‘ಕರುಗಿದ ಬದುಕು’ಸಣ್ಣಕಥೆ-ಸವಿತಾ ಮುದ್ಗಲ್

ಬೆಳಿಗ್ಗೆ ಅಡಿಗೆ ಮನೇಲಿ ಸರಸಮ್ಮ್ ತನ್ನ ಕೆಲಸ ಮುಗಿಸಿ ಮಗಳ ಕೋಣೆ ಕಡೆಗೆ ಬಂದು……ಸೌಮ್ಯ ಏನು?.. ಇನ್ನು ಕನ್ನಡಿ ಮುಂದೆ ಕೆಲಸ ಮುಗಿದಿಲ್ವಾ?? ನಿನ್ನ ಮದುವೆ ಆದವನು ಉದ್ಧಾರ…ಆದ ಹಾಗೆ ಅಂತ ಸರಸಮ್ಮ ಬಾಗಿಲ ಬಳಿ ಬಂದು ಹೇಳುತ್ತಿದ್ದಳು.
ಇದನ್ ಆಲಿಸಿದ ಮಗಳು… ಅಯ್ಯೋ ಅಮ್ಮ ಇದೇನಿದು ನಿಂದು ದಿನ ರಗಳೆ, ಹೆಣ್ಣು ಮಕ್ಕಳು ರೆಡಿ ಆಗೋದೇ ತಪ್ಪು ಅನ್ನುವ ರೀತಿಯಲ್ಲಿ ಹೇಳೋದು ಕೇಳಿ ಕೇಳಿ ಸಾಕಾಗಿದೆ. ನಿನ್ನಂಗೆ ನಾನು ಗೌರಮ್ಮಳ ತರ ಬದುಕು ಸಾಗಿಸೋಕೆ ಇಷ್ಟ ಆಗಲ್ಲ ಆಯ್ತ…. ಆಗಿನ ಕಾಲಕ್ಕೂ ಈಗಿನ ಟ್ರೆಂಡ್ಗೂ ಅಜಗಜಾoತರ ವ್ಯತ್ಯಾಸವಿದೆ.
ಎಣ್ಣೆ ಹಚ್ಚಿಕ್ಕೊಂಡು ಜಡೆ ಹಾಕಿ ಹೊರಗೆ ಹೋದ್ರೆ ಹಳ್ಳಿಯವರ ಅಂತ ಬೊಟ್ಟು ಮಾಡಿ ಕೇಳುವ ರೀತಿಯಲ್ಲಿ ಅವರ ಮುಖಭಾವ ಇರುತ್ತದೆ.
ಇನ್ನು ಫ್ರೆಂಡ್ಸ್ ಎಲ್ಲ ಟ್ರಿಮ್ ಆಗಿ ರೆಡಿ ಆಗಿ, ವೆಸ್ಟೆರ್ನ್ ಡ್ರೆಸ್ ಹಾಕ್ಕೊಂಡು, ಹೈ ಹೀಲ್ಡ್ ಸ್ಯಾಂಡಲ್ ಮೆಟ್ಟು, ಲೆತರ್ ಬ್ಯಾಗ್ ಹಾಕ್ಕೊಂಡು, ತುಟಿಗೆ ಲಿಪ್ಸ್ಟಿಕ್ ಹಾಕಿರುವಾಗ ನಾನು ಹಾಗೆ ಹೊರಗಡೆ ಹೋಗ್ಲಿಕ್ಕೆ ಆಗುತ್ತ ಹೇಳು??
ಆಗ ಸರಸಮ್ಮ್..
ಅವರು ಹೇಗೆ ಇರಲಿ,ನಮ್ಮ ಬದುಕು ನಾವಿದ್ದ ಹಾಗೆ ಇರೋದು ಚಂದ!..
 ಬೇರೆಯವರ ಬದುಕಿಗೆ ಹೋಲಿಕೆ ಮಾಡಿಕೊಂಡು ನಾವಿಲ್ಲಿ ಬದುಕಬಾರದು.ಯಾರೋ ಏನೋ ಹೇಗೊಗೋ ಬದುಕುತ್ತಿರುತ್ತಾರೆ. ಅವರ ಬದುಕಿನಂತೆ ನಾವು ಬದುಕುವುದು ಸರಿಯಲ್ಲ.
