ಕಾವ್ಯಯಾನ

ಮುಂಜಾನೆ ಮಂಜಿಗೂ ಮತ್ತೇರುತ್ತಿದೆಯಂತೆ!!! ಸರೋಜಾ ಶ್ರೀಕಾಂತ್ ಅಮಾತಿ ಇಬ್ಬನಿಯ ಹನಿಯೊಂದು ಲಜ್ಜೆ ಬಿಟ್ಟು ಗೆಜ್ಜೆನಾದದ ಹೆಜ್ಜೆ ಹೇಗಿಡಲೆಂತಂತೆ!? ಹರಸುತ ಮೋಡಗಳೆಲ್ಲ ಮತ್ತೇ ತುಸು ಕತ್ತಲವ ಹೊತ್ತು ತಂದು ಹಾರೈಸಿದವಂತೆ! ಹಬ್ಬಿದ ಮಬ್ಬನ್ನೇ ನೆವ ಮಾಡಿಕೊಂಡಿಬ್ಬನಿ ಗರಿಕೆಯ ತಬ್ಬಿಕ್ಕೊಂಡಿತಂತೆ! ಅರಸಿ ಬಂದ ಸವಿಗಾಳಿಯು ಸರಸವ ನೋಡಿ ಸುಮ್ಮನೆ ದೂರ ಸರಿಯಿತಂತೆ! ಸ್ಪರ್ಶದುಸಿರು ಹರ್ಷದರಸಿಗೆ ಹೊಸದಿರಿಸ ನೆಪದಿ ಹನಿಹನಿ ನೀರನೇ ಪೋಣಿಸಿ ಸೀರೆಯಾಗಿಸಿತಂತೆ! ನಾಚಿ ಇಬ್ಬನಿ ಮುತ್ತಿಗೆ ಹಾಕಿದೆ ಮುತ್ತೀನಿಂದಲೇ…. ಬಾಚಿ ಅಪ್ಪಿದ ಮುಂಜಾನೆ ಮಂಜಿಗೂ ಮತ್ತೇರುತ್ತಿದೆಯಂತೆ….!!! ***********

ಕಾವ್ಯಯಾನ

ಅಗುಳಿಯಿಲ್ಲದ ಕದ ಶಶಿಕಲಾ ವೀ ಹುಡೇದ ಬೀಸುವ ಆಷಾಢ ಗಾಳಿ ಬೀದಿಬೀದಿಯಲಿ ಗಂಡು ನಾಯಿಗಳ ದಂಡ ನಡುವೆ ಒಂದೇ ಒಂದು ಹೆಣ್ಣುನಾಯಿ ಅವಕ್ಕೆ ನಾಚಿಕೆಯಿಲ್ಲ ಎಂದಿರಾ? ಇತ್ತಿತ್ತಲಾಗಿ ನಾಚುವ ಸರದಿ ನಿಮ್ಮದೇ ಯಾಕೆಂದರೆ ಅವುಗಳನೂ ಮೀರಿಸಿದ್ದೀರಿ ನೀವು? ಗದ್ದೆ ಕೆಸರು ಬಯಲು ಹೊಲ ಮನೆ ಗುಡಿಸಲು ಕೊನೆಗೆ ಬಸ್ಸು ರೈಲು ಹೊಟೇಲು ಲಿಫ್ಟು ಹಾಳು ಗೋದಾಮುಗಳು ಎಲ್ಲುಂಟು ಎಲ್ಲಿಲ್ಲ? ಅಪ್ಪನ ಕೂಸಿಗೆ ಮಗಳೇ ತಾಯಿ ಅಣ್ಣ ತಮ್ಮ ಗೆಳೆಯ ಹಳೆಯ ಮಾವ ಭಾವ ಮುದೀಯ ಸರೀಕ ಸಹೋದ್ಯೋಗಿ ಸನ್ಯಾಸಿ ಬಿಕನಾಸಿ ಬಾಸು ಶಿಕ್ಷಕ ಯಾರುಂಟು ಯಾರಲ್ಲ ಇಂವನ ಬಿಟ್ಟು ಇಂವ ಯಾರು? ಎಲ್ಲರೂ ತಾಯ್ಗಂಡರೇ ಮತ್ತೆ ನಾವು ರಾಖಿ ಕಟ್ಟಿದ ಕೈಗಳೆಲ್ಲಿ ಸೋದರರೆ? ಹಿಂದೊಬ್ಬ ತೊಡೆ ಬಗಿದು ನೆತ್ತರೆಣ್ಣೆಯ ಮಾಡಿ ಎಲುಬ ಬಾಚಣಿಕೆಯಲಿ ಕರುಳ ಬಾಚಿದನಂತೆ ಮುಯ್ಯಿಗಾಗಿ ಇದ್ದರೂ ಇದ್ದಾನು ಈಗಿಲ್ಲವಲ್ಲ! ಬಿಕ್ಕುತಿದೆ ದ್ರೌಪದಿಯ ಆತ್ಮ ಕಿಸಿದ ಕೂಪದಲಿ ಕಳೆದು ಹೋಗುವ ಅಣ್ಣಗಳಿರಾ ಯಾವ ಸುಖ ಪಡೆದಿರಿ ನೀವು ಗೆದ್ದೆವೆಂಬ ಭ್ರಮೆಯಲಿ ಗಹಗಹಿಸಿ ನಗಬೇಡಿ ನಿಲ್ಲಿ ಇಲ್ಲಿ ಸೋತಿದ್ದು ನೀವು ಮಾತ್ರವಲ್ಲ ಮನುಷ್ಯತ್ವ ಕೂಡ ಬೆತ್ತಲೆ ಮೈಯ ಮೇಲೆ ಹರಿವ ಸಾವಿರ ಹಲ್ಲಿಗಳೆ ಹೇಸಿಗೆಯ ನೆಕ್ಕಿ ಬಂದ ನಾಲಿಗೆಗಳೆ ಹುತ್ತದೊಳು ಹಾವಿಲ್ಲದಿರಬಹುದು ವಿಷವಂತೂ ಇದ್ದೇ ಇದೆ ಈಗೀಗ ನಮ್ಮ ಕನಸುಗಳಲಿ ಬರೀ ಪಾಣಿಪೀಠದ ಮೇಲೆ ನಿಗುರಿ ಕುಣಿವ ಲಿಂಗಗಳೇ ಎಷ್ಟಂತ ಕುಣಿದಾವು ಮತ್ತೆ ಮಸೆದ ಉಳಿ ಕೆಂಪು ಹನಿಗಳಿಗಾಗಿ ಕಾದಿದೆ ಹೇಳಿ ಮತ್ತೆ ಈಗ ನಮ್ಮ ಕನಸಿಗೆ ಬೆಚ್ಚುವ ಮನುಷ್ಯತ್ವ ನಿಮ್ಮಲ್ಲಿದೆಯೆ? *******

ಕಾವ್ಯಯಾನ

ನಿಶೆಯನರಿಸಿ ಶಾಲಿನಿ ಆರ್. ನಿಶೆಯರಸಿ ನೇಸರ ಹೊಂಟ್ಯಾನ ನಿಶೆಯರಸಿ ಬಂದಾಳಾ ಸಂತೆಯೊಳಗೆ ಸದ್ದಿಲ್ಲದಂತೆ            ಬದುಕ ಅಡವಿಯಿದು            ಬೆತ್ತಲಾಗಿಹುದಿಲ್ಲಿಮನದ            ಭಾವಗಳು ಗುಟ್ಟುರಟ್ಟಾಗಿ            ಹರಿದಿಹುದಿಲ್ಲಿ ಈ ಹೊತ್ತು ಸರಸ ವಿರಸಗಳ ಸಮ ರಸ ಸಮ್ಮಿಳಿತದ ಭಾವ ಆ ಸುಖದ ನೋವ ಅನುಭವಿಸಿ ಅರಗಿಸಿ ಕನವರಿಸಿ ಮಾನಿನಿ ಸರಸಿ             ಅಂಚಿಲ್ಲದ ಸೆರಗಿಲ್ಲದ             ಸವಿನೆನಪ ಪಾಚಿಯ ಹೊದ್ದು             ಅಂಟಿಯು ಅಂಟದಿಹ ಬಾಳ             ಗದ್ದುಗೆಯಲಿ ನೆಮ್ಮದಿಯ  ನಿದಿರೆಗೆ ಮರುಳಾಗಿ ಮಲಗಿಹಳಿಲ್ಲಿ ಸುಖನಾಶಿನಿ… ******

ಕಾವ್ಯಯಾನ

ಬದುಕಿನ ಬಣ್ಣದಲ್ಲಿ ಅನಾಥ ಪ್ರೀತಿ ವೀಣಾ ರಮೇಶ್ ಪ್ರೀತಿ ಸಿಗದ ಒಂದಷ್ಟು ಮನಸುಗಳು ನಮ್ಮ ನಡುವೆ ಇವೆ ನೀವೇನು ಮಾಡಬೇಕಿಲ್ಲ ವಾತ್ಸಲ್ಯದ ಪ್ರೀತಿಗೆ ಬಣ್ಣ ತುಂಬಿದರೆ ಸಾಕು. ಆ ಮನಸ್ಸಿನೊಳಗೆ ಕನಸು ಕಟ್ಟಿದ ಬಣ್ಣ ಸುಂದರ ಬದುಕಿನ ಬಣ್ಣ ಯಾವ ಕಲ್ಮಶವು ಇಲ್ಲದ ತಿಳಿನೀರಿನ ಬಣ್ಣ. ಪ್ರೀತಿ ಸಿಗದ ,ಹೃದಯ ಭಾರವಾಗಿದೆ ,ಬಿಟ್ಟರೆ ಮನಸು ಹೂವಿನಷ್ಟು ಹಗುರ,ನೀವೇ ಎತ್ತಿ ನೋಡಿ ಅಷ್ಟೇನು ಭಾರವಿಲ್ಲ,ಎದೆಯೊಳಗೆ ನೋವು ತುಂಬಿದ ಭಾರ ವಷ್ಟೇ. | ಆ ಮನಸುಗಳಿಗೆ ನೀವೇ ರಂಗು ತುಂಬಿ ಬದುಕಿಗೊಂದು ಸುಂದರ ಬಣ್ಣ ಕೊಟ್ಟು ನೋಡಿ ನಿಸ್ವಾರ್ಥ ಪ್ರೀತಿ ತುಂಬಿ, ಮನದಲಿ ಕಲ್ಪನೆಗಳಿಗೆ ಬಣ್ಣ ನೀಡಿ,ಸಾಂತ್ವನ ನೀಡಿ,ನಿಮ್ಮಿಂದ ಅಂತಕರಣ,ಮಮತೆ ತುಂಬಿಸಿಕೊಂಡು ಬದುಕಿಗೆ ಬಣ್ಣ ಕಟ್ಟಿಕೊಳ್ಳಲಿ ಬಿಡಿ. ರಂಗು ರಂಗಿನ ಮನಸಿಗೆ ಬಣ್ಣ ಕಟ್ಟಿಕೊಡಿ ಬದುಕೊಂದು ಬಿಚ್ಚಿ ಕೊಡಿ ಇನ್ನೆಲ್ಲೂ ಸಿಗದು ಬಿಡಿ ಬದುಕಿಗೊಂದು ಆಧಾರವಾಗಿಬಿಡಿ **********

