ಕಾವ್ಯ ಸಂಗಾತಿ
ಭವ್ಯ ಸುಧಾಕರಜಗಮನೆ
ಒಲವಿನ ಓಕುಳಿ
[ಓ ನಲ್ಲೆ ನಿಲ್ಲೆ
ಪರವಶವಾದೆ ನಿನ್ನಲ್ಲೇ
ಒಲವಿನ ಚಲುವೆ
ನೀ ಸದಾ ಸಂಪ್ರತಿಯ ಸುಮವೇ
ಓ ನಲ್ಮೆಯ ನಲ್ಲ
ಚುಂಬಿಸುವೆ ನಿನ್ನ ಗಲ್ಲ
ತಿಂದಂತೆ ಸವಿಜೇನು ಬೆಲ್ಲ
ಮನ್ಮಥನ ಮೀರಿಸುವೆ ನೀ ಎಲ್ಲ
ಅತಿಯಾದ ಅನುರಾಗವು
ತನುವ ಸೇರುವ ತವಕವು
ಪ್ರತಿಕ್ಷಣದ ಪ್ರೇಮವು
ಬೆರೆತ ಪ್ರತಿಯುಸಿರು
ತಾನಾನಾ ತನನ ತನುಮನ ಒಂದಾಯ್ತು
ಹೃದಯಗಳು ಸೇರಾಯ್ತು
ಸತಿಪತಿ ಸಂಬಂಧ ಶುರುವಾಯ್ತು
ಪ್ರಥಮ ಚುಂಬನ ಅವಿಸ್ಮರಣಿಯವಾಯಿತು
ಪ್ರಣಯದ ಸಮ್ಮಿಲನವು
ಅನುರಾಗದ ಆಲಿಂಗನ ರಸರೋಮಾಂಚನವು
ಬಸಿರ ಗುರುತು ತುಂಬಿತು ಗರ್ಭವು
ಭವ್ಯ ಸುಧಾಕರಜಗಮನೆ