ಧಾರಾವಾಹಿ ಸಂಗಾತಿ-46 ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಬಭ್ರುವಾಹನ ಬಲದೆದುರು ಅನುಸಾಲ್ವನ ಆಕ್ರೋಶ ಯುದ್ಧರಥವನ್ನೇ ವಾಹನವನ್ನಾಗಿಸಿಕೊಂಡು ನನ್ನೆದುರಿನ ಕದನಕ್ಕೆ ಕೆರಳಿ ಕೆರಳುತ್ತಾ ಬಂದ ಬಭ್ರುವಾಹನ. ಅವನ ನೇತೃತ್ವದ ಚತುರ್ಬಲವದು ಸಮಸ್ತ ಭೂಮಿಯನ್ನು ವ್ಯಾಪಿಸಿದಂತೆ ತೋರುತ್ತಿತ್ತು. ಧ್ವಜ ಛತ್ರ ಚಾಮರಗಳು ದೇವಲೋಕವನ್ನೇ ಆವರಿಸಿಕೊಂಡAತೆ ಕಾಣುತ್ತಿದ್ದವು. ಎದ್ದ ಧೂಳು ಸೂರ್ಯಮಂಡಲವನ್ನು ಸೂರೆಗೊಂಡAತೆ ತೋರುತ್ತಿತ್ತು.ಈಗ ನನ್ನೆದುರಿಗೆ ಬಂದುನಿAತ ಬಭ್ರುವಾಹನ ದೊಡ್ಡ ಸೈನ್ಯವನ್ನೇ ಜೊತೆಗೂಡಿಸಿಕೊಂಡು ಬಂದಿದ್ದ. ಆನೆಗಳಿದ್ದವು ಕೋಟಿಯೆಣಿಕೆಯಲ್ಲಿ. ರಥಗಳ ಸಂಖ್ಯೆಯದು ಹತ್ತು ಕೋಟಿ. ಎರಡು ಕೋಟಿಗಳಷ್ಟು ಕುದುರೆಗಳು. ಸೈನಿಕರಿದ್ದರು ಮೂರು ಕೋಟಿಗಳಷ್ಟು. ಬ್ರಹ್ಮನ ಸೃಷ್ಟಿಯಲ್ಲಿಯೇ ಅದ್ಭುತವಿದು ಎನ್ನುವಂತೆ ಬಭ್ರುವಾಹನ ಪಡೆ ಗೋಚರಿಸುತ್ತಿದ್ದದ್ದಂತೂ ನಿಜ.ಚಿತ್ರಾಂಗದೆಯ ಮಗ ಕುಳಿತಿದ್ದ ಚಿತ್ರಾಲಂಕಾರಗಳಿAದ ಶೋಭಿಸುವ ರಥದಲ್ಲಿ. ಮಣಿಮಯವಾದ ತೇರಿನಲ್ಲಿ ಕುಳಿತಿದ್ದ ಮಣಿಪುರದ ಅರಸ.ಎರಡೂ ಕಡೆಯ ಸೈನಿಕರು ಯುದ್ಧಮುಖಿಗಳಾದರು. ಶತ್ರುಭಾವವನ್ನು ತೋರಿಸುತ್ತಾ ಯುದ್ಧ ಹೂಡಿದರು ಅತಿಶಯವಾಗಿ. ರಥದ ಗಾಲಿಗಳ ಸದ್ದು, ಕುದುರೆ- ಆನೆಗಳ ಕೂಗಿನ ಧ್ವನಿ, ಸೈನಿಕರ ಅಬ್ಬರದ ಬೊಬ್ಬೆ, ಯುದ್ಧವಾದ್ಯಗಳ ಘನರವ ಇವೆಲ್ಲವೂ ಸೇರಿಕೊಂಡು ಕರ್ಣಕಠೋರವೆನಿಸುವ ಶಬ್ದ ಹೊಮ್ಮತೊಡಗಿತು.ಬಭ್ರುವಾಹನನ ಬಿಲ್ಲಿನ ಠೇಂಕಾರವದು ಸಿಡಿಲ ಆರ್ಭಟದಂತೆ ಕೇಳಿಸಿತು. ಅವನ ಚಿನ್ನದ ರಥವದು ಹೊಳೆಯುತ್ತಿತ್ತು ಮಿಂಚಿನAತೆ. ಬಾಣಗಳ ಮಳೆಯನ್ನೇ ಸುರಿಸುತ್ತಾ ನನ್ನ ಸನಿಹಕ್ಕೆ ಬಂದ ಬಭ್ರುವಾಹನ. ತಂದೆಯೆAದು ಪ್ರೀತಿಯಿಂದ ನನ್ನ ಬಳಿಗೆ ಅವನು ಮಣಿದುಬಂದಾಗ ನಾನವನನ್ನು ಮಗನೆಂದು ಒಪ್ಪಿಕೊಳ್ಳಲಿಲ್ಲ ಎಂಬ ಆಕ್ರೋಶ ಕಾಣಿಸುತ್ತಿದ್ದದ್ದು ಅವನ ಕಣ್ಣುಗಳಲ್ಲಿ.“ತಂದೆಯೊಡನೆ ಯುದ್ಧ ಬೇಡವೆಂದು ನಾನು ಒಲವಿನಿಂದ ನಿನ್ನ ಬಳಿಗೆ ಬಂದು ಪಾದಕ್ಕೆ ಎರಗಿದೆ. ಆದರೆ ನೀನು ನನ್ನನ್ನು ನಿಂದಿಸಿದೆ ಹೀನಾಯವಾಗಿ. ಏನೇ ಆದರೂ ನಿನ್ನನ್ನು ನಾನು ಜಯಿಸದೇ ಹೋದರೆ ನಾನು ನಿನ್ನ ಮಗನೇ ಅಲ್ಲ” ಎಂದು ಘರ್ಜಿಸಿದ.ಅಂದರೆ, ಅವನಿಗೆ ಯುದ್ಧ ಬೇಕಾಗಿದ್ದದ್ದು ನನ್ನ ಮಗ ಎನ್ನುವುದನ್ನು ಸಾಬೀತುಪಡಿಸಲಿಕ್ಕಾಗಿ. ಅವನು ಕದನದ ಗೆಲುವನ್ನು ಬಯಸುತ್ತಿದ್ದದ್ದು ನಾನವನ ತಂದೆ ಎನ್ನುವುದನ್ನು ರುಜುವಾತುಪಡಿಸಿಕೊಳ್ಳುವುದಕ್ಕಾಗಿ. ಈ ಯುದ್ಧ ಎನ್ನುವುದು ತನಗೆ ಅರ್ಜುನನ ಮಗ ಎಂಬ ಗುರುತಿಸುವಿಕೆಯೊಂದನ್ನು ತಂದುಕೊಡಲಿ ಎಂಬ ಭಾವ ಅವನಲ್ಲಿ ಬಲವಾಗಿದ್ದಂತೆ ತೋರಿತು. ಏನೆಂದರೂ ಅದಕ್ಕೆ ಅವಕಾಶ ಕೊಡಲಾರೆ ಎಂಬ ಹಠ ಮೂಡಿತು ನನ್ನಲ್ಲಿ.ಅಷ್ಟರಲ್ಲಿಯೇ ಬಭ್ರುವಾಹನನನ್ನು ಎದುರುಹಾಕಿಕೊಳ್ಳುವ ದಿಟ್ಟತನವನ್ನು ತೋರಿಸಿದ ಅನುಸಾಲ್ವ. “ಸತ್ತವರ ಪಂಥ ಇದಲ್ಲವೆಂದು ನಿರೂಪಿಸಲು ನೀನು ವೃಥಾ ಪುರುಷಾರ್ಥವನ್ನು ತೋರಿಸುತ್ತಿರುವಂತಿದೆ. ನಿನ್ನ ಪೌರುಷಕ್ಕೆ ಅಂಜುವವನು ನಾನಲ್ಲ. ನಿನ್ನೊಡನೆ ಹೋರಾಡಿದರೆ ಎದುರಾಗುವ ಅಪಕೀರ್ತಿಗೆ ಅಳುಕುವವನು ನಾನಲ್ಲ. ತಂದೆಯನ್ನೇ ಹೀಯಾಳಿಸುವ ಧೂರ್ತ ನೀನು” ಎಂದು ನಸುನಗೆಯಿಂದಲೇ ಖಾರನುಡಿಯನ್ನಾಡಿದ ಅನುಸಾಲ್ವ.ಒಂಭತ್ತು ಬಾಣಗಳು ಒಮ್ಮೆಲೇ ಚಿಮ್ಮಿದವು ಬಭ್ರುವಾಹನನೆಡೆಗೆ, ಅನುಸಾಲ್ವನ ಕಡೆಯಿಂದ. ಪ್ರತ್ಯುತ್ತರವಾಗಿ ನೂರು ಬಾಣಗಳನ್ನು ಸಿಡಿಸಿದ ಬಭ್ರುವಾಹನ. ಬಾಣಗಳು ಚಿಮ್ಮುತ್ತಲೇ ಹೋದವು. ಅಂತೆಯೇ ಚಿಮ್ಮಿತು ಕೆನ್ನೆತ್ತರು ಇಬ್ಬರ ಶರೀರದಿಂದಲೂ. ದೇಹದ ಅಲ್ಲಲ್ಲಿ ಗಾಯ. ಬಾಣಗಳು ಇಬ್ಬರ ಶರೀರದ ಒಳಹೋಗಿದ್ದವು. ಬಿಲ್ಲು ಬಾಣಗಳ ಪ್ರಯೋಗದಲ್ಲಿ, ಪರಾಕ್ರಮದ ಪ್ರದರ್ಶನದಲ್ಲಿ ಸಮನಾರಿಲ್ಲ ತಮಗೆ ಎಂಬAತೆ ಹೋರಾಡಿದರು ಅವರಿಬ್ಬರು.ತನಗೆ ಸಮನಾಗಿ ಸಾಹಸ ತೋರುವ ಬಭ್ರುವಾಹನನ ರೀತಿಯದು ಕ್ರೋಧ ಹುಟ್ಟಿಸಿತು ಅನುಸಾಲ್ವನಿಗೆ. ಏಳು ಬಾಣಗಳಿಂದ ಬಭ್ರುವಾಹನನ ಬತ್ತಳಿಕೆಯನ್ನು ನಾಶಮಾಡಿದ. ಎಂಟನೆಯ ಬಾಣದ ಏಟಿಗೆ ಅವನ ಧ್ವಜ ಹರಿದುಹೋಯಿತು. ಇನ್ನೊಂದು ಬಾಣದಿಂದ ಅವನ ಬಿಲ್ಲನ್ನೇ ಪುಡಿಗಟ್ಟಿದ. ಬಭ್ರುವಾಹನ ಆಘಾತಕ್ಕೆ ಒಳಗಾದವನಂತೆ ನೋಡುತ್ತಿದ್ದಾಗಲೇ ಅವನ ಕವಚವನ್ನು ಸೀಳಿ ಕೆಳಕ್ಕೆ ಬೀಳಿಸಿತು ಅನುಸಾಲ್ವ ಪ್ರಯೋಗಿತ ಅಮೋಘ ಬಾಣ. ಸಾವಿರ ಬಾಣಗಳನ್ನು ಒಂದೇ ಸಲಕ್ಕೆ ಚಿಮ್ಮಿಸಿದ ಅನುಸಾಲ್ವ. ಬಭ್ರುವಾಹನನ ರಥದ ಕುದುರೆಗಳು ಪ್ರಾಣ ಕಳೆದುಕೊಂಡವು. ರಥ ಛಿದ್ರವಾಯಿತು. ಸಾರಥಿ ಸಾವನ್ನಪ್ಪಿದ.ಅನುಸಾಲ್ವನ ಅಮಿತ ಸಾಮರ್ಥ್ಯ ನನಗೆ ಮೆಚ್ಚುಗೆಯಾಯಿತು. ಇನ್ನೇನು ಬಭ್ರುವಾಹನನೂ ಪ್ರಾಣ ಕಳೆದುಕೊಳ್ಳುತ್ತಾನೆ ಎಂದುಕೊAಡೆ.ಆದರೆ ಬಡಪೆಟ್ಟಿಗೆ ಬಸವಳಿಯುವವನಾಗಿರಲಿಲ್ಲ ಮಣಿಪುರದ ಒಡೆಯ. ತಕ್ಷಣವೇ ಇನ್ನೊಂದು ರಥವನ್ನು ಏರಿನಿಂತ. ತನ್ನ ರಥವನ್ನು ಪುಡಿಗಟ್ಟಿದ್ದ ಅನುಸಾಲ್ವನ ರಥವನ್ನೇ ಇನ್ನಿಲ್ಲವಾಗಿಸಿದ.ರಥವಿಲ್ಲದವನಾದ ಅನುಸಾಲ್ವ ಈಗ ಬಭ್ರುವಾಹನನ ಮೇಲೆ ಬಾಣ ಪ್ರಯೋಗಿಸುವುದು ಕಷ್ಟವಿತ್ತು. ತಕ್ಷಣವೇ ಅನುಸಾಲ್ವ ಕೈಗೆತ್ತಿಕೊಂಡದ್ದು ದೈತ್ಯ ಗದೆಯನ್ನು. ಬಭ್ರುವಾಹನನ ಕಡೆಗೆ ಮುನ್ನುಗ್ಗಿಹೋದ. ಇನ್ನೇನು ಅಪ್ಪಳಿಸಿಯೇ ಬಿಡುತ್ತಾನೆ ಅನುಸಾಲ್ವ ಆ ವಿಸ್ತೃತ ಗದೆಯನ್ನು ಬಭ್ರುವಾಹನನ ಮುಖದ ಮೇಲೆ ಎಂದು ತೋರಿತು ನನಗೆ. ಆ ಬಗೆಯಲ್ಲಿತ್ತು ಅನುಸಾಲ್ವನ ಆಕ್ರೋಶ.ಬಭ್ರುವಾಹನ ಬಾಣಗಳನ್ನು ಸತತವಾಗಿ ಪ್ರಯೋಗಿಸಿದ. ಅವನ ಗುರಿ ತಪ್ಪಲಿಲ್ಲ. ಬಾಣಗಳೆಲ್ಲವೂ ಅನುಸಾಲ್ವನ ಶರೀರಕ್ಕೆ ಆಳವಾದ ಆಘಾತವನ್ನು ಉಂಟುಮಾಡಿದವು. ಅನುಸಾಲ್ವ ಅತೀವ ಆಯಾಸಕ್ಕೆ ಒಳಗಾದಂತೆ ಕಂಡುಬAದ. ಅವನ ದೇಹಶಕ್ತಿ ಅಳಿದುಹೋಗಿತ್ತು. ನೋಡನೋಡುತ್ತಲೇ ನೆಲದ ಮೇಲೆ ಬಿದ್ದ ಅನುಸಾಲ್ವ. ಅವನೀಗ ಪ್ರಜ್ಞೆ ಕಳೆದುಕೊಂಡಿದ್ದ.ಆ ಕ್ಷಣದಲ್ಲಿ ಬಭ್ರುವಾಹನನನ್ನು ಸಮರ್ಥವಾಗಿ ಎದುರಿಸುವವರೊಬ್ಬರು ಬೇಕಿತ್ತು. ಯಾರವರು ನನ್ನ ಕಡೆಯವರು, ಬಭ್ರುವಾಹನನ ಶೌರ್ಯವನ್ನು ಮೆಟ್ಟಿ ನಿಲ್ಲುವವರು ಎಂದು ಸುತ್ತಮುತ್ತ ಕಣ್ಣಾಡಿಸತೊಡಗಿದೆ ನಾನು. ಅಷ್ಟರಲ್ಲಿಯೇ ಶ್ರೀಕೃಷ್ಣಸುತ ಪ್ರದ್ಯುಮ್ನ ಬಭ್ರುವಾಹನನ ಎದುರು ಹೋಗಿ ನಿಂತಾಗಿತ್ತು. ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಕೌಸಲ್ಯಾಸುತನನ್ನೇ ಕರೆಸಿಕೊಂಡಿತು ಕದನಲತೆ; ಲವಕುಶರ ಕುಶಲತೆ ಭರತ ಮೂರ್ಛೆ ಹೊಂದಿದನೆಂಬ ಭಾರದ, ಸಂತಸವನ್ನು ತರದ ಸುದ್ದಿ ಶ್ರೀರಾಮನನ್ನು ಬಂದು ತಲುಪಿದಾಗ ಸಹಿಸದಂತಾಯಿತು ಅವನಿಗೆ. ಸಹೋದರರ ಸ್ಥಿತಿ ನೋವು ಮೂಡಿಸಿತು.ಸುಗ್ರೀವ, ವಿಭೀಷಣರ ಜೊತೆಗೆ ಯುದ್ಧರಂಗಕ್ಕೆ ಬಂದ, ಕುಶ ಲವರನ್ನು ಕಾಣಲು. ಮಡಿದ ಸೇನೆಯದು ಬಿದ್ದಿತು ರಾಮದೃಷ್ಟಿಗೆ. ಬೇನೆಯದು ಎದ್ದಿತು ರಾಮಹೃದಯದಲ್ಲಿ, ಮೈಮರೆತಿದ್ದ ಸಹೋದರರನ್ನು ಕಂಡಾಗ. ಬಿಲ್ಲು ಬಾಣ ಹಿಡಿದು ನಿಂತ ಲವ ಕುಶರ ಪರಿ ಸೋಜಿಗ ಹುಟ್ಟಿಸಿತು ಅವನಲ್ಲಿ. ಪುಳಕ ಹುಟ್ಟಿಸುವ ಪೋರರ ವೀರ ನಿಲುವನ್ನು ಕಂಡೊಡನೆಯೇ ರಾಮಧ್ವನಿ ಮೊಳಗಿತು ಮನೋಹರವಾಗಿ.“ಮಕ್ಕಳು ನೀವು. ನಿಮಗೆ ಬಿಲ್ವಿದ್ಯೆಯನ್ನು ಕಲಿಸಿದವರು ಯಾರು? ನಿಮ್ಮ ಮನೆಯದು ಇರುವುದೆಲ್ಲಿ? ತಂದೆ ಯಾರು? ಯಾರು ತಾಯಿ? ಕುದುರೆಯನ್ನು ಕಟ್ಟಿ ಕದನಕ್ಕಿಳಿಯುವ ಛಲವದು ನಿಮಗೇತಕೆ? ಸಂಪೂರ್ಣ ಸೇನೆಯನ್ನು ಜಯಿಸುವ ಶಕ್ತಿ ಬಂದದ್ದೆಲ್ಲಿಂದ?”ರಾಮನ ಪ್ರಶ್ನೆ ಬಾಣಗಳು ಮೃದುವಾಗಿ ಸೋಕಿದವು ಅವಳಿಗಳ ಮುದ್ದು ದೇಹವನ್ನು. ಕುದುರೆಯನ್ನು ಬಿಡಿಸಿಕೊಳ್ಳುವುದಕ್ಕೆಂದು ಬಂದವನು ಕದನಕ್ಕಿಳಿಯದೆ ಇಲ್ಲಸಲ್ಲದ ಮಾತುಕತೆಯೆಡೆಗೆ ಆಸಕ್ತಿ ತೋರುತ್ತಿದ್ದಾನಲ್ಲಾ! ಎನಿಸಿತು ಅವರಿಗೆ. ಕ್ಷಾತ್ರಪೌರುಷ ತೋರದೆ ಬರಿದು ಮಾತಿನಲ್ಲಿ ಏನಾಗುತ್ತದೆ ಸಾಧನೆ! ಎಂಬ ಭಾವನೆ ಮೂಡಿತು ಅವರಲ್ಲಿ.