ಶರಣ ಸಂಗಾತಿ
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ
ಅಕ್ಕ ಮಹಾದೇವಿ
ನೆಲದ ಮರೆಯ ನಿಧಾನದಂತೆ ಫಲದ ಮರೆಯ ರುಚಿಯಂತೆ
ತಿಲಯ ಮರೆಯ ತೈಲದಂತೆ
ಮರದ ಮರೆಯ ತೇಜದಂತೆ
ಭಾವದ ಮರೆಯ ಬ್ರಹ್ಮವಾಗಿಪ್ಪ
ಚೆನ್ನಮಲ್ಲಿಕಾರ್ಜುನನ ನಿಲವನರಿಯಬಾರದು
ಅಕ್ಕ ಮಹಾದೇವಿ
12ನೇ ಶತಮಾನದ ಅಕ್ಕಮಹಾದೇವಿಯು ಕನ್ನಡದ ಪ್ರಥಮ ಕವಯಿತ್ರಿ. ಹೆಣ್ಣು ಗಂಡು ಎನ್ನುವ ಭಾವ ಭೇದವನ್ನು ತೊರೆದು ಅರಿವಿನ ಕುರುವಾದ ಲಿಂಗವನ್ನು ನಂಬಿ ನಡೆದ ಮಹಾನ್ ಸಾದ್ವಿ ಅಕ್ಕಮಹಾದೇವಿಯು ಆಗಿದ್ದಾಳೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿ ತಂದೆ ಓಂಕಾರ ಶೆಟ್ಟಿ ತಾಯಿ ಸುಮತಿಯ ಮಗಳಾದ ಅಕ್ಕ.
ವಲ್ಲದ ಗಂಡನಾದ ಕೌಶಿಕನನ್ನು ಬಿಟ್ಟು, ಅರುವಿನ ಕುರುವು ಆದ ಚೆನ್ನಮಲ್ಲಿಕಾರ್ಜುನನನ್ನು ಹುಡುಕುವ ಪರಿ ನಿಜಕ್ಕೂ ಅಚ್ಚರಿಯನ್ನು ಮೂಡಿಸದೇ ಇರಲಾರದು.
ಅಕ್ಕನ ಭಾವ ಈ ಭೂಮಿಯ ಮರೆಯಲ್ಲಿ ಯಾರಿಗೂ ಕಾಣದಿರುವ ಸಂಪತ್ತು ನಿಧಿ ಇದ್ದಂತೆ .
ಅದು ಫಲ ಭರಿತವಾದ ಹಣ್ಣಿನೊಳಗೆ ಇರುವ ರುಚಿಯಂತೆ.
ಅದು ಕಣ್ಣಿಗೆ ಕಾಣದು .ಅದನ್ನು ಸವಿದಾಗಲೇ ಅದರ ಕಹಿ ಮತ್ತು ಸಿಹಿಯಾಗಿದೆ ಎಂದು ನಾವು ಹೇಳುತ್ತೇವೆ ಹಾಗೆ ಅಕ್ಕಳು ಚೆನ್ನಮಲ್ಲಿಕಾರ್ಜುನನ ಮೇಲೆ ಅಂದರೆ ಅರಿವಿನ ಭಾವ ತಿಳಿಯಲು ಅಕ್ಕ ಚಡಪಡಿಸುತ್ತಾಳೆ . ಎಳ್ಳಿನಲ್ಲಿರುವ ಎಣ್ಣೆ .ಎಳ್ಳಿನಲ್ಲಿರುವ ಎಣ್ಣೆಯೂ ಕೂಡಾ ನಮಗೆ ಕಾಣದು .
ಹಾಗೇ ನನ್ನ ಅರಿವಿನ ಮರೆಯಲ್ಲಿ ಆ ಚೆನ್ನಮಲ್ಲಿಕಾರ್ಜುನನಿದ್ದಾನೆ ಆತ ಕಾಣದ ಕದಡಿಯ ವನದ ಮರೆಯಲ್ಲಿ ಅಡಗಿಕೊಂಡಿಹನು.
