಿನಲ್ಲಿನಲಿಯುವ ತಾರೆಗಳು.ಅಪ್ಪನ ಆಸರೆ ಹಗಲಿಗೆ ,ಅವ್ವನ ಆಸರೆ ಇರುಳಿಗೆ ,ಇಬ್ಬರು ಇದ್ದರೆ ಮಾತ್ರನಮ್ಮ ಅಸ್ತಿತ್ವ ಜೀವ ಕಳೆ …… ಬಾಳ ಬಾನಿನ ಸುಖಿ ಕುಟುಂಬನಮ್ಮದೇಂಬ ಹೆಮ್ಮೆ ನನ್ನದು…..                                    . ಪರವಿನಬಾನು ಯಲಿಗಾರ

ಪರವಿನಬಾನು ಯಲಿಗಾರ “ನಮ್ಮ ಬದುಕೆಂಬ ಬಾನು” Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಚಿತ್ರದುರ್ಗ “ಪ್ರೀತಿಯ ಬಾಹುಗಳು!ನದಿಗಳು”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ ಚಿತ್ರದುರ್ಗ “ಪ್ರೀತಿಯ ಬಾಹುಗಳು!ನದಿಗಳು” ತಮ್ಮ ಹರಿವಿನ ದಾರಿಯಲ್ಲಿ ಸಿಕ್ಕಪ್ರತಿಯೊಂದರ ದಾಹವನ್ನೂ ತಣಿಸುತ್ತಾಪ್ರತಿ ತೀರವನ್ನೂ ಸ್ಪರ್ಶಿಸುತ್ತಾಮುಂದೆ ಸಾಗುವವು ನದಿಗಳು!ತಮ್ಮ ನೀರ ತುಳಿದು ಆಡಿದವರಕುಡಿದು ಉಗಿದವರತೆಗೆದುಕೊಂಡು ಬಳಸಿಕೊಂಡವರ ಲೆಕ್ಕವಿಡುವುದಿಲ್ಲ! ನಾವು ನದಿಗಳ ಆಳವನ್ನು ಅರಿಯದೆಅವುಗಳ ಉದಾರತೆಯನ್ನೇ ಉದಾಸೀನ ಮಾಡಿಮಮತೆಯನ್ನೇ ಮೈಲಿಗೆ ಮಾಡಿದುರುಪಯೋಗಪಡಿಸಿಕೊಳ್ಳುತ್ತೇವೆ! ಒಂದು ಕಾಲದಲ್ಲಿಚೀರುತ್ತಾ ಹಾಡುತ್ತ ಹಾರುತ್ತ ಹರಿಯುತ್ತಿದ್ದ ನದಿಒಳಗೊಳಗೇ ಕುಸಿಯುತ್ತಾ ಕುದಿಯುತ್ತಾ ಕರಗುತ್ತಾಮೌನವಾಗಿಬಿಡುತ್ತದೆ! ಅತ್ಯಂತ ದಯೆಯುಳ್ಳ ಹೃದಯಗಳಿಗುದಣಿವು ಆಗುತ್ತದೆ!ಅದು ಅಸಹಾಯಕತೆ ಕೋಪದನಿರ್ಬಲತೆ ನಿರಾಸೆಯ ದಣಿವಲ್ಲ!ಯಾರನ್ನೂ ದ್ವೇಷಿಸದ ದಣಿವು!ಯಾರನ್ನು ಬೇಸರಿಸದ ದಣಿವು!ಯಾರನ್ನು ಹಚ್ಚಿಕೊಳ್ಳದ ದಣಿವು!ಯಾರನ್ನು ಅಪ್ಪಿಕೊಳ್ಳದ ದಣಿವು! ನದಿಗಳುಪ್ರೀತಿಯ ಬಾಹುಗಳು!ಮಮತೆಯ ಮಡಿಲುಗಳು!ಭೂಮಿಯ ಎದೆಯ ಮೇಲೆಹರಿದ ಕರುಣೆಯ ರೇಖೆಗಳು!ಬತ್ತಿದ ಕನಸುಗಳಿಗೆ ಜೀವ ತುಂಬುವಅಮೃತದ ಉಸಿರುಗಳು!ತಮ್ಮ ದಾಹ ಮರೆತುಇತರರ ಬದುಕು ಹಸಿರಾಗಿಸುವನಿಸ್ವಾರ್ಥ ಆತ್ಮಗಳು! ಟಿ.ಪಿ.ಉಮೇಶ್ ಚಿತ್ರದುರ್ಗ

