ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ
ಕಾವ್ಯಯಾನ

ಕಾವ್ಯಯಾನವಿದು
ಕನವರಿಸುವ ಮಾತುಗಳದು
ಪ್ರೀತಿಯ ಅಭಿಮಾನವದು
ಹಿಂಜರಿಕೆ ಇಲ್ಲದೆ ನುಡಿಯುವುದು..
ಬಂದಳಿಕೆಯಂತೆ ಬರುವುದು
ಬಿಟ್ಟಬಾಣದಂತಿರುವುದು
ನೇರವದು ನೆರವಾಗುವುದು
ಹುಸಿಮುನಿಸಿಲ್ಲದಿರುವುದು..
ಹಗುರ ಅತ್ಯಂತ ಹಗುರ
ರಮ್ಯತೆ ಇದರಲ್ಲಿ ಸುಖಾಂತತೆ
ಹರುಷದ ಭಾವನೆಯ ಉತ್ಕಟತೆ
ಪ್ರಪಂಚದ ಅನುರಾಗತೆ..
ಭಾವದಲ್ಲಿ ಎಲ್ಲವು
ಮಿಡಿತಗಳೆಲ್ಲವೂ
ಪದಗಳಲ್ಲಿ ಭಾವತ್ಮವು
ಪ್ರೀತಿಯ ಜೀವಾತ್ಮವೂ..
ಹೊಸ ಅಧ್ಯಾಯ ನಮಗೆ
ಜೀವಂತಿಕೆಗೆ
ಉಲ್ಲಾಸದ ಸಾಲುಗಳಿಗೆ
ಸ್ಪೂರ್ತಿಯ ಹಾದಿಗೆ..
ಗಾಯತ್ರಿ ಎಸ್ ಕೆ




