ಕಾವ್ಯ ಸಂಗಾತಿ
ತಿಲಕಾ ನಾಗರಾಜ್ ಹಿರಿಯಡಕ
ಹನಿಯ ಕನಸು
ಧರೆಯ ದಾರಿಯ ಹಿಡಿದ
ಹನಿಯ ಕನಸೇನಿರಬಹುದು?
ಹೀಗೇ ಊಹಿಸಿದೆ
ಭುವಿಯೊಡಲಲಿ ಇನ್ನೂ
ಕುಡಿಯೊಡೆಯದ ಬೀಜಕೆ ಆಸರೆಯಾಗುವುದೇ? ಇಲ್ಲ
ಬಿಸಿಲಿಗೆ ಕಾದ ಮಣ್ಣೊಳಗೆ
ಬೆರೆತು ಘಮಿಸುವುದೇ?
ಭೂಮಿಯೊಳಗೆ ಇಂಗಿ ಅಂತರ್ಜಲವಾಗಿ ಜಿನುಗುವುದೇ?
ಇಲ್ಲ
ಪಚ್ಚೆ ಪೈರಿನ ಮಡಿಲಲಿ ನಲಿವ
ತೆನೆಯ ಮೇಲೆ ಕುಳಿತು ಹೊಳೆಯುವುದೇ?
ಧಗೆಯ ಉರಿಗೆ ಬೆಂದ
ಇಳೆಯ ಒಡಲ ಸೇರಿ
ತಂಪ ಧಾರೆ ಎರೆಯುವುದೇ?
ಇಲ್ಲ
ಕಡಲಿನಾಳದಿ ಅವಿತ ಚಿಪ್ಪಿನೊಳಗೆ
ಸೇರಿ ಮುತ್ತಾಗುವುದೇ?
——————————————–
ತಿಲಕಾ ನಾಗರಾಜ್ ಹಿರಿಯಡಕ
Wa wa wa ❤️