ಟಿ.ಪಿ.ಉಮೇಶ್ ಚಿತ್ರದುರ್ಗ “ಪ್ರೀತಿಯ ಬಾಹುಗಳು!ನದಿಗಳು” Read Post »

ಕಾವ್ಯಯಾನ

ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ ” ಏಕೈಕ ಜೀವ, ನನ್ನಪ್ಪ”

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಏಕೈಕ ಜೀವ, ನನ್ನಪ್ಪ” Background ನಲ್ಲಿ ಅಳುವನಮ್ಮ ಮುಂದೆ ನಗುತ ಇರುವಏಕೈಕ ಜೀವ ಅದೇ ಅಪ್ಪ… ಆತನ ಬೆವರ ಹನಿ ಕಾಣ್ತದಆದ್ರ ಆತನ ಕಣ್ಣೀರ ಹನಿಯಾರಿಗೂ ಕಾಣದು… ತನ್ನವರ ಮೊಗದ ಮೇಲಿನನಗುವ ಕಂಡು ನಗುತಲಿರುವತನ್ನ ನೋವನೆಂದು ತೋರಿಸದವ… ಉಸಿರು ಕೊಟ್ಟ ಜೀವಕೆ ಹೆಸರುಕೊಟ್ಟ ಹೃದಯ ಅವನ ಹೆಸರೆಹೆಮ್ಮೆಯದು ಮಕ್ಕಳಿಗೆ… ಈ ಒಂದಿನ ಸಾಕೇನು ಮಾಡಲುಅಪ್ಪನ ಗುಣಗಾನ ಈ ಕಾಲ ಸಾಲದುಪಡೆಯಬೇಕು ಮರುಜನ್ಮಾನ… ಈ ಅಕ್ಷರಗಳಿಗೆ ಹೋಲಿಸಲಾಗದವನಮ್ಮ ಭಾವಕ್ಕೂ ನಿಲುಕದವಆಗಸದಗಲ ವಿಶಾಲ ಮನೋಭಾವದವ…. ನಗುವ ನಗಿಸುವ ಹೂವಿಗಿಂತಲೂಮೃದು ಮನದವ ಕೋಪಬಂದರಂತೂ ಕಾಲಭೈರವ… ಈ ಜಗದಲಿ ಅಪ್ಪನ ಮುಂದೆಸರಿಸಾಟಿ ಯಾರಿಲ್ಲವೊಅವ ನಮ್ಮ ಜೀವ ದೈವ…. ಕಲ್ಪನಾ ಎಸ್ ಪಾಟೀಲಕಾವ್ಯಧರೆ

ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ ” ಏಕೈಕ ಜೀವ, ನನ್ನಪ್ಪ” Read Post »

ಕಾವ್ಯಯಾನ

ರುತಿ(ರುದ್ರಮ್ಮ ಸಂ ಗಿಡ್ಡಪ್ಪಗೋಳ) ಕೊಲ್ಹಾರ ಅವರ ಕವಿತೆ “ನನ್ನೊಲವೇ….”