ಅದನ್ನೇ ಹೇಳಿದರು ರಘುಕುಲತಿಲಕನಿಗೆ; ತಮ್ಮ ಜನಕನಿಗೆ. “ಯುದ್ಧ ಮಾಡಿ ನೋಡು ನಮ್ಮ ಶೌರ್ಯವನ್ನು” ಎಂದರು ವೀರಭಾವದಿಂದ. ಶಿಶುಗಳಾಗಿರುವ ಅವರಲ್ಲಿ ಅದಾವ ಕದನ ಎಂದುಕೊಂಡ ಕೌಸಲ್ಯಾಸುತ. ಮತ್ತೆ ಕೇಳಿದ ಅವರ ಜನನಸ್ಥಿತಿಯನ್ನು.“ಈ ತಪೋವನದಲ್ಲಿ ನಮ್ಮಿಬ್ಬರನ್ನೂ ಅವಳಿ ಮಕ್ಕಳಾಗಿ ಪಡೆದವಳು ಸೀತೆ. ನಮ್ಮ ಜನನದಿಂದ ತೊಡಗಿ ಬಗೆಬಗೆಯ ಸಂಸ್ಕಾರಗಳನ್ನು ಒದಗಿಸಿಕೊಟ್ಟು, ವಿದ್ಯಾಭ್ಯಾಸವನ್ನು ಮಾಡಿಸಿ, ಶಸ್ತಾçಭ್ಯಾಸವನ್ನು ಕೊಡಿಸಿ, ನಮ್ಮನ್ನು ಬಲಯುತರಾಗಿಸಿದವರು ವಾಲ್ಮೀಕಿ ಮುನಿಗಳು” ಎಂಬ ನುಡಿ ಹೊರಬಂತು ಅವಳಿಗಳಿಂದ.ರಾಮನೊಡಲನ್ನು ಕೆಡಹುವ ಸಿಡಿನುಡಿಯಾಯಿತು ಕುಶಲವರಾಡಿದ ಆ ಸಹಜ ನುಡಿ. ‘ಸೀತೆ’ ಎಂಬ ಶಬ್ದವದು ರಾಮಕರ್ಣಗಳಿಗೆ ಕಠೋರವೆನಿಸಿತು. ರಾಮಹೃದಯವು ಸಹಿಸದಾಯಿತು ಭೂಮಿಜಾತೆಯ ಹೆಸರಿನ ಭಾರವನ್ನು. ರಾಮತ್ರಾಣವದು ಅಳಿದುಹೋಗಲು ‘ಸೀತೆ’ ಎಂಬ ನುಡಿಬಾಣವಷ್ಟೇ ಸಾಕಾಯಿತು. ಮೂರ್ಛೆಹೋದ ಶ್ರೀರಾಮ. ಮತ್ತೆ ಎಚ್ಚೆತ್ತ. ಕುಶಲವರ ಮಾತು ಅನುರಣಿಸಿತು ಕಿವಿಯಲ್ಲಿ. ಸೀತೆಯ ಮಕ್ಕಳು ತಾವು ಎಂಬ ಅವರ ಮಾತದು ನಿಜವೋ ಅಲ್ಲವೋ ಎಂಬ ಸಂಶಯ ಮೂಡಿತು. ತಾನು ತಪ್ಪಾಗಿ ಕೇಳಿಸಿಕೊಂಡೆನೇ ಎಂಬ ಸಂದೇಹ ಕಾಡಿತು. ಮತ್ತೊಮ್ಮೆ ಬಾಲಕರಲ್ಲಿ ಕೇಳುವಂತೆ ಹೇಳಿದ, ಬಳಿಯಿದ್ದ ಸುಗ್ರೀವನಲ್ಲಿ.ಅದಕ್ಕೆ ಸುಗ್ರೀವ ನಸುನಗುತ್ತಾ, “ನಿನ್ನ ರೂಪವನ್ನೇ ಹೊತ್ತ ಇವರು ನಿನ್ನ ಮಕ್ಕಳಲ್ಲದೇ ಇರಲು ಸಾಧ್ಯವಿಲ್ಲ. ನಿನ್ನ ತನುಜರಲ್ಲದಿದ್ದರೆ ಈ ಬಗೆಯ ಸತ್ವ ಇವರಲ್ಲಿ ಇರುತ್ತಿತ್ತೇ?!” ಎಂದ.ಆಗಲೇ ವಾನರ ಸೈನ್ಯವದು ಕುಶ ಲವರನ್ನು ಮುತ್ತಿತು. ಘೋರ ಕದನ ನಡೆಯಿತು. ಮಕ್ಕಳನ್ನು ಮತ್ತೆ ಮಾತನಾಡಿಸುವ ಪುರುಸೊತ್ತು ಸಿಗಲಿಲ್ಲ ಪುರುಷೋತ್ತಮನಿಗೆ. ಅವಳಿಗಳ ಬಾಣಾವಳಿಯ ಘಾತಕ್ಕೆ ತತ್ತರಿಸಿಹೋಯಿತು ರಾಮಸೈನ್ಯ.ತನ್ನವರೆಲ್ಲರೂ ನೆಲವನ್ನಪ್ಪಿರುವ ಆ ಸಮಯದಲ್ಲಿ ಏಕಾಂಗಿತನದ ಭಾವ ರಾಮನನ್ನು ಆವರಿಸಿತು. ಸೀತಾಸುತರ ವಿರುದ್ಧದ ಕದನಕ್ಕೆ ಮನಸ್ಸು ಮಾಡಿದ ಕೌಸಲ್ಯಾಸುತ. ತಂದೆ ಮಕ್ಕಳ ಕದನ ನೋಡಲು ಕಣ್ದೆರೆಯಿತು ಕದನರಂಗ. ರಾಮಬಾಣವದು ಗಮ್ಯವನ್ನು ಅರಸಿ ಹೊರಟಿತು. ರಾವಣ ಕುಂಭಕರ್ಣರ ಶಿರಗಳನ್ನು ಕತ್ತರಿಸಿಹಾಕಿದ ಶರಗಳನ್ನೇ ಪ್ರಯೋಗಿಸಿದ್ದ ಶ್ರೀರಾಮ. ಎರಡು ಭಾಗವಾಗಿ ನೆಲದಲ್ಲಿ ಬಿದ್ದದ್ದನ್ನು ಕಂಡು ವಿಸ್ಮಿತನಾದ.ಹಾಗೆ ಚಕಿತ ಭಾವದಲ್ಲಿ ರಾಮಚಿತ್ತ ಇದ್ದ ಸಮಯದಲ್ಲಿಯೇ ಕುಶ ಲವರ ಕರದಿಂದ ಸಿಡಿದೆದ್ದ ಬಾಣ ಬಂದಿತು ರಾಮನೆಡೆಗೆ. ಹೊಕ್ಕಿತು ಅವನ ದೇಹವನ್ನು. ಮಕ್ಕಳ ಬಗ್ಗೆ ಅಕ್ಕರೆ ಅವನಿಗಿದೆಯೋ ಇಲ್ಲವೋ ಎನ್ನುವುದನ್ನು ಒಳಹೊಕ್ಕು ನೋಡುವಂತೆ ರಾಮಶರೀರದ ಒಳಗೆ ಪ್ರವೇಶಿಸಿತ್ತು ಆ ಶರ. ರಾಮಪ್ರಜ್ಞೆ ರೂಪುಗಳೆದುಕೊಂಡಿತು. ಮೂರ್ಛೆತಪ್ಪಿದ ಶ್ರೀರಾಮ.ಬಳಿಗೆ ಬಂದ ಲವ ಕುಶರು ಶ್ರೀರಾಮ, ಲಕ್ಷö್ಮಣ, ಭರತ, ಶತ್ರುಘ್ನರ ವಸ್ತç, ಆಭರಣಗಳನ್ನು ಗಂಟುಕಟ್ಟಿದರು ಬಟ್ಟೆಯೊಂದರಲ್ಲಿ. ಯುದ್ಧದಲ್ಲಿ ಹೋರಾಡಿಯೂ ಎಚ್ಚರ ಇದ್ದ ಹನುಮಂತ ಜಾಂಬವAತರ ತಲೆಗೂದಲನ್ನು ಹಿಡಿದೆಳೆದುಕೊಂಡು ತಾಯಿಯ ಬಳಿಗೆ ಹೊರಟರು.ಭೀತಿ ಹುಟ್ಟಿಸುವ ರೀತಿಯಲ್ಲಿ ಬಂದುನಿAತ ಮಕ್ಕಳನ್ನು ಕಂಡು ಅಳುಕಿದಳು ಸೀತೆ. ಹನುಮಂತ ಜಾಂಬವAತರನ್ನು ಯುದ್ಧರಂಗದಲ್ಲಿಯೇ ಬಿಟ್ಟುಬರುವಂತೆ ಹೇಳಿದಳು. ಮಕ್ಕಳು ಅಂತೆಯೇ ಮಾಡಿ ಮರಳಿದರು.ಅದೇ ಸಮಯಕ್ಕೆ, ನಾರದರಿಂದ ಸಂಪೂರ್ಣ ವಿಷಯ ತಿಳಿದುಕೊಂಡ ವಾಲ್ಮೀಕಿ ಮಹರ್ಷಿ ಮರಳಿದ್ದರು ಆಶ್ರಮಕ್ಕೆ. ರಣರಂಗಕ್ಕೆ ಹೋದರು. ರಾಮಚಂದ್ರಾದಿಗಳನ್ನು ಕಂಡರು. ಉಪಚರಿಸಿದರು. ತಪ್ಪಿದ್ದರೆ ಕ್ಷಮಿಸಬೇಕು ಎಂದರು.ತನ್ನಿಂದ ಕಾಡುಪಾಲಾದ ಸೀತೆ ವಾಲ್ಮೀಕಿ ಮುನಿಗಳ ಆಶ್ರಮದಲ್ಲಿ ಮಕ್ಕಳಿಗೆ ಜನ್ಮವಿತ್ತ ವಿಚಾರ ಪೂರ್ಣವಾಗಿ ತಿಳಿಯಿತು ರಾವಣಾಂತಕನಿಗೆ. ಮಕ್ಕಳನ್ನು ಅಪ್ಪಿಕೊಂಡ. ಅವರು ಶ್ರೀರಾಮನ ಕಾಲಿಗೆರಗಿ ಕ್ಷಮೆ ಕೇಳಿದರು. ರಾಮಾಯಣವನ್ನು ಹಾಡಿ ತೋರಿಸಿದರು ಶ್ರೀರಾಮನಿಗೆ. ಕುಶ ಲವರನ್ನು ರಘುಕುಲತಿಲಕನ ಜೊತೆಗೆ ಅಯೋಧ್ಯೆಗೆ ಕಳುಹಿಸಿಕೊಟ್ಟರು ವಾಲ್ಮೀಕಿ ಮಹರ್ಷಿ.ಆಶ್ರಮಕ್ಕೆ ಮರಳಿದಾಗ ಅವರಿಗೆದುರಾದದ್ದು ಸೀತೆಯ ಸವಾಲು. “ಮಕ್ಕಳ ಒಡನಾಟದಲ್ಲಿ ಪತಿಯ ವಿರಹವನ್ನು ಮರೆತು ಬದುಕುತ್ತಿದ್ದವಳು ನಾನು. ಈಗ ಅವರನ್ನು ತೊರೆದು ಹೇಗಿರಲಿ?” ಎಂದು ಮುನಿಗಳ ಕಾಲಿಗೆ ಬಿದ್ದಳು.ಕರುಣೆಯುಕ್ಕಿತು ಮುನಿಗಳಲ್ಲಿ. “ನಿನ್ನ ಮಕ್ಕಳನ್ನು ಕರೆದೊಯ್ದವನು ನಿನ್ನ ಪತಿ. ನಿನ್ನನ್ನೂ ಆ ಶ್ರೀರಾಮನ ಬಳಿಗೆ ಬಿಟ್ಟುಬರುತ್ತೇನೆ” ಎಂದವರು ಅವಳನ್ನು ಕರೆದೊಯ್ದರು ಅಯೋಧ್ಯೆಗೆ. ಸೀತೆಯ ಚಿತ್ತವದು ಕೂಡಿತು ಶ್ರೀರಾಮ ಹೃದಯವನ್ನು.ಶ್ರೀರಾಮ ಕದನವದು ಕುಶ ಲವರ ಜೊತೆಗೆ ನಡೆದ ರಾಮ ಕಥಾನಕ ನನ್ನ ಮೆದುಳಿನಲ್ಲಿ ಮೆಲುದನಿಯನ್ನು ಎಬ್ಬಿಸುತ್ತಿದ್ದ ಆ ಸಮಯದಲ್ಲಿಯೇ ಕೇಳಿಬಂತದೋ ಯುದ್ಧನಾದ. ನನ್ನಿಂದ ಅವಮಾನಿತನಾಗಿ ಹೋಗಿದ್ದ ಆ ಬಭ್ರುವಾಹನ ಈಗ ಯುದ್ಧಸಿದ್ಧತೆಯನ್ನು ಪೂರೈಸಿಯಾಗಿತ್ತು. ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-44 ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಭರತ ಭೂಮಿಗೆ ಬಿದ್ದ ಅಯೋಧ್ಯೆಯಲ್ಲಿ ದೀಕ್ಷಾಬದ್ಧನಾಗಿದ್ದ ರಾಮನಿಗೆ ಚಿಂತೆ ಕಾಡತೊಡಗಿತು. ರಥದಿಂದ ಬಿದ್ದಿದ್ದ ಶತ್ರುಘ್ನನಿಗೆ ಏನಾಗಿದೆ ಎನ್ನುವ ಸಂದೇಶ ಆ ಬಳಿಕ ಅವನನ್ನು ತಲುಪಿರಲಿಲ್ಲ. ಯುದ್ಧಕ್ಕೆ ನಿಂತವರು ಕುಶ ಲವ ಎಂಬ ಬಾಲಕರು ಎನ್ನುವುದೀಗ ಅವನಿಗೆ ತಿಳಿದಿತ್ತು. ಯುದ್ಧಕ್ಕೆ ಅಗಾಧ ಸೇನೆ ಕಟ್ಟಿಕೊಂಡು ಹೋಗಿದ್ದ ಲಕ್ಷö್ಮಣ ಆ ಬಾಲಕರನ್ನು ಸೆರೆಹಿಡಿದನೋ? ಕೊಂದನೋ? ಯುದ್ಧದಲ್ಲಿ ಅವನಿಗೆ ಶ್ರಮವಾಯಿತೋ? ಗೆದ್ದನೋ? ಸೋತನೋ? ಕುದುರೆಯನ್ನು ಬಿಡಿಸಿ ತರುವನೋ? ಎಂಬೆಲ್ಲಾ ಪ್ರಶ್ನೆಗಳು ಮೂಡಿದಾಗ ಕಳವಳಕ್ಕೀಡಾದ ಕೌಸಲ್ಯಾಸುತ.ಲಕ್ಷö್ಮಣ ಕೋಪಗೊಂಡು ಆ ಬಾಲಕರ ಪ್ರಾಣಕ್ಕೆ ಸಂಚಕಾರ ತಂದರೆ! ಎಂಬ ಸಂಶಯ ಮೂಡಿತು ರಾಮಹೃದಯದಲ್ಲಿ. ಅವರಿಬ್ಬರನ್ನೂ ಘಾಸಿಗೊಳಿಸದೆ ಸಮ್ಮೋಹನಾಸ್ತçದಿಂದ ಮರುಳುಗೊಳಿಸಿ ಸೆರೆಹಿಡಿದು ತಂದು ತನಗೊಪ್ಪಿಸಿದರೆ ಅಷ್ಟೇ ಸಾಕು ಎಂದು ತೋರಿತು ಅವನಿಗೆ. ಲಕ್ಷö್ಮಣನಿಗೆ ಅದನ್ನು ತಿಳಿಸುವಂತೆ ಸೇವಕರನ್ನು ಕಳುಹಿಸಿಕೊಟ್ಟ ರಣರಂಗಕ್ಕೆ.ಅಲ್ಲಿಂದ ಬಂದ ಸೇವಕರು ಕುಶನ ಕುಶಲತೆಯನ್ನು ಸಾರಿಹೇಳಿದರು ಶ್ರೀರಾಮನಿಗೆ. “ದೀಕ್ಷೆಯನ್ನು ಬಿಟ್ಟು ಆ ಕುಶನೊಡನೆ ನೀವು ಯುದ್ಧಕ್ಕೆ ಹೋಗುವುದೇ ಒಳ್ಳೆಯದು. ಲವನನ್ನೂ ಮೀರಿದ ವೀರ ಆ ಕುಶ. ಶತ್ರುಘ್ನ ಲಕ್ಷö್ಮಣರ ಜೀವ ಉಳಿದಿದೆಯೋ ಇಲ್ಲವೋ ಎನ್ನುವುದು ತಿಳಿದಿಲ್ಲ. ಸಂದೇಹವಿದೆ. ಅಂದು ಶ್ರೀಕೃಷ್ಣನಿಗೆ ಮೊಲೆಯೂಡಿಸಲು ಹೋದ ಪೂತನಿಯಂತಾಗಿದೆ ನಮ್ಮ ಸೇನೆಯ ಸ್ಥಿತಿ” ಎಂದರು.ತನ್ನ ತಮ್ಮಂದಿರು ಪ್ರಾಣವನ್ನೇ ಕಳೆದುಕೊಂಡರೋ ಏನೋ ಎಂದು ಅತಿಯಾದ ಆಘಾತಕ್ಕೊಳಗಾದ ರಾಮ ಮೂರ್ಛಿತನಾದ. ಭರತನ ಉಪಚಾರವದು ಮರುಪ್ರಜ್ಞೆ ನೀಡಿತು ಮಾರುತಿಯ ಒಡೆಯನಿಗೆ. ತನಗಾಗಿ ಸದಾ ಸೇವೆ ಸಲ್ಲಿಸುತ್ತಿದ್ದ ಲಕ್ಷö್ಮಣ ತೀರಿಹೋದನೇ! ಎಂದು ಮತ್ತೆ ಮತ್ತೆ ರೋಧಿಸಿದ ರಾಮ. ಪರಮ ಪರಾಕ್ರಮಿಗಳೆನಿಸಿಕೊಂಡ ಶತ್ರುಘ್ನ ಲಕ್ಷö್ಮಣರಿಗೆ ಸೋಲುಣಿಸಿದ ಪುಟ್ಟ ಪೋರರ ಶೌರ್ಯ ಅಚ್ಚರಿ ಹುಟ್ಟಿಸಿತ್ತು ರಘುಕುಲತಿಲಕನಲ್ಲಿ. ತನ್ನ ದೇಹದ ಮೇಲಿರುವ ಸೀತೆಯ ವದನದ ಗುರುತು ಆ ಬಾಲಕರ ಮೈಯ್ಯ ಮೇಲೆಯೂ ಇದೆ ಎಂಬ ವಿಚಾರ ತಿಳಿದುಬಂದಿತ್ತು ಅವನಿಗೆ. ಯಾರವರು ಎಂಬ ಕೌತುಕ ಮೂಡಿತ್ತು ಅವನಲ್ಲಿ. ಶತ್ರುಘ್ನ ಲಕ್ಷö್ಮಣರ ಬಗ್ಗೆ ಮತ್ತೆ ಮತ್ತೆ ಹುಟ್ಟುತ್ತಲೇ ಇತ್ತು ಆತಂಕ.“ಕರೆಸು ಮತ್ತೊಮ್ಮೆ ಆ ಸೇವಕರನ್ನು. ಮರಳಿ ಕೇಳುವೆ ನನ್ನ ತಮ್ಮಂದಿರ ಸಮಾಚಾರವನ್ನು” ಎಂದು ಹೇಳಿದ ಭರತನಲ್ಲಿ. ಮತ್ತದೇ ಭೀತಿ ಹುಟ್ಟಿಸುವ ಮಾತುಗಳನ್ನಾಡಿದರು ಸೇವಕರು ರಾಮನ ಎದುರಲ್ಲಿ.