 ನಿನಗೆ ಬುದ್ಧಿ ಹೇಳುವುದರಲ್ಲಿ ಅರ್ಥವಿಲ್ಲವೆಂದು ಸರಸಮ್ಮ ಮತ್ತೆ ತನ್ನ ಅಡಿಗೆ ಮನೆ ಕಡೆ ಹೋಗುತ್ತಾಳೆ.
ಆಗ ಸೌಮ್ಯ ರೆಡಿಯಾಗಿ ತನ್ನ ಆಫೀಸಿಗೆ ಹೊರಟು ಹೋಗುತ್ತಾಳೆ.
 ಸೌಮ್ಯ ತನ್ನ ನೈಜತೆಯ ಬದುಕನ್ನು ಬದಿಗಿಟ್ಟು ಬೇರೆಯವರಂತೆ ಬದುಕಲು ಹೋರಾಟ ಮಾಡುತ್ತಿರುತ್ತಾಳೆ. ತನ್ನೆಲ್ಲ ಸಹೋದ್ಯೋಗಿಗಳ ಮುಂದೆ ತಾವೇನೋ ತುಂಬಾ ಶ್ರೀಮಂತರಂತೆ ಬಿಂಬಿಸುತ್ತಿರುತ್ತಾಳೆ.

 ಸಮಯ ಕಳೆದಂತೆ ಇವಳಿಗೆ ಒಬ್ಬರ ಪರಿಚಯವಾಗುತ್ತೆ. ಅದು ತನ್ನ ಗೆಳತಿಯಾದ ಋತು ಅಣ್ಣನಾದ ವಿಜಯ್ ಜೊತೆಗೆ ಸ್ನೇಹಉಂಟಾಗಿ ಮುಂದೆ ಅದು ಪ್ರೀತಿಯಾಗಿ ಮತ್ತಷ್ಟು ಗಟ್ಟಿಯಾಗುತ್ತದೆ.
ಋತು ಮತ್ತು ಸೌಮ್ಯ ಇಬ್ಬರು ಗೆಳೆತನ ಬಾಲ್ಯದಿಂದ ಇದ್ದರು ಇವನ ಅಣ್ಣ ವಿಜಯ ಓದಲು ಬೇರೊಂದು ಊರಿನಲ್ಲಿ ಇರೋದ್ರಿಂದ ಇವರ ಬಗ್ಗೆ ಅಷ್ಟೊಂದು ತಿಳಿದಿರಲಿಲ್ಲ.
ಸೌಮ್ಯ ಕೂಡ ಒಂದು ಶ್ರೀ ಮಂತ್ ಕುಟುಂಬದಲ್ಲಿ ಹುಟ್ಟಿರೋ ಕಾರಣಕ್ಕೆ ಸೌಮ್ಯ ಇವಳ ಜೊತೆಗೆ ಸ್ನೇಹ ಮಾಡಿರುತ್ತಾಳೆ.
ಒಟ್ಟಿನಲ್ಲಿ ಅವಳಿಗೆ ಋತುವಿನ ಮುಂದೆ ತಾನೇನು ಕಡಿಮೆ ಅಲ್ಲ ಎಂಬಂತೆ ಬಿಂಬಿಸುತ್ತಿರುತ್ತಾಳೆ.
 ಸೌಮ್ಯ ಮನೆಯಲ್ಲಿ ತುಂಬಾ ಬಡತನ  ಪರಿಸ್ಥಿತಿ… ಈ ವಿಷಯ ಋತುವಿಗೆ ಗೊತ್ತಿರುವುದಿಲ್ಲ.

 ಆಫೀಸಿಗೆ ಅಂದೋ ರಜೆ ಇರುತ್ತದೆ ಹಬ್ಬದ ವಿಶೇಷವಾಗಿ ಅದು ದಸರಾ ಹಬ್ಬ!..
 ಋತು ತನ್ನ ಗೆಳತಿಯಾದ ಸೌಮ್ಯಳಿಗೆ ಫೋನ್ ಮಾಡಿ ಊಟಕ್ಕೆ ಬರಲು ತಿಳಿಸುತ್ತಾಳೆ. ಅಲ್ಲೇ ಕುಳಿತಿದ್ದ ವಿಜಯ ಗೆ ಋತುವು ಏ ಅಣ್ಣ… ಇವತ್ತು ಸೌಮ್ಯನ್ನ ಹಬ್ಬದ ಊಟಕ್ಕೆ ಕರ್ಕೊಂಡು ಬಾರೋ…. ಅಮ್ಮನಿಗೆ ಹೇಳಿದಿನೀ ಅಂತ ತನ್ನ ತಂಗಿ ಋತು ವಿಜಯ್ ಗೆ ಹೇಳಿದಾಗ… ಇತ್ತ ಅವನ ಮನಸ್ಸಿನಲ್ಲಿ ಕೂಡ ಅದೇ ಆಗಿರುತ್ತದೆ.