ಬದುಕು-ಬರಹ

ಅಮೃತಾ ಪ್ರೀತಮ್ ಜ್ಞಾನಪೀಠ ಪ್ರಶಸ್ತಿ ವಿಜೇತೆ, ಹೆಸರಾಂತ ಪಂಜಾಬಿ ಲೇಖಕಿ ಅಮೃತಾ ಪ್ರೀತಮ್..! ಅಮೃತಾ ಪ್ರೀತಮ್ ಹೆಸರಾಂತ ಪಂಜಾಬಿ ಲೇಖಕಿ, ಕವಯಿತ್ರಿ, ಕತೆಗಾರ್ತಿ, ಕಾದಂಬರಿಗಾರ್ತಿ. ಜ್ಞಾನಪೀಠ ಪ್ರಶಸ್ತಿ ವಿಜೇತೆ. ಅವಿಭಕ್ತ ಪಂಜಾಬಿನ ಲಾಹೋರಿನ ಬಳಿಯ ಗುಜರಾವಾಲೆಯಲ್ಲಿ 31ನೆಯ ಆಗಸ್ಟ್ 1919ರಂದು ಜನಿಸಿದರು. ಇವರ ತಂದೆ ಕರ್ತಾರಸಿಂಹ ‘ಹಿತಕಾರಿ’ ಸಹ ಅಂದಿನ ಪ್ರಸಿದ್ದ ಲೇಖಕರಲ್ಲೊಬ್ಬರು. ಪ್ರೀತಮ್ ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ ತಾಯಿ ರಾಜಕೌರ್ ಅವರನ್ನು ಕಳೆದುಕೊಂಡರು. ಅನಂತರ ತಂದೆಯ ಪೋಷಣೆಯಲ್ಲಿ ಬೆಳೆದು ಅವರ ಪ್ರೇರಣೆಯಿಂದಲೇ ಸಾಹಿತ್ಯ ರಚನೆಗೆ ತೊಡಗಿದವರು… ಇಪ್ಪತ್ತನೆಯ ವಯಸ್ಸಿನಲ್ಲಿ (ಡಿಸೆಂಬರ್ 1939) ಪ್ರೀತಮ್‍ಸಿಂಗ್ ಕವಾತಡಾ ಅವರೊಡನೆ ಇವರ ಮದುವೆಯಾಯಿತು. ನೂರಕ್ಕೂ ಹೆಚ್ಚು ಕವನಗಳನ್ನುಳ್ಳ ಇವರ ಮೊದಲ ಕೃತಿ ಅಮೃತಾ ಲಹರಾರಿ 1936ರಲ್ಲಿ ಹೊರಬಂತು. 1938ರಲ್ಲಿ ಇವರು ನವೀದುನಿಯಾ ಎಂಬ ಸಾಹಿತ್ಯ ಪತ್ರಿಕೆಯನ್ನು ನಡೆಸತೊಡಗಿದರು. ಲಾಹೋರಿನ ಆಕಾಶವಾಣಿಗೆ ಕವನಗಳನ್ನು ಬರೆಯಲಾರಂಭಿಸಿದರು. ಇವರ ಆರಂಭದ ಬರೆವಣಿಗೆಯ ಮೇಲೆ ಪಂಜಾಬಿನ ಖ್ಯಾತ ಕವಿ ಮೋಹಸಿಂಗ್ ಮತ್ತು ಪ್ರಸಿದ್ಧ ಲೇಖಕ ಗುರುಬಕ್ಷ್‍ಸಿಂಗ್ ಅವರ ಪ್ರಭಾವ ಸಾಕಷ್ಟು ಬಿದ್ದಿರುವುದಾಗಿ ತೋರುತ್ತದೆ… 1947ರಲ್ಲಿ ಭಾರತದ ವಿಭಜನೆಯಾದ ಅನಂತರ ಇವರು ಲಾಹೋರನ್ನು ತೊರೆದು ದೆಹಲಿಗೆ ಬಂದು ನೆಲೆಸಿದರು. ವಿಭಜನೆಯ ಸಮಯದಲ್ಲಿ ಅಲ್ಲಿಯ ಪ್ರಜೆಗಳಿಗೆ ಉಂಟಾದ ಆರ್ಥಿಕ ಹಾಗೂ ಮಾನಸಿಕ ಕಷ್ಟನಷ್ಟಗಳು ಇವರ ಮೇಲೆ ತುಂಬಾ ಪರಿಣಾಮ ಬೀರಿ ಇವರ ಅನೇಕ ಕೃತಿಗಳಲ್ಲಿ ಮಾರ್ದನಿ ಪಡೆದವು… ವಾರಸ್‍ಶಾಹ್ ಎಂಬ ಇವರ ಕವನ ಈ ನಿಟ್ಟಿನಲ್ಲಿ ತುಂಬಾ ಪ್ರಸಿದ್ಧವಾಗಿರುವ ಕೃತಿ. ಇವರ ಕೃತಿಗಳಲ್ಲಿ ಪಂಜಾಬಿನ ಜನಜೀವನದ ಹಲವಾರು ಮುಖಗಳ ಪರಿಚಯವಾಗುತ್ತದೆ. ಹಿಂದಿ ಸಾಹಿತ್ಯ ಕ್ಷೇತ್ರದಲ್ಲೂ ಇವರು ಜನಪ್ರಿಯ ಕಾದಂಬರಿಕಾರ್ತಿಯೆಂದು ಹೆಸರುವಾಸಿಯಾಗಿದ್ದಾರೆ. ಹೆಣ್ಣಿನ ಅಸಹಾಯಕತೆ, ಅವಳ ಮೇಲೆ ಸಮಾಜ ನಡೆಸುವ ದೌರ್ಜನ್ಯ, ಸಾಮಾಜಿಕ ಕಟ್ಟುಪಾಡುಗಳು ಇವರ ಆರಂಭಿಕ ಕಾದಂಬರಿಗಳ ತಿರುಳು. ಈಚಿನ ರಚನೆಗಳಲ್ಲಿ ಸಾಮಾಜಿಕ ಹಾಗೂ ಮನೋವೈಜ್ಞಾನಿಕ ಸಮಸ್ಯೆಗಳನ್ನು ಎತ್ತಿಕೊಂಡಿದ್ದಾರೆ… ಇವರ ಕೆಲವು ಕೃತಿಗಳು ಹೀಗಿವೆ– ಲಾಮಿಯಾವತನ್ (1948); ಸುನಹರ್ (1956) ಕವನ ಸಂಗ್ರಹಗಳು… ಪಿಂಜರ್ (1950), ಆಲನಾ (1952), ಬಂದ್ ದರ್‍ವಾಜಾ (1962), ರಂಗ್ ಕಾ ಪತ್ತಾ (1962), ವಾಕ್ ಥೀ ಅನೀತಾ (1963), ಧರತೀ, ಸಾಗರ್ ಔರ್ ಸೀಪಿಯಾಂ (1966), ದಿಲ್ಲೀ ಕಿ ಗಲಿಯಾಂ (1967), ಎಸ್ಕಿಮೋ ಸ್ಟೈಲ್ ತಥಾ ಏರಿಯಲ್ (1967), ಜಲಾವತನ್ (1969), ಜೇಬ್ ಕತರೇ (1970) ಕಾದಂಬರಿಗಳು… ಅಖರೀಖತ್ (1956). ಏಕ್ ಲಡಕೀ ಏಕ್ ಶಾಪ್ (1967) ಸಣ್ಣಕತೆಗಳ ಸಂಗ್ರಹ… ಇಕ್ಕೀಸ್ ಪತ್ತಿಯೋಂಕಾ ಗುಲಾಬ್ (1968) ಎಂಬುದು ಇವರ ಬಲ್ಗೇರಿಯ, ಸೋವಿಯತ್ ರಷ್ಯ, ಯುಗೋಸ್ಲಾವಿಯ, ಹಂಗೇರಿ, ರುಮೇನಿಯ ಮತ್ತು ಜರ್ಮನಿ ಪ್ರವಾಸದ ದಿನಚರಿ ಅತೀತ್ ಕೀ ಪರಛಾಯಿಯಾಂ (1962) ಕೃತಿಯಲ್ಲಿ ತಮ್ಮ ಬದುಕು ಹಾಗೂ ಸಾಹಿತ್ಯ, ದೇಶವಿದೇಶಗಳ ಬರಹಗಾರರ ಬದುಕು ಮತ್ತು ಸಾಹಿತ್ಯವನ್ನು ಕುರಿತಂತೆ ನೆನಪಿನ ಚಿತ್ರಗಳನ್ನು ಬಿಡಿಸಿದ್ದಾರೆ. ‘ರಸೀದಿ ಟಿಕೆಟ್’ ಇವರ ಆತ್ಮಕಥಾನಾತ್ಮಕ ಕೃತಿಯಾಗಿದೆ… ದೆಹಲಿಯ ಆಕಾಶವಾಣಿಯಲ್ಲಿ ಇವರು ಅನೇಕ ವರ್ಷ ಕೆಲಸ ಮಾಡಿದರು. ಮುಂಬಯಿಯ ಚಲನಚಿತ್ರ ಪ್ರಪಂಚಕ್ಕೂ ಹೆಜ್ಜೆಯಿಟ್ಟ ಇವರು ಆ ಕ್ಷೇತ್ರ ಒಗ್ಗದೇ ಮರಳಿದರು. ಇವರ ಅನೇಕ ಕೃತಿಗಳು ಭಾರತೀಯ ಭಾಷೆಗಳಲ್ಲೇ ಅಲ್ಲದೆ ಇಂಗ್ಲಿಷ್, ರಷ್ಯನ್, ಬಲ್ಗೇರಿಯನ್. ಹಂಗೇರಿಯನ್, ಜಪಾನಿ ಭಾಷೆಗಳಿಗೆ ಅನುವಾದಗೊಂಡಿವೆ… ಇವರ ಸಾಹಿತ್ಯ ಸೇವೆಯನ್ನು ಗಮನಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ 1956ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತು. ಅದನ್ನು ಪಡೆದ ಮಹಿಳೆಯರಲ್ಲಿ ಇವರೇ ಮೊದಲಿಗರು. 1969ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತು. ದೆಹಲಿ ವಿಶ್ವವಿದ್ಯಾಲಯ 1973ರಲ್ಲಿ ಗೌರವ ಡಿ.ಲಿಟ್ ಪ್ರಶಸ್ತಿ ನೀಡಿ ಗೌರವಿಸಿತು. ಬಲ್ಗೇರಿಯಾದ ಪ್ರಶಸ್ತಿಗೂ ಪಾತ್ರರಾದರು. 1966ರಿಂದೀಚೆಗೆ ಅಮೃತಾ ಪ್ರೀತಮ್ ಅವರು ನಾಗಮಣಿ ಎಂಬ ಪಂಜಾಬಿ ಪತ್ರಿಕೆಯ ಸಂಪಾದಕ ಪ್ರಕಾಶಕರಾಗಿದ್ದಾರೆ. ಇತ್ತೀಚೆಗೆ ಅಮೆರಿಕೆಯ ಮಿಚಿಗನ್ ವಿಶ್ವವಿದ್ಯಾಲಯದ ನಿಯತಕಾಲಿಕ ಮೆಹಫಿಲ್ ಇವರ ಕೃತಿಗಳನ್ನು ಕುರಿತಂತೆ ಒಂದು ಸಂಚಿಕೆಯನ್ನೂ ಹೊರತಂದಿದೆ… ಜ್ಞಾನಪೀಠ ಪ್ರಶಸ್ತಿ ಪಡೆದ ಇವರ ಕಾಗದ ಮತ್ತು ಕ್ಯಾನ್‍ವಾಸ್ ಕವನ ಸಂಗ್ರಹದಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿದ್ದಾರೆ. ಜನಪದ ಛಂದಸ್ಸು, ಲಾವಣೆಮಟ್ಟು, ಮುಕ್ತಛಂದಸ್ಸು ಇವುಗಳನ್ನು ವಿಧವಿಧವಾಗಿ ಬಳಸಿದ್ದಾರೆ. ಇವರ ಮೂಲಕ ಈ ಪ್ರಶಸ್ತಿ ಪಂಜಾಬಿಗೆ ಮೊದಲ ಸಲಕ್ಕೆ ಲಭಿಸಿದೆ. ಉನ್ನತ ಪ್ರಶಸ್ತಿ ಪಡೆದ ಮಹಿಳೆಯರಲ್ಲಿ ಈಕೆ ಎರಡನೆಯವರಾಗಿದ್ದಾರೆ. ಇಂತಹ ಅಮೃತಾ ಪ್ರೀತಮ್ ಅವರು ಅಕ್ಟೋಬರ್ 31, 2005ರಂದು ನಿಧನರಾದರು… ‌‌ ‌‌‌‌‌‌ ‌ ************* ಕೆ.ಶಿವು ಲಕ್ಕಣ್ಣವರ