ಸಹೋದರನಿಗೆ ಸಮಾಧಾನ ಹೇಳದಿರುವುದು ಸರಿಯಲ್ಲ ಈ ಸಮಯದಲ್ಲಿ ಎಂದು ತೋರಿತು ಸೋದರ ಭರತನಿಗೆ. “ಭಯಕ್ಕೊಳಗಾದ ಈ ಸೇವಕರು ಏನೋ ಗೊತ್ತಿಲ್ಲದೆ ಮಾತನಾಡುತ್ತಿದ್ದಾರಷ್ಟೇ. ಲಕ್ಷö್ಮಣ ಶತ್ರುಘ್ನರು ಯುದ್ಧದ ಆಯಾಸದಿಂದ ಪ್ರಜ್ಞೆ ಕಳೆದುಕೊಂಡಿರಬಹುದು. ಮರಣವನ್ನಂತೂ ಹೊಂದಿರಲಿಕ್ಕಿಲ್ಲ. ಅದು ಖಚಿತ. ಸುಮ್ಮನೆ ಧೈರ್ಯಗೆಡಬೇಡ. ನಾನೇ ಹೋಗುತ್ತೇನೆ ಯುದ್ಧರಂಗಕ್ಕೆ. ಆ ಬಾಲಕರನ್ನು ಎದುರಿಸಿ, ಕುದುರೆಯನ್ನು ಬಿಡಿಸಿ ತರುತ್ತೇನೆ” ಎಂದು ರಾಮನಿಗೆ ಸಾಂತ್ವನ ಹೇಳಿದ.ಸುಷೇಣ, ಅಂಗದ, ಜಾಂಬವ, ಹನುಮಂತ ಮೊದಲಾದ ವೀರರನ್ನು ಕೂಡಿಕೊಂಡು, ಚತುರಂಗ ಸೇನೆಯನ್ನು ಜೊತೆಮಾಡಿಕೊಂಡು, ಗಂಗಾನದಿಯ ತೀರಕ್ಕೆ ಬಂದುನಿAತ ಭರತ. ಯುದ್ಧದ ವೃತ್ತಾಂತವನ್ನು ತಿಳಿದುಬರುವ ಹೊಣೆಯನ್ನು ಹನುಮಂತನಿಗೆ ವಹಿಸಿ ಕಳುಹಿಸಿಕೊಟ್ಟ.ಯುದ್ಧರಂಗಕ್ಕೆ ಬಂದ ಆಂಜನೇಯ. ಪ್ರಾಣ ಕಳೆದುಕೊಂಡು ಬಿದ್ದಿದ್ದ ಅಗಣಿತ ಸಂಖ್ಯೆಯ ಭಟರನ್ನು ಕಂಡ ರಾಮಭಂಟ. ‘ನಮ್ಮ ಅಣ್ಣನಾದ ಆ ರಾಮ ನಿನ್ನ ಸುತೆ ಸೀತೆಯನ್ನು ತೊರೆದಿರುವುದಕ್ಕೆ ಕೋಪಿಸಿಕೊಳ್ಳದಿರು. ಸಹನೆ ವಹಿಸು’ ಎಂದು ಭೂಮಿಯನ್ನು ಸಮಾಧಾನಪಡಿಸುವ ರೀತಿಯಲ್ಲಿ ಮೂರ್ಛೆತಪ್ಪಿ ಧರಣಿಯನ್ನಪ್ಪಿಬಿದ್ದಿದ್ದ ಶತ್ರುಘ್ನ ಲಕ್ಷö್ಮಣರನ್ನು ಕಂಡ.ಅವರಿಬ್ಬರನ್ನೂ ಹೆಗಲಮೇಲೆ ಹೊತ್ತುಕೊಂಡ ಅಂಜನಾಸುತ ಮರಳಿಬಂದ ಭರತನಲ್ಲಿಗೆ. ಭರತ ತನ್ನ ಸಹೋದರರನ್ನು ರಥದಲ್ಲಿ ಕೂರಿಸಿದ. ಕುದುರೆಯನ್ನು ಬಾಳೆಗಿಡಕ್ಕೆ ಕಟ್ಟಿ, ಬಿಲ್ಲು ಬಾಣಗಳನ್ನು ಹಿಡಿದುನಿಂತಿದ್ದ ಶೂರ ಸೋದರರನ್ನು ಎದುರಿಸಲು ಹೊರಟ ಕೈಕೇಯಿಸುತ, ಸೇನೆಸಹಿತ.ಲವ ಕುಶರು ಕಂಡರು ಸೇನೆಯನ್ನು. ಕದನಕ್ಕೆ ಸಿದ್ಧರಾದರು. ಯುದ್ಧಕ್ಕೆ ಬದ್ಧರಾದರು. ಬಾಣಗಳನ್ನು ಪ್ರಯೋಗಿಸಿದರು ಸತತವಾಗಿ. ಬಾಲಕರ ವೀರತ್ವವದು ಮೆಚ್ಚಿಸಿತು ದೇವಾನುದೇವತೆಗಳನ್ನು. ಹೂಮಳೆಗರೆದರು ಸುರರು ಸೀತಾಸುತರ ಮೇಲೆ.ಅವರ ಬಾಣದ ಝೇಂಕಾರವದು ಮೂರೂ ಲೋಕಗಳನ್ನು ವ್ಯಾಪಿಸಿತು. ದಿಗ್ಗಜಗಳು ಕಿವುಡಾದವು. ಪರ್ವತಗಳು ನಡುಗಿದವು. ಬಾಣಗಳೇ ಸಂಪೂರ್ಣ ಆವರಿಸಿತು ಭೂಮಿಯ ಮೇಲ್ಭಾಗವನ್ನು. ಸೂರ್ಯಪ್ರಭೆಯದು ತೋರದಾಯಿತು. ಗಾಢಾಂಧಕಾರಕ್ಕೀಡಾದ ಗೃಹದಂತೆ ತೋರಿತು ಆ ಕದನರಂಗ.ರಾಮಸುತರನ್ನು ಎದುರಿಸಹೊರಟ ಸೈನಿಕರಿಗೆ ಇಲ್ಲದಾಯಿತು ಆರಾಮ, ವಿರಾಮ. ಉಂಟಾದದ್ದು ಬರಿಯ ದೇಹಶ್ರಮ. ಅವರನ್ನು ಗೆಲ್ಲುವ ವೀರರಾರೂ ಇಲ್ಲ ಎಂಬAತಹ ಭಾವನೆಗೊಳಗಾಯಿತು ಸಮಸ್ತ ಸೇನೆ. ಭರತನ ಸೈನಿಕರು ಅದಿರಿದರು. ಅಧೀರರಾದರು.ಆ ಗಳಿಗೆಯಲ್ಲಿಯೇ ಹನುಮಂತ “ಬಾಲಕರ ಕದನದ ರೀತಿಯದು ಆ ರಘುಕುಲತಿಲಕನ ಯುದ್ಧಶೈಲಿಯಂತಿದೆ” ಎಂದು ಯುದ್ಧೋನ್ಮುಖರಾಗಿದ್ದ ಕುಶ ಲವರನ್ನು ತೋರಿಸಿದ ಭರತನಿಗೆ. ಅವನು ಅಚ್ಚರಿಪಟ್ಟ.ಅವರ ಬಳಿಗೇ ಹೋದ. ರಾಮವದನವನ್ನು ಹೋಲುವ ಅವರ ಮೊಗದಾವರೆಗಳನ್ನು ಕಂಡು ರೋಮಾಂಚಿತನಾದ. ಪ್ರೀತಿಯಿಂದ ಮಾತನಾಡಿಸಿದ. “ನಮ್ಮ ಸೈನಿಕರನ್ನು ಕೊಂದಿದ್ದೀರಿ. ನನ್ನ ಸಹೋದರರನ್ನು ಘಾಸಿಗೊಳಿಸಿದ್ದೀರಿ. ಇನ್ನಾದರೂ ಕುದುರೆಯನ್ನು ಬಿಟ್ಟು ಮನೆಗೆ ಹೋಗಿ” ಎಂದು ಅನುನಯದಿಂದ ನುಡಿದ.ಅವನ ಸಾತ್ವಿಕ ನುಡಿಯದು ಹಿಡಿಸಲಿಲ್ಲ ಕದನದ ಸತ್ವಪೂರ್ಣ ಗೆಲುವನ್ನು ಬಯಸಿದ್ದ ವೀರ ಬಾಲಕರಿಗೆ. ಭರತ, ನಳ, ಹನುಮಂತ, ಜಾಂಬವ, ಅಂಗದ, ನೀಲ ಕುಮುದರು, ಸುಷೇಣ ಇವರೆಲ್ಲರೂ ಅನುಕ್ರಮದಲ್ಲಿ ಬಾಣಗಳ ಹೊಡೆತಕ್ಕೆ ಈಡಾಗುತ್ತಲೇ ಹೋದರು.ಚೈತನ್ಯವನ್ನೇ ಕಳೆದುಕೊಂಡ ಭರತ ಪ್ರಜ್ಞೆ ಕಳೆದುಕೊಂಡು ಭೂಮಿಗೆ ಬಿದ್ದ. ಈ ಸುದ್ದಿ ಸಿಡಿಯಿತು ಅಯೋಧ್ಯೆಯೆಡೆಗೆ…ಶ್ರೀರಾಮನಿದ್ದ ಕಡೆಗೆ… ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರವಾಹಿ ಸಂಗಾತಿ–43 ಡಾ.ವಿಶ್ವನಾಥ್ ಎನ್. ನೇರಳೆಕಟ್ಟೆ ಅರ್ಜುನ ಉವಾಚ ಸೋದರರ ಪ್ರತಾಪದಿಂದ ಪ್ರಜ್ಞಾ ಶೂನ್ಯನಾದ ರಾಮಸೋದರ ಅಮ್ಮನ ಪ್ರಲಾಪವದು ಕುಶನನ್ನು ದಂಗುಬಡಿಸಿತು. ಕಾರಣ ಕೇಳಿದ ಅವಳ ಅಳುವಿಗೆ. ಲವ ಕುದುರೆಯನ್ನು ಕಟ್ಟಿಹಾಕಿದ್ದು, ಸೈನಿಕರು ಯುದ್ಧಕ್ಕೆ ಬಂದದ್ದು, ರಥದಲ್ಲಿ ಕುಶನನ್ನು ಹೊತ್ತೊಯ್ದದ್ದು ಎಲ ್ಲವನ್ನೂ ಹೇಳಿದಳು ಸೀತೆ. ರೋಷ ಹುಟ್ಟಿತು ಕುಶನಲ್ಲಿ. ಕವಚ, ಖಡ್ಗ, ಬಿಲ್ಲು, ಬಾಣ, ಕಿರೀಟ ಎಲ್ಲವನ್ನೂ ತರಹೇಳಿದ ತಾಯಿಯಲ್ಲಿ. ತಂದುಕೊಟ್ಟಳು. ‚ಲವನನ್ನು ಹೊತ್ತೊಯ್ದವನು ಯಾರೇ ಆಗಿದ್ದರೂ ಅವನನ್ನು ಎದುರಿಸಿ, ಲವನನ್ನು ಎದುರಿಸಿಕೊಂಡು ಬರುತ್ತೇನೆ‛ ಎಂದ ಕುಶ ವೀರಭಾವದಲ್ಲಿ ಹೊರಟ. ಸುತನನ್ನು º Àರಸಿ ಕಳುಹಿಸಿಕೊಟ್ಟಳು ಸೀತೆ.ವಾಯುವೇಗದಿಂದ ಹೋದ ಕುಶ ಶತ್ರುW À್ನ ¸ ೆÃನೆಯನ್ನು ಕಾಣುತ್ತಲೇ ಮುನ್ನುಗ್ಗಿದ. ಶತುಘ್ನನ ದಳಪತಿಯ ಮೇಲೆ ಬಾಣಗಳನ್ನು ಒಂದರ ಹಿಂದೆ ಒಂದರAತೆ ಬಿಟ್ಟ. ದಳಪತಿಗೆ ನಗ ಹೆಸರಿನ ತಮ್ಮನೊಬ್ಬನಿದ್ದ. ಅವನು ಕುಶನನ್ನು ಎದುರಿಸುವ ಉತ್ಸುಕತೆ ತೋರಿದ. ಕುಶನ ಬಾಣದ ಹೊಡೆತಕ್ಕೆ ಕೈಗಳನ್ನೂ, ಕಾಲುಗಳನ್ನೂ, ಅಂತಿಮವಾಗಿ ಶಿರವನ್ನೂ ಕಳೆದುಕೊಂಡು ಪ್ರಾಣಬಿಟ್ಟ.ಕ್ರೋಧಭಾವದವನಾದ ಶತ್ರುಘ್ನ. ಒಂಭತ್ತು ಬಾಣಗಳನ್ನು ಏಕಕಾಲಕ್ಕೆ ಪ್ರಯೋಗಿಸಿದ, ಕುಶನ ಮೇಲೆ. ಬಾಣಪುಂಜಗಳು ಪುಡಿಪುಡಿಯಾದವು ಪುಟ್ಟ ಪೋರ ತೋರಿದ ಪರಾಕ್ರಮಕ್ಕೆ. ಕುಶನ ಬಲು ಬಿರುಸಿನ ಬಾಣವದು ಬೀಳಿಸಿತು ಶತ್ರುಘ್ನನನ್ನು ಭೂಮಿಯ ಮೇಲೆ. ಎಲ ್ಲರ ಭುಜಬಲವನ್ನೂ ಮೀರಿನಿಲ್ಲುವ ದಿಟ್ಟತನವನ್ನು ತೋರಿದನಾಗ ರಾಮಸುತ.ಅಷ್ಟರಲ್ಲಿ ಲವನಿಗೆ ಪ್ರಜ್ಞೆ ಬಂತು. ಅಣ್ಣ ತಮ್ಮಂದಿರು ಜೊತೆ ಸೇರಿ ª ÀÄತ್ತೆ ಕುದುರೆಯನ್ನು ಕಟ್ಟಿಹಾಕಿದರು. ಈ ಮೊದಲಿಗಿಂತಲೂ ಹುರುಪಿನಿಂದ ಯುದ್ಧಕ್ಕೆ ಸಿದ್ಧರಾಗಿ ನಿಂತರು.‚ಒಡೆಯಾ, ನಿನ್ನ ಯಜ್ಞದ ಕುದುರೆಯದು ಭೂಮಿಯನ್ನು ವಿಘ್ನವಿಲ್ಲದೆ ಸುತ್ತಾಡಿತು. ಬಳಿಕ ಅದನ್ನು ಲವನೆಂಬ ಬಾಲಕ ಕಟ್ಟಿಹಾಕಿದ. ಬಿಡಿಸುವುದಕ್ಕೆ ಹೋದ ಸೇನೆಯನ್ನು ನಾಶಮಾಡಿದ. ಆಗ ಶತ್ರುಘ್ನ ಅವ£ Àನ್ನು ಸೆರೆಹಿಡಿದು ಕರೆತರುತ್ತಿರಬೇಕಾದರೆ ಯಾರೋ ಒಬ್ಬ ಬಾಲಕ ಬಂದು, ಬಾಣವನ್ನು ಪ್ರಯೋಗಿಸಿ, ನಿನ್ನ ತಮ್ಮ ಶತ್ರುಘ್ನನನ್ನು ರಥದಿಂದ ಬೀಳಿಸಿದ‛ ಎಂಬ ಸಂದೇಶ ರಾಮನನ್ನು v Àಲುಪಿತು.ಶ್ರೀರಾಮ ಆ ಮಾತನ್ನು ನಂಬಲಿಲ್ಲ. ಶತ್ರುಘ್ನನಂತಹ ಬಲಶಾಲಿಯನ್ನು ಗೆಲ್ಲುವವರಿಲ್ಲ ಈ ಲೋಕದಲ್ಲಿ ಎಂಬ ನಂಬಿಕೆ ಅವನದ್ದು. ಹುಸಿ ಸಂದೇಶವಿದು ಎಂದುಕೊAಡ. ಆದರೆ ಅದು ನಿಜವಾದದ್ದು ಎಂದು ತಿಳಿದಾಗ ಪರಮಾಶ್ಚರ್ಯಗೊಂಡ. ಲವಣಾಸುರನೆಂಬ ರಾಕ್ಷಸನನ್ನೇ ಕೊಂದ ಶತ್ರುಘ್ನನಿಗೆ ಬಾಲಕರಿಬ್ಬರು ಸವಾಲಾಗಿ ನಿಂತಿದ್ದಾರೆAದರೆ ಅವರು ಸಾಮಾನ್ಯದವರಲ್ಲ ಎನ್ನುವುದು ಸ್ಪಷ್ಟವಾಯಿತು ಅಂi ÉÆÃಧ್ಯಾಪತಿಗೆ. ಲಕ್ಷö್ಮಣನನ್ನು ಯುದ್ಧಕ್ಕೆ ಕಳುಹಿಸಿಕೊಟ್ಟ.ಕಾಲಜಿತುವೆಂಬ ಸೇನಾಧಿಪತಿಯನ್ನು ಜೊತೆಮಾಡಿಕೊಂಡು ಚತುರಂಗ ಬಲ ಸಹಿತನಾಗಿ ಕುಶ ಲವರ ವಿರುದ್ಧದ ಯುದ್ಧಕ್ಕೆ ಬಂದ ಲಕ್ಷö್ಮಣ. ಸಾವಿರ ಆನೆಗಳು. ಅದಕ್ಕೆ ನೂರು ಪಟ್ಟು ಹೆಚ್ಚು ರಥಗಳು. ರಥಗಳ ನೂರು ಪಟ್ಟಿನಷ್ಟು ಕುದುರೆಗಳು. ಕುದುರೆಗಳ ನೂರು ಪಟ್ಟಿನಷ್ಟು ಸೈನಿಕರು. ಇಂತಹ ಒಂದು ¸ ÉÃನೆಯನ್ನು ಹೊಂದಿದವರು ಭ್ರಮಿಗಳು ಎನಿಸಿಕೊಳ್ಳುತ್ತಿದ್ದರು. ಇಂತಹ ಸಾವಿರ ಭ್ರಮಿಗಳನ್ನು ಒಳಗೊಂಡಿತ್ತು ಲಕ್ಷö್ಮಣ ಸಾರಥ್ಯದ ಹಿರಿದು ಸೇನೆ.ಎದುರು ನಿಂತ ಅಗಾಧ ಸೇನೆ ಕುಶ ಲವರ ಕಣ್ಣಿಗೆ ರಾಚಿತು. ಅಮೋಘವಾದ ಅಸ್ತçವೊಂದಿಲ್ಲದೆ ಜಯಿಸುವುದು ಅಸಾಧ್ಯ ಎಂದು ತೋರಿತು ಲವನಿಗೆ. ಸಹೋದರನಲ್ಲಿ ಗುಟ್ಟಾಗಿ ತಾನು ಸೂಂi ÀÄðದೇವನ ಪ್ರಾರ್ಥನೆ ಮಾಡಿ ಕೋದಂಡವನ್ನು ಪಡೆದುಕೊಳ್ಳುವುದಾಗಿ ಹೇಳಿದ. ಪ್ರಾರ್ಥಿಸಿದ. ಲವನ ಮುಗ್ಧಭಕ್ತಿಗೆ ಒಲಿದ ಸೂಂi ÀÄðದೇವ. ದಿವ್ಯಾಸ್ತçವನ್ನು ಲವನಿಗೆ ಕೊಟ್ಟ.ಅದನ್ನು ಸಂತಸದಲ್ಲಿ ಕುಶನಿಗೆ ತೋರಿದ ಲವ. ಅಣ್ಣ ತಮ್ಮಂದಿರಿಬ್ಬರೂ ಬಲು ಹುರುಪಿನಲ್ಲಿ ಶತ್ರು ಸೈನ್ಯದೆಡೆಗೆ ದೃಷ್ಟಿ ಹರಿಸಿದರು. ನಿಮಿಷದಲ್ಲಿಯೇ ನಾಶಹೊಂದಿತು ಲಕ್ಷö್ಮಣ ಸೇನೆ.