ವಿಶೇಷ ಸಂಗಾತಿ
ಡಾ.ಯಲ್ಲಮ್ಮ ಕೆ.
“ಜೀವನ ಒಂದು ಸುಂದರ ಕನಸು”
ಮಹಾರಾಜ ದುಷ್ಯಂತ..! ಜೀವನ ಒಂದು ಸುಂದರ ಕನಸು ಎಂದು ನಂಬಿಸಿದಾತ. ನಂತರ.., ನಂತರ ಒಡಲಲ್ಲಿ ಆತನ ವಂಶದ ಕುಡಿಹೊತ್ತು ತುಂಬು ಸಂಕೋಚ-ಕಾತರ-ನಂಬಿಕೆಗಳಿಂದ ಆತನೆಡೆ ಹೋದಾಗ ಈಕೆ ಯಾರೋ ಗೊತ್ತಿಲ್ಲ ಎಂದು ಕೈಝಾಡಿಸಿಬಿಟ್ಟ ಪುರುಷೋತ್ತಮ ಮಹಾರಾಜ ದುಷ್ಯಂತ..! ಭ್ರಾಮಕ ಜಗತ್ತನ್ನು ತೊರೆದು ವಾಸ್ತವಲೋಕದಿ ಕಣ್ತೆರೆದ ಶಕುಂತಲೆಯ ಮನದಾಳದ ಮಾತುಗಳಿವು. ಡಾ.ವೀಣಾ ಶಾಂತೇಶ್ವರ ರವರ ನಿರಾಕರಣೆ – ವಾಸ್ತವಿಕ ನೆಲೆಯಲ್ಲಿ ಬರೆದ ಅಪರೂಪದ ಕಥೆಯ ಸಾಲುಗಳಿವು.
ಜೀವನದ ಕುರಿತಾಗಿ ಅಸಂಖ್ಯ ವ್ಯಾಖ್ಯಾನಗಳಲ್ಲಿ ದುಷ್ಯಂತ ನೀಡಿದ ವ್ಯಾಖ್ಯಾನ ಸೂಕ್ಷಾತಿ ಸೂಕ್ಷ್ಮವಾಗಿ ಗಮನಿಸುವಂಥದ್ದು, ಜೀವನವೆಂದರೆ ಒಂದು ಸುಂದರ ಕನಸು..! ಅಂದಹಾಗೆ ನನ್ನ ಲೇಖನವು ಈ ಕನಸುಗಳ ಬೆಂಬತ್ತಿ ಹೊರಟ ಪಯಣ. ಕನಸೆಂದರೆ ಏನು..? ಕನ್ನಡ ರತ್ನಕೋಶದಲ್ಲಿ ನೀಡಿರುವಂತೆ: ಕನಸು (ನಾ) ಸ್ವಪ್ನ, ನಿದ್ದೆಯಲ್ಲಿ ಕಾಣುವ ನೋಟ, ಸಂಕ್ಷಿಪ್ತ ಕನ್ನಡ ನಿಘಂಟುವಿನಲ್ಲಿ: ಕನಸು (ನಾ) ಸ್ವಪ್ನ, ಸುಳ್ಳು, ಅಸತ್ಯ,
ಸಿಗ್ಮಂಡ್ ಫ್ರಾಯ್ಡ್ ತನ್ನ ದ ಇಂಟರ್ ಪ್ರಿಟೇಷನ್ ಆಫ್ ಡ್ರೀಮ್ಸ್ – ಫ್ರಾಯ್ಡ್ ನ ಕನಸುಗಳು ಕೃತಿಯಲ್ಲಿ ಕನಸು ಮನಸಿನಲ್ಲಿನ ಸುಪ್ತ ಆಸೆಗಳು, ಆಲೋಚನೆಗಳು ಮತ್ತು ಪ್ರೇರಣೆಗಳನ್ನು ಪ್ರತಿನಿಧಿಸುತ್ತದೆ, ಮನುಷ್ಯನಲ್ಲಿ ಪ್ರಜ್ಞೆಯ ಅರಿವಿನಿಂದ ನಿಗ್ರಹಿಸಲ್ಪಟ್ಟ ಆಲೋಚನೆಗಳ ಅಭಿವ್ಯಕ್ತಿ ಕನಸಿನಲ್ಲಿ ಒಡಮೂಡುವುದು ಎಂಬುದನ್ನು ಕಂಡು ಕೊಂಡನು.
