ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-29 ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೨೯ ಈ ಹಿಂದೆ ಮೈಸೂರಿನಿಂದ ವರ್ಗವಾಗಿ ಹೋಗಿದ್ದ ರೇಣುಕುಮಾರಿ ಹಾಗೂ ಪದ್ಮಿನಿ ಎನ್ನುವರು ಅಲ್ಲಿ ಒಬ್ಬರ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಇದ್ದರು. ಅವರು ಮತ್ತೆ ವಾಪಸ್ ಮೈಸೂರಿಗೆ ವರ್ಗವಾಗಿದ್ದರಿಂದ ಅವರ ಜಾಗದಲ್ಲಿ ಆ ಹಾಸ್ಟೆಲಿಗೆ ನಾವು ಸೇರುವುದು ಎಂದು ಈಗಾಗಲೇ ನಾನು ಸುಲೋಚನ ನಿರ್ಧರಿಸಿದ್ದೆವು. ರವೀಶ್ ನನ್ನ ಜೊತೆ ಬರಲು ನಿರ್ಧರಿಸಿದ್ದರಿಂದ ಸುಲೋಚನ ಅವರ ಅಕ್ಕ ಬರುವುದು ಬೇಡ ಎಂದು ಹೇಳಿ ನಾವು ಡಿಸೆಂಬರ್ ೧ ೧೯೯೭ರ ಬೆಳಿಗ್ಗೆ 5:30 ಬಸ್ಸಿಗೆ ಸಕಲೇಶಪುರಕ್ಕೆ ಹೊರಟೆವು.ಮೊದಲು ರವೀಶ್ ಅವರ ಸಂಬಂಧಿ ಸತ್ಯ ಅವರ ಮನೆಗೆ ಹೋಗಿ ತಿಂಡಿ ತಿಂದು ನಂತರ ಆಫೀಸಿನ ಕಡೆ ಹೋದೆವು. ಮಾಮೂಲಿನಂತೆ ಡ್ಯೂಟಿ ರಿಪೋರ್ಟ್ ಹಾಗೂ ವರ್ಗಾವಣೆ ಅರ್ಜಿ ಎರಡನ್ನು ಸಲ್ಲಿಸಿಆಯಿತು. ಆದರೆ ಕನ್ಫರ್ಮೇಷನ್ ಆಗುವ ತನಕ ನಮ್ಮ ಅರ್ಜಿಗೆ ಮಾನ್ಯತೆ ಇರುವುದಿಲ್ಲ. ನಾನು ಈಗಾಗಲೇ ಹೊಸ ವ್ಯವಹಾರ ವಿಭಾಗದಲ್ಲಿ ವಿಭಾಗ ಕಚೇರಿಯಲ್ಲಿ ಇದ್ದುದರಿಂದ ನನಗೆ ಅದೇ ಡಿಪಾರ್ಟ್ಮೆಂಟ್ ಕೊಟ್ಟರು. ಸುಲೋಚನಾ ಅವರು ಪಾಲಿಸಿ ಸೇವಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಅವರಿಗೆ ಗೊತ್ತಿದ್ದ ಅದೇ ಡಿಪಾರ್ಟ್ಮೆಂಟ್. ಮಧ್ಯಾಹ್ನ ರವೀಶ್ ಅವರು ವಾಪಸ್ ಹೋದರು. ಸಂಜೆ ಕಚೇರಿ ಮುಗಿದ ನಂತರ ರೇಣು ಅವರ ಜೊತೆಯಲ್ಲಿ ಹಾಸ್ಟೆಲ್ ಗೆ ಹೋದೆವು. ಈಗಾಗಲೇ ಅಲ್ಲಿ ಮತ್ತೊಬ್ಬರು ಉಪಾಧ್ಯಾಯಿನಿ ಶಿಲ್ಪ ಎನ್ನುವವರು ಇದ್ದರು. ಒಟ್ಟು ಮೂರು ಜನ ಒಂದು ಕೋಣೆಯಲ್ಲಿ ಇದ್ದುದ್ದು. ನಾವು ಹೊಸಬರು ಡ್ಯೂಟಿ ರಿಪೋರ್ಟ್ ಮಾಡಿಕೊಂಡ ನಂತರ ಮುಂದಿನ ವಾರ ಅವರು ಅಲ್ಲಿಂದ ರಿಲೀವ್ ಆಗಬೇಕಿದ್ದು ಹಾಗಾಗಿ ಆ ಒಂದು ವಾರ ಆ ಚಿಕ್ಕ ಕೋಣೆಯಲ್ಲಿ ನಾವು ಇರಲು ಸಾಧ್ಯವಿರಲಿಲ್ಲ. ಆ ಪ್ರಶ್ನೆ ನಮಗೆ ಎದುರಾಗಿಯೇ ಇರದುದ್ದರಿಂದ ಎಲ್ಲಿ ಇರುವುದು ಎನ್ನುವ ಪ್ರಶ್ನೆ ಉದ್ಭವವಾಯಿತು. ಸಂಬಂಧಿಗಳ ಮನೆ ಸಹ ಚಿಕ್ಕದಾಗಿದ್ದರಿಂದ ಅಲ್ಲಿ ಉಳಿಯುವುದು ಸಾಧ್ಯವಿರಲಿಲ್ಲ. ಕಡೆಗೆ ಊರಿಗೆ ವಾಪಸ್ ಆಗಿ ಮುಂದಿನ ವಾರ ಬರುವುದು ಎಂಬ ನಿರ್ಧಾರಕ್ಕೂ ಬಂದೆವು. ಸದ್ಯ ಅಲ್ಲಿಯೇ ಮೂರು ಜನ ಬೇರೆ ನಮ್ಮ ಕಚೇರಿಯ ಉದ್ಯೋಗಿಗಳು ಒಂದು ಮನೆ ಮಾಡಿಕೊಂಡು ಇದ್ದರು. ಇನ್ನುಳಿದ ಐದು ದಿನ ಇಲ್ಲಿಯೇ ಇರಿ ಎಂದು ಅವರು ಆಹ್ವಾನಿಸಿದ್ದರಿಂದ ರಜೆ ಹಾಕುವ ಯೋಚನೆ ಕೈ ಬಿಟ್ಟು ಅಲ್ಲಿಯೇ ಇರಬೇಕಾಯಿತು. ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಇದ್ದ ಅವರ ಮನೆ ಅಲ್ಲೇ ಬಸ್ಟಾಂಡ್. ಎದುರಿಗೆ ಆಫೀಸ್. ಅಂತೂ ಅವರ ಜೊತೆ ಅವರಿಗೆ ತೊಂದರೆ ಕೊಟ್ಟುಕೊಂಡು 5 ದಿನ ಇದ್ದು ಹಾಸ್ಟೆಲ್ ಗೆ ಅಡ್ವಾನ್ಸ್ ಕೊಟ್ಟು ಜಾಗ ಖಚಿತಪಡಿಸಿಕೊಂಡಿದ್ದಾಯಿತು.ನನಗೆ ಹೊಸ ವ್ಯವಹಾರ ವಿಭಾಗದಲ್ಲಿ ಆಗ ಜವರಯ್ಯ ಮತ್ತು ಕುಮಾರ್ ಎಂಬುವವರು ಸಹಾಯಕರು. ಇಸ್ಮಾಯಿಲ್ ಎನ್ನುವರು ಅಲ್ಲಿನ ರೆಕಾರ್ಡ್ ಕ್ಲರ್ಕ್. ತುಂಬಾ ಹೊಂದಿಕೊಳ್ಳುವಂತಹ ವ್ಯಕ್ತಿತ್ವದವರು. ಅಲ್ಲಿ ಇದ್ದ ಚಂದ್ರು ಎನ್ನುವವರು ಕ್ಯಾಶಿಯರ್ ಆಗಿ ಹೋಗಿದ್ದರು ಸ್ವಲ್ಪ ಕೆಲಸ ಬಾಕಿ ಉಳಿದಿತ್ತು ಡಿಸೆಂಬರ್ ಅಂತ್ಯದ ವೇಳೆಗೆ ಶೆಡ್ಯೂಲ್ ಗಳನ್ನು ಸಲ್ಲಿಸಬೇಕಿತ್ತು ಅದರ ಕಡೆಯ ಕೆಲಸ ಏನು ಆಗಿರಲಿಲ್ಲ ಸ್ವಲ್ಪ ಹೆಚ್ಚಿನ ಶ್ರಮ ಹಾಕಬೇಕಿತ್ತು.ಐದು ವರೆಗೆ ಸರಿಯಾಗಿ ನಾವು ಹೊರಟರೆ ಅಲ್ಲಿ ಎಲ್ಲರಿಗೂ ಆಶ್ಚರ್ಯ. ಎಲ್ಲರೂ ಅಲ್ಲಿ ಆರು ವರೆ ಏಳು ಗಂಟೆಯ ತನಕ ಆಫೀಸಿನಲ್ಲಿಯೇ ಇರುತ್ತಿದ್ದವರು. ಕೆಲಸ ಬಾಕಿ ಉಳಿದಿದ್ದವರು ಕೆಲಸ ಮಾಡುತ್ತಿದ್ದರು. ಇಲ್ಲದಿದ್ದವರು ಕೇರಂ ಅಥವಾ ಟಿಟಿ ಆಡುತ್ತಾ ಕಾಲ ಕಳೆಯುತ್ತಿದ್ದರು. ಬಹಳಷ್ಟು ಜನ ಮನೆಗಳಿಂದ ದೂರ ಬಂದು ಇಲ್ಲಿ ರೂಮ್ ಮಾಡಿಕೊಂಡು ಇರುತ್ತಿದುದರಿಂದ ಇಲ್ಲಿ ಅದೇ ಸಂಸ್ಕೃತಿ ಬೆಳೆದು ಬಂದಿತ್ತು. ಆ ಒಂದು ವಾರ ನಾವು ಉಳಿದಿದ್ದ ನಮ್ಮ ಉದ್ಯೋಗಿಗಳು ಎಲ್ಲರೂ ಉಡುಪಿಯ ಕಡೆಯವರು. ಅವರಲ್ಲಿ ನೀರಜ ಎನ್ನುವವರಿಗೆ ಮದುವೆಯಾಗಿ ಒಂದು ಮಗುವಿತ್ತು. ಈ ಹಿಂದೆ ಪೋಸ್ಟಲ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದವರು ಅದನ್ನು ಬಿಟ್ಟು ಇಲ್ಲಿ ಸೇರಿದ್ದರು. ಮಂಗಳೂರಿಗೆ ವರ್ಗಾವಣೆ ಅರ್ಜಿ ಕೋರೊದ್ದರು. ಪ್ರತಿ ಶನಿವಾರ ಮಧ್ಯಾಹ್ನ ಅವರು ಮಂಗಳೂರಿಗೆ ಹೋಗಿ ಸೋಮವಾರ ಬೆಳಿಗ್ಗೆ ವಾಪಸ್ ಆಗುತ್ತಿದ್ದರು. ಇನ್ನೊಬ್ಬರು ಶುಭದಾ. ಅವರು ಅಷ್ಟೇ ಉಡುಪಿಯವರು. ಅವರ ತಂದೆ ಸಹ ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದರು ಅವರಿಗೂ ಒಂದು ಪುಟ್ಟ ಮಗು ಇತ್ತು .ಮತ್ತು ಒಬ್ಬರು ಶ್ರೀಲತಾ ಆಗತಾನೇ ವಿವಾಹವಾಗಿ ವಿವಾಹದ ಆಧಾರದ ಮೇಲೆ ಮಂಗಳೂರಿಗೆ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಈಗ ಅವರೊಂದಿಗೆ ನಾವು ಇಬ್ಬರು ಸೇರಿದ್ದೆವು ತುಂಬಾ ಒಳ್ಳೆಯವರು ಚೆನ್ನಾಗಿ ಹೊಂದಿಕೊಂಡು ಹೋಗುತ್ತಿದ್ದರು ನಮ್ಮ ಕಡೆಯ ಅಡುಗೆ ಇಷ್ಟವಾಗಿದ್ದರಿಂದ ಆ ಐದು ದಿನ ಅಡುಗೆಯ ಹೊಣೆ ನಾನೇ ಹೊತ್ತಿದ್ದೆ ಅಲ್ಲಿ ಎಷ್ಟು ಹೊಂದಾಣಿಕೆ ಇತ್ತೆಂದರೆ ಹಾಸ್ಟೆಲ್ ಬದಲು ಅಲ್ಲೇ ಮುಂದುವರೆಯಬಹುದಿತ್ತು ಆದರೆ ಐದು ಜನಕ್ಕೆ ಆ ಮನೆ ಸ್ವಲ್ಪ ಚಿಕ್ಕದಾಗುತ್ತಿತ್ತು ಹಾಗಾಗಿ ಆ ಯೋಜನೆ ಕೈ ಬಿಟ್ಟೆವು. ನಮ್ಮ ಜೊತೆಗೆ ಶಶಿಕಲಾ ಎನ್ನುವವರು ಹುಣಸೂರಿನಿಂದ ಇಲ್ಲಿಗೆ ಉನ್ನತ ದರ್ಜೆ ಸಹಾಯಕಿಯಾಗಿ ಬಂದಿದ್ದರು ಅವರಿಗೆ ಇಬ್ಬರು ಮಕ್ಕಳು, ಬೆಂಗಳೂರಿನಲ್ಲಿ ಅವರ ಪತಿ ಹಾಗೂ ತಾಯಿಯ ಮನೆ ಇತ್ತು ಪ್ರತಿವಾರ ಬೆಂಗಳೂರಿಗೆ ಹೋಗಲು ಕಷ್ಟ ಎಂದು ಎರಡು ವಾರಕ್ಕೊಮ್ಮೆ ಹೋಗುತ್ತಿದ್ದರು ಅವರು ಈ ಬೇರೆ ಇನ್ನೊಂದು ಹಾಸ್ಟೆಲ್ ಸೇರಿದ್ದರು ಆದರೆ ಅದು ನಾನ್-ವೆಜ್ ಸಹ ಇರುವುದರಿಂದ ನಾವು ಹೋಗಲು ಇಷ್ಟಪಡಲಿಲ್ಲ.ಮೊದಲು ನಮ್ಮ ಶಾಖೆ ಬಸ್ ನಿಲ್ದಾಣದ ಎದುರಿನ ರಸ್ತೆ ಮಸೀದಿಯ ಎದುರು ಇತ್ತು ಆದರೆ ಜನವರಿ ತಿಂಗಳಿನಲ್ಲಿ ಬಸ್ ನಿಲ್ದಾಣದ ಎದುರು ಮುಖ್ಯರಸ್ತೆಯ ಒಂದು ಹೊಸ ಕಾಂಪ್ಲೆಕ್ಸ್ ನ ೧ ಹಾಗೂ ೨ ನೆಯ ಮಹಡಿಗೆ ಸ್ಥಳಾಂತರ ಗೊಳ್ಳಲಿತ್ತು. ಆ ನಿಟ್ಟಿನಲ್ಲಿ ಪ್ಯಾಕಿಂಗ್ ಮತ್ತು ಸಾಗಣೆ ಕೆಲಸಗಳ ಹೊರೆಯೂ ಇತ್ತು.ಈ ಹಿಂದೆ ಹೊಸದಾಗಿ ಕೆಲಸಕ್ಕೆ ಸೇರುವಾಗ ನಮ್ಮ ಜೊತೆಯ ಬ್ಯಾಚ್ನಲ್ಲಿ ಇದ್ದ ಮುಕುಂದನ್ ಅವರೂ ಸಹ ಉನ್ನತ ದರ್ಜೆ ಸಹಾಯಕರಾಗಿ ಈ ಶಾಖೆಯಲ್ಲೇ ಇದ್ದರು. ವಿಕ್ರಯ ವಿಭಾಗದಲ್ಲಿ ಅವರಿದ್ದುದು. ಅವರ ಪತ್ನಿ ಅಲ್ಲಿನ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದುದರಿಂದ ಅವರು ಇಲ್ಲಿಗೆ ವರ್ಗಾವಣೆ ತೆಗೆದುಕೊಂಡಿದ್ದರು. ನಮ್ಮ ಹೊಸ ವ್ಯವಹಾರ ವಿಭಾಗಕ್ಕೆ ಸಹಾಯಕ ಆಡಳಿತ ಅಧಿಕಾರಿಯಾಗಿ ಇದ್ದವರು ಮಂಜುನಾಥ್ ಎಂಬವರು ಅವರ ಪತ್ನಿ ನವರತ್ನಮ್ಮ ಅವರು ಸಹ ನಮ್ಮ ನಿಗಮದ ಉದ್ಯೋಗಿ ಅದೇ ಶಾಖೆಯಲ್ಲಿ ಇದ್ದರು. ಇತ್ತೀಚಿಗೆ ಸರ್ವಿಸ್ ನಲ್ಲಿ ಇದ್ದಾಗಲೇ ನವರತ್ನ ಅವರು ನಿಧನ ಹೊಂದಿದ್ದರು. ತುಂಬಾ ಒಳ್ಳೆಯವರು. ಸ್ನೇಹಜೀವಿ ಕೂಡ. ಮೊದಲ ವಾರ ಶನಿವಾರ ಮುಗಿದ ನಂತರವೇ ನಾನು ಸುಲೋಚನಾ ಮೈಸೂರಿಗೆ ವಾಪಸ್ ಆದೆವು. ಆನಂತರ ಒಂದೆರಡು ಮೂರು ದಿನ ರಜಾ ಹಾಕಿ ಮತ್ತೆ ಬರುವುದು ಎಂದು ನಿರ್ಧರಿಸಿದ್ದರಿಂದ ಗುರುವಾರದ ದಿನ ಸಕಲೇಶಪುರಕ್ಕೆ ಹೋಗಿ ಸಂಜೆ ಹಾಸ್ಟೆಲ್ ಗೆ ಹೋದೆವು. ಸಕಲೇಶಪುರದ ಚಂಪಕ ನಗರದಲ್ಲಿ ರೋಟರಿ ಎಕ್ಸ್ಟೆಂಶನ್ ಎಂದು ಅದನ್ನು ಕರೆಯುತ್ತಿದ್ದರು. ಮೊದಲ ದಿನ ಮಾತನಾಡಲು ಹೋದಾಗಲೇ ತಲಾ 600 ಅಡ್ವಾನ್ಸ್ ತೆಗೆದುಕೊಂಡಿದ್ದರು. ಚಿಕ್ಕ ರೂಂ ಒಂದು ಡಬಲ್ ಕಾಟ್ ಹಾಕಿದರೆ ಬೆಳಗ್ಗೆ ಸ್ವಲ್ಪ ಜಾಗ ಉಳಿದಿರುತ್ತಿತ್ತು ಅಷ್ಟೇ, ಮೂರು ಜನ ಆದುದರಿಂದ ಹಾಸಿಗೆಯನ್ನು ಸಹ ನಾವೇ ತೆಗೆದುಕೊಳ್ಳಬೇಕು ಎಂದು ಹೇಳಿದರು. ಇಬ್ಬರು ಮಂಚದ ಮೇಲೆ ಒಬ್ಬರು ನೆಲದ ಮೇಲೆ. ಏಕೋ ವಾತಾವರಣವೇ ಸರಿ ಹೋಗಲಿಲ್ಲ .ಇನ್ನು ಊಟ ತಿಂಡಿ ಆ ದೇವರಿಗೆ ಪ್ರೀತಿ .ಎಲ್ಲಾ ಮಾಡಿ ಡೈನಿಂಗ್ ಟೇಬಲ್ ಮೇಲೆ ಇಟ್ಟುಬಿಡುತ್ತಿದ್ದರು. ನಾವು ತಿನ್ನಲು ಹೋಗುವ ವೇಳೆಗೆ ಆರಿ ಅಕ್ಷತೆ ಆಗಿರುತ್ತಿತ್ತು. ಲೆಕ್ಕಾಚಾರವಾಗಿ ಅಷ್ಟೇ ಇಡುತ್ತಿದ್ದರು ನಮಗೇನು ಆ ರುಚಿ ಗೆ ಹೆಚ್ಚು ಬೇಕಾಗುತ್ತಲೂ ಇರಲಿಲ್ಲ. ಆದರೆ ಒಂದು ತರಹ ಇರಸುಮುರಸು ಮೊದಲ ದಿನದಿಂದಲೇ. ನಾಲ್ಕೈದು ದಿನ ಕಳೆದ ನಂತರ ನಮಗೆ ಇಲ್ಲಿ ಸರಿ ಬರುವುದಿಲ್ಲ ಬೇರೆ ಮನೆ ಮಾಡಿಕೊಳ್ಳುವ ಎಂದು ನಿರ್ಧರಿಸಿದೆವು. ಆಫೀಸಿನಲ್ಲಿ ಎಲ್ಲರಿಗೂ ಮನೆ ನೋಡಲು ಹೇಳಿದೆವು. ಸಂಜೆ ಆಯಿತೆಂದರೆ ಯಾರಾದರೂ ಮನೆ ಖಾಲಿ ಇದೆ ಎಂದು ಹೇಳಿದ ಕಡೆ ಹೋಗುವುದು. ಮನೆ ನೋಡುವುದು .ಆದರೆ ಯಾಕೋ ಯಾವುದೂ ಸರಿ ಹೋಗುತ್ತಿರಲಿಲ್ಲ. ಸರಿ ಹೋದ ಮನೆಗೆ ಸಿಕ್ಕಾಪಟ್ಟೆ ಬಾಡಿಗೆ. ಸಕಲೇಶಪುರ ಬೆಂಗಳೂರಿಗಿಂತಲೂ ದುಬಾರಿ ಎಂದು ನಮಗೆ ಅರಿವಾಗಿದ್ದು ಆಗಲೇ. ಹೋಗಲಿ ಎಂದರೆ ಯಾವುದು ಸರಿ ಹೋಗುತ್ತಲೂ ಇರಲಿಲ್ಲ .ಮೈಸೂರಿನಿಂದಲೇ ಒಂದಷ್ಟು ಪುಡಿಗಳು ಚಟ್ನಿಪುಡಿ ಮೆಂತ್ಯದ ಹಿಟ್ಟು ಅನ್ನದ ಪುಡಿ ತುಪ್ಪ ಮತ್ತು ಉಪ್ಪಿನಕಾಯಿ ತೊಕ್ಕುಗಳನ್ನು ತೆಗೆದುಕೊಂಡು ಹೋಗಿದ್ದರಿಂದ ಹೇಗೋ ಅದನ್ನೇ ಬಳಸಿಕೊಂಡು ಊಟ ಮಾಡುತಿದ್ದೆವು. ಬೆಳಿಗ್ಗೆ ಕಾಫಿಗೆ ಹೋದಾಗ ಎದುರುಗಿನ ಹೋಟೆಲ್ನಲ್ಲಿ ಅಲ್ಲಿನ ಸ್ಪೆಷಾಲಿಟಿ ಕಡುಬು ಮತ್ತು ಅಕ್ಕಿ ರೊಟ್ಟಿ ಒಂದರಲ್ಲಿ ಅರ್ಧ ಮಾಡಿ ತ ತಿನ್ನುತ್ತಿದ್ದುದು. ಸಂಜೆ ಕಚೇರಿ ಮುಗಿದ ನಂತರ ಮನೆ ಹುಡುಕಲು ಯಾರಾದರೂ ಮನೆಗೆ ಹೋದಾಗ ಅಲ್ಲಿ ಕಾಫಿ ಇನ್ನೇನಾದರೂ ಆತಿಥ್ಯ ಆಗುತ್ತಿತ್ತು. ಇಲ್ಲದಿದ್ದರೆ ಸಂಜೆಯ ವೇಳೆಯೂ ಅಲ್ಲಿ ಹೋಗಿ ತಿಂಡಿ ತಿಂದು ಮನೆಗೆ ಹೋಗುತ್ತಿದ್ದುದು.. ಹೋದ ತಕ್ಷಣ ಒಂದರ್ಧ ಲೋಟ ಕಾಫಿ ಕೊಡುತ್ತಿದ್ದರು ಅಷ್ಟೇ. ರಾತ್ರಿಯ ಊಟವೂ ಅಷ್ಟೇ ಬೆಳಗ್ಗೆ ಉಳಿದದ್ದನ್ನು ಹಾಕುತ್ತಿದ್ದು ಎಷ್ಟು ಬಾರಿ ಹೇಳಿದರು ಒಂದು ದಿನವೂ ಬಿಸಿ ಊಟ ತಿಂಡಿ ಹಾಕಲಿಲ್ಲ .ಆ ಡಿಸೆಂಬರ್ ಚಳಿಗೆ ಆ ಊರಿನ ವಾತಾವರಣಕ್ಕೆ ಆರಿದ್ದು ತಿನ್ನುವುದು ತುಂಬಾ ಹಿಂಸೆ ಎನಿಸುತ್ತಿತ್ತು. ಯಾವಾಗ ನಾವು ನಮಗೆ ಬೇರೆ ಮನೆ ಮಾಡುತ್ತೇವಪ್ಪಾ ಅಂತ ಅನ್ನಿಸತೊಡಗಿತ್ತು. ಯಾವುದೇ ಹಾಸ್ಟೆಲ್ ನಲ್ಲಿದ್ದು ಅಭ್ಯಾಸ ಇಲ್ಲದ ನಮಗೆ ಹೊರಗಿನ ಊಟದ ಕಷ್ಟ ಏನೆಂದು ಆಗ ಅರ್ಥವಾಯಿತು. ಅಲ್ಲದೆ ಹೆಚ್ಚು ಕಡಿಮೆ ಮೂರು ಕಿಲೋಮೀಟರ್ ದೂರ ಇತ್ತು ಅದು ನಮ್ಮ ಕಚೇರಿಯಿಂದ. ಹೋಗಿ ಬರುವುದು ಸಹ ಕಷ್ಟವೇ. ಸದ್ಯ ಆಗ ಡಿಸೆಂಬರ್ ನಲ್ಲಿ ಮಳೆ ಇಲ್ಲದಿದ್ದರಿಂದ ಹೇಗೋ ನಡೆಯಿತು ಹಾಗಾಗಿ ಕಚೇರಿಗೆ ಹತ್ತಿರದ ಸ್ಥಳಗಳಲ್ಲಿ ನಾವು ಮನೆ ಹುಡುಕುತ್ತಿದ್ದು. ಕೆಲವು ದೂರದ ಪ್ರದೇಶ ಏರಿಯಾದಲ್ಲಿ ಮನೆ ಸಿಕ್ಕುತ್ತಿದ್ದರು ನಮ್ಮ ಬಳಿ ವಾಹನ ಇಲ್ಲದ್ದರಿಂದ ಅಲ್ಲಿನ ಮಳೆ ಸಮಯದಲ್ಲಿ ಓಡಾಡಲು ಕಷ್ಟ ಎಂದು ಎಲ್ಲರೂ ಹೇಳಿದ್ದರಿಂದ ದೂರದ ಏರಿಯಾಗಳಿಗೆ ಹೋಗಲು ಮನಸ್ಸು ಮಾಡಲಿಲ್ಲ.ಕಡೆಗೆ ಕಚೇರಿಯಿಂದ ಒಂದೇ ಕಿಲೋಮೀಟರ್ ದೂರ ಇದ್ದ ಕುಶಾಲನಗರ ಎಕ್ಸ್ಟೆಂಶನ್ ಎಂಬಲ್ಲಿ ಮಹಡಿಯ ಮೇಲೆ ಒಂದು ಮನೆ ಖಾಲಿ ಇದೆ ಎಂದು ತಿಳಿಯಿತು ರಾಜಮ್ಮ ಎನ್ನುವವರು ಅಲ್ಲಿನ ರಾಜಕೀಯ ಪುಡಾರಿ ಅವರದೇ ಮನೆ. ಕೆಳಗಡೆ ಅವರದೊಂದು ದೊಡ್ಡ ಮನೆ. ಪಕ್ಕದಲ್ಲಿ ಸ್ವಲ್ಪ ಜಾಗ ಅವರ ಮನೆಗೆ ಸೇರಿದಂತೆಯೇ ಮಹಡಿಯ ಮೇಲೆ ಎರಡು ಮನೆಗಳು ಅಲ್ಲಿ ಕೆಳಗಡೆ ಅಟಾಚ್ಡ್ ಬಾತ್ರೂಮ್ ಇರುವಂತಹ ಎರಡು ಕೊಠಡಿಗಳು. ಅಂತಹ ಒಂದು ಕೊಠಡಿಯಲ್ಲಿ ನಮ್ಮದೇ ಆಫೀಸಿನ ಹೊಸ ರೆಕ್ರೂಟ್ಮೆಂಟ್ ಆದ ಆನಂದ್ ಮತ್ತು ಮೋಹನ್ ಎನ್ನುವವರು ಇದ್ದುದರಿಂದ ಅವರ ಮೇಲಿನ ಮನೆ ಖಾಲಿಯಾಗುತ್ತದೆ ಎಂದು ತಿಳಿಸಿದರು. ಹಾಗಾಗಿ ಅಲ್ಲಿ ನೋಡಲು ಹೋದೆವು. ಅವರ ಮನೆಯಲ್ಲಿ ಟೀ ಚೌಚೌ ಆತಿಥ್ಯ ಸ್ವೀಕರಿಸಿ ಮನೆ ನೋಡಲು ಹೋದೆವು. ಒಂದು ರೂಮಿನ ಮನೆ. ಮನೆ ಏನೋ ಚೆನ್ನಾಗಿತ್ತು ಆದರೆ ಅಲ್ಲಿ ಯಾರು
