ರತ್ನರಾಯಮಲ್ಲ ಅವರ ಗಜಲ್ -ಮಿರ್ಜಾ ಗಾಲಿಬ್ ಬಗ್ಗೆ
ಕಾವ್ಯಸಂಗಾತಿ ರತ್ನರಾಯಮಲ್ಲ ಗಜಲ್ ಅನುದಿನ ಹೊಸ ಹೊಸ ಪಾಠಗಳನ್ನು ಕಲಿಸುತಿದ್ದಿಯಾ ಗಾಲಿಬ್ನಮ್ಮವರಿಂದಾಗುವ ನೋವುಗಳನ್ನು ಮರಿಸುತಿದ್ದಿಯಾ ಗಾಲಿಬ್ ಗಾಲಿಬ್ ಎಂಬುದೇ ನನಗೊಂದು ಸಂಜೀವಿನಿ ಬರಹದಲೆಯಲಿಷೇರ್ -ಶಾಯರಿಯಿಂದ ನೀನು ಹುಚ್ಚು ಹಿಡಿಸುತಿದ್ದಿಯಾ ಗಾಲಿಬ್ ಬದುಕಿನ ಏರಿಳಿತದಲಿ ನಿನ್ನ ಜೀವನವೇ ಸುಂದರ ಪ್ರಯೋಗ ಶಾಲೆಕಂಬನಿ ಕಡಲಲಿ ಒಲವಿಂದ ಕೈ ಹಿಡಿದು ನಗಿಸುತಿದ್ದಿಯಾ ಗಾಲಿಬ್ ನಡೆಯುತಿರಲು ಕಲ್ಲು ಮುಳ್ಳಿನ ಹಾದಿ ಮೇಲೂ ಪ್ರೀತಿ ಉಕ್ಕುವುದುಗಜಲ್ ಗುರುವಾಗಿ ದುನಿಯಾದಲಿ ದೀಪ ಹಚ್ಚಿಸುತಿದ್ದಿಯಾ ಗಾಲಿಬ್ ಹತಾಶೆಯ ಒಡಲಲಿ ಮಲ್ಲಿಗೆಯ ಸುಮಕೆ ನೀರುಣಿಸಿ ಪೋಷಿಸಿರುವೆನಿನ್ನ ಬಾಳ ಪುಟಗಳಿಂದ ಮಹಾಕಾವ್ಯವನು ಓದಿಸುತಿದ್ದಿಯಾ ಗಾಲಿಬ್ ರತ್ನರಾಯಮಲ್ಲ
ರತ್ನರಾಯಮಲ್ಲ ಅವರ ಗಜಲ್ -ಮಿರ್ಜಾ ಗಾಲಿಬ್ ಬಗ್ಗೆ Read Post »