.
ಆಧುನಿಕ ವಿಜ್ಞಾನದಲ್ಲಿ ಕನಸೆಂದರೆ..? ನಮ್ಮ ಸೃಜನಶೀಲ ಮನಸು ತನ್ನೊಡಲಿನಲ್ಲಿ ತಾನೇ ಒಟ್ಟಿರುವ ರಾಶಿರಾಶಿ ವಿಷಯ ವಸ್ತುಗಳನ್ನು ತರ್ಕಬದ್ಧವಾದ ಸಮರ್ಥನೆಗಳೊಂದಿಗೆ ಸುರಕ್ಷಿತವಾಗಿ ಹೊರಹಾಕುವ ವ್ಯವಸ್ಥೆಯೇ ಕನಸು. ಸಾಮಾನ್ಯ ಅರ್ಥದಲ್ಲಿ ಗ್ರಹಿಸುವುದಾದರೆ ಒಬ್ಬ ವ್ಯಕ್ತಿ ನಿದ್ರೆಯಲ್ಲಿ ಅನುಭವಿಸುವ ಕಥೆ. ಇದು ಕಾಲ್ಪನಿಕವಾಗಿ ರುತ್ತದೆಯಾದರೂ ನಿಜ ಜೀವನಕ್ಕೆ ಸಂಬAಧಿಸಿರುತ್ತದೆ. ನಾವು ಗಹನÀವಾಗಿ ಆಲೋಚಿಸುತ್ತಿರುವ ವಸ್ತು ವಿಷಯಗಳು ಅಪ್ರಜ್ಞಾಪೂರ್ವಕವಾಗಿ ಮನಸಿನಾಳಕ್ಕೆ ಇಳಿದು ಅದು ಕನಸಿನಲ್ಲಿ ಕಾಣಬಹುದು ಅಥವಾ ಕನಸು ವ್ಯಕ್ತಿಯ ಜೀವನದಲ್ಲಿ ಮುಂದೆ ನಡೆಯಬಹುದಾದ ಕಾರ‍್ಯ-ಕಲಾಪಗಳ ಮುನ್ಸೂಚನೆಯೂ ಆಗಿರಬಹುದು. ಕನಸನ್ನೇ ಬಯಕೆ ಎಂಬರ್ಥದಲ್ಲಿ ಮಧರಚೆನ್ನರು ಬರುವುದೇನುಂಟೊಮ್ಮೆ ಬರುವ ಕಾಲಕ್ಕೆ ಬಹುದು, ಬಯಕೆ ಬರುವುದರ ಕಣ್ಸನ್ನೆ ಕಾಣೋ..! ಎಂದಿದ್ದಾರೆ.
ಕನಸೆಂದರೆ ಸುಳ್ಳು, ಅಸತ್ಯ ಎಂದು ಗ್ರಹಿಸುವುದಾದರೆ ದುಷ್ಯಂತ ಮಹಾರಾಜ ಜೀವನವೆಂದರೆ ಒಂದು ಸುಂದರ ಕನಸೆಂದು ರೈಲುಬಿಟ್ಟಿದ್ದಾನೆ, ಅಸತ್ಯ, ಸುಳ್ಳನ್ನೇ ನಿಜವೆಂದು ಭ್ರಮಿಸಿದ ಶಕುಂತಲೆಯ ಬಾಳು-ಗೋಳು ಅದೊಂದು ಅಪರೂಪದ ಕಥೆಯಾಗಿದೆ. ಕನಸುಗಳನ್ನು ಯಾರೂ ಕೂಡ ಕಾಣಬಹುದಾಗಿದ್ದು ಅದಕ್ಕೆ ತೆರ ನೀಡಬೇಕಾಗಿಲ್ಲ. ಸ್ವಪ್ನ ಜಗತ್ತು ಯಾವತ್ತು ಸುಂದರ, ವಾಸ್ತವ ಜಗತ್ತು ಬೇರೆಯೇ ಆಗಿರುತ್ತದೆ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ.
