ಎಸ್ ಎಸ್ ಜಿ ಕೊಪ್ಪಳ ಅವರ ಕವಿತೆ-ತೆಂಗು

ತೆಂಗಿನ ಮರವೇ, ದೇವರ ವರವೇ
ನೀ ನಮಗೆ ಕಾಯಕಲ್ಪ ತರುವೇ.
ನಮಗಾಗಿ ಕಲ್ಪವನು ತಂದಿರುವೆ.
ನಿನ್ನ ಒಡಲೆಲ್ಲಾ ಅಮೃತದ ಓಗರವೇ

ನಿನ್ನ ಕಾಯಲ್ಲಿ ನೀರು.
ಸೇರಿದುದು ಹೇಗೆ?
ನೀರಲ್ಲಿಸಿಹಿ ರುಚಿ.
ಬೆರೆತಿದುದು ಹೇಗೆ?
ಕೊಬ್ಬರಿಯ ಮಧ್ಯೆ.
ಸಿಹಿಯಾದ ಹಾಲು.
ಕಾಯಿಯತುಂಬಾ
ಇದೆರುಚಿಕರ ಹಾಲು.

ನೀನೇರಿದೆ ಬಾನೆತ್ತರಕ್ಕೆ.
ಏರಲೇನಾನಿನ್ನಉದ್ದಕ್ಕೆ
ಬಾನಲ್ಲಿ ಬರೆದೆಯಾ
ನಿನ್ನ ವಿಶಿಷ್ಟ ಆಕಾರಗಳ
ನಾಬಿಡಿಸಲೇನಿನ್ನ ಚಿತ್ರಗಳ,

ನಿನ್ನಗರಿಗಳುಹೊಂಬಣ್ಣ
ಚೆಂದ ಅತೀ ಸುಂದರ.
ಮೂಡಿಸಿವೆ ನಮ್ಮಲ್ಲಿ.
ಅವುಸಂತಸದ ಹಂದರ.
ನಿನ್ನ ಅಂಚ ತಲುಪಲು.
ನನಗೆಲ್ಲಿಲ್ಲದ ಆತುರ.

ಅಮ್ಮನ ಕೇಳಲು ಓ ಬೇಡ
ಬಾನೆತ್ತರಕ್ಕೆಏರುವುದು.
ಅಪ್ಪನ ಕೇಳಲುನಿಮಗೆ
ಹುಡುಗಾಟವೇ ಅದು.
ನಿನಗಿಲ್ಲದ ಬೆಳೆಯುವ
ಭಯ ನನಗೇತರದು?

ನಾ ಬಿಡದೇಏರುವೆನು,
ನಿನ್ನಜೊತೆಗೆನಿಲ್ಲುವೆನು
ಗೆಳೆಯನಾಗಿರು ನೀನು.
ಸಹಚರನಾಗಿರುವೆನಾನು

ಬೆಳೆಯುವವರಿಗೆ ಭಯವೇಕೆ?
ಬೆಳೆಯುವವರೆಗೆ ಛಲವಿರಬೇಕು.
ಬಾನ ನೀಲ ಮೇಘವನು
ನಾನು ತಲುಪಬೇಕು.
ಎಲ್ಲರೂ ತಲೆಯೆತ್ತಿ ನನ್ನ ನೋಡಬೇಕು.


Leave a Reply

Back To Top