ಕಾವ್ಯ ಸಂಗಾತಿ ರುತಿ(ರುದ್ರಮ್ಮ ಸಂ ಗಿಡ್ಡಪ್ಪಗೋಳ) ಕೊಲ್ಹಾರ “ನನ್ನೊಲವೇ….” ನಿನ್ನ ಪ್ರೀತಿಯ ಹಂಸವೇ ನಾನುನಿನ್ನ ಮುಗುಳ್ನಗೆಯ ಬೆಳಕೇ ಚೆಂದನಮ್ಮ ಒಡನಾಟದ ಒಲವೇ ಅಂದ// ಎದೆಯ ಗೂಡಿನ ಉಸಿರೇ ನೀನುನಿನ್ನ ನೆರಳಲಿ ಬೆರೆತಿರುವೆ  ನಾನುಕಣ್ಣ ಸನ್ನೆಯ ಸವಿಯೇ ಹೊಸತುನಿನ್ನೋಲವ ಸುಖವೇ ಅಮೃತವು// ನನ್ನ ಬಾಳಿಗೆ ನೀನೇ ಬೆಳಕುನಿನ್ನ ಪ್ರೀತಿಯೇ ನನಗೆ ಬೆರಗುಕಾಲ ಕಳೆಯಲಿ ನಿನ್ನೊಡನೆ ನಡೆಯುತಜೀವ ಸಾಗಲಿ ನಿನ್ನನ್ನೇ ನಂಬುತ// ನೂರು ವಸಂತ ನಗುತಾ ಬಾಳುನನ್ನ ಪ್ರೀತಿಯ ಮುದ್ದಿನ ಜೇನುಹುಟ್ಟು ಹಬ್ಬದ ಶುಭಾಶಯಗಳುಕಣ್ಣಲ್ಲೇ ಮಾತನಾಡುವ ಜಾಣನಿಗೆ // ರುತಿ (ರುದ್ರಮ್ಮ ಸಂ ಗಿಡ್ಡಪ್ಪಗೋಳ) ಕೊಲ್ಹಾರ

ರುತಿ(ರುದ್ರಮ್ಮ ಸಂ ಗಿಡ್ಡಪ್ಪಗೋಳ) ಕೊಲ್ಹಾರ ಅವರ ಕವಿತೆ “ನನ್ನೊಲವೇ….” Read Post »

ಕಾವ್ಯಯಾನ

ಸವಿತ ಅವರ ಕವಿತೆ “ಮೊಬೈಲೆಂಬ ಮಾರಿ”

ಕಾವ್ಯ ಸಂಗಾತಿ ಸವಿತ “ಮೊಬೈಲೆಂಬ ಮಾರಿ” ಹಗುರವಾಗಲೆಂದು ಹೆಗಲೇರಿದ ಭಾರವನ್ನೆಲ್ಲ ನಾವಿಂದುಎ.ಆಯ್. ಬೆನ್ನ ಮೇಲೆ ಏರಿಸಿದ್ದೇವೆ . ಸಿಗಲಾರದ ಸುಖವನ್ನು ಆಧುನಿಕತೆಯ ಸೋಗಿನಲ್ಲಿ ನಾವು ನಮ್ಮಸೆರಗಿನಲ್ಲಿ ಕಟ್ಟಿಕೊಂಡಿದ್ದೇವೆ. ಸೆಣಸಾಡಿ ,ಗ್ರಹಣ ಹಿಡಿದ ಮನಸ್ಸನ್ನುಶೋಚನೀಯ ಸ್ಥಿತಿಯಲ್ಲಿ ಅದುಮಿಟ್ಟಿದ್ದೇವೆ. ದಿನದ ಕ್ಷಣ -ಕ್ಷಣಗಳನ್ನುಕಣ್ಣು ಕೆಂಪಾಗುವಂತೆ ಮೊಬೈಲ್ ಬಳಕೆಯಲ್ಲಿ ಬಳಸುತ್ತಿದ್ದೇವೆ. ದಣಿದಾಗಲೂ ಕಣ್ಣುಗಳಿಗೆ ಸಾಂತ್ವನ ಹೇಳದೆ ಇನ್ನೂಇನ್ನೂ ದುಡಿಸುತಿದ್ದೇವೆ. ಹೊಸ ವಿಷಯ, ಹೊಸ ಆಲೋಚನೆಗಳನ್ನು ಹೊಸ ಆಯಾಮದೊಳಗೆ ಪಡೆಯಲು ಸಂತೋಷವೇ!! ಆದರೆ….ಹಿಂದಿನ ಸಂಸ್ಕಾರ ಪರಂಪರೆಗಳನ್ನು ಸದ್ದಿಲ್ಲದೆ ಮಂಗಮಾಯ ಮಾಡುತ್ತಿದ್ದೇವೆ. ತಾಂತ್ರಿಕತೆ ಬೇಕು ಆಧುನಿಕತೆಯು ಬೆಳೆಯಲೇ ಬೇಕು ಆದರೆ ಇತಿಮಿತಿಗಳ ಲಕ್ಷ್ಮಣ ರೇಖೆಯೊಂದು ಇರಲೇಬೇಕು. ಬಾಲ ವೃದ್ಧಾದಿಗಳಿಂದ ಎಲ್ಲರೂ ತಮ್ಮ ಜೀವಿತದ ಸಮಯವನ್ನು ಈ ಒಂದು ಜಂಗಮ ವಾಹಿನಿಯಲ್ಲಿ ಕಳೆಯುತ್ತಿರುವುದಕ್ಕೆ ಆ ಭಗವಂತ ನಮ್ಮನ್ನು ಶಪಿಸುತ್ತಿರಬಹುದು. ದೇಹ ದಣಿಸು, ದುಡಿದು ತಿಂದು ಅಂತ್ಯವನ್ನು ಕಾಣಿರೆಂದು ಹುಟ್ಟಿಸಿದವನಿಗೆ ಈ ಮಾಯಾ ಜಗತ್ತು ಯಾಕಾದರೂ ಅಂಟಿಕೊಂಡಿದೆ ಅಂದುಕೊಳ್ಳುತ್ತಿರುವುದಂತುಮಹಾ ಸತ್ಯ ,ಸತ್ಯ !! ಸವಿತ

