ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-13 ಅರ್ಜುನ ಉವಾಚ ವಿಶ್ವನಾಥ ಎನ್‌ ನೇರಳೆಕಟ್ಟೆ ಕದನಾಂತರಂಗದಲ್ಲಿ ಅನಲ ನರ್ತನ                         ಕದನಾಂತರಂಗದಲ್ಲಿ ಅನಲ ನರ್ತನ ಪ್ರವೀರನೆಂಬ ವೀರ ಮೇಧಾಶ್ವವನ್ನು ಕಟ್ಟಿಹಾಕಿದ್ದಾನೆ ಎಂಬ ಸುದ್ದಿಯನ್ನು ನನ್ನಲ್ಲಿಗೆ ಹೊತ್ತುತಂದರು ಕುದುರೆಯ ಮೈಗಾವಲಿಗಿದ್ದ ಭಟರು. ಗೆಲ್ಲುವ ಸಾಮರ್ಥ್ಯವಿದ್ದರೆ ಆ ಪಾರ್ಥ ನನ್ನೆದುರು ಯುದ್ಧಕ್ಕೆ ಬರಲಿ ಎಂದಿದ್ದನಂತೆ ಪ್ರವೀರ.      ನಗುವೂ ಬಂತು. ಕೋಪವೂ ಉಕ್ಕಿತು. ಇಂತಹ ಸಾಕಷ್ಟು ಯುದ್ಧಗಳನ್ನು ಕಾಣುವುದಕ್ಕಿದೆ ಮುಂದೆ ಎಂದು ಸಾಮರ್ಥ್ಯವನ್ನು ಮುಂದುಮಾಡಿಕೊಂಡೇ ಬಂದವ ನಾನು. ಹಾಗಿರುವಾಗ ಆ ಪ್ರವೀರ ಗೆಲ್ಲುವ ಸಾಮರ್ಥ್ಯ ಇದ್ದರೆ ಎಂಬ ಮಾತನ್ನು ಆಡಿದನಲ್ಲಾ ಎಂಬ ಯೋಚನೆ ನಗುವನ್ನು ಮೂಡಿಸಿತು. ಪಾಂಡವವೀರರಿಗೆ ಸೇರಿದ ಅಶ್ವವಿದು ಎಂದು ಅರಿವಾದ ಬಳಿಕವೂ ಶರಣು ಬರದೆ ಕುದುರೆಯನ್ನು ಕಟ್ಟುವ ಭಂಡಧೈರ್ಯ ತೋರಿದನಲ್ಲಾ ಎಂದು ಕೋಪ ಬಂತು.       ಸೈನಿಕರನ್ನೆಲ್ಲಾ ಸನ್ನದ್ಧಗೊಳಿಸಿದೆ. ಚತುರಂಗ ಬಲಗಳೂ ಬಲಪಡೆದು ನಿಂತವು. ಮಾಹಿಷ್ಮತಿ ನಗರದ ಮೇಲೆ ಧಾಳಿಯಿರಿಸಿದೆವು. ಮೇಧಾಶ್ವವನ್ನು ಬಿಡಿಸಿಕೊಳ್ಳಬೇಕೆಂಬ ಉತ್ಸುಕತೆಯಲ್ಲಿದ್ದ ನಮ್ಮ ಕಡೆಯ ಸೈನಿಕರಲ್ಲಿ ಅಶ್ವಸದೃಶ ಶಕ್ತಿ ನೆಲೆಗೊಂಡಿತ್ತು. ನಮ್ಮ ಧಾಳಿಯ ಬಿರುಸಿಗೆ ಧೂಳೆದ್ದಿತು. ಜೊತೆಗೆ ವಾದ್ಯಗಳ ಆರ್ಭಟ. ಪ್ರವಾಹವೇ ಬಂತೇನೋ ಎನ್ನುವಂತೆ ಬೆದರಿದರು ಮಾಹಿಷ್ಮತಿ ಪಟ್ಟಣದ ಜನರು.      ಉಕ್ಕಿದ ಕಡಲಿನ ಬಗೆಯಲ್ಲಿ, ಪ್ರಳಯ ಕಾಲದ ಕಾರ್ಮೋಡದ ತೆರದಲ್ಲಿ ಹೋಗಿ ಮುತ್ತಿದೆವು ಕುದುರೆಯನ್ನು ವಶಪಡಿಸಿಕೊಂಡಿದ್ದ ವೀರ ಪ್ರವೀರನನ್ನು. ಹುಚ್ಚು ಧೈರ್ಯ ಅವನದು ಎಂದುಕೊಂಡಿದ್ದೆ ಮೊದಲಿಗೆ, ಅವನು ಕುದುರೆಯನ್ನು ಕಟ್ಟಿಹಾಕಿದ ವಿಚಾರ ಕೇಳಿದಾಗ. ಆದರೆ ಈಗ ಸೇನೆಸಹಿತ ಅವನನ್ನು ಸುತ್ತುವರಿದಾಗ ಅವನ ನಿಜ ಪರಾಕ್ರಮ ನನ್ನರಿವಿಗೆ ಬಂತು. ನನ್ನನ್ನು ಕಂಡೊಡನೆಯೇ ರಥವನ್ನು ಭರದಿಂದ ಓಡಿಸಿಯಾನು ಎಂಬ ಅಂದಾಜು ನನ್ನದು. ಆದರೆ ಅವನು ಚಲಿಸದೆಯೇ ನಿಂತ. ಕೆಲವೊಮ್ಮೆ ಹಾಗೆಯೇ. ಏನು ಮಾಡಬೇಕೆಂದು ತೋಚದಾದಾಗಲೂ ಶರೀರಕ್ಕೊಂದು ಸ್ಥಿರತೆ ಒದಗುತ್ತದೆ. ಅಂತಹದ್ದೇ ಸ್ಥಿರತೆ ಆಗಿರಬೇಕಿದು ಎಂದುಕೊಂಡೆ. ಅಲ್ಲ! ನಿಜಬಗೆಯ ದಿಟ್ಟತನದಲ್ಲಿ ರಥದಲ್ಲಿಯೇ ಕುಳಿತಿದ್ದ ಪ್ರವೀರ. ವೀರರು ಸುತ್ತುವರಿದಾಗಲೂ ಅಂಜದೆ ಅಳುಕದೆ ತೇರಿನಲ್ಲಿ ಕುಳಿತಿದ್ದ ಅವನ ಆ ನಿಲುವು ಪರಮ ವೈರಾಗಿಯನ್ನು ನೆನಪಿಸುವಂತಿತ್ತು. ಯುದ್ಧದ ಅಂತಿಮ ಪರಿಣಾಮವನ್ನು ಮನಗಂಡ ತತ್ವಜ್ಞಾನಿಯಂತೆ ಕುಳಿತಿದ್ದನಾತ. ಏಕಾಂಗಿಯಾಗಿ ಹೋರಾಟಕ್ಕಿಳಿದ ಆತ ನಮ್ಮ ಸೈನಿಕರನ್ನೆಲ್ಲಾ ಸತತ ಬಾಣಪ್ರಯೋಗಗಳಿಂದ ಕೊಂದುಹಾಕಿದ. ಸತ್ವಯುತನಿವನು ಎನ್ನುವುದು ನನಗೆ ಖಚಿತವಾಯಿತು.      ಹೀಗಿದ್ದಾಗಲೇ ನೀಲಧ್ವಜ ಸೇನೆಸಹಿತನಾಗಿ ನಮ್ಮನ್ನು ಎದುರಿಸುವುದಕ್ಕೆ ಬಂದ. ಒಂಟಿಯಾಗಿ ಹೋರಾಡುತ್ತಿದ್ದ ಪ್ರವೀರನಿಗೆ ಸಮಸ್ತ ಬಲವದು ದೊರಕಿದಂತಾಯಿತು. ಅವರ ಶಕ್ತಿಯುತವಾದ ಹೋರಾಟ ನಮ್ಮ ಸೇನೆಯನ್ನು ಕಳೆಗುಂದಿಸಿತು.      ಸೇನೆಯ ಮುಂಚೂಣಿಯಲ್ಲಿದ್ದ ನಾನು ನಾಯಕತ್ವವನ್ನು ಸರಿಯಾಗಿ ನಿಭಾಯಿಸಲಾಗದೆ ಎಡವಿದೆ ಎಂಬ ಭಾವ ನನ್ನನ್ನು ಆವರಿಸಿತು. ನನ್ನ ಅಂತರಂಗದೊಳಗೆ ಯಾರೋ ಬೆಂಕಿ ಹಚ್ಚಿದ ಅನುಭವ. ಮೊದಲ ಯುದ್ಧದಲ್ಲಿಯೇ ಹೀಗಾದರೆ ಇನ್ನುಳಿದ ಕದನಗಳ ಗತಿಯೇನು ಎಂಬ ಯೋಚನೆ ಬಂತು. ಅಣ್ಣ ಧರ್ಮಜ ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳದವನಾದೆನೇ ಎಂಬ ಅಳುಕು ಮೂಡಿತು. ಬಗೆಬಗೆಯ ಭಾವಗಳ ನೆಲೆವೀಡಾಗಿಹೋದ ನನ್ನ ಚಿತ್ತ ಯುದ್ಧದತ್ತ ಏಕಾಗ್ರವಾಗಲೇ ಇಲ್ಲ.     ಸೋಲುತ್ತೇನೆ ಎಂಬ ಭಾವ ದೃಢವಾದಾಗಲೇ ‘ಇಲ್ಲ! ಏನೆಂದರೂ ಬಿಡಲಾರೆ’ ಎಂಬ ಛಲ ನಮ್ಮಲ್ಲಿ ಮೂಡುವುದು. ಯುದ್ಧದಲ್ಲಿಯೂ ಹೀಗೆಯೇ. ಬದುಕಿನಲ್ಲಿಯೂ ಹೀಗೆಯೇ. ಎದುರಿಗಿದ್ದ ಮಾಹಿಷ್ಮತಿ ಸೇನೆ ನನ್ನ ಪಾಲಿಗೆ ಒಗಟಿನಂತಾಗಿತ್ತು. ಬಿಡಿಸುತ್ತೇನೆ ಈ ಒಗಟನ್ನು ಕುದುರೆಯನ್ನು ಬಿಡಿಸುವುದಕ್ಕೋಸ್ಕರ ಎಂದುಕೊAಡೆ.     ಕೋಪಾತಿರೇಕದ ಆ ಅವಸ್ಥೆಯಲ್ಲಿ ಬಿಲ್ಲಿಗೆ ಕೈಯ್ಯಿಕ್ಕಿದೆ. ಹೆದೆಯನ್ನು ಮಿಡಿದೆ. ಎದ್ದ ನಾದ ಮಾಹಿಷ್ಮತಿ ಸೇನೆಯನ್ನು ಯಮಪುರಿಗಟ್ಟುವ ಮರಣಶ್ರುತಿಯಾಯಿತು. ಮಳೆಗಾಲದ ಕೊನೆಕೊನೆಯಲ್ಲಿ ಹಠಹಿಡಿದು ಸುರಿವ ಮಳೆಯಂತೆ ಅಬ್ಬರಿಸಿದೆ. ನೀಲಧ್ವಜನ ಸೇನೆಯದು ದಿಕ್ಕೆಟ್ಟುಹೋಯಿತು.      ಕಂಗೆಟ್ಟ ನೀಲಧ್ವಜ ಹೋಗಿ ಸಹಾಯ ಕೇಳಿದ್ದು ಅಗ್ನಿಯಲ್ಲಿ. ಅನಲ ನೀಲಧ್ವಜನ ಅಳಿಯ. ಅವನ ಮಗಳನ್ನು ಮದುವೆಯಾದವನು. ಮಾಹಿಷ್ಮತಿ ಪಟ್ಟಣದಲ್ಲಿಯೇ ನೆಲೆಸಿದ್ದವನು.      ಮಾವನ ಕೋರಿಕೆಗೆ ಬೆಲೆಯಿತ್ತ ಅಗ್ನಿ, ನಮ್ಮಿಡೀ ಸೈನ್ಯವನ್ನು ಕರುಣೆಯಿಲ್ಲದೆಯೇ ದಹಿಸತೊಡಗಿದ. ಅನಲನ ಕೆನ್ನರ್ತನ ನಮ್ಮ ಕಡೆಯ ಸೈನಿಕರನ್ನು ಕಪ್ಪಗಾಗಿಸಿತು. ಅವನ ಚಲನೆ ನಮ್ಮವರನ್ನು ಅಚಲರಾಗಿಸಿತು. ಅವನ ತೇಜಸ್ಸು ಹೆಚ್ಚಿದಂತೆ ನಮ್ಮವರೆಲ್ಲಾ ತೇಜಶೂನ್ಯರಾದರು. ದೆಸೆದೆಸೆಗಳಲ್ಲಿ ಭೀಕರವಾದ ಹೊಗೆ. ದಿಕ್ಕುದಿಕ್ಕುಗಳಲ್ಲಿ ಅನಲ ಜ್ವಾಲೆ. ಯಾರಲ್ಲಿಯೂ ಭೇದ ತೋರದೆ ಎಲ್ಲರನ್ನೂ ಆಹುತಿಗೊಳ್ಳತೊಡಗಿದ ಅನಲ.      ನನ್ನಲ್ಲಿ ಅತೀವ ಆತಂಕ ಮನೆಮಾಡಿತು. ಅಗ್ನಿಯ ಶಕ್ತಿಯೇನೆಂಬುದರ ಅರಿವಿತ್ತು ನನಗೆ. ಅವನ ಸಾಮರ್ಥ್ಯವನ್ನು ನಾನು ಕಂಡದ್ದು ಇದೇ ಮೊದಲೇನಲ್ಲ. ಅಂದು ಖಾಂಡವ ವನವನ್ನು ದಹಿಸಿದ ಅವನ ಉರಿಹಸಿವಿನ ತೀಕ್ಷ್ಣತೆಯನ್ನು ಸಾಮಿಪ್ಯದಿಂದ ದರ್ಶಿಸಿದವ ನಾನು. ಹಾಗಿರುವಾಗ ಅಗ್ನಿಯ ಈ ಬಗೆ ಹೀಗೆಯೇ ಮುಂದುವರಿದರೆ ಅಶ್ವಮೇಧದ ನೆಪದಲ್ಲಿ ಬಂದ ನಾವೆಲ್ಲರೂ ಅಗ್ನಿಯೊಡಲಿಗೆ ಮೇಧಾಶ್ವಗಳಾಗುವುದು ಖಚಿತ ಎನಿಸಿತು ನನಗೆ.      ಶಕ್ತಿಯಿಂದ ಗೆಲ್ಲಲಾಗದ್ದನ್ನು ಯುಕ್ತಿಯಿಂದ ಗೆಲ್ಲಬೇಕು. ಇದು ಲೋಕರೂಢಿ. ಜಗದ ನಿಯಮ. ನುಡಿಯಿಂದ ಅನಲನನ್ನು ಮೆಚ್ಚಿಸಿ ಅವನನ್ನು ತೃಪ್ತಗೊಳಿಸುವ ತಂತ್ರ ಹೂಡಿದೆ.     “ನೀನೇನೂ ನನಗೆ ಅಪರಿಚಿತನಲ್ಲ. ನಾನು ಗಾಂಡೀವಿ ಎನಿಸಿಕೊಳ್ಳಲು ಕಾರಣವಾದ ಗಾಂಡೀವ ಧನುಸ್ಸು ದೊರೆತದ್ದೇ ನಿನ್ನಿಂದ. ನನ್ನ ಮಡದಿ ದ್ರೌಪದಿ ನಿನ್ನಿಂದಲೇ ಉದಿಸಿಬಂದವಳು” ಎಂದೆಲ್ಲಾ ಹೇಳಿ ನನಗೂ ಅವನಿಗೂ ಇರುವ ಬಾಂಧವ್ಯದ ನೆನಪು ಮಾಡಿದೆ. ವೇದವ್ಯಾಸ ಮುನಿಗಳು ಹೇಳಿದ್ದಕ್ಕಾಗಿ, ಶ್ರೀಕೃಷ್ಣ ಸೂಚನೆ ಇತ್ತದ್ದಕ್ಕಾಗಿ ಈ ಯಾಗ; ಈ ಯುದ್ಧ. ಇಲ್ಲವಾದರೆ ಇದೆಲ್ಲಾ ಬೇಕಿರಲಿಲ್ಲ ಎಂದೆ.     ಅಗ್ನಿ ತಂಪಾದ. ದಹಿಸುವುದನ್ನು ನಿಲ್ಲಿಸಿದ. ನನ್ನ ಮಾತಿನಲ್ಲಿದ್ದ ದೈನ್ಯತೆ ಅವನನ್ನು ದಯಾಪರನನ್ನಾಗಿಸಿತು. ಮಗಳನಿತ್ತ ಮಾವನಾದ ನೀಲಧ್ವಜನಲ್ಲಿ ಯುದ್ಧ ನಿಲ್ಲಿಸುವಂತೆ ಸೂಚಿಸಿದ. ಅಳಿಯ ಅಗ್ನಿಯ ಮಾತನ್ನು ಅಂಗೀಕರಿಸಿದ ನೀಲಧ್ವಜ.      ಯುದ್ಧ ನಿಂತಿತು ಎಂದು ನಾನು ನಿರಾಳತೆ ಹೊಂದುವಷ್ಟರಲ್ಲಿ ನನ್ನನ್ನು ಮತ್ತೆ ಚಿಂತೆಗೀಡುಮಾಡುವ ಸುದ್ದಿಯೊಂದು ಬಂದು ತಲುಪಿತು…                                             ಡಾ. ವಿಶ್ವನಾಥ ಎನ್ ನೇರಳಕಟ್ಟೆ  

Read Post »

ಅಂಕಣ ಸಂಗಾತಿ, ಭಾರತದಮಹಿಳಾ ಮುಖ್ಯಮಂತ್ರಿಗಳು

ಅಂಕಣ ಸಂಗಾತಿ ಸರಣಿಬರಹಗಳು ಭಾರತದ ಮಹಿಳಾ ಮುಖ್ಯಮಂತ್ರಿಗಳು ಸುರೇಖಾ ರಾಠೋಡ್ ವಸುಂಧರಾ ರಾಜೆ ಸಿಂದಿಯಾ ರಾಜಸ್ಥಾನದ ಮೊದಲ ಮಹಿಳಾ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ     (ಆಡಳಿತಾವಧಿ: ಡಿಸೆಂಬರ್ ೨೦೦೮ ರಿಂದ ಡಿಸೆಂಬರ್ ೨೦೧೮ವರೆಗೆ, ೧೦ ವರ್ಷ೯ ದಿನಗಳು)        ಇವರು ೮ ಮಾರ್ಚ್ ೧೯೫೩ರಂದು ಬಾಂಬೆಯಲ್ಲಿ ಜನಿಸಿದರು. ಇವರು ಸಿಂಧಿಯಾ ರಾಜಮನೆತನದವರು. ಇವರ ತಂದೆ ಜೀವಾಜಿರಾವ್ ತಾಯಿ ವಿಜಯ ರಾಜೆ ಸಿಂಧಿಯಾ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮಿಳುನಾಡಿನ ಕೊಡೈಕೆನಾಲ್‌ನಲ್ಲಿರುವ ಪ್ರೆಸೆಂಟೀಶನ್ ಕಾನ್ವಂಟ್ ಶಾಲೆಯಲ್ಲಿ ಪಡೆದುಕೊಂಡರು. ತಮ್ಮ ಉನ್ನತ ಶಿಕ್ಷಣವನ್ನು ಮುಂಬೈನ ಸೋಫಿಯಾ ಕಾಲೇಜ್ ಫಾರ್ ವುಮೆನ್‌ನಿಂದ ಅರ್ಥಶಾಸ್ತç ಮತ್ತು ರಾಜಕೀಯ ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದರು.       ಇವರು ೧೭ ನವೆಂಬರ್ ೧೯೭೯ರಂದು ರಾಜಮನೆತನದ ಧೋಲ್ಪರ್ ಕುಟುಂಬದ ಮಹಾರಾಜ್ ರಾಣಾ ಹೇಮಂತ್ ಸಿಂಗ್ ಅವರನ್ನು ವಿವಾಹವಾದರು. ಕೆಲ ಕಾರಣಗಳಿಂದ ವಿವಾಹವಾಗಿ ಒಂದು ವರ್ಷದಲ್ಲಿಯೇ ಬೇರೆಯಾದರು. ಇವರಿಗೆ ದುಶ್ಯಂತ್ ಸಿಂಗ ಎಂಬ ಮಗನಿದ್ದಾನೆ.         ವಸುಂದರಾ ರಾಜೆಯವರು ೧೯೮೪ರಲ್ಲಿ ರಾಜಕೀಯ ಪ್ರವೇಶಿಸಿದರು. ಇವರು ಭಾರತೀಯ ಜನತಾ ಪಕ್ಷದ ಕಾರ್ಯಕಾರಣಿ ಸದಸ್ಯರಾಗಿ ನೇಮಕಗೊಂಡರು. ೧೯೮೫ -೧೯೯೦ ರಲ್ಲಿ ಧೋಲ್‌ಪುರದಿಂದ ೮ನೇ ರಾಜಸ್ಥಾನದ ಶಾಸಕಾಂಗ ಸಭೆಯ ಸದಸ್ಯರಾದರು. ಹಾಗೇಯೆ ಅದೇ ಸಮಯದಲ್ಲಿ ಬಿಜೆಪಿಯ ಯುವ ಮೋರ್ಚಾದ ಉಪಾದ್ಯಕ್ಷರಾಗಿ ನೇಮಕಗೊಂಡರು. ೧೯೮೭ರಲ್ಲಿ ರಾಜಸ್ಥಾನದ ಬಿಜೆಪಿಯ ಉಪಾದ್ಯಕ್ಷರಾಗಿ ನೇಮಕಗೊಂಡರು.          ೧೯೯೦-೯೧ ಗ್ರಂಥಾಲಯ ಸಮಿತಿ, ಸದಸ್ಯ ಸಲಹಾ ಸಮಿತಿ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿದರು. ೨೦೦೮-೧೩, ೨೦೧೩-೧೮, ೨೦೧೮ ಪ್ರಸ್ತುತ ವರೆಗೆ ರಾಜಸ್ಥಾನದ ಝಲ್ರಾಪಟನ್‌ನಿಂದ ಶಾಸಕಾಂಗ ಸಭೆಯಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವರು.        ೧೯೯೧-೯೭ರ ವರೆಗೆ ವಿದ್ಯತ್, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸಮಿತಿ ಸಲಹಾ ಸಮಿತಿ, ಪ್ರವಾಸೋದ್ಯಮ ಸಚಿವಾಲಯದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿರುವರು. ೧೯೯೭ ರಿಂದ ೯೮ವರೆಗೆ ಬಿಜೆಪಿಯ ಸಂಸAದೀಯ ಪಕ್ಷದಿಂದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ೧೯೯೭ರಿಂದ ೯೯ ವರೆಗೆ ಕೇಂದ್ರದ ರಾಜ್ಯ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿರುವರು. ಹಾಗೇಯೆ ೧೯೯೧-೨೦೦೧ವರೆಗೆ ಕೇಂದ್ರ ರಾಜ್ಯ ಸಚಿವರು ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳು, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಜಣಿದಾರರ ಕಲ್ಯಾಣ ಇಲಾಖೆ, ಪರಮಾಣು ಶಕ್ತಿ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ ಸಚಿಚರಾಗಿ ಕಾರ್ಯನಿರ್ವಹಿಸಿರುವರು. ೨೦೦೧ರಲ್ಲಿ ಕೇಂದ್ರ ರಾಜ್ಯಸಚಿವರಾಗಿ ಸಣ್ಣಪ್ರಮಾಣದ ಕೈಗಾರಿಕೆಗಳು ಸಿಬ್ಬಂದಿ ತರಬೇತಿ, ಪಿಂಜಣಿಗಳು, ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳು, ಪರಮಾಣು ಶಕ್ತಿ ಮತ್ತು ಡಿಪಾಟ್ಮೇಂಟ್ ಆಫ್ ಸ್ಪೇಸ್‌ನ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.        ಇವರು ೧೯೮೯ ರಿಂದ ೨೦೦೩ವರೆಗೆ ೯ನೇ, ೧೦ನೇ, ೧೧ನೇ, ೧೨ನೇ, ೧೩ನೇ ಲೋಕಸಭೆ ಜಲಾವರ್‌ನಿಂದ ಸದಸ್ಯರಾಗಿ ಆಯ್ಕೆಯಾದರು. ೨೦೦೩ರಲ್ಲಿ ರಾಜಸ್ಥಾನದ ಬಿಜೆಪಿಯ ಅಧ್ಯಕ್ಷರಾದರು. ೨೦೦೯ರಿಂದ ೨೦೧೩ರ ವರೆಗೆ ವಿರೋಧ ಪಕ್ಷದ ನಾಯಕಿಯಾಗಿ ಕಾರ್ಯನಿರ್ವಹಿಸಿದರು. ೨೦೧೯ರಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟಿçÃಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ೨೦೦೭ರಲ್ಲಿ ಮಹಿಳೆಯರ ಸ್ವಯಂ ಸಬಲಿಕರಣಕ್ಕಾಗಿ ಇವರಿಗೆ ಯುಎನ್ ಒ ನಿಂದ “ವುಮೆನ್ ಟುಗೆದರ್ ಅವಾರ್ಡ್” ೨೦೧೮ರಲ್ಲಿ ಅವರು ೫೨ನೇ ಸ್ಕೋಚ್ ಶೃಂಗಸಭೆಯಲ್ಲಿ ‘ವರ್ಷದ ಅತ್ಯುತಮ ಮುಖ್ಯಮಂತ್ರಿ’ ಪ್ರಶಸ್ತಿಯನ್ನು ಪಡೆದಿರುವರು       ಇವರು ೮ ಮಾರ್ಚ್ ೧೯೫೩ರಂದು ಬಾಂಬೆಯಲ್ಲಿ ಜನಿಸಿದರು. ಇವರು ಸಿಂಧಿಯಾ ರಾಜಮನೆತನದವರು. ಇವರ ತಂದೆ ಜೀವಾಜಿರಾವ್ ರಾಜಸ್ಥಾನದ ಮೊದಲ ಮಹಿಳಾ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ*     (ಆಡಳಿತಾವಧಿ: ಡಿಸೆಂ ತಾಯಿ ವಿಜಯ ರಾಜೆ ಸಿಂಧಿಯಾ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮಿಳುನಾಡಿನ ಕೊಡೈಕೆನಾಲ್‌ನಲ್ಲಿರುವ ಪ್ರೆಸೆಂಟೀಶನ್ ಕಾನ್ವಂಟ್ ಶಾಲೆಯಲ್ಲಿ ಪಡೆದುಕೊಂಡರು. ತಮ್ಮ ಉನ್ನತ ಶಿಕ್ಷಣವನ್ನು ಮುಂಬೈನ ಸೋಫಿಯಾ ಕಾಲೇಜ್ ಫಾರ್ ವುಮೆನ್‌ನಿಂದ ಅರ್ಥಶಾಸ್ತç ಮತ್ತು ರಾಜಕೀಯ ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದರು.       ಇವರು ೧೭ ನವೆಂಬರ್ ೧೯೭೯ರಂದು ರಾಜಮನೆತನದ ಧೋಲ್ಪರ್ ಕುಟುಂಬದ ಮಹಾರಾಜ್ ರಾಣಾ ಹೇಮಂತ್ ಸಿಂಗ್ ಅವರನ್ನು ವಿವಾಹವಾದರು. ಕೆಲ ಕಾರಣಗಳಿಂದ ವಿವಾಹವಾಗಿ ಒಂದು ವರ್ಷದಲ್ಲಿಯೇ ಬೇರೆಯಾದರು. ಇವರಿಗೆ ದುಶ್ಯಂತ್ ಸಿಂಗ ಎಂಬ ಮಗನಿದ್ದಾನೆ.        ವಸುಂದರಾ ರಾಜೆಯವರು ೧೯೮೪ರಲ್ಲಿ ರಾಜಕೀಯ ಪ್ರವೇಶಿಸಿದರು. ಇವರು ಭಾರತೀಯ ಜನತಾ ಪಕ್ಷದ ಕಾರ್ಯಕಾರಣಿ ಸದಸ್ಯರಾಗಿ ನೇಮಕಗೊಂಡರು. ೧೯೮೫ -೧೯೯೦ ರಲ್ಲಿ ಧೋಲ್‌ಪುರದಿಂದ ೮ನೇ ರಾಜಸ್ಥಾನದ ಶಾಸಕಾಂಗ ಸಭೆಯ ಸದಸ್ಯರಾದರು. ಹಾಗೇಯೆ ಅದೇ ಸಮಯದಲ್ಲಿ ಬಿಜೆಪಿಯ ಯುವ ಮೋರ್ಚಾದ ಉಪಾದ್ಯಕ್ಷರಾಗಿ ನೇಮಕಗೊಂಡರು. ೧೯೮೭ರಲ್ಲಿ ರಾಜಸ್ಥಾನದ ಬಿಜೆಪಿಯ ಉಪಾದ್ಯಕ್ಷರಾಗಿ ನೇಮಕಗೊಂಡರು.          ೧೯೯೦-೯೧ ಗ್ರಂಥಾಲಯ ಸಮಿತಿ, ಸದಸ್ಯ ಸಲಹಾ ಸಮಿತಿ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿದರು. ೨೦೦೮-೧೩, ೨೦೧೩-೧೮, ೨೦೧೮ ಪ್ರಸ್ತುತ ವರೆಗೆ ರಾಜಸ್ಥಾನದ ಝಲ್ರಾಪಟನ್‌ನಿಂದ ಶಾಸಕಾಂಗ ಸಭೆಯಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವರು.        ೧೯೯೧-೯೭ರ ವರೆಗೆ ವಿದ್ಯತ್, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸಮಿತಿ ಸಲಹಾ ಸಮಿತಿ, ಪ್ರವಾಸೋದ್ಯಮ ಸಚಿವಾಲಯದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿರುವರು. ೧೯೯೭ ರಿಂದ ೯೮ವರೆಗೆ ಬಿಜೆಪಿಯ ಸಂಸAದೀಯ ಪಕ್ಷದಿಂದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ೧೯೯೭ರಿಂದ ೯೯ ವರೆಗೆ ಕೇಂದ್ರದ ರಾಜ್ಯ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿರುವರು. ಹಾಗೇಯೆ ೧೯೯೧-೨೦೦೧ವರೆಗೆ ಕೇಂದ್ರ ರಾಜ್ಯ ಸಚಿವರು ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳು, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಜಣಿದಾರರ ಕಲ್ಯಾಣ ಇಲಾಖೆ, ಪರಮಾಣು ಶಕ್ತಿ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ ಸಚಿಚರಾಗಿ ಕಾರ್ಯನಿರ್ವಹಿಸಿರುವರು. ೨೦೦೧ರಲ್ಲಿ ಕೇಂದ್ರ ರಾಜ್ಯಸಚಿವರಾಗಿ ಸಣ್ಣಪ್ರಮಾಣದ ಕೈಗಾರಿಕೆಗಳು ಸಿಬ್ಬಂದಿ ತರಬೇತಿ, ಪಿಂಜಣಿಗಳು, ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳು, ಪರಮಾಣು ಶಕ್ತಿ ಮತ್ತು ಡಿಪಾಟ್ಮೇಂಟ್ ಆಫ್ ಸ್ಪೇಸ್‌ನ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.        ಇವರು ೧೯೮೯ ರಿಂದ ೨೦೦೩ವರೆಗೆ ೯ನೇ, ೧೦ನೇ, ೧೧ನೇ, ೧೨ನೇ, ೧೩ನೇ ಲೋಕಸಭೆ ಜಲಾವರ್‌ನಿಂದ ಸದಸ್ಯರಾಗಿ ಆಯ್ಕೆಯಾದರು. ೨೦೦೩ರಲ್ಲಿ ರಾಜಸ್ಥಾನದ ಬಿಜೆಪಿಯ ಅಧ್ಯಕ್ಷರಾದರು. ೨೦೦೯ರಿಂದ ೨೦೧೩ರ ವರೆಗೆ ವಿರೋಧ ಪಕ್ಷದ ನಾಯಕಿಯಾಗಿ ಕಾರ್ಯನಿರ್ವಹಿಸಿದರು. ೨೦೧೯ರಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟಿçÃಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.೨೦೦೭ರಲ್ಲಿ ಮಹಿಳೆಯರ ಸ್ವಯಂ ಸಬಲಿಕರಣಕ್ಕಾಗಿ ಇವರಿಗೆ ಯುಎನ್ ಒ ನಿಂದ “ವುಮೆನ್ ಟುಗೆದರ್ ಅವಾರ್ಡ್” ೨೦೧೮ರಲ್ಲಿ ಅವರು ೫೨ನೇ ಸ್ಕೋಚ್ ಶೃಂಗಸಭೆಯಲ್ಲಿ ‘ವರ್ಷದ ಅತ್ಯುತಮ ಮುಖ್ಯಮಂತ್ರಿ’ ಪ್ರಶಸ್ತಿಯನ್ನು ಪಡೆದಿರುವರುಸ್ಥಾನದ ಮೊದಲ ಮಹಿಳಾ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ*     (ಆಡಳಿತಾವಧಿ: ಡಿಸೆಂಬರ್ ೨೦೦೮ ರಿಂದ ಡಿಸೆಂಬರ್ ೨೦೧೮ವರೆಗೆ, ೧೦ ವರ್ಷ೯ ದಿನಗಳು)*       ಇವರು ೮ ಮಾರ್ಚ್ ೧೯೫೩ರಂದು ಬಾಂಬೆಯಲ್ಲಿ ಜನಿಸಿದರು. ಇವರು ಸಿಂಧಿಯಾ ರಾಜಮನೆತನದವರು. ಇವರ ತಂದೆ ಜೀವಾಜಿರಾವ್ ತಾಯಿ ವಿಜಯ ರಾಜೆ ಸಿಂಧಿಯಾ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮಿಳುನಾಡಿನ ಕೊಡೈಕೆನಾಲ್‌ನಲ್ಲಿರುವ ಪ್ರೆಸೆಂಟೀಶನ್ ಕಾನ್ವಂಟ್ ಶಾಲೆಯಲ್ಲಿ ಪಡೆದುಕೊಂಡರು. ತಮ್ಮ ಉನ್ನತ ಶಿಕ್ಷಣವನ್ನು ಮುಂಬೈನ ಸೋಫಿಯಾ ಕಾಲೇಜ್ ಫಾರ್ ವುಮೆನ್‌ನಿಂದ ಅರ್ಥಶಾಸ್ತç ಮತ್ತು ರಾಜಕೀಯ ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದರು.       ಇವರು ೧೭ ನವೆಂಬರ್ ೧೯೭೯ರಂದು ರಾಜಮನೆತನದ ಧೋಲ್ಪರ್ ಕುಟುಂಬದ ಮಹಾರಾಜ್ ರಾಣಾ ಹೇಮಂತ್ ಸಿಂಗ್ ಅವರನ್ನು ವಿವಾಹವಾದರು. ಕೆಲ ಕಾರಣಗಳಿಂದ ವಿವಾಹವಾಗಿ ಒಂದು ವರ್ಷದಲ್ಲಿಯೇ ಬೇರೆಯಾದರು. ಇವರಿಗೆ ದುಶ್ಯಂತ್ ಸಿಂಗ ಎಂಬ ಮಗನಿದ್ದಾನೆ.        ವಸುಂದರಾ ರಾಜೆಯವರು ೧೯೮೪ರಲ್ಲಿ ರಾಜಕೀಯ ಪ್ರವೇಶಿಸಿದರು. ಇವರು ಭಾರತೀಯ ಜನತಾ ಪಕ್ಷದ ಕಾರ್ಯಕಾರಣಿ ಸದಸ್ಯರಾಗಿ ನೇಮಕಗೊಂಡರು. ೧೯೮೫ -೧೯೯೦ ರಲ್ಲಿ ಧೋಲ್‌ಪುರದಿಂದ ೮ನೇ ರಾಜಸ್ಥಾನದ ಶಾಸಕಾಂಗ ಸಭೆಯ ಸದಸ್ಯರಾದರು. ಹಾಗೇಯೆ ಅದೇ ಸಮಯದಲ್ಲಿ ಬಿಜೆಪಿಯ ಯುವ ಮೋರ್ಚಾದ ಉಪಾದ್ಯಕ್ಷರಾಗಿ ನೇಮಕಗೊಂಡರು. ೧೯೮೭ರಲ್ಲಿ ರಾಜಸ್ಥಾನದ ಬಿಜೆಪಿಯ ಉಪಾದ್ಯಕ್ಷರಾಗಿ ನೇಮಕಗೊಂಡರು.          ೧೯೯೦-೯೧ ಗ್ರಂಥಾಲಯ ಸಮಿತಿ, ಸದಸ್ಯ ಸಲಹಾ ಸಮಿತಿ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿದರು. ೨೦೦೮-೧೩, ೨೦೧೩-೧೮, ೨೦೧೮ ಪ್ರಸ್ತುತ ವರೆಗೆ ರಾಜಸ್ಥಾನದ ಝಲ್ರಾಪಟನ್‌ನಿಂದ ಶಾಸಕಾಂಗ ಸಭೆಯಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವರು.        ೧೯೯೧-೯೭ರ ವರೆಗೆ ವಿದ್ಯತ್, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸಮಿತಿ ಸಲಹಾ ಸಮಿತಿ, ಪ್ರವಾಸೋದ್ಯಮ ಸಚಿವಾಲಯದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿರುವರು. ೧೯೯೭ ರಿಂದ ೯೮ವರೆಗೆ ಬಿಜೆಪಿಯ ಸಂಸAದೀಯ ಪಕ್ಷದಿಂದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ೧೯೯೭ರಿಂದ ೯೯ ವರೆಗೆ ಕೇಂದ್ರದ ರಾಜ್ಯ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿರುವರು. ಹಾಗೇಯೆ ೧೯೯೧-೨೦೦೧ವರೆಗೆ ಕೇಂದ್ರ ರಾಜ್ಯ ಸಚಿವರು ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳು, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಜಣಿದಾರರ ಕಲ್ಯಾಣ ಇಲಾಖೆ, ಪರಮಾಣು ಶಕ್ತಿ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ ಸಚಿಚರಾಗಿ ಕಾರ್ಯನಿರ್ವಹಿಸಿರುವರು. ೨೦೦೧ರಲ್ಲಿ ಕೇಂದ್ರ ರಾಜ್ಯಸಚಿವರಾಗಿ ಸಣ್ಣಪ್ರಮಾಣದ ಕೈಗಾರಿಕೆಗಳು ಸಿಬ್ಬಂದಿ ತರಬೇತಿ, ಪಿಂಜಣಿಗಳು, ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳು, ಪರಮಾಣು ಶಕ್ತಿ ಮತ್ತು ಡಿಪಾಟ್ಮೇಂಟ್ ಆಫ್ ಸ್ಪೇಸ್‌ನ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.        ಇವರು ೧೯೮೯ ರಿಂದ ೨೦೦೩ವರೆಗೆ ೯ನೇ, ೧೦ನೇ, ೧೧ನೇ, ೧೨ನೇ, ೧೩ನೇ ಲೋಕಸಭೆ ಜಲಾವರ್‌ನಿಂದ ಸದಸ್ಯರಾಗಿ ಆಯ್ಕೆಯಾದರು. ೨೦೦೩ರಲ್ಲಿ ರಾಜಸ್ಥಾನದ ಬಿಜೆಪಿಯ ಅಧ್ಯಕ್ಷರಾದರು. ೨೦೦೯ರಿಂದ ೨೦೧೩ರ ವರೆಗೆ ವಿರೋಧ ಪಕ್ಷದ ನಾಯಕಿಯಾಗಿ ಕಾರ್ಯನಿರ್ವಹಿಸಿದರು. ೨೦೧೯ರಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟಿçÃಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.೨೦೦೭ರಲ್ಲಿ ಮಹಿಳೆಯರ ಸ್ವಯಂ ಸಬಲಿಕರಣಕ್ಕಾಗಿ ಇವರಿಗೆ ಯುಎನ್ ಒ ನಿಂದ “ವುಮೆನ್ ಟುಗೆದರ್ ಅವಾರ್ಡ್” ೨೦೧೮ರಲ್ಲಿ ಅವರು ೫೨ನೇ ಸ್ಕೋಚ್ ಶೃಂಗಸಭೆಯಲ್ಲಿ ‘ವರ್ಷದ ಅತ್ಯುತಮ ಮುಖ್ಯಮಂತ್ರಿ’ ಪ್ರಶಸ್ತಿಯನ್ನು ಪಡೆದಿರುವರು ಸುರೇಖಾ ರಾಠೋಡ್

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಕಂತು-ಆರು ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಸವಿತಾ ದೇಶಮುಖ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ “ಮಾತಾಡೋ ಮಾತಾಡೋ ಆತುಮದ ಲಿಂಗವೇ!! ಮುನಿಸುವುದೇತಕ್ಕೆ ಅನಿಮಿತ್ಯವಾಗಿ ನೀಎನ್ನಯ್ಯ ಮಾತಾಡು, ಚನ್ನೀಗ ಚರಲಿಂಗವೆ!! ನಂಬಿದೆ ನಂಬಿರುವೆ ಸಾಂಬ ನಿನ್ನಯ ಪಾದಕಂಬನಿ ಸುರಿಯುವವೊ ಶಂಭೋ ನೀ ಮಾತನಾಡೊ ಅಂಗೈಯದೊಳು ಬಂದು ಲಿಂಗರೂಪವ ತಾಳಿ  ಕಂಗೊಳಿಸುವ ಶಿವನೆ ಮಂಗಳಮಯ ಲಿಂಗವೇ!! (“ತಾರಕ ತಂಬೂರಿ” ಕವನ ಸಂಕಲನ) ನಂಬಿರುವೆ ನಿನ್ನನ್ನೇ ಅಂತ ಅಂಗೈಯಲ್ಲಿ ಲಿಂಗವನ್ನು ಹಿಡಿದ……  ಎಳೆ ವಯಸ್ಸಿನ ಜಯದೇವಿ ತಾಯಿಯವರು ಸಂಸಾರದ ಕಷ್ಟಗಳ ಹೊರೆಹೊರಲಾಗದೆ  ನೊಂದು ಆ ಲಿಂಗನನ್ನೆ ಬೇಡಿಕೊಳ್ಳುತ್ತಿದ್ದರು……. ನೋವಿನ ನೆರಳಲ್ಲಿ ದಿನಗಳನ್ನು ಎಣಿಸುತ್ತಿದ್ದ ಸೊಸೆಗೆ, ಅತ್ತೆಯ ಕಠೋರ ಮಾತುಗಳು ಮತ್ತು ದೌರ್ಜನ್ಯದ ನಡೆ ಬಲು ಹಿಂಸಿಸುತಿತ್ತು. ಪ್ರತಿದಿನವೂ ಅವರ ಮನಸ್ಸಿನಲ್ಲಿ ಬದುಕಿನ ಹೋರಾಟ—ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ.ಕಣ್ಣೀರನ್ನು ಒಳಗೇ ಹತ್ತಿಕ್ಕಿ, ಮನೆಯ ಗೋಡೆಗಳ ನಡುವೆ ತನ್ನ ನೋವನ್ನು ಹೂತು ಬದುಕುತ್ತಿದ್ದ ಜಯದೇವಿ ತಾಯಿಯವರು ಬಸವಣ್ಣನ ವಚನವನ್ನು ಯಾವಾಗಲೂ ಹೇಳುತ್ತಿದ್ದರಂತೆ, ತಂದೆ ನೀನು ತಾಯಿ ನೀನು ಬಂದು ನೀನು ಬಳಗ ನೀನು”, …….. ನನ್ನ ಸುಖ ದುಃಖವು ನಿನ್ನದೇ…. ಅನ್ನುವ ಅರ್ಪಣೆಯ ಭಾವ ಬೆರುರಲಾರಂಭಿಸಿತ್ತು. ಲಿಗಾಡೆಯವರ ಮನೆ ಜಯನಿಕೀತನ ತಾಯಿ ಸಂಗಪ್ಪನವರು ಹೇಳುವಂತೆ “ಸಹನೆಯಿಂದ ಇರು ಸಿದ್ದರಾಮ ಕಾಯುತ್ತಾನೆ ಅಂತ ಹೇಳುವ ಮಾತು ನೆನಪಿಟ್ಟುಕೊಂಡು ಜೀವನದ ದೋಣಿ ಸಾಗಿಸುತಿದಂತೆ…..sss  ಜೀವನದಲ್ಲಿ ಸಂತಸದ ಅಲೆಗಳು ಅಪ್ಪಳಿಸಿದವು….ನೋವಿನ ಮೌನದ ಮಧ್ಯೆ ಒಂದು ದಿನ, ಅವರೊಳಗೆ ನಿಶ್ಶಬ್ದವಾಗಿ ಹೊಳೆಯುವ ಬೆಳಕು ಹುಟ್ಟಿತು…ತಾನು ಬಸೂರಿಯಾದ ಸುದ್ದಿ  ಹೃದಯಕ್ಕೆ ತಂಪು‌ ನೀಡಿತು…..!!!! ನೋವಿನ ಭಾರ ಕ್ಷಣ ಕಾಲದಲ್ಲಿ ಮಾಯವಾಗಿ ಹೋಯಿತೆನೊ ಅನ್ನಿಸಿತ್ತು.ಅವರಿಗೆ ಮೊದಲ ಬಾರಿಗೆ ತನ್ನದೇ ಆದ ಒಂದು ಆಂಶವು ಲೋಕಕ್ಕೆ ಬರುವದು… ತನಗಾಗಿಇನ್ನೊಂದು ಲೋಕವಿದೆ ಎನ್ನುವ ಭರವಸೆ ನೀಡತು, ಅವರು ಹೊಟ್ಟೆಗೆ ಕೈಯಿಟ್ಟು ಮೃದುವಾಗಿ ನಗುತ್ತಿದ್ದರು. ಆ ನಗು ಯಾರಿಗೂ ಕಾಣದಿದ್ದರೂ,  ಅದು ಉತ್ಸವದ ಕ್ಷಣಗಳಾಗಿದ್ದವು.ಮಗುವಿನ ಸಣ್ಣ ಚಲನೆ-ಒಲನೆಯು….., ಅವರಿಗೆ ಮಾತಾಡುವ ಧೈರ್ಯ ಕಲಿಸಿತು— ಪ್ರತಿಯೊಂದು ಉಸಿರಾಟವೂ ಹೊಸ ಅರ್ಥ ಪಡೆದಿತು; ಪ್ರತಿಯೊಂದು ಕ್ಷಣವು ನಿರೀಕ್ಷೆಯ ಬೆಳಕಾಗಿ ಮೂಡಿತು.ನೋವಿನ ನಡುವೆ ಹುಟ್ಟಿದ ಆ ಆನಂದ ಕ್ಷಣಗಳು, ಅವರ ಬದುಕಿಗೆ ಅರ್ಥ ನೀಡಿದವು.ದೌರ್ಜನ್ಯದಿಂದ ಕಲುಷಿತವಾದ ಮನಸ್ಸಿನಲ್ಲಿ, ತಾಯ್ತನದ ಸ್ಪರ್ಶವು  ಔಷಧಿಯಂತೆ ಕೆಲಸಮಾಡಿತು. ಆ ಮಗು ಅವರಿಗೆ ಶಕ್ತಿಯಾಯಿತು, ಭರವಸೆಯಾಯಿತು…!!! ಇನ್ನೇನು…. ನಿನ್ನೆವರೆಗೆ ಕಣ್ಣಲ್ಲಿ ಕಿಡಿ ತುಂಬಿಕೊಂಡು ಮಾತಾಡುತ್ತಿದ್ದ… .. “ನಿನಗೆ ಮಕ್ಕಳಾಗ ಯಾವ ಲಕ್ಷಣಗಳು ಕಾಣುವುದಿಲ್ಲ ನಾನು ಬೇರೆ ಮದುವೆ ಮಾಡ್ತೀನಿ ನನ್ನ ಮಗನಿಗೆ” ಅಂತ ಹೆದರಿಸುತ್ತಿದ್ದ …ಅತ್ತೆಯ ಹೃದಯದಲ್ಲಿ, ಒಮ್ಮಿಂದೊಮ್ಮೆಲೆ ಅನಿರೀಕ್ಷಿತವಾಗಿ ಸೊಸೆಯ ಬಸುರಿತನದ ಸಂತಸವು ಮೃದುತ್ವ ಮೂಡಿಸಿತು.  ಸೊಸೆಯೊಳಗೆ ಜೀವ ಮೂಡಿದೆ ಎಂಬ ಸತ್ಯ ತಿಳಿದ ಕ್ಷಣ, ಆಕೆಯ ಕಠೋರತೆ  ಕ್ಷಣಾರ್ಧದಲ್ಲಿ ಕರಗಿ ಹೋಗಿತ್ತು.ಕಾಡುತ್ತಿದ್ದ ಅಸಮಾಧಾನ ಮನಸ್ಸು, ತಾನೇ ಅರಿಯದಂತೆ ಮಗು ಬರುವ‌ ನೆನಪುಗಳಲಿ ತೆಲಾಡಲಾರಂಭಿಸಿತು.ಸೊಸೆಯ ಹೊಟ್ಟೆಯ ಮೇಲೆ  ಕೈ ಇಟ್ಟು ಇಟ್ಟು ನೋಡುವರಂತೆ ಅತ್ತೆ“ಇವಳೊಳಗೆ ನನ್ನ ಮನೆಯ ಭವಿಷ್ಯ ಉಸಿರಾಡುತ್ತಿದೆ” ಎಂಬ ಭಾವನೆಯು ಎದೆಗಿಳಿದು ಪ್ರೀತಿ ಉಕ್ಕಿ ಹರಿಯುತ್ತಿರೆ……ಬಿರುಸಾದ ಮಾತುಗಳ ಮೃದು ಎಚ್ಚರಿಕೆಯ ಮಾತು ಗಳಾದವು……!!!ಅತ್ತೆಗೆ..ಸೊಸೆಗೆ ಕಣ್ಣು ತಪ್ಪಿಸಿ ನೋಡಿದರೂ, ಆ ನೋಟದಲ್ಲಿ  ಕಾಳಜಿ ಇತ್ತು. ಬಸೂರಿಯಾಗಿರುವ ಸೊಸೆಯಲ್ಲಿ  ತಾನು ಹಗಲಿರಳು ಕಾಣಿಸುತ್ತಿರುವ ಕನಸಿನ ಪ್ರತಿಬಿಂಬ ಕಂಡಂತೆ ಆಯಿತು.ತಾನೇ ತಾಯಿ ಆದಷ್ಟು ಸಂತಸ ತಂದಿತ್ತು. ಕಠೋರತೆಯ ಹಿಂದೆ ಹೂತುಹೋದ ತಾಯಿಯ ಹೃದಯ, ಆ ಕ್ಷಣಗಳಲ್ಲಿ ನಿಧಾನವಾಗಿ ಹೊರಸುಸಲಾರಂಭಿಸಿತು.ನಿನ್ನೆವರೆಗೆ ನೋವಿನ ಮೂಲವಾಗಿದ್ದ ಅತ್ತೆಯೇ, ಆ ದಿನದಿಂದ ಸೊಸೆಗೆ  ಧೈರ್ಯವಾಗಿ ನಿಂತಳು. ಬಸೂರಿಯಾದ ಆ ಸತ್ಯ, ಇಬ್ಬರ ನಡುವಿನ ಗೋಡೆಯನ್ನು ಕರಗಿಸಿ, ಪ್ರೀತಿಗೆ ದಾರಿ ಮಾಡಿಕೊಟ್ಟಿತು…..!!!! ಜಯದೇವಿ ತಾಯಿಯವರು ವಾಸವಾದ ಕೋಣೆ  ಮಕ್ಕಳಿಗಾಗಿ ಪ್ರಯಾಗಬಾಯಿಯು ಕಂಡ ಕಂಡ ದೇವರಿಗೆ ಹರಕೆಯನ್ನು ಹೊತ್ತು ನೂರಾರು ದೇವರಗಳನ್ನು ಜಗಲಿಯ ಮೇಲೆ ಇಟ್ಟು ಪೂಜೆ ಮಾಡುತ್ತಿದ್ದರು. ತಿಳಿದು ತಿಳಿಯದೇ ಅನೇಕ ತರದ ಪೂಜೆಗಳಲ್ಲಿ ನಿರತರಾಗುತ್ತಿದ್ದರು. ಇಂದು ಅವರ ಕನಸು ನನಸಾಗಲಿರುವದೆಂದು ಅವರ ಸಂತಸಕ್ಕೆ ಮೇರೆ ಇರಲಿಲ್ಲ.ತಾಯಿ ಸಂಗವ್ವನವರು ಸಂತಸದಿಂದ ಮಗಳ ಬಯಕೆಯ ತರಹದ ಅಡಿಗೆ ಮಾಡಿ ಉಣಿಸಲಾರಂಭಿಸಿದರು. ಸರ್ವಸಾಮಾನ್ಯವಾಗಿ ಮಹಾರಾಷ್ಟ್ರದಲ್ಲಿ (ಚೊರ್ ಚೋಳಿ) ಕಳ್ಳ ಕುಬಸ ಮಾಡಿ….. ಮುಂದೆ ದೊಡ್ಡ ಕುಬಸದ ಕಾರ್ಯವನ್ನು ಮಾಡುವಂತೆ ಐದನೇ ತಿಂಗಳಿಗೆ ಸಿಮಂತದ ದೊಡ್ಡ ಕಾರ್ಯಕ್ರಮವನ್ನು ಮಾಡಿ ಎಲ್ಲ ಅತ್ತೆಯಂದಿರಿಗೆ ಭರ್ಜರಿಯಾದ ಪಿತಾಂಬರಾದ ಸೀರೆಯನ್ನು ಉಡಿಸಿ ಅವರನ್ನೆಲ್ಲ ಆನಂದ ಪಡಿಸಿದರು. ಮೊದಲ ಸಲ ಗರ್ಭಿಣಿ ಆದವರಿಗೆ ಅನೇಕ ತರದ ಸೀಮಂತದ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತದೆ. ಬೆಳದಿಂಗಳ ಕುಬಸು ,ಸೂರ್ಯೋದಯ ಕುಬಸು (ಜೋಪಾಳ) ಉಯ್ಯಾಲೆ ಕುಬಸ ,ನಾವೆಯ ಕುಬಸ, ಸಮುದ್ರ ತೀರದ ಕುಬುಸ , ಒಳಕುಬಸ ಹೊರ ಕುಬಸ,ದೇವರೆದುರಿನ ಕುಬಸ, ಸಣ್ಣ ಕುಬಸ ,ದೊಡ್ಡ ಕುಬಸ…. ಹೀಗೆ ಅನೇಕ ತರದ ಕುಬಸುಗಳನ್ನು ಮಾಡಲಾಗುವದು ಅವುಗಳನ್ನೆಲ್ಲವನ್ನು ಆಚರಿಸಲಾಯಿತು. ಇಲ್ಲಿ ಬೆಳದಿಂಗಳ ಕುಬಸ ಅಂದರೆ ಚಂದ್ರನ ದಿವ್ಯ ಬೆಳಕಿನಲ್ಲಿ ಆ ಬೆಳಕಿನ ಬಣ್ಣದ ಸೀರೆಯನ್ನು ಉಡಿಸಿ ಹೂವು ಮೂಡಿಸಿ ಆ ಬಿಳಿ  ಬಣ್ಣದ ಸಿಹಿ ಊಟವನ್ನು ತಯಾರಾಸಿ ಉಣಬಡಿಸುವರು. ಇನ್ನು ಸೂರ್ಯೋದಯದ ಕುಬುಸ ಅಂದರೆ ಸೂರ್ಯನ ಬಣ್ಣದ ಸೀರೆ ಉಡಿಸಿ ಅದೇ ಬಣ್ಣದ ಹೂಗಳನ್ನು ಮೂಡಿಸಿ ಸೂರ್ಯನ ಕಿರಣಗಳ ಮಧ್ಯ ಕೂಡಿಸಿ,ಹೊಂಬಣ್ಣದ   ಮೃಷ್ಟಾನ್ನ ಅಡುಗೆ ಮಾಡಿ ಉಣ ಬಡಿಸುವರು. “ಉಯ್ಯಾಲೆಯ ಕುಬುಸು”ಅಂದರೆ ಉಯ್ಯಾಲೆಗೆ ಹೂವುಗಳಿಂದ  ಅಲಂಕರಿಸಿ ಬಣ್ಣ ಬಣ್ಣದ ಬಟ್ಟೆ ವಸ್ತ್ರಗಳನ್ನು ಉಡುಗೆ ತೊಡಿಸಿ ತರ ತರಹದ ಅಡುಗೆ ಉಣಬಡಿಸುವರು .ಇನ್ನು “ನಾವೆಯ ಕುಬಸು”ಎಂದರೆ ದೋಣಿಯಲಿ ಕುಡಿಸಿ ನೇರವೆರಿಸುವರು. ಶಿವಯೋಗಿ ಸಿದ್ದರಾಮೇಶ್ವರರು ಕಟ್ಟಿದ ಕೆರೆಯಲ್ಲಿ ದೋಣಿಗಳಲಿ ಕುಬುಸ ಹೂಡಲಾಯಿತು.ಶಿವಯೋಗಿ ಸಿದ್ದರಾಮೇಶ್ವರನ ದರ್ಶನಕ್ಕೆ ಬಂದ ಯಾತ್ರಿಕರು ಧೋಣಿಗಳಲ್ಲಿ‌ ವಿಹರಿಸ ಬಹುದಾಗಿದೆ. ಈಗಲೂ ಭಕ್ತಾದಿಗಳು ದೋಣಿಯಲ್ಲಿ ಕುಳಿತು ಆನಂದಿಸುವ ವ್ಯವಸ್ಥೆ ಇದೆ.ಜಯದೇವಿ ತಾಯಿಯವರಿಗಾಗಿಯೇ ಒಂದು ದೊಡ್ಡ ದೋಣಿಯನ್ನು ಅಲಂಕರಿಸಿ ಕೆರೆಯ ಮಧ್ಯದಲ್ಲಿ ಸಿಮಂತದ ಆಚರಣೆ  ಮಾಡಲಾಯಿತು.ದೇವರೆದುರಿನ ಕುಬಸು ಅಂದರೆ ವಿಶೇಷವಾಗಿ ಸಿದ್ದರಾಮನ ಗರ್ಭಗುಡಿಯ ಎದುರು ಕೂಡಿಸಿ ಅವನೆದುರಿಗೆ ಕುಬಸನ್ನು ಮಾಡಿ ಆನಂದಿಸಿದರು. ಅಲ್ಲಿ ಹತ್ತಿರದಲ್ಲಿರುವ ರೇವಣಸಿದ್ದೇಶ್ವರ ದೇವಾಲಯದಲ್ಲಿ ಕುಬಸಿನ ಕಾರ್ಯ ಹಮ್ಮಿಕೊಳ್ಳಲಾಗಿತ್ತು.ಅನೇಕಾಅನೇಕ ತರದ ಕುಬುಸಗಳನ್ನು ಮಾಡಿ ಕಣ್ಮನ ತುಂಬಿಕೊಂಡರು ಅತ್ತೆಯ ಮನೆಯವರು ಹಾಗೂ ತವರಿನವರು.ಇನ್ನೂ ಬಂಧು-ಬಳಗದವರು ಅಂದರೆ ದಿನಕ್ಕೆ ಮೂರು ನಾಲ್ಕು ಮನೆಯವರಿಂದ ಆಮಂತ್ರಣ ಬರುವುದು ಅಲ್ಲಿ ಎಲ್ಲಾ ಕಡೆಗೂ ಹೋಗಿ ಅವರ ಆದರ ಆಥಿತ್ಯವನ್ನು ಸ್ವೀಕರಿಸಿ ಊಟ ಮಾಡಲೇ ಬೇಕಿತ್ತು. ಆದರೆ ಜಯದೇವಿ ತಾಯಿಯವರು ಅತ್ಯಂತ ನಾಜಕಿನ ಆರೋಗ್ಯದ ಸ್ಥಿತಿ ಇದ್ದಿದ್ದ ಕಾರಣ ಹೆಚ್ಚು ಉಣ್ಣಲಾಗುತ್ತಿರಲಿಲ್ಲ.ಆದರೂ ಬಳಗದವರ ಪ್ರೀತಿಯ  ಒತ್ತಾಯಕ್ಕೆ ಮಣಿದು ಸ್ವಲ್ಪ ಹೆಚ್ಚಿಗೆ ಊಟ ಮಾಡಬೇಕಾಗುತ್ತಿತ್ತು.   ಹೀಗಾಗಿ ಬಹಳಷ್ಟು ಸೋತು ಸೋತು ಬರುತ್ತಿದ್ದರು. ಅಂತ ತಾಯಿಯವರು ಹೇಳುತ್ತಿದ್ದರು. ಅದು  ಮುಂದೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು ಅಂತ ಹೇಳುತ್ತಿದರು.“ಯಾರ ಒತ್ತಾಯಕ್ಕು ನಾವು ಊಟವನ್ನು ಹೆಚ್ಚಿಗೆ ಮಾಡಬಾರದು ನಮ್ಮ ದೇಹಕ್ಕೆ ಎಷ್ಟು ಬೇಕು ಅಷ್ಟನ್ನೇ ನಾವು ಸ್ವೀಕರಿಸಬೇಕು” ಮುಂದೆ ದೀರ್ಘಕಾಲದ ದುಷ್ಪರಿಣಾಮಗಳು ಶರೀರದ ಮೇಲೆ ಆಗುವ ಅನ್ನುತ್ತಿದ್ದರು. ಜಯದೇವಿ ತಾಯಿಯವರು ಪತಿ ಚೆನ್ನಮಲ್ಲಪ್ಪ ಲಿಗಾಡೆಯವ ಜೊತೆ ಅದೊಂದು ದಿನ ಮಗು ಭೂಮಿಗೆ ಬರುವ ಸಮಯವು ಬಂತ್ತು .ಅತ್ಯಂತ ಸುಂದರವಾದ ಮಲ್ಲಿಕಾರ್ಜುನನ್ನೇ ಹೊಲುವ ಮಗನನ್ನು ಜನ್ಮ ಕೊಟ್ಟರು. ಸೋನ್ನಲಿಗಿಯ ಸಿದ್ದರಾಮೇಶ್ವರರು ಆರಾಧಿಸುವ ದೈವ ಸಾಕ್ಷಾತ್ ಮಲ್ಲಿಕಾರ್ಜುನನೇ ಹುಟ್ಟಿ ಬಂದನು ಎನ್ನುವ ಸಂತಸದಲ್ಲಿ ಆ ಮಗುವಿಗೆ ಮಲ್ಲಿಕಾರ್ಜುನ ಅಂತನೇ ಹೆಸರಿಸಲಾಯಿತು‌ಅತ್ತೆಯಂದಿರಗೆ ಎಲ್ಲಿಇಲ್ಲದ ಸಂತಸ … ಅದೆಷ್ಟೋ ದಿನಗಳಿಂದ ಮಕ್ಕಳಿಗಾಗಿ ಪರಿತಪಿಸುತ್ತಿರುವ ಲಿಗಾಡೆಯ ಮನೆತನದಲ್ಲಿ ಗಂಡು ಮಗ ಜನಿಸಿತು ಹೇಳತೀರದ ಆನಂದ ತುಂಬಿತುಳುತ್ತಿತ್ತು . ಆದರೆ ವಿಧಿಯ ಆಟವೇ ಬೇರೆಯಾಗಿತ್ತು…ಮಗು ಹುಟ್ಟಿದ ಸಲ್ಪ ದಿನದಲ್ಲಿ ತೀರಿಕೊಂಡಿತ್ತು. ಅದೇ ತಾನೇ ಸಂತಸ ಗೊಂಡಿರುವ ಎರಡು ಮನೆಗಳಲ್ಲಿ ಕತ್ತಲೆ ಆವರಿಸಿ ದಂತಾಗಿತ್ತು ……  ಅತಿವ ನೋವುಉಂಟು ಮಾಡಿತು-ಬರಿದಾದ ಮಡಿಲು…… ಖಾಲಿತನವಷ್ಟೇ ಉಳದಿತ್ತು.ಸುಂದರವಾದ ಗಂಡು ಮಗುವಿನ ಉಸಿರಿನ ತಾಪ ಇನ್ನೂ ತಾಯಿಯ ಎದೆಯಲ್ಲೇ ಉಳಿದಿತ್ತು. ಮುದ್ದು ಮಗುವಿನ ಅಳು…..ನಿದ್ರೆಯಲ್ಲೂ ನಗುವ-ನಗೆ….ಇಗ ಆ ನಗು-ಅಳು ಮೌನವಾಗಿವೆ. ಹಾಸಿಗೆಯ ಮೇಲೆ ಮಡಚಿಟ್ಟ ಚಿಕ್ಕ ಚಿಕ್ಕ ಬಟ್ಟೆಗಳ ನೋಡಿ ತಾಯಿಯ ಕಣ್ಣಿರು ಮಳೆಯಾಗಿ ಹರಿದವು. ಅಳು ಕೇಳಿಸದೇ ಹೃದಯವೇ ಕಿತ್ತು ತಿನ್ನುತ್ತಿತ್ತು……ಒಮ್ಮೆ ಅವನನ್ನು ಹೊತ್ತ ಕೈಗಳು ಇದೀಗ ಖಾಲಿಯಾಗಿ ಗಾಳಿಯನ್ನು ಅಪ್ಪಿಕೊಳ್ಳುತ್ತಿವೆ……ಹಾಲು ತುಂಬಿದ ಎದೆ ಮಗುವಿಲ್ಲದ ನೋವಿನಿಂದ ಕಲ್ಲಾಗಿತ್ತು……. ಮನ ಕಲ್ಲಾಗಿತ್ತು….ssssss ಮುಂದೆ ತಾಯಿಯವರು ಇದನ್ನು ಬಹಳ ಅತ್ಯಂತ ಸುಂದರವಾಗಿ ವರ್ಣಿಸುತ್ತಾರೆ…… ಅಳುತ್ತಿದ್ಯಾ ಕಂದಾ ಅಳುವೆಯಾ? ನಿನ್ನ ಹಿಂದಣ ಜನುಮದ ಕೊಳೆ ತೊಳೆಯಲೆಂದು !!ಪಲ್ಲವಿ!! ತಾಯಿಯ ಗರ್ಭದಲ್ಲಿ ಕೈಕಾಲುಗಳ  ಕಟ್ಟಿಬಾವಿಯೊಳು ಈಸಲು ಇಳಿಸಿದರೆಂದು!! ಮುಸುಕಿನೊಳಗೆ ಕಟ್ಟಿ ಬಿಸಿ ಎಡಬಲದಲ್ಲಿ ಉಸಿರಿಸಲು ನಿನಗೆ  ಬರಲಿಲ್ಲವೆಂದು !! ಬರಿ ಕಾಯದಿಂದಲಿ ಧರೆಮೇಲೆ ಬೀಳುತಮುಟ್ಟು ಹೇಸಿಕೆಯಲಿ ಹೊರಳಾಡಿದೆನೆಂದು!!ಹಿಂದಣ ಜನುಮದ ತಾಯಿ ತಂದೆಗಳಿಲ್ಲಬಂದು ಬಳಗ ಎನಗೆ ಇಂದಿಲ್ಲವೆಂದು !! ಮೊಲೆ ಹಾಲು ಉಣಿಸುತ ಬಲು ಪ್ರೀತಿಯಲಿತಾಯಿ ಜಾಲದೊಳಗೆ ನಿನಗೆ ಕೊಳ್ಳುವಳೆಂದು!! ಹಿಂದಣ ಸುಖ ದುಃಖ ಇಂದು-ನೆನ್ನೆ ನೆನೆದುಬಿಕ್ಕಿಬಿಕ್ಕಿ ಅಳುವಿ ಏನು ತಿಳಿಯದೆಂದು!! ಹಿಂದಣದ ಪರಿ ಮತ್ತೆ ಮುಂದೆ ಬರುವುದೆಂದು  ಬಂಧನ ಇದು ಈಗ ಬೇಸರಗೊಂಡು !! ಒಂಟಿಗನಾಗಿ ಬಂದು ಹೊಂಟು ಹೋಗುವದೇ  ನೆಂಟರು ಎನಗಿಲ್ಲ ಯಾರಿಲ್ಲವೆಂದು,ಹೋದೆಯಾ!!ಅಳುತ್ತಿದ್ಯಾ ಕಂದಾ ಅಳುವೆಯಾ?  ನಿನ್ನ ಹಿಂದಣ ಜನುಮದ ಕೊಳೆ ತೊಳೆಯಲೆಂದು !!ಪಲ್ಲವಿ (ತಾರಕ ತಂಬೂರಿ-ಕವನ ಸಂಕಲನ)ಈ ಕವನದಿ ಅಡಕವಾದ ಸಾರಾಂಶ ಅತ್ಯಂತ ಗಂಭೀರವಾದ-ತಾತ್ವಿಕ ಹಾಗೂ ಕರುಣಾಜನಕವಾದ ಭಾವವನ್ನು ಹೊತ್ತುಕೊಂಡಿದೆ.ಈ ಕವನವು ಮಗು ಅಳುವಿಕೆಗೆ ಕಾರಣವಾಗಿರುವ ಅಜ್ಞಾತ -ನೋವಿನ ಹಿಂದೆ ಇರುವ ಹಿಂದಿನ ಜನ್ಮದ ಪಾಪ–ಪುಣ್ಯ, ಸುಖ–ದುಃಖ ಮತ್ತು ಜೀವನದ ಅನಿವಾರ್ಯ ಬಂಧನಗಳನ್ನು ಪ್ರಶ್ನಿಸುವ ತಾಯಿಯ ಅಂತರಾಳದ ಮಾತುಗಳಾಗಿ ರೂಪಗೊಂಡಿವೆ.ತಾಯಿ ಮಗುವಿನ ಅಳುವನ್ನು ಕೇವಲ ಹಸಿವು ಅಥವಾ ಅಸೌಖ್ಯವೆಂದು ನೋಡದೆ, “ನಿನ್ನ ಹಿಂದಿನ ಜನ್ಮದ ನೋವುಗಳು ಈಗ ಅಳುವಾಗಿ ಹೊರಹೊಮ್ಮುತ್ತಿವೆಯೇ?” ಎಂದು ಭಾವಿಸುತ್ತ ಗರ್ಭದಲ್ಲೇ ಅನುಭವಿಸುವ ಬಂಧನ,ಜನನದ ವೇಳೆ ಉಸಿರಾಟದ ಸಂಕಟ,ಬಟ್ಟೆಯಿಲ್ಲದ ದೇಹದೊಂದಿಗೆ ಈ ಲೋಕಕ್ಕೆ ಬೀಳುವ ಅಸಹಾಯಕತೆ,ಹೋದ ಜನುಮದಲ್ಲಿ ಇದ್ದ ತಾಯಿ–ತಂದೆ ಬಂಧು–ಬಳಗವಿಲ್ಲದ ಏಕಾಂತತೆ.. ಹಿಂದಣ ಜನುಮದ ಜೀವನ,ಮೊಲೆಹಾಲು, ತಾಯಿಯ ಪ್ರೀತಿ ಸಿಗುವುದೇ ಎಂಬ ಅನಿಶ್ಚಿತತೆ….. ಇವೆಲ್ಲವನ್ನು ಹಿಂದಿನ ಜನ್ಮದ ಕರ್ಮಫಲಗಳ ಪರಿಣಾಮವಾಗಿ “ಮನುಷ್ಯ ಒಂಟಿಯಾಗಿ ಬಂದು,ಒಂಟಿಯಾಗಿಯೇ ಹೋಗುವವನು”—ಎಂಬ ಜೀವನದ ಸತ್ಯವನ್ನು ತಿಳಿಸಲಾಗಿದೆ. ಬಂಧುಗಳು, ಸಂಬಂಧಗಳು ಎಲ್ಲವೂ ಕ್ಷಣಿಕವೆಂಬ ತತ್ವವನ್ನೂ ಈ ಕವನ ಒತ್ತಿಹೇಳುತ್ತದೆ. ಅಂತಿಮವಾಗಿ ಮಾನವ ಜೀವನವು ಕರ್ಮಬಂಧನದಿಂದ ನಿಯಂತ್ರಿತ, ನೋವು ಸಹಜ, ಅಳುವು ಅಜ್ಞಾನದಿಂದ ಹೊರಡುವ ಪ್ರತಿಕ್ರಿಯೆ ಎಂಬ ತಾತ್ವಿಕ ಸಂದೇಶವನ್ನು ಸಾರುತ್ತದೆ. ಒಟ್ಟಿನಲ್ಲಿ ಮಗುವಿನ ಅಳುವಿನ ಮೂಲಕ ಮಾನವ ಜನ್ಮದ ನೋವು, ಕರ್ಮಸಿದ್ಧಾಂತ ಮತ್ತು ಬದುಕಿನ ಏಕಾಂತ ಸತ್ಯವನ್ನು ಪ್ರಶ್ನಿಸುವ ತಾತ್ವಿಕತೆ ಭರಿತವಾದ ಆಧ್ಯಾತ್ಮಿಕ ಮೆರಗು ಈ ಕವನಕ್ಕಿದೆ. ಹೀಗೆ ಗಾಢವಾದ ನೋವನ್ನು ಹೊತ್ತ ತಾಯಿ, ಕೈಯಲ್ಲಿ ಆಡುವ ಚೊಚ್ಚಲ ಮಗನನ್ನು ಕಳೆದುಕೊಂಡು ಬರಿ ಕೈಯಿಂದ ತವರು ಮನೆಯಿಂದ ಗಂಡನ ಮನೆಗೆ ಹೋಗುವ ಹೃದಯಾಂತಕ ಸನ್ನಿವೇಶ ಮುಂದಿನವಾರ ನೋಡೋಣ……….( ಮುಂದುವರೆಯುವುದು) ಸವಿತಾ ದೇಶಮುಖ ಡಾ. ಜಯದೇವಿತಾಯಿ ಲಿಗಾಡೆಯವರ ಮೊಮ್ಮಗಳು, ತಂದೆ-ಡಾ. ಶಂಕರಣ್ಣ ಮೂಗಿ (ಸೋವಿಯತ್ ಲ್ಯಾಂಡ್

