ಸುಧಾ ಪಾಟೀಲ ಅವರ ಕವಿತೆ-ಬರೆಯುವುದಿಲ್ಲ ಕವಿತೆ

ಬರೆಯುವುದಿಲ್ಲ  ಕವಿತೆ
ಅಡಿಗಡಿಗೆ
ಹೇಳುವುದಿಲ್ಲ
ಮನದ ಭಾವನೆಗಳ
ಕ್ಷಣ  ಕ್ಷಣಕೆ
ಅರಹುದಿಲ್ಲ  ಮನದ
ವೇದನೆಗಳನು
ಬಾರಿ  ಬಾರಿ
ನೀರವ  ಮೌನದಲಿ
ಮಿಂದೆದ್ದು
ನನ್ನೊಳಗಿನ  ನನ್ನನ್ನು
ಸಂತೈಸಿಕೊಳ್ಳುತ್ತಾ
ಸುತ್ತಮುತ್ತಲಿನ  
ಆಗುಹೋಗುಗಳ
ಸಂಭಾಳಿಸಬೇಕಿದೆ
ಸೈರಣೆಯ  ಪರಾಕಾಷ್ಟೆಯನ್ನು
ಮುಟ್ಟಬೇಕಿದೆ
ಭಾವನೆಗಳನ್ನು  ಒಳಗೊಳಗೆ
ಕಟ್ಟಿಹಾಕಬೇಕಿದೆ
ಮುಗುಳ್ನಗೆಯ ಹೊದಿಕೆಯನ್ನು
ಹೊದ್ದು  ಮನದ ವಿಚಾರಗಳಿಗೆ
ಮುಸುಕು  ಹಾಕಬೇಕಿದೆ
ಅಂತರ್ಗತದ  ತಳಮಳವನ್ನು
ನಿಭಾಯಿಸಬೇಕಿದೆ
ಒಳಿತು,-ಕೆಡಕುಗಳ
ಲೆಕ್ಕಾಚಾರವನ್ನು  ಅರಗಿಸಿಕೊಳ್ಳಬೇಕಿದೆ
ಬವಣೆಗಳ  ಸರಮಾಲೆಯ
ಹೊತ್ತು  ತಿರುಗಬೇಕಿದೆ
ಒಂದಿನಿತೂ  ಬೇಸರಿಸದೆ
ಹೊಂದಾಣಿಕೆ ಮಾಡಿಕೊಳ್ಳಬೇಕಿದೆ

2 thoughts on “ಸುಧಾ ಪಾಟೀಲ ಅವರ ಕವಿತೆ-ಬರೆಯುವುದಿಲ್ಲ ಕವಿತೆ

  1. ಅತ್ಯಂತ ಆಪ್ತವಾದ ಭಾವ ಕವಿತೆಯಲ್ಲಿ ಒಡಮೂಡಿದೆ ಧನ್ಯವಾದಗಳು ಮೇಡಂ

Leave a Reply

Back To Top