ಜ್ಯೋತಿಷ್ಯಶಾಸ್ತçದ ಒಂದು ಭಾಗವಾಗಿರುವ ಸ್ವಪ್ನಶಾಸ್ತ್ರದ ಪ್ರಕಾರ ಕನಸಿನಲ್ಲಿ ಮಂಗಳಕರ ಅಮಂಗಳಕರ ಸ್ವಪ್ನಗಳೆಂದು ಎರಡು ವಿಧಗಳನ್ನು ಕಾಣಬಹುದು. ನಾವು ಕನಸಿನಲ್ಲಿ ಈ ಐದನ್ನು ಕಂಡರೆ: ಕಮಲದಹೂವು- ಲಕ್ಷ್ಮಿ ಯಸಂಪತ್ತಿನಾಗಮನ, ಆನೆ-ಹಣ, ಗೌರವ, ಖ್ಯಾತಿ , ಕಾಯಿಲೆ ಬಿದ್ದಂತೆ– ದೊಡ್ಡ ಆದೇಶ, ಜೇನು ನೋಣ- ಸಂತೋಷ, ಹಾಲುಕುಡಿದಂತೆ-ದೊಡ್ಡ ಪ್ರಯೋಜನ, ಧನಲಾಭವಾಗುತ್ತದೆ ಎಂದು ತಿಳಿಯಲಾಗುತ್ತದೆ. ಮುಂದುವರೆದು- ನಮ್ಮನೆಚ್ಚಿನ ದೈವ, ಮುತ್ತೈದೆಯರು, ಬಿಳಿವಸ್ತುಗಳು, ನದಿಗಳು, ತುಳುಸಿ ಕಂಡರೆ ಶುಭಸೂಚಕ, ಮದ್ಯ,ಹೆಂಡ-ಶುಭಸೂಚಕ, ಬೆಂಕಿ-ಭೋಗಸಂಪತ್ತು, ಅನ್ನ-ಕರ‍್ಯಸಿದ್ಧಿ, ಹೆಣ್ಣುಕಂಡರೆ ಶುಭಸೂಚಕ, ಬಾಳೆಹಣ್ಣು, ಮಾವಿನಹಣ್ಣು-ಸಂತಾನಪ್ರಾಪ್ತಿ, ದೇವರಪೂಜೆ-ಸಾಲಪರಿಹಾರ, ಮಲ-ಧನಪ್ರಾಪ್ತಿ, ಮಳೆ-ಪ್ರಯಾಣ, ಹಾರಿಕೋಂಡು ಹೋದಂತೆ-ಸ್ಥಾನಪಲ್ಲಟ, ಕೆಂಪು ಇಲ್ಲವೆ ಕಪ್ಪುಬಣ್ಣ-ಕೇಡು, ಶೀತ,ನೆಗಡಿಯಾದರೆ ನೆಂಟರ ಆಗಮನ, ಸರ‍್ಯ,ಚಂದ್ರ-ರೋಗನಾಶ, ಹೆಣ ಇಲ್ಲವೇ ತಾನೇ ಸತ್ತಂತೆ-ದೀರ್ಘಾಯುಷಿ, ಅಮಂಗಳಕರ ಕನಸುಗಳು: ಸತ್ತವರು ಬದುಕಿ ದಂತಾದರೆ-ಮರಣಭಯ, ಕನಸಿನಲ್ಲಿ ಹಾವು ಕಂಡರೆ ಅಪಮೃತ್ಯು (ಮನಸಿನಲ್ಲಿ ಲೈಂಗಿಕ ಆಸಕ್ತಿ ಇದ್ದಾಗ ಹಾವು ಕಾಣಿಸಿಕೊಳ್ಳುವುದೆಂದು ಮನೋವಿಜ್ಞಾನಿಗಳು ಹೇಳುತ್ತಾರೆ), ಸಂಗೀತ ಕೇಳಿದರೆ-ಸಾಲಭಯ, ವಿಧವೆ, ಸಂನ್ಯಾಸಿ, ಬೆತ್ತಲೆ ಇದ್ದವರನ್ನು ಕಂಡರೆ-ದುಃಖ, ಭೋಜನ ಮಾಡಿದಂತೆ-ರೋಗಭಯ, ಹಲ್ಲುಬಿದ್ದಂತೆ-ವ್ಯಸನ, ಸತ್ತವರು ಬಂದು ಅಪ್ಪಿದರೆ-ಸಾವು ಇತ್ಯಾದಿ.