ಧಾರಾವಾಹಿ ಸಂಗಾತಿ ಕಂತು-ಏಳು ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಸವಿತಾ ದೇಶಮುಖ ತಾಳಲಾರೆ ಯಾತನೆ/ಕೇಳೋಕೂಗು ನೀಲಕಂದರನೆ !! ಪಲ್ಲವಿ!!ಚಂದಿರನ ತಂಗಾಳಿ ನೊಂದ ಮನಕೆ ಬೀರಿ ಕಂದಳನು ಕಾಪಾಡ ಬಾರೋ!!ಬಾಳಿನ ತುಂಬೆಲ್ಲ ತಾಳಬಾರದು ಗೋಳುಹೇಳಲು ಬರೋದು ಎನಗಯ್ಯ !! ಅಂತ ಪಾಡುತ……ಚಂದಿರನ ಬೆಳದಿಂಗಳದ ಕೆಳಗೆ ಕುಳಿತು… ತೊರೆದು ಹೋದ ಚೊಚ್ಚಲ ಮಗುವನ್ನು ನೆಯುತ ಜಯದೇವಿ ತಾಯಿಯವರು ಖಾಲಿ ಹೃದಯ ಹೊತ್ತು, ಕಣ್ಣೀರು ಧಾರೆಯಲಿ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಬಹಳ ಹೊತ್ತು ಅತ್ತರು. ಆದರೆ ಜೀವನ ಯಾರಿಗೂ ಹೆಚ್ಚು ಕಾಲ ವಿರಾಮ ಕೊಡುವುದಿಲ್ಲವಲ್ಲಾ….!!! ಮತ್ತೆ ಗಂಡನ ಮನೆಗೆ ಹೊರಡಬೇಕು…..!!!ಗಂಡನ ಮನೆಗೆ ಹೋಗುವ ದಿನವೂ ಬಂತು…ತವರ ಬಾಗಿಲು ದಾಟಲು ಕಾಲುಗಳು ಮುಂದೆ ಸಾಗಲಿಲ್ಲ.ಪ್ರತಿ ಹೆಜ್ಜೆಯೂ ಒಂದು ನೆನಪನ್ನು ತುಳಿಯುವಂತೆ……ತವರಿನ ಗೋಡೆಗಳೆಲ್ಲಆ ಮಗು ನಗುವಿನ ಧ್ವನಿ ತುಂಬಿತ್ತು… ಕಳವಳ ಗೊಂಡ ಮನ…. ಕರಳು ಹಿಚುಕುವ ಸನ್ನಿವೇಶ… ಗಂಡನ ಮನೆಗೆ ಹೋಗುವ ದಾರಿಯಲ್ಲಿಮೌನವಾಗಿ ದೇವರನ್ನು ಕೇಳಿದಳು — ಕಳವಳಗೊಳ್ಳುತ್ತಾ ಬಳಲುತ್ತ ಬೇಡುವೆತಿಡಿಗೇಡಿಗೆ ಹೇಳೊ ಮನಶಾಂತಿಯ !! ನೊಂದ ಜೀವ ಬೆಂದ ಮನ ಸಂದುಸಂದಿನನೋವ ಅಂದಿಂದ ಮೈ ಮನಕೆಂದೇ !! ಹಂಣ್ಣಾದ ಈ ಮನಕೆ ಸಣ್ಣ ಮಾಡುವುದಕ್ಕೆ?!ಕಣ್ಣು ತೆರೆದು ಕರುಣಿಸಯ್ಯ ರೋಮರೋಮಂಗಳಿಗೆ ಸ್ವಾಮಿ ನಿನ್ನಯ ಒಲವು ಅಮರ ಧಾರೆಯ ಎರೆಯಯ್ಯಾ!! ಭವ ದೂರ ಭವನಾಶ ‘ಜಯ ಸಿದ್ದರಾಮೇಶನೆ’ ದಯದೋರೊ ಎನ್ನ ಭಯ ದೂರ ಸರಿಸೋ !! ಜಯದೇವಿ ತಾಯಿಯವರ ತಮ್ಮ ಶಿವಶಂಕರ್ ಮಡಕಿ ,ತಂಗಿಶ್ರೀದೇವಿ ಗಾಡವೆ, ,ಮಗಳು ಶಶಿಕಲಾ ಮಡಕಿ, ತಂಗಿ ಸುಮತಿ ಅಸ್ಟುರೆ ಗಂಡನ ಮನೆ ಅವರನ್ನು ಕಾಯುತ್ತಿತ್ತು…..ಆದರೆ ಕಣ್ಣುಗಳಲ್ಲಿ ಜೀವಂತವಾಗಿದ್ದಒಂದು ಚಿಕ್ಕ ಮುಖ…ಒಂದು ಅಪೂರ್ಣ ನಗುವಿನ ನೆನಹು ಮನದಲಿ ತುಂಬಿತ್ತು ………. ಅಲ್ಲಿ ಇನ್ನೂ ಏನ ಗ್ರಹಚಾರವಿದೆಯೋ..ಅತ್ತೆಯ ನೆನಪಾಗಿ ಕೈ ಕಾಲುಗಳು ನಡುಗಲಾರಂಭಿಸಿದವು. ಖಾಲಿ ಕೈಯಲ್ಲಿ ಹೇಗೆ ಹೋಗುವದು ಬರಿದಾದ ಒಡಲನ್ನು ತೆಗೆದುಕೊಂಡು…????ಹೆದರುತ್ತ ಹೆದರುತ್ತಲೇ ಗಂಡನ ಮನೆಯಲ್ಲಿ ಕಾಲಿಟ್ಟ ತಕ್ಷಣ ಅತ್ತೆ ಪ್ರಯಾಗಬಾಯಿ ಎದುರಾದರು …… ಎದುರಾದ ಅತ್ತೆ ಮುಖ ಕಳೆಗುಂದಿತು ಕರುಣಾ ಮಯಿಯಾಗಿ ಕಂಡರು……. ಮಡಿಲಲ್ಲಿ ಮಗು ಇಲ್ಲದ ಸೊಸೆಯ ಕಣ್ಣುಗಳೇ ಸಾವಿರ ಮಾತುಗಳ ಹೇಳುವದ ಕಂಡು……. ಬಾಗಿಲ ಬಳಿ ನಿಂತಿದ್ದ ಸೊಸೆಯನ್ನು ನೋಡಿಅತ್ತೆಯ ಹೃದಯ ಕಗ್ಗತ್ತಲಾಯಿತು…..ಸೊಸೆ ಒಂದು ಹೆಜ್ಜೆ ಒಳಗೆ ಇಟ್ಟಳು…….ಸೊಸೆಯ ಕಾಲನಡಿಗೆಯ ನಡುಗು.ಹೃದಯದಲ್ಲಿ ಹೊತ್ತಿ ಉರಿಯುವ ಶೋಕ……ಕಣ್ಣುಗಳಲ್ಲಿ ಅಳಲು ,ಒಣಗಿದ ಕಣ್ಣೀರು, ನೋವಿನ ನಿರಾಶೆ, ಜೀವ ಒಡೆದುಹೋದ ವ್ಯಥೆ ಹೇಳಿದವು… ಅತ್ತೆ ಮುಂದೆ ಬಂದು “ಇರ್ಲಿ ನಿನ್ನ ಮಗನ ಶಿವ ಕರ್ಸ್ಕೊಂಡಾನ ಇಂತಹ ಹತ್ತು ಮಕ್ಕಳನ್ನು ಮತ್ತೇ ಹೆರುವಂತಿ ಬಾ ಒಳಕ್ಕೆ ಬಾ “ಅಂದರಂತೆ ಕಣ್ಣಲ್ಲಿ ನೀರುತುಂಬಿಕೊಕಡಿದ್ದವು.. ಒಂದು ಕ್ಷಣದಲ್ಲಿ ‘ಅತ್ತೆ’ … ‘ತಾಯಿ’ ಆಗಿಬಿಟ್ಟಳು.ಸೊಸೆಯ ಖಾಲಿ ಕೈಗಳನ್ನು ಮಮತೆಯಿಂದ ಗಟ್ಟಿಯಾಗಿ ಹಿಡಿದರು.ಇದು ಮೊಟ್ಟಮೊದಲ ಬಾರಿ —ಪ್ರೀತಿಯಿಂದ ಸೊಸೆ ಎದೆಗೆ ತಲೆ ಒರಗಿಸಿಮುರಿದು ಬಿದ್ದಳು.ಇಬ್ಬರ ನೋವು ಒಂದಾಗಿ ಹರಿದ ಕ್ಷಣಗಳಿಗೆಆ ಮನೆಯ ಗೋಡೆಗಳು ಸಾಕ್ಷಿಯಾಗಿದ್ದವು —ಕಾಡುತ್ತಿದ್ದ ಅತ್ತೆ ಇವತ್ತು ಕರಗಿಬಿಟ್ಟಳು.ಸೊಸೆ ಮಾತಾಡಲಿಲ್ಲ. ಮೌನವಾಗಿ ಒಳ ನಡೆದರು. ಆ ದಿನದಿಂದ ಆ ಮನೆಯ ವಾತಾವರಣ ಬದಲಾಗಿತು.ಅತ್ತೇಯ ಕಾಡುವ ಮಾತುಗಳು ಇಲ್ಲವಾಗಿದ್ದವು….. ಕಾಲ ಕೆಲವೊಮ್ಮೆ ಶಿಕ್ಷಕ ಆಗುತ್ತೆ ಅಲ್ಲವೇ….!!! ಒಂದು ಮರಣ ಎರಡು ಹೃದಯಗಳನ್ನು ಹತ್ತಿರ ಮಾಡಿತು.ಅದಕ್ಕೆ ಜಯದೇವಿತಾಯಿಯವರು ಹೇಳ್ತಾರೆ “ಕಾಡುವವರು ಇರಬೇಕ/ ಕಡಿತನಕ ಜನುಮಕ್ಕ ನೋಡುವರ ಇರಬೇಕು ವರೆಗೆ ಹಚ್ಚಿ-ಈ ಮನೆಕ ನೀಡುವರು ಇರಬೇಕ ನಿಜದರಿವ!! ಕಾಡುವರು ನನಗ /ಕಡೆತನಕ ಇರಲವ್ವಕೇಡ ಬಯಸಿನು ನಾ ಅವರಿಗ-ಕಡೆತನಹಾಡಿ ಹರಿಸುತ ಸುಖಿಸುವೆ!! ಏಕೆಂದರೆ ಒಂದೊಂದು ಕಠಿಣ ಪರೀಕ್ಷೆಗಳು ಅವರನ್ನು ದೇವರ ಸಮೀಪ ಕರೆದು ಒಯ್ಯಯುತಿವೆ. ಅನ್ನುವುದು ಖಚಿತಗೊಳ್ಳಲಾರಂಭಿಸಿತ್ತು..ಅತ್ತೆಯ ಕಾಟಾಚಾರವು ಕೂಡಾ ಜೀವನದಲ್ಲಿ ಅನೇಕ ಪಾಠಗಳನ್ನು ಕಲಿಸಿದ್ದವು ಅವರಿಗೆ ಸಕಾರಾತ್ಮಕ ಬದುಕನ್ನು ಬದುಕುವ ಪಾಠ ಕಲಿಸಿತ್ತು ಅಂತ ಹೇಳುತ್ತಿದ್ದರು. “ನೋವಿನ ಪೆಟ್ಟು ಬಿದ್ದಂತೇಲ್ಲ ಸಿದ್ದರಾಮನ ಸಾಮಿಪ್ಯಕೆ ಸಮಿಸತಾ ಹೋದೆ…. ಹಾಗೆ ಕನ್ನಡ ತಾಯಿಯನ್ನು ನಾನು ಅಪ್ಪಿಕೊಳ್ತಾ ಹೋದೆ …….ಮನದಲ್ಲಿ ಉಲ್ಬಣಿಸುತ್ತಿದ್ದ ವೇದನೆಗಳು… ಕಾವ್ಯದ ರೂಪದಲ್ಲಿ ಮನದ ಮೂಲೆಯಲ್ಲಿ ಹರಿದು ಬರುತ್ತಿತ್ತು ಕಷ್ಟಗಳನೆಲ್ಲ ನನ್ನ ತಾಯಿ ಭಾಷೆ ಕನ್ನಡಭಾಷೆಯಲ್ಲಿ ತೋಡಿಕೊಳ್ಳುತ್ತಿದ್ದೆ …. ಆದರೆ ಅವುಗಳನ್ನು ಶಬ್ದಾಂಕನ ಗೊಳ್ಳಿಸಲಿಕ್ಕೆ ಬೇಕಾಗುವ ಕನ್ನಡ ಶಬ್ದಗಳು ಬರೆಯುವ ಜ್ಞಾನ ಇನ್ನೂ ನನಗೆ ಇರಲಿಲ್ಲ ಏಕೆಂದರೆ ನಾಲ್ಕನೇ ಇಯತ್ತೆ ಮರಾಠಿ ಕಲಿತವಳು…ಕನ್ನಡ ಭಾಷೆಯನ್ನು ಬರೆಯಲು ನಾನು ಕಲಿತಿರಲಿಲ್ಲ .”ಅಂತ ಹೇಳ್ತಾ ಇದ್ದರು. ಜಯದೇವಿ ತಾಯಿಯವರ ಮೈದುನ ಜಗದೇವಪ್ಪನವರು ಗಂಡ ಚೆನ್ನಮಲ್ಲಪ್ಪನಂತೆ ವ್ಯಾಪಾರದಲ್ಲಿ ಜಾಣರೇನು ಆಗಿರಲಿಲ್ಲ…….!! ಕೆಟ್ಟ ಸಂಗತಿಯ ಗೆಳೆಯರಿಂದ ಅವರು ದಾರಿ ತಪ್ಪುತ್ತಿರುವುದನ್ನು ನೋಡಿದ ಪ್ರಯಾಗಬಾಯಿಯು ಒಬ್ಬ ಸುಂದರ ಮರಾಠವಾಡಾದ ಹೆಣ್ಣನ್ನು ನೋಡಿ ಮದುವೆ ಮಾಡಿದರು.ಆದರೆ ಮದುವೆಯಾಗಿ ಬಂದ ಓರಗಿತ್ತಿಯು ತಾಯಿಯವರ ತದ್ವಿರುದ್ಧ ಅವಳು ತುಂಬಾ ಚಂಚಲೆ, ಚಟಪಟ ಅಂತ ಮಾತನಾಡುವ ಎದುರುತ್ತರ ನೀಡುವ ಸೊಸೆ ….ಅತ್ತಿಯಂದಿರು ಹೇಳಿದ ಮಾತುಗಳನ್ನು ಕೇಳುತ್ತಿರಲಿಲ್ಲ… ಹೀಗಾಗಿ ಮದುವೆಯಾದ ಹೊಸತರಲ್ಲಿ ಪ್ರಯಾಗಬಾಯಿ ಸಣ್ಣ ಸೊಸೆಗೆ ಯಾವುದಾದರೂ ಸಣ್ಣ ಕೆಲಸ ಹೇಳಿದರು ಓರಗಿತ್ತಿಯು ಮಾಡುತ್ತಿರಲಿಲ್ಲ.ಅವಳು ರಾತ್ರಿ ಸಮಯ ಒಂಬತ್ತು ಗಂಟೆ ಆಗುತ್ತಿದ್ದಂತೆ ತನ್ನ ಗಂಡನ ಕೋಣೆಗೆ ಹೋಗಿಬಿಡುತ್ತಿದ್ದಳು . ಸಿರಿಮಂತ ಮನೆಯ ಸೊಸೆ ಅಲ್ಲವೇ ಬೆಳಗ್ಗಿನ ವಿಹಾರಕೆ ಅಂತ ಇಬ್ಬರೂ ಗಂಡ ಹೆಂಡದಿರು ಹೊರಟು ಹೋಗುತ್ತಿದ್ದರು.ಅತ್ತಿಯಂದಿರ ಹೇಳುವ ಕೆಲಸಗಳನ್ನು ಎಷ್ಟು ಕೇಳಬೇಕು ಅಷ್ಟೇ ಕೇಳುವಳು…ತಾನಾಯಿತು ತನ್ನ ಗಂಡನಾಯಿತು ಅಷ್ಟೇ ಅವಳ ಪ್ರಪಂಚವಾಗಿತ್ತು. ಜಯದೇವಿ ತಾಯಿಯವರಂತೆ ಸುಶೀಲ ಸದ್ಗುಣ ಸಾಧ್ವಿ ಸೊಸೆ ಆಗಿರಲಿಲ್ಲ ಹೀಗಾಗಿ ಸಹಜವಾಗಿ ಪ್ರಯಾಗಬಾಯಿಗೆ ಜಯದೇವಿ ತಾಯಿಯವರ ಮೇಲೆ ನಂಬಿಕೆ ಪ್ರೀತಿ ಮಮತೆ ಹುಟ್ಟಲಾರಂಭಿಸಿತು. ಅತ್ತೆಯಂದಿರ ನೆಚ್ಚಿನ ಸೊಸೆಯಾದರು . ಜಯದೇವಿ ತಾಯಿಯವರ ಗಂಡನ ತಮ್ಮನ ಮದುವೆಯಾದ ನಂತರ ತಾಯಿಯವರು ಎರಡನೆಯ ಹೆರಿಗೆ ಹೋದರು ಈ ಸಲ ಮೊದಲ ಹೇರಿಗೆ ಅಂತ ಉತ್ಸಾಹ ಸಂತಸ ಯಾವುದು ಇರಲಿಲ್ಲ ಯಾವ ಸಂಭ್ರಮ ಇರಲಿಲ್ಲ ಸಹಜವಾಗಿ ಹೊರಟು ನಿಂತರು. ಈ ಸಲದ ಹೇರಿಗೆಯು ಸುರಕ್ಷಿತವಾಗಿ ಸುಗಮವಾಗಿ ಸಾಗಿತು. ಅತ್ಯಂತ ಸುಂದರ ಹೆಣ್ಣು ಮಗುವಿಗೆ ಜನ್ಮವನ್ನು ಕೊಟ್ಟರು ಚಂದಿರನಂತೆ ಸುಂದರವಾಗಿದ್ದ ಮಗುವಿಗೆ ‘ಶಶಿಕಲಾ ‘ಎಂದು ನಾಮಕರಣ ಮಾಡಿ ಸಂತೈಸಿದರು .ಇಷ್ಟರಲ್ಲಿ ಬ್ರಿಟಿಷರ ಸೊತ್ತಾಗಿದ್ದ ಲಿಗಾಡೆ ಮನೆತನದ ಆಸ್ತಿಯನ್ನೆಲ್ಲ ಚೆನ್ನಮಲ್ಲಪ್ಪನವರಿಗೆ ಬ್ರಿಟಿಷರು ಆದರದಿಂದ ಒಪ್ಪಿಸಿದ್ದರು.ನಂತರ ಅವರು ಮೂರನೇ ಹೇರಿಗೆ ಹೋರಟರು ಹೀಗೆ ಮೇಲಿಂದ ಮೇಲೆ ತವರು ಮನೆಗೆ ಹೋಗುವುದು ಗಂಡನಿಗೆ ಬೇಸರ ತರುತ್ತಿದ್ದರು ಹೇರಿಗೆಯೂ ಮನೆಯಲ್ಲಿ ಆಗಲಿ ಅಂತ ಹೇಳುವ ಧೈರ್ಯ ಅವರಿಗೆ ಇರಲಿಲ್ಲ. ಅನಿವಾರ್ಯ ಹೋಗಲೇ ಬೇಕಾಲ್ಲ…ಮೂರನೆಯ ಹೇರಿಗೆ ಸುಂದರ ಗಂಡು ಮಗವನ್ನು ಹೆತ್ತರು. ಅವನಿಗೆ ‘ಶ್ರೀಕಂಠ ‘ಅಂತ ಹೆಸರಿಡಲಾಯಿತು. ಅತ್ಯಂತ ಅದ್ದೂರಿಯಾಗಿ ಸಂಭ್ರಮವನ್ನು ಆಚರಿಸಿದರು.ಗಂಡು ಮಗ ಅಂದರೆ ಕೇಳಬೇಕು ಆಗಿನ ಕಾಲದಲ್ಲಿ ಗಂಡು ಮಗ ಹುಟ್ಟಿದರೆ ಸ್ವರ್ಗದ ಬಾಗಿಲ ತೆರೆದಂತೆಆದರೆ ಜಯದೇವಿ ತಾಯಿಯವರು ಹೆಣ್ಣು ಗಂಡು ಎರಡನ್ನು ಸಮಾನತೆಯಲ್ಲಿ ನೋಡುವ ದೃಷ್ಟಿಕೋನವನ್ನು ಚಿಕ್ಕವರಿರುವಾಗಲೇ ಅವರು ಹೊಂದಿದವರಾಗಿದ್ದರು. ಅದಕ್ಕೆ ತಾಯಿಯವರು ಒಂದು ಕಡೆ ಬರೆಯುತ್ತಾರೆ ಹೆಣ್ಣು ಹುಟ್ಟೇದಂತ | ಕಣ್ಣೀರ ಕರಿಬ್ಯಾಡ ಸಣ್ಣಾಗಬ್ಯಾಡ ಮನದಾಗ -ತಾಯವ್ವಹೆಣ್ಣಿನ ಜಗದ ಕಣ್ಣೇನ || ಕಾನೂನು ಬದ್ಧವಾಗಿ ಹೆಣ್ಣು ಗಂಡು ಇಬ್ಬರೂ ಸಮಾನತೆ ಪಡೆಯುವಂತಹ ಕಾಲದಲ್ಲಿ ಜಯದೇವಿ ತಾಯಿಯವರು ಹುಟ್ಟಿದ್ದರೂ ಸಂಪ್ರದಾಯದಾಯಸ್ಥ ಕುಟುಂಬಕ್ಕೆ ಪುಷ್ಟಿ ಕೊಟ್ಟವರು.ಯಾವ ಕಾಲದಲ್ಲೂ ಹೆಣ್ಣು ಹುಟ್ಟಿ ಎರಡು ಮನೆಯಲ್ಲಿ ದೀಪ ಬೆಳಗುವಳಾಗಬೇಕು. ಕುಟುಂಬದ ಹೃದಯವಾಗಿ ನಿಲ್ಲಬೇಕು ನಿಜ . ಸೊಸೆಯಾಗಿ ಬಂದವಳು ಮೊದಲು ಸಹನೆ ಸೈಯ್ಯಮ ವಿನಯತೆ ಅವಳಿಗೆ ಆಭರಣ …ಹಿರಿಯರಿಗೆ ಆದರ ತೋರುತ್ತ ಕುಟುಂಬವ ನಿರ್ವಹಿಸುವುದೇ ಅವಳ ಧರ್ಮ. ಸಂಪ್ರದಾಯದ ಬಳುವಳಿಯನ್ನೇ ಬಳವಿಗೆ ಮಾಡಿದ್ದಾರೆ. ಕುಟುಂಬ ಜೀವನದ ಅನೇಕ ಏರಿಳಿತದ ಬಗ್ಗೆ ಹೇಳ್ತಾ ಹೋಗ್ತಾರೆ … ಗರತಿಯ ಬಗ್ಗೆ ಹೀಗೆ ಹೇಳ್ತಾರೆ “ದಯ ಬೇಕ ನುಡಿಯಲಿ |ಭಯ ಬೇಕ ನಡೆಯಲ್ಲಿ ದಯ ಬೇಕ ಸಕಲ ಜೀವನದಲ್ಲಿ -ತಾಯವ್ವಲಯ ಬೇಕು ಶಿವನ ನೆನಹುನಲಿ|| ಸೊಸೆಯಾದವಳು ಮೊದಲು ಮನೆ ಕೆಲಸ ಮಾಡಿ ಮನೆಯ ಮಂದಿಯ ಮನವನ್ನೇಲ್ಲ ಗೆಲ್ಲಬೇಕು ಗಂಡನ ಮನ ಗೆಲ್ಲಬೇಕು…. ವಿನಯಶೀಲರಾಗಿರಬೇಕು… ಎಲ್ಲರ ಬೇಕು ಬೇಡುಗಳನ್ನು ನೋಡುವಂಥವಳು ಆಗಿರಬೇಕು. ಮಾತಿಗೆ ಮಾತು ಬೆಳೆಸದಂಥವಳಿರಬಾರದು ಹೆಚ್ಚು ಅಗೆದರೆ ತಗ್ಗು ಬೀಳುವುದು ಹೆಚ್ಚು…. ಎಂಬಂತೆ ಮಾತಿನ ಗತಿ ಹೇಗಿರಬೇಕೆಂದರೆ ಮನಗಳನ್ನು ತಿಳಿಯಾಗಿಸಬೇಕು ಅನ್ನುತ್ತಿದ್ದರು ….