ಮಕ್ಕಳ ವಿಭಾಗ
ಅನಸೂಯ.ಜಹಗೀರದಾರ
ಶಿಶುಗೀತೆ
ಮಳೆ ಹನಿಯೊಂದು ಮುನಿಸಿಕೊಂಡಿತ್ತು..
ದೇವರಲಿ..
ತಾನು ಚಿಕ್ಕದೆಂದು..ಬಹಳ ನೋವಿನಲಿ..
ಚಿಕ್ಕ ಚಿಕ್ಕ ಹನಿ ನಿರಂತರ ಸುರಿಯೆ..
ಹೊನಲಾಗಿ ಹರಿಯೆ..
ಸಾಟಿಯಾವುದು..?
ಅಳಿಲೊಂದು ಮುನಿಸಿಕೊಂಡಿತ್ತು ದೇವರಲಿ.
ತನ್ನ ಕೈ ಇರುವುದೇ ಚಿಕ್ಕವು ಜೀವಿಸುವುದೆಂತು ಈ ಭುವಿಯಲಿ..
ಚಿಕ್ಕ ಕೈಗೆ ತಕ್ಕ ಚಿಕ್ಕ ಹೊಟ್ಟೆ ಇಹುದು..
ತಿಂದ ಸ್ವಲ್ಪ ಹಣ್ಣಿಗೂ
ತೇಗಬಹುದು..
ಆಮೆಯೊಂದು ಮುನಿಸಿತ್ತು ದೇವರಲಿ..
ತೆವಳಿ ನಡೆಯುವ ಬಗೆಯೆಂತು ಈ ಧರೆಯಲಿ…
ಬಿಡದಂತೆ ಸತತ ನಡೆದು ನೀನು ಬರಲು…
ತಲುಪಿದೆ ನೋಡು ನಿನ್ನ ಗುರಿ
ಎದುರಿರಲು…
ಯಾವುದೂ ಶ್ರೇಷ್ಠ ವೂ ಯಾವುದೂ ಕನಿಷ್ಠವಲ್ಲ ಈಜಗದಲಿ..
ಅವರವರ ಪಾತ್ರ ನಿರ್ವಹಿಸಬೇಕಷ್ಟೇ..
ಶುದ್ಧ ಮನದಲಿ..
ಸೂಪರ್ ಮೇಡಂ ಜೀ