ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ
ದರ್ಪಣ
ನನ್ನಂತೆ ನೀನು
ನಿನ್ನಂತೆ ಯಾರಿಲ್ಲ
ಇದ್ದಂತೆ ಇರುವೆ
ಇರುವುದೇ ಮಾಡುವೆ
ವಾದಯಿಲ್ಲ ವಿವಾದವಿಲ್ಲ
ಎಲ್ಲ ಇದ್ದಂತೆಯೇ ಭಾವ
ನೀನಿಲ್ಲದೆ ಯಾರೂ ಇಲ್ಲ
ಪ್ರಿಯ ಲತೆ ನೀ..
ಶೃಂಗಾರ ಚೈತನ್ಯ
ನೋಟದಲ್ಲೇ ಹರುಷ
ಏನು ನಿನ್ನ ಮಾಟ
ಹೇಗೆ ಯಾವ ರೀತಿಯಲ್ಲೂ
ಚಂದವೊ ಆನಂದವು
ನಿನ್ನ ನೋಡದೆ ಹೊರ
ಹೋಗುವ ಹಾಗಿಲ್ಲ
ಬಂದೊಡನೆ ನಿನ್ನ ಮುಂದೆಯೇ
ಅವಲಂಬಿತೆ ನೀ
ಸೊಗಸು ನೀನು
ಚೆಂದಕ್ಕೆ ಹೆಸರು
ಕನ್ನಡಿ….
ಗಾಯತ್ರಿ ಎಸ್ ಕೆ