ಎನ್ನುವ ಭಾವ ಅಕ್ಕನದು.
ಉಡುತಡಿಯಿಂದ ಕಲ್ಯಾಣಕ್ಕೆ ,ಕಲ್ಯಾಣದಿಂದ ಕದಳಿಯ ಪಯಣ ಇದು ಮನುಷ್ಯನ ಹುಟ್ಟಿನಿಂದ ಅರಿವಿನ ಪಯಣ .
ಅಕ್ಕನ ಇಡೀ ಜೀವ ಪಯಣದ ಹಾದಿಯಲ್ಲಿ ,ಉಡುತಡಿ ,ಕಲ್ಯಾಣ, ಕದಳಿ ,ಶ್ರೀಶೈಲ, ಚೆನ್ನಮಲ್ಲಿಕಾರ್ಜುನ ಎಲ್ಲವೂ ಭೌತಿಕ ಸಂಗತಿಗಳು .ಅಕ್ಕನಿಗೆ
ಅರಿವು ಎನ್ನುವ ಚೆನ್ನಮಲ್ಲಿಕಾರ್ಜುನನೆಂಬ ಜ್ಞಾನದ ಬೆಳಕು .ಆ ಬೆಳಕಿನ ದರ್ಶನವನ್ನು ಪಡೆಯುವುದೇ ಅಕ್ಕನ ಗುರಿಯಾಗಿದೆ .
ಇದನ್ನು ಅಕ್ಕಮಹಾದೇವಿಯು ಬಸವಣ್ಣನ ಲಿಂಗ ಧ್ಯಾನದಲ್ಲಿ ಕಾಣುತ್ತಾಳೆ.
ಅಕ್ಕನ ಭಾವ ಹಾಲಿನಲ್ಲಿ ತುಪ್ಪ ಅಡಗಿರುವಂತೆ ಯಾರಿಗೂ ಭೇದಿಸಲಾಗದಂತಹ ಬೆಂಕಿಯ ಕಿಡಿ ಅಡಗಿರುವ ಸೂರ್ಯ ಕಾಂತದ ಕಲ್ಲಿನಂತೆ.
ತನ್ನ ಆತ್ಮ ಸಂಗಾತಿಯಾದ ಚೆನ್ನಮಲ್ಲಿಕಾರ್ಜುನನನು ತನ್ನಲ್ಲಿ ಅಡಗಿರುವನು ಎಂದು ಅಕ್ಕ ಹೇಳುತ್ತಾಳೆ.
ಲಿಂಗವೆನ್ನೆ ,ಲಿಂಗೈಕ್ಯವೆನ್ನೆ, ಸಂಗವೆನ್ನೆ, ಸಮರಸವೆನ್ನೆ, ಆಯಿತೆನ್ನೆ,ಆಗದೆನ್ನೆ, ನೀನೆನ್ನೆ ನಾನೆನ್ನೆ ಚೆನ್ನಮಲ್ಲಿಕಾರ್ಜುನಯ್ಯಾ ,ಲಿಂಗೈಕ್ಯವಾದ ಬಳಿಕ ಏನೂ ಎನ್ನೆ .
ಕಲ್ಪನಾತೀತವಾದ ಸಮಾಜದಿಂದ ಹೊರಬಂದ ಅಕ್ಕಳು ದೇಹಭಾವವನ್ನು ತೊರೆದು ,ಅಮೂರ್ತ, ನಿರಾಕಾರ ಆ ಚೆನ್ನಮಲ್ಲಿಕಾರ್ಜುನನೊಂದಿಗೆ ಮದುವೆಯಾಗಿರುವೆ ಎಂಬ ಅಂತರ.ಆ ಭಾವ ತೀವ್ರತೆಯ ಅಂತರ ಕುಗ್ಗಿ ಹತ್ತಿರಕ್ಕೆ ಬಂದಂತೆ ಆಯಿತು ಅಕ್ಕನಿಗೆ .
