‘ಭರವಸೆ’ ರಾಧಿಕಾ ಗಣೇಶ್ ಅವರ ಸಣ್ಣ ಕಥೆ

ರಘುವೀರ ರಾಧಾರದ್ದು ಹಿರಿಯರು ನೋಡಿ ಮಾಡಿದ ವಿವಾಹ
ರಘುವೀರ ಬಿಸಿನೆಸ್ ಮ್ಯಾನ್ ಹತ್ತು ಹಲವು ಊರಗಳಲ್ಲಿ ತಿರುಗಾಡಿದ ವ್ಯಕ್ತಿ ವ್ಯಾಪಾರ,ವ್ಯವಹಾರ ಚೆನ್ನಾಗಿತ್ತು ಸ್ನೇಹಿತರು, ಬಂಧು-ಬಳಗದಲ್ಲಿ ಅವನಿಗೊಂದು ಹೆಸರು ಗೌರವವೂ ಇತ್ತು

ಮದುವೆಯಾದ 5 ನೇ ವರ್ಷಕ್ಕೆ ರಮಿತ್ ಹುಟ್ಟಿದ್ದ
15 ದಿನಗಳಾಗುವ ಹೊತ್ತಿಗೆ ಮನೆಯವರಿಗೆ ಮಗುವಿನ ಕಣ್ಣುಗಳ ಬಗ್ಗೆ ಸಂಶಯ ಬಂದು ಪರೀಕ್ಷಿಸಿದಾಗ ತಿಳಿದುಬಂದಿದ್ದು ಮಗು ಹುಟ್ಟುವಾಗಲೇ ಅಂಧತ್ವವನ್ನು ಜೊತೆಯಲ್ಲೇ ತಂದಿದೆ ಎಂದು
ರಾಧಾಳ ದುಃಖಕ್ಕೆ ಪಾರವೇ ಇರಲಿಲ್ಲ ಮಡಿಲನ್ನು ತುಂಬಿಯೂ ಈ ತರ ಮೋಸ ಮಾಡಿದೆಯಲ್ಲಾ ಎಂದು ದೇವರ ಮೇಲೆ ಮುನಿಸಿಕೊಂಡಳು

ಆಗ ರಘುವೀರ ನೋಡು ಆಗಿದ್ದು ಆಗಿ ಹೋಯ್ತು ಏನಿದ್ದರೂ ಅವನು ನಮ್ಮ ಮಗು
ವಿಕಲಚೇತನರಲ್ಲಿ ಯಾವುದಾದರೂ ಒಂದು ವಿಶೇಷತೆ ಇದ್ದೇ ಇರುತ್ತೆ ನಮ್ಮ ಮಗುವಿನಲ್ಲಿ ಏನಿದೆ ಅಂತ ತಿಳಿದು ಅವನು ಅದರಲ್ಲಿ ಪ್ರಾವೀಣ್ಯತೆ ಪಡೆಯುವಂತೆ ಮಾಡೋಣ ಎಂದಾಗ ರಾಧಳಿಗೂ ಸರಿಯೆನಿಸಿತು

ನಿಜಕ್ಕೂ ರಮಿತ್ ನ ಐಕ್ಯೂ ಮಟ್ಟ ಬಹಳ ಉತ್ತಮವಿತ್ತು
ಒಮ್ಮೆ ಪರಿಚಯವಾದ ವ್ಯಕ್ತಿಯ ಮಾತಿನಿಂದಲೇ ಅವರನ್ನು ಗುರುತು ಹಿಡಿಯುತ್ತಿದ್ದ
ಒಂದು ಸಲ ಕೇಳಿದ ಹಾಡನ್ನು ಕೂಡಲೇ ಗ್ರಹಿಸಿ ಬಿಡುತಿದ್ದ ಇದನ್ನು ಕಂಡುಕೊಂಡ ದಂಪತಿಗಳು ಅವನನ್ನು ಸಾಮಾನ್ಯ ಮಕ್ಕಳು ಹೋಗುವ ಶಾಲೆಗೆ ಸೇರಿಸಿದರು ಅಲ್ಲಿ ಅವನು ಅಧ್ಯಾಪಕರು ಹೇಳುವ ಪಾಠಗಳನ್ನ ಕೇಳಿಯೇ ಪರೀಕ್ಷೆಯಲ್ಲಿ ಉತ್ತರ ಹೇಳುತ್ತಿದ್ದ

