ಕಾವ್ಯ ಸಂಗಾತಿ
ಕೆ ಎಂ ತಿಮ್ಮಯ್ಯ
ಮನವ ಬಣ್ಣಿಸಲಿ ಹೇಗೆ?

ಮನಸೇ ..ಹೀಗೆ
ಹರಿಯುವ ನೀರಿನ ಹಾಗೆ
ಬೆಳಕು ಚೆಲ್ಲುವ ಸೂರ್ಯನಂತೆ
ಕತ್ತಲು ಕರಗಿಸುವ ಬೆಳದಿಂಗಳ ಚಂದ್ರನಂತೆ
ಈ ಮನವ ಬಣ್ಣಿಸಲಿ ಹೇಗೆ
ಒಮ್ಮೊಮ್ಮೆ ಅರಳಿದ ಹೂವಿನ ಹಾಗೆ
ಆಕಾಶದಲ್ಲಿ ಹಾರುವ ಹಕ್ಕಿಯಂತೆ
ರೆಕ್ಕೆ ಬಿಚ್ಚಿ ನಲಿಯುವ ನವಿಲಿನಂತೆ
ಒಳಮನದ ಮರ್ಮವ ಹೇಳಲಿ ಹೇಗೆ
ಚಿಂತೆಯ ಚಿತೆಗೆ ಜಾರಿ ಬಿದ್ದ ಹಾಗೆ
ಹಗಲು ಕೂಡ ಕತ್ತಲಾವರಿಸಿದಂತೆ
ಸಾವಿನ ಮನೆ ಕದ ತಟ್ಟುವ ರೋಗಿಯಂತೆ
ತಿಳಿ ನೀರ ಪರಿಶುದ್ಧತೆ ಇದೆ
ಕೊಳಕು ನೀರಿನ ಕಲುಷಿತವಿದೆ
ಸಾಗರದ ದಡಕ್ಕೆ ಅಪ್ಪಳಿಸುವ ಅಲೆಯಿದೆ
ಜಲಪಾತದಲ್ಲಿ ದುಮ್ಮಿಕ್ಕುವ ನದಿಯ ಭೋರ್ಗರೆತವಿದೆ
ಮನಸ್ಸಿನ ಆಳ ಅರಿತವರಿಲ್ಲ
ಅಗಲದ ಅಳತೆ ಮಾಡಿದವರಿಲ್ಲ
ಬಣ್ಣ ಯಾವುದೆಂದು ಕಂಡವರಿಲ್ಲ
ಪ್ರೀತಿ ಬಯಕೆಗಳು ಹುಟ್ಟದೆ ಇರುವುದಿಲ್ಲ
———————————————————————————————-
ಕೆ.ಎಂ.ತಿಮ್ಮಯ್ಯ

ಕವಿತೆಗಳಿಗೊಂದು ವೇದಿಕೆ