ಲಕ್ಷö್ಮಣ ಕುಶನೆದುರು ಹೋರಾಟಕ್ಕೆ ನಿಂತ. ಲವನನ್ನು ಎದುರಿಸುವ ಮನಸ್ಸು ಮಾಡಿದ ಸೇನಾಧಿಪತಿ ಕಾಲಜಿತು. ಸಂಪೂರ್ಣ ಸೇನೆಯೇ ಅತಿ ರೋಷದಿಂದ ಇಬ್ಬರು ಬಾಲಕರ ಮೇಲೆರಗಿತು. ಮೇಲೆ ಬಿದ್ದವರನ್ನೆಲ್ಲಾ ಕೊಂದುಹಾಕಿದ ಲವ. ಎಲ್ಲೆಲ್ಲೂ ಬಾಣಗಳ ಹಾರಾಟ. ಸೇನಾಗಡಲಿನಲ್ಲಿ ಕುಶ ಲವರ ಸಾಹಸದ ಈಜಾಟ. ಆನೆ ಕುದುರೆಗಳು ಧರೆಗುರುಳಿದವು. ಸೈನಿಕರ ಶಿರಗಳು ಅಳಿದುಹೋದವು.ಹೀಗೆ ಲವ ಕುಶರ ಸಾಹಸ ಸಾಗುತ್ತಿದ್ದಾಗಲೇ ಎದುರಾದವನು ರುಧಿರನೆಂಬ ಮಹಾ ರಾಕ್ಷಸ. ಶತ್ರುಘ್ನನಿಂದ ಮಡಿದಿದ್ದ ಲವಣಾಸುರನ ಸೋದರ ಮಾವನಾಗಿದ್ದ ಆತನ ಕಣ್ಣುಬಿದ್ದದ್ದು ಲವನ ಕೈಯ್ಯಲ್ಲಿದ್ದ ಕೋದಂಡದ ಮೇಲೆ. ಅದನ್ನು ಬಿರುಸಾಗಿ ಹಿಡಿದೆಳೆದವನು ಅಪಹರಿಸಿಕೊಂಡು ಗಗನ ಮಾರ್ಗವಾಗಿ ಹೊರಟ. ಲವ ಅಳುಕಲಿಲ್ಲ. ವಾಲ್ಮೀಕಿ ಮಹರ್ಷಿಗಳು ಬೋಧಿಸಿದ್ದ ಅಗ್ನಿಮಂತ್ರಧ್ಯಾನ ಮಾಡಿದ. ಸೇನೆಯನ್ನು ಎದುರಿಸುತ್ತಲೇ ರುಧಿರನನ್ನು ಕೊಂದು ತನ್ನ ದಿವ್ಯಾಸ್ತçವನ್ನು ಮರಳಿ ಪಡೆದುಕೊಂಡ.ಇತ್ತ ಲಕ್ಷö್ಮಣನ ಜೊತೆಗೆ ಯುದ್ಧ ಮಾಡುತ್ತಿದ್ದ ಕುಶ. ಸೀತಾಸುತನ ಬಾಣದ ಏಟಿಗೆ ಊರ್ಮಿಳಾ ರಮಣನ ರಥವದು ಎರಡು U Àಳಿಗೆ ಸತತವಾಗಿ ತಿರುಗಿತು. ‘ಬಾಲಕನಿವನು ಪರಾಕ್ರಮಿ’ ಎಂದು ಮೆಚ್ಚಿತು ಕುಶನನ್ನು, ಲಕ್ಷö್ಮಣನ ಮನಸ್ಸು. ತನ್ನ ಶೌರ್ಯವಷ್ಟೂ ಬೇಕು ಇವನನ್ನು ಸೋಲಿಸಲು ಎಂದು ತೋರಿತು ಸುಮಿತ್ರಾಸುತನಿಗೆ. ಬಲವಾಗಿಯೇ ಬಾಣ ಪ್ರಯೋಗಿಸಿದ. ಕುಶನ ಕಿರೀಟ ಕವಚಗಳು ಕೆಳಗೆ ಬಿದ್ದವು. ಎದುರಾದ ಆಘಾತವನ್ನು ಸರಳವಾಗಿಸಿಕೊಂಡ ಸೀತಾಸುತ. ‚ಕಿರೀಟ ಕವಚಗಳ ಕಾಟವಿಲ್ಲದೆ ನಿರಾಳನಾಗಿ ಯುದ್ಧ ಮಾಡಬಹುದಿನ್ನು‛ ಎಂದು ನಗುತ್ತಾ ನುಡಿದವನು ಲಕ್ಷö್ಮಣನ ಮೇಲೆ ಅಮೋಘಾಸ್ತçವನ್ನು ಪ್ರಯೋಗಿಸಿದ. ಪ್ರಜ್ಞೆ ಕಳೆದುಕೊಂಡು ಭೂಮಿಯನ್ನಪ್ಪಿದ ಶ್ರೀರಾಮ ಸಹೋದರ.ಕುಶ ಲವರ ಆರ್ಭಟಕ್ಕೆ ಲಕ್ಷö್ಮಣ ಸೇನೆಯದು ದಿಕ್ಕುದಿಕ್ಕಿಗೆ ಚೆಲ್ಲಾಪಿಲ್ಲಿಯಾಯಿತು. ಕುದುರೆಯನ್ನು ಕಟ್ಟಿಹಾಕಿದ್ದ ಬನದೆಡೆಗೆ ರಥವನ್ನು ಓಡಿಸಿದರು ಸೀತಾಸುತರು… ಡಾ.ವಿಶ್ವನಾಥ್ ಎನ್.ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-42 ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಅಪ್ಪನ ಅಶ್ವ, ಮಗನ ಸವಾಲು ಮಡದಿಯನ್ನು ಕಾಡಿಗಟ್ಟಿದ್ದ ರಾಮನನ್ನು ಈಗ ರಾವಣವಧೆಯದು ಬ್ರಹ್ಮಹತ್ಯೆಯೆನಿಸಿ ಕಾಡಲಾರಂಭಿಸಿತ್ತು. ರಾವಣನೆಂಬ ಮಹಾಬ್ರಾಹ್ಮಣನನ್ನು ಕೊಂದ ದುರಿತ ತನ್ನದಾಯಿತಲ್ಲಾ! ಎಂದು ಚಿಂತಿಸತೊಡಗಿದ ಶ್ರೀರಾಮ. ಪರಿಹಾರವನ್ನು ಕೇಳಿದ್ದು ವಸಿಷ್ಠರಲ್ಲಿ. ಅವರು ಸೂಚಿಸಿದ್ದು ಅಶ್ವಮೇಧ ಯಾಗವನ್ನು. ಆದರೆ ಯಾಗ ನಡೆಯುವ ಸಮಯದಲ್ಲಿ ಪತ್ನಿ ಸೀತೆ ರಾಮನೊಡನೆಯೇ ಇರಬೇಕಿತ್ತು. ಚಿನ್ನದಿಂದ ನಿರ್ಮಿಸಲಾದ ಸೀತೆಯ ವಿಗ್ರಹವನ್ನಿಟ್ಟುಕೊಂಡು ಯಜ್ಞ ನಡೆಸುವೆನೆಂದ ಶ್ರೀರಾಮ. ಮುನಿಗಳ ಒಪ್ಪಿಗೆ ದೊರಕಿತು.ದೀಕ್ಷಾಬದ್ಧನಾದ ದಶರಥಸುತ. ಪೂಜೆ ನಡೆಯಿತು ಕುದುರೆಯದ್ದು, ಕೌಸಲ್ಯಾತನಯನಿಂದ. ಶ್ರೀರಾಮ ಶ್ರೇಷ್ಠತೆಯನ್ನು ಸಾರಿಹೇಳುವ ಬರಹವಿದ್ದ ಪತ್ರಿಕೆಯನ್ನು ಅಶ್ವದ ಹಣೆಗೆ ಅಳವಡಿಸಲಾಯಿತು. ಮೂರು ಅಕ್ಷೆÆÃಹಿಣಿ ಸೇನೆ ಹೊರಟಿತು ಯಜ್ಞಾಶ್ವ ರಕ್ಷಣೆಗೆ. ಆ ಸೇನೆಯ ಮುಂದಾಳತ್ವವದು ಶತ್ರುಘ್ನನಿಗೆ. ದಿಕ್ಕುದಿಕ್ಕಿಗೆ ಚಲಿಸಿತು ಕುದುರೆ. ಹಲವು ಅರಸರು ಮಣಿದರು ಅಯೋಧ್ಯಾಪತಿಯ ಹೆಸರನ್ನು ಕೇಳಿ.ಚಲಿಸುತ್ತಾ ಬಂದ ಕುದುರೆ ಈಗ ಸೇರಿದ್ದು ವಾಲ್ಮೀಕಿ ಮುನಿಗಳ ಆಶ್ರಮಕ್ಕೆ ಸೇರಿದ್ದ ಉಪವನವನ್ನು. ಅಲ್ಲಿದ್ದ ಹಸಿಹಸಿರು ಹುಲ್ಲನ್ನು ಹೊಟ್ಟೆಗಿಳಿಸಿಕೊಳ್ಳುವ ಹುರುಪಿತ್ತು ಆ ಅಶ್ವಕ್ಕೆ. ಆ ಉಪವನದ ಕಾವಲಿಗಿದ್ದವನು ಲವ. ಬಿಲ್ಲನ್ನು ಕೈಯ್ಯಲ್ಲಿ ಹಿಡಿದುಕೊಂಡಿದ್ದ ಆತ ಕುದುರೆಯನ್ನು ಕಂಡ. ವಾಲ್ಮೀಕಿ ಋಷಿಗಳೇ ಆ ಉಪವನದ ಕಾವಲು ಕಾಯುವ ಹೊಣೆಯನ್ನು ಅವನಿಗೆ ವಹಿಸಿ ವರುಣನ ಭೇಟಿಗಾಗಿ ಹೋಗಿದ್ದರು. ಈ ಕುದುರೆ ಉಪವನವನ್ನು ಹಾಳುಗೆಡಹಿದರೆ ವಾಲ್ಮೀಕಿ ಮುನಿಗಳು ಬೈದಾರು ತನ್ನನ್ನು ಎಂದುಕೊAಡ ಲವ.ಕುದುರೆಯ ಬಳಿಬಂದ. ಅದರ ಹಣೆಯಲ್ಲಿದ್ದ ಲೇಖವನ್ನು ಓದಿದ. ಅದರಲ್ಲಿದ್ದ ಪರಾಕ್ರಮವನ್ನು ಕೆರಳಿಸುವ ಅಕ್ಷರಗಳು ಲವನ ಸಾಹಸ ಪ್ರವೃತ್ತಿಯನ್ನು ಪ್ರಚೋದಿಸಿತು. ಇದನ್ನು ಕಟ್ಟಿಹಾಕದಿದ್ದರೆ ತನ್ನ ಈ ತೋಳುಗಳು ಇರುವುದಾದರೂ ಏಕೆ ಎಂದು ತೋರಿತು ಅವನಿಗೆ. ತನ್ನ ಹೆಗಲ ಮೇಲಿನ ಶಾಲನ್ನು ತೆಗೆದ ಲವ ಅದರಿಂದಲೇ ಕಟ್ಟಿಹಾಕಿದ ಕುದುರೆಯನ್ನು, ಬಳಿಯಲ್ಲಿದ್ದ ಬಾಳೆಯ ಗಿಡಕ್ಕೆ.ಅವನ ಜೊತೆಗಿದ್ದವರು ಕೆಲವು ಬ್ರಾಹ್ಮಣ ಹುಡುಗರು. ಹೆದರಿದರು. ಬೇರೆಯವರ ಕುದುರೆಯನ್ನು ಕಟ್ಟುವುದು ಸರಿಯಲ್ಲ ಎಂದರು. ಆದರೆ ಲವನಲ್ಲಿದ್ದ ಕ್ಷಾತ್ರಭಾವವದು ಅಳುಕಲಿಲ್ಲ; ಮಣಿಯಲಿಲ್ಲ.ಕುದುರೆಯ ಕಾವಲಿಗಿದ್ದ ಸೈನಿಕರು ಅದೇ ಸಮಯದಲ್ಲಿ ಬಂದರು ಅಲ್ಲಿಗೆ. ಬಾಳೆಯ ಗಿಡಕ್ಕೆ ಕಟ್ಟಿದ್ದ ಕುದುರೆಯನ್ನು ಕಂಡರು. ಎದುರು ಕಂಡ ಬ್ರಾಹ್ಮಣ ಬಾಲಕರನ್ನು ದಿಟ್ಟಿಸಿ “ಕುದುರೆಯನ್ನು ಕಟ್ಟಿದವರಾರು?” ಎಂದು ಕೇಳಿದರು. ಬಾಲಕರ ಕೈಗಳು ಚಾಚಿದ್ದು ಲವನ ಕಡೆಗೆ. ಕಿರಿದು ಪ್ರಾಯದ ಹುಡುಗ ಅರಿವಿರದೆ ತುರಗವನ್ನು ಕಟ್ಟಿಹಾಕಿದ್ದಾನೆ ಎಂದು ತೋರಿತು ಅವರಿಗೆ. ಬಿಟ್ಟುಬಿಡು ಎಂದರು ಅಸಡ್ಡೆಯಿಂದ.“ಕುದುರೆಯನ್ನು ಬಿಡುವುದಿಲ್ಲ. ಬಿಡಿಸುವುದಕ್ಕೆ ಹೋದವರ ಕರಗಳನ್ನು ಕತ್ತರಿಸದೆ ಇರಲಾರೆ” ಎಂಬ ಶೌರ್ಯದ ನುಡಿ ಹೊಮ್ಮಿತು ಲವನಿಂದ. ಸೈನಿಕರಿಗೆ ಹಠ ಮೂಡಿತು. ತಮ್ಮಂತಹ ಪರಾಕ್ರಮಿಗಳಿಗೆ ಪುಟ್ಟ ಪೋರನ ಸವಾಲೇ! ಎಂದು ತೋರಿತು. ಕುದುರೆಯನ್ನು ಬಿಡಿಸಲು ಮುಂದಾದರು. ಆ ಕ್ಷಣವೇ ಬಾಣ ಪ್ರಯೋಗಿಸಿದ ಲವ ಅವರ ಕೈಗಳನ್ನು ಕತ್ತರಿಸಿಹಾಕಿದ. ಮುನ್ನುಗ್ಗಿಬಂದ ಸೇನೆಯ ಮೇಲೆ ಬಾಣಗಳ ಮಳೆಯನ್ನೇ ಹರಿಸಿದ. ಸೈನಿಕರು ಬಿಟ್ಟ ಬಾಣಗಳನ್ನೆಲ್ಲವನ್ನೂ ಕತ್ತರಿಸಿ, ಸಂಖ್ಯೆಗಳನ್ನೆಣಿಸದೆಯೇ ಸೈನಿಕರ ಶಿರಗಳನ್ನು ಕತ್ತರಿಸುತ್ತಲೇ ಹೋದ ಲವ.ರಾಮಸುತನ ಈ ಬಗೆಯ ದಿಟ್ಟಹೋರಾಟ ಕಾಣಿಸಿದ್ದು ಕುದುರೆಯ ರಕ್ಷಣೆಗೆಂದು ಬಂದಿದ್ದ ರಾಮಸೋದರ ಶತ್ರುಘ್ನನಿಗೆ. ಚತುರಂಗ ಬಲವನ್ನು ಕೂಡಿಕೊಂಡು ಲವನನ್ನು ಎದುರಿಸುವುದಕ್ಕೆ ಹೋದ ಆತ. ಶತ್ರುಘ್ನ ಆರ್ಭಟಿಸುತ್ತಾ ಬರುತ್ತಿರುವುದನ್ನು ಕಂಡ ಲವ ಶಿವನ ಮಂತ್ರವನ್ನು ಸ್ಮರಿಸಿದ.“ನೀನಿನ್ನೂ ಶಿಶು. ಸಾಯದಿರು ನನ್ನ ಕೈಯ್ಯಲ್ಲಿ. ಕುದುರೆಯನ್ನು ಬಿಟ್ಟು ಹೋಗು” ಎಂಬ ರಾಮಸೋದರನ ಅಬ್ಬರದ ನುಡಿ ಅಳುಕಿಸದಾಯಿತು ಸೀತಾಸುತನನ್ನು. ಶತ್ರುಘ್ನ ಶರವನ್ನು ಕ್ಷಿಪ್ರವಾಗಿ ತುಂಡರಿಸಿ ಗೆಲುವಿನ ನಗು ಬೀರಿದ ಲವ.ಕೆರಳಿದ ಶತ್ರುಘ್ನ. ಮೂರು ಬಾಣಗಳನ್ನು ಒಂದೇ ಬಾರಿಗೆ ಪ್ರಯೋಗಿಸಿದ. “ನನ್ನ ಪಾಲಿಗೆ ಪರಿಮಳದ ಕುಸುಮ ಬಾಣಗಳಿವು” ಎಂದು ನಗುತ್ತಾ ಬಾಣತ್ರಯಗಳನ್ನು ತುಂಡರಿಸಿದ ಲವನೆಂಬ ತರಳ.‘ಇವನು ಪೋರನಲ್ಲ; ಬಾಣಗಳ ಪ್ರಾಣ ತೆಗೆಯುವ ಅಸಹಾಯ ಶೂರ’ ಎನ್ನುವುದು ಮನದಟ್ಟಾಯಿತು ಶತ್ರುಘ್ನನಿಗೆ. ಅಮೋಘವಾದ ಬಾಣವನ್ನೇ ಪ್ರಯೋಗಿಸಿದ. ಶಿವನ ಹಣೆಗಣ್ಣಿಂದ ಹೊರಬರುವ ಉರಿಯ ತೆರದಲ್ಲಿ ಭೀಕರವಾಗಿತ್ತು ಆ ಬಾಣ. ಮಂದಸ್ಮಿತ ಮೊಗದಿಂದಲೇ ಆ ಬಾಣವನ್ನು ಅರ್ಧರ್ಧವಾಗಿಸಿದ ರಾಮತನಯ. ಈಗಲೂ ಗೆಲುವು ತನ್ನದೇ ಎಂದುಕೊAಡು ಬೀಗಿದ. ಆದರೆ ಅದರಲ್ಲಿ ಒಂದರ್ಧ ನೆಲವನ್ನು ಸೇರಿಕೊಂಡಿದ್ದರೆ, ಇನ್ನೊಂದರ್ಧ ಮೇಲ್ಮುಖವಾಗಿ ಚಲಿಸಿ ಲವನ ಎದೆಗೆ ಆಘಾತವನ್ನು ಉಂಟುಮಾಡಿತು. ಪ್ರಜ್ಞಾಶೂನ್ಯನಾದ.ನೆಲದ ಮೇಲೆ ಬಿದ್ದಿದ್ದ ಲವನ ಮುಖವದು ಶ್ರೀರಾಮನ ನೆನಪನ್ನು ಮೂಡಿಸಿತು ಶತ್ರುಘ್ನನಿಗೆ. ಮೋಹಭಾವದಿಂದ ಅವನ ಪ್ರಜ್ಞಾಶೂನ್ಯ ದೇಹವನ್ನು ತನ್ನ ರಥದ ಮೇಲಿರಿಸಿಕೊಂಡ. ಕುದುರೆಯನ್ನು ಬಿಡಿಸಿ, ಸೈನ್ಯದ ಜೊತೆಗೆ ನಗರದತ್ತ ಮುಖಮಾಡಿ ಪಯಣಿಸಿದ.