“ರೋಗಿ ಬಯಸಿದ್ದು ಹಾಲು ಅನ್ನ
ಡಾಕ್ಟರ್ ಹೇಳಿದ್ದು ಕೂಡ ಹಾಲು ಅನ್ನುವ “ಹಾಗೆ ವಿಜಯ ಗೆ ತುಂಬಾ ಸಂತೋಷವಾಗುತ್ತದೆ.
 ವಿಜಯ ಆಗ ತಾನೇ ಋತುವನ್ನು ಕರೆದುಕೊಂಡು ಬರಲು ಹೋಗುತ್ತಾನೆ.

 ಮನೆ ಸಮೀಪಿಸಿದಂತೆ… ವಿಜಯ್ ಸೌಮ್ಯಳಿಗೆ ಕಾಲನ್ನು ಮಾಡಿ….. ಆಕೆಗೆ ಕರೆಂಟ್ ಲೋಕೇಶನ್ ಕಳಿಸಿಕೊಡುವಂತೆ ಕೇಳಿಕೊಳ್ಳುತ್ತಾನೆ.. ಆದರೆ ಸೌಮ್ಯ ಇದಕ್ಕೆ ಒಪ್ಪದೇ…. ನಾನೇ ರೋಡ ಬಳಿ ಬರುತ್ತೇನೆ ಅಲ್ಲಿಂದ ಕರೆದುಕೊಂಡು ಹೋಗುವಿಯಂತೆ ಎಂದು ಹೊರಗಡೆ ಬರುತ್ತಾಳೆ.
ಇದನ್ನ ಗಮನಿಸಿದ ಸರಸಮ್ಮ್ ಅವಳ ಹಿಂದೆ ಹಿಂದೆ ಹೋಗುತ್ತಲೇ…. ಅಲ್ಲೇ ರೋಡ್ ನಲ್ಲಿ ವಿಜಯ್ ಬೈಕ್ ಮೇಲೆ ಕಂಡು…. ಅಯ್ಯೋ ದೇವರೇ ನನ್ನ ಮಗಳಿಗೇನು ಆಗಿದೆ…. ಇವಳು ನಾನು ಅಂದುಕೊಳ್ಳುವ ರೀತಿಯಲ್ಲಿ ಇಲ್ಲ ಇವಳು ತುಂಬಾ ಬದಲಾಗಿದ್ದಾಳೆ…. ಇವಳನ್ನು ಹೀಗೆ ಬಿಟ್ಟರೆ ಒಂದೊಂದು ದಿನ ಪಶ್ಚಾತಾಪ ಪಡುವ ಪರಿಸ್ಥಿತಿ ಬರುವುದು ಖಂಡಿತ ಎಂದು ಮನದಲ್ಲಿ ಅಂದುಕೊಂಡು ಮನೆ ಬಳಿ ಬಂದು ಕೂರುತ್ತಾಳೆ.

 ಸಾಯಂಕಾಲ ಸೌಮ್ಯ ಮನೆಗೆ ಬಂದಾಗ, ಸರಸಮ್ಮ ಸೌಮ್ಯಗೆ ಒಂದು ಪ್ರಶ್ನೆಯನ್ನು ಮಾಡುತ್ತಾಳೆ, ಬೆಳಗ್ಗೆ ನೀನು ಎಲ್ಲಿಗೆ ಹೋಗಿದ್ದೆ?? ಯಾರ ಜೊತೆಗೆ ಹೋಗಿದ್ದೆ ಹೇಳು??? ಅದು ನನಗೆ ಏನನ್ನು ಹೇಳದೆ ಎಲ್ಲಿಗೆ ಹೋಗಿದ್ದು??? ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾಳೆ.
 ಇದನ್ನು ಕೇಳುತ್ತಲೇ ಸೌಮ್ಯಳಿಗೆ ತುಂಬಾ ಕೋಪ ಉಂಟಾಗಿ ಧ್ವನಿ ಜೋರ ಮಾಡುತ್ತಾ… ಯಾಕಮ್ಮಾ ನನಗೆ ಹೊರಗಡೆ ಹೋಗಲು ಅಧಿಕಾರವಿಲ್ಲವಾ??? ನಾನು ಕೂಡ ದುಡಿದು ಬರುತ್ತೇನೆ, ಮನೆಯ ಸಂಪೂರ್ಣ ಜವಾಬ್ದಾರಿ ನಂದೇ ಇದೆ.