ಅಂತೆಯೇ ಮಾಯಾದೇವಿ ಕಂಡಕನಸು: ದಂತಕಥೆಯೊಂದರ ಪ್ರಕಾರ ರಾಣಿ ಮಾಯಾ ಗರ್ಭ ಧರಿಸುವ ಮುನ್ನದಿನ ರಾತ್ರಿ (ಮಾಯಾ ಎಂದರೆ ಸಂಸ್ಕೃತದಲ್ಲಿ ಭ್ರಮೆ ಎಂದರ್ಥ) ಆರು ಬಿಳಿ ದಂತಗಳನ್ನು ಹೊಂದಿರುವ ಬಿಳಿ ಆನೆಯು ತನ
ಮೆರೆಯುತ್ತಿದ್ದ ರಾಜ್ಯವೆಲ್ಲ
ಹರಿದು ಹೋಯಿತೆನುತ ತಿರುಕ
ಮರಳಿ ನಾಚಿ ಬೇಡುತ್ತಿದ್ದ ಹಿಂದಿನಂತೆಯೇ ||7||
ಅಂತೆಯೇ ಮುನಿದ ಮುನಿಗಳಿಂದಾಗಿ ರಾಜಾ ಹರಿಶ್ಚಂದ್ರನಿಗೂ ಕಾಡಿದ ಕೆಟ್ಟ ಕನಸು – ದಿಗಿಲು ಬಿದ್ದು ಎದ್ದ ಗಂಡನನ್ನು ಏಕೆ? ಏನಾಯಿತು? ಕೆಟ್ಟ ಕನಸು ಕಂಡಿರಾ? ಏಕೆ ಬೆವರುತ್ತಿದ್ದೀರಿ? ಎಂದು ಚಂದ್ರಮತಿ ಕೇಳಿದ ಪ್ರಶ್ನೆಗೆ ಮುಖ ಒರೆಸಿಕೊಳ್ಳುತ್ತ ಹರಿಶ್ಚಂದ್ರ ದುಗುಡದಿಂದ ಹೇಳಿದ ; ಓಹ್! ಬಹಳ ಕೆಟ್ಟ ಕನಸು. ಆಸ್ಥಾನದಲ್ಲಿದ್ದಾಗ ಯಾರೋ ಮುನಿ ಬಂದು ನನ್ನನ್ನು ನೂಕಿದ ನೆಲದ ಮೇಲೆ, ಸಿಂಹಾಸನವನ್ನು ಎತ್ತು ಒಯ್ದ. ಮುಂದೊಂದು ಕಾಡು. ಅಲ್ಲೊಂದು ಗುಡ್ಡ, ಕಷ್ಟಪಟ್ಟು ಹತ್ತಿದೆ, ಅಲ್ಲಿ ನೀನು ಇದ್ದು ಕೈಹಿಡಿದು ಎಳೆದುಕೊಂಡೆ ನನ್ನ. ಅಲ್ಲೊಂದು ಅರಮನೆ. ಏನೋ ಗೊತ್ತಾಗುತ್ತಿಲ್ಲ. ಎದೆ ಹೊಡೆದುಕೊಳ್ಳುತ್ತಿದೆ ಏಕೋ? ಬಹುಸೂಕ್ಷ್ಮಮತಿಯಾದ ಚಂದ್ರಮತಿಯು ನೀಡಿದ ಕನಸಿನ ವಿವರಣೆ: ಈ ಕನಸು ನೀವು ಗುರುಗಳ ಆಜ್ಞೆಯನ್ನು ಮೀರಿದ್ದರ ಕೆಡುಕಿನ ಸೂಚನೆ, ವಿಶ್ವಾಮಿತ್ರರು ಶಪಿಸಬಹುದು, ಕಷ್ಟಪರಂಪರೆ ಉಂಟಾಗಬಹದೆAದು. ಹರಿಶ್ಚಂದ್ರನಿಗೆ ಬಂದೊದಗಿದ ದುಸ್ಥಿತಿ, ಚಂದ್ರಮತಿಯ ಪ್ರಲಾಪ, ಕೆಡುಕಿನಲ್ಲಿ ಯೂ ಒಳಿತನ್ನು ಕಾಣುವ ಮನೋಗತ ಇಡೀ ಕಾವ್ಯದ ಸಾರ!
