ಕಾವ್ಯ ಸಂಗಾತಿ
ಕಾವ್ಯ ಪ್ರಸಾದ್
ʼನಿನ್ನ ಮೊದಲ ಸ್ನೇಹ ಪ್ರೀತಿʼ
ಆ ನಿನ್ನ ಮೊದಲ ಸ್ನೇಹವು ನನಗಂದು ಸಿಗಲೆ ಇಲ್ಲ
ನಿನ್ನ ಎದೆ ಬಡಿತದ ಉಸಿರಾಟ ನನ್ನ ನೆರಳ ಮುಟ್ಟಲಿಲ್ಲ!
ಮರೆಯಲ್ಲೆ ನಿಂತು ನೀನು ಗುಟ್ಟಾಗಿ ನೋಡುತಿದೆಯಲ್ಲ
ಈ ಪ್ರೀತಿ ಸ್ನೇಹಕ್ಕೆ ಅರ್ಥವೇನು ಕೊಡದೆ ಮೂಕನಾದೆಯಲ್ಲ!!
ನನ್ನ ಪ್ರೀತಿ ಮಾಡಿದರು ನೀನೇಕೆ ಕೊರಗಿ ಕೂತೆಯಲ್ಲ
ಏನೋ ಕಾಣೆ ನಿನ್ನ ಪ್ರೀತಿ ನನ್ನ ಹೃದಯ ಮುಟ್ಟಿತಲ್ಲ!
ಪ್ರೀತಿಗೆ ಹೆಸರಿನ ಕಣ್ಣಿಲ್ಲ ಯಾವ ಬಣ್ಣಗಳ ಹೋಳಿ ಬೇಕಿಲ್ಲ
ತನ್ನದೇ ಮಾಯ ರೂಪದ ಚಿತ್ರ ಬಿಡಿಸಿದೆಯಲ್ಲ!!
ಅರಿವಿಲ್ಲದೆ ನಿನ್ನ ಹೃದಯದ ಗೂಡಲ್ಲಿ ಬಂದಿಸಿದೆಯಲ್ಲ
ಕನಸಿನ ಲೋಕದಲ್ಲಷ್ಟೇ ನಾವಿಬ್ಬರು ಒಂದಾದೆವಲ್ಲ!
ನಿನ್ನಯ ದೃಷಿಯಲಿ ಮಾತ್ರ ನನ್ನ ಪ್ರೀತಿಸಿದೆಯಲ್ಲ
ಈಗ ನಿನಗೆ ನಾ ಬಿಟ್ಟರೆ ಕಣ್ಣಿಗೆ ಬೇರೆನು ಕಾಣುವುದಿಲ್ಲ!!
ನಿನ್ನ ಪ್ರೀತಿ ಸುಳ್ಳಲ್ಲ ಹೇಳುವ ಮನಸೇಕೆ ನಿನಗಿಲ್ಲ
ನನಗೇಳಿಕೊಳ್ಳದೆ ಒಬ್ಬನೆ ನೋವು ಪಡುತಿದೆಯಲ್ಲ!
ಇಬ್ಬರ ಪ್ರೀತಿಯು ಕುರುಡು ಯಾರ ಕಣ್ಣಿಗೂ ಕಾಣುತಿಲ್ಲ
ಮೌನದ ಛಾಯೆಹೊತ್ತು ಪ್ರೀತಿ ಬಲಿ ಮಾಡಿದೆಯಲ್ಲ!!
—————————————
ಕಾವ್ಯ ಪ್ರಸಾದ್