ಲವನ ಜೊತೆಗಿದ್ದ ಬ್ರಾಹ್ಮಣ ಹುಡುಗರು ವಿಚಾರವನ್ನು ಬಂದು ಅರುಹಿದರು ಸೀತೆಗೆ. ಮಗನಿಗೆದುರಾದ ಸ್ಥಿತಿಯನ್ನು ನೆನೆದು ಅತೀವ ದುಃಖಕ್ಕೊಳಗಾದಳು ಅವನಿಸುತೆ. ಏನಾಗಿಹೋಯಿತೋ ತನ್ನ ಮಗನಿಗೆ! ರಥದಲ್ಲಿ ಕೊಂಡೊಯ್ದವ ಅವನಿಗೆ ಅದಾವ ನೋವನ್ನಿತ್ತನೋ! ಎಂದೆಲ್ಲಾ ಭಾವಿಸಿ ರೋಧಿಸಿದಳು ಸೀತೆ. ಆಗಲೇ ಕುಶ ಅಲ್ಲಿಗೆ ಬಂದ.*** ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-41 ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಮಕ್ಕಳಿಗೆ ಜನುಮವಿತ್ತು ಮಾತೆ ಎನಿಸಿಕೊಂಡಳು ಸೀತೆ ಲಕ್ಷ್ಮಣನ ಶಿರವದು ಕಣ್ಣಿಂದ ಮರೆಯಾದ ಒಡನೆಯೇ ಬಾಯಾರಿಕೆಯಿಂದ ಕಂಗೆಟ್ಟು ಬಳಲಿದಳು ಸೀತೆ. ಭಯ ಶೋಕಗಳು ಅವಳನ್ನು ಆವರಿಸಿದವು. ಬುಡದಿಂದಲೇ ಕೊಲ್ಲಲ್ಪಟ್ಟ ಬಳ್ಳಿಯಂತೆ ಭೂಮಿಯ ಮೇಲೊರಗಿದಳು ಭೂಮಿಯ ಮಗಳು.ರಾಮಕರುಣೆಗೆ ಈಡಾಗದ ಅವಳ ಮೇಲೆ ಕಾರುಣ್ಯ ಕಣ್ಣೋಟ ಹರಿಸಿದ್ದು ಅಲ್ಲಿದ್ದ ಪಕ್ಷಿ ಪ್ರಾಣಿಗಳು. ಸೀತಾಮಾತೆಯ ಸೋತ ಪರಿಯನ್ನು ಕಂಡ ಮೃಗ- ಖಗಗಳು ಅವಳ ಬಳಿಬಂದವು. ತಮ್ಮ ತಮ್ಮ ವೈರತ್ವವನ್ನೇ ಮರೆತವು. ಆಹಾರ ಬೇಕೆನಿಸಲಿಲ್ಲ ಅವುಗಳಿಗೆ ಆ ಸಮಯಕ್ಕೆ. ಅಲ್ಲಿದ್ದ ಗಿಡ- ಮರ- ಬಳ್ಳಿ- ಕಲ್ಲುಗಳಲ್ಲಿಯೂ ಶೋಕಭಾವ ಮೂಡಿತು. ಒಳ್ಳೆಯ ಗುಣದವಳ ಅಳಿವನ್ನು, ಅಳುವನ್ನು ಸಹಿಸದಾಯಿತು ಅಲ್ಲಿಯ ಪರಿಸರ.ದುಂಬಿಗಳ ನಾದವದು ನಿಂತೇಹೋಯಿತು. ನವಿಲುಗಳ ಕುಣಿತದ ಉತ್ಸಾಹ ಇನ್ನಿಲ್ಲವಾಯಿತು. ಚಕ್ರವಾಕ ಪಕ್ಷಿಗಳಿಗೆ ಬೆರೆಯುವ ಮನಸ್ಸಿಲ್ಲ. ಹಂಸಗಳಿಗೆ ನಡೆಯುವುದರೆಡೆಗೆ ಗಮನವಿಲ್ಲ. ಮೌನವಾದವು ಗಿಳಿಗಳು. ಮೌನಿಗಳಾದವು ಕೋಗಿಲೆಗಳು. ಜಿಂಕೆ. ಆನೆ, ಸಿಂಹ ಇವೆಲ್ಲವೂ ಸೀತೆಯ ಶೋಕಕ್ಕೆ ಸ್ಪಂದಿಸಿದವು, ತಂತಮ್ಮ ರೀತಿಯಲ್ಲಿ.ಪರಿತಾಪದಲ್ಲಿದ್ದ ಸೀತೆಯ ಹೃದಯತಾಪವದು ಅಳಿದುಹೋಗುವಂತೆ ಚಾಮರವ ಬೀಸಿದವು ಚಮರೀ ಮೃಗಗಳು. ಸೀತೆಯ ಕಣ್ಣೀರು ಇನ್ನಿಲ್ಲವಾಗುವಂತೆ ನೀರ ಹನಿಗಳನ್ನು ಚಿಮುಕಿಸಿದವು ನೀರ ಹಕ್ಕಿಗಳು.ಗಂಗಾನದಿಯ ಅಲೆಯ ಮಧ್ಯೆ ಸಿಲುಕಿ ಹೊರಬರದಂತಾಗಿದ್ದರೂ, ಗಂಗೆಯೊಡಲಲ್ಲಿದ್ದ ಕಮಲ ಸುವಾಸನೆಯನ್ನು ಪೂರ್ಣ ಹೊತ್ತು ತರಲಾಗದಿದ್ದರೂ ಸೀತೆಗೆ ಸುಖವನ್ನು ನೀಡಲೇಬೇಕೆಂದು ಬಯಸಿದ ತಂಗಾಳಿಯದು ಗಂಗೆಯ ನೀರಿನ ತಂಪನ್ನು ಹೊಂದಿದ, ಗಂಗೆಯ ಪದುಮ ಗಂಧದಿAದ ಕೂಡಿದ ಗಂಗಾಳಿಯಾಗಿ ಬಂದು ತಲುಪಿತು ಸೀತಾಮಾತೆಯ ಮುಖವನ್ನು, ಮೃದು ಮಧುರ ಭಾವದಲ್ಲಿ ಸ್ಪರುಷಿಸಿ.ಚೇತರಿಸಿಕೊಂಡಳು ಸೀತೆ. ತನಗಿನ್ನು ದಾರಿಯೇನಿದೆ ಎಂದು ಅತ್ತಿತ್ತ ನೋಡಿದಳು. ಶಿಥಿಲವಾಗಿತ್ತು ಅವಳ ಅಂಗಾAಗಗಳು. ಶರೀರವೆಲ್ಲಾ ಧೂಳು ಹಿಡಿದಿತ್ತು. ಮುಡಿ ಬಿಚ್ಚಿಹೋಗಿತ್ತು. ಅದಾವುದೂ ಗಣನೆಗೆ ಬರಲಿಲ್ಲ ಅವಳಿಗೆ ಆ ಕ್ಷಣದಲ್ಲಿ. ಮಿಥಿಲೇಂದ್ರ ವಂಶದಲ್ಲಿ ಜನಿಸಿದ ತಾನು ದಶರಥನ ಸೊಸೆ ಎನಿಸಿಕೊಂಡಿದ್ದರೂ ಈ ಬಗೆಯಲ್ಲಿ ಕಾಡಿನಲ್ಲಿ ದಿಕ್ಕೆಟ್ಟು ಅಲೆಯುವಂತಾಯಿತಲ್ಲಾ! ಎಂದು ರೋಧಿಸಿದಳು, ಕಲ್ಲಿನ ಎದೆಯದು ಕರಗುವಂತೆ.ಈ ಕ್ಷಣವೇ ತೊರೆದುಬಿಡುತ್ತೇನೆ ಈ ಪ್ರಾಣವನ್ನು ಎಂಬ ಯೋಚನೆ ಬಂತು ಅವಳಲ್ಲಿ. ಮರುಕ್ಷಣವೇ, ಭ್ರೂಣಹತ್ಯಾದೋಷಕ್ಕೆ ಗುರಿಯಾಗುವ ಅಳುಕು ಅವಳನ್ನು ಕಾಡಿತು. ಹೀಗೆ ಬಗೆಬಗೆಯಲ್ಲಿ ಪ್ರಲಾಪಿಸುತ್ತಾ ಕಾಡಿನಲ್ಲಿ ಅಲೆದಾಡುತ್ತಿದ್ದಳು ಪೃಥ್ವಿತನುಜೆ.ಆ ಸಮಯದಲ್ಲಿಯೇ ಯಜ್ಞಕ್ಕೆ ಬೇಕಾದ ಸ್ತಂಭವನ್ನು ಅರಸುತ್ತಾ ಆ ವನಕ್ಕೆ ಬಂದವರು ರಾಮಧ್ಯಾನದಲ್ಲಿ ಚಿತ್ತವನ್ನು ಹುತ್ತಗಟ್ಟಿಸಿಕೊಂಡಿದ್ದ ವಾಲ್ಮೀಕಿ ಮಹರ್ಷಿಗಳು. ಸೀತೆಯ ರೋಧನವದು ಅವರ ಕರ್ಣವನ್ನು ಕೆಣಕಿತು. ಹೆಂಗಳೆಯ ಅಳು ಕೇಳಿ ತಲ್ಲಣಿಸಿದರು ಮುನಿವರ್ಯ. ಮೊರೆತದ ಸ್ವರವನ್ನನುಕರಿಸಿ ಚಲಿಸಿದ ಅವರಿಗೆ ಕಾಣಿಸಿದಳು ಸೀತೆ. ‘ಯಾರಿವಳು? ಏಕಿದ್ದಾಳೆ ಈ ಅರಣ್ಯದಲ್ಲಿ ಒಂಟಿಯಾಗಿ?’ ಎಂಬ ಕೌತುಕ ಮೂಡಿತು ಅವರಲ್ಲಿ.ಮಾತನಾಡಿಸಿದರು. ತಾನು ವಾಲ್ಮೀಕಿ ಎನ್ನುವುದನ್ನು ಹೇಳಿಕೊಂಡರು. ಶೋಕಭಾವವನ್ನು ಮೀರಿದ ಹರುಷ ಭಾವ ಮೂಡಿತು ಸೀತೆಯಲ್ಲಿ. ನಡೆದದ್ದೆಲ್ಲವನ್ನೂ ಮುಚ್ಚುಮರೆಯಿಲ್ಲದೆ ಬಿಚ್ಚಿಟ್ಟಳು ಬುವಿಸುತೆ. ಒಳಗಣ್ಣು ತೆರೆದು ಸೀತೆಯ ಗರ್ಭಸ್ಥಳವನ್ನು ವೀಕ್ಷಿಸಿದ ಮುನಿಗಳಿಗೆ ಅವಳು ಅವಳಿ ಮಕ್ಕಳ ಮಾತೆಯಾಗುವಳೆನ್ನುವುದು ತಿಳಿದುಬಂತು. ಅದನ್ನೇ ಹೇಳಿದರು ಅವಳಲ್ಲಿ. ತನ್ನ ಆಶ್ರಮಕ್ಕೆ ಬರುವಂತೆ ಸೂಚಿಸಿದರು. ಗರ್ಭಿಣಿಯ ಬಯಕೆಗಳೆಲ್ಲವನ್ನೂ ಪೂರೈಸುವ ಹೊಣೆ ತನ್ನದೆಂದರು. ಅವರ ದೃಢವಾದ ನುಡಿಗಡಲು ಸೀತೆಯ ಶೋಕವನ್ನು ಮುಳುಗಿಸಿತು. ಧೈರ್ಯಸ್ಥೆಯಾದಳು ಸೀತೆ. ಅವರೊಡನೆ ನಡೆದಳು ಆಶ್ರಮದೆಡೆಗೆ, ಶ್ರಮವಿಲ್ಲದೆ.ಎಲೆಗಳಿಂದ ಮಾಡಲಾದ ಕುಟೀರ. ಋಷಿಪತ್ನಿಯರ ಉಪಚಾರ. ಋತುಗಳ ಭೇದವೆಣಿಸದೆಯೇ ಬೆಳೆಯುವ ಗಿಡ ಮರಗಳು. ವೈರತ್ವ ಭಾವವನ್ನು ಮರೆತು ಬೆರೆಯುವ ಖಗ- ಮೃಗಗಳು. ಸೊಗಸೆನಿಸಿತು ಸೀತೆಗೆ ಆಶ್ರಮದ ಅ-ಶ್ರಮ ಬದುಕು.ಮುನಿಸತಿಯರ ಸಹವಾಸದಲ್ಲಿಯೇ ಸೀತೆಯ ಬಸುರಿಗೆ ನವಮಾಸ ತುಂಬಿತು. ಗರ್ಭದಲ್ಲಿರುವ ಶಿಶುಗಳನ್ನು ಭೂಮಿಗೆ ಇಳಿತರುವ ಕ್ಷಣವನ್ನು ನಿರುಕಿಸುತ್ತಿದ್ದಳು ಸೀತೆ.ಒಂದಿರುಳು ಅವಳ ತವಕವದು ಸಾಕಾರವಾಯಿತು. ಅವಳಿ ಶಿಶುಗಳು ಬಂದರು ಭೂಮಿಗೆ, ಭೂಸುತೆಯ ಗರ್ಭದಿಂದೀಚೆಗೆ. ಆಶ್ರಮದ ಪ್ರೌಢ ಸ್ತಿçÃಯರು ಅವಳ ಆರೈಕೆ ಮಾಡಿದರು. ಮುನಿವಟುಗಳು ತವಕದಿಂದ ಸುದ್ದಿಯನ್ನು ತಲುಪಿಸಿದರು ವಾಲ್ಮೀಕಿ ಮಹರ್ಷಿಗಳಿಗೆ.ಸಾನಂದದಿAದ ಬಂದು ಕಂದAಗಳ ಮೊಗಗಳನ್ನು ಕಂಡ ಮುನಿಗಳು ದರ್ಭೆಯ ಚೂರಿನಿಂದ ನೀರನ್ನು ಪ್ರೋಕ್ಷಿಸಿ, ದರ್ಭೆಯ ಚೂರನ್ನೇ ಸೂಚಿಸುವ ಕುಶ ಲವ ಎಂಬ ಹೆಸರುಗಳನಿಟ್ಟರು ಅವಳಿ ಮಕ್ಕಳಿಗೆ.ಚೆಲುವು ಎರಡು ರೂಪವನ್ನು ಪಡೆಯಿತೋ! ಶುಭ್ರತೆ ಎರಡು ಕವಲಾಗಿ ಒಡೆಯಿತೋ! ಗೆಲುವು ಗೆಳೆತನವನ್ನು ಗಳಿಸಿತೋ! ಕೀರ್ತಿ ಅಮೃತ ಧಾರೆಯಲ್ಲಿ ಹರಡಿ ಎರಡಾಯ್ತೋ! ಎಂಬAತೆ ಆ ಎಳೆಯ ಶಿಶುಗಳು ತೋರಿದರು ಆಶ್ರಮವಾಸಿಗಳ ಕಣ್ಣಿಗೆ.ಬೆಳೆಯತೊಡಗಿದರು ಕುಶಲವ ಇಬ್ಬರೂ, ಋಷಿಮುನಿಗಳ ಪ್ರೀತಿಯೊಲವನ್ನು ಪಡೆಪಡೆದು. ಕಾಲಕಾಲಕ್ಕೆ ಆಗಬೇಕಾದ ಸಂಸ್ಕಾರಗಳನ್ನೆಲ್ಲವನ್ನೂ ಕೊಡಿಸಿದರು ವಾಲ್ಮೀಕಿ ಮುನಿ ಅವರಿಗೆ. ಹನ್ನೆರಡು ವರುಷಗಳಾದಾಗ ಉಪನಯನ ಶಾಸ್ತç ಮಾಡಿಸಿದರು. ಶಸ್ತಾçಭ್ಯಾಸ ಮತ್ತು ಶಾಸ್ತಾçಭ್ಯಾಸ ಎರಡೂ ನಡೆದವು ಏಕಕಾಲಕ್ಕೆ. ರಾಮನೇ ತಮ್ಮ ತಂದೆಯೆAದು ಅರಿಯದ ಆ ಮಕ್ಕಳು ರಾಮಾಯಣವನ್ನು ಅನುದಿನವೂ ಹಾಡುತ್ತಿದ್ದರು ಭಕ್ತಿಭಾವದಿಂದ. ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಸತತವಾಗಿ ಅತ್ತಳು ಸತ್ಯಸತ್ವದ ಸತಿ ಸೀತೆ ಬಿರುಗಾಳಿಯ ಬಿರುಸಿಗೆ ಬಲವಿಲ್ಲದಂತಾದ ಬಾಳೆಗಿಡ ಬುವಿಯನ್ನಪ್ಪಿದಂತೆ ನೆಲಕ್ಕೆ ಬಿದ್ದಳು ಧರಣಿಸುತೆ, ಲಕ್ಷö್ಮಣನ ನುಡಿಯದು ಕಿವಿಗೆ ಬಿದ್ದ ಕ್ಷಣದಲ್ಲಿ. ಲೋಕವನ್ನೇ ಮರೆತಳು ತಕ್ಷಣದಲ್ಲಿ.ಸೀತೆಯ ಸ್ಥಿತಿಗೆ ಮರುಗಿದ ಲಕ್ಷö್ಮಣ ತನ್ನ ಉತ್ತರೀಯದಿಂದ ಅವಳಿಗೆ ಗಾಳಿಯನ್ನು ಬೀಸಿ, ಕಣ್ಣೀರು ಹರಿಸುತ್ತಾ ಅವಳನ್ನು ಸಾಂತ್ವನಗೊಳಿಸುವ ಪ್ರಯತ್ನ ನಡೆಸಿದ.ಕಣ್ಣುಗಳ ತೆರೆದಳು ರಾಮಸತಿ. ನಿಟ್ಟುಸಿರ ಬಿಟ್ಟಳು ಧರಣಿಸುತೆ. ಸುಮಿತ್ರಾಸುತನನ್ನು ನೋಡಿದಳು ಜನಕಸುತೆ.“ಅಪರಾಧವನ್ನೇನೂ ಮಾಡದ ನನ್ನನ್ನು ಹೀಗೆ ಅರಣ್ಯಕ್ಕೆ ಅಟ್ಟುವ ಬದಲು ಖಡ್ಗದಿಂದ ನನ್ನ ಶಿರವನ್ನೇ ಕತ್ತರಿಸಬಹುದಿತ್ತಲ್ಲಾ! ನನ್ನ ಮನೋವಲ್ಲಭನನ್ನು ತೊರೆದು ಈ ಕಾಡಿನಲ್ಲಿರುವಂತಾಯಿತೇ ನಾನು!” ಎಂದು ಅತ್ತಳು ಕೌಸಲ್ಯಾಸುತನ ಸತಿ.“ವಿವಾಹ ಆದಾಗಿನಿಂದಲೂ ನನ್ನ ಜೊತೆ ಸುಖಸುಖವಾಗಿ ಬದುಕಿದವರು, ನಾನು ಅಗಲಿದಾಗ ನೋವು ಅನುಭವಿಸಿದವರು, ನನಗಾಗಿ ಆ ದುಷ್ಟ ರಾವಣನನ್ನು ಕೊಂದವರು ಈಗ ತೊರೆದರೇ ನನ್ನನ್ನು!” ಎಂದು ಹಲುಬಿದಳು ಹಲವು ನಿಮಿಷ.