ಸವಿತ ಅವರ ಕವಿತೆ “ಮೊಬೈಲೆಂಬ ಮಾರಿ” Read Post »

ಕಾವ್ಯಯಾನ

ಅನ್ನಪೂರ್ಣ ಸು ಸಕ್ರೋಜಿ ಕವಿತೆ “ನನ್ನ ಅಪ್ಪ… ಮಕ್ಕಳ ಅಪ್ಪ… ಮೊಮ್ಮಕ್ಕಳ ಅಪ್ಪ…”

ಕಾವ್ಯ ಸಂಗಾತಿ ಅನ್ನಪೂರ್ಣ ಸು ಸಕ್ರೋಜಿ “ನನ್ನ ಅಪ್ಪ… ಮಕ್ಕಳ ಅಪ್ಪ… ಮೊಮ್ಮಕ್ಕಳ ಅಪ್ಪ…”   *ಒಂದೇ ಪ್ರೀತಿಯ ಪಯಣದ* *ಮೂರು ಸುಂದರ ಅಧ್ಯಾಯಗಳು* ನನ್ನ ಅಪ್ಪ,ನನ್ನ ಮಕ್ಕಳ ಅಪ್ಪ,ನನ್ನ ಮೊಮ್ಮಕ್ಕಳ ಅಪ್ಪ. ಸಂಸ್ಕಾರವಂತ ನನ್ನಪ್ಪ ಮೂಲ ಬೇರುಸದ್ಗುಣವಂತ ನನ್ನ ಮಕ್ಕಳ ಅಪ್ಪ ಗುರುಬುದ್ಧಿವಂತರು ಮೊಮ್ಮಕ್ಕಳ ಅಪ್ಪಂದಿರುಸೌಭಾಗ್ಯವಂತೆ ನಾ ಕಂಡ ಪುರುಷರು|| ಅಪ್ಪ ಸುಂದರ ಭವಿಷ್ಯಬೀಜ ಬಿತ್ತಿದರುಪತಿಯು ಕನಸುಗಳಿಗೆ ರೆಕ್ಕೆ ಕಟ್ಟಿದರುಮಗ ಅಳಿಯಂದಿರು ಸಾಕಾರಿಸಿದರುಪುಣ್ಯವಂತೆ  ನಾ ಕಂಡ ಪುರುಷರು|| ನನ್ನಪ್ಪ ನೀತಿ ತ್ಯಾಗದ ಮಹಾಸಾಗರ,ಮಕ್ಕಳ ಅಪ್ಪ ಸತ್ಯ ಪ್ರೀತಿಯ ಆಗರಮೊಮ್ಮಕ್ಕಳ ಅಪ್ಪ ಜ್ಞಾನದ ಭಂಡಾರಭಾಗ್ಯವಂತೆ ಜೀವನ ಆನಂದಸಾಗರ|| ಸಂಸಾರದ ರಥ ಎಳೆಯುವ ಸಾರಥಿಪತ್ನಿಯ ಪ್ರೀತಿ ವಿಶ್ವಾಸದ ಸಂಗಾತಿಕುಟುಂಬ ಜವಾಬ್ದಾರಿಯ ಸತ್ಯವೃತಿಅಪ್ಪನೆಂದರೆ ನಿಷ್ಕಾಮಕರ್ಮಯೋಗಿ|| ಗಂಭೀರತೆ, ಸಮಾನತೆ ಏಕತೆ ಪ್ರತೀಕಮಮತೆಯ ಮಹಾಕಾವ್ಯದ ಸಂಕೇತವ್ಯಕ್ತವಾಗದ ಪ್ರೀತಿಯ ಮೌನ ಆರಕ್ಷಕಸೂರ್ಯನಂತೆ ಬೆಳಕನೀವ ನಾಯಕ| ಈ ದಿನ ವಿಶ್ವ ಅಪ್ಪಂದಿರ ಶುಭದಿನಮನಃಪೂರ್ವಕ ಶುಭ ಕೋರುವೆನುನಾ ಕಂಡ ಕಾಣುತ್ತಿರುವ ಪ್ರೀತಿ ಪಯಣಸುಂದರ ಮೂರು ಅಧ್ಯಾಯಗಳನ್ನು||  ಅನ್ನಪೂರ್ಣ ಸು ಸಕ್ರೋಜಿ* *ಪುಣೆ*

