ಕಾವ್ಯ ಸಂಗಾತಿ
ಮೀನಾಕ್ಷಿ ಸೂಡಿ
ಭಾವನೆಗಳು ಬೆತ್ತಲಾದಾಗ

ಮೋಸದ ಬಿರುಬಿಸಿಲಿನಲ್ಲಿ ಭಾವನೆಗಳ
ಪಾತರಗಿತ್ತಿ ಹಾರುತ್ತಿವೆ …
ತುಂಡಾದ ದಂಟಿನ ರವದಿಯಂತೆ…
ಪ್ರೀತಿ ಪ್ರೇಮಗಳ ಮಿಲನಕ್ಕೂ
ಮಿಥ್ಯದ ನೆರಳು,,,ಸತ್ಯವೂ ನಾಚುವಂತೆ,… ಕಾಮಕ್ರೋಧಗಳ ಬೆಂಕಿಯ ಕೆನ್ನಾಲಿಗೆ
ಆಚೀಚೆ ಹರಿದಾಡುತ್ತಿದೆ ..
ಸಂಬಂಧಗಳ ಸುಟ್ಟು…….
ಸ್ನೇಹ- ಮಮತೆ- ಪ್ರಾಮಾಣಿಕತೆಯ ಸಮಾಧಿಗಳು ತಮ್ಮ ಆಸ್ತಿತ್ವ ಸಾರುತ್ತಿವೆ..
ಭಾವುಕತೆ- ಬೌದ್ಧಿಕತೆಯ
ಯಕ್ಷಪ್ರಶ್ನೆಯಲ್ಲಿಯೇ ಈ ಲೋಕ ಬೆತ್ತಲಾಗುತ್ತಿದೆ ..
ಭಾವನೆಗಳಿಗೆ ಬೆಲೆ ಇಲ್ಲ ….
ನಿಂತ ನೀರಾಗುತ್ತಿವೆ ದುಡ್ಡಿನ ದರ್ಪದಲ್ಲಿ ..
ಭಾವನೆಗಳು ಬೆತ್ತಲಾದಾಗ
ಮಾನವೀಯತೆಯ ಕಪ್ಪು ಮನಸ್ಸಿನ ಅನಾವರಣ …ಹಗಲು ರಾತ್ರಿ ಎಂಬ
ಹಕ್ಕಿಯ ರೆಕ್ಕೆಗಳ ಮೇಲೆ
ಭಾವನೆಗಳು ಕೈಬೀಸಿ ವಿದಾಯ ಹೇಳುತ್ತಿವೆ….
—————-
ಮೀನಾಕ್ಷಿ ಸೂಡಿ

ವಾವ್ಹ್… ಸುಂದರವಾದ ಕವಿತೆ ಮೇಡಂ ಜೀ
Beautiful Kavana Medam
ವಾಸ್ತವದ ಕಟು ಚಿತ್ರಣ
ಸುಶಿ
ಧನ್ಯವಾದಗಳು ನಿಮ್ಮ ಅತ್ಯಮೂಲ್ಯ ಪ್ರತಿಕ್ರಿಯೆಗೆ
ಕವಯತ್ರಿ