ತನ್ನದೇನೂ ತಪ್ಪಿಲ್ಲ ಎಂದು ರುಜುವಾತುಪಡಿಸುವ ಸ್ವಪ್ರಜ್ಞೆ ಸೀತೆಯಲ್ಲೀಗ ಮೂಡತೊಡಗಿತು. “ಅಂದು ರಾವಣ ಸಂಹಾರದ ನಂತರ ಅಗ್ನಿಪ್ರವೇಶದ ಮೂಲಕ ನನ್ನ ಸತ್ಯವನ್ನು ಸಾಬೀತುಪಡಿಸಿಕೊಂಡವಳು ಈ ಸೀತೆ. ಹಾಗಿದ್ದೂ ನನ್ನನ್ನು ಅಪರಾಧಿ ಎನ್ನಲು ಕಾರಣವೇನು?” ಎಂಬ ಪ್ರಶ್ನೆಯೆತ್ತಿ ಲಕ್ಷö್ಮಣನ ಮುಖವನ್ನೇ ನೋಡಿದಳು.ಕಾಡಿನಲ್ಲಿ ತನ್ನನ್ನು ಬಿಟ್ಟುಹೋಗಲೆಂದು ಬಂದ ಲಕ್ಷ್ಮಣನು ಅವಳ ಕಣ್ಣಿಗೆ ಕಂಡದ್ದು ಕರುಣೆಯಿಲ್ಲದವನಾಗಿ. “ಕಲ್ಲುಮುಳ್ಳುಗಳೇ ಇರುವ ಕಾಡಿನಲ್ಲಿ ಅಂದು ಅಲೆದಾಡುತ್ತಿದ್ದೆವು. ಅಂತಹ ಕಷ್ಟದ ಸ್ಥಿತಿಯಲ್ಲಿ ನಾನು ನಡೆಯಲಾರದೆ ಒದ್ದಾಡುತ್ತಿದ್ದಾಗ ನನ್ನನ್ನು ಉಪಚರಿಸಿದವನು ನೀನು. ನನಗೆ ಸಂಕಟವಿತ್ತು ಘರ್ಜಿಸಿದ ವಿರಾಧನೆಂಬ ಅಸುರರನ್ನು ಕೊಂದವನು ನೀನು. ಅಂದು ಚಿನ್ನದ ಜಿಂಕೆಯ ಬೆನ್ನತ್ತಿಹೋದ ನನ್ನೊಡೆಯರಿಗೆ ಏನೋ ಕೆಡುಕು ಆಗಿದೆಯೆಂದು ನಾನು ವ್ಯಥೆಪಟ್ಟು, ಹೋಗಿ ನೋಡಿ ಬಾ ಎಂದು ನಿನ್ನಲ್ಲಿ ಕೇಳಿಕೊಂಡಾಗ ಅಯೋಧ್ಯಾಪತಿಯನ್ನು ಹುಡುಕಿಕೊಂಡು ಹೋದವ ನೀನು. ನನ್ನಿಷ್ಟದ ಮೈದುನ ನೀನು. ಹಾಗಿರುವಾಗ ನನ್ನನ್ನೊಬ್ಬಳನ್ನೇ ಈ ದುರ್ಗಮ ಕಾಡಿನಲ್ಲಿ ಬಿಟ್ಟುಹೋಗುವ ಮನಸ್ಸು ನಿನಗೆ ಬಂದೀತೇ ಲಕ್ಷö್ಮಣ!” ಎಂದು ದುಃಖವನ್ನು ತೋಡಿಕೊಂಡಳು.ಪತಿಯ ಮುಖವನ್ನು ಕಾಣದೆ ಎಂತಿರಲಿ ಇಲ್ಲಿ ಎಂದು ಪ್ರಲಾಪಿಸಿದಳು. ರಮಣನನ್ನು ರಮಿಸದೆ ಹೇಗಿರಲಿ ಇಲ್ಲಿ ಎಂದು ವಿಲಾಪಿಸಿದಳು. ಆಗಾಗ ಮೈಮರೆಯುತ, ಆಗಾಗ ಎಚ್ಚರವಾಗುತ ಸೋತ ಭಾವದಲ್ಲಿದ್ದಳು ಸೀತೆ, ಹಾವಿನಿಂದ ಕಚ್ಚಿಸಿಕೊಂಡ ಎಳೆಶಿಶುವಿನಂತೆ.ಈ ಬಗೆಯಲ್ಲಿ ಜಾನಕಿಯನ್ನು ಕಂಡ ಲಕ್ಷö್ಮಣ ತೊಳಲಾಟಕ್ಕೆ ಈಡಾದ. ತೊರೆದುಹೋಗಲೇಬೇಕಿತ್ತು ಅವನು ಅವಳನ್ನು ಕಾಡಿನಲ್ಲಿ, ರಾಮನಾಜ್ಞೆಗೆ ಶಿರಬಾಗಿ. ತೊರೆದುಹೋಗದಂತೆ ತಡೆಯಿತದೋ ಮಮಕಾರ, ದುಃಖಿಸಿದ ಅತಿಯಾಗಿ ಆ ಕ್ಷಣವೇ ಎದೆಬೀಗಿ.ಎಂತು ಹೋಗಲಿ ತಾನು, ಹೋಗದೇ ಇರಲೆಂತು ಇನ್ನು ಎಂಬ ದ್ವಂದ್ವ ಭಾವದಲ್ಲಿ ಸಂಕಟವನ್ನು ಸೌಮಿತ್ರಿ ಅನುಭವಿಸುತ್ತಿದ್ದಾಗಲೇ ಸೀತೆ ನುಡಿದಳು ತಪಸ್ವಿನಿಯ ತೆರದಲ್ಲಿ. “ಅಂದು ರೇಖೆಯನೆಳೆದು ರಾಮ ಶೋಧನೆಗೆ ಹೊರಟ ರೀತಿಯಲ್ಲಿಯೇ ಇಂದೂ ಹೊರಡು ಸೌಮಿತ್ರಿ. ನನ್ನ ಅಪರಾಧವಿಲ್ಲದೆ ನನ್ನ ಒಡೆಯರು ಇಂದು ತೊರೆದರೆನ್ನ ಎಂಬ ಸಮಾಚಾರವನ್ನು ಹೇಳಿಬಿಡು ಎನ್ನ ತಾಯಿಸಮಾನರಾದ ಕೌಸಲ್ಯೆಗೆ” ಎಂದಳು ಸೀತೆ.ರಾಮನ ಜೊತೆಗೆ ಯಾರೂ ಇಲ್ಲ ಸಹಾಯಕ್ಕೆ ಎಂಬ ಯೋಚನೆ ಮೂಡಿತು ಅವಳಲ್ಲಿ, ಆ ಕ್ಷಣದಲ್ಲಿ. “ತಡವಾದರೆ ಕೋಪಿಸಿಕೊಳ್ಳಬಹುದು ನಿನ್ನಣ್ಣ. ನನಗಾದರೂ ಈ ಕಾಡಿನಲ್ಲಿ ಕ್ರೂರಮೃಗಗಳ ನೆರವಿದೆ. ಅವರು ಅಲ್ಲಿ ಒಬ್ಬಂಟಿಯಾಗಿದ್ದಾರೆ. ವಿಳಂಬ ಮಾಡದೆ ಸೇರು ಕ್ಷಿಪ್ರವಾಗಿ ಅವರನ್ನು” ಎಂದಳು ಮರ್ಮಾರ್ಥಭರಿತವಾಗಿ.ತನ್ನನ್ನು ತೊರೆದ ರಾಮನದ್ದೇನೂ ತಪ್ಪಿಲ್ಲ. ಹೆಣ್ಣಾಗಿ ಜನಿಸಿದ ತನ್ನದೇ ಅಪರಾಧ ಎಂಬ ಕೀಳರಿಮೆಯ ಮಾತೂ ಹೊರಬಂತು ಅವಳಿಂದ.ಈ ಪರಿಯ ಪರಿತಾಪವನ್ನು ಕಂಡ ಲಕ್ಷö್ಮಣ ದೃಷ್ಟಿ ಹರಿಸಿದ ದೆಸೆದೆಸೆಗೆ. ಕಣ್ಣಿಗೆ ಕಂಡ, ಕಾಣದ ಮೃಗ- ಖಗ, ಕ್ರಿಮಿ- ಕೀಟ, ಗಿಡ- ಮರ, ಗಂಗಾನದಿ, ದಿಕ್ಕುಗಳು, ಪಂಚಭೂತಗಳು ಎಲ್ಲವುಗಳನ್ನೂ ಉದ್ದೇಶಿಸಿ ನುಡಿದ ಉದ್ದಂಡವಾದ ಮಾತನ್ನು.“ಜಾನಕಿಯನ್ನು ರಕ್ಷಿಸುವ ಹೊಣೆಯೀಗ ನಿಮ್ಮದು. ಭೂದೇವಿಯೇ ಪೊರೆಯಬೇಕು ನೀನೇ, ನಿನ್ನ ಈ ಮಗಳನ್ನು”ಅಸಹಾಯಕ ಹೆಣ್ಣನ್ನು ಅನಾಥೆಯ ತೆರದಲ್ಲಿ ಬಿಟ್ಟುಹೋಗಬೇಕಾದ ತನ್ನ ಹೀನಸ್ಥಿತಿಯನ್ನು ನೆನೆದು ಮತ್ತೆ ಮತ್ತೆ ಮರುಗಿದ ಲಕ್ಷö್ಮಣ. ಈ ನಿಷ್ಠುರದ ಬದುಕನ್ನು ತಾನು ನಡೆಸಬೇಕಾಗಿ ಬಂದದ್ದಕ್ಕೆ ತನ್ನ ದೇಹವನ್ನು ಎರಡು ಭಾಗವಾಗಿ ಸೀಳಿಹಾಕಬೇಕು ಎಂದು ತನಗೆ ತಾನೇ ಶಪಿಸಿಕೊಂಡ.ಏನಾದರಾಗಲಿ ಇಲ್ಲಿಂದ ಹೋಗಿಯೇ ಬಿಡುತ್ತೇನೆ ಎಂದು ಮುಂದೆ ಮುಂದೆ ಹೋದ, ಬಿರುಸಾಗಿ. ಏನಂದುಕೊಳ್ಳುವಳೋ ಜನಕಸುತೆ ಎಂದು ಆಲೋಚಿಸಿ ಮತ್ತೆ ಹಿಂದೆ ಹಿಂದೆ ಬಂದ, ಇರಿಸುಮುರುಸಾಗಿ. ಅಣ್ಣನನ್ನು ಸೇರಬೇಕೆಂಬ ತುಡಿತವದು ಮತ್ತೆ ಸೆಳೆಯಿತು ಅವನನ್ನು. ಸೀತೆಯನ್ನು ನೋಡದೆಯೇ ಮುಂದೆ ಹೋದ. ಹೆಂಗಳೆಯ ಮನವನ್ನು ನೋಯಿಸಿದೆ ಎಂಬ ಭಾವವದು ಎಳೆಯಿತು ಅವನನ್ನು. ಸೀತೆಯೆಡೆಗೆ ನೋಡುತ್ತಾ ಹಿಂದೆ ಬಂದ. ಒಮ್ಮೆ ಆ ಕಡೆಗೆ, ಮತ್ತೊಮ್ಮೆ ಈ ಕಡೆಗೆ. ಒಮ್ಮೆ ಮುಂದೆ, ಇನ್ನೊಮ್ಮೆ ಹಿಂದೆ. ತೊರೆಯದಿರಲಾರೆ ಈಗ ಎಂಬ ಭಾವ ಒಮ್ಮೆ. ತೊರೆದುಹೋಗಲಾರೆ ಬೇಗ ಎಂಬ ಭಾವ ಮಗದೊಮ್ಮೆ. ಮುಂದಕ್ಕೂ ಹಿಂದಕ್ಕೂ ಹೊಯ್ದಾಡುವ ಉಯ್ಯಾಲೆಯಂತಾದ ಲಕ್ಷö್ಮಣ.ಅದೋ! ಆ ಕ್ಷಣದಲ್ಲಿ, ಅದೊಂದು ಕ್ಷಣದಲ್ಲಿ, ಆ ಒಂದೇ ಒಂದು ಕ್ಷಣದಲ್ಲಿ ಸೀತೆಯನ್ನು ಅಗಲಿ ಹೋಗಿಯೆಬಿಟ್ಟ ಸೌಮಿತ್ರಿ! ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-39 ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಅರಮನೆಯ ತೊರೆದಳು, ಅರಣ್ಯವನು ಸೇರಿದಳು “ದುಃಖಿ ನೀನಾಗದೆ ಆ ಜಾನಕಿಯನ್ನು ಗಂಗಾನದಿಯ ದಡದಲ್ಲಿರುವ ಕಾಡಿನಲ್ಲಿ ಬಿಟ್ಟುಬರಬೇಕು. ಕಾಡಿನಲ್ಲಿ ಋಷಿಪತ್ನಿಯರ ಸಂಗದಲ್ಲಿ ಕಾಲವನ್ನು ಕಳೆಯುವ ಬಯಕೆಯನ್ನು ಹಿಂದೊಮ್ಮೆ ನನ್ನಲ್ಲಿ ತೋಡಿಕೊಂಡಿದ್ದಳು. ಈಗ ಅದನ್ನೇ ನೆಪವಾಗಿಸಿಕೊಂಡು ಅವಳನ್ನಿಲ್ಲಿಂದ ಕರೆದೊಯ್ದು ಕಾನನದಲ್ಲಿ ಬಿಟ್ಟು ಬಾ” ರಾಮನುಡಿಯದು ಕರ್ಣಕಠೋರವಾಯಿತು ಲಕ್ಷ್ಮಣನ ಪಾಲಿಗೆ.ಅಣ್ಣನ ಆಜ್ಞೆಯನ್ನು ಅವಗಣಿಸಲಾಗದ ಅನಿವಾರ್ಯತೆ ಒಂದೆಡೆಯಲ್ಲಿ. ಅಣ್ಣ ಹೇಳಿದಂತೆಯೇ ನಡೆದುಕೊಂಡರೆ ತಾಯಿಯನ್ನು ವಧಿಸಿದ ಮಹಾಪಾತಕಿಯಂತಾಗುತ್ತೇನೆ ತಾನು ಎಂಬ ಅಳುಕು ಇನ್ನೊಂದೆಡೆಯಲ್ಲಿ. ಅತ್ತಿಗೆಯನ್ನು ಕಾನನದಲ್ಲಿ ಬಿಟ್ಟು ಬರುವೆನೋ, ಬಾರೆನೋ ಎಂಬ ಇಬ್ಬಂದಿತನವದು ಸಂಕಟಕ್ಕೀಡುಮಾಡಿತು ಸುಮಿತ್ರೆಯ ಸುತನನ್ನು. ಶರೀರ ಅದುರಿತು. ಚದುರಿತು ಶೋಕಭಾವ ಮನದ ತುಂಬ. ಕೊರಳು ಬಿಗಿಯಿತು. ಸುರಿಯಿತು ದುಃಖಸೂಚಿತ ಅಶ್ರು ಕಣ್ಣಿನಿಂದ.ಈ ಸ್ಥಿತಿಯಲ್ಲಿ ಲಕ್ಷಣನಿರಬೇಕಾದರೆ ಶ್ರೀರಾಮನ ಕಠೋರ ಕಣ್ಣುಗಳು ಕಠಿಣಾತಿಕಠಿಣವಾಗಿ ದಿಟ್ಟಿಸಿದವು ತಮ್ಮನನ್ನು. “ನಾನೇ ಅವಳನ್ನು ತೊರೆಯುವ ನಿರ್ಧಾರ ಮಾಡಿರುವಾಗ ನಿನಗೇನು ಸಮಸ್ಯೆ! ಹೋಗು ಅವಳನ್ನು ಬಿಟ್ಟು ಬಾ ಅರಣ್ಯದಲ್ಲಿ” ಎಂದು ದಯೆಯಿಲ್ಲದೆ ನುಡಿದ ಶ್ರೀರಾಮ. ಪ್ರಜೆಗಳಿಗನುಗುಣವಾಗಿ ನಡೆದುಕೊಳ್ಳಬೇಕೆಂಬ ಒತ್ತಡವೇ ಅವನನ್ನು ಆ ಬಗೆಯಲ್ಲಿ ಕಾರುಣ್ಯಶೂನ್ಯನಾಗಿಸಿತೋ ಏನೋ!ನೋವಿನ ಭಾವದಿಂದಲೇ ರಥವನ್ನು ಸಿದ್ಧಪಡಿಸಿದ ಲಕ್ಷ್ಮಣ. ಸೀತೆಯಿದ್ದ ರಾಜಮಂದಿರಕ್ಕೆ ಬಂದ. ಅವಳ ಮೊಗವನ್ನು ನೋಡುವ ಧೈರ್ಯ ಬರಲಿಲ್ಲ ಅವನಿಗೆ. ತಲೆಬಾಗಿಸಿಯೇ ನಿಂತು ಅವಳಲ್ಲಿ “ಮಾತೆಯೇ, ಕಾನನಕ್ಕೆ ಹೋಗಬೇಕೆಂದು ಬಯಸಿದವಳು ನೀನು. ನಿನ್ನಿಚ್ಛೆಯನ್ನು ಪೂರೈಸಲೆಂದು ಈಗ ನನ್ನಣ್ಣ ಶ್ರೀರಾಮ ನಿನ್ನನ್ನು ಕಾಡಿಗೆ ಕಳುಹಿಸುವ ಮನಸ್ಸು ಮಾಡಿದ್ದಾನೆ. ರಥವನ್ನೇರು. ಈಗಲೇ ಪಯಣ ಆರಂಭವಾಗಲಿ” ಎಂದು ಶೋಕಛಾಯೆಯನ್ನು ಬೀರಿ ನುಡಿದ ಲಕ್ಷ್ಮಣಆ ಕ್ಷಣದಲ್ಲಿ ಅವಳ ಮನಸ್ಸಿಗಾದ ಸಂತಸವದು ಲಕ್ಷö್ಮಣನ ನಿಜಭಾವವನ್ನು ತೋರಗೊಡಲೇ ಇಲ್ಲ. ಅತಿಯಾಗಿ ಸಂಭ್ರಮಿಸಿದಳು ಧರಣಿಸುತೆ. ತನ್ನ ಮನದಿಚ್ಛೆಯನ್ನು ತನ್ನ ಮನದೊಡೆಯ ಇಷ್ಟು ಬೇಗ ಪೂರೈಸಿದ ಎಂಬ ಸಂತೃಪ್ತಿ ಅವಳದಾಯಿತು. ನಿಜವನ್ನು ತಿಳಿಯದೆಯೇ ಹರ್ಷದಲ್ಲಿ ನಲಿಯುತಿರುವ ಸೀತೆಯನ್ನು ಕಂಡು ಇನ್ನಷ್ಟು ಮರುಗಿದ ಲಕ್ಷö್ಮಣ.ಆಶ್ರಮದ ಋಷಿಪತ್ನಿಯರಿಗೆ ಕೊಡಲೆಂದು ಅನೇಕಾನೇಕ ವಸ್ತುಗಳನ್ನು ತೆಗೆದಿಟ್ಟುಕೊಂಡಳು. ಶ್ರೀರಾಮನ ಪಾದುಕೆಗಳನ್ನು ಜೊತೆಗಿರಿಸಿಕೊಂಡಳು. ಅರಮನೆಯ ಗುರು ಹಿರಿಯರಿಗೆ ವಂದಿಸಿದಳು. ಅನುನಯದಿಂದ ಎಲ್ಲರನ್ನೂ ಮಾತನಾಡಿಸಿದಳು. ಅಯೋಧ್ಯೆಗೆ ವಿದಾಯ ಹೇಳಿದಳು ಸೀತೆ. ಲಕ್ಷö್ಮಣ ನಡೆಸುತ್ತಿದ್ದ ರಥವದು ಸೀತೆಯನ್ನು ಅಯೋಧ್ಯೆಯಿಂದ, ಶ್ರೀರಾಮನಿಂದ ದೂರ ದೂರ ದೂರವಾಗಿಸಿತು.