ಅನ್ನಪೂರ್ಣ ಸು ಸಕ್ರೋಜಿ ಕವಿತೆ “ನನ್ನ ಅಪ್ಪ… ಮಕ್ಕಳ ಅಪ್ಪ… ಮೊಮ್ಮಕ್ಕಳ ಅಪ್ಪ…” Read Post »

ಕಾವ್ಯಯಾನ

ಹಮೀದ್‌ ಹಸನ್‌ ಮಾಡೂರು ಕವಿತೆ “ನಮ್ಮಪ್ಪ”

ಕಾವ್ಯ ಸಂಗಾತಿ ಹಮೀದ್‌ ಹಸನ್‌ ಮಾಡೂರು “ನಮ್ಮಪ್ಪ” ಬೆಳಿಗ್ಗೆ ಎದ್ದು—–ಮನೆ ಬಿಟ್ಟು ಓಡುವನಿಜ ಯಜಮಾನನೇ ನಮ್ಮಪ್ಪ,!! ದುಡಿದು ನಿತ್ಯವೂ….ದನಿದು ಮನೆಗೆ ಬರುವನಿಜ ಮನೆದೊಡೆಯ ನಮ್ಮಪ್ಪ,!! ಶ್ರಮದ ಬೆವರ ಸುರಿಸಿ….ಕಷ್ಟ ಪರಿಶ್ರಮ ನಿತ್ಯ ಸಹಿಸಿದನಿಜ ಕರ್ಮಯೋಗಿಯೆ ನಮ್ಮಪ್ಪ,!! ಕುಟುಂಬ ಸಂಸಾರ…ಹೆಗಲಿಗೇರಿಸಿ ಹೊರಲಾರದಹೊಣೆ ಹೊತ್ತ ಸಾಧು ನಮ್ಮಪ್ಪ,!! ತನಗಾಗಿ ಸೂನ್ಯ….ತನ್ನವರಿಗಾಗಿ ತಾನು ಧನ್ಯನೆಂದತ್ಯಾಗಮಯಿ ಆ ಮಾಣಿಕ್ಯ ನಮ್ಮಪ್ಪ,!! ವೃದ್ಧಾಪ್ಯದಲಿ ಎಂದೂ…ಮರೆಯದಿರೋಣ ಆ ಹೆತ್ತವರ“ಮುತ್ತು ಮಾಣಿಕ್ಯ” ಸಮ ಅಪ್ಪಂದಿರ.!! ಹಮೀದ್ ಹಸನ್ ಮಾಡೂರು

ಹಮೀದ್‌ ಹಸನ್‌ ಮಾಡೂರು ಕವಿತೆ “ನಮ್ಮಪ್ಪ” Read Post »

ಕಾವ್ಯಯಾನ

ಜಯಂತಿ ಕೆ.ವೈ. ಕವಿತೆ “ಅಪ್ಪನೆಂದರೆ….”

ಕಾವ್ಯ ಸಂಗಾತಿ ಜಯಂತಿ ಕೆ.ವೈ. “ಅಪ್ಪನೆಂದರೆ….” ಅಪ್ಪನೆಂಬೋ ಅಪ್ಪ ಅವನ ಕೊನೆಯುಸಿರು ಚೆಲ್ಲಿದಾಗನಾನು ಕೈಗೂಸು!ಆರು ದಶಕ ಮತ್ತೆರಡು ಸಂವತ್ಸರಗಳನ್ನು ಅಪ್ಪನಿಲ್ಲದೆ ಕಳೆದಿರುವ ನನಗೆ ಅವನ ಪ್ರೀತಿಯ ಸವಿರುಚಿ ಸಿಕ್ಕಿದ್ದುವರ್ಷ ವರ್ಷದ ಅವನ ಶ್ರಾದ್ಧಗಳಂದು ಮಾಡುವ ರವೆಯುಂಡೆ ಪಾಯಸಗಳಲ್ಲಿ ಅಪ್ಪನ ನೆನಪು ಕಾಡುವುದುಅಪ್ಪನ ಹೆಸರು ಲೇಟ್……ಎಂದು ಶಾಲೆ, ಕಾಲೇಜುಗಳಿಗೆ ಸೇರುವಾಗ ಭರ್ತಿಮಾಡುವ ಅರ್ಜಿಗಳಲ್ಲಿ!ಅಪ್ಪನೆಂದರೆ ಆಕಾಶವೇ? ಗೊತ್ತಿಲ್ಲ!ಅಪ್ಪನೆಂದರೆ ಶಾಪಗ್ರಸ್ತ ಗಂಧರ್ವನೇ? ತಿಳಿಯದು!ಅಪ್ಪನೆಂದರೆ …….ಅಮ್ಮನ ನೆನಪಕೋಶಗಳಿಂದಹೊರಹೊಮ್ಮಿದ ಭಾವ!ಆಗಾಗ ಮನೆಯಲ್ಲಿ ಆಡುವ ಮಾತುಗಳಲ್ಲಿ ಇಣುಕುವ ಹೆಮ್ಮೆಯ ಜೀವ!ಮತ್ತೆನನಗುಸಿರುಕೊಟ್ಟವನು!!ಅಪ್ಪನೆಂದರೆ…. ಅಪ್ಪನೆಂಬೋ ಅಪ್ಪ ಅವನ ಕೊನೆಯುಸಿರು ಚೆಲ್ಲಿದಾಗನಾನು ಕೈಗೂಸು!ಆರು ದಶಕ ಮತ್ತೆರಡು ಸಂವತ್ಸರಗಳನ್ನು ಅಪ್ಪನಿಲ್ಲದೆ ಕಳೆದಿರುವ ನನಗೆ ಅವನ ಪ್ರೀತಿಯ ಸವಿರುಚಿ ಸಿಕ್ಕಿದ್ದುವರ್ಷ ವರ್ಷದ ಅವನ ಶ್ರಾದ್ಧಗಳಂದು ಮಾಡುವ ರವೆಯುಂಡೆ ಪಾಯಸಗಳಲ್ಲಿ ಅಪ್ಪನ ನೆನಪು ಕಾಡುವುದುಅಪ್ಪನ ಹೆಸರು ಲೇಟ್……ಎಂದು ಶಾಲೆ, ಕಾಲೇಜುಗಳಿಗೆ ಸೇರುವಾಗ ಭರ್ತಿಮಾಡುವ ಅರ್ಜಿಗಳಲ್ಲಿ!ಅಪ್ಪನೆಂದರೆ ಆಕಾಶವೇ? ಗೊತ್ತಿಲ್ಲ!ಅಪ್ಪನೆಂದರೆ ಶಾಪಗ್ರಸ್ತ ಗಂಧರ್ವನೇ? ತಿಳಿಯದು!ಅಪ್ಪನೆಂದರೆ …….ಅಮ್ಮನ ನೆನಪಕೋಶಗಳಿಂದಹೊರಹೊಮ್ಮಿದ ಭಾವ!ಆಗಾಗ ಮನೆಯಲ್ಲಿ ಆಡುವ ಮಾತುಗಳಲ್ಲಿ ಇಣುಕುವ ಹೆಮ್ಮೆಯ ಜೀವ!ಮತ್ತೆನನಗುಸಿರುಕೊಟ್ಟವನು!! ಜಯಂತಿ ಕೆ ವೈ

ಜಯಂತಿ ಕೆ.ವೈ. ಕವಿತೆ “ಅಪ್ಪನೆಂದರೆ….” Read Post »

ಕಾವ್ಯಯಾನ

ಗಾಯತ್ರಿ ರವಿ. ಹುಬ್ಬಳ್ಳಿ ಅವರ ಕವಿತೆ “ಗಾಂಧಿ ನೋಟು”

ಕಾವ್ಯ ಸಂಗಾತಿ ಗಾಯತ್ರಿ ರವಿ. ಹುಬ್ಬಳ್ಳಿ “ಗಾಂಧಿ ನೋಟು”  ಕಚೇರಿಯ ಖಜಾನೆಯಲ್ಲಿ ಗಾಂಧಿ ನೋಟಿನದೇ ದರ್ಬಾರು ಹೊಸ ನೋಟುಗಳು  ಬಂದರೆನೋಟವೆಲ್ಲ ಅವನೆಡೆಗೆ ಸೂಸುವ ನೋಟಿನ ಸುವಾಸನೆ  ಒಂದೇ ದಾರದಲ್ಲಿ ನೂರರ ಕಟ್ಟು ಈಗಷ್ಟೇ  ಜನ್ಮತಳೆದ ಎದ್ದೇಳಲು  ಓಲಾಡುವ ಎಳೆಗರುವಿನ  ನೊಸಲು  ಲೆಕ್ಕ ಒಪ್ಪಿಸುವಾಗ ಹೆಚ್ಚಿಗೆ ಬಂದರೆ ತಪ್ಪಿದೆ ಅಂತಲೇ ಅರ್ಥ  ಕಡಿಮೆಯಾದರೆ ಮತ್ತೆ ಮತ್ತೆ ಎಣಿಸುವ ಯಂತ್ರದ ಬಾಯಿಂದ ಹೊರಗೆ ಬರುವ  ಅಲ್ಲಿಯೂ ಸರಿಯಾಗಲಿಲ್ಲವೆಂದರೆ ಕೈಯಿಂದ ಒಂದೊಂದೇ ನೋಟನ್ನು ಎತ್ತಿ ಎತ್ತಿ ಹಾಕುವುದು  ಒಂದೊಮ್ಮೆಹರಿದ ನೋಟಿಗೆ  ಹಾಳೆಯ ತುಂಡರಿಸಿ ಹದವಾಗಿ ಹಚ್ಚಿ ಆಪರೇಷನ್ ಮಾಡಿದ್ದುಉಂಟು ಎಂದೂ ಕಳೆಗುಂದದ ನಗು ಅವನದು  ಮಾಸಿದ ಕಪ್ಪಾದ ಇಟ್ಟಲ್ಲೇ ಇಟ್ಟು ಧೂಳು ತಿಂದ ಕಮಟು ವಾಸನೆಯ ಮಳೆಯಲ್ಲಿ ತೋಯಿದ ಬಣ್ಣ ವಾಡಿದ ಬೆವರಲಿ ಬೆಂದಬರಿ ಮೈ ಕುಬೇರ  ಕೌಂಟರಿನಿಂದ  ಖಜಾನೆಗೆ ಬರುವಷ್ಟರಲ್ಲಿ ನಾಲ್ಕಾರು ಬಾರಿ ಎಣಿಸಿಕೊಳ್ಳುವ  ಸ್ಥಿರವಾಗಿ ನಿಲ್ಲದ ಪಾದರಸ  ಗಾಂಧಿ ನೋಟುಗಳೆಂದರೆ ಬರಿ ಸಂಖ್ಯೆಗಳಲ್ಲ ನೋಟಿನ ನೋಟದಲ್ಲೂ ಗಾಂಧಿಯ ಸತ್ಯಾನ್ವೇಷಣೆ. ಗಾಯತ್ರಿ ರವಿ. ಹುಬ್ಬಳ್ಳಿ

ಗಾಯತ್ರಿ ರವಿ. ಹುಬ್ಬಳ್ಳಿ ಅವರ ಕವಿತೆ “ಗಾಂಧಿ ನೋಟು” Read Post »

You cannot copy content of this page

Scroll to Top