 ನಿನಗೆ ಬೇಕಾದಾಗ ದುಡ್ಡನ್ನು ಕೂಡ ಕೊಟ್ಟಿರುವೆ ನನಗೆ ಪ್ರಶ್ನೆ ಮಾಡುತ್ತೀಯಾ ನೀನು? ಎಂದು ಒಂಟಿ ಅಕ್ಷರದಲ್ಲಿ (ಏಕ ವಚನ)ತನ್ನ ತಾಯಿಗೆ ಪ್ರಶ್ನೆ ಮಾಡುತ್ತಾಳೆ.
 ಈ ಮಾತನ್ನು ಕೇಳಿದ ಸರಸಮ್ಮಾಗೆ ಕಣ್ಣಲ್ಲಿ ನೀರು ತುಂಬಿ ಬರುತ್ತೆ.. ನಾನು ತಾಯಿಯಾಗಿ ನಿನ್ನನ್ನ ಪ್ರಶ್ನೆ ಮಾಡಬಾರದೇ?? ಯಾವಾಗಿಂದ ಕಳೆದು ಹೋಯಿತು ನನ್ನ ಅಧಿಕಾರ ಚಲಾಯಿಸುವ  ಭಾಗ್ಯ?? ಎಂದಾಗ….
ಸೌಮ್ಯ….. ಬಿರುಸು ನುಡಿಯಿಂದ…. ನಿನ್ನ ಬದುಕು ಕೂಡ ಬಣ್ಣ ಕರಗಿದ ಬದುಕಂತೆ ಅಲ್ಲವೇ ನನಗೇನು ಗೊತ್ತಿಲ್ಲವೆಂದು ತಿಳಿಬೇಡ???? ನನಗೆಲ್ಲಾ ಅರ್ಥವಾಗಿದೆ.
 ನನ್ನ ನೀನು ಪ್ರಶ್ನೆ ಮಾಡಬೇಡ ಆಯ್ತಾ ಎಂದು ಮತ್ತೆ ತನ್ನ ರೂಮ ಬಳಿ ಹೋಗಿ ಬಾಗಿಲನ್ನು ಹಾಕಿಕೊಳ್ಳುತ್ತಾಳೆ.

ಆಗ….. ಸರಸಮ್ಮ್ನಿಗೆ ದುಃಖ ಉಮ್ಮಳಿಸಿ ಬರುತ್ತೆ… ಅಂದಿನಿಂದ ಅವಳಿಗೆ ಪ್ರಶ್ನೆ ಮಾಡುವುದನ್ನು ಬಿಟ್ಟು ಬಿಡುತ್ತಾಳೆ.
 ಹೀಗೆ ದಿನದಿಂದ ದಿನಕ್ಕೆ ತಿಂಗಳು ಕಳೆದಂತೆ ಇವಳ ವರ್ತನೆ ಕೂಡ ಬದಲಾಗಿ ಹೋಗುತ್ತದೆ.

 ಇತ್ತ ಸೌಮ್ಯ…ವಿಜಯನ ಜೊತೆಗೆ ಸುಳ್ಳನ್ನು ಅದು ಹೀಗೆ …. ತನ್ನ ಕುಟುಂಬದವರು ಯಾರು ಇಲ್ಲ,ತಾನೊಬ್ಬಳೇ ಇರುವುದಾಗಿ ಹೇಳಿಕೊಂಡಿರುತ್ತಾಳೆ.
ಒಂದು ಅನುಕಂಪವೊ ಅಥವಾ ಪ್ರೀತಿಯ ಮೋಹವೋ ತಿಳಿಯದೆ ಸೌಮ್ಯ ಹೇಳಿದ್ದನ್ನೆಲ್ಲ ಸರಿ ಎಂದು ವಿಜಯನಂಬಿರುತ್ತಾನೆ.