ಮನೆಯ ಕಂಬವಾಗಿರಬೇಕು ಸೊಸೆ ಆದವಳು. ಸಿಟ್ಟಲಿ ಗಂಡ-ಅತ್ತೆಗ ಎದುರು ಉತ್ತರ ನುಡಿದರೆಮನೆಯವರ ಮನ ಸುಡು ಸುಡು ಸುಟ್ಟುಮರಳಿ ಸೊಸೆಯ ಕಡೆಗೆ ಚಟ್ಟಂತಹ ಸಿಡಿಯುವದಬಿರುಗಾಳಿ ಬೀಸಿದಂಗ ತೂರಿ ಬಂದ ಮಾತುಗಗನಕ್ಕಹಾರಿ ಒಯ್ದು ನೆಲಕ್ಕೆ ದೊಪ್ಪೆಂದ ಒಗೆವದ.. ಅಂತ ಹೇಳುವ ಮಾರ್ಮಿಕವಾದ ಉದಾರಣೆಯನ್ನು ಹೇಳುತ್ತಿದ್ದರು .ಹೆಣ್ಣಾದವಳು ನಗುನಗುತ ಮಾತಾಡಬೇಕುಹಗೆ ಎದುರಾದರೂ ಹೊಗೆ ನುಡಿ ಸಲ್ಲಕಾಣಲಾರದ ಕಣ್ಣು ಕಂಡ್ನಗ ಕಂಡಹಂಗ ಆಡಿ ಬಾಣಧಾಂಗ ಮಾತು ಮರಳಿ ಬಡೆಯದ ಮುನ್ನ ಜೋಕೆಯಿಂದಿದ್ದುತಾನು ಸುಟ್ಟುಕೊಂಡು ಇತರರ ಮನ ತಂಪಾಗಿರಬೇಕು….. ತುಪ್ಪ ಸಕ್ಕರೆ ಉಪ್ಪ-ಖಾರ ಉಣಿಸಿ ಒಪ್ಪುಳ್ಳ ಮಾತು ಕಲಿಸಿದರೆ ನಾಲಿಗೆ ಹಾಲಿನ ಹೆಪ್ಪುಗೆಡಿಸಿತ್ತು ಆಗಸಿರಿ ಇದ್ದು ಸುತರಿದ್ದು ಸುಖವಿಲ್ಲ ಹಿತವಿಲ್ಲದಿದ್ದರೆ ಫಲವೇನು….. ಎನ್ನುತ್ತಾರೆ ಕಡಿಮೆ ಎಂದರೆ ಮೂರು ತಲೆಮಾರಿನವರು ಜನರು ಕೂಡಿ ಇರುವ ಪದ್ಧತಿಯೇ ನಮ್ಮ ಸಂಸ್ಕೃತಿ ನಮ್ಮ ದೇಶದ ಪರಂಪರೆಯ ಬಳುವಳಿಯನ್ನು ನಾವು ಮೀರಬಾರದು ಅನ್ನುವುದು ಜಯದೇವಿ ತಾಯಿಯವರ ವಾದವಾಗಿತ್ತು. ಐದು ಜನ ಅತೇರ ಕೈಯಲ್ಲಿ ನಡೆದು ನಾಲ್ಕು ಜನ ಸೊಸೆಯೊಂದನ್ನು ನಡೆಸಿಕೊಂಡ ಗೊತ್ತು 23 ಮೊಮ್ಮಕ್ಕಳು ಮರಿ ಮೊಮ್ಮಕ್ಕಳನ್ನು ಕಂಡತುಂಬಾ ಜೀವನದ ಅನುಭವದ ವಿಚಾರ. ಹರೆಯದ ಹೆಣ್ಣು ನೂರಾರು ಆಸೆ ಹೊತ್ತು ಅತ್ತೆಯ ಮನೆಗೆ ಬಂದಾಗ ತನ್ನ ಸುಖಕ್ಕಿಂತ ಮನೆಯಲ್ಲಿಯೇ ಹಿತ ರಕ್ಷಿಸುವುದೇ ಮೇಲು ತನ್ನ ಮನ ನೊಂದರು ಉಳಿದವರ ಮನನೊಯದಂತೆ ನೋಡಿಕೊಳ್ಳಬೇಕು ಅನ್ನುತ್ತಿದ್ದ . ಅವಿಭಕ್ತ ಕುಟುಂಬದಲ್ಲಿ ಬೆಳೆದ ತಾಯಿಯವರು ಸ್ವಾಭಿಮಾನದಿಂದಲೇ ಈ ಮಾತುಗಳ ಹೇಳಿದ್ದಾರೆ ನಮ್ಮ ಸಂಸ್ಕೃತಿಯಿಂದ ದೂರ ಸರಿಯದೇ ವ್ಯಕ್ತಿ ವಿಕಸನವನ್ನು ಮಾಡಿಕೊಳ್ಳಬಹುದು….. ಬೆಳೆಯಬಹುದು ಅನ್ನುವುದು ತೋರಿಸಿಕೊಟ್ಟ ಸಾಕ್ಷಾತ್ ನಿದರ್ಶನ ಅವರ ಜೀವನ. ಹಾಗೆ ಹೆಣ್ಣಾಗಿ ಸತ್ಯಕ್ಕಾಗಿ ಹೋರಾಡಬೇಕು, ಕೆಟ್ಟದ್ದನ್ನು ಪ್ರತಿಭಟಿಸಬೇಕು ,ಗಂಡನಿಗೆ ಸರಿ ಸಮಾನವಾಗಿ ನಿಲ್ಲಬೇಕು ಜೀವನದಲ್ಲಿ ಸಾಧನೆ ಮುಖ್ಯ ಗುರಿ ಆಗಿರಬೇಕು ಜ್ಞಾನಧ ಎತ್ತರಕ್ಕೆ ಇರಬೇಕು ಅನ್ನೋ ಧೋರಣೆಯನ್ನು ಕೂಡ ಹೊಂದಿದ್ದರು. ಮೊದಲು ಹೆಣ್ಣಾದವಳು ಸೋತು ಸೋತು ಗೆಲ್ಲಬೇಕು ಅನ್ನುವ ತಮ್ಮ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ವೈಶಿಷ್ಟ ಪೂರ್ಣವಾದ ವ್ಯಕ್ತಿ ವಿಶೇಷತೆ ತೋರುತ್ತದೆ. ವ್ಯಾಪಾರದಲ್ಲಿ ನೈಪುಣ್ಯತೆ ಹೊಂದಿರುವ ತಂದೆ ಚನ್ನಬಸಪ್ಪನವರ ಜೊತೆ ಕೂಡಿ ವ್ಯಾಪಾರವನ್ನು ಮಾಡುತ್ತಿದ್ದರು…ಗಂಡ ಚೆನ್ನಮಲ್ಲಪ್ಪನವರು. ಹಾಗೆ ಜಯದೇವಿ ತಾಯಿಯವರ ಅಕ್ಕ ತಂಗಿಯರು ಅಣ್ಣ ತಮ್ಮಂದಿರನ್ನು ಆದರದಿಂದ ನೋಡಿಕೊಳ್ಳುತ್ತಿದ್ದರು.ಜಯದೇವಿ ತಾಯಿಯವರ ತಂಗಿಯಂದಿರು ಮಕ್ಕಳ ವಯಸ್ಸಿನವರಷ್ಟೇ ಇದ್ದರು .ಆಗಿನ ಕಾಲದಲ್ಲಿ ತಾಯಿ ಮಗಳ ಹೆರಿಗೆ ಜೊತೆ ಜೊತೆಗೆ ಆಗುವುದು ಸಹಜವಾಗಿತ್ತು…..ಹೀಗಾಗಿ ಜಯದೇವಿ ತಾಯಿಯವರ ತಂಗಿಯಂದಿರು ಹಾಗೂ ಮಕ್ಕಳು ಎಲ್ಲರೂ ಸೇರಿ ಶಾಲೆಗೆ ಹೋಗುತ್ತಿದ್ದರು. ಈ ಸಮಯದಲ್ಲಿ ತಾಯಿಯವರಿಗೆ ವಚನವನ್ನು ಓದುವ ಮಹದಾಸೆ ಹೆಚ್ಚಾಗಿ ತೊಡಗಿತ್ತು.ಶರಣರ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದರು. ಆಳವಾದ ಅಮೂಲ್ಯವಾದ ವಚನ ಸಾಹಿತ್ಯವನ್ನು ಅಭ್ಯೆಸಿಸಬೇಕು ತನ್ನಲ್ಲಿ …ಹುಟ್ಟುವ ಭಾವನೆಗಳನ್ನು ತಾಯಿ ಭಾಷೆಯಲ್ಲಿ ವ್ಯಕ್ತಪಡಿಸಬೇಕು ಅನ್ನುವ ತಳಮಳ ಅವರಲ್ಲಿ ಉಲ್ಬಣಗೊಳ್ಳಲಾರಂಭಿಸಿತು ….ಕನ್ನಡ
ಧಾರಾವಾಹಿ ಸಂಗಾತಿ-111 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ವ್ಯವಸ್ಥೆಯಾದ ಮಕ್ಕಳ ಶಿಕ್ಷಣ ಎರಡನೇ ಮಗಳು ಪ್ರಥಮ ವರ್ಷದ ಪದವಿ ತರಗತಿಗೆ ಸೇರ್ಪಡೆಯಾದಳು. ಮೂರನೇ ಮಗಳು ತಾನು ಸ್ವಲ್ಪ ತಡವಾಗಿಯೇ ಪಿಯುಸಿಗೆ ಸೇರಿಕೊಳ್ಳುತ್ತೇನೆ. ಅಮ್ಮನ ಜೊತೆ ಸಹಾಯಕ್ಕೆ ಇರುತ್ತೇನೆ ಎಂದಳು. ಸುಮತಿಯ ಆರೋಗ್ಯ ಮೊದಲಿಗಿಂತ ಕ್ಷೀಣಿಸುತ್ತಿರುವುದು ಇಬ್ಬರ ಗಮನಕ್ಕೂ ಬಂದಿತ್ತು. ಹಾಗಾಗಿ ತಂಗಿ ಹೇಳಿದಾಗ ಅಕ್ಕ ಸರಿ ಅಂದಳು. ಸುಮತಿಯ ಕುಟುಂಬಕ್ಕೆ ಆಪ್ತರಾದ ಡ್ರೈವರ್, ಸಾಹುಕಾರರು ಹಾಗೂ ಅಮ್ಮ ಸಕಲೇಶಪುರದಲ್ಲಿರುವ ಅನಾಥಾಶ್ರಮಕ್ಕೆ ಭೇಟಿ ನೀಡುವಾಗ ಜೊತೆಯಲ್ಲಿ ಇರುತ್ತಿದ್ದರು. ಹಾಗಾಗಿ ಅನಾಥಾಶ್ರಮದಲ್ಲಿ ಮಕ್ಕಳ ಮೇಲ್ವಿಚಾರಣೆ ಹಾಗೂ ಅವರಿಗೆ ಶಿಕ್ಷಕಿಯಾಗಿ ಕಲಿಕೆಗೆ ಸಹಾಯ ಮಾಡಲು ಯಾರೂ ಇಲ್ಲದಿರುವುದು ಡ್ರೈವರ್ ಗೆ ತಿಳಿದಿತ್ತು. ಅವರು ಅಮ್ಮನೊಂದಿಗೆ ಸುಮತಿಯ ಎರಡನೇ ಮಗಳ ವಿಚಾರವನ್ನು ಪ್ರಸ್ತಾಪಿಸಿದರು. ಸುಮತಿಯ ಎರಡನೇ ಮಗಳು ದ್ವಿತೀಯ ಪಿಯುಸಿಯನ್ನು ಉತ್ತಮ ಅಂಕ ಗಳಿಸಿ ತೇರ್ಗಡೆಯಾಗಿದ್ದಳು ಹಾಗೂ ಈಗ ಪ್ರಥಮ ವರ್ಷದ ಪದವಿಗೆ ಅಡ್ಮಿಶನ್ ಪಡೆದುಕೊಂಡಿದ್ದಳು. ಈ ವಿಚಾರ ಅಮ್ಮನಿಗೂ ತಿಳಿದಿತ್ತು. ಆ ಹುಡುಗಿಗೆ ಅನಾಥಾಶ್ರಮದಲ್ಲಿ ಕೆಲಸ ದೊರೆತರೆ ಸುಮತಿಯ ಕುಟುಂಬಕ್ಕೆ ಸಹಾಯವಾಗಬಹುದು ಹಾಗೂ ಆ ಹುಡುಗಿಯು ತನ್ನ ವಿದ್ಯಾಭ್ಯಾಸವನ್ನು ಯಾವುದೇ ಅಡಚಣೆ ಇಲ್ಲದೆ ಮುಂದುವರೆಸಬಹುದು ಎಂಬುದು ಸುಮತಿಯ ಕುಟುಂಬದ ಆಪ್ತರಾದ ಡ್ರೈವರ್ ಹಾಗೂ ಅವರ ಪತ್ನಿಯ ಆಲೋಚನೆಯಾಗಿತ್ತು. ಡ್ರೈವರ್ ಹೇಳಿದ ವಿಚಾರವನ್ನು ಕೇಳಿ…. “ಸರಿ ನಾನು ಒಮ್ಮೆ ಡಾಕ್ಟರ್ ರೊಂದಿಗೆ ಈ ವಿಚಾರವನ್ನು ಪ್ರಸ್ತಾಪಿಸಿ ನೋಡುತ್ತೇನೆ”…. ಎಂದರು. “ಹಾಗೆಯೇ ಆಗಲಿ ಅಮ್ಮ…. ನೀವು ಮತ್ತು ಸಾಹುಕಾರರು ಮೊದಲಿನಿಂದಲೂ ಟೀಚರ್ ಹಾಗೂ ಮಕ್ಕಳ ಕಾಳಜಿಯನ್ನು ವಹಿಸುತಿದ್ದೀರಿ ಹಾಗೂ ಅವರಿಗೆ ಸಹಾಯ ಮಾಡುತ್ತಿದ್ದೀರಿ….. ನಿಮ್ಮಿಂದ ಅವರು ನೆಮ್ಮದಿಯಿಂದ ಬದುಕುವಂತಾಗಿದೆ”…. ಎಂದರು. ಸುಮತಿಯ ಎರಡನೇ ಮಗಳು ಟೈಪಿಂಗ್ ಕಲಿಯುವಾಗ ಪ್ರತಿ ತಿಂಗಳೂ ಫೀಸ್ ಕಟ್ಟಲು ಅಮ್ಮನಿಂದ ಹಣವನ್ನು ಪಡೆಯಲು ಬರುತ್ತಿದ್ದಳು ಹಾಗೂ ಹೊಸದಾಗಿ ಇಲ್ಲಿಗೆ ವಾಸ್ತವ್ಯ ಹೂಡಿದ ನಂತರ ಅವಳಿಗೆ ರಜೆ ಇರುವಾಗ ತನ್ನ ಸಹಾಯಕ್ಕಾಗಿ ಅಮ್ಮ ಅವಳನ್ನು ಬಂಗಲೆಗೆ ಕರೆಸಿಕೊಳ್ಳುತ್ತಿದ್ದರು ಹಾಗಾಗಿ ಅವಳ ಪರಿಚಯ ಅಮ್ಮನಿಗಿತ್ತು. ಒಂದು ದಿನ ಸಂಜೆ ಸುಮತಿ ಮತ್ತು ಅವಳ ಎರಡನೇ ಮಗಳನ್ನು ಬಂಗಲೆಗೆ ಬರುವಂತೆ ಅಮ್ಮ ಕೆಲಸಗಾರರೊಂದಿಗೆ ಹೇಳಿ ಕಳಿಸಿದರು. ಅಮ್ಮ ತಮ್ಮನ್ನು ಏಕೆ ಕರೆದಿರಬಹುದು? ಎನ್ನುವ ಜಿಜ್ಞಾಸೆಯೊಂದಿಗೆ ಇಬ್ಬರೂ ಅಮ್ಮನನ್ನು ಭೇಟಿ ಮಾಡಲು ಬಂದರು. ಅಮ್ಮನನ್ನು ಕಂಡೊಡನೆ ಇಬ್ಬರೂ ವಂದಿಸಿದರು. ಸದಾ ಹಸನ್ಮುಖಿಯಾಗಿರುತ್ತಿದ್ದ ಅಮ್ಮ ತಾಯಿ-ಮಗಳನ್ನು ಕಂಡ ಕೂಡಲೇ….”ಹೇಗಿದ್ದೀರಿ ಸುಮತಿ…. ಇವಳ ವಿದ್ಯಾಭ್ಯಾಸ ಹೇಗೆ ನಡೆಯುತ್ತಿದೆ? ಎಂದು ಕೇಳಿದರು….. “ಎಲ್ಲವೂ ನಿಮಗೆ ಗೊತ್ತಿರುವ ವಿಚಾರ ಅಲ್ಲವೇ ಅಮ್ಮಾ…. ಇನ್ನು ನಾನೇನು ಹೇಳಲಿ?… ನಿಮ್ಮ ಕೃಪೆಯಿಂದ ನಾವು ಚೆನ್ನಾಗಿದ್ದೇವೆ”…. ಎಂದಳು ಸುಮತಿ. ಮಗಳನ್ನು ನೋಡುತ್ತಾ….. “ನೀನು ಏನು ಹೇಳುತ್ತೀಯ ಹುಡುಗಿ?…. ಎಂದು ಅಮ್ಮ ಕೇಳಿದಾಗ… “ನನ್ನ ಅಮ್ಮ ಹೇಳಿದ್ದೇ ನನ್ನ ಉತ್ತರ ಅಮ್ಮ”…. ಎಂದಳು ಹುಡುಗಿ ವಿನಯದಿಂದ. “….ನಿಮ್ಮಿಬ್ಬರನ್ನು ನಾನು ಇಲ್ಲಿಗೆ ಕರೆಸಿರುವುದು ಏಕೆಂದರೆ, ನಾವು ನಡೆಸುತ್ತಿರುವ ಅನಾಥಾಶ್ರಮದ ಬಗ್ಗೆ ನಿಮಗೆ ತಿಳಿದಿದೆಯಲ್ಲವೇ?…. ಅಲ್ಲಿ ಈಗ ಮೇಲ್ವಿಚಾರಕಿ ಹಾಗೂ ಶಿಕ್ಷಕಿ ಇಲ್ಲ…. ಹಾಗಾಗಿ ನಿಮ್ಮ ಈ ಮಗಳನ್ನು ಅಲ್ಲಿಗೆ ನೇಮಿಸಬೇಕು ಎಂದು ಡಾಕ್ಟರ್ ಮತ್ತು ನಾನು ತೀರ್ಮಾನಿಸಿದ್ದೇವೆ…. ನೀವೇನು ಹೇಳುತ್ತೀರಿ? ಎಂದು ಸುಮತಿಯನ್ನು ಅಮ್ಮ ಕೇಳಲು, ….. “ಅಮ್ಮಾ…. ಇವಳಿನ್ನೂ ಚಿಕ್ಕ ಹುಡುಗಿ…. ಅಷ್ಟು ದೊಡ್ಡ ಜವಾಬ್ದಾರಿಯನ್ನು ಇವಳು ನಿಭಾಯಿಸಲು ಸಾಧ್ಯವೇ?…. ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೂ ಇವಳು ಅಲ್ಲಿಯೇ ಓದಿ ಬೆಳೆದವಳು…. ಆದರೂ….. ಇವಳ ವಯಸ್ಸಿಗೆ ಇದು ಬಹಳ ದೊಡ್ಡ ಜವಾಬ್ದಾರಿ ಎಂದು ನನಗೆ ಅನಿಸುತ್ತಿದೆ”…. ಎಂದಳು. ಸುಮತಿಯ ಮಾತನ್ನು ಕೇಳಿದ ಅಮ್ಮ….. “ಸಂಪೂರ್ಣ ಜವಾಬ್ದಾರಿಯನ್ನು ಇವಳ ಮೇಲೆ ನಾವು ಹೊರಿಸುತ್ತಿಲ್ಲ…. ಅವಳಿಗೆ ಸಹಾಯ ಮಾಡಲು ನಮ್ಮ ಇನ್ನೊಂದು ಅಂಗವಿಕಲ ಶಾಲೆಯ ಮೇಲ್ವಿಚಾರಕರು ಇರುತ್ತಾರೆ…. ಇವಳು ಅಲ್ಲಿಯೇ ಮಕ್ಕಳ ಜೊತೆಗೆ ವಾಸವಿದ್ದು, ಅವರ ಕಲಿಕೆಗೆ ಸಹಾಯ ಮಾಡಬೇಕು ಅವರನ್ನು ನೋಡಿಕೊಳ್ಳಬೇಕು….ಜೊತೆಗೆ ಇವಳೂ ಅಲ್ಲಿಂದ ಕಾಲೇಜಿಗೆ ಹೋಗಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು…. ಹೇಗೂ ಅಲ್ಲಿನ ನಿಯಮಗಳೇನೆಂದು ಇವಳಿಗೆ ತಿಳಿದಿದೆ…. ಒಂದರಿಂದ ಹತ್ತನೇ ತರಗತಿಯವರೆಗೂ ಓದುತ್ತಿರುವ ವಿದ್ಯಾರ್ಥಿಗಳು ಅಲ್ಲಿದ್ದಾರೆ…. ಇವಳು ಬಹಳ ಬುದ್ಧಿವಂತಳಿದ್ದಾಳೆ… ಹಾಗಾಗಿ ಅಲ್ಲಿನ ಮಕ್ಕಳಿಗೆ ಪಠ್ಯದ ವಿಷಯಗಳಲ್ಲಿ ಇವಳು ಸಹಾಯ ಮಾಡಬಹುದು…. ನಿಮ್ಮ ಮಗಳಿಗೆ ತಿಂಗಳಿಗೆ ಇಂತಿಷ್ಟು ಎಂದು ಸಂಬಳವನ್ನು ನಾವು ಕೊಡುತ್ತೇವೆ…. ಇದರಿಂದ ನಿಮಗೆ ಸಹಾಯವಾಗುತ್ತದೆ…. ಇನ್ನೊಬ್ಬಳು ಮಗಳು ಕೂಡಾ ನಿಮ್ಮ ಜೊತೆ ಇದ್ದು ಕಾಲೇಜಿಗೆ ಸೇರಬಹುದು…. ನಿಮ್ಮ ಕೊನೆಯ ಮಗಳು ಹೇಗೂ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ಪಿಯುಸಿಯವರೆಗೂ ಅವಳ ಚಿಂತೆ ನಿಮಗಿರುವುದಿಲ್ಲ… ಎಲ್ಲವೂ ಸರ್ಕಾರವೇ ನೋಡಿಕೊಳ್ಳುತ್ತದೆ…. ಈಗ ಇವಳೂ ಅಲ್ಪ ಸ್ವಲ್ಪ ಸಂಪಾದನೆ ಮಾಡುವುದರಿಂದ ನಿಮಗೂ ಸಹಾಯವಾಗುತ್ತದೆ…. ಇವಳು ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ನಮ್ಮ ಬೇರೆ ಶಾಲೆಗಳಲ್ಲಿಯೂ ಕೆಲಸ ಮಾಡಬಹುದು…. ಇವಳಿಗೆ ವಾಸಕ್ಕೆ ಅನಾಥಾಶ್ರಮದಲ್ಲಿ ಬೇಕಾದ ಸೌಕರ್ಯವನ್ನು ಮಾಡಿಕೊಡಲಾಗುತ್ತದೆ….ಇವಳಿಗೆ ಸಹಾಯಕ್ಕಾಗಿ ಅಲ್ಲಿ ಒಬ್ಬ ಅಡುಗೆಯವರು ಇರುತ್ತಾರೆ…. ವಾರಕ್ಕೊಮ್ಮೆ ನಿಮ್ಮನ್ನು ಬಂದು ಭೇಟಿ ಮಾಡುತ್ತಾಳೆ…. ಇಲ್ಲಿ ನಿಮ್ಮ ಯೋಗ ಕ್ಷೇಮವನ್ನು ನೋಡಿಕೊಳ್ಳಲು ಇನ್ನೊಬ್ಬ ಮಗಳು ಇರುತ್ತಾಳೆ ಅಲ್ಲವೇ?…. ಆಲೋಚಿಸಿ ಆದಷ್ಟು ಬೇಗ ನಿಮ್ಮ ತೀರ್ಮಾನವನ್ನು ತಿಳಿಸಿ. ನಾವು ಕೂಡ ಆಗಾಗ ಅಲ್ಲಿ ಭೇಟಿ ನೀಡುತ್ತಿರುತ್ತೇವೆ…. ಇವಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ನೀಡುತ್ತಿರುತ್ತೇವೆ…. ನಮ್ಮ ನೆರಳಿನಲ್ಲಿ ಅವಳು ಇರುತ್ತಾಳೆ….ಹೇಗೂ ನೀವು ಶಿಕ್ಷಕಿ…. ನಿಮ್ಮ ಜೊತೆ ರಜೆಯಲ್ಲಿ ಆಗಾಗ ಇವಳು ಕೂಡ ಶಾಲೆಗೆ ಬರುತ್ತಿದ್ದಳಲ್ಲವೇ? …. ಹಾಗಾಗಿ ಮಕ್ಕಳಿಗೆ ಕಲಿಸಲು ಕಷ್ಟವಾಗದು ಎಂಬುದು ನನ್ನ ಅನಿಸಿಕೆ… ಇನ್ನು ತೀರ್ಮಾನ ನಿಮ್ಮಿಬ್ಬರದು…. ಎಂದರು ಅಮ್ಮ ನಸುನಗುತ್ತಾ.