ಶಿವಯೋಗದ ಲಿಂಗಧ್ಯಾನದಲ್ಲಿ ಲಿಂಗ ಮತ್ತು ಅಂಗ ಎರಡು ಬೇರೆ ಅಲ್ಲ ಎನ್ನುವ ಭಾವ ಮೂಡಿದಾಗ
ದೇಹಾಭಿಮಾನ ಅಳಿಯುತ್ತದೆ.
ಅಮೂರ್ತ ಅಲೌಕಿಕ ಪರಮಾತ್ಮ ಅಥವಾ ಆಂತರಿಕ ಪ್ರಜ್ಞೆಯ ಸಂಕೇತದ ಅರಿವು ಜಾಗೃತ ಸ್ಥಿತಿಗೆ ಮನಸ್ಸು ತಲುಪಿದಾಗ ಮಾತ್ರ ಅವನು ಪತಿಯಾಗುತ್ತಾನೆ.
ಇಲ್ಲಿ ಅಕ್ಕ ಭಾವಿಸಿದ ಗಂಡ ದೈವದ ಕಲ್ಪನೆಯ ಗಂಡನನ್ನು .
ಅವಾಗಿನ ಒಂದು ರಾಜತ್ವ. ಪುರುಷ ಪ್ರಧಾನವಾದ ಸಮಾಜದಲ್ಲಿ ಒಂಟಿಯಾಗಿ ಅರಮನೆಯನ್ನು ಧಿಕ್ಕರಿಸಿ ಹೊರ ನಡೆದ ಅಕ್ಕನ ಧೈರ್ಯ, ಯಾವ ಒಂದು ಯುಗದಲ್ಲೂ ನಾವು ಕಾಣಲಾರೆವು. ಅವಾಗಿನ ಒಂದು ಕಾಲದಲ್ಲಿ ಆ ಕೌಶಿಕ ರಾಜ ಅಕ್ಕನನ್ನು ಅಲ್ಲೇ ಬಂದಿಸಿ ಅವಳಿಗೆ ಘೋರ ಶಿಕ್ಷೆ ಕೊಡಬಹುದಿತ್ತು. ಆ ಶಿಕ್ಷೆಯನ್ನು ಕೊಡುವ ರಾಜನ ಮನಸ್ಸನ್ನು ಪರಿವರ್ತಿಸಿ ಹೊರ ನಡೆದು ಬಂದ ದಿಟ್ಟೆ ನಮ್ಮ ಅಕ್ಕ ಮಹಾದೇವಿಯಾಗಿದ್ದಾಳೆ.
ಇಂದಿನ ಈ ಒಂದು ಕಾಲದಲ್ಲಿ ಎಲ್ಲ ಸೌಲಭ್ಯ ಸೌಕರ್ಯಗಳಿದ್ದರೂ ಕೂಡ, ಒಂಟಿಯಾಗಿ ಓಡಾಡಿ ಸುರಕ್ಷಿತವಾಗಿ ಮನೆಗೆ ತಲುಪುತ್ತೇವೆಯೋ ಇಲ್ಲವೋ ಅನ್ನುವ ಈ ಕಾಲ ಅವತ್ತಿನ ಆಕಾಲದಲ್ಲಿ ಒಂಟಿಯಾಗಿ ಕಾಲ್ನಡಿಗೆಯಿಂದ ಸಂಚರಿಸಿ
ಇವತ್ತಿನ ಸ್ತ್ರೀ ಕುಲಕ್ಕೆ ಧೈರ್ಯವನ್ನು ತಂದುಕೊಟ್ಟ, ಅಕ್ಕಳ ವೇದನೆ ಅವಳ ನಿವೇದನೆ ಇವತ್ತಿನ ಸಮಾಜ ಅರಿಯಬೇಕಾಗಿದೆ .
ಅದೆಷ್ಟೋ ಮನೆಗಳಲ್ಲಿ ಪತಿ ಪತ್ನಿಯರಲ್ಲಿ ವಿರಸ ಭಾವ ಮೂಡಿದ್ದೀರಬೇಕು.
