ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
“ಹೊಸ ವರ್ಷದ ಹಳೆ ನೆನಪು “
ಹೊಸ ವರ್ಷದ ಬೆಳಕು ಹರಿಯಿತು
ಸಂತಸ ಸಡಗರ ಸಂಭ್ರಮ ತಂದಿತು
ಬಣ್ಣದ ಕನಸುಗಳಿಗೆ ರೆಕ್ಕೆ ಮೂಡಿತು
ಮರಗಿಡಗಳಲ್ಲಿ ಮತ್ತೆ ಎಲೆ ಚಿಗುರಿತು
ಹೊಸ ವರ್ಷದಲಿ ಹಳೆ ನೆನಪುಗಳು
ಎಂದೂ ಮರೆಯಲಾರದ ಕ್ಷಣಗಳು
ಒಂದಿಷ್ಟು ಅಹಿತ ಕಹಿ ಘಟನೆಗಳು
ಕೆಲವಷ್ಟು ಮಧುರ ಸಿಹಿ ಸಂಗತಿಗಳು
ಸಂತೋಷ ದುಃಖ ಸಾವು ನೋವು
ಆತಂಕ ದುಗುಡ ದುಮ್ಮಾನವು
ಕೋಪ ತಾಪ ಮದ ಮತ್ಸರವು
ಬೇಕು ಬೇಡ ಸತ್ಯ ಸುಳ್ಳಿನ ಅರಿವು
ವಿವಿಧ ಕ್ಷೇತ್ರಗಳಲಿ ಪ್ರಶಸ್ತಿ ಪುರಸ್ಕಾರ
ಅನೇಕ ಸ್ಪರ್ಧೆಗಳಲಿ ವಿಜಯದ ಸರ
ಮೆಚ್ಚುಗೆ ಪ್ರಶಂಸೆಗಳ ಮಹಾಪೂರ
ಗೆಲುವಲಿ ಏರಿದ ಸಾಧನೆಯ ಶಿಖರ
ಕುಟುಂಬ ಸ್ನೇಹಿತರೊಂದಿಗೆ ಪ್ರವಾಸ
ನದಿನೀರು ಸಮುದ್ರದಲ್ಲಿಳಿದ ಸಾಹಸ
ಮೋಜು ಮಸ್ತಿಗಳಿಗಿರಲಿಲ್ಲ ಆಯಾಸ
ಹಬ್ಬಗಳ ಆಚರಣೆಯಲ್ಲಿತ್ತು ಸಂತಸ
ಹೊಸ ವರ್ಷದ ಹಳೆ ನೆನಪುಗಳು
ಬರುವ ದಿನಗಳಿಗೆ ಸ್ಫೂರ್ತಿದಾಯಕ
ಅನುಭವಿಸಿದ ಶುಭ ಘಳಿಗೆಗಳು
ಹಚ್ಚ ಹಸಿರಿನಂತೆ ಮನಮೋಹಕ
ಹಳೆ ನೆನಪುಗಳ ಮೆಲಕು ಹಾಕುತ
ಹೊಸ ವರ್ಷದಲಿ ಹೆಜ್ಜೆಯನಿಡುತ
ನೋವನು ಮರೆತು ಪ್ರೀತಿ ಹಂಚುತ
ಮುನ್ನುಗ್ಗಬೇಕು ಸೋಲದೆ ಗೆಲ್ಲುತ
ಜಯಶ್ರೀ ಎಸ್ ಪಾಟೀಲ