 ಇತ್ತ ವಿಜಯನ ಮನೆಯಲ್ಲಿ ಮದುವೆಗೆ ಪ್ರಸ್ತಾಪಿಸಿದಾಗ… ತನ್ನ ತಾಯಿ ಬಳಿ ಸೌಮ್ಯಳನ್ನು ಮದುವೆಯಾಗುವುದಾಗಿ ಹೇಳುತ್ತಾನೆ. ಆದರೆ ವಿಜಯನ ತಾಯಿ ಇದಕ್ಕೆ ಒಪ್ಪುವುದಿಲ್ಲ.
 ಗುರುತು ಪರಿಚಯ ಇಲ್ಲದವರನ್ನು ಕುಲ ಗೋತ್ರ ನೋಡದೆ ಮದುವೆ ಮಾಡಿಕೊಳ್ಳುವುದು ಇಷ್ಟವಿಲ್ಲ ಎಂದು ವಿಜಯನ ಮುಂದೆ ಅವನ ತಾಯಿ ಹೇಳುತ್ತಾಳೆ.
 ವಿಜಯನ ಸೋದರತ್ತೆ ಮಗಳು ಊರಿನಿಂದ ಬರುವುದನ್ನು ನಂತರ ದೀಪಾವಳಿಯ ಪಾಡ್ಯದಂದು ಇವರಿಗೆ ಮಾತುಕತೆ ಆಗಲಿದೆ ಎಂದು ಹೇಳುತ್ತಾಳೆ.
 ಆಗ ವಿಜಯ ನಿಗೆ ತುಂಬಾ ಕೋಪ ಬರುತ್ತದೆ,,ಇದೇನಮ್ಮ ನನ್ನನ್ನು ಒಮ್ಮೆಯೂ ಹೇಳದೆ ಕೇಳದೆ ಸೋದರತ್ತೆ ಮಗಳ ಜೊತೆಗೆ ಮದುವೆ ಮಾತುಕತೆ ನಡೆಯುತ್ತದೆ ಅಂದರೆ ಹೇಗೆ ಹ ಎಂದು ವಾದ ಮಾಡುತ್ತಾನೆ.
ಜೊತೆಗೆ ಇದಕ್ಕೆ ನಂಗೆ ಒಪ್ಪಿಗೆಯಿಲ್ಲ ಮತ್ತು ನಾನು ಮದುವೆಯಾದರೆ ಋತುವಿನ ಫ್ರೆಂಡ್ ಸೌಮ್ಯಳನ್ನು ಮದುವೆಯಾಗುತ್ತೇನೆ ಎನ್ನುತ್ತಾನೆ.
 ಏನು ಆ ಹುಡುಗಿಯನ್ನ ನೀನು ಮದುವೆ ಆಗ್ತೀಯಾ?? ಆ ಹುಡುಗಿಯನ್ನು ನಾನು ಸುಮಾರು ಸಲ ನೋಡಿದ್ದೇನೆ… ನೋಡಲು ಚಂದವಿರಬಹುದು ಆದರೆ ಅವಳ ಕುಲ ಗೋತ್ರ ತಿಳಿಯದೆ ನಾನಂತೂ ಒಪ್ಪುವುದಿಲ್ಲ.
 ಈಗಾಗಲೇ ನನ್ನ ಅಣ್ಣನ ಬಳಿ ಎಲ್ಲಾ ವಿಚಾರವನ್ನು ಮಾತಾಡಿ ಮುಗಿದಿದೆ ಇನ್ನೇನಿದ್ದರೂ ನಿಮ್ಮಿಬ್ಬರ ಮದುವೆ ಮಾಡಿಸುವುದು ಅಷ್ಟೇ, ನೀನು ಏನು ಪ್ರಶ್ನೆ ಮಾಡುವಂತಿಲ್ಲ ಎಂದು ಬಹು ಕಟುವಾಗಿ ಮಾತಾಡುತ್ತಾಳೆ.

 ಮರುದಿನ ವಿಜಯ್ ತನ್ನ ಆಫೀಸಿನಲ್ಲಿ ತುಂಬಾ ಮಂಕಾಗಿ ಕುಳಿತಿರುತ್ತಾನೆ.
 ಇದನ್ನು ಗಮನಿಸಿದ ಸೌಮ್ಯ…. ಟೀ ಬ್ರೇಕ್ ನಲ್ಲಿ ಇವನ ಬಳಿ ಬಂತು ಮಾತಾಡುತ್ತಾಳೆ.
 ಯಾಕೆ ವಿಜಯ್ ಈ ದಿನ ಯಾಕೋ ಒಂದು ರೀತಿ ಇದೆಯಲ್ಲ ಆರೋಗ್ಯ ಸರಿ ಇಲ್ವಾ ಎಂದು ಪ್ರಶ್ನೆ ಮಾಡುತ್ತಾಳೆ.