ನಿನ್ನ ವಸ್ತ್ರ ಆಭರಣ ಯಾರಿಗೆ ಬೇಕು ತೆಗೆದುಕೊ ಎಂದು ಧಿಕ್ಕರಿಸಿ
ನಿಲ್ಲುವುದಿಲ್ಲವೇ? ಹಾಗೇ ಅಕ್ಕಳೂ ಕೂಡಾ ದಿಕ್ಕರಿಸಿದ್ದೀರಬೇಕು .
ದಿಕ್ಕರಿಸಿ ನಡೆದ ಅಕ್ಕ ನಮಗೆ ಅಲ್ಲಿ ದಿಗಂಬರೆಯಾಗಿ ಕಾಣುತ್ತಾಳೆ ಹೊರತು ,ಬಟ್ಟೆ- ಬರೆ ಕಳಚಿ ನಿಂತ ದಿಗಂಬರೆಯಾಗಿ ಅಲ್ಲ .ಅಕ್ಕನ ಭಾವ ಎಲ್ಲವೂ ಶೂನ್ಯ .
ಅವಳ ಆಂತರಿಕ ಅರಿವನ್ನು ತಿಳಿದುಕೊಳ್ಳಲು ತನ್ನ ಅರಿವಿಗೆ ತಾನೇ ಗುರುವಾಗಿ ನಿಲ್ಲುತ್ತಾಳೆ. ಅದಕ್ಕೆ ಹೇಳುತ್ತಾಳೆ ಅಕ್ಕ ಬಿಸುಟು ಬಟ್ಟೆಗಳನ್ನು ಹಾಕಿ ಕೊಳ್ಳುವೆ.
ಮಾನ ಮುಚ್ಚಿಕೊಳ್ಳಲಿಕ್ಕೆ ಕಂಬಳಿ ಆದರೇನು ? ಚಿಂದಿ ಆದರೇನು? ತಿರುಗಿ ತಿನ್ನುವೆ ಅನ್ನವನ್ನು ನಿನ್ನ ಅರಮನೆಯ ಅನ್ನವೂ ನನಗೆ ಬೇಡ ಎಂದು ಉಡುವ ತಡಿ ಎಂದರೆ ಅವಳ ಒಂದು ಅರಿವಿನ ಭಾವ ವೈರಾಗ್ಯದ ಕಂಬಳಿಯನ್ನು ಹೊದ್ದುಕೊಂಡು ,ಹೊರ ನಡೆದ ಅಕ್ಕನ ನಿಲುವು ,ಅಷ್ಟೊಂದು ಸಣ್ಣ ವಯಸ್ಸಿನಲ್ಲಿಯೇ ,ವೈರಾಗ್ಯದ ಗಟ್ಟಿ ನಿಲುವು .ಸುಖ ಭೋಜನವನ್ನು ದಿಕ್ಕರಿಸಿ ಭಿಕ್ಷೆ ಬೇಡಿ ತಿನ್ನುವೆ ಎನ್ನುವ ಅವಳೊಳಗೆ ಇರುವ ಗಟ್ಟಿ ಧ್ವನಿಯು, ಇವತ್ತಿನ ನಾರಿಯರಿಗೆ ಗಟ್ಟಿಯಾಗಿ ನಿಂತಿದೆ .
ಅವಳನ್ನು ಪರೀಕ್ಷಿಸುವ ಪರೀಯು
ವಜ್ರವನ್ನು ಪರೀಕ್ಷಿಸಿದಂತೆ ಅವಳನ್ನು ಪರೀಕ್ಷೆಗೆ ಒಡ್ಡುವ ನಿವೇದನೆ ಆ ದೇವರಿಗೆ ಸೇರಬೇಕು.
ಚೆನ್ನಮಲ್ಲಿಕಾರ್ಜುನಾ ನನ್ನ ಮೊರೆಯನ್ನು ಆಲಿಸಯ್ಯ ಎಂದು ನಿವೇದಿಸುವ ಅವಳ ಭಾವ ಮನುಷ್ಯರೊಂದಿಗಿನ ಸಂಬಂಧ ಕಿತ್ತುಹೋಗಿ, ಬಯಲ ಸೀಮೆಯಾದ ಕದಡಿಯವನವನ್ನು ಸೇರುವ ಅಕ್ಕಳ ಭಾವ ದಿಗಂಬರ .ಅವಳ ಒಳಗಿನ ಭಾವ ಪಂಚೇಂದ್ರಿಯಗಳು ದಿಗಂಬರವಾಗಿ ನಿಲ್ಲುತ್ತವೆ .
ಅಣ್ಣ ಬಸವಣ್ಣನವರ ವಚನ ಯಾರಿಗಾಗಿ ಹೇಳಿದ್ದೀರಬೇಕು ? ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಮುನಿಯಬೇಡ ಇದಿರು ಹಳಿಯಲು ಬೇಡ ತನ್ನ ಬಣ್ಣಿಸಬೇಡ ಇದೆ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ. ಎನ್ನುವ ಬಸವಣ್ಣನವರ ವಚನಗಳು ಅವಾಗಿನ ಕೌಶಿಕ ನಂತಹ ಪುರುಷರಾಜನಿಗೆ ಹೇಳಿರಬೇಕು. ಎನ್ನುವ ನನ್ನ ಒಂದು ಮನಕ್ಕೆ ತಲುಪಿದ್ದು .
ಒಂಟಿಯಾಗಿ ಅಕ್ಕನನ್ನು ಪ್ರಶ್ನಿಸುವುದಕ್ಕೆ ದಿಟ್ಟವಾಗಿ ಉತ್ತರ ನೀಡಿದ ಅವಳ ಧೈರ್ಯಕ್ಕೆ ಹೆಣ್ಣು ಯಾವತ್ತೂ ಸಿದ್ಧ .
ಎಂದು ಹೊರ ನಡೆದ ಅಕ್ಕನ ಒಂದು ಛಲದ ನಡಿಗೆ ಭಾವ ಮಲೀನವಾದ ಕೌಶಿಕನ ಮನವನ್ನು ಪರಿವರ್ತಿಸುವ ತಾಯಿ ಸ್ವರೂಪಿಣಿಯಾಗಿ ಅರಮನೆಯನ್ನು ತ್ಯಜಿಸಿ ನಡೆದ ಅಕ್ಕಳ ದಿಟ್ಟ ನಿಲುವು ಇವತ್ತಿನ ಸ್ತ್ರೀಯರಿಗೆ ಪೂರಕವಾಗಿದೆ.
ಅರಸನ +ಮನೆ =ಅರಮನೆ
ನನ್ನ ಮನೆಯ ವಾಸ ಚೆನ್ನಮಲ್ಲಿಕಾರ್ಜುನನ ವಾಸ ಅದೇ ಕೈಲಾಸ. ಎನ್ನುವ ಭಾವ ಅಕ್ಕನದು. ನಿನ್ನ ಮನೆ ಹಂಗಿನ ಅರಮನೆ ಯಾವ ಹಂಗಿನ ಅರಮನೆ ಇಲ್ಲದ ಮನೆ ನನ್ನದು.
ಕುಣಿದು ನಲಿಯುವ ಮನಸ್ಸು ಅಕ್ಕನದು.
ಕೆರಳಿನಲಿಯುವ ಭಾವ ನನ್ನದಲ್ಲ. ಅದು ಚೆನ್ನಮ್ಮಲ್ಲಿಕಾರ್ಜುನನಿಗೆ ಬಿಟ್ಟಿದ್ದು. ಎಂದು ಕೂಗುವ ಅವಳ ಮನ ಒಳಗಿನ ತುಡಿತ ಭಾವ ಅಲ್ಲಿರುವ ಮರ ಗಿಡ ಪಕ್ಷಿ ಪ್ರಾಣಿ ಮಣ್ಣೂ ಕಲ್ಲೂ ಕೂಡ ಕರಗಿ ಕಂಬನಿ ಗರಿಯುವಂತಿದೆ.
—————————————–
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ.