ಸತೀಶ್ ಬಿಳಿಯೂರು ಅವರ ಕವಿತೆ-ಬೆಳದಿಂಗಳ ಬೆಳಕು

ಬದುಕೊಂದು ರೂಪ ಪಡೆದು
ನೆಮ್ಮದಿ ಬಾಳು ಒದಗಿ ಬಂದರೆ
ಮೊಗದಲಿಂದು ಮೂಡಿದ ನಗು
ಹುಣ್ಣಿಮೆ ರಾತ್ರಿಯ ಬೆಳದಿಂಗಳು

ಕರ್ಮದ ಕಳೆ ತೊಳೆದು
ಇಂದು ಜೀವನ ಪಾವನಗೊಂಡರೆ
ಆ ಮನಸು ಚುಕ್ಕಿ ಕಳೆಯಿರದ
ಶುಭ್ರತೆಯ ಬಿಳಿ ಹಾಳೆಗಳು

ನೋವು ಸಂಕಟ ಕಳೆದು
ದಿನ ಮನಃಶಾಂತಿಗೊಂಡರೆ
ಭರವಸೆ ಬಳ್ಳಿಯ ಚಿಗುರಿದ
ಹೊಸತನದ ಚಿಗುರುಗಳು

ಸೋಲನ್ನೇ ಮೆಟ್ಟಿಲೀಗಿಸಿ ಗೆದ್ದು
ನಂಬಿಕೆ ಛಲದಿಂದ ಸಾಗಿದರೆ
ಅದು ಮುಂದಿನ ದಿನದ
ನಿನ್ನ ರೋಚಕ ತಿರುವುಗಳು

ದೇವರು ತುಂಬಿದ ಕೊಡವನು
ತುಳುಕದೆ ಮಿತಿಯೊಳಗಿದ್ದರೆ
ನಿನ್ನ ಕೊನೆಯವರೆಗಿನ ಬದುಕು
ಸಂತಸದ ತುತ್ತಿನ ಮುತ್ತುಗಳು


Leave a Reply

Back To Top