ಪುಸ್ತಕ ವಿಮರ್ಶೆ

ಮಾಯಾ ಕನ್ನಡಿ ಕಮಲಾ ಹೆಮ್ಮಿಗೆ ಕಮಲಾ ಹೆಮ್ಮಿಗೆಯವರ ‘ಹೊಸತಾದ ಸ್ತ್ರೀ‌ ಪ್ರಪಂಚ’ವೇ ಆಗಿದೆ ಈ‌ ‘ಮಾಯಾಕನ್ನಡಿ’ ಎಂಬ ಕಥೆಗಳ ಸಂಕಲನ..! ಸಾಹಿತ್ಯದ ವಿವಿಧ ಪ್ರಕಾರಗಳಿಗೆ ತಮನ್ನು ಒಡ್ಡಿಕೊಂಡಿರುವ ಲೇಖಕಿ ಕಮಲಾ ಹಮ್ಮಿಗೆಯವರು ಇದುವರೆಗೆ ಒಂಬತ್ತು ಅನುವಾದಿತ ಕೃತಿಗಳನ್ನು ಕೊಟ್ಟಿದ್ದಾರೆ. ನಾನಾ ಕಾರಣದಿಂದ ಕೇರಳದಲ್ಲಿ ನೆಲೆಸಿದ್ದರಿಂದ ಇವರು ಮಲೆಯಾಳೀ ಸ್ತ್ರೀ ಸಂಕಥನಗಳಿಗೆ ಕೈಹಚ್ಚಿದರು. ‘ಚಿರು ಕಥ’ ಎಂದು ಕರೆಸಿಕೊಳುವ ಸಣ್ಣ ಕಥೆಗಳ ಪ್ರಖರತೆ ಮನಗೊಂಡು ಅತ್ತಿ ಹಣ್ಣಿನಂಥ ಹೆಣ್ಣಿನ ಬದುಕನ್ನು — ಅಂದರೆ ಮೇಲೆ ಆಕರ್ಷಕವಾಗಿದ್ದು ಒಳಗೆ ಅರೆಕೊರೆಯಿದ್ದರೂ — ಬಿಚ್ಚಿಡುವ ಕಥೆಗಳನ್ನಾಧರಸಿಕೊಂಡು ಒಟ್ಟಾರೆ ಕೇರಳ ಕಾಂತೆಯರ ನಿಟ್ಟುಸಿರು, ಕೋಪಗಳನ್ನು ಕನ್ನಡಕ್ಕೆ ತರುವಲ್ಲಿ ಸಾಫಲ್ಯ ಕಂಡಿದ್ದಾರೆ ಕಮಲಾ ಹೆಮ್ಮಿಗೆ… ‘ಮಾಯಾಕನ್ನಡಿ’ ಕೇರಳ ಕಾಂತಾ ಸಮ್ಮಿತದ ಮುಂದುವರಿದ ಭಾಗವೆನ್ನೆಡ್ಡಿಯಿಲ್ಲ. ಸ್ವಾತಂತ್ರೋತ್ತರ ಭಾರತ, ಸುಶಿಕ್ಷಿತ ಸ್ತ್ರೀಯರ ಬವಣೆಗಳು, ಸಮಾಜದ ದ್ವಂದ್ವ ನೀತಿಗಳನ್ನು ಪ್ರಶ್ನಿಸುವ ಗುಣ‌ ಇವೆಲ್ಲವನ್ನೂ ಇಲ್ಲಿಯ ೧೬ ಕಥೆಗಳಲ್ಲಿ ಕಾಣಬಹುದು. ೧೯ ನೆಯ ಶತಮಾನದಲ್ಲೇ ಭ್ರಮನಿರಸನ(ಗಾಂದೀಜಿಯೋತ್ತರ ದಿನಗಳು)ವಾದ ಚಿತ್ರ ಇಲ್ಲಿ ನೋಡಲು ಸಿಗುವುದು. ಪೊಲೀಸ್ ವ್ಯವಸ್ಥೆ ವಿರುದ್ಧ ಕಮಲಾದಾಸ್ (ಸುರೈಯ್ಯಾ) ಎತ್ತಿದ ಧ್ವನಿ ‘ಕಲ್ಲ್ಯಾಣಿ’ಯಲ್ಲಿದ್ದರೆ ‘ವತ್ಸಲಾ’ರ ಕಥೆಗಳಲ್ಲಿ ಹೆಣ್ಣಿನ ಸೂಕ್ಷ್ಮ ಸಂವೇದನೆ ಹಾಗೂ ಮಾತೃ ಹೃದಯಗಳ ಚಿತ್ರಣವಿದೆ. ‘ಚರಿತ್ರೆ ಮರುಕಳಿಸಲಿಲ್ಲ’ ದಲ್ಲಿ ‘ರಾಜಲಕ್ಷ್ಮಿ’ಯವರು ಅಳಿಯ ಸಂತಾನ ಕಟ್ಟು (ಮಾತೃ ಮೂಲ ಕುಟುಂಬ) ಕುರಿತು ವಿಡಂಬಿಸಿದ್ದಾರೆ. ‘ಕನ್ಯ’ ‘ಸಲಿಂಗ ಪಶು’ ಕಥೆಗಳಲ್ಲಿ ಇಂದೂ ಮೇನೊನ್ ಹೆಣ್ಣಿನದೇ ವಿಶಿಷ್ಟಾನುಭಗಳನ್ನು ದಟ್ಟವಾಗಿ ಮುಂದಿಟ್ಟಿದ್ದಾರೆ. ಇ.ಪಿ.ಸುಷ್ಮಾರ ‘ಮಗಳು’ ಧೋರಣೆ ಕಲಾತ್ಮಕತೆ ಎರಡೂ ದ್ರವ್ಯತೆಯಿಂದ ಪರಿಪಕ್ವವಾದ ಕಥೆ. ನಿಜವಾಗಿ ಇದು ಕವಿತೆ! ಮೂರು ತಲೆಮಾರಿನ ಲೇಖಕರ ಪ್ರಾತಿನಿಧಿಕ ಕಥಾ ಸಂಕಲನ. ಹೀಗೆ ನಮ್ಮೆದುರು ಸುರುಳಿ ಬಿಚ್ಚುತ್ತದೆ. ಕಮಲಾ ಹೆಮ್ಮಿಗೆಯವರು ಉದ್ದೇಶ ಪೂರ್ವಕವಾಗಿ ‘ಜನಪದ ಕಥೆ’ಯೊಂದನ್ನು ಸೇರಿಸಿ ಕೃತಿಗೆ ಮೆರಗು ನೀಡಿದ್ದಾರೆ. ಒಂದು ಹರೆಯದ ಹುಡಿಗಿಗೆ ರಸಹಗಳಲ್ಲಿರುವು ಹಾಗೂ ಯಾತನೆಗಳಲ್ಲಿ‌ ಯಾವುದು‌ ತೀವ್ರ ಎಂಬ ‘ಯಕ್ಷ ಪ್ರಶ್ನೆ’ ಹಾಕುವ ಸಮಾಜದ ಕ್ರೌರ್ಯವನ್ನು ಕಣ್ಣಿಗೆ ಕಟ್ಟಿ ಕೊಟ್ಟಿದ್ದಾರೆ. (ಒಟ್ಟು ಸಂಕಲನದ ‘ಆಶಯ’ವನ್ನಿದು ಪ್ರಕಟಿಸುತ್ತದೆ). ಇನ್ನು ಮುಖಪುಟ ಹಾಗೂ ಶೀರ್ಷಿಕೆ ಸಂಬಂಧಿಸಿದ ‘ಮಾಯಾಕನ್ನಡಿ’ ಸೊಗಸೇ ಬೇರೆ. ಇಲ್ಲಿ ಕಳ್ಳನೊಬ್ಬನಿಗೆ ಗುಜರಿಯಲ್ಳಿ ಕನ್ನಡಿಯೊಂದು ಸಿಗುತ್ತದೆ. ಅ ಯುವಕ ಮನೆಗೆ ತಂದು ಮುಖ ನೋಡಿಕೊಳ್ಳಲು ಸಹಜವಾಗಿ ಬಯಸಿದರೆ, ಅಲ್ಲಿ ಸೈತಾನನ‌ ಬದಲು ಕ್ರಿಸ್ತನ ಮುಖ ಕಾಣುವುದು! ನಂತರದ ಕ್ಷಣಗಳಲ್ಲಾತ ಒಳ್ಳೊಳ್ಳೆ ಕಾರ್ಯಗಳನ್ನು ಎಸಗುವನು. ಕಥೆಯ ಅಂತ್ಯದಲ್ಲಿ ಕನ್ನಡಿಯಲ್ಲಿ ಸೈತಾನನ ಮೊಗವೇ ಕಾಣುವುದು ಬದುಕಿನ ವ್ಯಂಗ್ಯ! ಹಿರಿಯ ಲೇಖಕಿ ‘ಗ್ರೇಸಿ’ಯವರ ಕಥೆ ಇದು. ಫ್ಯಾಂಟಸಿ ಚಿತ್ರಣವಿದೆ. ಹೀಗೆ ಬದುಕಿನ ನಿಸ್ಸಾರತೆ, ಸ್ವಾರಸ್ಯ ಎರಡನ್ನೂ ಕುರಿತ ಕಥೆಗಳು ವಾಚಕರಿಗೆ ಸಂಕಲನ ನೀಡುತ್ತದೆ. ಸ್ತ್ರೀ-ದೃಷ್ಟಿಕೋನ ಇಲ್ಲಿ ಮುಖ್ಯ. ಕಮಲಾ ಹೆಮ್ಮಿಗೆಯವರು ತುಂಬಾ ಸರಳ ಭಾಷೆಯಲ್ಲಿ ಅಲ್ಲಿಯ ಪರಿಸರ, ನಾಣ್ನುಡಿ, ಮುಂತಾದವುನ್ನು ಸಾರ ಕೆಡದಂತೆ ಒಪ್ಪಳಿಯದಂತೆ ಕನ್ನಡಕ್ಕೆ ತಂದಿದ್ದಾರೆ. ಉತ್ತರ ಕರ್ನಾಟಕದ (ಉದಾ: ಶಿಕಾವತು) ಹವಣಾದ ಶಬ್ದಗಳೂ ಬಳಕೆಗೊಂಡಿವೆ. ಸಂಕೀರ್ಣವಾದ ವಾಕ್ಯಗಳು ಎಲ್ಲೂ ಇಲ್ಲ. ‘ಪ್ಯಾಸಿ’ವೂ ಒಂದು ಶೃತಿಯಾಗಿ ಸಂಕಲನದುದ್ದಕ್ಕೂ ಇರುವ ಅನುಭವ! ಇಂಥ ಸ್ತ್ರೀ ‘ಅಸ್ಮಿತೆ’, ಸಂವೇದನೆ, ಕನ್ನಡಕ್ಕೆ ಅತ್ಯವಶ್ಯವಾಗಿತ್ತು. ಅದನ್ನು ಕಮಲಾ ಹೆಮ್ಮಿಗೆಯವರು ಸಮರ್ಥವಾಗಿ ಒದಗಿಸಿದ್ದಾರೆ. ‘ಕೇರಳ ಕಾಂತಾ ಸಮ್ಮಿತ’ದ ಕಥೆಗಳು ಅಘಾತ ತರುವಂತಿದ್ದವು. ಇಲ್ಲಿ ಮಾತ್ರ ‘ಪ್ರಶಾಂತ ಸಮುದ್ರ. ಎರಡೂ ಕಮಲಾ ಹೆಮ್ಮಿಗೆಯವರ ಕೌಶಲ್ಯಕ್ಕೆ ಸಾಕ್ಷಿಯೇ..! ಮುಖಪುಟ, ಹಿಂಬದಿ ‘ಸಮುದ್ರ ದೇವತೆ’ ಬೆನ್ನುಡಿ ಅರ್ಥಪೂರ್ಣ. ‘ಬ್ಲರ್ಬ್’ ಬರೆದ ಪ್ರಭು.ಅಜಾನೂರು, ಅನುವಾದಕರ ಸರಳ, ಸಂಪನ್ನ ವ್ಯಕಿತ್ವವನ್ನು‌ ಸರಿಯಾಗಿ ಗುರುತಿಸಿದ್ದಾರೆ. ಇಷ್ಟು ಹೇಳಿ ಈ ಕಮಲಾ ಹೆಮ್ಮಿಗೆಯವರ ಅನುವಾದಿತ ನೂತನ ಕಥೆಗಳ ಬಗೆಗೆ ಸಾಕುಮಾಡುತ್ತೇನೆ. —————————————————– ಪುಸ್ತಕ ಪ್ರತಿ ಬೇಕಾದವರಿಗೆ ಒಂದು ಸಲಹೆ-– ಸಂಪರ್ಕಿಸಬೇಕಾದ ಮೊಬೈಲ್ ನಂಬರ್ ಕೆಳಗಿನಂತೆ ಇದೆ.– ‘ಕಣ್ವ ಪ್ರಕಾಶನ’ ಬೆಂಗಳೂರು ಮೊಬೈಲ್ ನಂಬರ್– 9845052481 ************* ಕೆ.ಶಿವು ಲಕ್ಕಣ್ಣವರ

ಕಾವ್ಯಯಾನ

ಮುಖ ಪುಸ್ತಕ ಗೌರಿ.ಚಂದ್ರಕೇಸರಿ ಮುಖ ಪುಸ್ತಕ ತೆರೆದರೆ ನಿತ್ಯ ಹತ್ತಾರು ರಿಕ್ವೆಸ್ಟುಗಳು ಕನ್ಫರ್ಮ್ ಮಾಡುವ ಎಂದರೆ ಮನಸು ಬುದ್ಧಿ ಹೇಳುತ್ತದೆ ಸ್ನೇಹದ ಅರಿಕೆ ಇಟ್ಟವರ ಕಥೆ ಹೇಳುತ್ತವೆ ಅವರ ಪೋಸ್ಟು ಲೈಕು, ಕಮೆಂಟುಗಳು ಅವೇ ಹಳಸಲು ಜೋಕುಗಳು ಫಾರ್ವರ್ಡ್ ಮೆಸೇಜುಗಳು ಯಾರೋ ಹೆಣೆದ ವಿಶ್ಶುಗಳು ಬೇಡವೆಂದರೂ ಬೆರಳು ತಾಗಿ ಬಿಡುತ್ತವೆ ಪುಟ್ಟ ನೀಲಿಯ ಬಾಕ್ಸಿಗೆ ಅಷ್ಟರಲ್ಲಿ ಬಂದು ಬೀಳುತ್ತದೆ ಒಂದು ‘ಹಾಯ್’ ನನ್ನ ಮೆಸೆಂಜರಿಗೆ ಇದು ಬೇಕಿತ್ತಾ ಎಂದು ಕೇಳುತ್ತದೆ ಮನಸು ಮೊಬೈಲ್ ಬೆಳಕು ಬೀರಿದಾಗಲೆಲ್ಲ ಗುಡ್ ಮಾರ್ನಿಂಗ್, ಗುಡ್ ನೈಟುಗಳು ಟೀ,ಕಾಫಿ,ಊಟ ಆಯಿತಾ? ಎಂಬ ಕಿರಿ ಕಿರಿಗಳು ಮನಸು ರೋಸಿ ಹೋಗುತ್ತದೆ ಮೆಸೆಂಜರಿನ ಕುತ್ತಿಗೆಯನ್ನು ಒತ್ತಿ ಹಿಡಿಯುತ್ತೇನೆ ಆಗ ಅರೆ ಸ್ಕ್ರೀನ್ ಮೇಲೆೆ ಕಸದ ಬುಟ್ಟಿ ಎಳೆದೊಯ್ದು ಅಲ್ಲಿ ನೂಕಿ ಬಿಡುತ್ತೇನೆ ಹಸಿದು ರಚ್ಚೆ ಹಿಡಿದ ಮೊಬೈಲ್ ಬಾಯಿಗೆ ಚಾರ್ಜರ್ ಸಿಕ್ಕಿಸಿ ಬಾಲ್ಕನಿಗೆ ಬಂದರೆ ಆಕಾಶದಲ್ಲಿ ರುಜು ಹಾಕುತ್ತ ಹೊರಟ ಬಾನಾಡಿಗಳು ಕುಪ್ಪಳಿಸುತ್ತಿರುವ ಅಳಿಲುಗಳು ಮಧು ಹೀರುತ್ತಿರುವ ದುಂಬಿಗಳು ಗಾಳಿಯಲ್ಲಿ ಗುಳ್ಳೆಗಳನ್ನು ಬಿಡುತ್ತ ನಿಂತ ಪುಟ್ಟಿ ಮನಸು ಆಗ ಮಗುವಾಗಿ ಬಿಡುತ್ತದೆ. *********