ರಘುಪತಿ ತನ್ನ ಎಲ್ಲಾ ವ್ಯವಹಾರವನ್ನು ಒಬ್ಬರಿಗೆ ವಹಿಸಿಕೊಟ್ಟು ತಾನು ಕೇವಲ ಮೇಲ್ವಿಚಾರಣೆ ಮಾಡತೊಡಗಿದ ತನ್ನೆಲ್ಲಾ ಸಮಯವನ್ನು ಮಗನಿಗಾಗಿ ಮೀಸಲಿರಿಸಿದ ಅವನ ಜೊತೆ ಶಾಲೆಯಲ್ಲೇ ಕುಳಿತು ನಾನಿದ್ದೇನೆ ಎಂಬ ಧೈರ್ಯ ತುಂಬಿದ
ಅವನಿಗೆ ಬ್ರೈಲ್ ಲಿಪಿಯ ಪರಿಚಯ ಮಾಡಿಕೊಡಲಾಯಿತು
ಮುಂದೆ ಅವನು 8ನೇ ತರಗತಿಯಲ್ಲಿ ಇರುವಾಗಲೇ 10ನೇ ತರಗತಿಯ ಪರೀಕ್ಷೆ ಬರೆಯುವ ಸಾಮರ್ಥ್ಯ ಹೊಂದಿದ್ದ
ಅವನ ಕಂಠಸಿರಿ ಬಹಳ ಉತ್ತಮವಿದ್ದು ಒಳ್ಳೆ ಗಾಯಕನೂ ಆಗಿದ್ದ
ದೇವರು ಒಂದನ್ನು ಕಿತ್ತುಕೊಂಡರೂ ಇನ್ನೊಂದನ್ನು ಕೊಟ್ಟೇ ಕೊಡುತ್ತಾನೆ ಎಂಬುದಕ್ಕೆ ರಮಿತ್ ಉದಾಹರಣೆಯಾದ
ತನ್ನ ಪರಿಶ್ರಮ,ಹೆತ್ತವರ ಸಹಕಾರದಿಂದ ರಮಿತ್ ಈಗ ವಿಶ್ವ ವಿದ್ಯಾನಿಲಯ ಒಂದರಲ್ಲಿ ಪ್ರಾಧ್ಯಾಪಕ,ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕ

ಅವನ ಅಭ್ಯುದಯ ಕಂಡು ಹೆತ್ತವರು ಸಂಭ್ರಮಿಸಿದರು
ಮಗುವಿಗೆ ಕಣ್ಣಿಲ್ವಂತೆ ಎಂದು ಹಿಂದಿನಿಂದ ಮಾತನಾಡಿದವರೇ ಇಂದು ಅವನ ಬಳಿ ಬಂದು ಮಾತನಾಡಿ ಪರಿಚಯ ಮಾಡಿಕೊಳ್ಳಲು ಹಾತೊರೆಯತೊಡಗಿದರು

ಇತ್ತ ರಘುವೀರನ ಆರೋಗ್ಯದಲ್ಲಿ ಏರುಪೇರಾಗ ತೊಡಗಿತು
ಮೊದಮೊದಲು ಏನೆಂದು ತಿಳಿಯಲಿಲ್ಲ ಸೂಕ್ಷ್ಮ ತಪಾಸಣೆ ಮಾಡಿದಾಗ ಅವನ ಎರಡೂ ಕಿಡ್ನಿಯಲ್ಲಿ ತೊಂದರೆ ಇರುವುದು ಕಂಡು ಬಂತು
ದೇಹಕ್ಕೆ ಕನಿಷ್ಠ ಒಂದು ಕಿಡ್ನಿಯಾದರೂ ಬೇಕಾದ ಕಾರಣ
ಕಿಡ್ನಿ ದಾನಿಗಳನ್ನು ಹುಡುಕಿದರೂ ತತಕ್ಷಣಕ್ಕೆ ಎಲ್ಲಿಯೂ ಸಿಗದೇ ಹೋದಾಗ ರಘುವೀರ ಹತಾಶೆಗೊಂಡ ಇದನ್ನು ಅರಿತ ರಮಿತ್ ತಾನೇ ತಂದೆಗೆ ತನ್ನ ಒಂದು ಕಿಡ್ನಿ ನೀಡಲು ಮುಂದಾದ ಇದನ್ನು ಕೇಳಿ ರಘುವೀರ್ ಬೇಡ ಮಗು
ನಾನೇನಿದ್ದರೂ ಉರುಳುವ ಮರ ನೀನಿನ್ನೂ ಬಾಳಿ ಬದುಕಬೇಕಾದ ಜೀವ ಎಂದಾಗ
ಅಪ್ಪಾ ಅಂದು ನನ್ನ ಬಾಳಿಗೆ ಬಂದ ಅಂಧತ್ವ ವೆಂಬ ಶಾಪವನ್ನು ವರವಾಗಿ ಬದಲಾಯಿಸಿದ ದೇವರು ನೀವು ಇಂದು ನಿಮ್ಮನ್ನು ನಾನು ಈ ನೋವಿನಿಂದ ಹೊರಗೆ ತಂದೇ ತರುವೆ ..
ನಾ ನಿಮ್ಮ ಕೈ ಬಿಡಲಾರೆ ಅಪ್ಪಾ ಎಂದಾಗ ಕತ್ತಲೆಯ ಕೋಣೆಯಲ್ಲಿ ಭರವಸೆಯ ಬೆಳಕು ಮೂಡಿದಂತಾಯ್ತು

—————————————————–

Leave a Reply

Back To Top