ಸಾವಿಲ್ಲದ ಶರಣರು ಮಾಲಿಕೆ-ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕರ್ನಾಟಕ ಗಾಂಧಿ ಶ್ರೀ ಹರ್ಡೇಕರ್ ಮಂಜಪ್ಪನವರು, ಡಾ ಶಶಿಕಾಂತ್ ಪಟ್ಟಣ ರಾಮದುರ್ಗ
ಶರಣ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ- ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕರ್ನಾಟಕ ಗಾಂಧಿ ಶ್ರೀ ಹರ್ಡೇಕರ್ ಮಂಜಪ್ಪನವರು, ಡಾ ಶಶಿಕಾಂತ್ ಪಟ್ಟಣ ರಾಮದುರ್ಗ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಬಸವ ಭಕ್ತ ಲಿಂಗಾಯತ ಧರ್ಮದ ಪ್ರಚಾರಕ ಚಿಂತಕ ಸಾಹಿತಿ ಹರ್ಡೇಕರ ಮಂಜಪ್ಪನವರ ಕೊಡುಗೆ ಕರ್ನಾಟಕಕ್ಕೆ ಅಪಾರವಾಗಿದೆ. ಹರ್ಡೇಕರ ಮಂಜಪ್ಪನವರು ಕರ್ನಾಟಕದ ಸಾಮಾಜಿಕ, ಪತ್ರಿಕೋದ್ಯಮ ಶೈಕ್ಷಣಿಕ, ಸಾಹಿತ್ಯ ಕ್ಷೇತ್ರಗಳನ್ನೊಳಗೊಂಡಂತೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಮಾಜಸೇವಕರು. ಆಮೂಲಕ ಕರ್ನಾಟಕದ ಗಾಂಧಿ ಎಂದು ಹೆಸರಾಗಿದ್ದವರು. ಕೌಟುಂಬಿಕ ಹಿನ್ನಲೆ ಮತ್ತು ಶಿಕ್ಷಣ 1886ರ ಫೆಬ್ರುವರಿ 18 ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಬಡ ಕುಟುಂಬ ಒಂದರಲ್ಲಿ ಜನಿಸಿದರು. ಇವರ ಅಣ್ಣನೆ ಇವರ ಪಾಲನೆಯನ್ನು ಮಾಡಿದ್ದಲ್ಲದೆ, ಇವರ ಎಲ್ಲ ಧ್ಯೇಯ ಸಾಧನೆಗಳಿಗೆ ಒತ್ತಾಸೆಯಾಗಿ ನಿಂತನು. ಮಂಜಪ್ಪನವರು ಕಲಿತಿದ್ದು ಕೇವಲ ಕನ್ನಡ, 7ನೆಯ ತರಗತಿಯವರೆಗೆ. ತಮ್ಮ ಸ್ವಂತ ಪ್ರಯತ್ನಗಳಿಂದ ಇಂಗ್ಲಿಷ್ ಕಲಿಯಲು ಪ್ರಯತ್ನಿಸಿದರೂ ಸಹ ಅದರಲ್ಲಿ ಹೆಚ್ಚಿನ ಪ್ರಗತಿಯಾಗಲಿಲ್ಲ. 1903ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಅವರು ಉದ್ಯೋಗಕ್ಕೆ ಹತ್ತಬೇಕಾಯಿತು. ಶಿರಸಿಯಲ್ಲಿ ತಾವು ಕಲಿತ ಶಾಲೆಯಲ್ಲಿಯೆ ಸಹಶಿಕ್ಷಕರಾದರು. 1905 ರಲ್ಲಿ ಪ್ರತ್ಯೇಕ ಶಾಲೆಯ ಏಕೋಪಾಧ್ಯಾಯರಾದರು. ಪತ್ರಿಕಾ ಜೀವನ ಮಂಜಪ್ಪನವರು ಅಂದಿನ ರಾಷ್ಟ್ರೀಯತೆ ವಾತಾವರಣದಿಂದ ಪ್ರಭಾವಿತರಾಗಿ ತಮ್ಮ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಟ್ಟರು. ಇವರ ಅಣ್ಣನೂ ಸಹ ತಮ್ಮ ಕೆಲಸವನ್ನು ಬಿಟ್ಟುಬಿಟ್ಟರು. ಇವರಿಬ್ಬರೂ ಜೊತೆಯಾಗಿ 1906ರ ಸೆಪ್ಟಂಬರದಲ್ಲಿ “ಧನುರ್ಧಾರಿ” ಎನ್ನುವ ಪತ್ರಿಕೆಯನ್ನು ದಾವಣಗೆರೆಯಿಂದ ಪ್ರಕಟಿಸತೊಡಗಿದರು. ಈ ಪತ್ರಿಕೆಯು ಲೋಕಮಾನ್ಯ ತಿಲಕರು ಮಹಾರಾಷ್ಟ್ರದಲ್ಲಿ ಹೊರಡಿಸುತ್ತಿದ್ದ ಮರಾಠಿ ಪತ್ರಿಕೆ ಕೇಸರಿಯ ಲೇಖನಗಳ ಕನ್ನಡ ಅನುವಾದವನ್ನು ಪ್ರಕಟಿಸುತ್ತಿತ್ತು. ಪತ್ರಿಕೆಯ ಉಗ್ರಧೋರಣೆಯನ್ನು ಇಷ್ಟಪಡದ ಮುದ್ರಕರು ಬಾಡಿಗೆ ಹೆಚ್ಚಿಸಿದ್ದರಿಂದ ಪತ್ರಿಕೆ ನಿಂತುಹೋಯಿತು. 1908ರಲ್ಲಿ ಸ್ವಂತ ಮುದ್ರಣಯಂತ್ರ ಹೊಂದಿ ಪತ್ರಿಕೆಯನ್ನು ಮತ್ತೆ ಪ್ರಾರಂಭಿಸಿದರು. ಆದರೆ 1915ರಲ್ಲಿ ಧನುರ್ಧಾರಿ ಮತ್ತೆ ನಿಂತುಹೋಯಿತು. ಸತ್ಯಾಗ್ರಹ ಆಶ್ರಮ ಕಟ್ಟಿದರು _____________________ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಪರಮ ಭಕ್ತರಾದ ಶ್ರೀ ಹರ್ಡೇಕರ ಮಂಜಪ್ಪನವರು ಅವರಿಂದ ಲಿಂಗ ದೀಕ್ಷೆಯನ್ನು ಪಡೆದರು. ಮುಂದೆ ವಿಜಯಪುರದ ಶ್ರೀ ಬಂಥನಾಳ ಸಂಗನಬಸವ ಸ್ವಾಮಿಗಳ ಆಜ್ಞೆಯಂತೆ ಅವರಿಂದ ಜಂಗಮ ದೀಕ್ಷೆ ಪಡೆದರು. ರಾಷ್ಟ್ರೀಯ ನಾಯಕರಿಂದ ಪ್ರಭಾವಿತರಾದ ಮಂಜಪ್ಪನವರು 1910ರಲ್ಲಿ ಬ್ರಹ್ಮಚರ್ಯ ವ್ರತದ ಪ್ರತಿಜ್ಞೆ ಮಾಡಿದರು. 1914ರಲ್ಲಿ ತಿಲಕರನ್ನು ಭೆಟ್ಟಿಯಾದರು. 1920 ಅಗಸ್ಟದಲ್ಲಿ ಖಾದಿವ್ರತ ಕೈಗೊಂಡರು. ಹರಿಹರ ರೇಲ್ವೆ ಸ್ಟೇಶನ್ದಿಂದ 5 ಕಿ.ಮಿ. ದೂರದಲ್ಲಿ, ತುಂಗಭದ್ರಾ ನದಿಯ ದಂಡೆಯ ಮೇಲೆ ಬಾಳಪ್ಪ ಎನ್ನುವ ತಮ್ಮ ಗೆಳೆಯರ ಭೂಮಿಯಲ್ಲಿ ಒಂದು ಆಶ್ರಮ ಕಟ್ಟಿಸಿಕೊಂಡರು. ಅದಕ್ಕೆ “ಸತ್ಯಾಗ್ರಹ ಆಶ್ರಮ” ಎಂದು ಹೆಸರಿಡಲಾಯಿತು. 1923 ರಲ್ಲಿ ಈ ಆಶ್ರಮವನ್ನು ಪ್ರವೇಶಿಸಿದರು. 1924ರಲ್ಲಿ ಸಾಬರಮತಿಗೆ ಹೋಗಿ ಗಾಂಧೀಜಿಯವರ ಜೊತೆಗೆ ಕೆಲ ದಿನ ಇದ್ದರು. 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ ಬಸವೇಶ್ವರ ಸೇವಾದಳ ಎನ್ನುವ ಸ್ವಯಂಸೇವಕರ ಸಂಘಟನೆಯನ್ನು ರಚಿಸಿ ಅಧಿವೇಶನದ ಯಶಸ್ಸಿಗೆ ಕಾರಣರಾದರು. ಮಹಾತ್ಮಾ ಗಾಂಧಿಯವರಿಗೆ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಆಜ್ಞೆಯಂತೆ ಶ್ರೀ ಲಕ್ಷ್ಮಣ ರಾವ್ ಬೀಡೆ ಅವರ ಸತ್ಯಾಗ್ರಹಿ ಬಸವೇಶ್ವರ ಎಂಬ ಪುಸ್ತಕವನ್ನು ಮಹಾತ್ಮಾ ಗಾಂಧಿ ಅವರ ಓದಿಗೆ ತಲುಪಿಸಿದರು. ವಿಧಾಯಕ ಯೋಜನೆಗಳು 1925 ರಲ್ಲಿ ಮಂಜಪ್ಪನವರ ತಾಯಿ ತೀರಿಕೊಂಡರು. ಆಬಳಿಕ ಮಂಜಪ್ಪನವರು ಕರ್ನಾಟಕದ ಉದ್ದಗಲಕ್ಕೂ ಹಳ್ಳಿಗಳಲ್ಲಿ ಸಂಚರಿಸಿದರು. ಗ್ರಾಮೋದ್ಧಾರದ ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ನೆರವೇರಿಸಿದರು. “ರಾಟಿ ಸಂಘ”ಗಳನ್ನು ಸ್ಥಾಪಿಸಿದರು. ನೈತಿಕ ಪ್ರಚಾರ ಮಾಡಿದರು. 1927 ರ ಮೇ 13ರಂದು ಮಂಜಪ್ಪನವರು ಆಲಮಟ್ಟಿಯಲ್ಲಿ ವಿದ್ಯಾಲಯವನ್ನು ಸ್ಥಾಪಿಸಿದರು. ಈ ವಿದ್ಯಾಲಯದಲ್ಲಿ ಕೇವಲ ಔಪಚಾರಿಕ ಶಿಕ್ಷಣವನ್ನಲ್ಲದೆ , ಜೀವನ ಶಿಕ್ಷಣ ಎನ್ನುವ ಹೆಸರಿನಲ್ಲಿ ಕೈಕಸಬುಗಳನ್ನೂ ಸಹ ಕಲಿಸಲಾಗುತ್ತಿತ್ತು. ಗಾಂಧೀಜಿಯವರೂ ಸಹ ಆನಂತರದ ತಮ್ಮ ಶಿಕ್ಷಣಪದ್ಧತಿಯಲ್ಲಿ ಇಂತಹದೆ ನಯಿ ತಾಲೀಮ ಎನ್ನುವ ವಿಧಾನವನ್ನು ಅಳವಡಿಸಿಕೊಂಡರು. 1930 ರಲ್ಲಿ ಮಂಜಪ್ಪನವರು “ಉದ್ಯೋಗ” ಎನ್ನುವ ಮಾಸಪತ್ರಿಕೆಯನ್ನು ಹಾಗು ಮಕ್ಕಳ ಸಾಹಿತ್ಯಮಾಲೆಯನ್ನು ಪ್ರಾರಂಭಿಸಿದರು. 1931ರಲ್ಲಿ ಶರಣಸಂದೇಶ ಎನ್ನುವ ಮಾಸಪತ್ರಿಕೆಯನ್ನು ಹೊರಡಿಸತೊಡಗಿದರು. 1924 ರಲ್ಲಿ ಮತ್ತು 1934 ರಾಲಿ ಗಾಂಧೀಜಿ ಕರ್ನಾಟಕಕ್ಕೆ ಬಂದಾಗ ಮಂಜಪ್ಪನವರು ಅವರ ಜೊತೆಗಿನ ಸುತ್ತಾಟದಲ್ಲಿ ಪಾಲ್ಗೊಂಡರು. 1946ರಲ್ಲಿ ಮಂಜಪ್ಪನವರು ಪ್ರಗತಿ ಗ್ರಂಥಮಾಲೆಯನ್ನು ಪ್ರಾರಂಭಿಸಿದರು. ನಿಧನ 1947 ಜನೆವರಿ 3 ರಂದು ಹರ್ಡೇಕರ ಮಂಜಪ್ಪನವರು ನಿಧನರಾದರು. ಸಾಹಿತ್ಯ ಹರ್ಡೀಕರ ಮಂಜಪ್ಪನವರು ಅನೇಕ ಲೇಖನಗಳನ್ನು ಹಾಗು ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಕೃತಿಗಳು ಇಂತಿವೆ: ಸ್ವಕರ್ತವ್ಯ ಸಿದ್ಧಾಂತ ಬುದ್ಧಿಯ ಮಾತು ವಾರದ ಮಲ್ಲಪ್ಪನವರ ಚರಿತ್ರೆ ಸ್ತ್ರೀನೀತಿ ಸಂಗ್ರಹ ಆರೋಗ್ಯ ಜೀವನ ಬುದ್ಧ ಚರಿತ್ರೆ ಗಾಂಧೀ ಚರಿತ್ರೆ ರಾಮತೀರ್ಥರ ಉಪನ್ಯಾಸ ಭಾರತೀಯರ ದೇಶಭಕ್ತಿ ಬಸವ ಚರಿತ್ರೆ ಆಧುನಿಕ ಜರ್ಮನಿ ವೀರಶೈವ ಸಮಾಜ ಸುಧಾರಣೆ ಕೇರ ಹಾರ್ಡಿ ಖಾದಿ ಬ್ರಹ್ಮಚರ್ಯ ಅಹಿಂಸೆ ಸತ್ಯಾಗ್ರಹ ಧರ್ಮ ಬಸವ ಬೋಧಾಮೃತ ಸುಬೋಧಸಾರ ಎಚ್ಚತ್ತ ಹಿಂದುಸ್ಥಾನ “ಕಳೆದ ನನ್ನ 30 ವರ್ಷಗಳ ಕಾಣಿಕೆ” 1936 ರಲ್ಲಿ ಪ್ರಕಟವಾದ ಇದು ಹರ್ಡೀಕರ ಮಂಜಪ್ಪನವರ ಆತ್ಮ ಚರಿತ್ರೆಯಾಗಿದೆ ಮತ್ತು ಕನ್ನಡದ ಮೊದಲ ಆತ್ಮ ಚರಿತ್ರೆ ಎಂದು ದಾಖಲೆಯಾಗಿದೆ. ಕರ್ನಾಟಕ ನಾಡು ನುಡಿ ಸಂಸ್ಕೃತಿಗಾಗಿ ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳ ಪ್ರಸಾರಕ್ಕಾಗಿ ಬಸವ ಜಯಂತಿಯನ್ನು ಮೊಟ್ಟ ಮೊದಲು ಆರಂಭಿಸಿದ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಶ್ರೀ ಹರ್ಡೇಕರ್ ಮಂಜಪ್ಪನವರು ನಾಡು ದೇಶ ಕಂಡ ಅಪರೂಪದ ಶಿವಯೋಗ ಸಾಧಕರು. ಇಂತಹ ದಿವ್ಯ ಚೇತನಕ್ಕೆ ನೂರು ನೂರು ನಮನಗಳು. _________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಧಾರಾವಾಹಿ ಸಂಗಾತಿ-13 ಅರ್ಜುನ ಉವಾಚ ವಿಶ್ವನಾಥ ಎನ್ ನೇರಳೆಕಟ್ಟೆ ಕದನಾಂತರಂಗದಲ್ಲಿ ಅನಲ ನರ್ತನ ಕದನಾಂತರಂಗದಲ್ಲಿ ಅನಲ ನರ್ತನ ಪ್ರವೀರನೆಂಬ ವೀರ ಮೇಧಾಶ್ವವನ್ನು ಕಟ್ಟಿಹಾಕಿದ್ದಾನೆ ಎಂಬ ಸುದ್ದಿಯನ್ನು ನನ್ನಲ್ಲಿಗೆ ಹೊತ್ತುತಂದರು ಕುದುರೆಯ ಮೈಗಾವಲಿಗಿದ್ದ ಭಟರು. ಗೆಲ್ಲುವ ಸಾಮರ್ಥ್ಯವಿದ್ದರೆ ಆ ಪಾರ್ಥ ನನ್ನೆದುರು ಯುದ್ಧಕ್ಕೆ ಬರಲಿ ಎಂದಿದ್ದನಂತೆ ಪ್ರವೀರ. ನಗುವೂ ಬಂತು. ಕೋಪವೂ ಉಕ್ಕಿತು. ಇಂತಹ ಸಾಕಷ್ಟು ಯುದ್ಧಗಳನ್ನು ಕಾಣುವುದಕ್ಕಿದೆ ಮುಂದೆ ಎಂದು ಸಾಮರ್ಥ್ಯವನ್ನು ಮುಂದುಮಾಡಿಕೊಂಡೇ ಬಂದವ ನಾನು. ಹಾಗಿರುವಾಗ ಆ ಪ್ರವೀರ ಗೆಲ್ಲುವ ಸಾಮರ್ಥ್ಯ ಇದ್ದರೆ ಎಂಬ ಮಾತನ್ನು ಆಡಿದನಲ್ಲಾ ಎಂಬ ಯೋಚನೆ ನಗುವನ್ನು ಮೂಡಿಸಿತು. ಪಾಂಡವವೀರರಿಗೆ ಸೇರಿದ ಅಶ್ವವಿದು ಎಂದು ಅರಿವಾದ ಬಳಿಕವೂ ಶರಣು ಬರದೆ ಕುದುರೆಯನ್ನು ಕಟ್ಟುವ ಭಂಡಧೈರ್ಯ ತೋರಿದನಲ್ಲಾ ಎಂದು ಕೋಪ ಬಂತು. ಸೈನಿಕರನ್ನೆಲ್ಲಾ ಸನ್ನದ್ಧಗೊಳಿಸಿದೆ. ಚತುರಂಗ ಬಲಗಳೂ ಬಲಪಡೆದು ನಿಂತವು. ಮಾಹಿಷ್ಮತಿ ನಗರದ ಮೇಲೆ ಧಾಳಿಯಿರಿಸಿದೆವು. ಮೇಧಾಶ್ವವನ್ನು ಬಿಡಿಸಿಕೊಳ್ಳಬೇಕೆಂಬ ಉತ್ಸುಕತೆಯಲ್ಲಿದ್ದ ನಮ್ಮ ಕಡೆಯ ಸೈನಿಕರಲ್ಲಿ ಅಶ್ವಸದೃಶ ಶಕ್ತಿ ನೆಲೆಗೊಂಡಿತ್ತು. ನಮ್ಮ ಧಾಳಿಯ ಬಿರುಸಿಗೆ ಧೂಳೆದ್ದಿತು. ಜೊತೆಗೆ ವಾದ್ಯಗಳ ಆರ್ಭಟ. ಪ್ರವಾಹವೇ ಬಂತೇನೋ ಎನ್ನುವಂತೆ ಬೆದರಿದರು ಮಾಹಿಷ್ಮತಿ ಪಟ್ಟಣದ ಜನರು. ಉಕ್ಕಿದ ಕಡಲಿನ ಬಗೆಯಲ್ಲಿ, ಪ್ರಳಯ ಕಾಲದ ಕಾರ್ಮೋಡದ ತೆರದಲ್ಲಿ ಹೋಗಿ ಮುತ್ತಿದೆವು ಕುದುರೆಯನ್ನು ವಶಪಡಿಸಿಕೊಂಡಿದ್ದ ವೀರ ಪ್ರವೀರನನ್ನು. ಹುಚ್ಚು ಧೈರ್ಯ ಅವನದು ಎಂದುಕೊಂಡಿದ್ದೆ ಮೊದಲಿಗೆ, ಅವನು ಕುದುರೆಯನ್ನು ಕಟ್ಟಿಹಾಕಿದ ವಿಚಾರ ಕೇಳಿದಾಗ. ಆದರೆ ಈಗ ಸೇನೆಸಹಿತ ಅವನನ್ನು ಸುತ್ತುವರಿದಾಗ ಅವನ ನಿಜ ಪರಾಕ್ರಮ ನನ್ನರಿವಿಗೆ ಬಂತು. ನನ್ನನ್ನು ಕಂಡೊಡನೆಯೇ ರಥವನ್ನು ಭರದಿಂದ ಓಡಿಸಿಯಾನು ಎಂಬ ಅಂದಾಜು ನನ್ನದು. ಆದರೆ ಅವನು ಚಲಿಸದೆಯೇ ನಿಂತ. ಕೆಲವೊಮ್ಮೆ ಹಾಗೆಯೇ. ಏನು ಮಾಡಬೇಕೆಂದು ತೋಚದಾದಾಗಲೂ ಶರೀರಕ್ಕೊಂದು ಸ್ಥಿರತೆ ಒದಗುತ್ತದೆ. ಅಂತಹದ್ದೇ ಸ್ಥಿರತೆ ಆಗಿರಬೇಕಿದು ಎಂದುಕೊಂಡೆ. ಅಲ್ಲ! ನಿಜಬಗೆಯ ದಿಟ್ಟತನದಲ್ಲಿ ರಥದಲ್ಲಿಯೇ ಕುಳಿತಿದ್ದ ಪ್ರವೀರ. ವೀರರು ಸುತ್ತುವರಿದಾಗಲೂ ಅಂಜದೆ ಅಳುಕದೆ ತೇರಿನಲ್ಲಿ ಕುಳಿತಿದ್ದ ಅವನ ಆ ನಿಲುವು ಪರಮ ವೈರಾಗಿಯನ್ನು ನೆನಪಿಸುವಂತಿತ್ತು. ಯುದ್ಧದ ಅಂತಿಮ ಪರಿಣಾಮವನ್ನು ಮನಗಂಡ ತತ್ವಜ್ಞಾನಿಯಂತೆ ಕುಳಿತಿದ್ದನಾತ. ಏಕಾಂಗಿಯಾಗಿ ಹೋರಾಟಕ್ಕಿಳಿದ ಆತ ನಮ್ಮ ಸೈನಿಕರನ್ನೆಲ್ಲಾ ಸತತ ಬಾಣಪ್ರಯೋಗಗಳಿಂದ ಕೊಂದುಹಾಕಿದ. ಸತ್ವಯುತನಿವನು ಎನ್ನುವುದು ನನಗೆ ಖಚಿತವಾಯಿತು. ಹೀಗಿದ್ದಾಗಲೇ ನೀಲಧ್ವಜ ಸೇನೆಸಹಿತನಾಗಿ ನಮ್ಮನ್ನು ಎದುರಿಸುವುದಕ್ಕೆ ಬಂದ. ಒಂಟಿಯಾಗಿ ಹೋರಾಡುತ್ತಿದ್ದ ಪ್ರವೀರನಿಗೆ ಸಮಸ್ತ ಬಲವದು ದೊರಕಿದಂತಾಯಿತು. ಅವರ ಶಕ್ತಿಯುತವಾದ ಹೋರಾಟ ನಮ್ಮ ಸೇನೆಯನ್ನು ಕಳೆಗುಂದಿಸಿತು. ಸೇನೆಯ ಮುಂಚೂಣಿಯಲ್ಲಿದ್ದ ನಾನು ನಾಯಕತ್ವವನ್ನು ಸರಿಯಾಗಿ ನಿಭಾಯಿಸಲಾಗದೆ ಎಡವಿದೆ ಎಂಬ ಭಾವ ನನ್ನನ್ನು ಆವರಿಸಿತು. ನನ್ನ ಅಂತರಂಗದೊಳಗೆ ಯಾರೋ ಬೆಂಕಿ ಹಚ್ಚಿದ ಅನುಭವ. ಮೊದಲ ಯುದ್ಧದಲ್ಲಿಯೇ ಹೀಗಾದರೆ ಇನ್ನುಳಿದ ಕದನಗಳ ಗತಿಯೇನು ಎಂಬ ಯೋಚನೆ ಬಂತು. ಅಣ್ಣ ಧರ್ಮಜ ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳದವನಾದೆನೇ ಎಂಬ ಅಳುಕು ಮೂಡಿತು. ಬಗೆಬಗೆಯ ಭಾವಗಳ ನೆಲೆವೀಡಾಗಿಹೋದ ನನ್ನ ಚಿತ್ತ ಯುದ್ಧದತ್ತ ಏಕಾಗ್ರವಾಗಲೇ ಇಲ್ಲ. ಸೋಲುತ್ತೇನೆ ಎಂಬ ಭಾವ ದೃಢವಾದಾಗಲೇ ‘ಇಲ್ಲ! ಏನೆಂದರೂ ಬಿಡಲಾರೆ’ ಎಂಬ ಛಲ ನಮ್ಮಲ್ಲಿ ಮೂಡುವುದು. ಯುದ್ಧದಲ್ಲಿಯೂ ಹೀಗೆಯೇ. ಬದುಕಿನಲ್ಲಿಯೂ ಹೀಗೆಯೇ. ಎದುರಿಗಿದ್ದ ಮಾಹಿಷ್ಮತಿ ಸೇನೆ ನನ್ನ ಪಾಲಿಗೆ ಒಗಟಿನಂತಾಗಿತ್ತು. ಬಿಡಿಸುತ್ತೇನೆ ಈ ಒಗಟನ್ನು ಕುದುರೆಯನ್ನು ಬಿಡಿಸುವುದಕ್ಕೋಸ್ಕರ ಎಂದುಕೊAಡೆ. ಕೋಪಾತಿರೇಕದ ಆ ಅವಸ್ಥೆಯಲ್ಲಿ ಬಿಲ್ಲಿಗೆ ಕೈಯ್ಯಿಕ್ಕಿದೆ. ಹೆದೆಯನ್ನು ಮಿಡಿದೆ. ಎದ್ದ ನಾದ ಮಾಹಿಷ್ಮತಿ ಸೇನೆಯನ್ನು ಯಮಪುರಿಗಟ್ಟುವ ಮರಣಶ್ರುತಿಯಾಯಿತು. ಮಳೆಗಾಲದ ಕೊನೆಕೊನೆಯಲ್ಲಿ ಹಠಹಿಡಿದು ಸುರಿವ ಮಳೆಯಂತೆ ಅಬ್ಬರಿಸಿದೆ. ನೀಲಧ್ವಜನ ಸೇನೆಯದು ದಿಕ್ಕೆಟ್ಟುಹೋಯಿತು. ಕಂಗೆಟ್ಟ ನೀಲಧ್ವಜ ಹೋಗಿ ಸಹಾಯ ಕೇಳಿದ್ದು ಅಗ್ನಿಯಲ್ಲಿ. ಅನಲ ನೀಲಧ್ವಜನ ಅಳಿಯ. ಅವನ ಮಗಳನ್ನು ಮದುವೆಯಾದವನು. ಮಾಹಿಷ್ಮತಿ ಪಟ್ಟಣದಲ್ಲಿಯೇ ನೆಲೆಸಿದ್ದವನು. ಮಾವನ ಕೋರಿಕೆಗೆ ಬೆಲೆಯಿತ್ತ ಅಗ್ನಿ, ನಮ್ಮಿಡೀ ಸೈನ್ಯವನ್ನು ಕರುಣೆಯಿಲ್ಲದೆಯೇ ದಹಿಸತೊಡಗಿದ. ಅನಲನ ಕೆನ್ನರ್ತನ ನಮ್ಮ ಕಡೆಯ ಸೈನಿಕರನ್ನು ಕಪ್ಪಗಾಗಿಸಿತು. ಅವನ ಚಲನೆ ನಮ್ಮವರನ್ನು ಅಚಲರಾಗಿಸಿತು. ಅವನ ತೇಜಸ್ಸು ಹೆಚ್ಚಿದಂತೆ ನಮ್ಮವರೆಲ್ಲಾ ತೇಜಶೂನ್ಯರಾದರು. ದೆಸೆದೆಸೆಗಳಲ್ಲಿ ಭೀಕರವಾದ ಹೊಗೆ. ದಿಕ್ಕುದಿಕ್ಕುಗಳಲ್ಲಿ ಅನಲ ಜ್ವಾಲೆ. ಯಾರಲ್ಲಿಯೂ ಭೇದ ತೋರದೆ ಎಲ್ಲರನ್ನೂ ಆಹುತಿಗೊಳ್ಳತೊಡಗಿದ ಅನಲ. ನನ್ನಲ್ಲಿ ಅತೀವ ಆತಂಕ ಮನೆಮಾಡಿತು. ಅಗ್ನಿಯ ಶಕ್ತಿಯೇನೆಂಬುದರ ಅರಿವಿತ್ತು ನನಗೆ. ಅವನ ಸಾಮರ್ಥ್ಯವನ್ನು ನಾನು ಕಂಡದ್ದು ಇದೇ ಮೊದಲೇನಲ್ಲ. ಅಂದು ಖಾಂಡವ ವನವನ್ನು ದಹಿಸಿದ ಅವನ ಉರಿಹಸಿವಿನ ತೀಕ್ಷ್ಣತೆಯನ್ನು ಸಾಮಿಪ್ಯದಿಂದ ದರ್ಶಿಸಿದವ ನಾನು. ಹಾಗಿರುವಾಗ ಅಗ್ನಿಯ ಈ ಬಗೆ ಹೀಗೆಯೇ ಮುಂದುವರಿದರೆ ಅಶ್ವಮೇಧದ ನೆಪದಲ್ಲಿ ಬಂದ ನಾವೆಲ್ಲರೂ ಅಗ್ನಿಯೊಡಲಿಗೆ ಮೇಧಾಶ್ವಗಳಾಗುವುದು ಖಚಿತ ಎನಿಸಿತು ನನಗೆ. ಶಕ್ತಿಯಿಂದ ಗೆಲ್ಲಲಾಗದ್ದನ್ನು ಯುಕ್ತಿಯಿಂದ ಗೆಲ್ಲಬೇಕು. ಇದು ಲೋಕರೂಢಿ. ಜಗದ ನಿಯಮ. ನುಡಿಯಿಂದ ಅನಲನನ್ನು ಮೆಚ್ಚಿಸಿ ಅವನನ್ನು ತೃಪ್ತಗೊಳಿಸುವ ತಂತ್ರ ಹೂಡಿದೆ. “ನೀನೇನೂ ನನಗೆ ಅಪರಿಚಿತನಲ್ಲ. ನಾನು ಗಾಂಡೀವಿ ಎನಿಸಿಕೊಳ್ಳಲು ಕಾರಣವಾದ ಗಾಂಡೀವ ಧನುಸ್ಸು ದೊರೆತದ್ದೇ ನಿನ್ನಿಂದ. ನನ್ನ ಮಡದಿ ದ್ರೌಪದಿ ನಿನ್ನಿಂದಲೇ ಉದಿಸಿಬಂದವಳು” ಎಂದೆಲ್ಲಾ ಹೇಳಿ ನನಗೂ ಅವನಿಗೂ ಇರುವ ಬಾಂಧವ್ಯದ ನೆನಪು ಮಾಡಿದೆ. ವೇದವ್ಯಾಸ ಮುನಿಗಳು ಹೇಳಿದ್ದಕ್ಕಾಗಿ, ಶ್ರೀಕೃಷ್ಣ ಸೂಚನೆ ಇತ್ತದ್ದಕ್ಕಾಗಿ ಈ ಯಾಗ; ಈ ಯುದ್ಧ. ಇಲ್ಲವಾದರೆ ಇದೆಲ್ಲಾ ಬೇಕಿರಲಿಲ್ಲ ಎಂದೆ. ಅಗ್ನಿ ತಂಪಾದ. ದಹಿಸುವುದನ್ನು ನಿಲ್ಲಿಸಿದ. ನನ್ನ ಮಾತಿನಲ್ಲಿದ್ದ ದೈನ್ಯತೆ ಅವನನ್ನು ದಯಾಪರನನ್ನಾಗಿಸಿತು. ಮಗಳನಿತ್ತ ಮಾವನಾದ ನೀಲಧ್ವಜನಲ್ಲಿ ಯುದ್ಧ ನಿಲ್ಲಿಸುವಂತೆ ಸೂಚಿಸಿದ. ಅಳಿಯ ಅಗ್ನಿಯ ಮಾತನ್ನು ಅಂಗೀಕರಿಸಿದ ನೀಲಧ್ವಜ. ಯುದ್ಧ ನಿಂತಿತು ಎಂದು ನಾನು ನಿರಾಳತೆ ಹೊಂದುವಷ್ಟರಲ್ಲಿ ನನ್ನನ್ನು ಮತ್ತೆ ಚಿಂತೆಗೀಡುಮಾಡುವ ಸುದ್ದಿಯೊಂದು ಬಂದು ತಲುಪಿತು… ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಅಂಕಣ ಸಂಗಾತಿ ಸರಣಿಬರಹಗಳು ಭಾರತದ ಮಹಿಳಾ ಮುಖ್ಯಮಂತ್ರಿಗಳು ಸುರೇಖಾ ರಾಠೋಡ್ ವಸುಂಧರಾ ರಾಜೆ ಸಿಂದಿಯಾ ರಾಜಸ್ಥಾನದ ಮೊದಲ ಮಹಿಳಾ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ (ಆಡಳಿತಾವಧಿ: ಡಿಸೆಂಬರ್ ೨೦೦೮ ರಿಂದ ಡಿಸೆಂಬರ್ ೨೦೧೮ವರೆಗೆ, ೧೦ ವರ್ಷ೯ ದಿನಗಳು) ಇವರು ೮ ಮಾರ್ಚ್ ೧೯೫೩ರಂದು ಬಾಂಬೆಯಲ್ಲಿ ಜನಿಸಿದರು. ಇವರು ಸಿಂಧಿಯಾ ರಾಜಮನೆತನದವರು. ಇವರ ತಂದೆ ಜೀವಾಜಿರಾವ್ ತಾಯಿ ವಿಜಯ ರಾಜೆ ಸಿಂಧಿಯಾ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮಿಳುನಾಡಿನ ಕೊಡೈಕೆನಾಲ್ನಲ್ಲಿರುವ ಪ್ರೆಸೆಂಟೀಶನ್ ಕಾನ್ವಂಟ್ ಶಾಲೆಯಲ್ಲಿ ಪಡೆದುಕೊಂಡರು. ತಮ್ಮ ಉನ್ನತ ಶಿಕ್ಷಣವನ್ನು ಮುಂಬೈನ ಸೋಫಿಯಾ ಕಾಲೇಜ್ ಫಾರ್ ವುಮೆನ್ನಿಂದ ಅರ್ಥಶಾಸ್ತç ಮತ್ತು ರಾಜಕೀಯ ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದರು. ಇವರು ೧೭ ನವೆಂಬರ್ ೧೯೭೯ರಂದು ರಾಜಮನೆತನದ ಧೋಲ್ಪರ್ ಕುಟುಂಬದ ಮಹಾರಾಜ್ ರಾಣಾ ಹೇಮಂತ್ ಸಿಂಗ್ ಅವರನ್ನು ವಿವಾಹವಾದರು. ಕೆಲ ಕಾರಣಗಳಿಂದ ವಿವಾಹವಾಗಿ ಒಂದು ವರ್ಷದಲ್ಲಿಯೇ ಬೇರೆಯಾದರು. ಇವರಿಗೆ ದುಶ್ಯಂತ್ ಸಿಂಗ ಎಂಬ ಮಗನಿದ್ದಾನೆ. ವಸುಂದರಾ ರಾಜೆಯವರು ೧೯೮೪ರಲ್ಲಿ ರಾಜಕೀಯ ಪ್ರವೇಶಿಸಿದರು. ಇವರು ಭಾರತೀಯ ಜನತಾ ಪಕ್ಷದ ಕಾರ್ಯಕಾರಣಿ ಸದಸ್ಯರಾಗಿ ನೇಮಕಗೊಂಡರು. ೧೯೮೫ -೧೯೯೦ ರಲ್ಲಿ ಧೋಲ್ಪುರದಿಂದ ೮ನೇ ರಾಜಸ್ಥಾನದ ಶಾಸಕಾಂಗ ಸಭೆಯ ಸದಸ್ಯರಾದರು. ಹಾಗೇಯೆ ಅದೇ ಸಮಯದಲ್ಲಿ ಬಿಜೆಪಿಯ ಯುವ ಮೋರ್ಚಾದ ಉಪಾದ್ಯಕ್ಷರಾಗಿ ನೇಮಕಗೊಂಡರು. ೧೯೮೭ರಲ್ಲಿ ರಾಜಸ್ಥಾನದ ಬಿಜೆಪಿಯ ಉಪಾದ್ಯಕ್ಷರಾಗಿ ನೇಮಕಗೊಂಡರು. ೧೯೯೦-೯೧ ಗ್ರಂಥಾಲಯ ಸಮಿತಿ, ಸದಸ್ಯ ಸಲಹಾ ಸಮಿತಿ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿದರು. ೨೦೦೮-೧೩, ೨೦೧೩-೧೮, ೨೦೧೮ ಪ್ರಸ್ತುತ ವರೆಗೆ ರಾಜಸ್ಥಾನದ ಝಲ್ರಾಪಟನ್ನಿಂದ ಶಾಸಕಾಂಗ ಸಭೆಯಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವರು. ೧೯೯೧-೯೭ರ ವರೆಗೆ ವಿದ್ಯತ್, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸಮಿತಿ ಸಲಹಾ ಸಮಿತಿ, ಪ್ರವಾಸೋದ್ಯಮ ಸಚಿವಾಲಯದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿರುವರು. ೧೯೯೭ ರಿಂದ ೯೮ವರೆಗೆ ಬಿಜೆಪಿಯ ಸಂಸAದೀಯ ಪಕ್ಷದಿಂದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ೧೯೯೭ರಿಂದ ೯೯ ವರೆಗೆ ಕೇಂದ್ರದ ರಾಜ್ಯ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿರುವರು. ಹಾಗೇಯೆ ೧೯೯೧-೨೦೦೧ವರೆಗೆ ಕೇಂದ್ರ ರಾಜ್ಯ ಸಚಿವರು ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳು, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಜಣಿದಾರರ ಕಲ್ಯಾಣ ಇಲಾಖೆ, ಪರಮಾಣು ಶಕ್ತಿ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ ಸಚಿಚರಾಗಿ ಕಾರ್ಯನಿರ್ವಹಿಸಿರುವರು. ೨೦೦೧ರಲ್ಲಿ ಕೇಂದ್ರ ರಾಜ್ಯಸಚಿವರಾಗಿ ಸಣ್ಣಪ್ರಮಾಣದ ಕೈಗಾರಿಕೆಗಳು ಸಿಬ್ಬಂದಿ ತರಬೇತಿ, ಪಿಂಜಣಿಗಳು, ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳು, ಪರಮಾಣು ಶಕ್ತಿ ಮತ್ತು ಡಿಪಾಟ್ಮೇಂಟ್ ಆಫ್ ಸ್ಪೇಸ್ನ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ೧೯೮೯ ರಿಂದ ೨೦೦೩ವರೆಗೆ ೯ನೇ, ೧೦ನೇ, ೧೧ನೇ, ೧೨ನೇ, ೧೩ನೇ ಲೋಕಸಭೆ ಜಲಾವರ್ನಿಂದ ಸದಸ್ಯರಾಗಿ ಆಯ್ಕೆಯಾದರು. ೨೦೦೩ರಲ್ಲಿ ರಾಜಸ್ಥಾನದ ಬಿಜೆಪಿಯ ಅಧ್ಯಕ್ಷರಾದರು. ೨೦೦೯ರಿಂದ ೨೦೧೩ರ ವರೆಗೆ ವಿರೋಧ ಪಕ್ಷದ ನಾಯಕಿಯಾಗಿ ಕಾರ್ಯನಿರ್ವಹಿಸಿದರು. ೨೦೧೯ರಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟಿçÃಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ೨೦೦೭ರಲ್ಲಿ ಮಹಿಳೆಯರ ಸ್ವಯಂ ಸಬಲಿಕರಣಕ್ಕಾಗಿ ಇವರಿಗೆ ಯುಎನ್ ಒ ನಿಂದ “ವುಮೆನ್ ಟುಗೆದರ್ ಅವಾರ್ಡ್” ೨೦೧೮ರಲ್ಲಿ ಅವರು ೫೨ನೇ ಸ್ಕೋಚ್ ಶೃಂಗಸಭೆಯಲ್ಲಿ ‘ವರ್ಷದ ಅತ್ಯುತಮ ಮುಖ್ಯಮಂತ್ರಿ’ ಪ್ರಶಸ್ತಿಯನ್ನು ಪಡೆದಿರುವರು ಇವರು ೮ ಮಾರ್ಚ್ ೧೯೫೩ರಂದು ಬಾಂಬೆಯಲ್ಲಿ ಜನಿಸಿದರು. ಇವರು ಸಿಂಧಿಯಾ ರಾಜಮನೆತನದವರು. ಇವರ ತಂದೆ ಜೀವಾಜಿರಾವ್ ರಾಜಸ್ಥಾನದ ಮೊದಲ ಮಹಿಳಾ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ* (ಆಡಳಿತಾವಧಿ: ಡಿಸೆಂ ತಾಯಿ ವಿಜಯ ರಾಜೆ ಸಿಂಧಿಯಾ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮಿಳುನಾಡಿನ ಕೊಡೈಕೆನಾಲ್ನಲ್ಲಿರುವ ಪ್ರೆಸೆಂಟೀಶನ್ ಕಾನ್ವಂಟ್ ಶಾಲೆಯಲ್ಲಿ ಪಡೆದುಕೊಂಡರು. ತಮ್ಮ ಉನ್ನತ ಶಿಕ್ಷಣವನ್ನು ಮುಂಬೈನ ಸೋಫಿಯಾ ಕಾಲೇಜ್ ಫಾರ್ ವುಮೆನ್ನಿಂದ ಅರ್ಥಶಾಸ್ತç ಮತ್ತು ರಾಜಕೀಯ ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದರು. ಇವರು ೧೭ ನವೆಂಬರ್ ೧೯೭೯ರಂದು ರಾಜಮನೆತನದ ಧೋಲ್ಪರ್ ಕುಟುಂಬದ ಮಹಾರಾಜ್ ರಾಣಾ ಹೇಮಂತ್ ಸಿಂಗ್ ಅವರನ್ನು ವಿವಾಹವಾದರು. ಕೆಲ ಕಾರಣಗಳಿಂದ ವಿವಾಹವಾಗಿ ಒಂದು ವರ್ಷದಲ್ಲಿಯೇ ಬೇರೆಯಾದರು. ಇವರಿಗೆ ದುಶ್ಯಂತ್ ಸಿಂಗ ಎಂಬ ಮಗನಿದ್ದಾನೆ. ವಸುಂದರಾ ರಾಜೆಯವರು ೧೯೮೪ರಲ್ಲಿ ರಾಜಕೀಯ ಪ್ರವೇಶಿಸಿದರು. ಇವರು ಭಾರತೀಯ ಜನತಾ ಪಕ್ಷದ ಕಾರ್ಯಕಾರಣಿ ಸದಸ್ಯರಾಗಿ ನೇಮಕಗೊಂಡರು. ೧೯೮೫ -೧೯೯೦ ರಲ್ಲಿ ಧೋಲ್ಪುರದಿಂದ ೮ನೇ ರಾಜಸ್ಥಾನದ ಶಾಸಕಾಂಗ ಸಭೆಯ ಸದಸ್ಯರಾದರು. ಹಾಗೇಯೆ ಅದೇ ಸಮಯದಲ್ಲಿ ಬಿಜೆಪಿಯ ಯುವ ಮೋರ್ಚಾದ ಉಪಾದ್ಯಕ್ಷರಾಗಿ ನೇಮಕಗೊಂಡರು. ೧೯೮೭ರಲ್ಲಿ ರಾಜಸ್ಥಾನದ ಬಿಜೆಪಿಯ ಉಪಾದ್ಯಕ್ಷರಾಗಿ ನೇಮಕಗೊಂಡರು. ೧೯೯೦-೯೧ ಗ್ರಂಥಾಲಯ ಸಮಿತಿ, ಸದಸ್ಯ ಸಲಹಾ ಸಮಿತಿ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿದರು. ೨೦೦೮-೧೩, ೨೦೧೩-೧೮, ೨೦೧೮ ಪ್ರಸ್ತುತ ವರೆಗೆ ರಾಜಸ್ಥಾನದ ಝಲ್ರಾಪಟನ್ನಿಂದ ಶಾಸಕಾಂಗ ಸಭೆಯಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವರು. ೧೯೯೧-೯೭ರ ವರೆಗೆ ವಿದ್ಯತ್, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸಮಿತಿ ಸಲಹಾ ಸಮಿತಿ, ಪ್ರವಾಸೋದ್ಯಮ ಸಚಿವಾಲಯದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿರುವರು. ೧೯೯೭ ರಿಂದ ೯೮ವರೆಗೆ ಬಿಜೆಪಿಯ ಸಂಸAದೀಯ ಪಕ್ಷದಿಂದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ೧೯೯೭ರಿಂದ ೯೯ ವರೆಗೆ ಕೇಂದ್ರದ ರಾಜ್ಯ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿರುವರು. ಹಾಗೇಯೆ ೧೯೯೧-೨೦೦೧ವರೆಗೆ ಕೇಂದ್ರ ರಾಜ್ಯ ಸಚಿವರು ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳು, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಜಣಿದಾರರ ಕಲ್ಯಾಣ ಇಲಾಖೆ, ಪರಮಾಣು ಶಕ್ತಿ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ ಸಚಿಚರಾಗಿ ಕಾರ್ಯನಿರ್ವಹಿಸಿರುವರು. ೨೦೦೧ರಲ್ಲಿ ಕೇಂದ್ರ ರಾಜ್ಯಸಚಿವರಾಗಿ ಸಣ್ಣಪ್ರಮಾಣದ ಕೈಗಾರಿಕೆಗಳು ಸಿಬ್ಬಂದಿ ತರಬೇತಿ, ಪಿಂಜಣಿಗಳು, ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳು, ಪರಮಾಣು ಶಕ್ತಿ ಮತ್ತು ಡಿಪಾಟ್ಮೇಂಟ್ ಆಫ್ ಸ್ಪೇಸ್ನ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ೧೯೮೯ ರಿಂದ ೨೦೦೩ವರೆಗೆ ೯ನೇ, ೧೦ನೇ, ೧೧ನೇ, ೧೨ನೇ, ೧೩ನೇ ಲೋಕಸಭೆ ಜಲಾವರ್ನಿಂದ ಸದಸ್ಯರಾಗಿ ಆಯ್ಕೆಯಾದರು. ೨೦೦೩ರಲ್ಲಿ ರಾಜಸ್ಥಾನದ ಬಿಜೆಪಿಯ ಅಧ್ಯಕ್ಷರಾದರು. ೨೦೦೯ರಿಂದ ೨೦೧೩ರ ವರೆಗೆ ವಿರೋಧ ಪಕ್ಷದ ನಾಯಕಿಯಾಗಿ ಕಾರ್ಯನಿರ್ವಹಿಸಿದರು. ೨೦೧೯ರಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟಿçÃಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.೨೦೦೭ರಲ್ಲಿ ಮಹಿಳೆಯರ ಸ್ವಯಂ ಸಬಲಿಕರಣಕ್ಕಾಗಿ ಇವರಿಗೆ ಯುಎನ್ ಒ ನಿಂದ “ವುಮೆನ್ ಟುಗೆದರ್ ಅವಾರ್ಡ್” ೨೦೧೮ರಲ್ಲಿ ಅವರು ೫೨ನೇ ಸ್ಕೋಚ್ ಶೃಂಗಸಭೆಯಲ್ಲಿ ‘ವರ್ಷದ ಅತ್ಯುತಮ ಮುಖ್ಯಮಂತ್ರಿ’ ಪ್ರಶಸ್ತಿಯನ್ನು ಪಡೆದಿರುವರುಸ್ಥಾನದ ಮೊದಲ ಮಹಿಳಾ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ* (ಆಡಳಿತಾವಧಿ: ಡಿಸೆಂಬರ್ ೨೦೦೮ ರಿಂದ ಡಿಸೆಂಬರ್ ೨೦೧೮ವರೆಗೆ, ೧೦ ವರ್ಷ೯ ದಿನಗಳು)* ಇವರು ೮ ಮಾರ್ಚ್ ೧೯೫೩ರಂದು ಬಾಂಬೆಯಲ್ಲಿ ಜನಿಸಿದರು. ಇವರು ಸಿಂಧಿಯಾ ರಾಜಮನೆತನದವರು. ಇವರ ತಂದೆ ಜೀವಾಜಿರಾವ್ ತಾಯಿ ವಿಜಯ ರಾಜೆ ಸಿಂಧಿಯಾ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮಿಳುನಾಡಿನ ಕೊಡೈಕೆನಾಲ್ನಲ್ಲಿರುವ ಪ್ರೆಸೆಂಟೀಶನ್ ಕಾನ್ವಂಟ್ ಶಾಲೆಯಲ್ಲಿ ಪಡೆದುಕೊಂಡರು. ತಮ್ಮ ಉನ್ನತ ಶಿಕ್ಷಣವನ್ನು ಮುಂಬೈನ ಸೋಫಿಯಾ ಕಾಲೇಜ್ ಫಾರ್ ವುಮೆನ್ನಿಂದ ಅರ್ಥಶಾಸ್ತç ಮತ್ತು ರಾಜಕೀಯ ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದರು. ಇವರು ೧೭ ನವೆಂಬರ್ ೧೯೭೯ರಂದು ರಾಜಮನೆತನದ ಧೋಲ್ಪರ್ ಕುಟುಂಬದ ಮಹಾರಾಜ್ ರಾಣಾ ಹೇಮಂತ್ ಸಿಂಗ್ ಅವರನ್ನು ವಿವಾಹವಾದರು. ಕೆಲ ಕಾರಣಗಳಿಂದ ವಿವಾಹವಾಗಿ ಒಂದು ವರ್ಷದಲ್ಲಿಯೇ ಬೇರೆಯಾದರು. ಇವರಿಗೆ ದುಶ್ಯಂತ್ ಸಿಂಗ ಎಂಬ ಮಗನಿದ್ದಾನೆ. ವಸುಂದರಾ ರಾಜೆಯವರು ೧೯೮೪ರಲ್ಲಿ ರಾಜಕೀಯ ಪ್ರವೇಶಿಸಿದರು. ಇವರು ಭಾರತೀಯ ಜನತಾ ಪಕ್ಷದ ಕಾರ್ಯಕಾರಣಿ ಸದಸ್ಯರಾಗಿ ನೇಮಕಗೊಂಡರು. ೧೯೮೫ -೧೯೯೦ ರಲ್ಲಿ ಧೋಲ್ಪುರದಿಂದ ೮ನೇ ರಾಜಸ್ಥಾನದ ಶಾಸಕಾಂಗ ಸಭೆಯ ಸದಸ್ಯರಾದರು. ಹಾಗೇಯೆ ಅದೇ ಸಮಯದಲ್ಲಿ ಬಿಜೆಪಿಯ ಯುವ ಮೋರ್ಚಾದ ಉಪಾದ್ಯಕ್ಷರಾಗಿ ನೇಮಕಗೊಂಡರು. ೧೯೮೭ರಲ್ಲಿ ರಾಜಸ್ಥಾನದ ಬಿಜೆಪಿಯ ಉಪಾದ್ಯಕ್ಷರಾಗಿ ನೇಮಕಗೊಂಡರು. ೧೯೯೦-೯೧ ಗ್ರಂಥಾಲಯ ಸಮಿತಿ, ಸದಸ್ಯ ಸಲಹಾ ಸಮಿತಿ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿದರು. ೨೦೦೮-೧೩, ೨೦೧೩-೧೮, ೨೦೧೮ ಪ್ರಸ್ತುತ ವರೆಗೆ ರಾಜಸ್ಥಾನದ ಝಲ್ರಾಪಟನ್ನಿಂದ ಶಾಸಕಾಂಗ ಸಭೆಯಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವರು. ೧೯೯೧-೯೭ರ ವರೆಗೆ ವಿದ್ಯತ್, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸಮಿತಿ ಸಲಹಾ ಸಮಿತಿ, ಪ್ರವಾಸೋದ್ಯಮ ಸಚಿವಾಲಯದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿರುವರು. ೧೯೯೭ ರಿಂದ ೯೮ವರೆಗೆ ಬಿಜೆಪಿಯ ಸಂಸAದೀಯ ಪಕ್ಷದಿಂದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ೧೯೯೭ರಿಂದ ೯೯ ವರೆಗೆ ಕೇಂದ್ರದ ರಾಜ್ಯ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿರುವರು. ಹಾಗೇಯೆ ೧೯೯೧-೨೦೦೧ವರೆಗೆ ಕೇಂದ್ರ ರಾಜ್ಯ ಸಚಿವರು ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳು, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಜಣಿದಾರರ ಕಲ್ಯಾಣ ಇಲಾಖೆ, ಪರಮಾಣು ಶಕ್ತಿ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ ಸಚಿಚರಾಗಿ ಕಾರ್ಯನಿರ್ವಹಿಸಿರುವರು. ೨೦೦೧ರಲ್ಲಿ ಕೇಂದ್ರ ರಾಜ್ಯಸಚಿವರಾಗಿ ಸಣ್ಣಪ್ರಮಾಣದ ಕೈಗಾರಿಕೆಗಳು ಸಿಬ್ಬಂದಿ ತರಬೇತಿ, ಪಿಂಜಣಿಗಳು, ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳು, ಪರಮಾಣು ಶಕ್ತಿ ಮತ್ತು ಡಿಪಾಟ್ಮೇಂಟ್ ಆಫ್ ಸ್ಪೇಸ್ನ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ೧೯೮೯ ರಿಂದ ೨೦೦೩ವರೆಗೆ ೯ನೇ, ೧೦ನೇ, ೧೧ನೇ, ೧೨ನೇ, ೧೩ನೇ ಲೋಕಸಭೆ ಜಲಾವರ್ನಿಂದ ಸದಸ್ಯರಾಗಿ ಆಯ್ಕೆಯಾದರು. ೨೦೦೩ರಲ್ಲಿ ರಾಜಸ್ಥಾನದ ಬಿಜೆಪಿಯ ಅಧ್ಯಕ್ಷರಾದರು. ೨೦೦೯ರಿಂದ ೨೦೧೩ರ ವರೆಗೆ ವಿರೋಧ ಪಕ್ಷದ ನಾಯಕಿಯಾಗಿ ಕಾರ್ಯನಿರ್ವಹಿಸಿದರು. ೨೦೧೯ರಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟಿçÃಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.೨೦೦೭ರಲ್ಲಿ ಮಹಿಳೆಯರ ಸ್ವಯಂ ಸಬಲಿಕರಣಕ್ಕಾಗಿ ಇವರಿಗೆ ಯುಎನ್ ಒ ನಿಂದ “ವುಮೆನ್ ಟುಗೆದರ್ ಅವಾರ್ಡ್” ೨೦೧೮ರಲ್ಲಿ ಅವರು ೫೨ನೇ ಸ್ಕೋಚ್ ಶೃಂಗಸಭೆಯಲ್ಲಿ ‘ವರ್ಷದ ಅತ್ಯುತಮ ಮುಖ್ಯಮಂತ್ರಿ’ ಪ್ರಶಸ್ತಿಯನ್ನು ಪಡೆದಿರುವರು ಸುರೇಖಾ ರಾಠೋಡ್
ಧಾರಾವಾಹಿ ಸಂಗಾತಿ ಕಂತು-ಆರು ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಸವಿತಾ ದೇಶಮುಖ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ “ಮಾತಾಡೋ ಮಾತಾಡೋ ಆತುಮದ ಲಿಂಗವೇ!! ಮುನಿಸುವುದೇತಕ್ಕೆ ಅನಿಮಿತ್ಯವಾಗಿ ನೀಎನ್ನಯ್ಯ ಮಾತಾಡು, ಚನ್ನೀಗ ಚರಲಿಂಗವೆ!! ನಂಬಿದೆ ನಂಬಿರುವೆ ಸಾಂಬ ನಿನ್ನಯ ಪಾದಕಂಬನಿ ಸುರಿಯುವವೊ ಶಂಭೋ ನೀ ಮಾತನಾಡೊ ಅಂಗೈಯದೊಳು ಬಂದು ಲಿಂಗರೂಪವ ತಾಳಿ ಕಂಗೊಳಿಸುವ ಶಿವನೆ ಮಂಗಳಮಯ ಲಿಂಗವೇ!! (“ತಾರಕ ತಂಬೂರಿ” ಕವನ ಸಂಕಲನ) ನಂಬಿರುವೆ ನಿನ್ನನ್ನೇ ಅಂತ ಅಂಗೈಯಲ್ಲಿ ಲಿಂಗವನ್ನು ಹಿಡಿದ…… ಎಳೆ ವಯಸ್ಸಿನ ಜಯದೇವಿ ತಾಯಿಯವರು ಸಂಸಾರದ ಕಷ್ಟಗಳ ಹೊರೆಹೊರಲಾಗದೆ ನೊಂದು ಆ ಲಿಂಗನನ್ನೆ ಬೇಡಿಕೊಳ್ಳುತ್ತಿದ್ದರು……. ನೋವಿನ ನೆರಳಲ್ಲಿ ದಿನಗಳನ್ನು ಎಣಿಸುತ್ತಿದ್ದ ಸೊಸೆಗೆ, ಅತ್ತೆಯ ಕಠೋರ ಮಾತುಗಳು ಮತ್ತು ದೌರ್ಜನ್ಯದ ನಡೆ ಬಲು ಹಿಂಸಿಸುತಿತ್ತು. ಪ್ರತಿದಿನವೂ ಅವರ ಮನಸ್ಸಿನಲ್ಲಿ ಬದುಕಿನ ಹೋರಾಟ—ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ.ಕಣ್ಣೀರನ್ನು ಒಳಗೇ ಹತ್ತಿಕ್ಕಿ, ಮನೆಯ ಗೋಡೆಗಳ ನಡುವೆ ತನ್ನ ನೋವನ್ನು ಹೂತು ಬದುಕುತ್ತಿದ್ದ ಜಯದೇವಿ ತಾಯಿಯವರು ಬಸವಣ್ಣನ ವಚನವನ್ನು ಯಾವಾಗಲೂ ಹೇಳುತ್ತಿದ್ದರಂತೆ, ತಂದೆ ನೀನು ತಾಯಿ ನೀನು ಬಂದು ನೀನು ಬಳಗ ನೀನು”, …….. ನನ್ನ ಸುಖ ದುಃಖವು ನಿನ್ನದೇ…. ಅನ್ನುವ ಅರ್ಪಣೆಯ ಭಾವ ಬೆರುರಲಾರಂಭಿಸಿತ್ತು. ಲಿಗಾಡೆಯವರ ಮನೆ ಜಯನಿಕೀತನ ತಾಯಿ ಸಂಗಪ್ಪನವರು ಹೇಳುವಂತೆ “ಸಹನೆಯಿಂದ ಇರು ಸಿದ್ದರಾಮ ಕಾಯುತ್ತಾನೆ ಅಂತ ಹೇಳುವ ಮಾತು ನೆನಪಿಟ್ಟುಕೊಂಡು ಜೀವನದ ದೋಣಿ ಸಾಗಿಸುತಿದಂತೆ…..sss ಜೀವನದಲ್ಲಿ ಸಂತಸದ ಅಲೆಗಳು ಅಪ್ಪಳಿಸಿದವು….ನೋವಿನ ಮೌನದ ಮಧ್ಯೆ ಒಂದು ದಿನ, ಅವರೊಳಗೆ ನಿಶ್ಶಬ್ದವಾಗಿ ಹೊಳೆಯುವ ಬೆಳಕು ಹುಟ್ಟಿತು…ತಾನು ಬಸೂರಿಯಾದ ಸುದ್ದಿ ಹೃದಯಕ್ಕೆ ತಂಪು ನೀಡಿತು…..!!!! ನೋವಿನ ಭಾರ ಕ್ಷಣ ಕಾಲದಲ್ಲಿ ಮಾಯವಾಗಿ ಹೋಯಿತೆನೊ ಅನ್ನಿಸಿತ್ತು.ಅವರಿಗೆ ಮೊದಲ ಬಾರಿಗೆ ತನ್ನದೇ ಆದ ಒಂದು ಆಂಶವು ಲೋಕಕ್ಕೆ ಬರುವದು… ತನಗಾಗಿಇನ್ನೊಂದು ಲೋಕವಿದೆ ಎನ್ನುವ ಭರವಸೆ ನೀಡತು, ಅವರು ಹೊಟ್ಟೆಗೆ ಕೈಯಿಟ್ಟು ಮೃದುವಾಗಿ ನಗುತ್ತಿದ್ದರು. ಆ ನಗು ಯಾರಿಗೂ ಕಾಣದಿದ್ದರೂ, ಅದು ಉತ್ಸವದ ಕ್ಷಣಗಳಾಗಿದ್ದವು.ಮಗುವಿನ ಸಣ್ಣ ಚಲನೆ-ಒಲನೆಯು….., ಅವರಿಗೆ ಮಾತಾಡುವ ಧೈರ್ಯ ಕಲಿಸಿತು— ಪ್ರತಿಯೊಂದು ಉಸಿರಾಟವೂ ಹೊಸ ಅರ್ಥ ಪಡೆದಿತು; ಪ್ರತಿಯೊಂದು ಕ್ಷಣವು ನಿರೀಕ್ಷೆಯ ಬೆಳಕಾಗಿ ಮೂಡಿತು.ನೋವಿನ ನಡುವೆ ಹುಟ್ಟಿದ ಆ ಆನಂದ ಕ್ಷಣಗಳು, ಅವರ ಬದುಕಿಗೆ ಅರ್ಥ ನೀಡಿದವು.ದೌರ್ಜನ್ಯದಿಂದ ಕಲುಷಿತವಾದ ಮನಸ್ಸಿನಲ್ಲಿ, ತಾಯ್ತನದ ಸ್ಪರ್ಶವು ಔಷಧಿಯಂತೆ ಕೆಲಸಮಾಡಿತು. ಆ ಮಗು ಅವರಿಗೆ ಶಕ್ತಿಯಾಯಿತು, ಭರವಸೆಯಾಯಿತು…!!! ಇನ್ನೇನು…. ನಿನ್ನೆವರೆಗೆ ಕಣ್ಣಲ್ಲಿ ಕಿಡಿ ತುಂಬಿಕೊಂಡು ಮಾತಾಡುತ್ತಿದ್ದ… .. “ನಿನಗೆ ಮಕ್ಕಳಾಗ ಯಾವ ಲಕ್ಷಣಗಳು ಕಾಣುವುದಿಲ್ಲ ನಾನು ಬೇರೆ ಮದುವೆ ಮಾಡ್ತೀನಿ ನನ್ನ ಮಗನಿಗೆ” ಅಂತ ಹೆದರಿಸುತ್ತಿದ್ದ …ಅತ್ತೆಯ ಹೃದಯದಲ್ಲಿ, ಒಮ್ಮಿಂದೊಮ್ಮೆಲೆ ಅನಿರೀಕ್ಷಿತವಾಗಿ ಸೊಸೆಯ ಬಸುರಿತನದ ಸಂತಸವು ಮೃದುತ್ವ ಮೂಡಿಸಿತು. ಸೊಸೆಯೊಳಗೆ ಜೀವ ಮೂಡಿದೆ ಎಂಬ ಸತ್ಯ ತಿಳಿದ ಕ್ಷಣ, ಆಕೆಯ ಕಠೋರತೆ ಕ್ಷಣಾರ್ಧದಲ್ಲಿ ಕರಗಿ ಹೋಗಿತ್ತು.ಕಾಡುತ್ತಿದ್ದ ಅಸಮಾಧಾನ ಮನಸ್ಸು, ತಾನೇ ಅರಿಯದಂತೆ ಮಗು ಬರುವ ನೆನಪುಗಳಲಿ ತೆಲಾಡಲಾರಂಭಿಸಿತು.ಸೊಸೆಯ ಹೊಟ್ಟೆಯ ಮೇಲೆ ಕೈ ಇಟ್ಟು ಇಟ್ಟು ನೋಡುವರಂತೆ ಅತ್ತೆ“ಇವಳೊಳಗೆ ನನ್ನ ಮನೆಯ ಭವಿಷ್ಯ ಉಸಿರಾಡುತ್ತಿದೆ” ಎಂಬ ಭಾವನೆಯು ಎದೆಗಿಳಿದು ಪ್ರೀತಿ ಉಕ್ಕಿ ಹರಿಯುತ್ತಿರೆ……ಬಿರುಸಾದ ಮಾತುಗಳ ಮೃದು ಎಚ್ಚರಿಕೆಯ ಮಾತು ಗಳಾದವು……!!!ಅತ್ತೆಗೆ..ಸೊಸೆಗೆ ಕಣ್ಣು ತಪ್ಪಿಸಿ ನೋಡಿದರೂ, ಆ ನೋಟದಲ್ಲಿ ಕಾಳಜಿ ಇತ್ತು. ಬಸೂರಿಯಾಗಿರುವ ಸೊಸೆಯಲ್ಲಿ ತಾನು ಹಗಲಿರಳು ಕಾಣಿಸುತ್ತಿರುವ ಕನಸಿನ ಪ್ರತಿಬಿಂಬ ಕಂಡಂತೆ ಆಯಿತು.ತಾನೇ ತಾಯಿ ಆದಷ್ಟು ಸಂತಸ ತಂದಿತ್ತು. ಕಠೋರತೆಯ ಹಿಂದೆ ಹೂತುಹೋದ ತಾಯಿಯ ಹೃದಯ, ಆ ಕ್ಷಣಗಳಲ್ಲಿ ನಿಧಾನವಾಗಿ ಹೊರಸುಸಲಾರಂಭಿಸಿತು.ನಿನ್ನೆವರೆಗೆ ನೋವಿನ ಮೂಲವಾಗಿದ್ದ ಅತ್ತೆಯೇ, ಆ ದಿನದಿಂದ ಸೊಸೆಗೆ ಧೈರ್ಯವಾಗಿ ನಿಂತಳು. ಬಸೂರಿಯಾದ ಆ ಸತ್ಯ, ಇಬ್ಬರ ನಡುವಿನ ಗೋಡೆಯನ್ನು ಕರಗಿಸಿ, ಪ್ರೀತಿಗೆ ದಾರಿ ಮಾಡಿಕೊಟ್ಟಿತು…..!!!! ಜಯದೇವಿ ತಾಯಿಯವರು ವಾಸವಾದ ಕೋಣೆ ಮಕ್ಕಳಿಗಾಗಿ ಪ್ರಯಾಗಬಾಯಿಯು ಕಂಡ ಕಂಡ ದೇವರಿಗೆ ಹರಕೆಯನ್ನು ಹೊತ್ತು ನೂರಾರು ದೇವರಗಳನ್ನು ಜಗಲಿಯ ಮೇಲೆ ಇಟ್ಟು ಪೂಜೆ ಮಾಡುತ್ತಿದ್ದರು. ತಿಳಿದು ತಿಳಿಯದೇ ಅನೇಕ ತರದ ಪೂಜೆಗಳಲ್ಲಿ ನಿರತರಾಗುತ್ತಿದ್ದರು. ಇಂದು ಅವರ ಕನಸು ನನಸಾಗಲಿರುವದೆಂದು ಅವರ ಸಂತಸಕ್ಕೆ ಮೇರೆ ಇರಲಿಲ್ಲ.ತಾಯಿ ಸಂಗವ್ವನವರು ಸಂತಸದಿಂದ ಮಗಳ ಬಯಕೆಯ ತರಹದ ಅಡಿಗೆ ಮಾಡಿ ಉಣಿಸಲಾರಂಭಿಸಿದರು. ಸರ್ವಸಾಮಾನ್ಯವಾಗಿ ಮಹಾರಾಷ್ಟ್ರದಲ್ಲಿ (ಚೊರ್ ಚೋಳಿ) ಕಳ್ಳ ಕುಬಸ ಮಾಡಿ….. ಮುಂದೆ ದೊಡ್ಡ ಕುಬಸದ ಕಾರ್ಯವನ್ನು ಮಾಡುವಂತೆ ಐದನೇ ತಿಂಗಳಿಗೆ ಸಿಮಂತದ ದೊಡ್ಡ ಕಾರ್ಯಕ್ರಮವನ್ನು ಮಾಡಿ ಎಲ್ಲ ಅತ್ತೆಯಂದಿರಿಗೆ ಭರ್ಜರಿಯಾದ ಪಿತಾಂಬರಾದ ಸೀರೆಯನ್ನು ಉಡಿಸಿ ಅವರನ್ನೆಲ್ಲ ಆನಂದ ಪಡಿಸಿದರು. ಮೊದಲ ಸಲ ಗರ್ಭಿಣಿ ಆದವರಿಗೆ ಅನೇಕ ತರದ ಸೀಮಂತದ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತದೆ. ಬೆಳದಿಂಗಳ ಕುಬಸು ,ಸೂರ್ಯೋದಯ ಕುಬಸು (ಜೋಪಾಳ) ಉಯ್ಯಾಲೆ ಕುಬಸ ,ನಾವೆಯ ಕುಬಸ, ಸಮುದ್ರ ತೀರದ ಕುಬುಸ , ಒಳಕುಬಸ ಹೊರ ಕುಬಸ,ದೇವರೆದುರಿನ ಕುಬಸ, ಸಣ್ಣ ಕುಬಸ ,ದೊಡ್ಡ ಕುಬಸ…. ಹೀಗೆ ಅನೇಕ ತರದ ಕುಬಸುಗಳನ್ನು ಮಾಡಲಾಗುವದು ಅವುಗಳನ್ನೆಲ್ಲವನ್ನು ಆಚರಿಸಲಾಯಿತು. ಇಲ್ಲಿ ಬೆಳದಿಂಗಳ ಕುಬಸ ಅಂದರೆ ಚಂದ್ರನ ದಿವ್ಯ ಬೆಳಕಿನಲ್ಲಿ ಆ ಬೆಳಕಿನ ಬಣ್ಣದ ಸೀರೆಯನ್ನು ಉಡಿಸಿ ಹೂವು ಮೂಡಿಸಿ ಆ ಬಿಳಿ ಬಣ್ಣದ ಸಿಹಿ ಊಟವನ್ನು ತಯಾರಾಸಿ ಉಣಬಡಿಸುವರು. ಇನ್ನು ಸೂರ್ಯೋದಯದ ಕುಬುಸ ಅಂದರೆ ಸೂರ್ಯನ ಬಣ್ಣದ ಸೀರೆ ಉಡಿಸಿ ಅದೇ ಬಣ್ಣದ ಹೂಗಳನ್ನು ಮೂಡಿಸಿ ಸೂರ್ಯನ ಕಿರಣಗಳ ಮಧ್ಯ ಕೂಡಿಸಿ,ಹೊಂಬಣ್ಣದ ಮೃಷ್ಟಾನ್ನ ಅಡುಗೆ ಮಾಡಿ ಉಣ ಬಡಿಸುವರು. “ಉಯ್ಯಾಲೆಯ ಕುಬುಸು”ಅಂದರೆ ಉಯ್ಯಾಲೆಗೆ ಹೂವುಗಳಿಂದ ಅಲಂಕರಿಸಿ ಬಣ್ಣ ಬಣ್ಣದ ಬಟ್ಟೆ ವಸ್ತ್ರಗಳನ್ನು ಉಡುಗೆ ತೊಡಿಸಿ ತರ ತರಹದ ಅಡುಗೆ ಉಣಬಡಿಸುವರು .ಇನ್ನು “ನಾವೆಯ ಕುಬಸು”ಎಂದರೆ ದೋಣಿಯಲಿ ಕುಡಿಸಿ ನೇರವೆರಿಸುವರು. ಶಿವಯೋಗಿ ಸಿದ್ದರಾಮೇಶ್ವರರು ಕಟ್ಟಿದ ಕೆರೆಯಲ್ಲಿ ದೋಣಿಗಳಲಿ ಕುಬುಸ ಹೂಡಲಾಯಿತು.ಶಿವಯೋಗಿ ಸಿದ್ದರಾಮೇಶ್ವರನ ದರ್ಶನಕ್ಕೆ ಬಂದ ಯಾತ್ರಿಕರು ಧೋಣಿಗಳಲ್ಲಿ ವಿಹರಿಸ ಬಹುದಾಗಿದೆ. ಈಗಲೂ ಭಕ್ತಾದಿಗಳು ದೋಣಿಯಲ್ಲಿ ಕುಳಿತು ಆನಂದಿಸುವ ವ್ಯವಸ್ಥೆ ಇದೆ.ಜಯದೇವಿ ತಾಯಿಯವರಿಗಾಗಿಯೇ ಒಂದು ದೊಡ್ಡ ದೋಣಿಯನ್ನು ಅಲಂಕರಿಸಿ ಕೆರೆಯ ಮಧ್ಯದಲ್ಲಿ ಸಿಮಂತದ ಆಚರಣೆ ಮಾಡಲಾಯಿತು.ದೇವರೆದುರಿನ ಕುಬಸು ಅಂದರೆ ವಿಶೇಷವಾಗಿ ಸಿದ್ದರಾಮನ ಗರ್ಭಗುಡಿಯ ಎದುರು ಕೂಡಿಸಿ ಅವನೆದುರಿಗೆ ಕುಬಸನ್ನು ಮಾಡಿ ಆನಂದಿಸಿದರು. ಅಲ್ಲಿ ಹತ್ತಿರದಲ್ಲಿರುವ ರೇವಣಸಿದ್ದೇಶ್ವರ ದೇವಾಲಯದಲ್ಲಿ ಕುಬಸಿನ ಕಾರ್ಯ ಹಮ್ಮಿಕೊಳ್ಳಲಾಗಿತ್ತು.ಅನೇಕಾಅನೇಕ ತರದ ಕುಬುಸಗಳನ್ನು ಮಾಡಿ ಕಣ್ಮನ ತುಂಬಿಕೊಂಡರು ಅತ್ತೆಯ ಮನೆಯವರು ಹಾಗೂ ತವರಿನವರು.ಇನ್ನೂ ಬಂಧು-ಬಳಗದವರು ಅಂದರೆ ದಿನಕ್ಕೆ ಮೂರು ನಾಲ್ಕು ಮನೆಯವರಿಂದ ಆಮಂತ್ರಣ ಬರುವುದು ಅಲ್ಲಿ ಎಲ್ಲಾ ಕಡೆಗೂ ಹೋಗಿ ಅವರ ಆದರ ಆಥಿತ್ಯವನ್ನು ಸ್ವೀಕರಿಸಿ ಊಟ ಮಾಡಲೇ ಬೇಕಿತ್ತು. ಆದರೆ ಜಯದೇವಿ ತಾಯಿಯವರು ಅತ್ಯಂತ ನಾಜಕಿನ ಆರೋಗ್ಯದ ಸ್ಥಿತಿ ಇದ್ದಿದ್ದ ಕಾರಣ ಹೆಚ್ಚು ಉಣ್ಣಲಾಗುತ್ತಿರಲಿಲ್ಲ.ಆದರೂ ಬಳಗದವರ ಪ್ರೀತಿಯ ಒತ್ತಾಯಕ್ಕೆ ಮಣಿದು ಸ್ವಲ್ಪ ಹೆಚ್ಚಿಗೆ ಊಟ ಮಾಡಬೇಕಾಗುತ್ತಿತ್ತು. ಹೀಗಾಗಿ ಬಹಳಷ್ಟು ಸೋತು ಸೋತು ಬರುತ್ತಿದ್ದರು. ಅಂತ ತಾಯಿಯವರು ಹೇಳುತ್ತಿದ್ದರು. ಅದು ಮುಂದೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು ಅಂತ ಹೇಳುತ್ತಿದರು.“ಯಾರ ಒತ್ತಾಯಕ್ಕು ನಾವು ಊಟವನ್ನು ಹೆಚ್ಚಿಗೆ ಮಾಡಬಾರದು ನಮ್ಮ ದೇಹಕ್ಕೆ ಎಷ್ಟು ಬೇಕು ಅಷ್ಟನ್ನೇ ನಾವು ಸ್ವೀಕರಿಸಬೇಕು” ಮುಂದೆ ದೀರ್ಘಕಾಲದ ದುಷ್ಪರಿಣಾಮಗಳು ಶರೀರದ ಮೇಲೆ ಆಗುವ ಅನ್ನುತ್ತಿದ್ದರು. ಜಯದೇವಿ ತಾಯಿಯವರು ಪತಿ ಚೆನ್ನಮಲ್ಲಪ್ಪ ಲಿಗಾಡೆಯವ ಜೊತೆ ಅದೊಂದು ದಿನ ಮಗು ಭೂಮಿಗೆ ಬರುವ ಸಮಯವು ಬಂತ್ತು .ಅತ್ಯಂತ ಸುಂದರವಾದ ಮಲ್ಲಿಕಾರ್ಜುನನ್ನೇ ಹೊಲುವ ಮಗನನ್ನು ಜನ್ಮ ಕೊಟ್ಟರು. ಸೋನ್ನಲಿಗಿಯ ಸಿದ್ದರಾಮೇಶ್ವರರು ಆರಾಧಿಸುವ ದೈವ ಸಾಕ್ಷಾತ್ ಮಲ್ಲಿಕಾರ್ಜುನನೇ ಹುಟ್ಟಿ ಬಂದನು ಎನ್ನುವ ಸಂತಸದಲ್ಲಿ ಆ ಮಗುವಿಗೆ ಮಲ್ಲಿಕಾರ್ಜುನ ಅಂತನೇ ಹೆಸರಿಸಲಾಯಿತುಅತ್ತೆಯಂದಿರಗೆ ಎಲ್ಲಿಇಲ್ಲದ ಸಂತಸ … ಅದೆಷ್ಟೋ ದಿನಗಳಿಂದ ಮಕ್ಕಳಿಗಾಗಿ ಪರಿತಪಿಸುತ್ತಿರುವ ಲಿಗಾಡೆಯ ಮನೆತನದಲ್ಲಿ ಗಂಡು ಮಗ ಜನಿಸಿತು ಹೇಳತೀರದ ಆನಂದ ತುಂಬಿತುಳುತ್ತಿತ್ತು . ಆದರೆ ವಿಧಿಯ ಆಟವೇ ಬೇರೆಯಾಗಿತ್ತು…ಮಗು ಹುಟ್ಟಿದ ಸಲ್ಪ ದಿನದಲ್ಲಿ ತೀರಿಕೊಂಡಿತ್ತು. ಅದೇ ತಾನೇ ಸಂತಸ ಗೊಂಡಿರುವ ಎರಡು ಮನೆಗಳಲ್ಲಿ ಕತ್ತಲೆ ಆವರಿಸಿ ದಂತಾಗಿತ್ತು …… ಅತಿವ ನೋವುಉಂಟು ಮಾಡಿತು-ಬರಿದಾದ ಮಡಿಲು…… ಖಾಲಿತನವಷ್ಟೇ ಉಳದಿತ್ತು.ಸುಂದರವಾದ ಗಂಡು ಮಗುವಿನ ಉಸಿರಿನ ತಾಪ ಇನ್ನೂ ತಾಯಿಯ ಎದೆಯಲ್ಲೇ ಉಳಿದಿತ್ತು. ಮುದ್ದು ಮಗುವಿನ ಅಳು…..ನಿದ್ರೆಯಲ್ಲೂ ನಗುವ-ನಗೆ….ಇಗ ಆ ನಗು-ಅಳು ಮೌನವಾಗಿವೆ. ಹಾಸಿಗೆಯ ಮೇಲೆ ಮಡಚಿಟ್ಟ ಚಿಕ್ಕ ಚಿಕ್ಕ ಬಟ್ಟೆಗಳ ನೋಡಿ ತಾಯಿಯ ಕಣ್ಣಿರು ಮಳೆಯಾಗಿ ಹರಿದವು. ಅಳು ಕೇಳಿಸದೇ ಹೃದಯವೇ ಕಿತ್ತು ತಿನ್ನುತ್ತಿತ್ತು……ಒಮ್ಮೆ ಅವನನ್ನು ಹೊತ್ತ ಕೈಗಳು ಇದೀಗ ಖಾಲಿಯಾಗಿ ಗಾಳಿಯನ್ನು ಅಪ್ಪಿಕೊಳ್ಳುತ್ತಿವೆ……ಹಾಲು ತುಂಬಿದ ಎದೆ ಮಗುವಿಲ್ಲದ ನೋವಿನಿಂದ ಕಲ್ಲಾಗಿತ್ತು……. ಮನ ಕಲ್ಲಾಗಿತ್ತು….ssssss ಮುಂದೆ ತಾಯಿಯವರು ಇದನ್ನು ಬಹಳ ಅತ್ಯಂತ ಸುಂದರವಾಗಿ ವರ್ಣಿಸುತ್ತಾರೆ…… ಅಳುತ್ತಿದ್ಯಾ ಕಂದಾ ಅಳುವೆಯಾ? ನಿನ್ನ ಹಿಂದಣ ಜನುಮದ ಕೊಳೆ ತೊಳೆಯಲೆಂದು !!ಪಲ್ಲವಿ!! ತಾಯಿಯ ಗರ್ಭದಲ್ಲಿ ಕೈಕಾಲುಗಳ ಕಟ್ಟಿಬಾವಿಯೊಳು ಈಸಲು ಇಳಿಸಿದರೆಂದು!! ಮುಸುಕಿನೊಳಗೆ ಕಟ್ಟಿ ಬಿಸಿ ಎಡಬಲದಲ್ಲಿ ಉಸಿರಿಸಲು ನಿನಗೆ ಬರಲಿಲ್ಲವೆಂದು !! ಬರಿ ಕಾಯದಿಂದಲಿ ಧರೆಮೇಲೆ ಬೀಳುತಮುಟ್ಟು ಹೇಸಿಕೆಯಲಿ ಹೊರಳಾಡಿದೆನೆಂದು!!ಹಿಂದಣ ಜನುಮದ ತಾಯಿ ತಂದೆಗಳಿಲ್ಲಬಂದು ಬಳಗ ಎನಗೆ ಇಂದಿಲ್ಲವೆಂದು !! ಮೊಲೆ ಹಾಲು ಉಣಿಸುತ ಬಲು ಪ್ರೀತಿಯಲಿತಾಯಿ ಜಾಲದೊಳಗೆ ನಿನಗೆ ಕೊಳ್ಳುವಳೆಂದು!! ಹಿಂದಣ ಸುಖ ದುಃಖ ಇಂದು-ನೆನ್ನೆ ನೆನೆದುಬಿಕ್ಕಿಬಿಕ್ಕಿ ಅಳುವಿ ಏನು ತಿಳಿಯದೆಂದು!! ಹಿಂದಣದ ಪರಿ ಮತ್ತೆ ಮುಂದೆ ಬರುವುದೆಂದು ಬಂಧನ ಇದು ಈಗ ಬೇಸರಗೊಂಡು !! ಒಂಟಿಗನಾಗಿ ಬಂದು ಹೊಂಟು ಹೋಗುವದೇ ನೆಂಟರು ಎನಗಿಲ್ಲ ಯಾರಿಲ್ಲವೆಂದು,ಹೋದೆಯಾ!!ಅಳುತ್ತಿದ್ಯಾ ಕಂದಾ ಅಳುವೆಯಾ? ನಿನ್ನ ಹಿಂದಣ ಜನುಮದ ಕೊಳೆ ತೊಳೆಯಲೆಂದು !!ಪಲ್ಲವಿ (ತಾರಕ ತಂಬೂರಿ-ಕವನ ಸಂಕಲನ)ಈ ಕವನದಿ ಅಡಕವಾದ ಸಾರಾಂಶ ಅತ್ಯಂತ ಗಂಭೀರವಾದ-ತಾತ್ವಿಕ ಹಾಗೂ ಕರುಣಾಜನಕವಾದ ಭಾವವನ್ನು ಹೊತ್ತುಕೊಂಡಿದೆ.ಈ ಕವನವು ಮಗು ಅಳುವಿಕೆಗೆ ಕಾರಣವಾಗಿರುವ ಅಜ್ಞಾತ -ನೋವಿನ ಹಿಂದೆ ಇರುವ ಹಿಂದಿನ ಜನ್ಮದ ಪಾಪ–ಪುಣ್ಯ, ಸುಖ–ದುಃಖ ಮತ್ತು ಜೀವನದ ಅನಿವಾರ್ಯ ಬಂಧನಗಳನ್ನು ಪ್ರಶ್ನಿಸುವ ತಾಯಿಯ ಅಂತರಾಳದ ಮಾತುಗಳಾಗಿ ರೂಪಗೊಂಡಿವೆ.ತಾಯಿ ಮಗುವಿನ ಅಳುವನ್ನು ಕೇವಲ ಹಸಿವು ಅಥವಾ ಅಸೌಖ್ಯವೆಂದು ನೋಡದೆ, “ನಿನ್ನ ಹಿಂದಿನ ಜನ್ಮದ ನೋವುಗಳು ಈಗ ಅಳುವಾಗಿ ಹೊರಹೊಮ್ಮುತ್ತಿವೆಯೇ?” ಎಂದು ಭಾವಿಸುತ್ತ ಗರ್ಭದಲ್ಲೇ ಅನುಭವಿಸುವ ಬಂಧನ,ಜನನದ ವೇಳೆ ಉಸಿರಾಟದ ಸಂಕಟ,ಬಟ್ಟೆಯಿಲ್ಲದ ದೇಹದೊಂದಿಗೆ ಈ ಲೋಕಕ್ಕೆ ಬೀಳುವ ಅಸಹಾಯಕತೆ,ಹೋದ ಜನುಮದಲ್ಲಿ ಇದ್ದ ತಾಯಿ–ತಂದೆ ಬಂಧು–ಬಳಗವಿಲ್ಲದ ಏಕಾಂತತೆ.. ಹಿಂದಣ ಜನುಮದ ಜೀವನ,ಮೊಲೆಹಾಲು, ತಾಯಿಯ ಪ್ರೀತಿ ಸಿಗುವುದೇ ಎಂಬ ಅನಿಶ್ಚಿತತೆ….. ಇವೆಲ್ಲವನ್ನು ಹಿಂದಿನ ಜನ್ಮದ ಕರ್ಮಫಲಗಳ ಪರಿಣಾಮವಾಗಿ “ಮನುಷ್ಯ ಒಂಟಿಯಾಗಿ ಬಂದು,ಒಂಟಿಯಾಗಿಯೇ ಹೋಗುವವನು”—ಎಂಬ ಜೀವನದ ಸತ್ಯವನ್ನು ತಿಳಿಸಲಾಗಿದೆ. ಬಂಧುಗಳು, ಸಂಬಂಧಗಳು ಎಲ್ಲವೂ ಕ್ಷಣಿಕವೆಂಬ ತತ್ವವನ್ನೂ ಈ ಕವನ ಒತ್ತಿಹೇಳುತ್ತದೆ. ಅಂತಿಮವಾಗಿ ಮಾನವ ಜೀವನವು ಕರ್ಮಬಂಧನದಿಂದ ನಿಯಂತ್ರಿತ, ನೋವು ಸಹಜ, ಅಳುವು ಅಜ್ಞಾನದಿಂದ ಹೊರಡುವ ಪ್ರತಿಕ್ರಿಯೆ ಎಂಬ ತಾತ್ವಿಕ ಸಂದೇಶವನ್ನು ಸಾರುತ್ತದೆ. ಒಟ್ಟಿನಲ್ಲಿ ಮಗುವಿನ ಅಳುವಿನ ಮೂಲಕ ಮಾನವ ಜನ್ಮದ ನೋವು, ಕರ್ಮಸಿದ್ಧಾಂತ ಮತ್ತು ಬದುಕಿನ ಏಕಾಂತ ಸತ್ಯವನ್ನು ಪ್ರಶ್ನಿಸುವ ತಾತ್ವಿಕತೆ ಭರಿತವಾದ ಆಧ್ಯಾತ್ಮಿಕ ಮೆರಗು ಈ ಕವನಕ್ಕಿದೆ. ಹೀಗೆ ಗಾಢವಾದ ನೋವನ್ನು ಹೊತ್ತ ತಾಯಿ, ಕೈಯಲ್ಲಿ ಆಡುವ ಚೊಚ್ಚಲ ಮಗನನ್ನು ಕಳೆದುಕೊಂಡು ಬರಿ ಕೈಯಿಂದ ತವರು ಮನೆಯಿಂದ ಗಂಡನ ಮನೆಗೆ ಹೋಗುವ ಹೃದಯಾಂತಕ ಸನ್ನಿವೇಶ ಮುಂದಿನವಾರ ನೋಡೋಣ……….( ಮುಂದುವರೆಯುವುದು) ಸವಿತಾ ದೇಶಮುಖ ಡಾ. ಜಯದೇವಿತಾಯಿ ಲಿಗಾಡೆಯವರ ಮೊಮ್ಮಗಳು, ತಂದೆ-ಡಾ. ಶಂಕರಣ್ಣ ಮೂಗಿ (ಸೋವಿಯತ್ ಲ್ಯಾಂಡ್
ಧಾರಾವಾಹಿ ಸಂಗಾತಿ-110 ಒಬ್ಬ ಅಮ್ಮನಕಥೆ ರುಕ್ಮಿಣಿ ನಾಯರ್ ಬದಲಾದ ವಾಸ್ತವ್ಯ ರೈಟರ್ ಕೊಟ್ಟ ಮಾತಿನ ಪ್ರಕಾರ ನಡೆದುಕೊಂಡರು. ಸುಮತಿ ಟೀಚರ್ ಮತ್ತು ಮಕ್ಕಳು ತೋಟದ ದೊಡ್ಡ ಬಂಗಲೆಯ ಹತ್ತಿರವಿರುವ ಮನೆಯ ಕಡೆಗೆ ಪ್ರಯಾಣ ಬೆಳೆಸಲು ಬೇಕಾದ ಸೌಕರ್ಯವನ್ನು ಮಾಡಿಕೊಟ್ಟರು. ತೋಟದ ಲಾರಿಯನ್ನು ತರಿಸಿ, ಕೆಲಸಗಾರರ ಸಹಾಯದಿಂದ ಸುಮತಿಯ ಬಳಿಯಿದ್ದ ಅಲ್ಪಸ್ವಲ್ಪ ವಸ್ತುಗಳನ್ನು ಲಾರಿಯಲ್ಲಿ ತುಂಬಿಸಿ ಸುಮತಿ ವಾಸಿಸಬೇಕಾದ ಮನೆಯ ಬಳಿಗೆ ಕಳುಹಿಸಿಕೊಟ್ಟರು. ಸಾಹುಕಾರರು ಸೂಚಿಸಿದ ಪರಿಹಾರದದಂತೆ ಸುಮತಿ ಮತ್ತು ಮಕ್ಕಳು ದೊಡ್ಡ ತೋಟದ ಬಂಗಲೆ ಹತ್ತಿರ ಇರುವ ಮನೆಯಲ್ಲಿ ಹೊಸದಾಗಿ ವಾಸ್ತವ್ಯ ಹೂಡಿದರು. ಅವರಿಗೆ ಚಿರಪರಿಚಿತವಾದ ಸ್ಥಳವಾಗಿದ್ದ ಕಾರಣ ಅಂತಹಾ ದೊಡ್ಡ ವ್ಯತ್ಯಾಸವೇನೂ ಅನ್ನಿಸಲಿಲ್ಲ. ಆದರೂ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಮರೆಯಲು ಸಾಧ್ಯವೇ ಇರಲಿಲ್ಲ. ಸುಮತಿ ಪ್ರತಿದಿನವೂ ನಡೆದು ಅದೇ ಶಾಲೆಗೆ ಹೋಗುತ್ತಿದ್ದಳು. ಮಕ್ಕಳಿಬ್ಬರು ಬಿಡುವಿರುವಾಗ ಅಮ್ಮನ ಜೊತೆ ಶಾಲೆಯ ಬಳಿ ತೆರಳುತ್ತಿದ್ದರು. ನವೋದಯ ಶಾಲೆಯಲ್ಲಿ ಓದುತ್ತಿದ್ದ ಕೊನೆಯ ಮಗಳು ಈ ಬಾರಿಯೂ ರಜಕ್ಕೆ ಬಂದಳು. ಹೊಸ ವಾಸ್ತವ್ಯ ಅವಳಿಗೂ ಖುಷಿ ಕೊಟ್ಟಿತು. ಆದರೆ ಮೂವರಿಗೂ ಮೊದಲಿನಂತೆ ಸ್ವಚ್ಛಂದವಾಗಿ ತೋಟವನ್ನು ಸುತ್ತಲು ಸಾಧ್ಯವಿರಲಿಲ್ಲ. ಅಲ್ಲಿನ ಪರಿಸರವೇ ಬೇರೆ ಇಲ್ಲಿನ ಪರಿಸರವೇ ಬೇರೆ. ಎರಡನೇ ಮಗಳು ದ್ವಿತೀಯ ಪಿಯುಸಿಯಲ್ಲಿ, ಮೂರನೇ ಮಗಳು ಹತ್ತನೇ ತರಗತಿಯಲ್ಲಿ ಹಾಗೂ ಮೂರನೇ ಮಗಳು ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರಿಗೆ ಅಭ್ಯಾಸ ಮಾಡಲು ಹೆಚ್ಚು ಸಮಯ ಬೇಕಾಗಿರುತ್ತಿತ್ತು. ಮಕ್ಕಳು ಮೂವರೂ ಓದಿನಲ್ಲಿ ಬಹಳ ಚುರುಕಾಗಿದ್ದುದರಿಂದ ಸುಮತಿಗೆ ಅವರ ವ್ಯಾಸಂಗದ ಬಗ್ಗೆ ಯಾವುದೇ ಚಿಂತೆ ಇರಲಿಲ್ಲ. ಬದಲಿಗೆ ತನ್ನ ಮಕ್ಕಳು ಇನ್ನೇನು ಬೆಳೆದು ದೊಡ್ಡವರಾಗಿದ್ದಾರೆ. ಎಲ್ಲರೂ ಸಾಧ್ಯವಾದಷ್ಟು ವಿದ್ಯಾಭ್ಯಾಸವನ್ನು ಮುಗಿಸಿ ಒಳ್ಳೆಯ ಕೆಲಸಗಳಿಗೆ ಸೇರುತ್ತಾರೆ ಎಂಬ ಭರವಸೆ ಇತ್ತು. ಇಬ್ಬರೂ ಹೆಣ್ಣು ಮಕ್ಕಳು ಸರ್ಕಾರಿ ಶಾಲೆ, ಕಾಲೇಜಿನಲ್ಲಿ ಓದುತ್ತಿದ್ದ ಕಾರಣ ಅವರಿಗೆ ಹೆಚ್ಚಿನ ಫೀಸ್ ಹಣವನ್ನು ಭರಿಸುವಂತಿರಲಿಲ್ಲ. ಹಾಗೂ ಇಬ್ಬರೂ ಪಠ್ಯ ವಿಷಯಗಳಲ್ಲಿ ಉತ್ತಮರಾಗಿದ್ದ ಕಾರಣ ಸ್ಪೈಸಸ್ ಬೋರ್ಡ್ ನಿಂದ ಅವರಿಬ್ಬರಿಗೂ ಪ್ರತಿ ವರ್ಷವೂ ವಿದ್ಯಾರ್ಥಿ ವೇತನ ದೊರೆಯುತ್ತಿತ್ತು. ಮೂರನೇ ಮಗಳು ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾರಣ ಅವಳ ಎಲ್ಲಾ ಖರ್ಚುಗಳನ್ನು ಸರ್ಕಾರವೇ ಭರಿಸುತ್ತಿತ್ತು. ಕಡುಬಡತನದ ಜೀವನವಾದರೂ ಅಮ್ಮ ಮಕ್ಕಳು ಸಂತೋಷದಿಂದಲೇ ಬದುಕುತ್ತಿದ್ದರು. ಈಗೀಗ ಸುಮತಿಗೆ ಕೇರಳದ ತನ್ನ ಮನೆ ಅಪ್ಪ ಅಮ್ಮ, ಅಕ್ಕ, ತಮ್ಮಂದಿರು, ತಂಗಿ ಹಾಗೂ ಸಂಬಂಧಿಕರ ನೆನಪು ಬಹಳವಾಗಿ ಕಾಡುತ್ತಿತ್ತು. ಅಕ್ಕ ಸಕಲೇಶಪುರದಲ್ಲಿ ಇರುವುದರಿಂದ ಗುರುವಾರ ಸಂತೆಗೆ ಹೋದಾಗ ಕೆಲವೊಮ್ಮೆ ಅಕ್ಕನ ಮನೆಗೆ ಹೋಗಿ ಅಕ್ಕನನ್ನು ಕಂಡು ಮಾತನಾಡಿಸಿ ಬರುತ್ತಿದ್ದಳು. ಒಮ್ಮೊಮ್ಮೆ ಸುಮತಿ ಮತ್ತು ಮಕ್ಕಳು ಅವರ ಮನೆಯಲ್ಲಿ ಒಂದು ರಾತ್ರಿ ಕಳೆದು ಮಾರನೇ ದಿನ ತಮ್ಮ ಮನೆಯ ಕಡೆಗೆ ಹೊರಡುತ್ತಿದ್ದರು. ದೊಡ್ಡಮ್ಮನ ಮಕ್ಕಳಲ್ಲಿ ಕಿರಿಯ ಅಣ್ಣ ಎಂದರೆ ಈ ನಾಲ್ಕು ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು. ಚಿಕ್ಕಮ್ಮನ ಮಕ್ಕಳನ್ನು ತನ್ನ ಸ್ವಂತ ತಂಗಿಯರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಆತ. ಅವರೆಲ್ಲರೂ ಮನೆಗೆ ಬಂದಾಗ ಹತ್ತಿರದಲ್ಲಿಯೇ ಇರುವ ಥಿಯೇಟರ್ ಗೆ ಕರೆದುಕೊಂಡು ಹೋಗಿ ಸಿನಿಮಾ ತೋರಿಸುತಿದ್ದ. ಸುಮತಿಯ ತಮ್ಮಂದಿರು ಇಬ್ಬರೂ ಕೆಲಸದ ನಿಮಿತ್ತ ದೂರದ ಊರಿಗೆ ಹೋಗಿದ್ದರು. ಹಿರಿಯ ತಮ್ಮ ಹಾಸನದಲ್ಲಿ ವಾಸ್ತವ್ಯವಿರುವಾಗ ಅಪರೂಪಕ್ಕೊಮ್ಮೆ ಅಲ್ಲಿಗೆ ಮಕ್ಕಳೊಂದಿಗೆ ಹೋಗಿ ಬರುತ್ತಿದ್ದಳು. ಈಗ ಅವನು ವರ್ಗಾವಣೆಯಾಗಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ ಮೇಲೆ ಅವನನ್ನು ಕಾಣುವುದು ಸಾಧ್ಯವಿರಲಿಲ್ಲ. ಏಕೆಂದರೆ ಬೆಂಗಳೂರು ಬಹಳ ದೂರವಿದ್ದುದರಿಂದ ಹಾಗೂ ಅವಳಲ್ಲಿ ಅಷ್ಟೊಂದು ಹಣವಿರದ ಕಾರಣ ಅಲ್ಲಿಗೆ ಹೋಗಿ ತಮ್ಮನನ್ನು ಭೇಟಿ ಮಾಡಲು ಸಾಧ್ಯವಿರಲಿಲ್ಲ. ಚಿಕ್ಕ ತಮ್ಮನೂ ಕೂಡ ಗೊರೂರಿನಿಂದ ಕುಶಾಲನಗರದ ಹತ್ತಿರವಿರುವ ಪಿರಿಯಾಪಟ್ಟಣದಲ್ಲಿ ಸ್ವಂತ ಮನೆ ಕಟ್ಟಿಕೊಂಡು ವಾಸವಿದ್ದ. ಅಮ್ಮ ತೀರಿ ಹೋದ ನಂತರ ಸುಮತಿ ಎಂದಿಗೂ ಕಿರಿಯ ತಮ್ಮನನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಹಿರಿಯ ತಮ್ಮನಿಂದ ಮತ್ತು ಅಕ್ಕನಿಂದ ಅವನ ಯೋಗ ಕ್ಷೇಮದ ವಿಚಾರಗಳು ತಿಳಿಯುತ್ತಿದ್ದವೇ ವಿನಹ ಅವಳೆಂದೂ ಅವನ ಮನೆಗೆ ಹೋಗಿರಲಿಲ್ಲ. ಅವನಿಗೆ ಮದುವೆಯಾಗಿ ನಾಲ್ಕು ಮಕ್ಕಳಿರುವ ವಿಚಾರವು ಅಕ್ಕನಿಂದ ಸುಮತಿಗೆ ತಿಳಿದಿತ್ತು. ತನ್ನ ಕಷ್ಟಕರವಾದ ಜೀವನದ ಬಗ್ಗೆ ಅವನಲ್ಲಿ ಹೇಳಿಕೊಳ್ಳಲು ಸುಮತಿಗೆ ಮನಸ್ಸಿರಲಿಲ್ಲ. ಅದೇಕೋ ಇವರಿಬ್ಬರ ಭೇಟಿ ಸಾಧ್ಯವಾಗಲೇ ಇಲ್ಲ. ಕಾಲವು ಎಲ್ಲವನ್ನೂ ಬದಲು ಮಾಡಿತ್ತು. ಸುಮತಿಗೆ ಕಿರಿಯ ತಮ್ಮನನ್ನು ನೋಡಲೇಬೇಕು ಎಂಬ ಹಂಬಲವೂ ಹೆಚ್ಚಾಗಿತ್ತು. ಆದರೆ ಮಕ್ಕಳನ್ನು ಕರೆದುಕೊಂಡು ತಾನು ಅವನ ಮನೆಗೆ ಹೋಗುವ ಅವಕಾಶವೇ ಇರಲಿಲ್ಲ. ಏಕೆಂದರೆ ಅವಳಿಗೆ ಬರುವ ಸಂಬಳದಲ್ಲಿ ಹೊಟ್ಟೆ ಹೊರೆಯುವುದೇ ಕಷ್ಟಕರವಾಗಿತ್ತು. ದೊಡ್ಡ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ ಮೇಲೆ ಮಲಯಾಳಿ ಡ್ರೈವರ್ ಕುಟುಂಬದೊಂದಿಗೆ ಸುಮತಿ ಹಾಗೂ ಮಕ್ಕಳು ಹೆಚ್ಚಾಗಿ ಬೆರೆಯಲು ಅವಕಾಶವಾಯಿತು. ಸುಮತಿಯ ಕಷ್ಟ ಸುಖಗಳನ್ನು ಡ್ರೈವರ್ ಹಾಗೂ ಆತನ ಪತ್ನಿ ಕೇಳಿ ತಿಳಿದುಕೊಳ್ಳುತ್ತಿದ್ದರು. ಅವರು ಪಡುತ್ತಿರುವ ಕಷ್ಟವನ್ನು ಕಂಡು ಮರುಗಿ ಸಾಹುಕಾರರ (ಪತ್ನಿ) ಅಮ್ಮ ನಲ್ಲಿ ಡ್ರೈವರ್ ಹೇಳಿಕೊಳ್ಳುತ್ತಿದ್ದರು. ಸುಮತಿಯ ಕಷ್ಟವನ್ನು ಅರಿತ ಅಮ್ಮ ಸುಮತಿಯನ್ನು ಕರೆದು ಬಂಗಲಗೆ ಸೇರಿಕೊಂಡಂತೆ ಇದ್ದ ಸಹಕಾರಿ ಅಂಗಡಿಯಿಂದ ತಿಂಗಳಿಗೆ ಒಂದಿಷ್ಟು ರೇಷನ್ ಕೊಡಿಸುವ ವ್ಯವಸ್ಥೆ ಮಾಡಿದರು. ಹಳೆಯದಾದರೂ ಹೊಸದರಂತೆ ಕಾಣುವ ಸೀರೆಗಳನ್ನು ಹಾಗೂ ತನ್ನ ಮಕ್ಕಳ ಬಟ್ಟೆಗಳನ್ನು ಸುಮತಿಯ ಮಕ್ಕಳಿಗೆ ಕೊಡುತ್ತಿದ್ದರು. ಹಾಗಾಗಿ ಬಟ್ಟೆಬರೆಯ ಬಗ್ಗೆ ಚಿಂತಿಸುವ ಅಗತ್ಯ ಸುಮತಿಗೆ ಇರಲಿಲ್ಲ. ಸುಮತಿಯ ಮಕ್ಕಳು ಬುದ್ಧಿವಂತರು ಎನ್ನುವ ವಿಷಯ ಅಮ್ಮನಿಗೆ ತಿಳಿದಿತ್ತು. ಹಾಗಾಗಿ ಆ ಮಕ್ಕಳ ಬಗ್ಗೆ ಅಮ್ಮನಿಗೆ ಕಾಳಜಿ ಇತ್ತು. ಸುಮತಿಯ ಮಕ್ಕಳಿಬ್ಬರೂ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದರು. ಸುಮತಿ ಈಗೀಗ ಮೊದಲಿಗಿಂತ ನಿತ್ರಾಣಗೊಳ್ಳುತ್ತಿದ್ದಳು. ಗಾಳಿ,ಮಳೆ, ಬಿಸಿಲು ಎನ್ನದೇ ಸುಮಾರು ದೂರವಿದ್ದ ಶಾಲೆಗೆ ಕಾಲ್ನಡಿಗೆಯಲ್ಲೇ ಹೋಗಿ ಬರುತ್ತಿದ್ದಳು. ಈಗಿಗ ಅವಳಿಗೆ ಹೆಚ್ಚು ಆಯಾಸವಾಗುತ್ತಿತ್ತು. ಆದರೂ ಏನೂ ಮಾಡುವಂತಿರಲಿಲ್ಲ. ಮಕ್ಕಳ ಓದು ಮುಗಿದು ಒಳ್ಳೆಯ ಕೆಲಸ ದೊರಕುವವರೆಗೂ ತಾನು ಹೇಗಾದರೂ ದುಡಿಯಲೇಬೇಕಿತ್ತು.
ಸಾವಿಲ್ಲದ ಶರಣರು ಮಾಲಿಕೆ,”ಅಮೋಘಸಿದ್ಧ ಪರಂಪರೆಯ ಶ್ರೇಷ್ಠ ಸಾಧಕ ಶಿವಯೋಗಿ ಶ್ರೀ ಯಲ್ಲಾಲಿಂಗರು.ಡಾ ಶಶಿಕಾಂತ್ ಪಟ್ಟಣ ರಾಮದುರ್ಗ
ಶರಣರ ಸಂಗಾತಿ ಡಾ ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ, “ಅಮೋಘಸಿದ್ಧ ಪರಂಪರೆಯ ಶ್ರೇಷ್ಠ ಸಾಧಕ ಶಿವಯೋಗಿ ಶ್ರೀ ಯಲ್ಲಾಲಿಂಗರು. ಕುರುಬರ ಕುಲಗುರು ಒಡೆಯರ ಶಾಖೆಯೊಂದರ ಪ್ರಮುಖ ಸಿದ್ಧ ಅಮೋಘಸಿದ್ಧ ಅಪ್ಪಟ ಜನಪದರ ದೈವ. ಈತನ ಮಟ್ಟಿಗೆ ಜನಪದರ ನಂಬಿಕೆಯೇ ಚರಿತ್ರೆ; ಭಂಡಾರದ ಮಳೆ ಸುರಿದಲ್ಲೇ ಜಾತ್ರೆ. ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಜನಮಾನಸದಲ್ಲಿ ಕುರುಬರ ಇನ್ನೋರ್ವ ಕುಲಗುರುವಾದ ರೇವಣಸಿದ್ಧರಷ್ಟೇ ಪ್ರಖ್ಯಾತನಾಗಿದ್ದಾನೆ. ಆದರೆ ರೇವಣಸಿದ್ಧನಿಗಿರುವಂತೆ ಈತನ ಕುರಿತು ಶಾಸನಾಧಾರಗಳಾಗಲಿ, ಶಿಷ್ಟಕಾವ್ಯಗಳಾಗಲಿ ಇಲ್ಲ. ಈತನ ಜೀವಂತಿಕೆ ಇರುವುದು ಜನಪದರ ಮೌಖಿಕ ಸಾಮಗ್ರಿಗಳಲ್ಲಿ. ಅಮೋಘಸಿದ್ಧನ ಮೂಲ ನೆಲೆ ವಿಜಯಪುರದಿಂದ ಹತ್ತನ್ನೆರಡು ಕಿಲೋ ಮೀಟರ್ ದೂರದ ಅರಿಕೇರಿ ಸಮೀಪದ ಮುಮ್ಮೆಟಗುಡ್ಡ. ಇವನ ಜಾತ್ರೆಯನ್ನು ಜನ ಇಂದಿಗೂ ಮುಮ್ಮಡಪ್ಪನ ಜಾತ್ರೆ ಎಂದೇ ಕರೆಯುತ್ತಾರೆ. ಅಮೋಘಸಿದ್ಧನನ್ನು ಕೈಲಾಸದಲ್ಲಿ ಉದ್ಭವಿಸಿ ಭೂಲೋಕದಲ್ಲಿ ಅವತರಿಸಿದಂತೆ ಪಾರಂಪರಿಕ ಪುರಾಣ ಕಥನದಲ್ಲಿ ಕಲ್ಪಿಸಿಕೊಂಡಿರುವುದರಿಂದ ಈತ ಕಾಲಾತೀತನಾಗಿ ಗೋಚರಿಸುತ್ತಾನೆ. ಆ ಪ್ರಕಾರ ಈತ ಅವತರಿಸಿದ ನಂತರ ಉತ್ತರ ಭಾರತದ ಹಸ್ತಿನಾವತಿಯಲ್ಲಿ ಕೆಲ ದಿನವಿದ್ದು ಪಾಂಡವರು ಕೈಕೊಂಡ ಯಾಗದಲ್ಲಿ ಪಾಲ್ಗೊಳ್ಳುತ್ತಾನೆ. ಕುಂತಿಯಿಂದ ಸೇವೆ ಪಡೆದು ವಾರದ ಒಡೆಯ ಅನ್ನಿಸಿಕೊಳ್ಳುತ್ತಾನೆ. ಅಮೋಘಸಿದ್ಧನ ಮಗನಾದ ಬಿಳಿಯಾನಿಸಿದ್ದನು ಕಲ್ಯಾಣಪಟ್ಟಣಕ್ಕೆ ಹೋಗಿ ಅಲ್ಲಿನ ಮಡಿವಂತ ಲಿಂಗಾಯತರಿಗೆ ನೀವೆಲ್ಲ ಕಟ್ಟುಲಿಂಗದವರಾದರೆ ನಾನು ಹುಟ್ಟುಲಿಂಗದವನು ಎಂಬುದನ್ನು ಸಾಬೀತುಪಡಿಸುತ್ತಾನೆ. ಅಮೋಘಸಿದ್ಧನ ಮೊದಲ ಮಗನಾದ ಅವತಾರ ಅವಧೂಸಿದ್ಧ ವಿಜಾಪುರದ ಶೇಖಾಶಾಹಿಗಳೊಂದಿಗೆ ಕಾದಾಡಿದ್ದು ಹಾಗೂ ಅಮೋಘಸಿದ್ಧನ ಮೊಮ್ಮಗನಾದ ಮಲಕಾರಿಸಿದ್ಧನು ಆನೆಗುಂದಿ ಅರಸರೊಂದಿಗೆ ಹಾಗೂ ಸುರಪುರದ ದೊರೆಗಳೊಂದಿಗೆ ಹಸು ಮೇಯಿಸುವ ಜಾಗೆಯ ವಿಷಯದಲ್ಲಿ ಹಾಕ್ಯಾಡಿದ ವಿವರ ಜನಪದ ಮೌಖಿಕ ಸಾಮಗ್ರಿಗಳಲ್ಲಿ ನೈಜವಾಗಿ ದೊರೆಯುತ್ತವೆ. …ಹೀಗೆ ತಂದೆ-ಮಗ-ಮೊಮ್ಮಗ ಮೂರು ತಲೆಮಾರುಗಳ ಈ ಕಥನದಲ್ಲಿ ಹಸ್ತಿನಾವತಿಯ ದ್ವಾಪರಯುಗ, ಕಲ್ಯಾಣದ ಬಸವಯುಗ, ವಿಜಾಪುರದ ಶಾಹಿಕಾಲ, ಆನೆಗುಂದಿಯ ವಿಜಯನಗರದ ಕಾಲ ಹಾಗೂ ಸುರಪುರದ ಪಾಳೆಗಾರರ ಕಾಲ ಸೇರಿದಂತೆ ವಿವಿಧ ಕಾಲಘಟ್ಟದಲ್ಲಿ ಇವರು ಗೋಚರಿಸುತ್ತಾರಾದ್ದರಿಂದ ಯಾವುದೇ ಕಾಲದ ಚೌಕಟ್ಟಿಗೆ ಸಿಗದೆ ಇಡೀ ಪರಂಪರೆ ಕಾಲಾತೀತವಾಗಿ ತೋರುತ್ತದೆ. ಜನಪದರ ನಾಲಗೆಯ ನಂಬಿಕೆಗಳನ್ನೇ ನೆಚ್ಚಿ ತಲತಲಾಂತರಗಳಲ್ಲಿ ಹರಿದು ಬರುವ ಅಮೋಘಸಿದ್ದನ ಕಥನ ಪುರಾಣೀಕರಣಗೊಂಡು ಕಾಲದ ಹಂಗನ್ನು ಹರಿದುಕೊಳ್ಳುವ ಪರಿಯೇ ವಿಸ್ಮಯಕಾರಿಯಾದದ್ದು. ಈ ವಿಸ್ಮಯಕಾರಿ ಕಥನವನ್ನು ಅಮೋಘಸಿದ್ದ ಪರಂಪರೆಯ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿರುವ ಡಾ.