ಕಾವ್ಯಯಾನ

ನಿಮ್ಮ ಸ್ಥಿತೀನೂ ಇದೇನಾ ಗಾಯತ್ರಿ ಆರ್. ಟ್ರಿಣ್….ಟ್ರಿಣ್….ಟ್ರಿಣ್… ರಿಂಗಣಿಸಿತು ಮನೆಯ ದೂರವಾಣಿ ಅತ್ತಲಿಂದ ಬಂತೊಂದು ಧನಿ ಕರ್ಕಶವಾಗಿ ಈ ಯುಗಾದಿಗೆ ರಜೆ ಇಲ್ಲ ನಾವು ಬರಲ್ಲ ಕಾಯಬೇಡಿ ನಮಗಾಗಿ ವಾರದಿಂದ ಮಗ, ಸೊಸೆ, ಮೊಮ್ಮಕ್ಕಳು ಬರುವರೆಂದು ಮಾಡಿದ ಸಿಹಿ ತಿಂಡಿಗಳೆಲ್ಲಾ ಅವಳ ನೋಡಿ ನಗುತ್ತಿತ್ತು ವ್ಯಂಗ್ಯವಾಗಿ. ಅಹ..ಹಾ ಅಹ…ಹಾ ಅಹ…ಹಾ. ಮನೆಯ ಮೂಲೆಯ ಪಲ್ಲಂಗದಲ್ಲಿ ಪವಡಿಸಿದ್ದ ಪತಿರಾಯ ಮಡದಿಯ ಹುಸಿನಗುವಿಂದ ಎಲ್ಲವನ್ನೂ ಅರಿತೆಂದ ನಿನ್ನ ಮನೆಕಾಯ ನನ್ನನ್ನೂ ಬಿಡದೆ, ನಿನಗೂ ಆಗದೆ, ಸಿಹಿ ಕರಿವಾಗ ನೋಡಿಲ್ಲಿ ಆದ ‌ಸುಟ್ಟಗಾಯ ಹಚ್ಚುತ್ತಲೇ ಮುಲಾಮು ಹೇಳಿದಳು ಬೇಗ ಆಗುವುದು ಗುಣ ನಿಮ್ಮ ಗಾಯ ಇಟ್ಟಿರುವಿರೇ… ನಿಮ್ಮಬಳಿ ಕಾಣದ ನನ ಗಾಯಕ್ಕೆ ಔಷಧಿಯ ಉತ್ತರವಿಲ್ಲ!! ಇಬ್ಬರ ಕಣ್ಣುಗಳ ನಡುವೆ ಮೌನ ಮೆಲ್ಲ ಮೆಲ್ಲನೆ ಹಾಕಿತ್ತು ಕೇ…ಕೇ ಹಿಹಿಹೀ…ಹಿಹಿಹೀ…ಹಿಹಿಹೀ. ಜಾಗತೀಕರಣವೇನೋ ಮಾಡಿತು ವಿಶ್ವವನ್ನೇ ಒಂದು ಕುಟುಂಬವನ್ನಾಗಿ ಬಡ ರಾಷ್ಟ್ರಗಳು ಸಾಗಿದವು ಅಭಿವೃದ್ಧಿಯತ್ತ ದಾಪುಗಾಲಾಕಿ ಆದರೇನು? ಮಾನವ ಸಂಬಂಧಗಳು ಹೊರಳಾಡುತಿದೆ ಡೋಲಾಯಮಾನವಾಗಿ ಹೀಗೆಂದು ಚಿಂತಿಸುತ್ತಿರುವಾಗಲೇ ಆಕೆಗೆ ಬಂತೊಂದು ತಂತಿ! ನಾಳೆ ನಾವು ಬರುವೆವು ಅದನೋದಿದ ಆಕೆಯ ಕಾಲು ಕುಣಿಯಿತು ಪಾಡು ತಾ ಗಾನ ಆ…ಆ…ಆ.ಅಹಾಹ… ಲಗುಬಗೆಯಿಂದ ಎಡವಿ ಎಡವದಂತೆ, ಬಿದ್ದು ಬೀಳದಂತೆ ಓ…ಡುತಾ ಅಡುಗೆ ಕೋಣೆಗೆ ಕೈ ಹಾಕಿ ತಿಂಡಿ ಡಬ್ಬಿಗೆ ಕೇಳಿದಳು ಈಗೇನಂತಿ? ಮತ್ತದೇ ಮನೆಯ ಮೂಲೆಯಿಂದ ಬಂತೊಂದು ಸಶರೀರ ವಾಣಿ ಬೀಗಬೇಡ ಮಾರಾಯ್ತಿ… ಇದಕ್ಕೆಲ್ಲಾ ಕಾರಣ ಕರೋನ ಮೀಟಿದ ಕೃತಕ ತಂತಿ! ಕೃತಕವೋ… ನೈಸರ್ಗಿಕವೋ .. ಅಂತೂ ನಿಜ ನುಡಿದಿತ್ತು ಮುಂಜಾನೆಯ ಹಾಲಕ್ಕಿ. ಕೆಡುಕಿನಲೂ ಕರೋನ ಕರುಣಿಸಿತೇ ಕ..ರು..ಣಾ ..? ತೆರಳು ಬಾರದೂರಿಗೆ ಕರೋನ ಎಂದೆದ್ದ ಅವಳ ಕೈ ಅವಳಿಗರಿವಿಲ್ಲದೇ ಗುಡಿಯ ದೇವಿಗೆ ಸಲಿಸಿತು ನಮನ ಹಾಡುತಾ ‌ಸವಿಗಾನ ಆ..ಹ.ಹಾ..ಹಾ..ಹಾ..ಹಾ **************