ರಥದಲ್ಲಿದ್ದ ಪತಾಕೆಯದು ನೋಡಲಾರೆ ಜಾನಕಿಯ ಈ ಹೀನಸ್ಥಿತಿಯನ್ನು ಎಂಬAತೆ ತಲೆಯನ್ನು ಕೊಡಹುತ್ತಿತ್ತು. ‘ಯುದ್ಧದಲ್ಲಿ ಶತ್ರುಗಳನ್ನು ಕೊಂದು ಮೆರೆಯಲೆಂದು ಏರುತ್ತಿದ್ದ ರಥವಿದು. ಇಂದು ಸೀತಾಮಾತೆಯನ್ನು ಕಾಡಿಗೆ ಕಳುಹಿಸಿಬರಲು ಇದನ್ನು ಏರುವಂತಾಯಿತಲ್ಲಾ!’ ಎಂಬ ಯೋಚನೆ ಲಕ್ಷö್ಮಣನಲ್ಲಿ ಮೂಡಿತು. ಮರುಕಪಟ್ಟ ಸೌಮಿತ್ರಿ. ‘ಹೇಗೆ ಇವಳನ್ನು ಕಾಡಿಗೆ ಬಿಟ್ಟುಬರುವೆನೋ! ಯಾಕೆ ಈ ಕಾರ್ಯವನ್ನು ನನಗೆ ವಹಿಸಿದನೋ ನನ್ನಣ್ಣ!’ ಎಂದು ಹಾಗೆಯೇ ಹಲುಬಿದ.ಆಗಲೇ ನರಿಯ ಕೂಗು ಕೇಳಿಬಂತು. ಕುಳಿತಿದ್ದ ಮೃಗಗಳು ಮೇಲೆದ್ದು ರಥದ ಮುಂದುಗಡೆ ದಾರಿಯನ್ನು ದಾಟಿದವು. ಸೀತೆಯ ಬಲದ ಕಣ್ಣು ಅದುರಿತು. ಏನಿದು ಈ ಬಗೆಯ ಅಪಶಕುನಗಳು ಎನಿಸಿತು ಅವಳಿಗೆ. ಹೇಳಿಕೊಂಡಳು ಲಕ್ಷö್ಮಣನಲ್ಲಿ. ಆ ಕ್ಷಣದಲ್ಲಿ ಅವಳಲ್ಲಿ ಮೂಡಿಬಂದದ್ದು ರಾಮಯೋಚನೆ. ತನ್ನೊಡೆಯ ಶ್ರೀರಾಮನಿಗೆ ಒಳ್ಳೆಯದೇ ಆಗಲಿ; ಕೆಡುಕು ಅವನನ್ನು ಬಾಧಿಸದಿರಲಿ ಎಂದು ಬಯಸಿದಳು ಭೂಮಿಸುತೆ.ರಥವೀಗ ಬಹುದೂರ ಸಾಗಿಬಂದಿತ್ತು. ಸೀತಾಮಾತೆಯ ಕಣ್ಣೆದುರಿಗೆ ಈಗ ಕಂಡವಳು ಗಂಗಾಮಾತೆ. ಪರಮ ನಿಷ್ಕಲ್ಮಶ ಪರಿಯಲ್ಲಿ ಪರಮ ಪಾವನೆಯಾಗಿ ಹರಿಯುತ್ತಿದ್ದಳು. ರಥದಿಂದಿಳಿದ ಲಕ್ಷö್ಮಣ ಸೀತೆ ಗಂಗಾನದಿಗೆ ನಮಸ್ಕರಿಸಿದರು. ದೋಣಿಯನ್ನೇರಿದ ಅವರನ್ನು ಗಂಗಾಮಾತೆ ತನ್ನ ಬೆನ್ನಮೇಲೆಯೇ ಹೊತ್ತು ಇನ್ನೊಂದು ತೀರಕ್ಕೆ ಸೇರಿಸಿದಳು.ಆ ತೀರದಲ್ಲಿದ್ದದ್ದು ದಟ್ಟವಾದ ಕಾಡು. ಭಯ ಮೂಡಿಸುವಂತಿತ್ತು ಆ ನಿಬಿಡ ಕಾನನದ ನಿಲುವು. ರಾಮಕಾಂತೆಯ ಕಾಂತಿವೆತ್ತ ಕಣ್ಣಿಗೆ ಆ ಕಾಂತಾರ ತೋರಿತು ಭೀಕರವಾಗಿ. ರಾಮನಾಮವನ್ನು ಜಪಿಸತೊಡಗಿದಳು ಭೀತಿಗೆ ಈಡಾಗಿ. ಅಂಜಿದಳು. ಅಳುಕಿದಳು.“ಇಲ್ಲಿ ಮುನಿಗಳ ಆಶ್ರಮಗಳು ಕಾಣಿಸುತ್ತಿಲ್ಲ. ಋಷಿಪತ್ನಿಯರು ಕಣ್ಣಿಗೆ ತೋರುತ್ತಿಲ್ಲ. ಹೋಮಧೂಮಗಳಿಲ್ಲ. ಋಷ್ಯಾಶ್ರಮಕ್ಕೆ ನನ್ನನ್ನು ಕರೆದೊಯ್ಯದೆ ಮನಕ್ಕೆ ಶ್ರಮವನ್ನು ನೀಡುವ ಈ ದಟ್ಟ ಕಾಡಿಗೇಕೆ ಕರೆತಂದೆ ನನ್ನನ್ನು?” ಎಂದು ಕೇಳಿದಳು ಲಕ್ಷö್ಮಣನಲ್ಲಿ.ಅವನು ಮೌನಿಯಾಗಿರುವಾಗಲೇ “ಪರಮ ಪಾವನರಾದ ನನ್ನ ಪತಿಯನ್ನು ತೊರೆದುಬಂದ ನನಗೆ ಪುಣ್ಯಾಶ್ರಮ ಕಣ್ಣಿಗೆ ಬೀಳುವುದಾದರೂ ಹೇಗೆ!” ಎಂದು ಹೇಳಿದಳು.ಧಿಕ್ಕರಿಸಿ ತೊರೆದ ಶ್ರೀರಾಮನನ್ನು ಹೊಗಳುವ ಅವಳ ಮುಗ್ಧತೆ ಇನ್ನಿಲ್ಲದ ದುಃಖ ಮೂಡಿಸಿತು ಲಕ್ಷö್ಮಣನಲ್ಲಿ. ಅವನ ಅಧರಗಳು ಅದುರಿದವು. ಕಣ್ಣೀರ ಹನಿಗಳು ಸುರಿದವು. ಉದರದೊಳಗೆ ಕತ್ತಿಯಾಡಿಸಿದಂತಹ ಅನುಭವ ಅವನದ್ದಾಯಿತು. ಹೃದಯ ಕರಗಿತು. ಮನವು ಮರುಗಿತು. ಎದೆಯೊಳಗಿನ ಮಾತು ಹೊರಬರದಾಯಿತು. ‘ಹೇಗೆ ಹೇಳದಿರಲಿ ನಿಜವಿಚಾರವನ್ನು ಈ ಮುಗುದೆಗೆ!’ ಎಂದು ಅತೀವ ವೇದನೆಗೊಳಗಾದ ರಾಮನ ಪ್ರಿಯ ಅನುಜ ಲಕ್ಷö್ಮಣ.ಸಂತಸದ ಸೀತೆಯನ್ನು ಸೋತ ಸೀತೆಯಾಗಿಸುವ ಮಾತುಗಳದೋ ಹೊರಬಂದವು ಲಕ್ಷö್ಮಣನಿಂದ. “ಮಾತೆಯೇ, ಇದುವರೆಗೂ ನಾನು ನಿನ್ನಿಂದ ಮುಚ್ಚಿಟ್ಟ ವಿಚಾರವಿದು. ಲೋಕಾಪವಾದಕ್ಕೆ ಹೆದರಿ ನಿನ್ನನ್ನು ತೊರೆದು ಕಳುಹಿಸಿದ್ದಾನೆ ಶ್ರೀರಾಮ. ನಿನ್ನನ್ನು ಕಾಡಿನಲ್ಲಿಯೇ ಬಿಟ್ಟುಹೋಗುವ ಹೊಣೆಯನ್ನವನು ವಹಿಸಿದ್ದು ನನಗೆ. ಅವನ ಆಜ್ಞೆಯನ್ನು ಮೀರಲಾಗದೆ ನಿನ್ನನ್ನು ಈ ದಟ್ಟ ಕಾನನಕ್ಕೆ ಕರೆತಂದಿದ್ದೇನೆ. ಇನ್ನು ಎಲ್ಲಿಗಾದರೂ ಹೋಗು ನೀನು” ಎಂದ ಕಣ್ಣೀರು ಹರಿಸುತ್ತ, ಸುಮಿತ್ರಾಸುತ. ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-38 ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಅಗಸನ ಮಾತದು ರಾಮಚಿತ್ತವ ಮಲಿನಗೊಳಿಸಿತು ಅಗಸನ ಮಾತದು ರಾಮಚಿತ್ತವ ಮಲಿನಗೊಳಿಸಿತು ಬಿದ್ದ ಕನಸದು ಬೀಳಿಸಿತು ಶ್ರೀರಾಮನನ್ನು ಆರಾಮ, ವಿರಾಮಗಳಿರದ ಚಿಂತೆಯ ಕೂಪದಲ್ಲಿ. ಪ್ರಜಾಪರ ಪುರುಷೋತ್ತಮ ಪ್ರಭುವೆನಿಸಿಕೊಂಡವನು ಪ್ರಜೆಗಳ ಯೋಗಕ್ಷೇಮ ವಿಚಾರಿಸುವುದನ್ನೂ ಮರೆತುಬಿಟ್ಟ. ಮೂರು ಹಗಲುಗಳು ಎರಡು ಇರುಳುಗಳು ಕಳೆದುಹೋದವು.ಮೂರನೆಯ ಇರುಳು ಅರಮನೆಯನ್ನು ಬಿಟ್ಟು ಹೊರಟ ಶ್ರೀರಾಮ ಪ್ರಭು ಗೂಢಚಾರನೊಬ್ಬನನ್ನು ಕಂಡು ಕೇಳಿದ ತನ್ನ ಆಳ್ವಿಕೆಯ ಪರಿಯನ್ನು. ತನ್ನನ್ನು ನಿಂದಿಸುವ, ಹೀಗಳೆಯುವ ಪ್ರಜೆಗಳು ಯಾರಾದರೂ ಇದ್ದಾರೆಯೇ? ಹಾಗೆ ಟೀಕಿಸುವವರಿದ್ದರೆ ಯಾವ ಕಾರಣಕ್ಕೆ ತೆಗಳುತ್ತಿರಬಹುದು ತನ್ನನ್ನು? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿತ್ತು ಅವನಲ್ಲಿ. “ಕೊಂಕು ಕೊರತೆಗಳೇನಿವೆ ನನ್ನ ಬಗೆಗೆ ಪ್ರಜೆಗಳದ್ದು?” ಎಂದು ಕೇಳಿದ ಗೂಢಚಾರನಲ್ಲಿ.ಒಳ್ಳೆಯ ರಾಜನ ಲಕ್ಷಣವಿದು. ಅರಸನಾದವನು ತನ್ನನ್ನು ಹೊಗಳುವವರ ಮಾತನ್ನು ಎದೆಗಿಸಿಕೊಂಡರಷ್ಟೇ ಸಾಲದು. ತೆಗಳುವವರ ಕಟು ನುಡಿಗಳನ್ನೂ ತಲೆಗೇರಿಸಿಕೊಳ್ಳಬೇಕು. ಬೈದದ್ದರಲ್ಲಿ ನಿಜಾಂಶವೆಷ್ಟಿದೆ ಎನ್ನುವುದನ್ನು ವಿವೇಚಿಸಿ, ತನ್ನಲ್ಲಿರುವ ದೋಷವನ್ನು ಸರಿಪಡಿಸಿಕೊಳ್ಳಬೇಕು. ಪೂರ್ಣ ಜಗವದು ಹೊಗಳಿ ನಲಿಯುವಂತೆ ಆಡಳಿತ ನೀಡಿದ್ದ ಶ್ರೀರಾಮಚಂದ್ರನೀಗ ತನ್ನ ಆಳ್ವಿಕೆಯ ಲೋಪದೋಷಗಳನ್ನು ತಿಳಿದುಕೊಳ್ಳುವ ಮನಸ್ಸು ಮಾಡಿದ್ದ.ಗೂಢಚಾರ ವಿನಯಪೂರ್ವಕವಾಗಿ ನುಡಿದ. “ಪ್ರಭುಗಳೇ, ಸೂರ್ಯನನ್ನು ಮಂಜು ಮುಸುಕಿದ ತಕ್ಷಣವೇ ಸೂರ್ಯನ ಕಾಂತಿಯದು ಮಂಕಾಗುವುದೇ! ಸೂರ್ಯನ ಪ್ರಬಲ ಕಿರಣಗಳಿಗೆ ಮಂಜು ಮಣಿದುಹೋಗುತ್ತದೆಯಷ್ಟೇ” ಎಂಬ ಗೂಢಚಾರನ ಮಾತು ಬಲವಾದ ಸುಳುಹನ್ನು ಒದಗಿಸಿತು, ಶ್ರೀರಾಮನ ಸೂಕ್ಷö್ಮಮತಿಗೆ.ಸೂರ್ಯನನ್ನು ಮಂಜು ಮುಸುಕಿದೆಯೆಂದು ಗೂಢಚಾರ ಹೇಳಬೇಕಾದರೆ ತನ್ನ ಬಗೆಗೆ ಕೆಟ್ಟ ಮಾತು ವ್ಯಕ್ತವಾಗಿದೆ ಎನ್ನುವುದನ್ನು ಅರ್ಥೈಸಿಕೊಳ್ಳುವುದಕ್ಕೆ ಅಧಿಕ ಸಮಯ ಬೇಕಾಗಲಿಲ್ಲ ಅಯೋಧ್ಯಾಪತಿಗೆ. “ಯಾವ ಟೀಕೆಯ ಮಾತದು ಬಂದಿದೆ ನನ್ನ ಬಗೆಗೆ?” ಎಂದು ಕೇಳಿದ ಅವನನ್ನು.“ಅಂದು ಗೌತಮ ಋಷಿಯ ಪತ್ನಿ ಅಹಲ್ಯೆಗೆ ಮೋಕ್ಷದ ದಾರಿ ತೋರಿದವರು ನೀವು. ಎಂತಹ ಪರಮಪಾವನರು ನೀವು ಎನ್ನುವುದನ್ನು ಅರಿತುಕೊಳ್ಳಲು ಇನ್ನೇನು ಬೇಕು! ಮೂರ್ಖರೆನಿಸಿಕೊಂಡವರು ನುಡಿದ ಮಾತನ್ನು ನಿಮಗೆ ಹೇಳುವ ಇಚ್ಛೆಯಿಲ್ಲ ನನಗೆ. ಮನ್ನಿಸಬೇಕು ನನ್ನನ್ನು” ಎಂದು ಹೇಳಲು ಹಿಂಜರಿದ ಆ ಗೂಢಚಾರ.ಶ್ರೀರಾಮ ಕೌತುಕವದು ಕೆರಳಿತು. ಇನ್ನು ಆಲಿಸದಿರಲಾರೆ ಟೀಕೆಯ ಮಾತನ್ನು ಎಂದುಕೊAಡವನು ಗೂಢಚಾರನನ್ನು ಒತ್ತಾಯಪಡಿಸಿದ. “ಅರಸನ ಆಜ್ಞೆಯಿದು. ನುಡಿಯಲೇಬೇಕು ನೀನೀಗ. ಮುಚ್ಚಿಟ್ಟರೆ ನನ್ನ ಮೇಲಾಣೆ” ಎಂದ.ಅರಸನ ಮೇಲಿನ ಪ್ರೀತಿ ಗೂಢಚಾರನ ಬಾಯಿ ತೆರೆಸಿತು. ತಾನು ಗುಟ್ಟಾಗಿ ಕಂಡದ್ದನ್ನು, ಕೇಳಿದ್ದನ್ನು ಅರುಹತೊಡಗಿದ. “ನಿಮ್ಮ ಮಹಿಮೆಯನ್ನು ಅರಿಯುವ ಸಾಮರ್ಥ್ಯವಿರದ ಅಗಸನೊಬ್ಬ ಆಡಿದ ಮಾತಿದು. ಅವನ ಹೆಂಡತಿ ಅವನ ಮೇಲೆ ಮುನಿಸಿಕೊಂಡು ತವರುಮನೆ ಸೇರಿಕೊಂಡಿದ್ದಳು. ಅವಳ ತಂದೆ ತಾಯಿ ಮಗಳನ್ನು ಮತ್ತೆ ಗಂಡನ ಮನೆಗೆ ಬಿಟ್ಟುಹೋಗುವುದಕ್ಕಾಗಿ ಬಂದಿದ್ದರು. ಆಗ ಆ ಅಗಸ ಕೋಪದಿಂದ “ಬಿಟ್ಟುಹೋದ ಪತ್ನಿಯನ್ನು ಮತ್ತೆ ಆ ರಾಮನಂತೆ ಜೊತೆ ಸೇರಿಸಿಕೊಂಡು ಬದುಕುವವ ನಾನಲ್ಲ” ಎಂದು ಅಬ್ಬರಿಸಿದ. ಇಂಥದ್ದೊAದು ಟೀಕೆ ವ್ಯಕ್ತವಾಗಿದೆ ನಿಮ್ಮ ಬಗೆಗೆ” ಹೀಗೆ ಹೇಳಿದ ಗೂಢಚಾರ.ಅವನನ್ನು ಕಳುಹಿಸಿದ ಶ್ರೀರಾಮ ಯೋಚನಾಸಾಗರದಲ್ಲಿ ಮುಳುಗಿಹೋದ. ಬಂಧನಕ್ಕೆ ಸಿಲುಕಿದ ಮದಗಜದಂತಾಯಿತು ಅವನ ಸ್ಥಿತಿ. ಪ್ರತೀ ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ ಕೊಡುತ್ತಿದ್ದ ಅವನಿಗೆ ಬಟ್ಟೆಯನ್ನೊಗೆದು ಮಲಿನವನ್ನು ಇನ್ನಿಲ್ಲವಾಗಿಸುವವನ ಮಲಿನದ ಮಾತು ಬಲವಾಗಿಯೇ ಘಾಸಿಯನ್ನುಂಟುಮಾಡಿತ್ತು. ಒಬ್ಬನ ಮಾತು ಹಲವರ ಮಾತಾಗಿರಬಹುದು. ಹಲವರ ಅಭಿಪ್ರಾಯವದು ಒಬ್ಬನ ಸಿಡಿನುಡಿಯಲ್ಲಿ ವ್ಯಕ್ತಗೊಂಡಿರಬಹುದು ಎನಿಸಿತು ಅವನಿಗೆ. ಸೀತೆಯನ್ನು ತೊರೆಯುವುದೇ ಸೂಕ್ತ ಎಂದುಕೊAಡ ಪ್ರಭು ಶ್ರೀರಾಮಚಂದ್ರ.ಸಭೆಯನ್ನು ನಡೆಸದೆ, ಯಾರಲ್ಲಿಯೂ ಬೆರೆಯದೆ, ರಾಜರಲ್ಲಿ ಮಾತನಾಡದೆ ಅನ್ಯಮನಸ್ಕನಾಗಿದ್ದ ಅಣ್ಣನ ರೀತಿ ಅಚ್ಚರಿ ಮೂಡಿಸಿತು ಅವನ ತಮ್ಮಂದಿರಲ್ಲಿ. ಅಂತಃಪುರ ಹೊಕ್ಕವರು ಕಂಡದ್ದು, ಆಲಸ್ಯದ ಭಾವದಲ್ಲಿ ಮೈಮರೆತವನಂತೆ ಕುಳಿತಿದ್ದ ಸಹೋದರ ಶ್ರೀರಾಮನನ್ನು. ಕಾಲಿಗೆರಗಿದರು ತಮ್ಮಂದಿರು. ನುಡಿಸುವ ಮನಸ್ಸಾಗಲಿಲ್ಲ.ರಾಮನೇ ಮಾತನಾಡಿದ ಅವರಲ್ಲಿ. ಮನದ ದುಗುಡವನ್ನು ಬಿಚ್ಚಿಟ್ಟ. ಅಗಸನಾಡಿದ ಮಾತನ್ನು ಅವರಿಗೆ ಅರುಹಿದ. ತನ್ನ ಸತಿ ಸೀತೆ ಪತಿವ್ರತೆ ಎನ್ನುವುದರ ಅರಿವು ತನಗಿದೆ ಎಂದ. ಪ್ರಜೆಯ ಮಾತಿಗೆ ಮನ್ನಣೆ ಕೊಟ್ಟು ಅವಳನ್ನು ತೊರೆಯುವವ ತಾನೆಂದ.ಅಣ್ಣನ ಮಾತು ಅಸಹನೀಯವಾಯಿತು ಆ ಕ್ಷಣವೇ ಅವನ ತಮ್ಮಂದಿರಿಗೆ. ಭರತನ ಕಂಠ ಗದ್ಗದಿಸಿತು ಶೋಕದಿಂದ. ಭಾರ ಹೃದಯದವನಾದ ಭರತ. “ಬುದ್ಧಿ ಇದ್ದವರು ಹಾಲು ಕೊಡುವ ಹಸುವನ್ನು ಕಾಡಿಗೆ ಬಿಡುತ್ತಾರೆಯೇ! ಅಂದು ನಿನ್ನ ಪತ್ನಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಲಾಗಿದೆ. ಆಗಲೇ ಅವಳ ಸತ್ಯ ಸಾಬೀತಾಗಿದೆ. ಹಾಗಿದ್ದೂ ಈಗ ಇಂಥ ನಿರ್ಧಾರವೇಕೆ?” ಎಂದು ಕೈಕೊಡವಿದ ಕೈಕೇಯಿಸುತ.“ಸರಿ ತಪ್ಪುಗಳ ವಿವೇಚನೆಯಿಲ್ಲದೆ ಮೂರ್ಖನಂತೆ ವರ್ತಿಸಬೇಡ” ಎಂದು ಅಣ್ಣ ರಾಮನ ಮೇಲೆ ಉರಿಉರಿದ ಶತ್ರುಘ್ನ, ಶತ್ರುವಿನಂತೆ.“ತುಂಬು ಗರ್ಭಿಣಿಯಾದವಳನ್ನು ಪ್ರೀತಿಯಿಂದ ಸಲಹಬೇಕೇ ಹೊರತು ತೊರೆಯುವುದು ಉಚಿತವಲ್ಲ” ಎಂದ ಲಕ್ಷö್ಮಣ.ತಮ್ಮಂದಿರ ನುಡಿಯ ಹಿಂದಿನ ಒಲವದು ಶ್ರೀರಾಮನಿಗೆ ಮನದಟ್ಟಾಯಿತು. ಆದರೆ ಪರಿಸ್ಥಿತಿಗೆ ಕಟ್ಟುಬಿದ್ದ ಅವನು ಸೀತೆಯನ್ನು ತ್ಯಜಿಸಿ ಬದುಕುವ ದೃಢನಿರ್ಧಾರವನ್ನು ಈಗಾಗಲೇ ಕೈಗೊಂಡಿದ್ದ. ಸೀತೆಯನ್ನು ಅರಣ್ಯದಲ್ಲಿ ಬಿಟ್ಟುಬರುವ ಹೊಣೆಯನ್ನವನು ವಹಿಸಿದ್ದು ತಮ್ಮ ಲಕ್ಷö್ಮಣನಿಗೆ.
ಧಾರಾವಾಹಿ ಸಂಗಾತಿ-38 ಡಾ.ವಿಶ್ವನಾಥ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಗರ್ಭವತಿಯಾದಳುಭೂಗರ್ಭಸಂಜಾತೆಸೀತೆ ತಮ್ಮ ತಮ್ಮ ಪ್ರೀತಿಪಾತ್ರರನ್ನು ಕೂಡಬಯಸುವ, ಸೇರಿ ಆನಂದಿಸುವ, ಆನಂದವನ್ನು ವರ್ಧಿಸುವ ಬಯಕೆಗಳನ್ನು ಮನದಲ್ಲಿ ಒಗ್ಗೂಡಿಸುವ ವಸಂತಕಾಲವದು ಓಡಿಬಂತು ಇಳೆಯ ಬಳಿಗೆ. ಅದೇ ಸಮಯದಲ್ಲಿ ಬುವಿಸುತೆ ರಾಮಸತಿ ಸೀತೆ ಋತುಮತಿಯಾದಳು. ಮಲ್ಲಿಗೆಯಂತಹ ಶುಭ್ರ ನಗೆಯನ್ನು ಹೊಂದಿರುವ, ಚಿಗುರಿನಂತಹ ಅಧರದಿಂದ ಶೋಭಿಸುವ, ದುಂಬಿಯ ತೆರದ ಮುಂಗುರುಳಿನಿAದ ಚೆಲುವು ಪಡೆದ, ಗಿಳಿ- ಕೋಗಿಲೆಗಳ ಮೃದು ಮಧುರ ಧ್ವನಿಯನ್ನು ತನ್ನದಾಗಿಸಿಕೊಂಡ, ಹೂವಿನಂತಹ ಕಣ್ಣಿನಿಂದ ಅಂದ ಹೆಚ್ಚಿಸಿಕೊಂಡ, ಚಂದಿರಸದೃಶ ಮೊಗದವಳಾದ ಸೀತೆ ಸೊಬಗಿನಿಂದ ಮೆರುಗು ಪಡೆದಳು ಋತುಮತಿಯಾದ ಆ ಸಮಯದಲ್ಲಿ. ಮೈನೆರೆದ ಹೆಣ್ಣು ಪೂರೈಸಬೇಕಾದ ನೀತಿನಿಯಮಗಳಷ್ಟನ್ನೂ ಅಚ್ಚುಕಟ್ಟಾಗಿ ಸಹನೆಯಿಂದ ಪಾಲಿಸಿದಳು ಪೃಥ್ವಿಸುತೆ.ನಾಲ್ಕನೆಯ ದಿನ ವಿಶಿಷ್ಟ ಸ್ನಾನವನ್ನು ಮುಗಿಸಿದಳು. ಮಿಂದು ಶುಭ್ರಳಾಗಿ ನಿಂದು ಕುಂದಿಲ್ಲದ ಇಂದುವಿನAತೆ ಶೋಭಿಸುತ್ತಿದ್ದ ಸೀತೆ ಶ್ರೀರಾಮನ ಕಣ್ಣಿಗೆ ಹೊಸಬಗೆಯಲ್ಲಿ ಕಂಡಳು. ನಿಮಿಷದಲ್ಲಿಯೇ ಮೂರೂ ಲೋಕಗಳನ್ನು ಗೆಲ್ಲುವ ಉತ್ಸುಕತೆಯಲ್ಲಿ ಮನ್ಮಥ ಹರಿತಗೊಳಿಸಿಟ್ಟ ಆಯುಧದಂದದಿ ತೋರಿದಳು. ಕಳಂಕವನ್ನೆಲ್ಲಾ ಕಳೆದು ಆ ಮದನ ಇರಿಸಿದ ಸೌಂದರ್ಯಸಾರದAತೆ ಗೋಚರಿಸಿದಳು. ಕಾಮನ ಸಂಪೂರ್ಣ ಯಶಸ್ಸದು ಸಾಕಾರಗೊಂಡAತಹ ಅನುಭವವಾಯಿತು ಶ್ರೀರಾಮನಿಗೆ, ಪೂರ್ಣ ಪರಿಶುದ್ಧತೆಯಿಂದ ತನ್ನೆದುರು ನಿಂತ ಸೀತೆಯನ್ನು ನೋಡಿದಾಗ.ಮಂದಗಮನೆಯ ಮಂದಹಾಸವದು ಅವನಿಗೆ ಮುದ್ದಾಗಿ ತೋರಿತು. ಅಂದದ ಮುಖಾರವಿಂದದವಳ ಕುಂದಿಲ್ಲದ ಅಂಗಾAಗ ಸೌಂದರ್ಯ ಅವನಿಗೆ ಮುದ ನೀಡಿತು. ಚಂದನದ ಸುಗಂಧವನ್ನು ಬೀರುತ್ತಿದ್ದ ಅವಳ ಶರೀರ, ಚಂದ್ರನAತಿದ್ದ ಅವಳ ಮುಖ ಅವನ ಮನಸ್ಸನ್ನು ತಣಿಸಿತು. ಹಣೆಯಲ್ಲಿ ತಿಲಕವಿತ್ತು. ವದನದಲ್ಲಿ ಮಂದಸ್ಮಿತ. ಉಟ್ಟ ಉಡುಗೆಯದು ಮನೋಹರವಾಗಿತ್ತು. ಮೂರು ಸರಗಳನ್ನು ಧರಿಸಿದ್ದಳು. ನೀಳವಾದ ಕೇಶರಾಶಿ ಹೊಂದಿದವಳಾಗಿದ್ದಳು.ಮಹಾವಿಷ್ಣು ಸಾಗರದ ಮಧ್ಯೆ ಹಾವಿನ ಹಾಸಿಗೆಯ ಮೇಲೆ ಲಕ್ಷಿö್ಮಯ ಜೊತೆಗೆ ಭೋಗಿಸಿದ ರೀತಿಯಲ್ಲಿ ಅಯೋಧ್ಯಾಧಿಪತಿ ಶ್ರೀರಾಮಚಂದ್ರ ಸುಖವನ್ನು ಪಡೆಯತೊಡಗಿದ ಸೀತೆಯ ಜೊತೆಗೆ.ಎರಡು ದೇಹಗಳಾಗ, ಈಗ ಒಂದು. ಅವನು ಸಾಗರ, ಅವಳು ಬಿಂದು. ಅವನು ಸಾಸಿರ, ಅವನು ಒಂದು. ಅವಳು ಇಲ್ಲದೆ ಅವನು ಇಲ್ಲ. ಅವನ ಜೊತೆಯದು ಅವಳಿಗೆಲ್ಲ. ಅವನೀಗ ಸುರನಲ್ಲ. ಅನುರಾಗ ಪ್ರಿಯ ನಲ್ಲ. ಪುಳಕವದು ಶಾಶ್ವತ. ಅಕ್ಕರೆಯು ಅವಿರತ. ಶ್ರೀರಾಮ ಸೀತೆಯರ ಸಮರತಿಯ ಸಂಗವನು ಕಂಡು ಶ್ರಮಕೀಡಾದ ಆ ಮನ್ಮಥ. ಮದನನಿಗೆ ಶ್ರಮ, ಇಲ್ಲ ವಿರಾಮ. ಅಂಗಜ ಸಂಗದಲಿ ಸೀತೆ ಶ್ರೀರಾಮ, ಮನಕೆ ಹೊಸಬಗೆಯ ಆರಾಮ.ಈ ಬಗೆಯಲ್ಲಿ ಶ್ರೀರಾಮ ದೇಹವದು ಮಿಲನಗೊಂಡಿತು ಸೀತೆಯಲ್ಲಿ. ಮನಸ್ಸುಗಳು ಸಮಾಗಮಗೊಂಡವು ಹೊಸಬಗೆಯ ಹುರುಪಿನಲ್ಲಿ.ವರವಿಷ್ಣು ನಕ್ಷತ್ರವದು ಕೊನೆಗಾಣುತ್ತಿರುವ ಸಮಯದಲ್ಲಿ ಗರ್ಭವತಿಯಾದಳು ಆ ಭೂಗರ್ಭೆ. ಸೀತೆಯ ಗರ್ಭದ ಫಲವನ್ನು ತಿಳಿದವರಲ್ಲಿ ಕೇಳಿದ ಶ್ರೀರಾಮ. “ನಿನ್ನನ್ನವಳು ತೊರೆದು ಬೇರಾವುದೋ ಪರಸ್ಥಳದಲ್ಲಿ ಮಕ್ಕಳನ್ನು ಪಡೆಯುತ್ತಾಳೆ” ಎಂಬ ಭವಿಷ್ಯವದು ತಿಳಿದುಬಂತು.ಇದನ್ನರಿಯದ ಸೀತೆ ತಾಯ್ತನದ ಸುಖದ ಭಾವದಲ್ಲಿದ್ದಳು. ರಾಮಚಂದ್ರನನ್ನೇ ಹೋಲುವ ಅವಳಿ ಚಂದ್ರ ಸದೃಶರಾದ ಶಿಶುಗಳನ್ನು ಗರ್ಭದಲ್ಲಿ ಹೊತ್ತುನಿಂತಿದ್ದ ಚಂದ್ರಮುಖಿ ಸೀತೆ ಪೌರ್ಣಮಿಯ ಚಂದ್ರನAದದಿ ಶೋಭಿಸುತ್ತಿದ್ದಳು ಗರ್ಭಿಣಿಯಾದ ಸಮಯದಲ್ಲಿ.ಸೀತೆ ಗರ್ಭವತಿಯೆನಿಸಿಕೊಂಡ ನಾಲ್ಕನೆಯ ತಿಂಗಳಿಗೆ ಅವಳ ಸೀಮಂತ ಶಾಸ್ತçವನ್ನು ನಡೆಸಿದ ಶ್ರೀರಾಮಚಂದ್ರ. ವಸಿಷ್ಠ, ವಿಶ್ವಾಮಿತ್ರರ ಸಲಹೆಗನುಗುಣವಾಗಿ ನಡೆಯಿತದೋ ಸೀಮಂತ ಶಾಸ್ತç. ಮೂರು ಯೋಜನ ವಿಸ್ತೀರ್ಣತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು ಉತ್ಸವವನ್ನು. ಬ್ರಾಹ್ಮಣರಿಗೆ ಅವರು ಬಯಸಿದ್ದನ್ನು ಕೊಡಲಾಯಿತು. ರಾಜರುಗಳಿಗೆ, ಸುಗ್ರೀವ, ವಿಭೀಷಣ ಮೊದಲಾದವರಿಗೆ ಭೋಜನ, ಸುಗಂಧ, ತಾಂಬೂಲ, ಪುಷ್ಪ, ಅಕ್ಷತೆ, ವಸ್ತಾçಭರಣಗಳನ್ನಿತ್ತು ಗೌರವಿಸಿದ ಶ್ರೀರಾಮ. ಪೂರ್ಣ ಭೂಮಿಯದು ಹೊಗಳುವಂತೆ ನಡೆಯಿತು ಭೂಸುತೆಯ ಸೀಮಂತ ಶಾಸ್ತç.ಉತ್ಸವಕ್ಕೆ ಬಂದವರೆಲ್ಲರೂ ಸಂತಸದಿAದ ತೆರಳಿದ ಬಳಿಕ ಶ್ರೀರಾಮನ ಬಳಿಗೆ ಬಂದಳು ಸೀತೆ. ತನ್ನ ಮನದಿಂಗಿತವನ್ನು ತೋಡಿಕೊಂಡಳು. ವನವಾಸದ ಸಮಯದಲ್ಲಿ ಅವಳು ಶ್ರೀರಾಮನ ಜೊತೆ ಹಲವು ಆಶ್ರಮಗಳಿಗೆ ಹೋಗಿದ್ದಳು. ಋಷಿಪತ್ನಿಯರ ಜೊತೆಗೆ ಮಾತನಾಡಿದ್ದಳು. ಆನಂದದಿAದ ಬೆರೆತಿದ್ದಳು. ಅದರ ನೆನಪದು ಈಗ ಮೂಡಿತ್ತು ಸೀಮಂತಿನಿ ಸೀತೆಗೆ. ಈಗ ಬಸುರಿ ಬಯಕೆಯದು ಅವಳಲ್ಲಿ ಮೂಡಿತ್ತು. ಮುನಿಪತ್ನಿಯರನ್ನು ಈಗ ಮತ್ತೆ ನೋಡಬೇಕು, ಮಾತನಾಡಿಸಬೇಕು, ಅವರೊಂದಿಗೆ ದಿನ ಕಳೆಯಬೇಕು ಎಂದು ಆಸೆಪಟ್ಟಿತ್ತು ಅವನ ಮನಸ್ಸು. ಅದನ್ನೇ ಹೇಳಿಕೊಂಡಳು ಪತಿ ಶ್ರೀರಾಮಚಂದ್ರನಲ್ಲಿ. “ನಾನೀಗ ಮತ್ತೆ ವನವನ್ನು ಸೇರಿಕೊಳ್ಳುತ್ತೇನೆ. ಅನುವು ಮಾಡಿಕೊಡಬೇಕು ನೀವು” ಎಂದು ಕೇಳಿಕೊಂಡಳು. ಜನಕಸುತೆಯ ಮನದಿ ಜನಿಸಿದ್ದ ಬಯಕೆಯದು ನಗುವನ್ನು ತರಿಸಿತು ರಘುಕುಲೋತ್ತಮನಿಗೆ. ಅವಳ ಇಚ್ಛೆಯನ್ನು ಈಡೇರಿಸುವ ಭರವಸೆ ಕೊಟ್ಟ ಶ್ರೀರಾಮ.ಹೀಗಿದ್ದ ಕಾಲದಲ್ಲಿಯೇ ಒಂದು ಇರುಳು ಕನಸೊಂದನ್ನು ಕಂಡ ರಘುಪತಿ. ಗಂಗೆಯನ್ನು ದಾಟಿದ ಸೀತೆ ಕಾಡನ್ನು ಸೇರಿ ದಿಕ್ಕುದೆಸೆ ಇಲ್ಲದವರಂತೆ ಅಸಹಾಯಕಳಾಗಿ ದೆಸೆದೆಸೆಯ ಈಕ್ಷಿಸುತ, ಮರುಗುತ್ತಿರುವುದನ್ನು ಕನಸಿನಲ್ಲಿ ಕಂಡು ಕನಲಿದ ಶ್ರೀರಾಮ.ತನ್ನ ಕನಸನ್ನು ವಸಿಷ್ಠರಲ್ಲಿ ಹೇಳಿಕೊಂಡ. “ಈ ಕನಸು ಶುಭದ ಸೂಚನೆಯೋ? ಅಶುಭದ ಸುಳುಹೋ?” ಎಂದು ಕೇಳಿದ. “ಒಳ್ಳೆಯದನ್ನು ತಿಳಿಸುವ ಕನಸಲ್ಲವಿದು” ಎಂಬ ನುಡಿ ಮೂಡಿಬಂತು ಅವರಿಂದ. ಶ್ರೀರಾಮ ಮನಸ್ಸದು ಕನಸಿನ ಅಳುಕಿನಿಂದ ಮುಕ್ತವಾಗುವಂತಹ ಮಾತುಗಳನ್ನಾಡಿ ಶಾಂತಿ ಮೂಡಿಸುವ ಯತ್ನ ಮಾಡಿದರು. ಡಾ.ವಿಶ್ವನಾಥ ಎನ್ ನೇರಳೆಕಟ್ಟೆ
