ಕಾವ್ಯ ಸಂಗಾತಿ
ಸವಿತಾ ದೇಶಮುಖ
ಕಾಯುತ್ತಿರುವಳು.
*ಅವನ್ಯಾರೊ- ಎತ್ತ ಹುಟ್ಟಿ
ಬೆಳೆದನೊ-ಬಂದನು ಅವಳ
ಜೀವ ಜವನಕೆ, ಅವಳ
ತನು-ಮನ ಆಳುವ ಅರಸನು…
ತನ್ನದೆಲ್ಲವನ್ನು ತೊರೆದು
ಎಲ್ಲವೂ ನಿನ್ನದೆನ್ನುವ ಭಾವದಿ,
ಅರಳಿ ಎದೆಯ ಮೊಗ್ಗವು
ಅರ್ಪಿಸಿ ಅವಳತನವನು,
ಅವನ ಸಂತಸದಿ
ಅವಳ ಸುಖಿಸುತ..
ಹೊಸ ದಾರಿ ಹೊಸ
ಸಂಸ್ಕೃತಿಯ ಸುಳಿಯಲಿ..
ಕಷ್ಟಕಾರ್ಪಣ್ಯಗಳ ಬದಿಗೊತ್ತಿ
ಅವನ ಖುಷಿಯನ್ನೇ ಮೇಲೆತ್ತಿ
ನಡೆದಿಹಳು ಅವಳು ಎಲ್ಲಿಗೆ…
ಸರ್ವಸ್ವವೂ ನಿನ್ನದೆಂದು
ಬದುಕು ಬವಣಿಯ
ದಾರಿಯಲ್ಲಿ…
ಬರುವ ಸುಖವೆಲ್ಲಾ ನಿನಗಿರಲಿ,
ದುಃಖ- ದುಮ್ಮಾನಗಳು ನನಗಿರಲೆಂಬ-ಅರ್ಪಣೆಯ
ಭಾವದಿ….
ಕ್ಷಣ ಕ್ಷಣಕ್ಕೂ ಅವನಿಗಾಗಿ
ಬದುಕಿ ಬಾಳಿ, ಅವಳ ಆತ್ಮ
ಇರುವೆಕೆಯ ಮರೆತು
ತನ್ನತನವ ಮರೆಮಾಚಿ,
ಅವನ ಸನ್ಮಾನಕ್ಕೆ –
ಎಸೆದಿಹಳು ದಾರಿ..
ಅವನಿಂದಲೇ ಇಹವು
ಅವನಿಂದಲೇ ಪರವು
ಗಾಢ ನಂಬಿಕೆಯಲಿ…
ತುಂಬಿ ತುಳುಕಿದೆ ಮನವು..
ಅವನ ಮೆಚ್ಚುಗೆಯ ಎರಡು
ಮಾತುಗಳ ಕೇಳುವ ತವಕದಿ
ಕಳೆದು ಹೋದವು
ವರ್ಷಗಳು….
ಯುಗ-ಯುಗಗಳಂತೆ
ಅವನದೊಂದು ಒಲುಮೆಯ
ನೋಟಕೆ, ಮನದ ಹಳವಂಡ
ಹರಿದು ಕಾಯುತಿರುವಳು……
ಸವಿತಾ ದೇಶಮುಖ
Wow super madum.
So heartwarming.
Thank you
Nice poem madam