ಲಹರಿ

ಹೀಗೊಂದು ಕಾಲಕ್ಷೇಪ ರಾಮಸ್ವಾಮಿ ಡಿ.ಎಸ್. ಹೀಗೊಂದು ಕಾಲಕ್ಷೇಪ ಕಾಲ ಚಲಿಸುತ್ತಲೇ ಇದೆ. ಭೂಮಿ ಚಪ್ಪಟೆಯಾಗಿರದೆ ದುಂಡಗಿರುವ ಕಾರಣ, ಸಮಯ ಅನ್ನೋದು ಪೂರ್ವದಿಂದ ಸುರುವಾಗಿ ಪಶ್ಚಿಮಕ್ಕೆ ಹೋದ ಹಾಗೆ ಸೂರ್ಯನ ಚಲನೆಗೆ ತಕ್ಕಂತೆ ವ್ಯತ್ಯಾಸವಾಗುವುದು ಸಹಜ. ಪೂರ್ವದ ದೇಶಗಳನ್ನು ಬೆಳಗಿದ ಬೆಳಕಿನ ಎಂಜಲು ನಿಧಾನವಾಗಿ ಪಶ್ಚಿಮದ ದೇಶಗಳಿಗೆ ಬೀಳುತ್ತೆ. ಆದರೆ ಪಾಶ್ಚಿಮಾತ್ಯರ ಪ್ರಭಾವ ಅದ್ಯಾಕೋ ಪೂರ್ವದ ದೇಶಗಳ ಮೇಲೆ ಹೆಚ್ಚಾಗುತ್ತಿರುವ ಕಾರಣ ಪೂರ್ವದ ಕಾಲದಲ್ಲೇ ಹೊಳೆದ ಜ್ಞಾನವನ್ನು ಪೂರ್ವ ದೇಶದ ಜನ ಮರೆತು ಪಾಶ್ಚಿಮಾತ್ಯರ ರೀತಿ ರಿವಾಜು ಅನುಕರಿಸಿದ ಕಾರಣ ಅಪ್ಪ ಅಮ್ಮ ಬದುಕು ಜೀವನ ಮೌಲ್ಯ ಎಲ್ಲವೂ ಅರ್ಥಾಂತರ ಪಡೆಯುತ್ತಿವೆ. ಅಪ್ಪನನ್ನು ಕಳೆದುಕೊಂಡ ನಾನು, ಚಿಕ್ಕಂದಿನಲ್ಲೇ ಅಮ್ಮನನ್ನು ಕಳೆದುಕೊಂಡ ಶಶಾಂಕ ಆಗೀಗ ಜೊತೆ ಸೇರಿಕೊಂಡು ಜೀವನದ ಅರ್ಥ, ಪೂರ್ವ ಸೂರಿಗಳ ಬದುಕಿನ ರೀತಿ, ಆಧುನಿಕರ ಮನೋಭಾವ ಕುರಿತು ವಿಷಾದ ಪಡುತ್ತಲೇ ಇರುತ್ತೇವೆ. ನಮ್ಮ ಮಾತಿನ ನಡುವೆ ಗಾಂಧಿ, ಬುದ್ಧ, ಬಸವ, ಅಂಬೇಡ್ಕರ್, ಅಕ್ಕ ಮಹದೇವಿ, ಕುಂತಿ, ಸೀತೆ, ಅನಸೂಯೆ, ಅಹಲ್ಯೆಯರೂ ಹಾಜರಿ ಹಾಕುತ್ತಲೇ ಇರುತ್ತಾರೆ. ಮಾತಿನ ರೀತಿಯೂ ಅವತ್ತವತ್ತಿನ ರಾಜಕೀಯ, ಸಾಮಾಜಿಕ ಸನ್ನಿವೇಶಗಳ ಕಾರಣದಿಂದ ಬದಲಾಗುತ್ತಲೇ ಇರುತ್ತದೆ. ಈಗಂತೂ ಕೋವಿಡ್ ಕಾರಣ ಕಂಪ್ಲೀಟ್ ಲಾಕ್ ಡೌನ್. ಇದರ ಪರಿಣಾಮ ಮನೆ ಮನೆಯಲ್ಲೂ ಓದುವ, ಸಿನಿಮಾ ನೋಡುವ, ಹಳೆಯದನ್ನು ನೆನೆದು ಹೊಸದನ್ನು ತೂಕಕ್ಕೆ ಹಾಕುವ ಕೆಲಸ ನಡೆಯುತ್ತಲೇ ಇದೆ. ಬುದ್ಧನ ಮಗ ರಾಹುಲ, ಮತ್ತು ಹಿರಣ್ಯ ಕಶ್ಯಪುವಿನ ಮಗ ಪ್ರಹ್ಲಾದ ಇವತ್ತು ನಮ್ಮ ಮಾತಿನ ಮಧ್ಯೆ ಹೇಗೋ ಬಂದು ತೂರಿಕೊಂಡರು. ಪರಸ್ಪರ ಮಾತಿಗೆ ಕೂತರು. ಅವರವರ ಮನದಾಳದ ಸಮಸ್ಯೆಯನ್ನು ಹಂಚಿಕೊಂಡರು. *******************”********************** ಹರಿಯ ಧ್ಯಾನಕ್ಕೆ ಮನಸೋತು ಅಪ್ಪನನ್ನು ಅವನ ಹರನನ್ನೂ ವಿರೋಧಿಸಿ ಕಡೆಗೆ ಆ ಅಪ್ಪನನ್ನೇ ತಾನೇ ಸ್ವತಃ ಕೊಲ್ಲಿಸಿದ ಪ್ರಹ್ಲಾದ ಹಿರಣ್ಯಕಷಿಪುವಿನ ರಾಜ್ಯವನ್ನು ಆಳತೊಡಗಿದ ಮೇಲೂ ತನ್ನ ಹರಿಯ ಧ್ಯಾನದಲ್ಲೇ ಇದ್ದುಬಿಡುತ್ತಿದ್ದ. ಆಗೀಗ ಅಪರೂಪಕ್ಕೆ ರಾಜ್ಯದ ಜನತೆಯ ಕಷ್ಟ ಸುಖ ವಿಚಾರಿಸಿಕೊಳ್ಳಲು ತಾನೇ ಸ್ವತಃ ರಥ ಹತ್ತಿ ಊರೂರಿಗೆ ಹೋಗಿ ಜನರ ದೂರು ದುಮ್ಮಾನ ಕೇಳುತ್ತಿದ್ದ. ಹಾಗೆ ಒಮ್ಮೆ ದೂರದೂರಿಗೆ ಹೋಗಿ ಹಿಂತಿರುಗುತ್ತಿದ್ದಾಗ ರಥದ ಕುಲುಕಾಟದ ನಡುವೆಯೂ ನಿದ್ದೆಯ ಜೊಂಪಿನಲ್ಲಿದ್ದ ಪ್ರಹ್ಲಾದನನ್ನು ಕರೆದ ಸಾರಥಿ, “ಸ್ವಾಮಿ ಆಗಿನಿಂದ ಯಾರೋ ನಮ್ಮ ರಥವನ್ನು ಹಿಂಬಾಲಿಸುತ್ತಿದ್ದಾರೆ” ಎಂದ. ಪುರುಷ ಸಹಜ ಶೌರ್ಯದಿಂದ ಸಿಟ್ಟಾದ ಪ್ರಹ್ಲಾದ ರಥವನ್ನು ನಿಲ್ಲಿಸಲು ಹೇಳಿ, ತನ್ನ ಮೇಲೆ ದಾಳಿಗೆ ಬರುತ್ತಿರುವವನ ಮೇಲೆ ಪ್ರತಿ ದಾಳಿ ಮಾಡಲು ಸಿದ್ಧನಾದ. ರಥ ಹತ್ತಿರ ಬರುತ್ತಾ ಬರುತ್ತಾ ಇದು ಬುದ್ಧನ ಮಗ ರಾಹುಲ ಎನ್ನುವುದು ಅವನಿಗೆ ಖಾತ್ರಿಯಾಯಿತು. ತನ್ನ ಶಸ್ತ್ರಾಸ್ತ್ರಗಳನ್ನು ಸಡಿಲ ಮಾಡಿ ಆರಾಮದಲ್ಲಿ ಕೂತ ಪ್ರಹ್ಲಾದ.ಪ್ರಹ್ಲಾದನ ಬಳಿಗೆ ಬಂದ ರಾಹುಲ ” ನಿನ್ನ ರಥದಲ್ಲಿ ನಾನೂ ಬರಲಾ?” ಎಂದು ಕೇಳಿದ ತಕ್ಷಣ ಪ್ರಹ್ಲಾದನಿಗೆ ಏನು ಹೇಳಬೇಕೆಂಬುದೇ ತಿಳಿಯಲಿಲ್ಲ, ಇವನ ಈ ನಡೆಯಲ್ಲಿ ಯಾವುದಾದರೂ ಕುಟಿಲ ತಂತ್ರ ಇರಬಹುದೇನೋ ಎಂದು ಅನುಮಾನವಾಯಿತು. ಹುಬ್ಬು ಗಂಟಿಕ್ಕಿ ಯೋಚಿಸುವ ಹೊತ್ತಲ್ಲ. ರಾಹುಲನೇ ಮಾತು ಮುಂದುವರಿಸಿ “ಆಸೆಯೇ ದುಃಖಕ್ಕೆ ಮೂಲ ಎಂದವನ ಮಗ ನಾನು, ನಿನ್ನ ರಾಜ್ಯವನ್ನು ಪಡೆದುಕೊಂಡು ಏನು ಮಾಡಲಿ…….” ಎಂದು ಹೇಳುತ್ತಿದ್ದಾಗಲೇ ರಥದ ಬಾಗಿಲು ತೆರೆದ ಪ್ರಹ್ಲಾದ. ರಾಹುಲ ಕುಳಿತ ಪ್ರಹ್ಲಾದನ ರಥ ಮುಂದೆ ಹೋಗುತ್ತಿದ್ದರೆ, ರಾಹುಲ ಬಂದ ಅವನ ಸ್ವಂತದ ರಥ ಅದನ್ನು ಹಿಂಬಾಲಿಸುತ್ತಿತ್ತು. “ಹೇಗಿದ್ದೀಯಾ? , ಪ್ರಜೆಗಳು ಸೌಖ್ಯವೇ? ” ಎಂದಾಗ, ಹೌದು ಎನ್ನುವಂತೆ ತಲೆಯಾಡಿಸಿ, “ನಿನ್ನ ರಾಜ್ಯದ ಕಥೆ ಏನು ?” ಎಂದು ಕಣ್ಣಲ್ಲೇ ಪ್ರಶ್ನಿಸಿದ ಪ್ರಹ್ಲಾದ. “ಎಲ್ಲವೂ ಕ್ಷೇಮ” ಎಂದು ಕಣ್ಣಲೇ ಹೇಳಿದ ರಾಹುಲ ಒಂದೆರಡು ನಿಮಿಷದ ಮೌನದ ನಂತರ ” ಪ್ರಹ್ಲಾದ ನಿನಗೆ ಯಾವತ್ತೂ ಅನಾಥ ಪ್ರಜ್ಞೆ ಕಾಡಲಿಲ್ಲವಾ?” ಎಂದು ಕೇಳಿದ ರಾಹುಲ. ಇದಕ್ಕೆ ಏನು ಉತ್ತರ ನೀಡಬೇಕೆಂದೇ ಪ್ರಹ್ಲಾದನಿಗೆ ತಕ್ಷಣಕ್ಕೆ ಅರ್ಥವಾಗಲಿಲ್ಲ. ಒಂದೆರಡು ಕ್ಷಣದ ನಂತರ ಯೋಚಿಸಲು ಆರಂಭಿಸಿದ. ಅಪ್ಪ ಈಗ ಇಲ್ಲ, ನರಸಿಂಹ ಪ್ರತ್ಯಕ್ಷನಾಗಿ ಅಪ್ಪನನ್ನು ಕೊಲ್ಲುವುದಕ್ಕೆ ಮುನ್ನವೇ ಅಮ್ಮ ಪ್ರಾಣ ಬಿಟ್ಟಿದ್ದಳು. ಆದರೂ ತನಗೆ ಒಂದು ದಿನಕ್ಕೂ ಅನಾಥ ಪ್ರಜ್ಞೆ ಕಾಡಿರಲಿಲ್ಲ. ಸ್ವತಃ ಆತನ ಪತ್ನಿ ಲಕ್ಷ್ಮಿಯ ಮಾತಿನಿಂದಲೂ ಶಾಂತನಾಗದ ನರಸಿಂಹ, ನಾನು ಹೋಗಿ ಪ್ರಾರ್ಥಿಸಿದಾಗ ಶಾಂತ ಸ್ವರೂಪನಾದ. ಅದೇ ಕ್ಷಣಕ್ಕೆ ದೇವಾನು ದೇವತೆಗಳು ಹೂಮಳೆ ಸುರಿಸಿದ್ದರು. ಆ ಕ್ಷಣವನ್ನು ನೆನೆದಾಗಲೆಲ್ಲಾ ಪ್ರಹ್ಲಾದನಿಗೆ ಒಂಥರಾ ರೋಮಾಂಚನ. ಲಕ್ಷ ಲಕ್ಷ ವರ್ಷ ಜಪ ತಪಗಳನ್ನು ಮಾಡಿದವರಿಗೂ ದರ್ಶನ ನೀಡದ ಆ ಸ್ವಾಮಿ ತನ್ನ ಮುಂದೆ ಪ್ರತ್ಯಕ್ಷನಾದ ಕ್ಷಣವನ್ನು ಅವನ ನೆನಪಿನಲ್ಲಿ ಇಂದಿಗೂ ಹಸಿರಾಗಿತ್ತು. ಆದರೆ ಅಪ್ಪ ಅಮ್ಮ ಇಲ್ಲ ಎಂಬ ಅನಾಥ ಪ್ರಜ್ಞೆ ಯಾವತ್ತಿಗೂ ಕಾಡಿರಲಿಲ್ಲ. ಹರಿಯೇ ಅವನ ಪಾಲಿಗೆ ಸರ್ವಸ್ವವೂ ಆಗಿದ್ದ. ಹೀಗಿದ್ದೂ ರಾಹುಲ ಈ ಪ್ರಶ್ನೆ ಕೇಳಿದ ತಕ್ಷಣ ಅವನೊಳಗೆ ಸಾವಿರ ಪ್ರಶ್ನೆಗಳ ಅಲೆ ಒಮ್ಮೆಲೇ ಎದ್ದಿತು. ರಾಹುಲ ಮತ್ತೆ ಕೇಳಿದ ” ಪ್ರಹ್ಲಾದ ನಿನಗೆ ಅನಾಥ ಪ್ರಜ್ಞೆ ಯಾವತ್ತಿಗೂ ಕಾಡಲಿಲ್ಲವಾ ?” ಪ್ರಹ್ಲಾದ ಹೌದು ಇಲ್ಲ ಎಂಬ ಯಾವ ಉತ್ತರ ಕೊಡುವುದುಕ್ಕೂ ಸಾಧ್ಯವಾಗಲಿಲ್ಲ. ಆದರೆ ಪ್ರಹ್ಲಾದನ ಅಂತರಂಗಕ್ಕೆ ಮೊದಲಬಾರಿಗೆ ಗದೆಯಲ್ಲಿ ಬಲವಾಗಿ ಹೊಡೆದಂತೆ ಆಯಿತು. ” ನನ್ನಪ್ಪನಿಗೆ ನಡುರಾತ್ರಿಯಲ್ಲಿ ಜ್ಞಾನೋದಯವಾಗಿತ್ತು. ಹೆಂಡತಿ ಮಕ್ಕಳು ರಾಜ್ಯ ರತ್ನ ಎಲ್ಲವೂ ನಶ್ವರ ಎಂದು ಅರಿವಾಗಿತ್ತು. ಎಲ್ಲವನ್ನೂ ಬಿಟ್ಟು ಹೊರಟ. ಅವನಿಗೆ ಯಾರೂ ಬೇಡವಾಗಿತ್ತು. ನನಗೆ ಅಪ್ಪ ಬೇಕೆಂಬ ಆಸೆ, ಆದರೆ ಅಪ್ಪ ಆ ಆಸೆಯೇ ದುಃಖಕ್ಕೆ ಮೂಲ ಎನ್ನುತ್ತಾನೆ. ಅವನ ಎಲ್ಲ ಮಾತುಗಳು ನನಗೆ ಒಪ್ಪಿಗೆಯಾಗುವುದಿಲ್ಲ. ನಾನು ಯೋಚಿಸುವುದಕ್ಕೂ, ಅವನು ಯೋಚಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಅವನ ಅನುಭವ ನನಗಿಂತ ದೊಡ್ಡದು. ನಿಜ ಆದರೆ ಅವನ ವೈರಾಗ್ಯ ನನಗಿಲ್ಲ. ನನಗೆ ಎಲ್ಲವೂ ಬೇಕು. ಎಲ್ಲದೂ ಬೇಕು. ಆದರೆ ಅಪ್ಪ ಹೇಳುತ್ತಾನೆ ಆಸೆಯೇ ದುಃಖಕ್ಕೆ ಮೂಲ. ಎಲ್ಲ ಇದ್ದೂ ಏನೂ ಇಲ್ಲದ ಅನಾಥ ಪ್ರಜ್ಞೆ. ಬದುಕಿನ, ರಾಜ್ಯಾಡಳಿತದ ಕಠಿಣ ಸಮಸ್ಯೆ ಬಂದಾಗಲೆಲ್ಲಾ ಅಪ್ಪ ನೆನಪಾಗುತ್ತಾನೆ. ನನ್ನ ಬೆನ್ನಿಗೆ ನಿಂತು ಸಲಹೆ ನೀಡಿದರೆ ಹೇಗಿರುತ್ತಿತ್ತು ಎನಿಸುತ್ತದೆ. ಆದರೆ ಒಂದು ದಿನಕ್ಕೂ ನಾನು ಅಪ್ಪನೊಡನೆ ಹೀಗೆ ಕಾಲ ಕಳೆಯಲೇ ಇಲ್ಲ. ಅಪ್ಪ ಎಂದರೆ ಅದೇ ಪುರಾಣ, ಅದೇ ಗೊಡ್ಡು ವೇದಾಂತ” ಪ್ರಹ್ಲಾದ ಸುಮ್ಮನೆ ಕೇಳುತ್ತಿದ್ದ ” ನಿನಗೆ ಈ ಗಣಪತಿ ಕಥೆ ಗೊತ್ತಾ ?” ” ಯಾವುದು ?” ” ಅದೇ ನಾರದ ಮಹರ್ಷಿ ಪ್ರಪಂಚವನ್ನು ಸುತ್ತಿ ಬರಲು ಸ್ಪರ್ಧೆ ಇಟ್ಟಾಗ ಗಣೇಶ ಅಪ್ಪ , ಅಮ್ಮನ್ನನ್ನೇ ಸುತ್ತಿದ ಕಥೆ” ” ಗೊತ್ತು “ ” ನೀನ್ಯಾಕೆ ನಿಮ್ಮಪ್ಪನಲ್ಲೇ ದೇವರನ್ನು ಕಾಣಲಿಲ್ಲ “ ” ಅಪ್ಪ ನಾನೇ ದೇವರು ಎನ್ನುತ್ತಿದ್ದ, ಹರಿ ನನ್ನ ವೈರಿ ಎನ್ನುತ್ತಿದ್ದ. ಹರಿ ಧ್ಯಾನ ಮಾಡಿದಕ್ಕೆ ನನ್ನನ್ನು ಕೊಲ್ಲಲು ಹೊರಟಿದ್ದ” ” ಅದೆಲ್ಲವನ್ನೂ ಒಪ್ಪಿದೆ, ನೀನು ನಿನ್ನಪ್ಪನಲ್ಲಿ ಎಂದಾದರೂ ದೇವರನ್ನು ನೋಡಿದೆಯಾ ?” ” ನಾನು ನಮ್ಮಪ್ಪನಿಗೆ ಹರಿ ಧ್ಯಾನ ಮಾಡಲು ಹೇಳಿದೆ “ ” ನೀನು ನಿಮ್ಮಪ್ಪನಲ್ಲಿ ದೇವರನ್ನು ಕಂಡೆಯಾ ? ” ನನ್ನ ಪಾಲಿಗೆ ಹರಿಯೇ ಸಕಲವೂ ಆಗಿದ್ದ “ ” ನೀನು ನಿಮ್ಮಪ್ಪನಲ್ಲಿ ದೇವರನ್ನು ಕಂಡೆಯಾ ?” ಪ್ರಹ್ಲಾದನಿಗೆ ಇದಕ್ಕಿಂದಂತೆ ಸಿಟ್ಟು ಉಕ್ಕಿ ಬಂತು. ” ಇಲ್ಲ ನಾನು ಅಪ್ಪನನ್ನು ಎಂದೂ ದೇವರಂತೆ ಕಂಡಿಲ್ಲ, ಹರಿಯ ಸ್ಥಾನದಲ್ಲಿ ಅವನನ್ನಿಟ್ಟು ನೋಡುವುದು ನನಗೆ ಎಂದಿಗೂ ಸಾಧ್ಯವಿಲ್ಲಾ, ಹರಿಯನ್ನಷ್ಟೇ ನಾನು ದೇವರಾಗಿ ಕಂಡಿದ್ದು, ಬೇರೆಯವರು ಯಾರೂ ನನಗೆ ದೇವರಾಗಿ ಕಾಣಲಿಲ್ಲ “ ” ನಾನು ನಿನ್ನನ್ನು ಹುಡುಕಿ ಬಂದ ಕಾರಣ ಗೊತ್ತಾ?” ಪ್ರಶ್ನಿಸಿದ ರಾಹುಲ. ತನ್ನೊಳಗೆ ನೆಡೆಯುತ್ತಿದ್ದ ಕೋಲಾಹಲವನ್ನು ತಡೆದು “ಏಕೆ ?” ಎಂದು ಕಣ್ಣಿನಲ್ಲಿಯೇ ಪ್ರಶ್ನಿಸಿದ ಪ್ರಹ್ಲಾದ, ರಾಹುಲನನ್ನು. ” ನಿನ್ನ ಬಗ್ಗೆ ನನಗೆ ತಿಳಿದಾಗಿನಿಂದ ಒಂದು ರೀತಿಯ ವಿಚಿತ್ರ ಕುತೂಹಲ. ನಿನ್ನ ಹರಿ ನರಸಿಂಹನ ರೂಪದಲ್ಲಿ ಬಂದು ನಿನ್ನಪ್ಪನನ್ನು ಕೊಲ್ಲುತ್ತಿದ್ದಾಗ ಕೂಡಾ ಅಪ್ಪನನ್ನು ರಕ್ಷಿಸಿಕೊಳ್ಳುವ ಬದಲಿಗೆ ಹರಿ ಧ್ಯಾನವನ್ನೇ ಮಾಡುತ್ತಿದ್ದೆಯಂತೆ. ಅಂಥ ಗಟ್ಟಿ ಮನಸ್ಸು ನಿನಗೆ ಹೇಗೆ ಬಂದಿದ್ದು. ಸಾಕಷ್ಟು ಭಿನ್ನಾಭಿಪ್ರಾಯದ ನಡುವೆ, ಆಸೆಯೇ ದುಃಖಕ್ಕೆ ಮೂಲ ಎಂದು ಅಪ್ಪನೇ ಹೇಳಿದ ಬಳಿಕ ಕೂಡಾ ಅವನ ಆಸರೆಯ ಬಯಕೆಯಾಗುತ್ತದೆ. ಈ ಬಯಕೆ ಬಾಲ್ಯದಿಂದ ಇಂದಿನವರೆಗೂ ಬೆನ್ನು ಬಿಡದೇ ಕಾಡುತ್ತಿದೆ. ಅಪ್ಪನನ್ನು ಹರಿ ಕೊಲ್ಲುತ್ತಿದ್ದಾಗಲೂ ನೀನು ಅವನದೇ ಧ್ಯಾನ ಮಾಡುತ್ತಾ ನಿಂತಿದ್ದೆಯಲ್ಲ. ಇದು ಸಾಧ್ಯವಾಗಿದ್ದು ಹೇಗೆ ?. ಹೃದಯವನ್ನು ಆ ಮಟ್ಟಕ್ಕೆ ಗಟ್ಟಿ ಮಾಡಿಕೊಳ್ಳುವ ಬಗೆಯನ್ನು ನನಗೂ ಹೇಳಿಕೊಡು “, ಪ್ರಹ್ಲಾದನಿಗೆ ರಾಹುಲ ಕೇಳಿದ. ಪ್ರಹ್ಲಾದನ ಬಳಿ ಈ ಮಾತಿಗೆ ಉತ್ತರವೇ ಇರಲಿಲ್ಲ. ಕುದುರೆಯ ಖುರಪುಟದ ಸದ್ದಿನ ಹೊರತಾಗಿ ಉಳಿದೆಲ್ಲ ಕಡೆ ಬರೀ ನಿಶಬ್ದವೇ ತುಂಬಿತ್ತು. “ನಿನಗೆ ಅಪ್ಪನ ಮಾತಿನಂತೆ ತಾಯಿಯ ತಲೆ ಕಡಿದ ಪರುಶುರಾಮನ ಕಥೆ ಗೊತ್ತಾ ?” ಹೌದೆಂದು ತಲೆಯಾಡಿಸಿದ ಪ್ರಹ್ಲಾದ. ” ನಿನಗೆ ಏನು ಬೇಕು ಎಂದು ನಿನ್ನ ಹರಿ ಕೇಳಿದಾಗ ಏನು ವರ ಬೇಡಿದೆ ? “ ” ಈ ನಶ್ವರ ಜಗತ್ತಿನಲ್ಲಿ ಭಗವಂತನನ್ನು ಏನು ಕೇಳುವುದು, ನನಗೆ ಏನೂ ಕೇಳಬೇಕೆಂದೇ ಅನ್ನಿಸಲಿಲ್ಲ. ಅದಕ್ಕೆ ನನಗೆ ಏನೂ ಬೇಡ, ಆದರೆ ನಿನ್ನನ್ನು ಎಂದೂ ಏನನ್ನೂ ಕೇಳದಂಥ ಸ್ಥಿತಿಯಲ್ಲಿಡು” ಎಂದು ಕೇಳಿದೆ. ” ಪರುಶುರಾಮ ತನ್ನ ತಾಯಿಯನ್ನು ಬದುಕಿಸಿಕೊಡುವಂತೆ ಕೇಳಿದ ಹಾಗೆ ನೀನು ನಿನ್ನ ಹರಿ ಬಳಿ ನಿನ್ನ ತಂದೆಯನ್ನು ಬದುಕಿಸಿ ಕೊಡುವಂತೆ ಕೇಳಬಹುದಿತ್ತು. ನೀನೇಕೆ ಕೇಳಲಿಲ್ಲ ? “ ಪ್ರಹ್ಲಾದ ಏನೋ ಹೇಳಲು ಪ್ರಯತ್ನಿಸಿದ. ಏನೂ ಹೊಳೆಯದೇ ಸುಮ್ಮನಾದ. ************************************ ದಶಾವತಾರದ ಎಲ್ಲ ಕತೆಗಳೂ ಗೊತ್ತಿರುವ ನಿಮಗೆ ನರಸಿಂಹಾವತಾರದಲ್ಲಿ ಬರುವ ಪ್ರಹ್ಲಾದ , ಬೌದ್ಧಾವತಾರದಲ್ಲಿ ಬರುವ ಬುದ್ಧನ ಮಗ ರಾಹುಲ ಪರಿಚಿತರೇ. ಕತೆಗಳ ಮೂಲಕ ಪುರಾಣದ ಮೂಲಕ ಬದುಕಿನ ಹಲವು ಮಗ್ಗಲುಗಳನ್ನು ಶೋಧಿಸಿದ ಕಾಲಕ್ಕೆ ತಕ್ಕ ಉತ್ತರವನ್ನೂ ಕೊಟ್ಟ ನಮ್ಮ ಪೂರ್ವ ಸೂರಿಗಳ ಜ್ಞಾನ ಅರಿವು ಮತ್ತು ಬದುಕನ್ನು ಹೇಗೆ ಸ್ವೀಕರಿಸಬೇಕು ಎಂದು ತಿಳಿ ಹೇಳಿದ ಅವರನ್ನು ಮರೆತ ನಾವು ಈ ಕೋವಿಡ್ ಕೊಟ್ಟ ಬಿಗ್ ಬ್ರೇಕಲ್ಲಿ ಯುಟ್ಯೂಬಲ್ಲಿ ಅಥವ ಅಮೆಜಾನ್ ಪ್ರೈಮಲ್ಲಿ ಸಿನಿಮಾ ನೋಡುತ್ತ ಸೀರೆ ಉಟ್ಟು ಪಂಚೆ ಕಟ್ಟಿ ಪಟ ತೆಗೆದು ಫೇಸ್ಬುಕ್ಕಲ್ಲಿ ಹಾಕುತ್ತ ಇದ್ದೇವಲ್ಲ, ನಾವೆಲ್ಲ ನಮ್ಮ ಹಿರೀಕರು ಹೊತ್ತು ಹೊತ್ತಿನ ಹಿಟ್ಟಿಗೆ ಎಷ್ಟೆಲ್ಲ ಕಷ್ಟ ಪಡುತ್ತಿದ್ದರು ಅನ್ನೋದನ್ನು ಮರೆತಿದ್ದೇವೆ. ಎಷ್ಟೋ ಬಾರಿ ಅಡುಗೆ ಮನೆಯಲ್ಲಿ ಸಾರಿಸಿ ಇಟ್ಟ ಒಲೆಯ ರಂಗೋಲಿ ಅಳಿಸಿಲ್ಲ ಹೊಸ ಬೂದಿ ಆಗಿಲ್ಲ ಅಂದರೆ ಅವತ್ತು ಆ ಮನೆಯಲ್ಲಿ ಉಪವಾಸ ಇದ್ದಾರೆ ಅನ್ನೋದು ಗೊತ್ತಾಗುತ್ತಿತ್ತು. ಈ ಕಾಲದ ಮೈಕ್ರೋ ಓವನ್ ಗ್ಯಾಸ್ ಒಲೆ ಕಾಯಿಲ್ ಒಲೆಗಳಲ್ಲಿ ಬೇಯಿಸಿದ್ದು ಬೇಯಿಸದೇ ಇದ್ದದ್ದೂ ಗೊತ್ತಾಗಲ್ಲ. ಬೀದಿಯಲ್ಲಿ ಹೆಣ ಬಿದ್ದರೆ ಆ ಬೀದಿಯ ಯಾರ ಮನೇಲೂ ಊಟ ತಿಂಡಿ ಎಲ್ಲ ಬಂದ್ ಆಗ್ತಿತ್ತು. ಈಗ ಬಿಡಿ ಕೆಳಗಿನ ಮನೆಯಲ್ಲಿ ಹೆಣ ತಂದ ಅಂಬ್ಯುಲೆನ್ಸ್ ನಿಂತಿದ್ದರೆ ಮೇಲಿನ ಮನೆಯಲ್ಲಿ