ಚನ್ನಪ್ಪ ಕಟ್ಟಿಯವರು ಕಟ್ಟಿಕೊಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ಶಿವಪ್ಪ-ಕಾಶಿಬಾಯಿ ದಂಪತಿಗಳ ಮಗನಾಗಿ ಶ್ರೀ ಯಲ್ಲಾಲಿಂಗರು ಜನಿಸಿದರು. ಬಾಲ್ಯದಿಂದಲೇ ಶಿವಧ್ಯಾನದಲ್ಲಿದ್ದ ಇವರು, ಮುಗಳಖೋಡದ ಸ್ಮಶಾನಭೂಮಿಯನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡು, ಭಿಕ್ಷಾಟನೆ, ಸಮಾಜ ಸೇವೆ ಹಾಗೂ ದಾಸೋಹದ ಮೂಲಕ ಭಕ್ತರಿಗೆ ಮಾರ್ಗದರ್ಶನ ನೀಡಿದ ಮಹಾ ಸಿದ್ಧಿಪುರುಷರು. ಯಲ್ಲಾಲಿಂಗ ಮಹಾರಾಜರ ಜೀವನದ ಪ್ರಮುಖಾಂಶಗಳು: ಬಾಲ್ಯ ಮತ್ತು ಕಾಯಕ ಬಾಲ್ಯದಲ್ಲಿ ಕುರಿ ಕಾಯುವ ಕಾಯಕ ಮಾಡುತ್ತಿದ್ದ ಯಲ್ಲಪ್ಪ, ಇಪ್ಪತ್ತರ ಹರೆಯದಲ್ಲಿ ಕುಸ್ತಿಪಟುವಾಗಿದ್ದರು. ವೈವಾಹಿಕ ಜೀವನ: ಮನೆಯವರ ಒತ್ತಾಯದ ಮೇರೆಗೆ ಹೊನ್ನಮ್ಮ ಎಂಬುವರೊಂದಿಗೆ ವಿವಾಹವಾದರು. ಕರ್ಮಭೂಮಿ: ಮುಗಳಖೋಡ ಗ್ರಾಮದ ಸ್ಮಶಾನ ಭೂಮಿಯನ್ನು ಮುಕ್ತಿ ಮಂದಿರವನ್ನಾಗಿ ಮಾಡಿಕೊಂಡು, ಅಧ್ಯಾತ್ಮಿಕ ಜೀವನ ನಡೆಸಿದರು. *ಸಿದ್ಧಿ ಮತ್ತು ಸಮಾಜ ಸೇವೆ: ಸಿದ್ಧಲಿಂಗರ ಆಶೀರ್ವಾದ ಪಡೆದಿದ್ದ ಯಲ್ಲಾಲಿಂಗರು, ಸುತ್ತಮುತ್ತಲಿನ ಗ್ರಾಮದ ಜನರಿಗೆ ಸತ್ಯದ ಮಾರ್ಗ ತೋರಿಸುತ್ತಿದ್ದರು. ಮುಗಳಖೋಡ ಮಠ: ಯಲ್ಲಾಲಿಂಗ ಮಹಾರಾಜರ ಕರ್ತೃ ಗದ್ದುಗೆ ಮುಗಳಖೋಡದಲ್ಲಿದ್ದು, ಇದು ಭಕ್ತರ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿ 24 ಗಂಟೆಗಳ ಕಾಲ ದಾಸೋಹ (ಅನ್ನದಾನ) ನಡೆಯುತ್ತದೆ. ಮುಗಳಖೋಡದ ಶ್ರೀ ಯಲ್ಲಾಲಿಂಗ ಮಹಾರಾಜರು ಉತ್ತರದ ಕರ್ನಾಟಕದಲ್ಲಿ ಅತ್ಯಂತ ಪೂಜನೀಯರಾಗಿದ್ದು, ಅವರ ಜೀವನ ಸತ್ಯ, ಭಕ್ತಿ ಮತ್ತು ಸೇವಾ ಮನೋಭಾಕ್ಕೆ ಸಾಕ್ಷಿಯಾಗಿದೆ. ಅಮೋಘ ಸಿದ್ಧ ಪರಂಪರೆಯ ಶ್ರೀ ಸಿದ್ಧಲಿಂಗರ ಆಶೀರ್ವಾದ ಕೃಪೆಯಿಂದ ತಮ್ಮ ಬದುಕನ್ನು ಶಿವಯೋಗ ಸಾಧನಕ್ಕೆ ಮೀಸಲಿಟ್ಟವರು ಪೂಜ್ಯರಾದ ಶ್ರೀ ಯಲ್ಲಾಲಿಂಗರು. ಮುಗುಳುಖೋಡ ಮುತ್ಯಾ ಎಂದು ಜನರು ಕರೆಯುತ್ತಿದ್ದರು. ಮೈಲಾರಲಿಂಗ ಎಂದರೆ ಮೈಯಲ್ಲಿ ಆರು ಲಿಂಗ ಗುರು ಲಿಂಗ ಜಂಗಮ ಲಿಂಗ ಹೀಗೆ. ಆದರೆ ಯಲ್ಲಾಲಿಂಗವೆಂದರೆ ಇಡೀ ಕಾಯ ಶರೀರವೇ ಲಿಂಗ ಎಲ್ಲವೂ ಲಿಂಗ ಎಂಬಂತೆ ಬಸವ ತತ್ವಕ್ಕೆ ಅನುಗುಣವಾಗಿ ಬಾಳಿ ಬದುಕಿದ ನಾವು ಕಂಡ ಶ್ರೇಷ್ಠ ಶಿವಯೋಗ ಸಾಧಕರು. ಬಡವರ ಪಾಲಿನ ಆಶಾಕಿರಣ ಭಕ್ತರ ನಂಬಿಕೆಯ ಶ್ರೇಷ್ಠ ಶಿವಯೋಗ ಸಾಧಕರು ಯಲ್ಲಾಲಿಂಗರು. ಬಂದ ಭಕ್ತರಿಗೆ ಅಂಬಲಿ ನೀಡಿ ಪ್ರೀತಿ ಗೌರವ ವಿಶ್ವಾಸದಿಂದ ಮಾತನಾಡಿ ಅವರ ದುಗುಡು ದುಮ್ಮಾನಗಳನ್ನು ದೂರು ಮಾಡುತ್ತಿದ್ದರು. ಜಿಡಗಾ ಮುಗುಳುಖೋಡ ಬೆಳಗಾವಿಯ ಶ್ರೀನಗರದಲ್ಲಿ ಇವರ ಮಠವಿದೆ. ಯಲ್ಲಾಲಿಂಗರ ನಂತರ ಶ್ರೀ ಸಿದ್ಧರಾಮಸ್ವಾಮಿಗಳು ಮತ್ತೆ ಈಗ ಶ್ರೀ ಡಾ ಮುರುಘರಾಜೇಂದ್ರ ಶ್ರೀಗಳು ತಮ್ಮ ದಿವ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಹೊರಟಿದ್ದಾರೆ.ಇಂತಹ ಪೂಜ್ಯರನ್ನು ಹೊಂದಿದ ನಮ್ಮ ಕರ್ನಾಟಕದ ನೆಲವೇ ಪಾವನ ಸುಕ್ಷೇತ್ರ. ಇವರಿಗೆ ಭಕ್ತಿಪೂರ್ವಕ ಶರಣಾರ್ಥಿಗಳು. ________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-28 ಪದೋನ್ನತಿ ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೨೮ ೧೯೯೭…….. ಮಕ್ಕಳಾಗಲು ಎಷ್ಟೇ ಚಿಕಿತ್ಸೆ ತೆಗೆದುಕೊಂಡರೂ ಫಲಕಾರಿಯಾಗದೆ ಏಕೋ ತುಂಬಾ ಬೇಸರ. ಹಾರ್ಮೋನ್ ಚಿಕಿತ್ಸೆಯ ಪರಿಣಾಮ ತೂಕದಲ್ಲಿ ಹೆಚ್ಚಳ. ಒಂದು ತರಹ ಖಿನ್ನತೆಗೆ ಒಳಗಾಗುತ್ತಿದ್ದೆ. ವಿಭಾಗೀಯ ಕಛೇರಿಯಲ್ಲಿ ಡಿಪಾರ್ಟ್ಮೆಂಟ್ ಬದಲಾವಣೆಗೆ ಅವಕಾಶವಿರಲಿಲ್ಲ ಆಗ. ಇತ್ತೀಚೆಗೆ ೧೫ ವರ್ಷಗಳಿಂದ ಶಾಖೆಗಳಲ್ಲಿರುವಂತೆ ೩ ವರ್ಷಕ್ಕೊಮ್ಮೆ ಬದಲಾವಣೆ ಇದೆ. ಈಗ ನನ್ನೊಂದಿಗೆ ಸಹಾಯಕರಾಗಿ ರಾಮಚಂದ್ರ ಮತ್ತು ಉನ್ನತದರ್ಜೆ ಸಹಾಯಕರಾಗಿ ಮುರಳಿ ಇದ್ದರು. ಸಹಾಯಕ ವಿಭಾಗಾಧಿಕಾರಿಯಾಗಿ ಶ್ರೀಮತಿ ಪ್ರಮದಾ ಪ್ರಕಾಶ್ ಅವರು ಬೆಂಗಳೂರಿನಿಂದ ಬಂದಿದ್ದರು. ಇದೇ ಮೊದಲು ನಾನು ಮಹಿಳಾ ಅಧಿಕಾರಿಯೊಂದಿಗೆ ಕೆಲಸ ಮಾಡಿದ್ದು. ಸುವರ್ಣ ಅವರಂತೂ ಇದ್ದರು. ತುಂಬಾ ಸೌಹಾರ್ದಕರ ವಾತಾವರಣವಿತ್ತು. ಆ ಸಮಯದಲ್ಲೇ ನನ್ನ ತಂಗಿ ವೈಶಾಲಿಯ ವಿವಾಹವೂ ಜರುಗಿದ್ದು. ಪ್ರಮದಾ ಮೇಡಂ ಅವರು ತುಂಬಾ ತಿಳಿ ಹೇಳಿ ಉನ್ನತ ದರ್ಜೆ ಸಹಾಯಕಿಯಾಗಿ ಬಡ್ತಿ ತೆಗೆದುಕೊಳ್ಳಲು ಪ್ರೇರೇಪಿಸಿದರು. ಸ್ಥಳ ಬದಲಾವಣೆ ಆದರೆ ಚಿಕಿತ್ಸೆಗು ಒಳ್ಳೆಯದು ಎಂದು ಅವರು ಹೇಳಿದ ಮಾತು ನನ್ನಲ್ಲೂ ಒಂದು ಹೊಸ ಆಸೆ ಮೂಡಿಸಿತು. ಹಾಗಾಗಿ ಆ ವರ್ಷ ಉನ್ನತ ದರ್ಜೆ ಸಹಾಯಕರ ಬಡ್ತಿಗಾಗಿ ಕರೆ ಕೊಟ್ಟಾಗ ನಾನು ಸಹ ಅರ್ಜಿ ಕೊಟ್ಟೆ. ನಮ್ಮ ತಂದೆ ಅಂತೂ ಉದ್ಯೋಗದಲ್ಲಿ ಮುಂದೆ ಬರಲಿ ಎಂದು ತುಂಬಾನೇ ಇಷ್ಟಪಡುತ್ತಿದ್ದರು ಹಾಗಾಗಿಯೇ ನನ್ನ ತಂಗಿ ಸಹ ಸಹಾಯಕ ಅಧಿಕಾರಿಯಾಗಿ ಹೋಗಿದ್ದು. ನನಗೂ ಅವರು ಬಡ್ತಿ ತೆಗೆದುಕೊಳ್ಳಲು ಹೇಳಿ ಅದನ್ನು ರವೀಶ್ ಅವರು ಅನುಮೋದಿಸಿದಾಗ ಆಯಿತು ಎಂದುಕೊಂಡಿದ್ದೆ. ಸಾಮಾನ್ಯ ಎಲ್ಲರಿಗೂ ದಿನ ಓಡಾಡುವ ಸ್ಥಳಕ್ಕೆ ಪೋಸ್ಟಿಂಗ್ ಆಗುತ್ತಿತ್ತು . ಒಂದು ಅಥವಾ ಎರಡು ವರ್ಷ ಹೀಗೆ ಓಡಾಡಿದ ನಂತರ ಮೈಸೂರಿಗೆ ವಾಪಸ್ ಬರಬಹುದಿತ್ತು. ಆದರೂ ಕೆಲವು ಗೆಳತಿಯರು ಆರಾಮವಾಗಿ ಮೈಸೂರಿನಲ್ಲಿ ಇರುವುದನ್ನು ಬಿಟ್ಟು ಓಡಾಡುವ ತೊಂದರೆ ತೆಗೆದುಕೊಳ್ಳುವುದು ಏಕೆ ಎಂದು ಸಹ ಕೇಳಿದ್ದರು. ಆದರೂ ಬದಲಾವಣೆಗೆ ಏನೋ ಒಂದು ರೀತಿಯ ತುಡಿತ ಏಕತಾನತೆಯಿಂದ ದೂರ ಹೋಗುವ ಆಸೆ ನನ್ನನ್ನು ಪದೋನ್ನತಿಗೆ ಪ್ರಯತ್ನಿಸುವ ಹಾಗೆ ಮಾಡಿತು. ಇದಕ್ಕೂ ಒಂದು ಪ್ರವೇಶ ಪರೀಕ್ಷೆ ಇರುತ್ತದೆ. ಆದರೆ ಅಸೋಸಿಯೇಟ್ ಪರೀಕ್ಷೆ ಪಾಸಾದವರಿಗೆ ಪ್ರವೇಶ ಪರೀಕ್ಷೆಯಿಂದ ರಿಯಾಯಿತಿ. ಆ ವೇಳೆಗೆ ನನ್ನದು ಅಸೋಸಿಯೇಟ್ ಆಗಿದ್ದರಿಂದ ನಾನು ನೇರ ಸಂದರ್ಶನಕ್ಕೆ ಅರ್ಹಳಾಗಿದ್ದೆ. ಎಂದಿನಂತೆ ಆ ಸಂದರ್ಶನಕ್ಕೆ ನಮ್ಮ ಹೊಸ ವ್ಯವಹಾರ ವಿಭಾಗದಿಂದ ಕೇಳಬಹುದಾದ ಸಂಭವನೀಯ ಪ್ರಶ್ನೆಗಳ ಪಟ್ಟಿ ನಾನೇ ತಯಾರು ಮಾಡಿ ಕೊಟ್ಟಿದ್ದೆ. ಆ ಬಾರಿ ಸಂದರ್ಶನ ಸಮಿತಿಯಲ್ಲಿ ನಮ್ಮ ಹೊಸ ವ್ಯವಹಾರ ವಿಭಾಗದ ಆಡಳಿತ ಅಧಿಕಾರಿಯಾಗಿದ್ದ ಶ್ರೀ ಟಿ ಎಂ ಪರಶಿವಮೂರ್ತಿ ಅವರು ಹಾಗೂ ಪಕ್ಕದಲ್ಲಿ ಇದ್ದ ಯೋಜನಾ ವಿಭಾಗದ ಸಹಾಯಕ ವಿಭಾಗ ಅಧಿಕಾರಿಯಾದ ಶ್ರೀ ಅಶ್ವತ್ಥ ನಾರಾಯಣಾಚಾರ್ ಅವರು ಇದ್ದರು. ನಂಜನಗೂಡಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿರುವಾಗ ಅಶ್ವತ್ಥನಾರಾಯಣಾಚಾರ್ ಅವರೇ ನಮ್ಮ ಶಾಖಾಧಿಕಾರಿ ಆಗಿದ್ದರು . ಆ ಸಮಿತಿಯ ಅಧ್ಯಕ್ಷರಾಗಿ ಗೃಹ ಸಾಲ ವಿಭಾಗದ ಶ್ರೀ ನಾಗರಾಜ್ ಅವರು ನಿಯುಕ್ತರಾಗಿದ್ದರು. ವಿಭಾಗಿಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಒಂದು ಅನುಕೂಲವೆಂದರೆ ಸಂದರ್ಶನ ಸಮಿತಿಯ ಎಲ್ಲರೂ ನಮಗೆ ತಿಳಿದವರಾಗಿ ಜೊತೆಯಲ್ಲಿ ಕೆಲಸ ಮಾಡಿದವರಾಗಿದ್ದರಿಂದ ಸಂದರ್ಶನ ಎಂದರೆ ಒಂದು ವಿಶೇಷ ಭಯ ಇರುವುದಿಲ್ಲ. ಸಂದರ್ಶನದ ಸ್ವಲ್ಪ ದಿನ ಮುಂಚೆ ಒಂದು ಹೊಸ ಚೂಡಿದಾರ್ ಕೊಂಡಿದ್ದೆ .ಅದನ್ನೇ ಸಂದರ್ಶನಕ್ಕೆ ಹಾಕಿಕೊಂಡು ಹೋಗುವುದು ಎಂದು ನಿರ್ಧರಿಸಿದೆ. ನನಗೆ ಇಷ್ಟವಾದ ಬೂದಿ ಬಣ್ಣದ ಡ್ರೆಸ್ ಅದು. ಸಂದರ್ಶನದ ಕೊಠಡಿ ಒಳಗೆ ಪ್ರವೇಶಿಸಿ ಅವರುಗಳಿಗೆ ವಂದಿಸಿ ಕುರ್ಚಿಯಲ್ಲಿ ಕುಳಿತಿದ್ದಾಯಿತು. ಪರಶಿವಮೂರ್ತಿಯವರು ನಗುನಗುತ್ತಲೆ ಏನ್ರೀ ಕೇಳೋದು ನಿಮ್ಮನ್ನ ನೀವೇ ತಯಾರು ಮಾಡಿ ಕೊಟ್ಟಿರುವುದು ಈ ಪಟ್ಟಿ ಎಂದರು. ನಂತರ ನಮ್ಮ ಹೊಸ ವ್ಯವಹಾರ ವಿಭಾಗದಲ್ಲಿ ಅವರು ಹೊಸಬರಾಗಿದ್ದಾಗ ಅವರಿಗೆ ಅಲ್ಲಿನ ಕೆಲಸ ನಾನೇ ಹೇಳಿಕೊಟ್ಟಿದ್ದು. ಹಾಗಾಗಿ ಏನು ಕೇಳಲಿ ಎಂದು ತಮಾಷೆ ಮಾಡಿದ್ದರು. ಅಶ್ವಥನಾರಾಯಣಚಾರ್ ಅವರು ಸಹ ಒಂದೆರಡು ಔಪಚಾರಿಕ ಪ್ರಶ್ನೆಗಳನ್ನು ಕೇಳಿದರು ಅಷ್ಟೇ. ನಾಗರಾಜ ಅವರು ಪಾಲಿಸಿ ಸರ್ವಿಸ್ ಗೆ ಸಂಬಂಧಿಸಿದಂತೆ ಒಂದೆರಡು ಪ್ರಶ್ನೆಗಳನ್ನು ಕೇಳಿದರು. ನನಗೆ ನೆನಪಿರುವುದು ಕಚೇರಿಯಲ್ಲೇ ಪಾಲಿಸಿ ಬಾಂಡ್ ಕಳೆದು ಹೋದಾಗ ಅದರ ತಯಾರಿಕೆಗಾಗಿ ಪಾಲಿಸಿದಾರರಿಂದ ವಸೂಲು ಮಾಡಬೇಕಾದ ಹಣ ಎಷ್ಟು ಎಂದು. ಕಚೇರಿಯಲ್ಲಿ ನಾವೇ ಪಾಲಿಸಿ ಕಳೆದು ಹಾಕಿದಾಗ ನಮ್ಮ ಖರ್ಚಿನಲ್ಲೇ ನಕಲು ಪ್ರತಿಯನ್ನು ತಯಾರು ಮಾಡಬೇಕು ಅದಕ್ಕಾಗಿ ಒಂದು ಆಫೀಸ್ ನೋಟ್ ತಯಾರು ಮಾಡಬೇಕು. ಪಾಲಿಸಿದಾರರಿಂದ ಯಾವ ಹಣವನ್ನು ಪಡೆಯುವಂತಿಲ್ಲ ಎಂದು ಹೇಳಿದ್ದಕ್ಕೆ ಅವರು ತಲೆಯಾಡಿಸಿದರು ಅಷ್ಟೇ. 10 ನಿಮಿಷಗಳಲ್ಲಿ ನನ್ನ ಸಂದರ್ಶನ ಮುಗಿದು ಹೋಗಿತ್ತು ನಮ್ಮ ವಿಭಾಗದ ಎದುರುಗಡೆಯ ಕೊಠಡಿಯಲ್ಲಿ ಸಂದರ್ಶನ ನಡೆದದ್ದು ಹಾಗಾಗಿ ಬಂದವರು ಎಲ್ಲ ನನ್ನ ಸೀಟಿನ ಬಳಿ ಕುಳಿತಿರುತ್ತಿದ್ದರು. ಕೆಲವರನ್ನಂತೂ ಬಹಳ ಪ್ರಶ್ನೆ ಕೇಳಿದ್ದರು ಎಂದು ತಿಳಿಯಿತು. ಹೀಗೆ ಪದೋನ್ನತಿಗೆ ಆಯ್ಕೆ ಮಾಡುವಾಗ ನಾವು ಮಾಡಿದ ಸೇವಾ ಅವಧಿ ಹಾಗೂ ನಮಗೆ ಪ್ರತಿ ವರ್ಷ ಕೊಡುವ ನಮ್ಮ ಸಿ ಅರ್ ಅಂದರೆ ನಮ್ಮ ಕೆಲಸದ ಬಗೆಗಿನ ವಾರ್ಷಿಕ ವರದಿ ಮತ್ತು ಸಂದರ್ಶನದಲ್ಲಿ ನಾವು ಕಳಿಸಿದ ಅಂಕ ಇವೆಲ್ಲವುಗಳನ್ನು ಆಧರಿಸಿ ಅಂಕೆಗಳನ್ನು ಕೊಡುತ್ತಾರೆ. ನಮ್ಮ ಜೀವ ವಿಮಾ ನಿಗಮದ ಒಂದು ಅಲಿಖಿತ ನಿಯಮದಂತೆ ಅಂದು ಶನಿವಾರ ಮಧ್ಯಾಹ್ನ ಫಲಿತಾಂಶ ಹೊರಬಿದ್ದಿತ್ತು. ಅರ್ಹತೆವಾರು ಪಟ್ಟಿಯಲ್ಲಿ ನನ್ನದು ಮೊದಲ ಹೆಸರು. ಇಷ್ಟೆಲ್ಲಾ ಆದರೂ ಒಂದು ರೀತಿಯ ಸಂಧಿಗ್ಧ. ಹೋಗುವುದು ಬೇಡವೋ ಎಂದು. ನೋಡೋಣ ಎಲ್ಲಿಗೆ ಪೋಸ್ಟಿಂಗ್ ಸಿಕ್ಕತ್ತೆ ಅದರ ಮೇಲೆ ನಿರ್ಧರಿಸೋಣ ಎಂದುಕೊಂಡಿದ್ದು. ನಾನು ಆಯ್ಕೆ ಮಾಡಿ ಕೊಟ್ಟಿದ್ದ ಸ್ಥಳಗಳು ಕೆ ಆರ್ ನಗರ ಹುಣಸೂರು ಮತ್ತು ಚಾಮರಾಜನಗರ ಆದರೆ ನನ್ನ ಜೊತೆ ಆಯ್ಕೆಯಾದವರು ನನಗಿಂತ ವಯಸ್ಸಿನಲ್ಲಿ ಸೀನಿಯರ್ ಆಗಿದ್ದರಿಂದ ದಿನವು ಓಡಾಡಬಹುದಾದ ಈ ಸ್ಥಳಗಳು ಸಹ ನನಗೆ ಸಿಗುವ ಸಾಧ್ಯತೆ ಇರಲಿಲ್ಲ. ಆ ಪಟ್ಟಿ ಬಿಟ್ಟರೆ ಮುಂದೆ ಒಂದು ಕಂಟಿನ್ಜೆನ್ಸಿ ಪಟ್ಟಿಯಲ್ಲಿ ಕೆ ಆರ್ ಪೇಟೆ ಸಿಗುವ ಸಾಧ್ಯತೆ ಇತ್ತು. ದಿನವೂ ಓಡಾಡಬಹುದಾದರು ಹೆಚ್ಚು ಬಸ್ಸುಗಳು ಇರಲಿಲ್ಲ ಮತ್ತು ರಸ್ತೆ ಸಹ ತುಂಬಾ ಕೆಟ್ಟದಾಗಿ ಇತ್ತು . ನಂಜನಗೂಡಿನಲ್ಲಿ ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಸುಲೋಚನಾ ಅವರಿಗೂ ಪದೋನ್ನತಿ ಸಿಕ್ಕಿದ್ದು ಅವರು ಸಹ ಪೋಸ್ಟಿಂಗ್ ವಿಷಯದಲ್ಲಿ ಸಂದಿಗ್ಧದಲ್ಲಿ ಇದ್ದರು ನಮ್ಮ ಆಡಳಿತ ಅಧಿಕಾರಿಯಾಗಿದ್ದ ಟಿ ಎಂ ಪರಶಿವಮೂರ್ತಿ ಅವರು ಸುಲೋಚನಾ ಅವರಿಗೆ ಬಹಳ ಆಪ್ತರು ಅವರು ನಮ್ಮಿಬ್ಬರ ಜೊತೆ ಮಾತನಾಡಿ ನಿಮ್ಮಿಬ್ಬರ ಸ್ವಭಾವ ತುಂಬಾ ಚೆನ್ನಾಗಿ ಹೊಂದುತ್ತದೆ ಇಬ್ಬರು ಮಾತನಾಡಿಕೊಂಡು ಒಂದೇ ಕಡೆಗೆ ಪೋಸ್ಟಿಂಗ್ ತೆಗೆದುಕೊಳ್ಳಿ ಒಂದು ವರ್ಷ ಒಟ್ಟಿಗೆ ಇದ್ದು ನಂತರ ವಾಪಸ್ ಬರಬಹುದು ಎಂದರು. ರವೀಶ್ ಮತ್ತು ನನ್ನ ತಂದೆ ಸಹ ದಿನ ಓಡಾಡಿ ಕಷ್ಟಪಡುವುದರ ಬದಲು ಇದು ಒಳ್ಳೆಯ ಸಲಹೆ ಎಂದಾಗ ಸಂಬಂಧ ಪಟ್ಟವರೊಡನೆ ಮಾತನಾಡಿದಾಗ ಇಬ್ಬರನ್ನು ಒಟ್ಟಿಗೆ ಸಕಲೇಶಪುರಕ್ಕೆ ಪೋಸ್ಟಿಂಗ್ ಮಾಡಿದರು. ಈಗಾಗಲೇ ಮೊದಲ ವರ್ಷಗಳಲ್ಲಿ ಹೋದವರು ಅಲ್ಲಿ ಒಂದು ಪ್ಲೇಯಿಂಗ್ ಗೆಸ್ಟ್ ಮನೆಯಲ್ಲಿ ಇದ್ದರು ಎಂಬ ವಿಷಯ ತಿಳಿದು ಹೋಗೋಣ ಎಂದು ನಾನು ಸುಲೋಚನಾ ನಿರ್ಧರಿಸಿದೆವು.ರವೀಶ್ ಅವರ ಊರಿನ ಕೆಲವರು ಆಗ ಸಕಲೇಶಪುರದಲ್ಲೇ ಇದ್ದುದರಿಂದ ಅವರ ಸಹಾಯ ಪಡೆಯಬಹುದು ಎಂಬ ಒಂದು ನಂಬಿಕೆಯು ಇತ್ತು.ಸರಿ ಹೋಗುವುದು ನಿರ್ಧಾರವಾಗಿ ವಿಭಾಗಿಯ ಕಚೇರಿಯ ಎಲ್ಲರಿಗೂ ಸಿಹಿ ಹಂಚಿದ್ದು ಆಯಿತು ನಮ್ಮ ವಿಭಾಗದವರು ಮತ್ತು ನನಗೆ ಆಪ್ತರಾಗಿದ್ದ ಸರಸ್ವತಿ ಕಮಲ ಮತ್ತು ಸುಮಾ ಇವರುಗಳನ್ನು ಕರೆದುಕೊಂಡು ಹೋಗಿ ಫಾರಸ್ ಹೋಟೆಲಿನಲ್ಲಿ ಪಾರ್ಟಿ ಕೊಡಿಸಿದ್ದು ಆಯಿತು. ಸುಮಾ ಮತ್ತು ಕಮಲ ಒಂದು ಚೆಂದದ ವ್ಯಾನಿಟಿ ಬ್ಯಾಗ್ ಅನ್ನು ನಮಗೆ ಗಿಫ್ಟ್ ಆಗಿ ನೀಡಿದರು. ನಮ್ಮ ಹೊಸ ವ್ಯವಹಾರ ವಿಭಾಗದವರು ಸೇರಿಕೊಂಡು ಒಂದು ಸೂಟ್ಕೇಸ್ ಉಡುಗೊರೆ ನೀಡಿದರು. ನಾನು ತುಂಬಾ ಅಮೃತಾಂಜನ್ ಅಥವಾ ಜಂಡು ಬಾಮನ್ನು ಹಣೆಗೆ ಹಚ್ಚಿಕೊಳ್ಳುತ್ತಲೇ ಇರುತ್ತಿದ್ದೆ .ಅದಕ್ಕೆ ಮುರಳಿಯವರು ರೇಗಿಸಿ ಇಲ್ಲಿಯೇ ಇಷ್ಟೊಂದು ಬಳಸುತ್ತೀರಿ . ಇನ್ನು ಆ ಥಂಡಿ ಪ್ರದೇಶದಲ್ಲಿ ಎಷ್ಟೊಂದು ಬೇಕಾಗುತ್ತದೆ. ಒಂದು ಡಝನ್ ಗಿಫ್ಟ್ ಕೊಡೋಣವಾ ಅಂತ ರೇಗಿಸಿದ್ದರು. ಅಂತೂ ಏಳು ವರ್ಷಗಳಿಂದ ಇದ್ದ ವಿಭಾಗೀಯ ಕಚೇರಿಯನ್ನು ಬಿಡಲು ತುಂಬಾನೇ ಬೇಸರ ಅನಿಸಿತು. ಆದರೂ ಹೊಸ ಜಾಗ ಹೊಸ ಸವಾಲುಗಳು ಒಂದು ರೀತಿಯ ಥ್ರಿಲ್ ಎಂದು ಕೂಡ ಎದುರು ನೋಡುತ್ತಿದ್ದೆ. ಸುಜಾತಾ ರವೀಶ್