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-110 ಒಬ್ಬ ಅಮ್ಮನಕಥೆ ರುಕ್ಮಿಣಿ ನಾಯರ್ ಬದಲಾದ ವಾಸ್ತವ್ಯ ರೈಟರ್ ಕೊಟ್ಟ ಮಾತಿನ ಪ್ರಕಾರ ನಡೆದುಕೊಂಡರು. ಸುಮತಿ ಟೀಚರ್ ಮತ್ತು ಮಕ್ಕಳು ತೋಟದ ದೊಡ್ಡ ಬಂಗಲೆಯ ಹತ್ತಿರವಿರುವ ಮನೆಯ ಕಡೆಗೆ ಪ್ರಯಾಣ ಬೆಳೆಸಲು ಬೇಕಾದ ಸೌಕರ್ಯವನ್ನು ಮಾಡಿಕೊಟ್ಟರು. ತೋಟದ ಲಾರಿಯನ್ನು ತರಿಸಿ, ಕೆಲಸಗಾರರ ಸಹಾಯದಿಂದ ಸುಮತಿಯ ಬಳಿಯಿದ್ದ ಅಲ್ಪಸ್ವಲ್ಪ ವಸ್ತುಗಳನ್ನು ಲಾರಿಯಲ್ಲಿ ತುಂಬಿಸಿ ಸುಮತಿ ವಾಸಿಸಬೇಕಾದ ಮನೆಯ ಬಳಿಗೆ ಕಳುಹಿಸಿಕೊಟ್ಟರು. ಸಾಹುಕಾರರು ಸೂಚಿಸಿದ ಪರಿಹಾರದದಂತೆ ಸುಮತಿ ಮತ್ತು ಮಕ್ಕಳು ದೊಡ್ಡ ತೋಟದ ಬಂಗಲೆ ಹತ್ತಿರ ಇರುವ ಮನೆಯಲ್ಲಿ ಹೊಸದಾಗಿ ವಾಸ್ತವ್ಯ ಹೂಡಿದರು. ಅವರಿಗೆ ಚಿರಪರಿಚಿತವಾದ ಸ್ಥಳವಾಗಿದ್ದ ಕಾರಣ ಅಂತಹಾ ದೊಡ್ಡ ವ್ಯತ್ಯಾಸವೇನೂ ಅನ್ನಿಸಲಿಲ್ಲ. ಆದರೂ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಮರೆಯಲು ಸಾಧ್ಯವೇ ಇರಲಿಲ್ಲ. ಸುಮತಿ ಪ್ರತಿದಿನವೂ ನಡೆದು ಅದೇ ಶಾಲೆಗೆ ಹೋಗುತ್ತಿದ್ದಳು. ಮಕ್ಕಳಿಬ್ಬರು ಬಿಡುವಿರುವಾಗ ಅಮ್ಮನ ಜೊತೆ ಶಾಲೆಯ ಬಳಿ ತೆರಳುತ್ತಿದ್ದರು. ನವೋದಯ ಶಾಲೆಯಲ್ಲಿ ಓದುತ್ತಿದ್ದ ಕೊನೆಯ ಮಗಳು ಈ ಬಾರಿಯೂ ರಜಕ್ಕೆ ಬಂದಳು. ಹೊಸ ವಾಸ್ತವ್ಯ ಅವಳಿಗೂ ಖುಷಿ ಕೊಟ್ಟಿತು. ಆದರೆ ಮೂವರಿಗೂ ಮೊದಲಿನಂತೆ ಸ್ವಚ್ಛಂದವಾಗಿ ತೋಟವನ್ನು ಸುತ್ತಲು ಸಾಧ್ಯವಿರಲಿಲ್ಲ. ಅಲ್ಲಿನ ಪರಿಸರವೇ ಬೇರೆ ಇಲ್ಲಿನ ಪರಿಸರವೇ ಬೇರೆ. ಎರಡನೇ ಮಗಳು ದ್ವಿತೀಯ ಪಿಯುಸಿಯಲ್ಲಿ, ಮೂರನೇ ಮಗಳು ಹತ್ತನೇ ತರಗತಿಯಲ್ಲಿ ಹಾಗೂ ಮೂರನೇ ಮಗಳು ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರಿಗೆ ಅಭ್ಯಾಸ ಮಾಡಲು ಹೆಚ್ಚು ಸಮಯ ಬೇಕಾಗಿರುತ್ತಿತ್ತು.  ಮಕ್ಕಳು ಮೂವರೂ ಓದಿನಲ್ಲಿ ಬಹಳ ಚುರುಕಾಗಿದ್ದುದರಿಂದ ಸುಮತಿಗೆ ಅವರ ವ್ಯಾಸಂಗದ ಬಗ್ಗೆ ಯಾವುದೇ ಚಿಂತೆ ಇರಲಿಲ್ಲ. ಬದಲಿಗೆ ತನ್ನ ಮಕ್ಕಳು ಇನ್ನೇನು ಬೆಳೆದು ದೊಡ್ಡವರಾಗಿದ್ದಾರೆ. ಎಲ್ಲರೂ ಸಾಧ್ಯವಾದಷ್ಟು ವಿದ್ಯಾಭ್ಯಾಸವನ್ನು ಮುಗಿಸಿ ಒಳ್ಳೆಯ ಕೆಲಸಗಳಿಗೆ ಸೇರುತ್ತಾರೆ ಎಂಬ ಭರವಸೆ ಇತ್ತು. ಇಬ್ಬರೂ ಹೆಣ್ಣು ಮಕ್ಕಳು ಸರ್ಕಾರಿ ಶಾಲೆ, ಕಾಲೇಜಿನಲ್ಲಿ ಓದುತ್ತಿದ್ದ ಕಾರಣ ಅವರಿಗೆ ಹೆಚ್ಚಿನ ಫೀಸ್ ಹಣವನ್ನು ಭರಿಸುವಂತಿರಲಿಲ್ಲ. ಹಾಗೂ ಇಬ್ಬರೂ ಪಠ್ಯ ವಿಷಯಗಳಲ್ಲಿ ಉತ್ತಮರಾಗಿದ್ದ ಕಾರಣ ಸ್ಪೈಸಸ್ ಬೋರ್ಡ್ ನಿಂದ ಅವರಿಬ್ಬರಿಗೂ ಪ್ರತಿ ವರ್ಷವೂ ವಿದ್ಯಾರ್ಥಿ ವೇತನ ದೊರೆಯುತ್ತಿತ್ತು. ಮೂರನೇ ಮಗಳು ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾರಣ ಅವಳ ಎಲ್ಲಾ ಖರ್ಚುಗಳನ್ನು ಸರ್ಕಾರವೇ ಭರಿಸುತ್ತಿತ್ತು. ಕಡುಬಡತನದ ಜೀವನವಾದರೂ ಅಮ್ಮ ಮಕ್ಕಳು ಸಂತೋಷದಿಂದಲೇ ಬದುಕುತ್ತಿದ್ದರು. ಈಗೀಗ ಸುಮತಿಗೆ ಕೇರಳದ ತನ್ನ ಮನೆ ಅಪ್ಪ ಅಮ್ಮ, ಅಕ್ಕ, ತಮ್ಮಂದಿರು, ತಂಗಿ ಹಾಗೂ ಸಂಬಂಧಿಕರ ನೆನಪು ಬಹಳವಾಗಿ ಕಾಡುತ್ತಿತ್ತು. ಅಕ್ಕ ಸಕಲೇಶಪುರದಲ್ಲಿ ಇರುವುದರಿಂದ ಗುರುವಾರ ಸಂತೆಗೆ ಹೋದಾಗ ಕೆಲವೊಮ್ಮೆ ಅಕ್ಕನ ಮನೆಗೆ ಹೋಗಿ ಅಕ್ಕನನ್ನು ಕಂಡು ಮಾತನಾಡಿಸಿ ಬರುತ್ತಿದ್ದಳು. ಒಮ್ಮೊಮ್ಮೆ ಸುಮತಿ ಮತ್ತು ಮಕ್ಕಳು ಅವರ ಮನೆಯಲ್ಲಿ ಒಂದು ರಾತ್ರಿ ಕಳೆದು ಮಾರನೇ ದಿನ ತಮ್ಮ ಮನೆಯ ಕಡೆಗೆ ಹೊರಡುತ್ತಿದ್ದರು. ದೊಡ್ಡಮ್ಮನ ಮಕ್ಕಳಲ್ಲಿ ಕಿರಿಯ ಅಣ್ಣ ಎಂದರೆ ಈ ನಾಲ್ಕು ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು. ಚಿಕ್ಕಮ್ಮನ ಮಕ್ಕಳನ್ನು ತನ್ನ ಸ್ವಂತ ತಂಗಿಯರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಆತ. ಅವರೆಲ್ಲರೂ ಮನೆಗೆ ಬಂದಾಗ ಹತ್ತಿರದಲ್ಲಿಯೇ ಇರುವ ಥಿಯೇಟರ್ ಗೆ ಕರೆದುಕೊಂಡು ಹೋಗಿ ಸಿನಿಮಾ ತೋರಿಸುತಿದ್ದ.  ಸುಮತಿಯ ತಮ್ಮಂದಿರು ಇಬ್ಬರೂ ಕೆಲಸದ ನಿಮಿತ್ತ ದೂರದ ಊರಿಗೆ ಹೋಗಿದ್ದರು. ಹಿರಿಯ ತಮ್ಮ ಹಾಸನದಲ್ಲಿ ವಾಸ್ತವ್ಯವಿರುವಾಗ ಅಪರೂಪಕ್ಕೊಮ್ಮೆ ಅಲ್ಲಿಗೆ ಮಕ್ಕಳೊಂದಿಗೆ ಹೋಗಿ ಬರುತ್ತಿದ್ದಳು. ಈಗ ಅವನು ವರ್ಗಾವಣೆಯಾಗಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ ಮೇಲೆ ಅವನನ್ನು ಕಾಣುವುದು ಸಾಧ್ಯವಿರಲಿಲ್ಲ. ಏಕೆಂದರೆ ಬೆಂಗಳೂರು ಬಹಳ ದೂರವಿದ್ದುದರಿಂದ ಹಾಗೂ ಅವಳಲ್ಲಿ ಅಷ್ಟೊಂದು ಹಣವಿರದ ಕಾರಣ ಅಲ್ಲಿಗೆ ಹೋಗಿ ತಮ್ಮನನ್ನು ಭೇಟಿ ಮಾಡಲು ಸಾಧ್ಯವಿರಲಿಲ್ಲ. ಚಿಕ್ಕ ತಮ್ಮನೂ ಕೂಡ ಗೊರೂರಿನಿಂದ ಕುಶಾಲನಗರದ ಹತ್ತಿರವಿರುವ ಪಿರಿಯಾಪಟ್ಟಣದಲ್ಲಿ ಸ್ವಂತ ಮನೆ ಕಟ್ಟಿಕೊಂಡು ವಾಸವಿದ್ದ. ಅಮ್ಮ ತೀರಿ ಹೋದ ನಂತರ ಸುಮತಿ ಎಂದಿಗೂ ಕಿರಿಯ ತಮ್ಮನನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಹಿರಿಯ ತಮ್ಮನಿಂದ ಮತ್ತು ಅಕ್ಕನಿಂದ ಅವನ ಯೋಗ ಕ್ಷೇಮದ ವಿಚಾರಗಳು ತಿಳಿಯುತ್ತಿದ್ದವೇ ವಿನಹ ಅವಳೆಂದೂ ಅವನ ಮನೆಗೆ ಹೋಗಿರಲಿಲ್ಲ. ಅವನಿಗೆ ಮದುವೆಯಾಗಿ ನಾಲ್ಕು ಮಕ್ಕಳಿರುವ ವಿಚಾರವು ಅಕ್ಕನಿಂದ ಸುಮತಿಗೆ ತಿಳಿದಿತ್ತು. ತನ್ನ ಕಷ್ಟಕರವಾದ ಜೀವನದ ಬಗ್ಗೆ ಅವನಲ್ಲಿ ಹೇಳಿಕೊಳ್ಳಲು ಸುಮತಿಗೆ ಮನಸ್ಸಿರಲಿಲ್ಲ. ಅದೇಕೋ ಇವರಿಬ್ಬರ ಭೇಟಿ ಸಾಧ್ಯವಾಗಲೇ ಇಲ್ಲ. ಕಾಲವು ಎಲ್ಲವನ್ನೂ ಬದಲು ಮಾಡಿತ್ತು. ಸುಮತಿಗೆ ಕಿರಿಯ ತಮ್ಮನನ್ನು ನೋಡಲೇಬೇಕು ಎಂಬ ಹಂಬಲವೂ ಹೆಚ್ಚಾಗಿತ್ತು. ಆದರೆ ಮಕ್ಕಳನ್ನು ಕರೆದುಕೊಂಡು ತಾನು ಅವನ ಮನೆಗೆ ಹೋಗುವ ಅವಕಾಶವೇ ಇರಲಿಲ್ಲ. ಏಕೆಂದರೆ ಅವಳಿಗೆ ಬರುವ ಸಂಬಳದಲ್ಲಿ ಹೊಟ್ಟೆ ಹೊರೆಯುವುದೇ ಕಷ್ಟಕರವಾಗಿತ್ತು.  ದೊಡ್ಡ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ ಮೇಲೆ ಮಲಯಾಳಿ ಡ್ರೈವರ್ ಕುಟುಂಬದೊಂದಿಗೆ ಸುಮತಿ ಹಾಗೂ ಮಕ್ಕಳು ಹೆಚ್ಚಾಗಿ ಬೆರೆಯಲು ಅವಕಾಶವಾಯಿತು. ಸುಮತಿಯ ಕಷ್ಟ ಸುಖಗಳನ್ನು ಡ್ರೈವರ್ ಹಾಗೂ ಆತನ ಪತ್ನಿ ಕೇಳಿ ತಿಳಿದುಕೊಳ್ಳುತ್ತಿದ್ದರು. ಅವರು ಪಡುತ್ತಿರುವ ಕಷ್ಟವನ್ನು ಕಂಡು ಮರುಗಿ ಸಾಹುಕಾರರ (ಪತ್ನಿ) ಅಮ್ಮ ನಲ್ಲಿ ಡ್ರೈವರ್ ಹೇಳಿಕೊಳ್ಳುತ್ತಿದ್ದರು. ಸುಮತಿಯ ಕಷ್ಟವನ್ನು ಅರಿತ ಅಮ್ಮ ಸುಮತಿಯನ್ನು ಕರೆದು ಬಂಗಲಗೆ ಸೇರಿಕೊಂಡಂತೆ ಇದ್ದ ಸಹಕಾರಿ ಅಂಗಡಿಯಿಂದ ತಿಂಗಳಿಗೆ ಒಂದಿಷ್ಟು ರೇಷನ್ ಕೊಡಿಸುವ ವ್ಯವಸ್ಥೆ ಮಾಡಿದರು. ಹಳೆಯದಾದರೂ ಹೊಸದರಂತೆ ಕಾಣುವ ಸೀರೆಗಳನ್ನು ಹಾಗೂ ತನ್ನ ಮಕ್ಕಳ ಬಟ್ಟೆಗಳನ್ನು ಸುಮತಿಯ ಮಕ್ಕಳಿಗೆ ಕೊಡುತ್ತಿದ್ದರು. ಹಾಗಾಗಿ ಬಟ್ಟೆಬರೆಯ ಬಗ್ಗೆ ಚಿಂತಿಸುವ ಅಗತ್ಯ ಸುಮತಿಗೆ ಇರಲಿಲ್ಲ. ಸುಮತಿಯ ಮಕ್ಕಳು ಬುದ್ಧಿವಂತರು ಎನ್ನುವ ವಿಷಯ ಅಮ್ಮನಿಗೆ ತಿಳಿದಿತ್ತು. ಹಾಗಾಗಿ ಆ ಮಕ್ಕಳ ಬಗ್ಗೆ ಅಮ್ಮನಿಗೆ ಕಾಳಜಿ ಇತ್ತು. ಸುಮತಿಯ ಮಕ್ಕಳಿಬ್ಬರೂ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದರು. ಸುಮತಿ ಈಗೀಗ ಮೊದಲಿಗಿಂತ ನಿತ್ರಾಣಗೊಳ್ಳುತ್ತಿದ್ದಳು. ಗಾಳಿ,ಮಳೆ, ಬಿಸಿಲು ಎನ್ನದೇ ಸುಮಾರು ದೂರವಿದ್ದ ಶಾಲೆಗೆ ಕಾಲ್ನಡಿಗೆಯಲ್ಲೇ ಹೋಗಿ ಬರುತ್ತಿದ್ದಳು. ಈಗಿಗ ಅವಳಿಗೆ ಹೆಚ್ಚು ಆಯಾಸವಾಗುತ್ತಿತ್ತು. ಆದರೂ ಏನೂ ಮಾಡುವಂತಿರಲಿಲ್ಲ. ಮಕ್ಕಳ ಓದು ಮುಗಿದು ಒಳ್ಳೆಯ ಕೆಲಸ ದೊರಕುವವರೆಗೂ ತಾನು ಹೇಗಾದರೂ ದುಡಿಯಲೇಬೇಕಿತ್ತು. 

Read Post »

ಅಂಕಣ ಸಂಗಾತಿ, ನಿಮ್ಮೊಂದಿಗೆ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ,”ಅಮೋಘಸಿದ್ಧ ಪರಂಪರೆಯ ಶ್ರೇಷ್ಠ ಸಾಧಕ ಶಿವಯೋಗಿ ಶ್ರೀ ಯಲ್ಲಾಲಿಂಗರು.ಡಾ ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣರ ಸಂಗಾತಿ ಡಾ ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ, “ಅಮೋಘಸಿದ್ಧ ಪರಂಪರೆಯ ಶ್ರೇಷ್ಠ ಸಾಧಕ ಶಿವಯೋಗಿ ಶ್ರೀ ಯಲ್ಲಾಲಿಂಗರು. ಕುರುಬರ ಕುಲಗುರು ಒಡೆಯರ ಶಾಖೆಯೊಂದರ ಪ್ರಮುಖ ಸಿದ್ಧ ಅಮೋಘಸಿದ್ಧ ಅಪ್ಪಟ ಜನಪದರ ದೈವ. ಈತನ ಮಟ್ಟಿಗೆ ಜನಪದರ ನಂಬಿಕೆಯೇ ಚರಿತ್ರೆ; ಭಂಡಾರದ ಮಳೆ ಸುರಿದಲ್ಲೇ ಜಾತ್ರೆ. ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಜನಮಾನಸದಲ್ಲಿ ಕುರುಬರ ಇನ್ನೋರ್ವ ಕುಲಗುರುವಾದ ರೇವಣಸಿದ್ಧರಷ್ಟೇ ಪ್ರಖ್ಯಾತನಾಗಿದ್ದಾನೆ. ಆದರೆ ರೇವಣಸಿದ್ಧನಿಗಿರುವಂತೆ ಈತನ ಕುರಿತು ಶಾಸನಾಧಾರಗಳಾಗಲಿ, ಶಿಷ್ಟಕಾವ್ಯಗಳಾಗಲಿ ಇಲ್ಲ. ಈತನ ಜೀವಂತಿಕೆ ಇರುವುದು ಜನಪದರ ಮೌಖಿಕ ಸಾಮಗ್ರಿಗಳಲ್ಲಿ. ಅಮೋಘಸಿದ್ಧನ ಮೂಲ ನೆಲೆ ವಿಜಯಪುರದಿಂದ ಹತ್ತನ್ನೆರಡು ಕಿಲೋ ಮೀಟರ್ ದೂರದ ಅರಿಕೇರಿ ಸಮೀಪದ ಮುಮ್ಮೆಟಗುಡ್ಡ. ಇವನ ಜಾತ್ರೆಯನ್ನು ಜನ ಇಂದಿಗೂ ಮುಮ್ಮಡಪ್ಪನ ಜಾತ್ರೆ ಎಂದೇ ಕರೆಯುತ್ತಾರೆ. ಅಮೋಘಸಿದ್ಧನನ್ನು ಕೈಲಾಸದಲ್ಲಿ ಉದ್ಭವಿಸಿ ಭೂಲೋಕದಲ್ಲಿ ಅವತರಿಸಿದಂತೆ ಪಾರಂಪರಿಕ ಪುರಾಣ ಕಥನದಲ್ಲಿ ಕಲ್ಪಿಸಿಕೊಂಡಿರುವುದರಿಂದ ಈತ ಕಾಲಾತೀತನಾಗಿ ಗೋಚರಿಸುತ್ತಾನೆ. ಆ ಪ್ರಕಾರ ಈತ ಅವತರಿಸಿದ ನಂತರ ಉತ್ತರ ಭಾರತದ ಹಸ್ತಿನಾವತಿಯಲ್ಲಿ ಕೆಲ ದಿನವಿದ್ದು ಪಾಂಡವರು ಕೈಕೊಂಡ ಯಾಗದಲ್ಲಿ ಪಾಲ್ಗೊಳ್ಳುತ್ತಾನೆ. ಕುಂತಿಯಿಂದ ಸೇವೆ ಪಡೆದು ವಾರದ ಒಡೆಯ ಅನ್ನಿಸಿಕೊಳ್ಳುತ್ತಾನೆ.  ಅಮೋಘಸಿದ್ಧನ ಮಗನಾದ ಬಿಳಿಯಾನಿಸಿದ್ದನು ಕಲ್ಯಾಣಪಟ್ಟಣಕ್ಕೆ ಹೋಗಿ ಅಲ್ಲಿನ ಮಡಿವಂತ ಲಿಂಗಾಯತರಿಗೆ ನೀವೆಲ್ಲ ಕಟ್ಟುಲಿಂಗದವರಾದರೆ ನಾನು ಹುಟ್ಟುಲಿಂಗದವನು ಎಂಬುದನ್ನು ಸಾಬೀತುಪಡಿಸುತ್ತಾನೆ.  ಅಮೋಘಸಿದ್ಧನ ಮೊದಲ ಮಗನಾದ ಅವತಾರ ಅವಧೂಸಿದ್ಧ ವಿಜಾಪುರದ ಶೇಖಾಶಾಹಿಗಳೊಂದಿಗೆ ಕಾದಾಡಿದ್ದು ಹಾಗೂ ಅಮೋಘಸಿದ್ಧನ ಮೊಮ್ಮಗನಾದ ಮಲಕಾರಿಸಿದ್ಧನು ಆನೆಗುಂದಿ ಅರಸರೊಂದಿಗೆ ಹಾಗೂ ಸುರಪುರದ ದೊರೆಗಳೊಂದಿಗೆ ಹಸು ಮೇಯಿಸುವ ಜಾಗೆಯ ವಿಷಯದಲ್ಲಿ ಹಾಕ್ಯಾಡಿದ ವಿವರ ಜನಪದ ಮೌಖಿಕ ಸಾಮಗ್ರಿಗಳಲ್ಲಿ ನೈಜವಾಗಿ ದೊರೆಯುತ್ತವೆ.  …ಹೀಗೆ ತಂದೆ-ಮಗ-ಮೊಮ್ಮಗ ಮೂರು ತಲೆಮಾರುಗಳ ಈ ಕಥನದಲ್ಲಿ ಹಸ್ತಿನಾವತಿಯ ದ್ವಾಪರಯುಗ,  ಕಲ್ಯಾಣದ ಬಸವಯುಗ,  ವಿಜಾಪುರದ ಶಾಹಿಕಾಲ, ಆನೆಗುಂದಿಯ  ವಿಜಯನಗರದ ಕಾಲ ಹಾಗೂ ಸುರಪುರದ ಪಾಳೆಗಾರರ ಕಾಲ  ಸೇರಿದಂತೆ ವಿವಿಧ ಕಾಲಘಟ್ಟದಲ್ಲಿ ಇವರು ಗೋಚರಿಸುತ್ತಾರಾದ್ದರಿಂದ ಯಾವುದೇ ಕಾಲದ ಚೌಕಟ್ಟಿಗೆ ಸಿಗದೆ ಇಡೀ ಪರಂಪರೆ ಕಾಲಾತೀತವಾಗಿ ತೋರುತ್ತದೆ.  ಜನಪದರ ನಾಲಗೆಯ ನಂಬಿಕೆಗಳನ್ನೇ ನೆಚ್ಚಿ ತಲತಲಾಂತರಗಳಲ್ಲಿ ಹರಿದು ಬರುವ ಅಮೋಘಸಿದ್ದನ ಕಥನ ಪುರಾಣೀಕರಣಗೊಂಡು ಕಾಲದ ಹಂಗನ್ನು ಹರಿದುಕೊಳ್ಳುವ ಪರಿಯೇ ವಿಸ್ಮಯಕಾರಿಯಾದದ್ದು. ಈ ವಿಸ್ಮಯಕಾರಿ ಕಥನವನ್ನು ಅಮೋಘಸಿದ್ದ ಪರಂಪರೆಯ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿರುವ ಡಾ.ಚನ್ನಪ್ಪ ಕಟ್ಟಿಯವರು  ಕಟ್ಟಿಕೊಟ್ಟಿದ್ದಾರೆ.  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ಶಿವಪ್ಪ-ಕಾಶಿಬಾಯಿ ದಂಪತಿಗಳ ಮಗನಾಗಿ ಶ್ರೀ ಯಲ್ಲಾಲಿಂಗರು ಜನಿಸಿದರು. ಬಾಲ್ಯದಿಂದಲೇ ಶಿವಧ್ಯಾನದಲ್ಲಿದ್ದ ಇವರು, ಮುಗಳಖೋಡದ ಸ್ಮಶಾನಭೂಮಿಯನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡು, ಭಿಕ್ಷಾಟನೆ, ಸಮಾಜ ಸೇವೆ ಹಾಗೂ ದಾಸೋಹದ ಮೂಲಕ ಭಕ್ತರಿಗೆ ಮಾರ್ಗದರ್ಶನ ನೀಡಿದ ಮಹಾ ಸಿದ್ಧಿಪುರುಷರು.  ಯಲ್ಲಾಲಿಂಗ ಮಹಾರಾಜರ ಜೀವನದ ಪ್ರಮುಖಾಂಶಗಳು: ಬಾಲ್ಯ ಮತ್ತು ಕಾಯಕ  ಬಾಲ್ಯದಲ್ಲಿ ಕುರಿ ಕಾಯುವ ಕಾಯಕ ಮಾಡುತ್ತಿದ್ದ ಯಲ್ಲಪ್ಪ, ಇಪ್ಪತ್ತರ ಹರೆಯದಲ್ಲಿ ಕುಸ್ತಿಪಟುವಾಗಿದ್ದರು. ವೈವಾಹಿಕ ಜೀವನ:  ಮನೆಯವರ ಒತ್ತಾಯದ ಮೇರೆಗೆ ಹೊನ್ನಮ್ಮ ಎಂಬುವರೊಂದಿಗೆ ವಿವಾಹವಾದರು. ಕರ್ಮಭೂಮಿ:  ಮುಗಳಖೋಡ ಗ್ರಾಮದ ಸ್ಮಶಾನ ಭೂಮಿಯನ್ನು ಮುಕ್ತಿ ಮಂದಿರವನ್ನಾಗಿ ಮಾಡಿಕೊಂಡು, ಅಧ್ಯಾತ್ಮಿಕ ಜೀವನ ನಡೆಸಿದರು. *ಸಿದ್ಧಿ ಮತ್ತು ಸಮಾಜ ಸೇವೆ:  ಸಿದ್ಧಲಿಂಗರ ಆಶೀರ್ವಾದ ಪಡೆದಿದ್ದ ಯಲ್ಲಾಲಿಂಗರು, ಸುತ್ತಮುತ್ತಲಿನ ಗ್ರಾಮದ ಜನರಿಗೆ ಸತ್ಯದ ಮಾರ್ಗ ತೋರಿಸುತ್ತಿದ್ದರು. ಮುಗಳಖೋಡ ಮಠ:  ಯಲ್ಲಾಲಿಂಗ ಮಹಾರಾಜರ ಕರ್ತೃ ಗದ್ದುಗೆ ಮುಗಳಖೋಡದಲ್ಲಿದ್ದು, ಇದು ಭಕ್ತರ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿ 24 ಗಂಟೆಗಳ ಕಾಲ ದಾಸೋಹ (ಅನ್ನದಾನ) ನಡೆಯುತ್ತದೆ.  ಮುಗಳಖೋಡದ ಶ್ರೀ ಯಲ್ಲಾಲಿಂಗ ಮಹಾರಾಜರು ಉತ್ತರದ ಕರ್ನಾಟಕದಲ್ಲಿ ಅತ್ಯಂತ ಪೂಜನೀಯರಾಗಿದ್ದು, ಅವರ ಜೀವನ ಸತ್ಯ, ಭಕ್ತಿ ಮತ್ತು ಸೇವಾ ಮನೋಭಾಕ್ಕೆ ಸಾಕ್ಷಿಯಾಗಿದೆ. ಅಮೋಘ ಸಿದ್ಧ ಪರಂಪರೆಯ ಶ್ರೀ ಸಿದ್ಧಲಿಂಗರ ಆಶೀರ್ವಾದ ಕೃಪೆಯಿಂದ ತಮ್ಮ ಬದುಕನ್ನು ಶಿವಯೋಗ ಸಾಧನಕ್ಕೆ ಮೀಸಲಿಟ್ಟವರು ಪೂಜ್ಯರಾದ ಶ್ರೀ ಯಲ್ಲಾಲಿಂಗರು. ಮುಗುಳುಖೋಡ ಮುತ್ಯಾ ಎಂದು ಜನರು ಕರೆಯುತ್ತಿದ್ದರು. ಮೈಲಾರಲಿಂಗ ಎಂದರೆ ಮೈಯಲ್ಲಿ ಆರು ಲಿಂಗ ಗುರು ಲಿಂಗ ಜಂಗಮ ಲಿಂಗ ಹೀಗೆ. ಆದರೆ ಯಲ್ಲಾಲಿಂಗವೆಂದರೆ ಇಡೀ ಕಾಯ ಶರೀರವೇ ಲಿಂಗ ಎಲ್ಲವೂ ಲಿಂಗ ಎಂಬಂತೆ ಬಸವ ತತ್ವಕ್ಕೆ ಅನುಗುಣವಾಗಿ ಬಾಳಿ ಬದುಕಿದ ನಾವು ಕಂಡ ಶ್ರೇಷ್ಠ ಶಿವಯೋಗ ಸಾಧಕರು. ಬಡವರ ಪಾಲಿನ ಆಶಾಕಿರಣ ಭಕ್ತರ ನಂಬಿಕೆಯ ಶ್ರೇಷ್ಠ ಶಿವಯೋಗ ಸಾಧಕರು ಯಲ್ಲಾಲಿಂಗರು. ಬಂದ ಭಕ್ತರಿಗೆ ಅಂಬಲಿ ನೀಡಿ ಪ್ರೀತಿ ಗೌರವ ವಿಶ್ವಾಸದಿಂದ ಮಾತನಾಡಿ ಅವರ ದುಗುಡು ದುಮ್ಮಾನಗಳನ್ನು ದೂರು ಮಾಡುತ್ತಿದ್ದರು. ಜಿಡಗಾ ಮುಗುಳುಖೋಡ ಬೆಳಗಾವಿಯ ಶ್ರೀನಗರದಲ್ಲಿ ಇವರ ಮಠವಿದೆ.  ಯಲ್ಲಾಲಿಂಗರ ನಂತರ ಶ್ರೀ ಸಿದ್ಧರಾಮಸ್ವಾಮಿಗಳು ಮತ್ತೆ ಈಗ ಶ್ರೀ ಡಾ ಮುರುಘರಾಜೇಂದ್ರ ಶ್ರೀಗಳು ತಮ್ಮ ದಿವ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಹೊರಟಿದ್ದಾರೆ.ಇಂತಹ ಪೂಜ್ಯರನ್ನು ಹೊಂದಿದ ನಮ್ಮ ಕರ್ನಾಟಕದ ನೆಲವೇ ಪಾವನ ಸುಕ್ಷೇತ್ರ. ಇವರಿಗೆ ಭಕ್ತಿಪೂರ್ವಕ ಶರಣಾರ್ಥಿಗಳು. ________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಸಾವಿಲ್ಲದ ಶರಣರು ಮಾಲಿಕೆ,”ಅಮೋಘಸಿದ್ಧ ಪರಂಪರೆಯ ಶ್ರೇಷ್ಠ ಸಾಧಕ ಶಿವಯೋಗಿ ಶ್ರೀ ಯಲ್ಲಾಲಿಂಗರು.ಡಾ ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-28 ಪದೋನ್ನತಿ ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೨೮ ೧೯೯೭……..  ಮಕ್ಕಳಾಗಲು ಎಷ್ಟೇ ಚಿಕಿತ್ಸೆ ತೆಗೆದುಕೊಂಡರೂ ಫಲಕಾರಿಯಾಗದೆ ಏಕೋ ತುಂಬಾ ಬೇಸರ. ಹಾರ್ಮೋನ್ ಚಿಕಿತ್ಸೆಯ ಪರಿಣಾಮ ತೂಕದಲ್ಲಿ ಹೆಚ್ಚಳ. ಒಂದು ತರಹ ಖಿನ್ನತೆಗೆ ಒಳಗಾಗುತ್ತಿದ್ದೆ. ವಿಭಾಗೀಯ ಕಛೇರಿಯಲ್ಲಿ ಡಿಪಾರ್ಟ್ಮೆಂಟ್ ಬದಲಾವಣೆಗೆ ಅವಕಾಶವಿರಲಿಲ್ಲ ಆಗ. ಇತ್ತೀಚೆಗೆ ೧೫ ವರ್ಷಗಳಿಂದ ಶಾಖೆಗಳಲ್ಲಿರುವಂತೆ ೩ ವರ್ಷಕ್ಕೊಮ್ಮೆ ಬದಲಾವಣೆ ಇದೆ. ಈಗ ನನ್ನೊಂದಿಗೆ ಸಹಾಯಕರಾಗಿ ರಾಮಚಂದ್ರ ಮತ್ತು ಉನ್ನತದರ್ಜೆ ಸಹಾಯಕರಾಗಿ ಮುರಳಿ ಇದ್ದರು. ಸಹಾಯಕ ವಿಭಾಗಾಧಿಕಾರಿಯಾಗಿ  ಶ್ರೀಮತಿ ಪ್ರಮದಾ ಪ್ರಕಾಶ್ ಅವರು ಬೆಂಗಳೂರಿನಿಂದ ಬಂದಿದ್ದರು. ಇದೇ ಮೊದಲು ನಾನು ಮಹಿಳಾ ಅಧಿಕಾರಿಯೊಂದಿಗೆ ಕೆಲಸ ಮಾಡಿದ್ದು. ಸುವರ್ಣ ಅವರಂತೂ ಇದ್ದರು. ತುಂಬಾ ಸೌಹಾರ್ದಕರ ವಾತಾವರಣವಿತ್ತು. ಆ ಸಮಯದಲ್ಲೇ ನನ್ನ ತಂಗಿ ವೈಶಾಲಿಯ ವಿವಾಹವೂ ಜರುಗಿದ್ದು. ಪ್ರಮದಾ ಮೇಡಂ ಅವರು ತುಂಬಾ ತಿಳಿ ಹೇಳಿ ಉನ್ನತ ದರ್ಜೆ ಸಹಾಯಕಿಯಾಗಿ ಬಡ್ತಿ ತೆಗೆದುಕೊಳ್ಳಲು ಪ್ರೇರೇಪಿಸಿದರು. ಸ್ಥಳ ಬದಲಾವಣೆ ಆದರೆ ಚಿಕಿತ್ಸೆಗು ಒಳ್ಳೆಯದು ಎಂದು ಅವರು ಹೇಳಿದ ಮಾತು ನನ್ನಲ್ಲೂ ಒಂದು ಹೊಸ ಆಸೆ ಮೂಡಿಸಿತು. ಹಾಗಾಗಿ ಆ ವರ್ಷ ಉನ್ನತ ದರ್ಜೆ ಸಹಾಯಕರ ಬಡ್ತಿಗಾಗಿ ಕರೆ ಕೊಟ್ಟಾಗ ನಾನು ಸಹ ಅರ್ಜಿ ಕೊಟ್ಟೆ. ನಮ್ಮ ತಂದೆ ಅಂತೂ ಉದ್ಯೋಗದಲ್ಲಿ ಮುಂದೆ ಬರಲಿ ಎಂದು ತುಂಬಾನೇ ಇಷ್ಟಪಡುತ್ತಿದ್ದರು ಹಾಗಾಗಿಯೇ ನನ್ನ ತಂಗಿ ಸಹ  ಸಹಾಯಕ ಅಧಿಕಾರಿಯಾಗಿ ಹೋಗಿದ್ದು.  ನನಗೂ ಅವರು ಬಡ್ತಿ ತೆಗೆದುಕೊಳ್ಳಲು ಹೇಳಿ ಅದನ್ನು ರವೀಶ್ ಅವರು ಅನುಮೋದಿಸಿದಾಗ ಆಯಿತು ಎಂದುಕೊಂಡಿದ್ದೆ. ಸಾಮಾನ್ಯ ಎಲ್ಲರಿಗೂ ದಿನ ಓಡಾಡುವ ಸ್ಥಳಕ್ಕೆ ಪೋಸ್ಟಿಂಗ್ ಆಗುತ್ತಿತ್ತು . ಒಂದು ಅಥವಾ ಎರಡು ವರ್ಷ ಹೀಗೆ ಓಡಾಡಿದ ನಂತರ ಮೈಸೂರಿಗೆ ವಾಪಸ್ ಬರಬಹುದಿತ್ತು. ಆದರೂ ಕೆಲವು ಗೆಳತಿಯರು ಆರಾಮವಾಗಿ ಮೈಸೂರಿನಲ್ಲಿ ಇರುವುದನ್ನು ಬಿಟ್ಟು ಓಡಾಡುವ ತೊಂದರೆ ತೆಗೆದುಕೊಳ್ಳುವುದು ಏಕೆ ಎಂದು ಸಹ ಕೇಳಿದ್ದರು. ಆದರೂ ಬದಲಾವಣೆಗೆ ಏನೋ ಒಂದು ರೀತಿಯ ತುಡಿತ ಏಕತಾನತೆಯಿಂದ ದೂರ ಹೋಗುವ ಆಸೆ ನನ್ನನ್ನು ಪದೋನ್ನತಿಗೆ ಪ್ರಯತ್ನಿಸುವ ಹಾಗೆ ಮಾಡಿತು. ಇದಕ್ಕೂ ಒಂದು ಪ್ರವೇಶ ಪರೀಕ್ಷೆ ಇರುತ್ತದೆ. ಆದರೆ ಅಸೋಸಿಯೇಟ್ ಪರೀಕ್ಷೆ ಪಾಸಾದವರಿಗೆ ಪ್ರವೇಶ ಪರೀಕ್ಷೆಯಿಂದ ರಿಯಾಯಿತಿ. ಆ ವೇಳೆಗೆ ನನ್ನದು ಅಸೋಸಿಯೇಟ್  ಆಗಿದ್ದರಿಂದ ನಾನು ನೇರ ಸಂದರ್ಶನಕ್ಕೆ ಅರ್ಹಳಾಗಿದ್ದೆ. ಎಂದಿನಂತೆ ಆ ಸಂದರ್ಶನಕ್ಕೆ ನಮ್ಮ ಹೊಸ ವ್ಯವಹಾರ ವಿಭಾಗದಿಂದ ಕೇಳಬಹುದಾದ ಸಂಭವನೀಯ ಪ್ರಶ್ನೆಗಳ ಪಟ್ಟಿ ನಾನೇ ತಯಾರು ಮಾಡಿ ಕೊಟ್ಟಿದ್ದೆ. ಆ ಬಾರಿ ಸಂದರ್ಶನ ಸಮಿತಿಯಲ್ಲಿ ನಮ್ಮ ಹೊಸ ವ್ಯವಹಾರ ವಿಭಾಗದ ಆಡಳಿತ ಅಧಿಕಾರಿಯಾಗಿದ್ದ ಶ್ರೀ ಟಿ ಎಂ ಪರಶಿವಮೂರ್ತಿ ಅವರು ಹಾಗೂ ಪಕ್ಕದಲ್ಲಿ ಇದ್ದ ಯೋಜನಾ ವಿಭಾಗದ ಸಹಾಯಕ ವಿಭಾಗ ಅಧಿಕಾರಿಯಾದ ಶ್ರೀ ಅಶ್ವತ್ಥ ನಾರಾಯಣಾಚಾರ್ ಅವರು ಇದ್ದರು. ನಂಜನಗೂಡಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿರುವಾಗ ಅಶ್ವತ್ಥನಾರಾಯಣಾಚಾರ್  ಅವರೇ ನಮ್ಮ ಶಾಖಾಧಿಕಾರಿ ಆಗಿದ್ದರು . ಆ ಸಮಿತಿಯ ಅಧ್ಯಕ್ಷರಾಗಿ ಗೃಹ ಸಾಲ ವಿಭಾಗದ ಶ್ರೀ ನಾಗರಾಜ್ ಅವರು ನಿಯುಕ್ತರಾಗಿದ್ದರು. ವಿಭಾಗಿಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಒಂದು ಅನುಕೂಲವೆಂದರೆ ಸಂದರ್ಶನ ಸಮಿತಿಯ ಎಲ್ಲರೂ ನಮಗೆ ತಿಳಿದವರಾಗಿ ಜೊತೆಯಲ್ಲಿ ಕೆಲಸ ಮಾಡಿದವರಾಗಿದ್ದರಿಂದ ಸಂದರ್ಶನ ಎಂದರೆ ಒಂದು ವಿಶೇಷ ಭಯ ಇರುವುದಿಲ್ಲ. ಸಂದರ್ಶನದ ಸ್ವಲ್ಪ ದಿನ ಮುಂಚೆ ಒಂದು ಹೊಸ ಚೂಡಿದಾರ್ ಕೊಂಡಿದ್ದೆ .ಅದನ್ನೇ ಸಂದರ್ಶನಕ್ಕೆ ಹಾಕಿಕೊಂಡು ಹೋಗುವುದು ಎಂದು ನಿರ್ಧರಿಸಿದೆ. ನನಗೆ ಇಷ್ಟವಾದ ಬೂದಿ ಬಣ್ಣದ ಡ್ರೆಸ್ ಅದು. ಸಂದರ್ಶನದ ಕೊಠಡಿ ಒಳಗೆ ಪ್ರವೇಶಿಸಿ  ಅವರುಗಳಿಗೆ ವಂದಿಸಿ ಕುರ್ಚಿಯಲ್ಲಿ ಕುಳಿತಿದ್ದಾಯಿತು. ಪರಶಿವಮೂರ್ತಿಯವರು ನಗುನಗುತ್ತಲೆ ಏನ್ರೀ ಕೇಳೋದು ನಿಮ್ಮನ್ನ ನೀವೇ ತಯಾರು ಮಾಡಿ ಕೊಟ್ಟಿರುವುದು ಈ ಪಟ್ಟಿ ಎಂದರು. ನಂತರ ನಮ್ಮ ಹೊಸ ವ್ಯವಹಾರ ವಿಭಾಗದಲ್ಲಿ ಅವರು ಹೊಸಬರಾಗಿದ್ದಾಗ ಅವರಿಗೆ ಅಲ್ಲಿನ ಕೆಲಸ ನಾನೇ ಹೇಳಿಕೊಟ್ಟಿದ್ದು.  ಹಾಗಾಗಿ ಏನು ಕೇಳಲಿ ಎಂದು ತಮಾಷೆ ಮಾಡಿದ್ದರು. ಅಶ್ವಥನಾರಾಯಣಚಾರ್ ಅವರು ಸಹ ಒಂದೆರಡು ಔಪಚಾರಿಕ ಪ್ರಶ್ನೆಗಳನ್ನು ಕೇಳಿದರು ಅಷ್ಟೇ. ನಾಗರಾಜ ಅವರು ಪಾಲಿಸಿ ಸರ್ವಿಸ್ ಗೆ ಸಂಬಂಧಿಸಿದಂತೆ ಒಂದೆರಡು ಪ್ರಶ್ನೆಗಳನ್ನು ಕೇಳಿದರು. ನನಗೆ ನೆನಪಿರುವುದು ಕಚೇರಿಯಲ್ಲೇ ಪಾಲಿಸಿ ಬಾಂಡ್ ಕಳೆದು ಹೋದಾಗ ಅದರ ತಯಾರಿಕೆಗಾಗಿ ಪಾಲಿಸಿದಾರರಿಂದ ವಸೂಲು ಮಾಡಬೇಕಾದ ಹಣ ಎಷ್ಟು ಎಂದು. ಕಚೇರಿಯಲ್ಲಿ ನಾವೇ ಪಾಲಿಸಿ ಕಳೆದು ಹಾಕಿದಾಗ ನಮ್ಮ ಖರ್ಚಿನಲ್ಲೇ ನಕಲು ಪ್ರತಿಯನ್ನು ತಯಾರು ಮಾಡಬೇಕು ಅದಕ್ಕಾಗಿ ಒಂದು ಆಫೀಸ್ ನೋಟ್ ತಯಾರು ಮಾಡಬೇಕು. ಪಾಲಿಸಿದಾರರಿಂದ ಯಾವ ಹಣವನ್ನು ಪಡೆಯುವಂತಿಲ್ಲ ಎಂದು ಹೇಳಿದ್ದಕ್ಕೆ ಅವರು ತಲೆಯಾಡಿಸಿದರು ಅಷ್ಟೇ. 10 ನಿಮಿಷಗಳಲ್ಲಿ ನನ್ನ ಸಂದರ್ಶನ ಮುಗಿದು ಹೋಗಿತ್ತು ನಮ್ಮ ವಿಭಾಗದ ಎದುರುಗಡೆಯ ಕೊಠಡಿಯಲ್ಲಿ ಸಂದರ್ಶನ ನಡೆದದ್ದು ಹಾಗಾಗಿ ಬಂದವರು ಎಲ್ಲ ನನ್ನ ಸೀಟಿನ ಬಳಿ ಕುಳಿತಿರುತ್ತಿದ್ದರು. ಕೆಲವರನ್ನಂತೂ ಬಹಳ ಪ್ರಶ್ನೆ ಕೇಳಿದ್ದರು ಎಂದು ತಿಳಿಯಿತು. ಹೀಗೆ ಪದೋನ್ನತಿಗೆ ಆಯ್ಕೆ ಮಾಡುವಾಗ ನಾವು ಮಾಡಿದ ಸೇವಾ ಅವಧಿ ಹಾಗೂ ನಮಗೆ ಪ್ರತಿ ವರ್ಷ ಕೊಡುವ ನಮ್ಮ ಸಿ ಅರ್ ಅಂದರೆ ನಮ್ಮ ಕೆಲಸದ ಬಗೆಗಿನ ವಾರ್ಷಿಕ ವರದಿ ಮತ್ತು ಸಂದರ್ಶನದಲ್ಲಿ ನಾವು ಕಳಿಸಿದ ಅಂಕ ಇವೆಲ್ಲವುಗಳನ್ನು ಆಧರಿಸಿ ಅಂಕೆಗಳನ್ನು ಕೊಡುತ್ತಾರೆ. ನಮ್ಮ ಜೀವ ವಿಮಾ ನಿಗಮದ ಒಂದು ಅಲಿಖಿತ ನಿಯಮದಂತೆ ಅಂದು ಶನಿವಾರ ಮಧ್ಯಾಹ್ನ ಫಲಿತಾಂಶ ಹೊರಬಿದ್ದಿತ್ತು. ಅರ್ಹತೆವಾರು ಪಟ್ಟಿಯಲ್ಲಿ ನನ್ನದು ಮೊದಲ ಹೆಸರು. ಇಷ್ಟೆಲ್ಲಾ ಆದರೂ ಒಂದು ರೀತಿಯ ಸಂಧಿಗ್ಧ. ಹೋಗುವುದು ಬೇಡವೋ ಎಂದು. ನೋಡೋಣ ಎಲ್ಲಿಗೆ ಪೋಸ್ಟಿಂಗ್ ಸಿಕ್ಕತ್ತೆ ಅದರ ಮೇಲೆ ನಿರ್ಧರಿಸೋಣ ಎಂದುಕೊಂಡಿದ್ದು.  ನಾನು ಆಯ್ಕೆ ಮಾಡಿ ಕೊಟ್ಟಿದ್ದ ಸ್ಥಳಗಳು ಕೆ ಆರ್ ನಗರ ಹುಣಸೂರು ಮತ್ತು ಚಾಮರಾಜನಗರ ಆದರೆ ನನ್ನ ಜೊತೆ ಆಯ್ಕೆಯಾದವರು ನನಗಿಂತ ವಯಸ್ಸಿನಲ್ಲಿ ಸೀನಿಯರ್ ಆಗಿದ್ದರಿಂದ ದಿನವು ಓಡಾಡಬಹುದಾದ ಈ ಸ್ಥಳಗಳು ಸಹ ನನಗೆ ಸಿಗುವ ಸಾಧ್ಯತೆ ಇರಲಿಲ್ಲ. ಆ ಪಟ್ಟಿ ಬಿಟ್ಟರೆ ಮುಂದೆ ಒಂದು ಕಂಟಿನ್ಜೆನ್ಸಿ ಪಟ್ಟಿಯಲ್ಲಿ ಕೆ ಆರ್ ಪೇಟೆ ಸಿಗುವ ಸಾಧ್ಯತೆ ಇತ್ತು. ದಿನವೂ ಓಡಾಡಬಹುದಾದರು ಹೆಚ್ಚು ಬಸ್ಸುಗಳು ಇರಲಿಲ್ಲ ಮತ್ತು ರಸ್ತೆ ಸಹ ತುಂಬಾ ಕೆಟ್ಟದಾಗಿ ಇತ್ತು . ನಂಜನಗೂಡಿನಲ್ಲಿ ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಸುಲೋಚನಾ ಅವರಿಗೂ ಪದೋನ್ನತಿ ಸಿಕ್ಕಿದ್ದು ಅವರು ಸಹ ಪೋಸ್ಟಿಂಗ್ ವಿಷಯದಲ್ಲಿ ಸಂದಿಗ್ಧದಲ್ಲಿ ಇದ್ದರು ನಮ್ಮ ಆಡಳಿತ ಅಧಿಕಾರಿಯಾಗಿದ್ದ ಟಿ ಎಂ ಪರಶಿವಮೂರ್ತಿ ಅವರು ಸುಲೋಚನಾ ಅವರಿಗೆ ಬಹಳ ಆಪ್ತರು ಅವರು ನಮ್ಮಿಬ್ಬರ ಜೊತೆ ಮಾತನಾಡಿ ನಿಮ್ಮಿಬ್ಬರ ಸ್ವಭಾವ ತುಂಬಾ ಚೆನ್ನಾಗಿ ಹೊಂದುತ್ತದೆ ಇಬ್ಬರು ಮಾತನಾಡಿಕೊಂಡು ಒಂದೇ ಕಡೆಗೆ ಪೋಸ್ಟಿಂಗ್ ತೆಗೆದುಕೊಳ್ಳಿ ಒಂದು ವರ್ಷ ಒಟ್ಟಿಗೆ ಇದ್ದು ನಂತರ ವಾಪಸ್ ಬರಬಹುದು ಎಂದರು. ರವೀಶ್ ಮತ್ತು ನನ್ನ ತಂದೆ ಸಹ ದಿನ ಓಡಾಡಿ ಕಷ್ಟಪಡುವುದರ ಬದಲು ಇದು ಒಳ್ಳೆಯ ಸಲಹೆ ಎಂದಾಗ ಸಂಬಂಧ ಪಟ್ಟವರೊಡನೆ ಮಾತನಾಡಿದಾಗ ಇಬ್ಬರನ್ನು ಒಟ್ಟಿಗೆ ಸಕಲೇಶಪುರಕ್ಕೆ ಪೋಸ್ಟಿಂಗ್ ಮಾಡಿದರು. ಈಗಾಗಲೇ ಮೊದಲ ವರ್ಷಗಳಲ್ಲಿ ಹೋದವರು ಅಲ್ಲಿ ಒಂದು ಪ್ಲೇಯಿಂಗ್ ಗೆಸ್ಟ್ ಮನೆಯಲ್ಲಿ ಇದ್ದರು ಎಂಬ ವಿಷಯ ತಿಳಿದು ಹೋಗೋಣ ಎಂದು ನಾನು ಸುಲೋಚನಾ ನಿರ್ಧರಿಸಿದೆವು.ರವೀಶ್ ಅವರ ಊರಿನ ಕೆಲವರು ಆಗ ಸಕಲೇಶಪುರದಲ್ಲೇ ಇದ್ದುದರಿಂದ ಅವರ ಸಹಾಯ ಪಡೆಯಬಹುದು ಎಂಬ ಒಂದು ನಂಬಿಕೆಯು ಇತ್ತು.ಸರಿ ಹೋಗುವುದು ನಿರ್ಧಾರವಾಗಿ ವಿಭಾಗಿಯ ಕಚೇರಿಯ ಎಲ್ಲರಿಗೂ ಸಿಹಿ ಹಂಚಿದ್ದು ಆಯಿತು ನಮ್ಮ ವಿಭಾಗದವರು ಮತ್ತು ನನಗೆ ಆಪ್ತರಾಗಿದ್ದ ಸರಸ್ವತಿ ಕಮಲ ಮತ್ತು ಸುಮಾ ಇವರುಗಳನ್ನು ಕರೆದುಕೊಂಡು ಹೋಗಿ ಫಾರಸ್ ಹೋಟೆಲಿನಲ್ಲಿ ಪಾರ್ಟಿ ಕೊಡಿಸಿದ್ದು ಆಯಿತು. ಸುಮಾ ಮತ್ತು ಕಮಲ ಒಂದು ಚೆಂದದ ವ್ಯಾನಿಟಿ ಬ್ಯಾಗ್ ಅನ್ನು ನಮಗೆ ಗಿಫ್ಟ್ ಆಗಿ ನೀಡಿದರು. ನಮ್ಮ ಹೊಸ ವ್ಯವಹಾರ ವಿಭಾಗದವರು ಸೇರಿಕೊಂಡು ಒಂದು ಸೂಟ್ಕೇಸ್ ಉಡುಗೊರೆ ನೀಡಿದರು. ನಾನು ತುಂಬಾ ಅಮೃತಾಂಜನ್ ಅಥವಾ ಜಂಡು ಬಾಮನ್ನು ಹಣೆಗೆ ಹಚ್ಚಿಕೊಳ್ಳುತ್ತಲೇ ಇರುತ್ತಿದ್ದೆ .ಅದಕ್ಕೆ ಮುರಳಿಯವರು ರೇಗಿಸಿ ಇಲ್ಲಿಯೇ ಇಷ್ಟೊಂದು ಬಳಸುತ್ತೀರಿ . ಇನ್ನು ಆ ಥಂಡಿ ಪ್ರದೇಶದಲ್ಲಿ ಎಷ್ಟೊಂದು ಬೇಕಾಗುತ್ತದೆ. ಒಂದು ಡಝನ್ ಗಿಫ್ಟ್ ಕೊಡೋಣವಾ  ಅಂತ ರೇಗಿಸಿದ್ದರು. ಅಂತೂ ಏಳು ವರ್ಷಗಳಿಂದ ಇದ್ದ ವಿಭಾಗೀಯ ಕಚೇರಿಯನ್ನು ಬಿಡಲು ತುಂಬಾನೇ ಬೇಸರ ಅನಿಸಿತು. ಆದರೂ ಹೊಸ ಜಾಗ ಹೊಸ ಸವಾಲುಗಳು ಒಂದು ರೀತಿಯ ಥ್ರಿಲ್ ಎಂದು ಕೂಡ ಎದುರು ನೋಡುತ್ತಿದ್ದೆ. ಸುಜಾತಾ ರವೀಶ್

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಕಂತು-ಐದು ಸವಿತಾ ದೇಶಮುಖ ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾಚೇತನ ಜಯದೇವಿ ತಾಯಿಯವರ ಜೀವನ ವೃತ್ತಾಂತಭಾಗ- 5  ಸೊಲ್ಲಾಪುರದ ಲಿಗಾಡೆಯವರ ಮನೆತನದ ನಿಷ್ಠಾವಂತ ವಕೀಲರಾದ ‘ರಾಮಭಾವು ರಾಜವಾಡೆ’ ಅವರು ಬ್ರಿಟಿಷರ ವಿರುದ್ಧ ಕುತಂತ್ರ ಎಸಗಿದ್ದಕ್ಕಾಗಿ ಬಂಧಿಸಲಾಗಿತ್ತು. ಜಯದೇವಿ ತಾಯಿಯವರ ಅತ್ತೆ ಪ್ರಯಾಗಬಾಯಿ ರಾಜವಾಡೆಯವರ ಬಿಡುಗಡೆಯ ನಂತರ ಅತ್ಯಂತ ಆದರದಿಂದ ಬರಮಾಡಿಕೊಂಡು ಆದರಿಸಿ  ಬ್ರಿಟಿಷರ ಭಿಡೆ ಹಿಡಿಯದೆ  ಮತ್ತೆ ಆಸ್ತಿಯ ಕಾರಭಾರವನ್ನು ನಿರ್ವಹಿಸಿಕೊಂಡು ಹೋಗಲು ಅಣಿ ಮಾಡಿದರು.” ಪ್ರಯಾಗಬಾಯಿಯ ಕಠೋರ ಧ್ವನಿ …ಬಿರುಸು ನಡತೆ ಇದ್ದರೂ ನಿಜವಾದ ದೇಶಪ್ರೇಮ ರಾಷ್ಟ್ರ ನಿಷ್ಠೆಯನ್ನು ತೋರಿದರು .ತಾಯಿ ಸಂಗವ್ವ ಗಾಂಧಿ ವಾದವನು ಪ್ರಚಾರ ಮಾಡಿದರೆ ಅತ್ತೆ ಪ್ರಯಾಗಬಾಯಿಯೂ ಅದನ್ನು ನಡೆದು ತೋರಿಸಿದ್ದರು. ದೇಶಮಾತೆಗೆ ಅನೌಪಚಾರಿಕವಾಗಿ ಸಹಾಯ ಹಸ್ತ ನೀಡಿದ್ದರು” ಎನ್ನುತ್ತಿದ್ದರು ಜಯದೇವಿ ತಾಯಿಯವರು. ಅತ್ತೆ ಪ್ರಯಾಗಬಾಯಿ ಜಯದೇವಿಯ ತಾಯಿಯ ಮೇಲೆ ಸಿಡಿಮಿಡಿಕೊಳ್ಳಲು ಎರಡು ಕಾರಣಗಳಿದ್ದವು…. ಮದುವೆಯ ಸಮಯದಲ್ಲಿ ತವರಿನವರು(ಮಡಿಕಿ) ಮದುವೆಯ ದಿಬ್ಬಣವೆನೋ ಜನ ನೋಡುವಂತೆ ಏರಿಸಿದ್ದರು….. ಆದರೆ ಪ್ರಯಾಗಬಾಯಿಯವರಿಗೆ ಕೊಡುವ ಉಡುಗೊರೆಯ ಸೀರೆ ಅವರ ವರ್ಚಸ್ಸಿಗೆ ಹೊಂದುವಂತಿರಲಿಲ್ಲವೆಂದು ನಂಬಿದ ಅತ್ತೆ ….ಸೀರೆ ನೋಡುತ್ತಿದ್ದಂತೆ ಸಿಡಿಮಿಡಿಗೊಂಡು ಅಲ್ಲಿಂದ ಎದ್ದು ಹೋಗಿದ್ದರಂತೆ .ಇದು ಅದೆಂಥ ದೊಡ್ಡ ವಿಷಯವಾಗಿತ್ತು ಅಂದರೆ  ತಾಯಿಯವರ ಜೀವನದ ಅತಿ ದೊಡ್ಡ ಘಾತಕದ ಘಟನೆಯಾಗಿತ್ತು ಅನ್ನುತ್ತಿದ್ದರು ತಾಯಿಯವರಿಗೆ ….ಸಮಯ ಸಿಕ್ಕಾಗಲೆಲ್ಲ ಆ ಮಾತನ್ನು ಆಡಿ ಆಡಿ ಮನಸ್ಸು ನೋಯಿಸುತ್ತಿದ್ದರಂತೆ. ಮುಂದೆ ಅವರು ಅದೆಷ್ಟೋ ಸೀರೆಗಳನ್ನು ತಂದು ಅವರೆದುರಿಗೆ ಹಾಕಿದರೂ ಆ ದಿನದ ಅವರು ಮರೆಯಲಿಲ್ಲ. ಇನ್ನೊಂದು ಕಾರಣವೆಂದರೆ ತಾಯಿಯವರು ಅತ್ಯಂತ ಬಳಕುವ ಅಂದರೆ ತೆಳ್ಳನೆ ದೇಹವನ್ನು ಹೊಂದಿದವರು ಊಟ ಮಾಡುವುದು ಕೇವಲ ಅರ್ಧ ರೊಟ್ಟಿ ಅಥವಾ ಚಪಾತಿ ಅಷ್ಟೇ… ಗಟ್ಟಿ ಮುಟ್ಟಾದ ಸೊಸೆ …ಆಸ್ತಿಯ ಕಾರಭಾರ ಹೊತ್ತುಕೊಳ್ಳುವ ಸೊಸೆ ಬೇಕಾಗಿತ್ತು.  ಸೊಸೆಯನ್ನು  ಹುಡುಕಾಡಿ   ಪರಿಶೀಲಿಸಿ ಮದುವೆ ಮಾಡಿದ್ದರೇನೋ ನಿಜ ಆದರೆ ಜಯದೇವಿ ತಾಯಿಯು ಮನೆಗೆ ಬಂದ ಮೇಲೆ ಗೊತ್ತಾದದ್ದು ಇವರು ಅತ್ಯಂತ ಸರಳ-ಸಾಧು- ಲಿಂಗನಿಷ್ಠರು. ದೇವರಲ್ಲಿಯೇ ಮೈಮರೆಯುವಳು ಅನ್ನುವುದು ತಿಳಿದಾದ ಮೇಲೆ ಅವರಿಗೆ ಹೊಟ್ಟೆ ಬೇನೆ ಶುರುವಾಗಿತ್ತು.ಇಂಥ ನಾಜೂಕಾಗಿರುವಳು ಎಲ್ಲವನ್ನು‌ ನಿಭಾಯಿಸುವುದು ಹೇಗೆ ಅನ್ನುವ ಸಮಸ್ಯೆ ಕಾಡುತಿತ್ತು.  ತಾಯಿಯವರು ಕೆಲಸ ಮಾಡುವಾಗ ಮಧ್ಯದಲ್ಲಿ ಬಂದು ಅವರ ಎರಡು ಕೈಗಳನ್ನು ಗಟ್ಟಿಯಾಗಿ ಹಿಡಿದು ನೋಡಿ ಮತ್ತೆ ದೂರಸರಿಸುವರಂತೆ ..,..”ನೋಡು ಏನು ತಿನ್ನೋದಿಲ್ಲ ಹೀಗೆ ಸ್ವರ್ಗಿ  ಸ್ವರ್ಗಿ ಸಣ್ಣಗಿದ್ದಿ ಎಲ್ಲಾ ಆಸ್ತಿಯನ್ನು ಹೇಗೆ ನೋಡಿಕೊಳ್ತಿ …. ನಮಗೆ ಮೊಮ್ಮಕ್ಕಳನ್ನು ಹೇಗೆ ಹೆತ್ತು ಕೊಡ್ತೀಯಾ…”!! ಅನ್ನುವ ಚಿಂತೆ ಅವರನ್ನು ಕಾಡುತ್ತಿತ್ತಂತೆ. ಪ್ರಯಾಗಬಾಯಿಯೂ ಪ್ರತಿ ಸೋಮವಾರ ಸಿದ್ದರಾಮನ ದೇವಸ್ಥಾನಕ್ಕೆ ಗಾಡಿಯಲ್ಲಿ ಹೋಗುತ್ತಿದ್ದರು . ದೇವಸ್ಥಾನಕ್ಕೆ ಹೋಗಬೇಕಾದರೂ ಜರ್ತಾರಿಯ ಸೀರೆ ಉಟ್ಟು ವಜ್ರ ವೈಢೂರ್ಯ ತೊಟ್ಟು ಹೊರಡುವರು ..ಜಯದೇವಿ ತಾಯಿಯವರು ಅವರ ಜೊತೆ ಬರಲು ಹಠ ಮಾಡಿದಾಗ ಅವರಿಗೆ ಹಾಗೆ ಉಟ್ಟ ಸೀರಿ ಕರಿಮಣಿಯ ತಾಳಿ ಹಾಕಿಕೊಂಡೇ  ಕರೆದುಕೊಂಡು ಹೋಗುತ್ತಿದ್ದರು.ಮದುವೆ ಸಮಾರಂಭಗಳಲ್ಲೂ ಅಷ್ಟೇ ತಾಯಿಯವರಿಗೆ ಮದುವೆ ಸಮಾರಂಭಗಳು ಬಂದರೆ   ಕಳವಳ ಉಂಟಾಗುವುದು….. ಬಂಗಾರ ಇಲ್ಲದೆ ಹೋಗುವದು ಹೇಗೆ  ಮನೆತನ ಮರ್ಯಾದಿಯ ಪ್ರಶ್ನೆಯಾಗಿತ್ತು ……ಹೀಗಾಗಿ ಓಡಿಹೋಗಿ ಹತ್ತಿರದಲ್ಲಿ ಇದ್ದ ತವರು ಮನೆಯಲ್ಲಿ ಹೊಸದಾಗಿ ಬಂದ ಅತ್ತಿಗೆಯರಿಂದ,ತಾಯಿಂದ ವಸ್ತಒಡವೆಗಳನ್ನು ಪಡೆದು ತೊಟ್ಟು ಹೋಗುವರು. ಮತ್ತೆ ತಿರುಗಿ ಬರುವಾಗ ಅವುಗಳನ್ನೆಲ್ಲ ಅಲ್ಲೇ ತವರು ಮನೆಯಲ್ಲಿ ಕಳಚಿಟ್ಟು ಮನೆಗೆ ಬರುವರು .  ಪ್ರಯಾಗಬಾಯಿ ಎರಡು ಹೊತ್ತು ಲಿಂಗದ ಪೂಜೆ ಮಾಡುವರು ರಾತ್ರಿಯ ಪೂಜೆ ಮುಗಿಸಿ ಅವರಿಗೆ ಊಟ ಕೊಟ್ಟು ಆಳು ಕಾಳುಗಳಿಗೆ ಊಟ ಕೊಟ್ಟು ಎಲ್ಲ ತೆಗೆದಿಟ್ಟು ಅಡುಗೆಯ ಮನೆಯ ಕೆಲಸವನ್ನೆಲ್ಲಾ ಮುಗಿಸಿ ಮೇಲೆ ಮಲಗುವ ಕೋಣೆಯತ್ತ ಹೆಜ್ಜೆ ಹಾಕಿದಾಗ ಮನೆಯಲ್ಲಿ ಎಲ್ಲರೂ ನಿದ್ರೆಯಲ್ಲಿ ಜಾರಿರುತಿದ್ದರು. ರಾತ್ರಿ ನಿರಾಳ ಮೌನ ಆವರಿಸಿತ್ತು…. ಗಡಿಯಾರ ಟಿಕ್ ಟಿಕ್ ಮಾತ್ರ ಅವರ ಉಸಿರಿಗೆ ತಾಳ ಹಾಕುತ್ತಿತ್ತು…. ನಿಧಾನವಾಗಿ ಹೆದರುತ್ತಲೇ ಗಡಿಯಾರದತ  ನೋಡಿದರು ರಾತ್ರಿ ಒಂದು ಗಂಟೆ ಮೇಲೆ ಆಗಿದೆ…. ಕೋಣೆಯಲಿ ಕಾಲಿಡುವ ಮೊದಲೇ ತೀರ್ಪು ಬಂದುಬಿಟ್ಟಿತು ……..”ಗಂಡನ ಮೇಲೆ ಭಯ ಭಕ್ತಿ ಇಲ್ಲ ಅದಕ್ಕೆ ಇಷ್ಟು ತಡ ಮಾಡುವೆ ಅಲ್ಲೇ ಮೂಲೆಯಲ್ಲಿ ಸ್ಟ್ಯಾಂಡ್ಪ್ಪ(standup)ಅಂದು ಗಂಡನ  ಧ್ವನಿ ಕೇಳಿದ ತಕ್ಷಣ ಹೆದರಿ ಅಲ್ಲಿ ಗೋಡೆಗೆ ಬೆನ್ನೂರು ನಿಂತು ಬಿಡುವರು ತನ್ನ ತಪ್ಪಾದರೂ ಏನು ಅಂತ ತಿಳಿಯದೆ ಗಂಡನ ಆಜ್ಞೆ ಅಲ್ಲವೇ ಪಾಲಿಸಲೇಬೇಕು….!! ಆದರೆ ಮಧ್ಯರಾತ್ರಿಯಲಿ  ಹಾಗೆ ಕೋಣೆ ಮೂಲೆಯಲ್ಲಿ ನಿಂತು ನಿದ್ದೆ ಹೋಗಿ ಭೂತಾಯಿಯ ಮಡಿಲಲ್ಲಿ ಶರಣಾಗಿ ಮಲಗಿದ್ದು ಗೊತ್ತಾಗುತ್ತಿರಲಿಲ್ಲ….. ನಸುಕಿನಲ್ಲಿ ಗಡಬಡಿಸಿ ಎದ್ದರೆ ತಾವು ನೆರೆದ ಮೇಲೆ ಮಲಗಿದ್ದು ಅರಿವಾಗುತ್ತಿತ್ತು ಮೈ ಕೈಯಲ್ಲ ಇನ್ನಷ್ಟು ನೋವಾದರೂ ಕೆಳಗೆ ಇಳಿದು ಓಡಿ ಬಂದರೆ ಅಲ್ಲಿ ಅತ್ತೆಯ ಬೈಗಳ ಸುರಿಮಳೆ ಪ್ರಾರಂಭ ……!!!ಗಂಡ ಮಾತ್ರ ಏನು ನಡೆಯಲೇ ಇಲ್ಲ ಅನ್ನುವಂತೆ ಎದ್ದು ಕೆಳಗೆ ಬರುವರು ಅವರಿಗೆ ಯಾವ ವ್ಯವಹಾರಿಕ ಜ್ಞಾನ ಇಲ್ಲ ತನಗೆ ತಿಳಿದಷ್ಟು ನಡೆದುಕೊಳ್ಳುವರು ಏಕೆಂದರೆ ಐದು ಅತ್ತಿಯಂದಿರ ಅಚ್ಚುಮೆಚ್ಚಿನ ಮಗ ಬೇರೆ… ಮದುವೆಯಾದ ಹೊಸತರಲ್ಲಿ ಜಯದೇವಿ ತಾಯಿಯವರಿಗೆ ತಾನು ಎಲ್ಲಿ ಬದುಕಿ ಬಾಳುತ್ತಿದ್ದೇನೆ  ಅನ್ನುವ  ಜ್ಞಾನವೇ ಇಲ್ಲವಾಗಿತ್ತು ಅಂತ ತಾಯಿಯವರು ಹೇಳುತ್ತಿದ್ದರು . “ಗಂಡನ ಮನೆಯ ಎಲ್ಲ ಸದಸ್ಯರ ಮನಸ್ಸು ಗೆಲ್ಲ ಬೇಕಾಗಿತ್ತು. ಸಿದ್ದರಾಮನಲ್ಲಿ ಸೈ ಎನ್ನಿಸಿಕೊಳ್ಳಬೇಕಾಗಿತ್ತು. ಬಂದ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಹಾಗೆ ನುಂಗುತ್ತ ನಡೆದಿದೆ” ಅನ್ನುತ್ತಿದ್ದರು. ತಮ್ಮ ದುಃಖವನ್ನೆಲ್ಲ ಅಂಗೈಯಲ್ಲಿ ಇಟ್ಟುಕೊಂಡ ಲಿಂಗನಿಗೆ ಹೇಳುತ್ತಾ ಸಿದ್ದರಾಮನನ್ನು ಮಾತನಾಡಿಸುತ ದುಃಖವನ್ನು ಮರೆಯುವರು…. ಧಾರಾಕಾರವಾಗಿ ಕಣ್ಣೀರು ಸುರಿಸುವರು… *ನಿನ್ನ  ಭಜಿಸಲೆಂದು ಉಲಿಯುವೆ ಜಯಗೀತ ಒಂದೊಂದು, ನನ್ನ ಜೀಯಾನಿನ್ನ ಬರುವಿಕೆಯ ಬಯಕೆ-ನೆನೆ ನೆನೆದು ಅಳಹೋಗಿಹಾಡು ಬಿಡುವೆ !!*(ಜಯಗೀತ ಕವನ ಸಂಕಲ) ಒಂದು ಕಡೆ ಬರುತ್ತಾರೆ ತಾಳ್ಮೆನು ಯಾತನೆಯ/ ಬಾಳುವೆನು ನಿನಗಾಗಿಕಾಳ ಬಂದರು ಹೆದರೇನು -ಸಿದ್ದರಾಮದಾಳಿ ತಂದರು ಮತ್ತೆ ನಿನ್ನನೇ ನೆನೆಯುವೆ!! “ಎಲ್ಲವೂ ನಿನ್ನ ಪಾದಕ್ಕೆ ಅರ್ಪಣೆ… ಎನ್ನ ಮಾನ ಅಪಮಾನ ನಿನ್ನದಯ್ಯಾ ಎನ್ನುತ್ತಿದ್ದೆಕಷ್ಟಗಳು ಹೆಚ್ಚಿದಂತೆ ಸಿದ್ದರಾಮನ ಮೇಲಿನ ಭಕ್ತಿ ಇನ್ನು  ಗಟ್ಟಿಕೊಳ್ಳಲಾರಂಬಿಸಿತ್ತು.  ಸುಖದ ಸಂಪತ್ತಿನಲ್ಲಿ ನಾನು ಸುಖವಾಗಿ ಒಂದು ವೇಳೆ ಬದುಕಿದ್ದರೆ …. ಸಿದ್ದರಾಮನನ್ನು ನೆನೆಯುತ್ತಿರಲಿಲ್ಲವೇನು…??!…ಸಿದ್ದರಾಮ ಪರೀಕ್ಷಿಸುತ್ತಿರುವ ನಾನು ಆ ಪರೀಕ್ಷೆಯಲ್ಲಿ ಪಾಸ್ ಆಗಲೇಬೇಕು ಎನ್ನುವ ಛಲವನ್ನು ಹೊತ್ತ ಸೊಸೆಯಾಗಿದ್ದೆ ” ‌….ಅಂತ ಅನೇಕ ಸಲ ಹೇಳುತ್ತಿದ್ದರು. ತಾಯಿಯ ತವರಿನಲ್ಲಿ  ಹೆಣ್ಣು ಮಕ್ಕಳಿಗೆ ಸಮಾನತೆ ಹೇಳಿಕೊಟ್ಟಿದ್ದರು. ಪುರುಷ ಪ್ರಧಾನವಾದ ನಮ್ಮ ದೇಶದಲ್ಲಿ ಗಂಡನಿಗೆ ಹೊಂದುಕೊಳ್ಳಬೇಕಾದರೆ ಸಹನೆ ಇರಬೇಕು ಆಗ ಮುಂದೆ ಎಲ್ಲವನ್ನು ಗೆಲ್ಲಬಹುದು ಅನ್ನುವುದನ್ನು ತಾಯಿ ಸಂಗವ್ವ ಜಯದೇವಿ ತಾಯಿಯವರಿಗೆ ಕಲಸಿದ ಪಾಠ .ನೆನೆಯುತಿದರು.. ಬಾಲ್ಯ ವಿವಾಹ ಒಂದು ಮದುವೆ ಅಲ್ಲ ಅದು ಬಾಲ್ಯದ  ಅಂತ್ಯ. ಬೊಂಬೆಯ ಜೊತೆ ಆಟವಾಡುವ ಕೈಗಳಿಗೆ ಅಡುಗೆಯ ಪಾತ್ರೆಯ ಹೊರೆ ತಾಳೆದಾಗಿತ್ತು. ಪಾಠ ಪುಸ್ತಕ ಓದಬೇಕಾದ ಕಣ್ಣುಗಳಿಗೆ ಆಶ್ರುಗಳ ಅಭ್ಯಾಸ ಆಗಿಹೋಗಿತ್ತು. ಹೆಣ್ಣು ಮಗು ಹೆಂಡತಿಯಾಗುವ ಮುನ್ನ ಮಗುವಾಗಿ ಬದುಕುವ ಹಕ್ಕು ಕಸಿದುಕೊಂಡರೆ ಅದು ಒಂದು ಅಪರಾಧವೇ ಸರಿ ಅನ್ನುತ್ತಿದ್ದರು .ಅವಳಿಗೆ ಗಂಡನ ಮನೆ ಸಿಗುವುದು ಅನ್ನುವ ಸಂತಸವೇನು ಇರಬಹುದು ಆದರೆ ಮಗುವಿನ ಅತ್ಯ ಅಮೂಲ್ಯವಾದ ಬಾಲ್ಯದ ಬದುಕು ಸಿಹಿ ನೆನಪಿನ ಲೋಕವೂ ಕಳೆದು ಹೋಗುವುದು. ಬೆಳೆಯದ ದೇಹ- ಮನಸ್ಸಿಗೆ ತಾಳದ‌ ಹಿಂಸೆ ಕೊಟ್ಟಂತಾಗುವುದು .ಅವಳು ನಿಭಾಯಿಸಲಾರದಂತ ಜವಾಬ್ದಾರಿ  ಮಗುವಿನ ಮೇಲೆ ಒಡ್ದುವದು ಅಕ್ಷಮ್ಯ ಅಪಕೃತವಾಗುವುದು ಎನ್ನುತ್ತಿದ್ದರು.  ಒಂದು ಹೆಣ್ಣು ಮಗು ಬಾಲ್ಯದಲ್ಲಿ ವಿವಾಹ ಮಾಡಿಕೊಂಡು ಜೀವನದಲ್ಲಿ ಸೋತು ಹೋದರೆ ಸೋಲು ಅವಳೊಬ್ಬಳದೇ ಅಲ್ಲ…. ಅದು ಒಂದು ತಲೆಮಾರಿನ ಸೋಲು ,!! “ಮಗು ಕುತ್ತಿಗೆಗೆ ತಾಳಿಯಲ್ಲ – ಅವಳಿಗೆ ಭವಿಷ್ಯ ಕೊಡಿ” ಅನ್ನುತ್ತಿದ್ದರು . “ಸಿರಿತನದ ಕುವರಿ ! ಸಿರಿವಂತರ ಸತಿಯಾದೆಸಿರಿತನದ ಶ್ರಂಗಾರವೆಲ್ಲವನು- ಭೋಗಿಸಿದೆಸಿರಿತನ ದೊರೆತನ ಹಿರಿತನ ಎನ್ನವಾರಿಸದೆಶ್ರೀ ಲೋಲನ ದರ್ಶನವೆಂದು ಕಾಯುತಿರುವೆ…!!” “ಸಿರಿತನದ ತಳಕಿನಲ್ಲಿ ನಾನು ಮುಳುಗದಿರಲಿ ಅಂತಾನೆ  ಕಷ್ಟಗಳ ಕೊಡಿ  ಹರಿಸಿದ  ಸಿದ್ದರಾಮ…..ಸುಖದ ಸುಪ್ಪತ್ತಿನಲ್ಲಿ ಮುಳುಗದಿರಲಿಅಂತ ಏನೋ ಸಿದ್ದರಾಮನ ಪರೀಕ್ಷೆಯಲಿ….. ಗೆಲ್ಲಲೆಂದೆ ನಾನು ಕಷ್ಟಗಳನ್ನು ಸಂಭ್ರಮಿಸಲಾರಂಭಿಸಿದೆ. ಅನ್ನುತ್ತಾರೆ .  ಸಿದ್ದರಾಮನಲ್ಲಿ ಒಂದಾಗಲು ಶುರುವಿಟ್ಟೆ  ಲೋಕಕಲ್ಯಾಣದ ಕೆಲಸದತ್ತ ಹೊರಳಿದೆ” ಎನ್ನುವ ಮಾತು ಸುಳ್ಳಲ್ಲ . ಹಳೆಯ ಸಂಪ್ರದಾಯದ ಅತ್ತೆ ಮನೆಯ ವಾತಾವರಣ ಬೆಳೆದ ಮನೆಯ ವಾತಾವರಣಕ್ಕೂ ಅಜಗಜಾಂತರ ಅಂತರವಿತ್ತು .ಅತ್ತೆಯ ಬೈಗಳ ಪ್ರತಿ ಮಾತಿನಲ್ಲಿಯೂ ಒಳ್ಳೆಯದನ್ನು ಹುಡುಕಲು ಆರಂಭಿಸಿದರು.  ಒಂದು ಸಲ ಪಡಸಾಲಿಯಲಿ ದೊಡ್ಡ ಕನ್ನಡಿಯ ನೋಡುತ  ಜಯದೇವಿ ತಾಯಿಯವರು ಕುಂಕುಮ ಇಟ್ಟುಕೊಳ್ಳುವುದು ನೋಡಿದ ಪ್ರಯಾಗಬಾಯಿ ಜೋರಾಗಿ ಕಿರುಚಾಡಿಲಾರಂಭಿಸಿದರು .“ನಿನಗೆ ಸಂಸ್ಕಾರ ಅನ್ನೋದೇ ಇಲ್ಲ ಯಾರಾದರೂ ಅಂಗಳದಲ್ಲಿ ನಿಂತು ಕುಂಕುಮ ಇಡುವರೇ ನೀನು ಹೇಳಿ ಕೇಳಿ ಭಾಷಣ ಮಾಡುವಾಕೆಯ ಮಗಳು” ಎಂದು ಕೂಗಾಡಿದರಂತೆ.ಅವರು ಯಾಕೆ ಗದರಿಸಿದರಂತೆ ತಿಳಿಯಲಿಲ್ಲ  ಕುಂಕುಮವನ್ನು ಅಂಗಳದಲ್ಲಿ ಹಚ್ಚಿಕೊಳ್ಳಬಾರದು ಅನ್ನುವ ಪದ್ಧತಿ ಇರಬೇಕೆನೊ ಅದಕ್ಕೆ ಅತ್ತೆ ಬೈದಿರಬೇಕು ಅಂದುಕೊಂಡರಂತೆ.ಆದರೆ ನನ್ನ ತಾಯಿಗೆ ಏಕೆ ಬೈದರು ಭಾಷಣ ಮಾಡುವುದು ತಪ್ಪೇ ಅಂತೆಲ್ಲ ಲೆಕ್ಕ ಹಾಕಿದರು.ಆದರೂ ಎದೆ ನಡುಗುತಿತ್ತು, ಕೈಕಾಲುಗಳು ಶಕ್ತಿ ಕುಂದುತಿದೆ ಅನ್ನಿಸಿಲಾರಿಂಭಿಸಿತ್ತು. ಆ ದೃಶ್ಯವನ್ನು ನೋಡಿದ ಪ್ರಯಾಗಬಾಯಿಯುಸಮೀಪ ಬಂದು …”ನೋಡು ಮನೆಯಲ್ಲಿ ಹಾಲ ತುಪ್ಪದ ಹೊಳೆ ಹರಿತಾ ಇದೆ ಚೆನ್ನಾಗಿ ಉಂಡು-ತಿಂದು ಇರಬೇಕು ಅಂತ ಹೇಳಿದ್ದು ಕೇಳಿ ಜೀವ ಬಂದಂತಾಯಿತು. ಮುಂದೆ ಕೆಲವು ದಿನಗಳು ಕಳೆದ ನಂತರ ಸೊಸೆಯ ಮೇಲೆ ಪ್ರೀತಿ ಹೆಚ್ಚ ಆರಂಭಿಸಿತು ಸೊಸೆಯ ತಾಳ್ಮೆ ಗಂಭೀರ ನಡೆನುಡಿಯನ್ನು ಪ್ರಯಾಗಬಾಯಿ ಗಮನಿಸುತ್ತಿದ್ದಂತೆ ಮನ ಕರಗಲಾರಂಭಿಸಿತ್ತು. ಆಗಾಗ ತಾಯಿಯವರನ್ನು ದಿಟ್ಟಿಸಿ ನೋಡುತ್ತಿದ್ದರಂತೆ ಅದೇಕೋ ಸೊಸೆ ಇನ್ನೂ ಸಣ್ಣ ಆಗಿ ಹೋಗುತ್ತಿರುವಂತೆ ಕಂಡು ಅಡುಗೆಯ ಬಸವ್ವಳನ್ನು ಕರೆದು ಇವಳಿಗೆ “ಇನ್ನು ಮೇಲಿಂದ ನನಗಾಗಿ ಮಾಡುವ ತುಪ್ಪದ ಅಡಿಗೆ ಇವಳಿಗೂ ಉಣ್ಣಿಸಬೇಕು” ಅಂತ ಆಜ್ಞೆ ಮಾಡಿದರಂತೆ .ಅದೇ ರೀತಿ ಕೆಲಸದವಳು ಬಂದು ತಾಯಿಯವರಿಗೆ “ನೋಡಿರಿ ಬಾಯಾರ……ನೀವು ಹೀಗೆ ಕಿವುಚಿ ಅದ್ದಾ-ಗಿದ್ದಾ ಊಟ ಮಾಡಿದರೆ ನಡೆಯುವುದಿಲ್ಲ ಚೆನ್ನಾಗಿ ಊಟ ಮಾಡಬೇಕು ಗಂಡು ಮಕ್ಕಳ ಹೆತ್ತು ಕೊಡಬೇಕು “ಅಂತ  ಕೆಲಸದವಳು ಪ್ರೀತಿಯಿಂದ ಆಜ್ಞೆ ಮಾಡಿದಳಂತೆ. ಸಾಧು-ಸಂತರು ನೀರು ಕುಡಿದು ,ಇಲ್ಲ ತುಣುಕು ಅನ್ನ ಉಂಡು ಬದುಕುವಂತೆ ಜಯದೇವಿ ತಾಯಿಯವರು ಹುಟ್ಟುತ್ತಲೇ ಯೋಗಿಣಿ ಯಾಗಿದ್ದರು  ಅವರು ಕೊನೆಯವರೆಗೂ ಅವರ ಊಟ ಅಷ್ಟೇ. ಅವರು ಊಟತಿಂಡಿಗಾಗಿ  ಸಂಸಾರದ ಭೋಗಕ್ಕಾಗಿ ಹುಟ್ಟಿದವರಲ್ಲ  ಬಸವಣ್ಣನ ತತ್ವದಂತೆ ಕಾಯಕವ ಮಾಡುತ್ತಾ ಸಂಸಾರ ಗೆದ್ದು   ಮಹಾನ ಶರಣೆಯಾದವರು. ಎಲ್ಲ  ಐದು ಜನ ಓರಗಿತ್ತಿಯರನ್ನು, ಮನೆಯ ಆಸ್ತಿ , ಹೊಲಗದ್ದೆ ,ಬಡ್ಡಿಯ ವಹಿವಾಟ ಎಲ್ಲವನ್ನು ಒಬ್ಬಳೇ ನಿಭಾಯಿಸುತ್ತ………ಇದ್ದ ಆಸ್ತಿಯನ್ನು ವೃದ್ಧಿಸಿ ಮುಂದೆ ಲಿಗಾಡಿ ಮನೆತನದ ವಿಜಯ ಪತಾಕೆಯನ್ನು ಹಾರಿಸಿ, ಕನ್ನಡ ನಾಡ ನುಡಿಗಾಗಿ ದುಡಿದ, ಸಿದ್ದರಾಮನ ಶ್ರೇಷ್ಠ ಭಕ್ತಳಾಗಿ,…  ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಮಹಾನ ಕೊಡುಗೆ ನೀಡಲಿರುವರು  ಅನ್ನುವದ  ಅರಯದಾಗಿದ್ದರು…. ಅತ್ತೆ ಪ್ರಯಾಗಬಾಯಿ….ಅಲ್ಲವೇ…..! (ಮುಂದುವರೆಯುವುದು) ಸವಿತಾ ದೇಶಮುಖ ಡಾ. ಜಯದೇವಿತಾಯಿ ಲಿಗಾಡೆಯವರ ಮೊಮ್ಮಗಳು, ತಂದೆ-ಡಾ. ಶಂಕರಣ್ಣ ಮೂಗಿ (ಸೋವಿಯತ್ ಲ್ಯಾಂಡ್ ನೆಹರು ಅವಾರ್ಡ್ ವಿಜೇತರು). ಸುಪ್ರೀಂ ಕೋರ್ಟಿನ ನ್ಯಾಯವಾದಿಗಳುತಾಯಿ -ಲಲ್ಲೇಶ್ವರಿತಾಯಿ ಮೂಗಿ(30 ಶಿವಶರಣೆಯರ ಮೊದಲು ಪರಿಚಯಿಸಿದ ಲೇಖಕಿ)ವೃತ್ತಿ:ವಿಜಯಪುರದ ಆಲ್ ಇಂಡಿಯಾ

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

“ಸಾವಿಲ್ಲದಶರಣರು”ಸ್ವಾತಂತ್ರ್ಯ ಯೋಧ ಸಂತ ಸದ್ಗುರು ಶ್ರೀ ಮಹದೇವಪ್ಪ ಮುರುಗೋಡ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಶರಣರ ಸಂಗಾತಿ “ಸಾವಿಲ್ಲದಶರಣರು” ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸ್ವಾತಂತ್ರ್ಯ ಯೋಧ ಸಂತ ಸದ್ಗುರು ಶ್ರೀ ಮಹದೇವಪ್ಪ ಮುರುಗೋಡ ಗಂಡು ಮೆಟ್ಟಿನ ಉತ್ತರ ಕರ್ನಾಟಕದ ಹುಬ್ಬಳಿಯ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಗಳು ಬಹುಶಃ ಕರ್ನಾಟಕದ ಭಾರತದ ಇತಿಹಾಸಗಳ ಪುಟಗಳಲ್ಲಿ ಸೇರದೆ ಹೋಗಿದ್ದು ಅತ್ಯಂತ ನೋವಿನ ಸಂಗತಿ. ಇಂತಹ ಅಪ್ಪಟ ಗಾಂಧಿವಾದಿ ರಾಷ್ಟ್ರ ಭಕ್ತ ಸ್ವಾತಂತ್ರ್ಯ ಸೇನಾನಿ ಸಂತ ಸದ್ಗುರು ಶ್ರೀ ಮಹದೇವಪ್ಪ ಮುರುಗೋಡ ಇವರ ಜೀವನದ ಸಂಘರ್ಷ ಸಮನ್ವಯತೆಯ ಹಾದಿಯನ್ನು ನೋಡೋಣ. ಮಹಾದೇವರ ಮನೆತನದ ಹಿರಿಯರು ಮೂಲತಃ ಬೈಲಹೊಂಗಲ ತಾಲ್ಲೂಕಿನ ಮುರಗೋಡ ಗ್ರಾಮದವರು. ಅವರ ಮನೆತನದ ಹಿರಿಯರು ಮನೆತನದ ಮೂಲ ಉದ್ಯೋಗವಾದ  ಕಿರಾಣಿ ವ್ಯಾಪಾರ ಮಾಡುತ್ತ ಹುಬ್ಬಳ್ಳಿ ಪಟ್ಟಣದಲ್ಲಿ ಬಂದು ಅಲ್ಲಿಯೇ ನೆಲೆಸಿದರು. ಮನೆಯ ಯಜಮಾನ ಶಿವಪ್ರಭುಗಳು.ಅವರ ಧರ್ಮಪತ್ನಿ ಕಾಳಮ್ಮ. ಧಾರ್ಮಿಕ ಹಿನ್ನೆಲೆ, ಉತ್ತಮ ವ್ಯಕ್ತಿತ್ವ ಹೊಂದಿದ ಈ ದಂಪತಿಗಳು ಇಂಚಗೇರಿ ಮಠದ ಸದ್ಗುರುಗಳು ಶ್ರೀ ಗಿರಿಮಲ್ಲೇಶ್ವರ ಮಹಾರಾಜರಿಂದ ನಾಮ ಪಡೆದಿದ್ದರು. ಇಂಚಗೇರಿ ಸಂಪ್ರದಾಯದ ನಿತ್ಯನೇಮ, ಭಜನೆ,ಧ್ಯಾನದ ವಾತಾವರಣ ಅವರ ಮನೆತನದಲ್ಲಿ ಇತ್ತು. ಶಿವಪ್ರಭುಗಳು ಚೆನ್ನಾಗಿ ಇಂಗ್ಗೀಷ ಬಲ್ಲವರಾಗಿದ್ದರಿಂದ ಹುಬ್ಬಳ್ಳಿಯ ರಾಯಲಿ ಕಂಪನಿಯಲ್ಲಿ ಮ್ಯಾನೇಜರ ಹುದ್ದೆ ಪಡೆದಿದ್ದರು. ಬಾಲ್ಯ ಮತ್ತು ಶಿಕ್ಷಣ ಸತ್ಪುರುಷರು, ಮಹಾತ್ಮರು,ಜ್ಞಾನಿಗಳು ಜನ್ಮವೆತ್ತಿ ವಿಶ್ವವನ್ನೇ ಬೆಳಗಿದ್ದಾರೆ. ಅಂತಹ ಪುರುಷರು ಶ್ರೀ ಮಹಾದೇವರು.02.11.1915 ರಂದು ವೀರಾಪುರ ಓಣಿ  ಹುಬ್ಬಳ್ಳಿಯಲ್ಲಿ ತಂದೆ ಶಿವಪ್ರಭುಗಳು ತಾಯಿ ಕಾಳಮ್ಮ ಇವರ ಉದರದಲ್ಲಿಜನಿಸಿದರು. ಧ್ಯಾನಸ್ಥಿತಿಯಲ್ಲಿರುವ ಮಗು ಗುರು ಗಿರಿಮಲ್ಲೇಶ್ವರರು ಹಸ್ತ ಇರಿಸಿದ ನಂತರ ಕಣ್ಣು ತೆರೆಯಿತು.ಸಾತ್ವಿಕ ಕಳೆ ಹೊಂದಿರುವ ಮಗುವಿಗೆ “ಮಹಾದೇವ”ನೆಂದು ನಾಮಕರಣ ಮಾಡಿದರು. ಮಗು ಮಹಾದೇವನ ಬಾಲ್ಯವು ಸಾಹಸದ ಘಟನೆಗಳಿಂದ ಕೂಡಿತ್ತು. ಚಿಕ್ಕಂದಿನಲ್ಲಿಯೇ ಅಪಾರ ಧೈರ್ಯವನ್ನು, ಧ್ಯಾನಯೋಗವನ್ನು ಮೈಗೂಡಿಸಿಕೊಂಡಿದ್ದರು. ಮಹಾದೇವನ ತುಂಟಾಟ, ಬಾಲಲೀಲೆಗೆ ಬೇಸತ್ತು ವೀರಾಪೂರ ಓಣಿಯಲ್ಲಿಯ ಕನ್ನಡ ಶಾಲೆಗೆ ದಾಖಲಿಸುತ್ತಾರೆ. 4 ನೆಯ ಇಯತ್ತೆಯ ವರೆಗೆ ಶಿಕ್ಷಣ ಪೂರೈಸಿದ ಮಹಾದೇವರು.  ಗುರುಗಳು ಅ,ಆ,ಇ,ಈ…ಹೇಳಿದರೆ…..ಮಹಾದೇವನು..ಉ,ಊ,ಋ,ಎ ಮುಂದಿನ ಅಕ್ಷರಗಳನ್ನು ಬರೆಯುವ ವಿದ್ಯಾರ್ಥಿಯಾಗಿದ್ದರು. ಶಾಲೆಯಲ್ಲಿ ತಾನೇ ಮುಂದಾಳುತ್ವ ವಹಿಸುವುದು ವಿದ್ಯಾರ್ಥಿ ನಾಯಕತ್ವವನ್ನು ನಿರ್ವಹಿಸುವುದು ಅವರ ಗುಣಗಳಲ್ಲಿ ಸರ್ವ ಶ್ರೇಷ್ಠ. ಧ್ಯಾನಕ್ಕೆ ಹೊರಳಿದ ಶ್ರೀ ಮಹಾದೇವರು ಧ್ಯಾನವೇ ಅವರ ಆಟ, ಪಾಠವಾಗಿತ್ತು.ತನ್ನ ಸಂಗಡಿಗರಿಗೂ ಅದನ್ನು ಹೇಳಿಕೊಡುತ್ತಿದ್ದರು. ಬಾಲ್ಯದಲ್ಲಿಯೇ ಅಧ್ಯಾತ್ಮವನ್ನು ಉಸಿರನ್ನಾಗಿಸಿಕೊಂಡ ಮಹಾದೇವರು ಮುಂದೆ  ಇಂಚಗೇರಿ ಮಠದ ನಾಲ್ಕನೆಯ ಗುರುಗಳಾಗಿ ಸ್ಥಾನವನ್ನು ಅಲಂಕರಿಸುತ್ತಾರೆ.  ರಾಜಕೀಯ, ಸಾಮಾಜಿಕ, ಕೃಷಿ, ಧಾರ್ಮಿಕ, ಶೈಕ್ಷಣಿಕ,ಸಾಂಸ್ಕೃತಿಕ  ಸಾಧನೆಯನ್ನು ಗೈಯ್ಯುತ್ತಾರೆ. ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿಕ್ರಾಂತಿಕಾರಿ ಧ್ಯೇಯಗಳಿಂದ ರಾಸುರಿ ಆಯಾಮವನ್ನು ಪಡೆದು ಕಟು ಸಂಪ್ರದಾಯ ಕಂದಾಚಾರಗಳನ್ನು ಖಂಡಿಸುತ್ತಾ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಶೋಷಿತರ ಪರವಾಗಿ ಹಾಗೂ ಅನ್ಯಾಯಗಳ ವಿರುದ್ಧ ಹೋರಾಟ ನಡೆಸಿದ ಶ್ರೀ ಮಹಾದೇವಪ್ಪನವರಿಂದ ಶ್ರೀ ಕ್ಷೇತ್ರ ಇಂಚಗೇರಿ ಮಠ ದೀನದಲಿತರಿಗೆ ಆಶ್ರಯ ನೀಡಿದ ಆಶ್ರಮವಾಗಿ ಸ್ವತಂತ್ರ್ಯ ನ್ಯಾಯಾಲಯವಾಗಿ , ಸ್ವಯಂ ಉದ್ಯೋಗ ಕೇಂದ್ರವಾಗಿ ಕಾಯಕ ತತ್ವದ ಪ್ರತ್ಯೇಕ್ಷ ನಿದರ್ಶನವಾಗಿ ರೂಪುಗೊಂಡಿದ್ದು ಒಂದು ಅದ್ಭುತ ಸಾಧನೆ ಎಂದು ಹೇಳಬಹುದು. “ಯಾರು ಜನತಾ ಜನಾರ್ಧನ ಸೇವೆಯ ಮಡುವುನಲ್ಲಿ ದುಮುಕುವರೊ ಅವರ ಅಮೃತ ಪಾನ ಮಾಡಿ ಅಮರರಾಗುವರು “ಎಂಬುದು ಶ್ರೀ ಸ.ಸ.ಮಹಾದೇವರ ಅಮೃತವಾಣಿಯಾಗಿತ್ತು. ನಿಜವಾದ ಅರ್ಥದಲ್ಲಿ ಶ್ರಿ ಮಹಾದೇವರು ಅಮರ ಜೀವಿಗಳು. ಮಹಾತ್ಮಾಗಾಂಧೀಜಯವರ ಮೊಮ್ಮಗ ಅರುಣಗಾಂಧೀಯವರು ಇಂಪ್ರಿಂಟಿ ಎಂಬ ಪಾಕ್ಷಿಕ ಇಂಗ್ಲಿಷ್ ಪತ್ರಿಕೆಯಲ್ಲಿ ಇಂಚಗೇರಿ ಸಾಂಪ್ರದಾಯದ ಕುರಿತು ತತ್ವಗಳ ಈ ದಿಟ್ಟ ಪ್ರಯೋಗ ನಮ್ಮ ಭಾರತದಾದ್ಯಂತ ಅತಿ ಶೀಘ್ರವಾಗಿ ಕಾರ್ಯಗತವಾಗಲೆಂದು ಆಶಿಸಿ ಬರೆದಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರವೆನಿಸಿದ ಹುಬ್ಬಳ್ಳಿ ಗಿರೀಶಾಶ್ರಮ ಅಜಾನು ಬಾಹು ಶ್ರೀ ಮಹದೇವಪ್ಪ ಮುರುಗೋಡ ಇವರು ತಮ್ಮ ಜೊತೆಗೆ ಸುಮಾರು 6000 ಕ್ಕೂ ಅಧಿಕ ಸ್ವಾತಂತ್ರ ಸೇನಾನಿಗಳನ್ನು ಸಿದ್ಧ ಪಡಿಸಿ ಆಯುಧ ಬಡಿಗೆ ಕೋಲು ಮುಂತಾದ ಅಸ್ತ್ರಗಳನ್ನು ಹೊಂದಿ ಸ್ವಾತಂತ್ರ್ಯ ಹೋರಾಟಗಾರರ ತಂಡ ಕಟ್ಟಿ ಕೊಂಡರು ತಮ್ಮ ಇಂಚಿಗೇರಿ ಸಂಪ್ರದಾಯದಂತೆ ಜಾತಿ ವಿಮೋಚನೆ ಸ್ವಯಂ ಉದ್ಯೋಗ ಅಂತರ್ಜಾತಿಯ ಮದುವೆಗಳು ನಡೆಯುತ್ತಿದ್ದವು. ಜನತಾ ನ್ಯಾಯಾಲಯವನ್ನು ಎಲ್ಲಾ ತಾಲೂಕು ಮತ್ತು ಹಳ್ಳಿಗಳಲ್ಲಿ ಏರ್ಪಡಿಸಿ ತುಳಿತಕ್ಕೆ ಒಳಗಾಗಿದ್ದ ಬಡವರನ್ನು ಅಸ್ಪೃಶ್ಯರನ್ನು ಎತ್ತಿ ಹಿಡಿದು ನ್ಯಾಯ ಒದಗಿಸುತ್ತಿದ್ದರು.ಸಮಾಲೋಚನೆ  ತಿಳುವಳಿಕೆ ಪರಸ್ಪರ ಪೂರಕ ಸಂಬಂಧಗಳ ವೃದ್ಧಿಗೆ ಶ್ರಮಿಸುತ್ತಿದ್ದರು. ಇವುಗಳಿಗೆ ಬಗ್ಗದೆ ಇದ್ದವರಿಗೆ ಗಣಾಚಾರದ ರುಚಿಯನ್ನು ಶ್ರೀ ಮಹಾದೇವ ಪ್ರಭುಗಳು ತೋರಿಸುತ್ತಿದ್ದರು. ಇವರ ಕ್ರಾಂತಿಕಾರಕ ಮೌಲಿಕ ಚಿಂತನೆಗಳಿಗೆ ಮಾರು ಹೋಗಿದ್ದ ರಾಮದುರ್ಗ ಸಂಸ್ಥಾನದ ಸಿಂಹ ಶ್ರೀ ಮಹದೇವಪ್ಪ ಪಟ್ಟಣ .ಹಾವೇರಿಯ ಕ್ರಾಂತಿಕಾರಿ  ಮತ್ತು ಭಗತ ಸಿಂಗ್ ಏ ಆರ ಜೊತೆಗೆ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಶ್ರೀ ವಿರೂಪಾಕ್ಷಪ್ಪ ಅಂಗಡಿ ಮುಂತಾದ ಅನೇಕರು ಹುಬ್ಬಳ್ಳಿಯ ಶ್ರೀ ಗಿರಿಶಾಶ್ರಮದಲ್ಲಿ ಕ್ರಾಂತಿಕಾರಕ ಗುಪ್ತ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಬ್ರಿಟಿಷರ ಮತ್ತು ಪೊಲೀಸರ ಹದ್ದಿನ ಕಣ್ಣು ಗಿರಿಶಾಶ್ರಮದ ಮೇಲಿತ್ತು. 1956 ರ ಚುನಾವಣೆ ಸಂದರ್ಭದಲ್ಲಿ  ರಾಮದುರ್ಗದಲ್ಲಿ ಮೈಸೂರು ಪ್ರದೇಶ ಕಾಂಗ್ರೆಸಿನ ಅಧ್ಯಕ್ಷ ಶ್ರೀ ಹೂಲಿ ವೆಂಕಟರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ಹುರಿಯಾಳಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಇವರ ವಿರುದ್ಧ ಲೋಕಸೇವಾ ಸಂಘದ ಕಾರ್ಯದರ್ಶಿ ರಾಮದುರ್ಗ ದುರಂತದ ನಾಯಕ ನೆಪೋಲಿಯನ್ ಎನಿಸಿಕೊಂಡ ಶ್ರೀ ಮಹದೇವಪ್ಪ ಪಟ್ಟಣ ಎದುರಿಸುತ್ತಾರೆ. ಡಾ ಬಿ ಡಿ ಜತ್ತಿ ಅವರ ರಾಜಕೀಯ ಗುರುಗಳೆನಿಸಿದ ಶ್ರೀ ಹೂಲಿ ವೆಂಕರೆಡ್ಡಿ ಅವರ ಚುನಾವಣೆಯ ಪ್ರಚಾರಕ್ಕೆ ಶ್ರೀ ಎಸ್ ನಿಜಲಿಂಗಪ್ಪನವರು ಆದಿಯಾಗಿ ರಾಜ್ಯ ಮತ್ತು ಕೇಂದ್ರ ಸರಕಾರದ ವರಿಷ್ಠ ನಾಯಕರು ಚುನಾವಣಾ ಪ್ರಚಾರಕ್ಕೆ ಬರುತ್ತಾರೆ. ಆದರೆ ಚುನಾವಣೆಯಲ್ಲಿ ಶ್ರೀ ಹೂಲಿ ವೆಂಕರೆಡ್ಡಿ ಅವರು ಶ್ರೀ ಮಹದೇವಪ್ಪ ಪಟ್ಟಣ ಅವರ ವಿರುದ್ಧ  ಸೋಲುತ್ತಾರೆ. ಇಡಿ ರಾಷ್ಟ್ರವೇ ರಾಮದುರ್ಗದ ಕಡೆಗೆ ನೋಡುತ್ತದೆ. ಆರಂಭದಿಂದಲೂ ಬಿ ಡಿ ಜತ್ತಿ ಅವರ ರಾಜಕೀಯ ಎದುರಾಳಿ ಎನಿಸಿದ ಮತ್ತು ಅವರ ವಿರುದ್ಧ ಚುನಾವಣೆಗಳನ್ನು ಎದುರಿಸುತ್ತಿದ್ದ ಶ್ರೀ ಸದ್ಗುರು ಸಮರ್ಥ ಮಹಾದೇವ ಪ್ರಭು ಅವರ ಮೇಲೆ ಕೆಲ ಕ್ರಿಮಿನಲ್ ಕೇಸ್ ಗಳಲ್ಲಿ ಶ್ರೀ ಮಹದೇವಪ್ಪ ಅವರ ಮೇಲೆ ನಿರಂತರ ಪೊಲೀಸ ತನಿಖೆಗೆ ಬಿ ಡಿ ಜತ್ತಿ ಅವರು ಮುಖ್ಯ ಮಂತ್ರಿ  ಆದ ಮೇಲೆ 1958 ರಲ್ಲಿ ಒತ್ತಾಯಿಸುತ್ತಾರೆ. ತಮ್ಮ ಆತ್ಮೀಯ ಸ್ವಾತಂತ್ರ್ಯ ಹೋರಾಟಗಾರ ಸಂಗಾತಿ ಶ್ರೀ ಮಹದೇವಪ್ಪ ಮುರುಗೋಡ ಇವರ ಮೇಲಿನ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಶಾಸಕ   ಶ್ರೀ ಮಹದೇವಪ್ಪ ಪಟ್ಟಣ ಅವರು ಸದನದ ಒಳಗೆ ಹಾಗೂ ಹೊರಗೆ ನಿರಂತರ ಹೋರಾಟ ಮಾಡುತ್ತಾರೆ. ಒಮ್ಮೆ ಸದನದ ಒಳಗೆ ಶ್ರೀ ಮುರುಗೋಡ ಮಹದೇವಪ್ಪ ಅವರ ಮೇಲಿನ ಪ್ರಕರಣಗಳನ್ನು ಸರಕಾರ ಹಿಂದೆ ಪಡೆಯಬೇಕೆಂದು ಶಾಸಕ   ಶ್ರೀ ಮಹದೇವಪ್ಪ ಪಟ್ಟಣ ಅವರು ಸಿಟ್ಟಿನಿಂದ ಮುಖ್ಯ ಮಂತ್ರಿಗಳ ಕಡೆಗೆ ಪೇಪರ್ ವೆಟ್ ತೋರಿದರಂತೆ ಸ್ವತಃ ಶಾಸಕ   ಶ್ರೀ ಮಹದೇವಪ್ಪ ಪಟ್ಟಣ ಅವರು ನನ್ನ ಮುಂದೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.ಕೊನೆಗೂ ಗೆಳೆಯನಿಗೆ ನ್ಯಾಯ ಒದಗಿಸುವ ಕಾರ್ಯದಲ್ಲಿ ಶಾಸಕ   ಶ್ರೀ ಮಹದೇವಪ್ಪ ಪಟ್ಟಣ ಯಶಸ್ವಿಯಾದರು.ಶ್ರೀ ಮಹದೇವಪ್ಪ ಮುರುಗೋಡ ಇವರು ಜೀವನ ಕೊನೆಯ ಉಸಿರಿನವರೆಗೆ ಸಾಮಾಜಿಕ ನ್ಯಾಯಪರವಾಗಿಹೋರಾಡುತ್ತಲೇ ಇದ್ದರು.ಇಂಚಿಗೇರಿ ಶ್ರೀಮಠದ ದಿಂಡಿ ಯಾತ್ರೆಯಲ್ಲಿ ಚಕ್ಕಡಿ ಟ್ರಾಕ್ಟರ್ ದನಕರುಗಳು ಹಸು ಮೇಕೆ ಅವುಗಳಿಗೆ ಬೇಕಾದ ಮೇವು ಭಕ್ತರಿಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಹೊತ್ತು ಕೊಂಡು ಊರೂರು ತಿರುಗಿ ಸದ್ಭಾವನೆ ಸಾಮಾಜಿಕ ಸಾಮರಸ್ಯಗಳನ್ನುಮೂಡಿಸುವ ಭಜನೆ ಪ್ರಾರ್ಥನೆ ಕೀರ್ತನೆ ಏರ್ಪಡಿಸಿ ಮನುಷ್ಯರ ಮನವನ್ನು  ತಿಳಿಗೊಳಿಸುತ್ತಿದ್ದರು. ಅಲ್ಲಿಯೇ ಸಾಮಾಜಿಕ ನ್ಯಾಯ ಬಗೆ ಹರಿಸುವುದು ವಾಡಿಕೆಯಾಗಿತ್ತು. ಶ್ರೀ ವಿನೋಭಾ ಭಾವೆಯವರ ತಾಯಿಯ ತವರು ಮನೆ ಜಮಖಂಡಿ ಅವರೂ ಸಹ ಶ್ರೀ ಮಹದೇವಪ್ಪ ಮುರುಗೋಡ ಇವರ ಕಾರ್ಯಗಳ ಬಗ್ಗೆ ತಮ್ಮ ಅತೀವ ಸಂತಸ ವ್ಯಕ್ತ ಪಡಿಸಿದ್ದಾರೆ. ಬದುಕಿನ ತಪಸ್ಸಿಗೆ ಕೊನೆ ಹೇಳಿದ ಶಿವಯೋಗ ಸಾಧಕ ಬಾಲ ಬ್ರಹ್ಮಚಾರಿಯಾಗಿದ್ದ ಮಹಾದೇವರು ತದನಂತರ ದಿನಗಳಲ್ಲಿ ದೇವರು ಹಾಗೂ ಶ್ರೀ ಮಾಧವಾನಂದ ಪ್ರಭುಜೀ ಎಂದೆ ಪ್ರಚಲಿತರಾಗಿ ಭಕ್ತಿ ಪ್ರಚಾರದ ಜತೆಗೆ ಶ್ರೀ ಗುರು ಪುತ್ರೇಶ್ವರ ಮಹಾರಾಜರನ್ನು ತಮ್ಮ ಆಧ್ಯಾತ್ಮದ ಗರಡಿಯಲ್ಲಿ ಪಳಗಿಸಿ,ತಮ್ಮ ಬದುಕನ್ನು ಶೋಷಿತರ ಪರವಾಗಿ ನಿಂತು ನ್ಯಾಯ ಒದಗಿಸಿ ಭಾರತದ ಸ್ವಾತಂತ್ರ್ಯ ಹೋರಾಟ ಕರ್ನಾಟಕ ಏಕೀಕರಣ ಗೋವಾ ವಿಮೋಚನೆಗೆ ದುಡಿದು 1980 ರಲ್ಲಿ ದೈವಾದಿನರಾದರು . ಬಯಲಲ್ಲಿ ಬಯಲಾದರು.__________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

“ಸಾವಿಲ್ಲದಶರಣರು”ಸ್ವಾತಂತ್ರ್ಯ ಯೋಧ ಸಂತ ಸದ್ಗುರು ಶ್ರೀ ಮಹದೇವಪ್ಪ ಮುರುಗೋಡ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »

ಅಂಕಣ ಸಂಗಾತಿ, ವೀಣಾ-ವಾಣಿ

“ಶಿಕ್ಷಣ ಪದ್ಧತಿ ಹಾಗೂ ಶಾಲೆಗಳ ಪ್ರಸ್ತುತತೆ” ವೀಣಾ ಹೇಮಂತ್‌ ಗೌಡ‌ ಪಾಟೀಲ್

ಶಿಕ್ಷಣ ಸಂಗಾತಿ ವೀಣಾ ಹೇಮಂತ್‌ ಗೌಡ‌ ಪಾಟೀಲ್ “ಶಿಕ್ಷಣ ಪದ್ಧತಿ ಹಾಗೂ ಶಾಲೆಗಳ ಪ್ರಸ್ತುತತೆ” ಶಿಕ್ಷಣ ಪದ್ಧತಿ ಹಾಗೂ ಶಾಲೆಗಳ ಪ್ರಸ್ತುತತೆ ಎಲ್ಲವೂ ಆನ್ಲೈನ್ ನಲ್ಲಿ ದೊರೆಯುತ್ತಿರುವ ಇಂದಿನ ದಿನಗಳಲ್ಲಿ ಶಿಕ್ಷಣ ಕೂಡ ಆನ್ಲೈನ್ ನಲ್ಲಿ ಕಲಿಯುವ ದಿನಗಳು ಈಗಾಗಲೇ ಬಂದಿದ್ದು ಇನ್ನೇನು ಪೂರ್ಣ ಪ್ರಮಾಣದಲ್ಲಿ ದೊರೆಯುವ ದಿನಗಳು ದೂರವಿಲ್ಲ…. ಹಾಗಾದರೆ ಶಾಲೆಗಳ ಔಚಿತ್ಯವೇನು? ಎಂದು ನೀವು ಕೇಳಬಹುದು ಅಲ್ಲವೇ ? ಇದರ ಮುನ್ನ ನಮ್ಮ ದೇಶದಲ್ಲಿ ಶಿಕ್ಷಣ ಪದ್ಧತಿ ನಡೆದು ಬಂದ ರೀತಿಯನ್ನು ಅವಲೋಕಿಸೋಣ. ನಮ್ಮ ಭರತ ಖಂಡದಲ್ಲಿ ಪ್ರಾಚೀನ ಕಾಲದಿಂದಲೂ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದ್ದು ಶಿಕ್ಷಣದಲ್ಲಿ ಎರಡು ವಿಧಗಳನ್ನು ನಾವು ಕಾಣಬಹುದಾಗಿತ್ತು. ಒಂದು ಕೌಟುಂಬಿಕ ಶಿಕ್ಷಣವಾದರೆ ಮತ್ತೊಂದು ಗುರುಕುಲ ಪದ್ಧತಿಯ ಶಿಕ್ಷಣ. ಕೌಟುಂಬಿಕ ಶಿಕ್ಷಣದಲ್ಲಿ ಪ್ರತಿಯೊಂದು ಮಗುವಿಗೂ ಆ ಮನೆಯ ರೀತಿ-ನೀತಿ, ಸಂಪ್ರದಾಯಗಳ ಜೊತೆ ಜೊತೆಗೆ ಸಾಮಾಜಿಕ ನಿಯಮಗಳನ್ನು ಪಾಲಿಸುವ ಕುರಿತು ಇಡೀ ಕುಟುಂಬವೇ ಗುರುವಾಗಿ ಪಾಠ ಕಲಿಸುತ್ತಿತ್ತು. ಇಲ್ಲಿ ಕುಟುಂಬದ ಹಿರಿಯರಾಗಲಿ, ಪಾಲಕರಾಗಲಿ, ತಂದೆ-ತಾಯಿಗಳಾಗಲಿ ಕೈಯಲ್ಲಿ ಬಳಪ ಹಿಡಿಸಿ ಪಾಟಿಯ ಮೇಲೆ ಬರೆಸಿ ಇಲ್ಲವೇ ಉರು ಹೊಡೆಸಿ  ಪಾಠಗಳನ್ನು ಹೇಳಿಕೊಡಲಿಲ್ಲ…. ಬದಲಾಗಿ ತಮ್ಮ ನಡೆ ನುಡಿಗಳ ಮೂಲಕ ತಮ್ಮ ಮಕ್ಕಳಿಗೆ ಕೌಟುಂಬಿಕ, ಧಾರ್ಮಿಕ, ಸಾಮಾಜಿಕ ಬದುಕಿನ ಪರಿಚಯವನ್ನು ಮಾಡಿಕೊಟ್ಟರು. ಇದರ ಜೊತೆ ಜೊತೆಗೆ ಗಂಡು ಮಕ್ಕಳಿಗೆ ಕುಟುಂಬದ ಕುಲ ಕಸುಬನ್ನು ಹಾಗೂ ಹೆಣ್ಣು ಮಕ್ಕಳಿಗೆ ಮನೆ ವಾರ್ತೆಯನ್ನು ಹೇಳಿಕೊಟ್ಟರು. ಒಕ್ಕಲುತನವೇ ಮೂಲ ಉದ್ಯೋಗವಾಗಿದ್ದ ನಮ್ಮ ಭಾರತ ದೇಶದಲ್ಲಿ ಕೃಷಿಗೆ ಸಂಬಂಧಿಸಿದ ಉದ್ಯೋಗ ಹಾಗೂ ಅದರ ಉಪ ಕಸುಬುಗಳಾದ ಕುಂಬಾರ, ಕಮ್ಮಾರ, ಬಡಿಗ, ಅಕ್ಕಸಾಲಿ, ಉಪ್ಪಾರ, ಚಮ್ಮಾರ, ಮ್ಯಾದಾರ ಹೀಗೆ ಹತ್ತು ಹಲವು ಉದ್ಯೋಗಗಳನ್ನು ಕೈಗೊಂಡಿದ್ದು ಅದನ್ನೇ ತಮ್ಮ ಮಕ್ಕಳಿಗೆ ಕಲಿಸುತ್ತಿದ್ದರು. ಇನ್ನು ರಾಜ ಮಹಾರಾಜರು, ಪಂಡಿತರು, ಜ್ಞಾನಿಗಳು, ಬ್ರಾಹ್ಮಣರು 64 ವಿದ್ಯೆಗಳಲ್ಲಿ ಕೆಲವಷ್ಟನ್ನಾದರೂ ಗುರುಕುಲಗಳಲ್ಲಿ ಇದ್ದು ಕಲಿಯುತ್ತಿದ್ದರು. ಊರಿನಿಂದ ತುಸು ದೂರ ಯಾವುದಾದರೂ ಕಾಡಿನ ಪ್ರಶಾಂತ ವಾತಾವರಣದಲ್ಲಿ ನದಿಯ ಪಕ್ಕದಲ್ಲಿ ತಮ್ಮ ಆಶ್ರಮವನ್ನು ಕಟ್ಟಿಕೊಂಡು ನೆಲೆಸಿರುತ್ತಿದ್ದ ಗುರುಗಳಿಗೆ ಋಷಿಮುನಿಗಳಿಗೆ ರಾಜ ಮಹಾರಾಜರುಗಳು ಗುರುಕುಲವನ್ನು ನಡೆಸಲು ತಕ್ಕಮಟ್ಟಿಗೆ ಅನುಕೂಲ ಮಾಡಿಕೊಡುತ್ತಿದ್ದರು. ಇನ್ನು ಗುರುಕುಲಕ್ಕೆ ಬರುವ ವಿದ್ಯಾರ್ಥಿಗಳು ರಾಜನ ಮಗನಾದರೂ ಸರಿಯೇ ಸೈನಿಕನ ಇಲ್ಲವೇ ಬಡ ಬ್ರಾಹ್ಮಣನ ಮಗನಾದರೂ ಎಲ್ಲರಿಗೂ ಒಂದೇ ನಿಯಮ. ಪ್ರತಿದಿನ ಆಶ್ರಮದ ನಿಯಮದಂತೆ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಅದರ ಜೊತೆಗೆ ಶಾಸ್ತ್ರೋಕ್ತವಾಗಿ ವಿವಿಧ ವಿದ್ಯೆಗಳನ್ನು ಕಲಿಯುವುದು ಅತ್ಯವಶ್ಯಕವಾಗಿತ್ತು.ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಅವರಿಗೆ ವಿಜ್ಞಾನ, ಗಣಿತ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ವ್ಯಾಕರಣ, ಛಂದಸ್ಸು, ಕಾವ್ಯ, ಪುರಾಣ ಮತ್ತಿತರ ವಿದ್ಯೆಗಳನ್ನು ಕಲಿಸಿದರೆ ರಾಜ ಮಹಾರಾಜರ,  ಮಂತ್ರಿಗಳ, ಸೇನಾಪತಿಗಳ ಹಾಗೂ ಸೈನಿಕರ ಮಕ್ಕಳುಶಸ್ತ್ರಾಸ್ತ್ರ ವಿದ್ಯೆಗಳಾದ ಧನುರ್ವಿದ್ಯೆ, ಕತ್ತಿ ವರಸೆ, ಭಲ್ಲೆ ಹಾಗೂ ಮತ್ತಿತರ ಆಯುಧಗಳ ಬಳಕೆಯ ಜೊತೆಗೆ ಕಾನೂನು ರಾಜಕೀಯ ನೀತಿಶಾಸ್ತ್ರ ಮುಂತಾದ ರಾಜ್ಯದ ಆಡಳಿತಕ್ಕೆ ಅತ್ಯವಶ್ಯಕವಾದ ವಿದ್ಯೆಗಳನ್ನು ಕಲಿಯುತ್ತಿದ್ದರು.  ಗುರುಗಳು ಹೇಳಿದ ಮಾತುಗಳನ್ನು ವೇದ ವಾಕ್ಯದಂತೆ ಭಾವಿಸುವ, ಆಶ್ರಮದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಎಲ್ಲರೊಂದಿಗೆ ಹೊಂದಾಣಿಕೆಯ ಬದುಕನ್ನು ನಡೆಸುವ ಈ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಸುಮಾರು 6 ರಿಂದ 12 ವರ್ಷಗಳ ಕಾಲ ಶಾಸ್ತ್ರ ವಿದ್ಯೆಯ ಜೊತೆಗೆ ವೃತ್ತಿ ಶಿಕ್ಷಣವು ಕೂಡ ದೊರೆಯುತ್ತಿತ್ತು ಎಂದರೆ ತಪ್ಪಿಲ್ಲ. ಇದರ ಜೊತೆಗೆ ಕೋಶವನ್ನು ಓದುವ ಹಾಗೂ ದೇಶವನ್ನು ಸುತ್ತುವ ಕೆಲಸವನ್ನು ಅಂತಿಮವಾಗಿ ವಿದ್ಯಾರ್ಥಿಯು ಮಾಡುವ ಮೂಲಕ ಭೌಗೋಳಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವ್ಯತ್ಯಾಸಗಳನ್ನು ಅರಿಯುವ ಅವಕಾಶ ಕೂಡ ಅವರಿಗೆ ದೊರೆಯುತ್ತಿತ್ತು. ನಂತರದ ಕಳೆದೆರಡು ಶತಮಾನಗಳವರೆಗೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅದರಲ್ಲೂ ಮಠಗಳಲ್ಲಿ, ಅಗ್ರಹಾರಗಳಲ್ಲಿ ಆಯಾ ಊರಿನ ಪಂಡಿತರು ಜ್ಞಾನಿಗಳು ಮಕ್ಕಳಿಗೆ ಶಿಕ್ಷಣ ನೀಡುವ ಪದ್ಧತಿ ಚಾಲ್ತಿಯಲ್ಲಿತ್ತು. ಇಲ್ಲೂ ಕೂಡ ಅದೇ ಕಟ್ಟುನಿಟ್ಟಿನ ನಿಯಮಗಳಿದ್ದರೂ ಮಕ್ಕಳು ತಮ್ಮ ಮನೆಯ ವಾತಾವರಣದಲ್ಲಿ ಮುಂಜಾನೆ ಮತ್ತು ರಾತ್ರಿಗಳನ್ನು ಕಳೆಯುತ್ತಿದ್ದರು. ಮುಂಜಾನೆಯಿಂದ ಸಾಯಂಕಾಲದ ವರೆಗೆ ಶಿಕ್ಷಣ ನಂತರ ಕುಟುಂಬದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ ಪಾಲಕರೊಂದಿಗೆ ವಾಸ ಇರುತ್ತಿತ್ತು. ಅದರ ನಂತರ ಕಳೆದ ಎರಡು ಶತಮಾನಗಳಿಂದ ಆರಂಭವಾಗಿದ್ದು ಇಂದಿಗೂ ಚಾಲ್ತಿಯಲ್ಲಿ ಇರುವುದು ಇಂದಿನ ಪದ್ಧತಿ. ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಪ್ರೌಢಶಾಲೆ ಕಾಲೇಜು ಸ್ನಾತಕೋತ್ತರ ಹೀಗೆ ವಿವಿಧ ಹಂತಗಳಲ್ಲಿ ಶಿಕ್ಷಣವನ್ನು ನೀಡುವ ಪದ್ಧತಿ ಆರಂಭವಾಯಿತು. ಮೊದಲ ಹತ್ತು ವರ್ಷಗಳವರೆಗೆ ಸಾಂಪ್ರದಾಯಿಕವಾಗಿ ಆಯಾ ಪ್ರದೇಶದ ಆಡಳಿತ ಭಾಷೆ, ವಿಜ್ಞಾನ, ಗಣಿತ, ಸಮಾಜಶಾಸ್ತ್ರ ಗಳ ಜೊತೆ ಜೊತೆಗೆ ರಾಷ್ಟ್ರೀಯ ಭಾಷೆ ಎಂದು ಪರಿಗಣಿತವಾಗಿದ್ದ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳನ್ನು ಪರಿಚಯಿಸಲಾಯಿತು. ಭಾಷೆಗಳ ಪಟ್ಟಿಯಲ್ಲಿ ನಮ್ಮ ಕರ್ನಾಟಕದಲ್ಲಿ ಕನ್ನಡ ನಮ್ಮ ಮಾತೃಭಾಷೆಯಾಗಿದ್ದು ಆ ಭಾಷೆಯ ಕಥೆ,ಕಾವ್ಯ, ಕವನ, ಗದ್ಯ, ಪದ್ಯ, ಹಳಗನ್ನಡ, ನಡುಗನ್ನಡ ನವ್ಯ ಸಾಹಿತ್ಯ, ನಾಟಕ ಇತಿಹಾಸ ವ್ಯಾಕರಣ, ಕವಿ ಕರ್ತೃಗಳ ಪರಿಚಯ, ಬದುಕು ಬರಹ ಇವುಗಳ ಕುರಿತು ಮಕ್ಕಳಿಗೆ ಆಯಾ ತರಗತಿಗಳಿಗೆ ಅನುಸಾರವಾಗಿ ಪಠ್ಯವನ್ನು ಇಡಲಾಗುತ್ತದೆ. ಗಣಿತದಲ್ಲಿ ಅಂಕಿಗಳನ್ನು ಬರೆಯುವ, ಓದುವ  ಎಣಿಸುವ ಹೇಳುವುದರಿಂದ ಆರಂಭಿಸಿ ಕೂಡಿಸುವ ಕಳೆಯುವಾಗ ಗುಣಾಕಾರ ಮಾಡುವ ಭಾಗಿಸುವ ಲೆಕ್ಕಗಳನ್ನು ಇದರ ಮುಂದಿನ ಭಾಗವಾಗಿ ಗಣಿತದ ಮತ್ತೆ ವಿಷಯಗಳಾದ ದಶಮಾಂಶ ಪದ್ಧತಿ ಭಿನ್ನರಾಶಿ ಸಮೀಕರಗಳು ಪ್ರಮೇಯಗಳನ್ನು ಹಂತ ಹಂತವಾಗಿ ಕಲಿಸುವ ಯೋಜನೆಗಳು ರೂಪುಗೊಂಡವು. ಗಣಿತದಲ್ಲಿ ಅಂಕಗಣಿತ ಬೀಜಗಣಿತ ಹಾಗೂ ರೇಖಾಗಣಿತ ಎಂಬ ಮೂರು ವಿಭಾಗಗಳನ್ನು ಮಾಡಿದರು. ಸಮಾಜಶಾಸ್ತ್ರದಲ್ಲಿ ಇತಿಹಾಸ,ಭೂಗೋಳ ಹಾಗೂ ನಮ್ಮ ಸಂವಿಧಾನದ ನೀತಿಗಳನ್ನು ಅರಿಯುವ ಪೌರನೀತಿ ಎಂಬ ಮೂರು ವಿಭಾಗಗಳನ್ನು ಮಾಡಿ ಭೂಗೋಳದಲ್ಲಿ ಭೂಮಿಯ ಸಂರಚನೆಯ ಕುರಿತು ವೈವಿಧ್ಯಮಯ ಪ್ರದೇಶಗಳ ಕುರಿತು ಪ್ರಸ್ಥಭೂಮಿ ಮರುಭೂಮಿ ಕಾಡು ಹುಲ್ಲುಗಾವಲು ಮುಂತಾದ ಪ್ರಾದೇಶಿಕ ವೈವಿಧ್ಯತೆಗಳನ್ನು ಪಠ್ಯದ ಭಾಗವಾಗಿಸಿದರು.  ಹೀಗೆ ಎಲ್ಲ ವಿಷಯಗಳು ಕುರಿತು ನುರಿತ ಭಾಷಾ ತಜ್ಞರನ್ನು, ವಿದ್ವಾಂಸರನ್ನು  ಸಂಶೋಧಕರನ್ನು ಹಾಗೂ ಬುದ್ಧಿಜೀವಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಿ  ಆಯಾ ತರಗತಿಗಳಿಗೆ ಅನುಗುಣವಾಗಿ ಪಠ್ಯಗಳನ್ನು  ಮೂಲಭೂತ ವಿಷಯಗಳ ಪಟ್ಟಿಯಲ್ಲಿ ಅಡಕಗೊಳಿಸಿ ವಯೋಮಿತಿಗೆ ತಕ್ಕಂತೆ ಅವುಗಳನ್ನು ಮಕ್ಕಳ ಕಲಿಕೆಯಲ್ಲಿ ಅಳವಡಿಸಿದರು.  ಇದೀಗ ಆನ್ಲೈನ್ ನಲ್ಲಿ ಕೂಡ ವೈವಿಧ್ಯಮಯ ಕೋರ್ಸುಗಳ ವಿಷಯಗಳ ಕುರಿತು ನಾವು ಕಲಿಯಬಹುದು. ಈ ಎಲ್ಲಾ ಕಲಿಕೆಗೆ ಮೂಲ ನಮ್ಮ ಆಸಕ್ತಿ ಆಗಿರಬೇಕು. ಇಂತಹ ಕಲಿಕೆಯನ್ನು ಕಲಿಸಲು ಶಾಲೆ ಪುಸ್ತಕ ಗುರುಗಳು ಬೇಕಾಗಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಭೌತಿಕವಾಗಿ ಶಾಲೆಗಳ ಅಸ್ತಿತ್ವ ಇರುತ್ತದೆಯೇ ಎಂಬ ಪ್ರಶ್ನೆ ಕೇಳಿದರೆ ಬಹುಶಹ ಇಲ್ಲ ಎಂದು ಹೇಳಬಹುದು. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ತಮ್ಮದೇ ಆದ ಅನುಕೂಲಕರ ವಾತಾವರಣದಲ್ಲಿ ಕುಳಿತು ನಿಂತು ಮಲಗಿ ಆನ್ಲೈನ್ ನಲ್ಲಿ ಶಿಕ್ಷಕರ ಪಾಠಗಳನ್ನು ಕೇಳಿ ಪರೀಕ್ಷೆಗಳನ್ನು ಬರೆದು ಪದವಿಗಳಿಸಬಹುದಾದ ದಿನಗಳು ಮುಂದೊಂದು ದಿನ ಬರಬಹುದು. ಹಾಗಾದರೆ ಶಿಕ್ಷಣ ಎಷ್ಟರಮಟ್ಟಿಗೆ ಪ್ರಸ್ತುತ ? ಶಾಲೆಗಳ ಅವಶ್ಯಕತೆ ಇದೆಯೇ ? ಎಂಬ ಪ್ರಶ್ನೆ ಉದ್ಭವಿಸಬಹುದು  ಖಂಡಿತವಾಗಿಯೂ ಶಾಲೆಗಳ ಅವಶ್ಯಕತೆ ಇದೆ. ಮಕ್ಕಳು ಚಿಕ್ಕಂದಿನಿಂದಲೂ ಒಂದು ಸಾಂಫಿಕ ವ್ಯವಸ್ಥೆಯನ್ನು, ಸಾಮಾಜಿಕ ಜೀವನವನ್ನು, ಬದುಕಿನಲ್ಲಿ ಮೌಲ್ಯಗಳ ಅಳವಡಿಕೆಯ ಪಾಠವನ್ನು ಕಲಿಯಲು ಶಿಕ್ಷಣ ಬೇಕು. ಆದರೆ ಅಂತಹ ಶಿಕ್ಷಣ ದೊರೆಯುವುದು ಕೇವಲ ಶಾಲೆಗಳಲ್ಲಿ ಮಾತ್ರ. ಸತ್ಯ,ಧರ್ಮ,ನ್ಯಾಯ, ನೀತಿ, ಕರುಣೆ, ದಯೆ,ಪ್ರೀತಿ, ವಿಶ್ವಾಸ, ನಂಬಿಕೆ, ದೇಶಪ್ರೇಮ, ದೇಶದ ಕುರಿತು ಅಭಿಮಾನ, ರಾಷ್ಟ್ರೀಯ ಜಾಗೃತಿ ಸಂವಿಧಾನದ ಪರಿಕಲ್ಪನೆ  ನಮ್ಮ ರಾಷ್ಟ್ರೀಯ ನಾಯಕರ ಕುರಿತ ಕಥೆಗಳು, ಭಾವೈಕ್ಯತೆಯನ್ನು ಎತ್ತಿ ಹಿಡಿಯುವ ಬದುಕಿನ ಪಾಠಗಳು, ಆಟಗಳು ಆಟದ ಮೂಲಕ ಒಪ್ಪಿಕೊಳ್ಳಲು ಮಕ್ಕಳ ಚಾರಿತ್ರ್ಯ ನಿರ್ಮಾಣಕ್ಕೆ ಅತ್ಯವಶ್ಯಕವಾದ ಎಲ್ಲಾ ಬಗೆಯ ಉತ್ತಮ ಮೌಲ್ಯಗಳನ್ನು ಮಕ್ಕಳಲ್ಲಿ ತುಂಬಲು ನಮಗೆ ಶಾಲೆಗಳು ಅತ್ಯವಶ್ಯಕ.  ಶಿಕ್ಷಣವನ್ನು ಬೇಕಾದರೆ ಆನ್ಲೈನ್ ನಲ್ಲಿ ಪಡೆಯಬಹುದು… ಮಕ್ಕಳಲ್ಲಿ ವ್ಯಕ್ತಿತ್ವದ ವಿಕಸನವನ್ನು ಚಾರಿತ್ರ್ಯ ನಿರ್ಮಾಣವನ್ನು ಶಿಕ್ಷಣದಂತೆ ಕೇವಲ ಒಂದು ಇಲ್ಲವೇ ಎರಡು ವರ್ಷಗಳಲ್ಲಿ ಕಲಿಸಿ ಮುಗಿಸಲು ಸಾಧ್ಯವಿಲ್ಲ ಅದೊಂದು ನಿರಂತರ ಪ್ರಕ್ರಿಯೆ…. ಅದಕ್ಕೆ ತನ್ನದೇ ಆದ ಗತಿಯಿದ್ದು ಆ ಗತಿಯಲ್ಲಿಯೇ ಮಕ್ಕಳು ತಮ್ಮ ಬದುಕಿನಲ್ಲಿ ಶಾಲೆಗಳ ಮೂಲಕ, ಶಿಕ್ಷಕರ ಮೂಲಕ, ಸಹಪಾಠಿಗಳ ಜೊತೆಗೆ, ಹಿರಿಕಿರಿಯ ವಿದ್ಯಾರ್ಥಿಗಳ ಜೊತೆಯಲ್ಲಿ ಶಾಲೆ ಎಂಬ ದೊಡ್ಡ ಆವರಣದ ಆಟದ ಮೈದಾನದಲ್ಲಿ, ನಾಲ್ಕು ಗೋಡೆಗಳ ನಡುವಿನ ತರಗತಿಗಳಲ್ಲಿ ನಿರಂತರವಾಗಿ ಕಲಿಯಬೇಕು ಇದಕ್ಕೆ ಶಾಲೆ ಅತ್ಯಂತ ಸೂಕ್ತವಾದ ಸ್ಥಳ.  ಜನನೀ ಜನ್ಮ ಭೂಮಿಶ್ಚ.. ಸ್ವರ್ಗಾದಪಿ ಗರೀಯಸಿ ಎಂಬ ಪರಿಕಲ್ಪನೆಯನ್ನು ನಮಗೆ ಕಟ್ಟಿಕೊಡುವುದು ಶಾಲೆ ಎಂಬ ಪವಿತ್ರ ದೇಗುಲ. ನಾಗರಿಕರಾಗಿ ನಮ್ಮ ದೇಶದ ಸಂವಿಧಾನದ ಮೂಲಕ ನಾವೆಲ್ಲರೂ ಒಂದು ಎಂಬ ವಿವಿಧತೆಯಲ್ಲಿ ಏಕತೆಯ ಪಾಠವನ್ನು ಹೇಳಿಕೊಡುವುದು ಶಾಲೆಯೇ. ಸಿರಿವಂತರ ಮಗನಾಗಲಿ ಗುರು ಪುತ್ರನಾಗಲಿ ಸಮಾಜದ ಅತ್ಯಂತ ಕಟ್ಟ ಕಡೆಯ ವ್ಯಕ್ತಿಯ ಮಗನಾಗಲಿ ಶಾಲೆಯ ವಾತಾವರಣದಲ್ಲಿ ಏಕರೂಪದ ಸಮವಸ್ತ್ರವನ್ನು ಧರಿಸಿ ಮೇಲು-ಕೀಳು, ಬಡವ-ಬಲ್ಲಿದ, ವರ್ಗ-ವರ್ಣ ಎಂಬ ಯಾವುದೇ ಭೇದಗಳಿಲ್ಲದೆ ಕಲಿಯುವ ವಾತಾವರಣವನ್ನು ಕಲ್ಪಿಸಿ ಕೊಡುವುದು ಶಾಲೆ ಎಂಬ ಪವಿತ್ರ ದೇಗುಲ. ಶಾಲೆಗಳೇ ಮಕ್ಕಳ ವ್ಯಕ್ತಿತ್ವ ವಿಕಸನದ ಅದ್ಭುತವಾದ ಕಾರ್ಯ ಆಧಾರಗಳು ಅಂತಹ ಶಾಲೆಗಳಲ್ಲಿ ಮಕ್ಕಳು ತಮ್ಮ ಬದುಕಿನಲ್ಲಿ ಮುಂದೆ ಹೇಗೆ ಇರಬೇಕು ಎಂಬುದರ ಪ್ರಾಥಮಿಕ ಪಾಠವನ್ನು ಕಲಿಯುತ್ತಾ ಮುಂದಿನ ಬದುಕನ್ನು ರೂಪಿಸಿಕೊಳ್ಳಲು ಬೇಕಾದ ಒಂದೊಂದೇ ಹಂತದ ನೈತಿಕ, ಮೌಲಿಕ, ಸಾಮಾಜಿಕ ಐತಿಹಾಸಿಕ ಸಾಂಸ್ಕೃತಿಕ ಜೀವನ ಪಠ್ಯಗಳನ್ನು ಪ್ರಾಯೋಗಿಕವಾಗಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾ ಸಾಗುತ್ತಾರೆ. ಧೈರ್ಯ, ಸಾಹಸ, ರಾಷ್ಟ್ರೀಯವಾದ, ಸೇವಾ ಮನೋಭಾವ, ಶಿಸ್ತು, ಸಂಯಮ, ಸಮಯ ಪ್ರಜ್ಞೆ ಯುವ ಮಕ್ಕಳ ಬದುಕಿನಲ್ಲಿ ಮೂಡುವುದು ಶಾಲೆಯ ಮೂಲಕವೇ ಮುಂದೆ ಮಕ್ಕಳು ತಮ್ಮ ಬದುಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ರಂಗಗಳಲ್ಲಿ ಮಿಂಚಿ ಯಶಸ್ವಿ ಬದುಕನ್ನು ಕಟ್ಟಿಕೊಳ್ಳಬಹುದು.. ಆದರೆ ಅದೆಲ್ಲಕ್ಕೂ ಮುಖ್ಯವಾದ ಮೂಲಭೂತವಾದ ಅಡಿಪಾಯವನ್ನು ಶಾಲೆಗಳು ಹಾಕಿಕೊಡುತ್ತವೆ. ಸೋಲು ಗೆಲುವಿನ ನೋವು ನಲುವಿನ ನೂರಾರು ಪಾಠಗಳನ್ನು ಕೂಡ ಶಾಲೆಗಳು ಕಲಿಸಿಕೊಡುತ್ತವೆ. ಹೀಗಾಗಿ ಮಕ್ಕಳ ಚಾರಿತ್ರ್ಯ ನಿರ್ಮಾಣದಲ್ಲಿ ವ್ಯಕ್ತಿತ್ವ ವಿಕಸನದಲ್ಲಿ ಶಾಲೆಗಳು ಬೇಕೇ ಬೇಕು ಅಂತಹ ಶಾಲೆಗಳ ಅಸ್ತಿತ್ವವನ್ನು ಗುರುತಿಸುವ ಸಂವೇದನಾಶೀಲ ಸಶಕ್ತ ಸಮಾಜದ ಹರಿಕಾರರು ನಾವಾಗಬೇಕು. ಆ ಮೂಲಕ ಶಿಕ್ಷಣ ಪದ್ಧತಿಯನ್ನು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉನ್ನತೀಕರಿಸಬೇಕಾದ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ಸಮಾಜದ ನಾವೆಲ್ಲರೂ ಒಂದುಗೂಡಿ ಕಾರ್ಯ ನಿರ್ವಹಿಸೋಣ ಎಂಬ ಆಶಯದೊಂದಿಗೆ ವೀಣಾ ಹೇಮಂತ್ ಗೌಡ ಪಾಟೀಲ್

“ಶಿಕ್ಷಣ ಪದ್ಧತಿ ಹಾಗೂ ಶಾಲೆಗಳ ಪ್ರಸ್ತುತತೆ” ವೀಣಾ ಹೇಮಂತ್‌ ಗೌಡ‌ ಪಾಟೀಲ್ Read Post »

You cannot copy content of this page

Scroll to Top