ಮಳೆಗಾಲದೊಂದು ದಿನ ಕಗ್ಗತ್ತಲ ರಾತ್ರಿ, ಗುಡುಗು-ಸಿಡಿಲು-ಮಿಂಚುಸಹಿತ ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ಅನ್ಯಕಾರ‍್ಯ ನಿಮಿತ್ತ ಪೇಟೆಗ್ಹೋದ ಅಪ್ಪ ದಿನವೆರೆಡು ಕಳೆದರೂ ಬಂದಿರಲಿಲ್ಲ, ಅಣ್ಣ ಹೊರಗೆ ಮಲಗಿದ್ದ, ಅಮ್ಮನ ಪಕ್ಕದಲ್ಲಿ ನಾನು ನನ್ನಕ್ಕ ಮಲಗಿದ್ದ ನೆನಪು, ತಡರಾತ್ರಿ ಚಿಟ್ಟೆಂದು ಚೀರಿ ಎದ್ದೆ..! ನಿದ್ದೆಗಣ್ಣಲ್ಲಿ ಅಕ್ಕ ಏನೆಂದು ಗದರಿದಳು, ನಾನು ಅಳುತ್ತಾ ಕುಳಿತೆ, ಏನು ಕೆಟ್ಟ ಕನಸು ಕಂಡೆಯಾ? ಎಂಬ ಅಮ್ಮನ ಸಂತ್ವಾನ ದನಿಕೇಳಿ ಸಾವರಿಸಿಕೊಂಡು ಹೂಗುಟ್ಟಿದೆ. ಏನದು ಕೆಟ್ಟ ಕನಸು? ನನ್ನ ಕನಸಿನಲ್ಲಿ ಅಪ್ಪಯ್ಯ ಸತ್ತುಬಿಟ್ಟಿದ್ದ ಕಣಮ್ಮ ಭಯ-ಭೀತಸ್ವರದಲ್ಲಿ ನುಡಿದೆ, ಕನಸಿನಲ್ಲಿ ಸತ್ತಂತೆ ಕಂಡರೆ ಒಳ್ಳೆಯದಂತೆ, ನಿಮ್ಮಪ್ಪಯ್ಯನ ಸಾವು ದೂರಾಯ್ತು ಬಿಡು ಎನ್ನುವಷ್ಟರಲ್ಲಿ ಬಾಗಿಲು ಬಡಿದ ಶಬ್ದ ಅಮ್ಮ ಎದ್ದು ನೋಡಿದಾಗ ಅಚ್ಚರಿ ಅಪ್ಪಯ್ಯ ಬಂದಿದ್ದ..! ಇಗೋ ನೋಡಿ ನಿಮ್ಮ ಮಗಳು ಕೆಟ್ಟ ಕನಸು ಕಂಡ್ಳAತೆ, ನಿಮಗೆ ನೂರು ವರುಷ ಆಯಸ್ಸು ಎಂದು ಕನಸಿನ ವಿಶ್ಲೇಷಣೆಯಲ್ಲಿ ಬೆಳಕು ಹರಿದುದು ತಿಳಿಯಲಿಲ್ಲ.