ಕಾವ್ಯಯಾನ

ನಮ್ಮ ನಡುವಿನ ಅಂತ ವೀಣಾ ರಮೇಶ್ ಎಲ್ಲಾ ದಿನಗಳೂ ಖಾಲಿ ಇದ್ದರೂ ಮನಸಿನ ದಾರಿಯಲಿ ನೀ ನಿರದಿದ್ದರೂ ಮುಳ್ಳುಗಳೇನಿಲ್ಲ ಚುಚ್ಚಲು ಕಲ್ಲುಗಳಿಲ್ಲ ಎಡವಲು ಬರವಿರದಿದ್ದರೂ ನಿನ್ನ ನೆನಪಿಗೆ ಬೇಸರವೆನಿಸಿದೆ ಮನಸಿಗೆ ಗೆಳತೀ ಎಲ್ಲೆಲ್ಲೂ ನೀ ಸಿಗದೆ … ಯಾಕೆ ಸಮಾನಾಂತರ ರೇಖೆಗಳಾಗಿದ್ದೇವೆ ನಡುವೆ ಎಷ್ಟೊಂದು ಅಂತರದ ಅರಿವು, ಇರಲಿ ಸಮಾನ ಅಂತರ ಕಾಯ್ದುಕೊಂಡಿದ್ದೇವೆ, ಮಾತು, ಮೌನಗಳಲೂ ಬಿಗಿಅಂತರವೇ ಗೆಳತೀ….. ಮನಸಿನಲಿ ಭಾವನೆಗಳ ಕುಟ್ಟಿ ಪುಡಿ ಮಾಡಿರುವೆ ಆದರೆ ಮೊಳಕೆಯೊಡೆದ, ಹೃದಯ ತಟ್ಟುವ , ಉಸಿರು ಕಟ್ಟುವ, ನಿನ್ನದೆ ನೆನಪುಗಳು, ನೀಡುಸುಯ್ದ ಬಿಸಿಉಸಿರು ನಿನ್ನ ಸೋಕಿರಬಹುದು ನಿನ್ನುಸಿರ ತಣ್ಣನೆ ಗಾಳಿ ತುರ್ತು ವಿರಾಮದ ಪರದೆಯ ಬೇಲಿ ಹಾಕಿದೆ ನನಗೂ ಗೊತ್ತಿದೆ ಗೆಳತೀ …. ದಿಗಂತದ ಊರಿನಲಿ ಯಾವ ಬೇಲಿಯ ತಡೆಯಿಲ್ಲದ ರವಿ ಕೆಂಪಿಟ್ಟು, ಬರುವಾಗ, ಏನೋ ತಳಮಳ ನನ್ನೊಳಗೆ…. ನಿನ್ನ ಸಿಹಿ ನಗು ಕಣ್ತುಂಬಿ ಕೊಳ್ಳುವ ತವಕ…… ತುಟಿ ಇಟ್ಟು ಮೆತ್ತಿದ, ಕೆಂಪು ಕೆನ್ನೆಯ ಗುಳಿಯೊಳಗೆ ಅವಿತು ಕುಳಿತು, ನಿನ್ನ ನೋಡುವ ಅವಸರ ಗೆಳತೀ…. ದಿನವೂ ಖಾಲಿ,ಅಂತರದ ಖಯಾಲಿ………. ಅದೇನು ಶಂಕೆ,ಪ್ರೀತಿಗೂ ಅಂತರಂಗದಲ್ಲಿ ಸೊಂಕೆ ಹಾಗಿದ್ದರೆ .. ನಿನ್ನ ಭಾವನೆಗಳನ್ನು ಅಪ್ಪಿ ಕೊಳ್ಳುವುದಾದರು ಹೇಗೆ….. ನೀ ನಲ್ಲಿ ಕಿಟಕಿಯಲ್ಲಿ ನಾನಿಲ್ಲಿ ಹೃದಯದ ಕದ ತೆರೆದು ನಿನ್ನ ಕಾಯುವುದು ನಿರಂತರವೇ ಗೆಳತೀ.. ******

Back To Top