 ಆಗ ವಿಜಯ್ ತನ್ನ ಮನೆಯಲ್ಲಿ ತಮ್ಮಮ್ಮನ ಜೋಡಿ ಮಾತಾಡಿದ ವಿಷಯವನ್ನು ಈಕೆಯ ಬಳಿ ಹೇಳುತ್ತಾನೆ.
 ಅದಕ್ಕೆ ಸೌಮ್ಯ ವಿಜಯ್ ಇದಕ್ಕೆ ನಿನ್ನ ಉತ್ತರವೇನು?? ಎಂದು ಕೇಳಿದಾಗ ಮೌನವಹಿಸುತ್ತಾನೆ.
 ಸರಿ ನೀನು ಮಾತಾಡದಿದ್ದರೆ ಪರವಾಗಿಲ್ಲ ಹೋಗಿ ಕಾಫಿ ಕುಡಿದುಕೊಂಡು ಬರೋಣ ಬಾ ಎಂದು ಅವನ ಕೈಯನ್ನು ಹಿಡಿದು ಹೊರಗಡೆ ಕರೆದುಕೊಂಡು ಹೋಗುತ್ತಾಳೆ.
 ಅಲ್ಲಿಯೂ ಕೂಡ ಅವನು ಏನನ್ನು ಮಾತಾಡದೆ ಸುಮ್ಮನೆ ಕಾಫಿಯನ್ನು ಕುಡಿದು ಪುನಃ ಆಫೀಸರ್ ಒಳಗೆ ಬರುತ್ತಾನೆ.

 ಕೆಲಸ ಮುಗಿದ ನಂತರ ಇಬ್ಬರು ಮನೆಗೆ ಹೋಗುವ ಸಮಯದಲ್ಲಿ…. ಸೌಮ್ಯ ವಿಜಯನ ಬಳಿ ಬಂದು…. ಈಗಲಾದರೂ ತಿಳಿಸಿವೆಯ?????ಏನೆಂದು ವಿಚಾರ ಮಾಡಿರುವೆ ನಮ್ಮಿಬ್ಬರ ವಿಷಯ ಹೇಗೆ??? ಅಂದರು ಅವನು ಅದಕ್ಕೂ ಕೂಡ ಉತ್ತರವನ್ನು ನೀಡುವುದಿಲ್ಲ.
 ಒಮ್ಮಿಂದಲೇ ಬೈಕ್ ಮೇಲೆಕುಳಿತು ಬೈಕೀ ಯನ್ನು ಆನ್ ಮಾಡಿ ಹೊರಟು ಹೋಗುತ್ತಾನೆ…. ಇತ್ತ ಸೌಮ್ಯ… ವಿಜಯ್.. ವಿಜಯ್ ಎಂದು ಕೂಗುತ್ತಲೇ ಬೇಜಾರಾಗಿ ಮನೆಗೆ ನಡುದುಕೊಂಡು ಬರುತ್ತಾಳೆ.
ಸೌಮ್ಯ ಹೀಗೆ ಮನೆಗೆ ಬಂದ ಮೇಲೆ ಯಾಕೋ ಇವಳಿಗೆ ಸ್ವಲ್ಪ ಆರಾಮ ಇಲ್ಲದಂತಾಗಿ ಹಾಗೆಯೇ ಬೆಡ್ ಮೇಲೆ ಮಲಗಿ ನಿದ್ದೆಗೆ ಜಾರುತಾಳೆ.
ಮರುದಿನ ತುಂಬಾ ಜ್ವರ ಬಂದು ಹಾಸ್ಪಿಟಲ್ ಗೆ ಹೋದಾಗ ಇವಳಿಗೆ ಒಂದು ಆಘಾತ ಕಾದಿರುತ್ತದೆ.
ಇವಳಿಗೆ ಕೆಲವೊಂದು ಚೆಕ್ಅಪ್ ಮಾಡಲು ಡಾಕ್ಟರ್ ಕೊಟ್ಟ ನಂತರ, ಕೈಗೆ ಬಂದ ರಿಪೋರ್ಟ್ ನೋಡಿ ತುಂಬಾ ಕುಗ್ಗಿ ಹೋಗಿರುತ್ತಾಳೆ.
ಡಾಕ್ಟರ್ ಇವಳಿಗೆ ಸ್ವಲ್ಪ ದಿನ ರಜೆಯಲ್ಲಿ ಇರಬೇಕು ಅಂದಿದ್ದಕ್ಕೆ ರಜೆ ಹಾಕಿ ಮನೇಲಿ ಇರುತ್ತತಾಳೆ.
ಸೌಮ್ಯ ಮನೆಯಿಂದ ವಿಜಯ್ ಮತ್ತು ಋತುವಿಗೆ ಪದೇ ಪದೇ ಕಾಲ್ ಮಾಡಿದರು ಯಾರೊಬ್ಬರೂ ಉತ್ತರಿಸುತ್ತಿರಲಿಲ್ಲ.
 ಇವಳಿಗೆ ಆರೋಗ್ಯ ಸರಿಯಿಲ್ಲದ ಕಾರಣ ಜೊತೆಗೆ ಇವರಿಬ್ಬರೂ ಮಾತಾಡದೆ ಇರುವುದರಿಂದ ಮತ್ತಷ್ಟು ಮಾನಸಿಕವಾಗಿ ಕುಗ್ಗಿ ಹೋಗುತ್ತಾಳೆ.

 ಇತ್ತ ವಿಜಯನ ಮನೆಯಲ್ಲಿ…, ತನ್ನ ಸೋದರತ್ತೆ ಮಗಳ ಜೋಡಿ ನಿಶ್ಚಿತಾರ್ಥ ನಡೆದು ಹೋಗುತ್ತದೆ. ಸೌಮ್ಯಳಿಗೆ ತಿಳಿದು ಬರುತ್ತದೆ.
 ಕೂಡಲೇ ಅವಳು ಆಟೊ ಮಾಡಿಕೊಂಡು ವಿಜಯನ ಮನೆ ಬಳಿ ಬಂದು…. ಸೀದಾ ಮನೆ ಒಳಗೆ ಬರುತ್ತಾಳೆ.
 ಎಲ್ಲರೂ ಅಲ್ಲೇ ಹಾಲಲ್ಲಿ ಕುಳಿತಿರುತ್ತಾರೆ..
 ಹೋಗುತ್ತಲೇ ವಿಜಯ ಅಂಗಿಯನ್ನು ಹಿಡಿದು ಕೇಳುತ್ತಾಳೆ… ನೀನು ಮಾಡಿದ್ದು ಸರಿ ಇದೆಯಾ.???? ನನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿ ಈಗ ನೀನು ನಿಶ್ಚಿತಾರ್ಥ ಮಾಡಿಕೊಂಡಿದ್ದೀಯ?? ನಾನು ಹೋಗಿ ಪೋಲಿಸ್ ಕಂಪ್ಲೇಂಟು ಕೊಡುವೆ ಎಂದು ಹೇಳುತ್ತಲೇ ಅವರ ಮನೆಯವರೆಲ್ಲ ಆಕೆಯ ಮೇಲೆ ಬೈಯಲು ಪ್ರಾರಂಭಿಸುತ್ತಾರೆ.
 ನಿನಗೆ ಸ್ವಲ್ಪನಾದರೂ ನಾಚಿಕೆ ಮಾನ ಮರ್ಯಾದೆ ಇದ್ದರೆ ಇಲ್ಲಿಂದ ಹೊರಟು ಹೋಗು… ನಮಗೇನು ನಿನಗೆ ಮೋಸ ಮಾಡಬೇಕೆಂಬ ಉದ್ದೇಶವೇನಿಲ್ಲ..
 ಇದು ನಮ್ಮ ಕುಟುಂಬದ ವಿಚಾರಕ್ಕೆ ಅಡ್ಡಿಯಾಗಲು ನೀನು ಯಾರು….. ವಿಜಯ್ ಋತು ನೀನು ಗೆಳೆಯರಾಗಿರಬಹುದು ಆದರೆ ಮನೆಯ ವಿಚಾರಕ್ಕೆ ಪ್ರಶ್ನೆ ಮಾಡಲು ನೀನ್ಯಾರು ಎಂದು ವಿಜಯನ ತಾಯಿ ಪ್ರಶ್ನೆ ಮಾಡುತ್ತಾಳೆ.
 ಜೊತೆಗೇ ನೀನು ಇಷ್ಟು ದಿನ ಒಬ್ಬ ಶ್ರೀಮಂತ ಹುಡುಗಿಯಂತೆ ಬಿಂಬಿಸುವುದನ್ನು ಬಿಟ್ಟು…
ನಿನ್ನ ಬದುಕಿನಂತೆ ಬದುಕುವುದನ್ನು ಕಲಿ ನೀನು ಯಾರು ನಿನ್ನ ಬಂಡವಾಳ ಏನೆಂದು ನಿನ್ನ ನನಗೆ ಗೊತ್ತಾಗಿದೆ….. ಎಲ್ಲಾ ನಿಮ್ಮ ತಾಯಿ ಬಂದು ನನ್ನ ಬಳಿ ಹೇಳಿಕೊಂಡಿದ್ದಾಳೆ, ಎನ್ನುತ್ತಲೇ ಸೌಮ್ಯಳಿಗೆ ಶಾಕ್ ಆಗುತ್ತೆ.
 ಒಂದು ಮಾತನಾಡದೆ ಅದೇ ರಭಸ ದಲ್ಲಿ ಮನೆಗೆ ಹೊರಟು ಬರುತ್ತಾಳೆ.
 ಬಾಗಿಲ ಬಳಿ ತನ್ನ ತಾಯಿ ಕುಳಿತಿರುವುದನ್ನು ನೋಡಿ…. ಸಿಟ್ಟಿನಿಂದ ಏನಮ್ಮ ನೀನು ನನ್ನ ಹೆತ್ತ ತಾಯಿನೇ ನನ್ನ ಬದುಕಿಗೆ ಮುಳ್ಳಾಗಿದಿಯಾ ನೀನು…. ಎಂದು ಅಳುತ್ತಾ ಒಳ ಹೋಗುತ್ತಾಳೆ.
 ಆಗ ಸರಸಮ್ಮ ತನ್ನ ಮಗಳ ಕೈ ಹಿಡಿದು… ಸೌಮ್ಯ ಯಾವ ಮಕ್ಕಳಿಗೂ ತಂದೆ ತಾಯಿಯ ಕೆಟ್ಟದ್ದನ್ನು ಬಯಸುವುದಿಲ್ಲ. ಅವರ ಯೋಗಕ್ಷೇಮ ವಿದ್ಯಾವಂತರಾಗುವುದೆಂಬುದೇ ಅವರ ಬೈಕೆಯಾಗಿರುತ್ತದೆ ಅವರಿಗೂ ಒಂದು ಒಳ್ಳೆಯ ಬದುಕು ಸಿಗಲಿ ಎಂಬುದು ಅವರ ನಿತ್ಯದ ಕನಸಾಗಿರುತ್ತದೆ.
 ನಿನ್ನ ಬದುಕು ಕೆಡಬಾರದೆಂದು ನಾನು ಋತುವಿನ ತಾಯಿಯ ಬಳಿ ಹೋಗಿ ಎಲ್ಲ ವಿಚಾರವನ್ನು ಹೇಳಿ ಬಂದಿದ್ದೇನೆ.
 ನಿನಗೆ ಹೃದಯದಲ್ಲಿ ಹೋಲಿರುವುದನ್ನು ಇನ್ನುವರೆಗೂ ನಾನು ಹೇಳಿರಲಿಲ್ಲ ನೀನೊಬ್ಬಳೇ ಹಾಸ್ಪಿಟಲ್ಗೆ ಹೋದ ಕಾರಣ ಈ ವಿಷಯ ನಿನಗೆ ಗೊತ್ತಾಗಿದೆ. ನೀನು ಬದುಕುವುದು ಕೇವಲ ಆರು ತಿಂಗಳು ಮಾತ್ರ…..ವೆಂದಾಗ ಸೌಮ್ಯಳ ಹೃದಯ ಹೊಡೆದು ಹೋಗುತ್ತದೆ.
 ‘ಸೌಮ್ಯಳ ಬಣ್ಣದ ಬದುಕು ಕರಗಿ ಹೋಗುತ್ತದೆ”….
ಆಗ ಸೌಮ್ಯ ತನ್ನ ತಾಯಿಯ ಕಾಲನ್ನು ಹಿಡಿದು ತಪ್ಪಾಯಿತು ಅಮ್ಮ ಅಂದು ತಬ್ಬಿಕೊಂಡು ಅಳುತ್ತ ಕ್ಷಣದಲ್ಲೇ ಅವಳ ಪ್ರಾಣ ಪಕ್ಷಿ ಹಾರಿ ಹೋಗುತ್ತೆ!…


Leave a Reply

Back To Top