ನನ್ನ ಕನಸಿನಲ್ಲಿ ಅಪ್ಪಯ್ಯ ಸತ್ತದ್ದು ಸುಳ್ಳೇ? ಸುಳ್ಳು ವಾಸ್ತವದಲ್ಲಿ ಆತ ಇನ್ನೂ ಬದುಕಿದ್ದ! ಕನಸೆಂದರೆ ಬರೀ ಸುಳ್ಳು ಎಂದಾಯ್ತು. ಬದುಕಿನಲ್ಲಿ ಹುಟ್ಟು-ಸಾವು, ನೋವು-ನಲಿವು ಇದ್ದದ್ದೇ, ಮುಂದೊಂದು ದಿನ ನಾವು-ನೀವು ಎಲ್ಲರೂ ಸಾಯುವುದು ನಿಶ್ಚಿತ..! ಆದರೆ ತಾವು ಕಂಡ ಕೆಟ್ಟ ಕನಸುಗಳಿಗೆ ಒಳ್ಳೆಯದನ್ನು, ಒಳ್ಳೆಯ ಕನಸುಗಳಿಗೆ ಕೆಟ್ಟದ್ದನ್ನು ಆರೋಪಿಸುತ್ತ ನಕರಾತ್ಮಕತೆಯಲ್ಲೂ ಸಕಾರಾತ್ಮಕತೆಯನ್ನು ಹುಡುಕಿ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಜನಪದರ ಬುದ್ಧಿಮತ್ತೆಗೆ ಏನನ್ನಬೇಕು.
ಇಡೀ ಜಗತ್ತನ್ನೇ ಗೆಲ್ಲಬೇಕೆಂಬ ಕನಸು ಹೊತ್ತಿದ್ದ ಅಲೆಗ್ಸಾಂಡರ್, ಅದೇ ಕನಸನ್ಹೊತ್ತು ಸಾಗಿದ ಅಲ್ಲಾವುದ್ದೀನ ಖಿಲ್ಜಿಯು (ಎರಡನೆಯ ಅಲೆಗ್ಸಾಂಡರ್) ಇಡೀ ಭಾರತವನ್ನು ಗೆಲ್ಲುವುದರಲ್ಲಿಯೇ ತೃಪ್ತನಾಗಬೇಕಾಯಿತು. ಅಖಂಡ ಕರ್ನಾಟಕದ ಕನಸು ಕಂಡು ಅದನ್ನು ನನಸು ಮಾಡಿದ ಮಹಾಪುರುಷರಲ್ಲಿ ಆಲೂರು ವೆಂಕಟರಾಯರು, ಕೋ. ಚೆನ್ನಬಸಪ್ಪ, ರಾ.ಹ.ದೇಶಪಾಂಡೆ, ರೊದ್ದ ಶ್ರೀನಿವಾಸರಾವ್, ಸಕ್ಕರಿ ಬಾಳಾಚರ‍್ಯ, ಸರ್ ಸಿದ್ದಪ್ಪ ಕಂಬಳಿ, ಹುಯಿಲಗೋಳ ನಾರಾಯಣರಾಯರು, ಎಸ್.ನಿಜಲಿಂಗಪ್ಪ ಮುಂತಾದ ಗಣ್ಯಮಾನ್ಯರ ಕರ‍್ಯ ಶ್ಲಾಘನೀಯ. ಕನಸಿನ ಕುರಿತಾದ ಡಾ. ಶಿವರಾಮ ಕಾರಂತರ ಭಾರತದ ಜ್ಞಾನಪೀಠ ಪ್ರಶಸ್ತಿ ವಿಜೇತ (1977) ಅನ್ವೇಷಕ ಪ್ರವೃತ್ತಿಯ ಮೂಕಜ್ಜಿ (ಮೂಕಾಂಬಿಕೆ)ಯ ಕನಸುಗಳು ಕೃತಿ ಉಲ್ಲೇಖನೀಯ, ಲೇಖಕಿ ನೇಮಿಚಂದ್ರರವರ ಮೊದಲ ಪ್ರವಾಸಕಥನವಾದ ನನ್ನ ಕನಸಿನ ಪಯಣದ ಕತೆ (1999) ಸುಮಾರು ಕಾಲು ಶತಮಾನಗಳ ಹಿಂದೆ ಹೆಣ್ಣುಮಕ್ಕಳಿಬ್ಬರು, ತಮ್ಮಂತೆ ತಾವು ಇಂಗ್ಲೆಂಡ್ ಮತ್ತು ಯುರೋಪನ್ನು ಅಲೆದುಬಂದ ರೋಮಾಂಚನದ ಕತೆ -ಯನ್ನೊಳಗೊಂಡಿದೆ. ಅಲ್ಪಹಣದಲ್ಲಿ ಅಗಾಧ ಅನುಭವಗಳನ್ನು ಜೋಳಿಗೆಯಲ್ಲಿ ಹೊತ್ತು ಬಂದ ಲೇಖಕಿಯು ಕನಸು ಕಂಡರೆ ಸಾಕು, ಹಾರಲಿಕ್ಕೆ ರೆಕ್ಕೆಗಳು ಮೊಳೆಯುತ್ತವೆ ಎನ್ನುತ್ತಾರೆ.
ಆ ದಿನ ಕಲಾಂ ರವರ ಉಪನ್ಯಾಸ ಕರ‍್ಯಕ್ರಮವೊಂದಿತ್ತು. ಉಪನ್ಯಾಸದ ನಂತರ ವಿದ್ಯಾರ್ಥಿನಿಯೋರ್ವಳು ಕಲಾಂ ರವರ ಬಳಿ ಬಂದು ಹಸ್ತಾಕ್ಷರಕ್ಕಾಗಿ ವಿನಂತಿಸಿದಳು, ಹಸ್ತಾಕ್ಷರ ನೀಡುತ್ತ ಏನಮ್ಮ ನಿನ್ನ ಕನಸು..? ಎಂಬ ಕಲಾಂರ ಪ್ರಶ್ನೆಗೆ ನನಗೆ ಅಭಿವೃದ್ಧಿ ಹೊಂದಿದ ಭಾರತದಲ್ಲಿ ಬದುಕುವ ಕನಸಿದೆ ಎಂದು ಉತ್ತರಿಸಿದಳಾಕೆ, ಈ ಮಾತು ಕಲಾಂ ರವರನ್ನು ಬಹುವಾಗಿ ಕಾಡಿತು. ಮುಂದೆ ಅವರು ತಮ್ಮ ಸಹೋದ್ಯೋಗಿಯಾಗಿದ್ದ ವೈ ಎಸ್ ರಾಜನ್ ರ ಸಹಯೋಗದಲ್ಲಿ ಇಂಡಿಯಾ -2020 ಕೃತಿಯನ್ನು ರಚಿಸಿ, ಕೃತಿಯನ್ನು ಆ ಬಾಲಕಿಗೆ ಮತ್ತು ಇಂಥದ್ದೇ ಕನಸನ್ನು ಹೊಂದಿರುವ ಅಸಂಖ್ಯಾತ ಭಾರತೀಯರಿಗೆ ಅರ್ಪಿಸಿದ್ದಾರೆ. ಕಲಾಂರವರು 2020ರಲ್ಲಿ ಭಾರತ ಹೇಗಿರಬೇಕು..? ಎಂಬ ಕನಸು ಕಂಡವರು, ಸಕಾರಾತ್ಮಕ ಚಿಂತನೆಗಳ ಮೂಲಕ ದೇಶದ ಮೇಲೆ ಅಪಾರ ಪ್ರಭಾವ ಬೀರಿದ್ದ ಕಲಾಂ ಅವರ ಕನಸುಗಳು ನನಸಾಗದೇ ಇರಬಹುದು ಆದರೆ ಸಾಗಬೇಕಾದ ದಾರಿ ಹೇಗಿರಬೇಕೆಂಬುದರ ಕಡೆಗೆ ಅವು ಬೆಳಕು ಚೆಲ್ಲುತ್ತವೆ.
ನಾವು ನೀವೆಲ್ಲರೂ ಕೂಡ ಬದುಕಿನ ಬಗ್ಗೆ ಅದಮ್ಯ ಹಗಲುಗನಸುಗಳನ್ನು ಕಟ್ಟಿಕೊಂಡು, ಸುಳ್ಳಿನ ಮೂಟೆಗಳ -ನ್ಹೊತ್ತು ಸಾಗುತ್ತಿದ್ದೇವೆ, ಸುಂದರ ಕನಸೊಂದು ಕಟ್ಟಿರುವೆ ಕೊಲ್ಲದಿರು ದೇವರೇ, ಇಲ್ಲದ ನೂರು ಕಾರಣವ ಕೊಟ್ಟು..! ಎಂದೂ ಕಾಣದ ದೇವರಲ್ಲಿ ಮೊರೆಯಿಡುತ್ತೇವೆ. ನನಗೊಂದೂ ಅರ್ಥವಾಗ್ತಾಯಿಲ್ಲ, ನಾವುಗಳು ಕಟ್ಟಿಕೊಂಡಿರುವ ಸುಳ್ಳು ಸುಳ್ಳು ಕನಸುಗಳನ್ನು ನನಸಾಗಿಸಿಕೊಳ್ಳಲು ಇಷ್ಟೊಂದು ಪರದಾಡಬೇಕಾ.., ಅಂತ..! ಬದುಕನ್ನು ಬಂದಂತೆ ಅನುಭವಿಸಬೇಕಲ್ಲದೇ ಅದಕ್ಕೆ ವಿರುದ್ಧವಾಗಿ ಸಾಗಿದಾಗ ನಮ್ಮೊಳಗೆ ಒತ್ತಡ, ಆತಂಕ ಶುರುವಿಟ್ಟುಕೊಳ್ಳುತ್ತದೆ, ಹಾಗಾದರೆ ಕನಸನ್ನು ಕಾಣುವುದು ಬೇಡವೆ..? ಕನಸು ಕಾಣಲಡ್ಡಿಯಿಲ್ಲ ಕಂಡ ಕನಸುಗಳೆಲ್ಲ ನನಸನ್ನಾಗಿಸಿಕೊಳ್ಳುವ ಬಯಕೆ, ಮಹತ್ವಾಕಾಂಕ್ಷೆಯ ಹೆಸರಿನಲ್ಲಿ ತೀರಾ ಹಿಂಸಾಪ್ರವೃತ್ತಿಗೆ ಇಳಿದುಬಿಡುತ್ತಾನೆ ಮನುಷ್ಯ. ತೀರಾ ವಿಕೋಪಕ್ಕೆ ತಿರುಗುವ ಹುಚ್ಚುಚ್ಚು ಕನಸುಗಳನ್ನು ಕಾಣುವುದು ತರವಲ್ಲ.
ಡಾ.ಯಲ್ಲಮ್ಮ ಕೆ.
ತುಂಬಾ ಚೆನ್ನಾಗಿದೆ ಮೇಡಮ್…..
ಧನ್ಯವಾದಗಳು ಸರ್/ಮೇಡಂ