ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
‘ಎರಡು ದಾರಿ’
ನಿನ್ನಂತೆ ವಾದಿಸಲಾರೆ
ನನಗೆ ಗೊತ್ತು
ನಾನು ಸೋಲುವೆ
ನಿನಗೂ ಗೊತ್ತಿದೆ
ಘರ್ಷಣೆಯಿಂದ
ಏನನ್ನೂ ಗೆಲ್ಲಲಾಗದು
ನಿನ್ನಂತೆ
ಜಿದ್ದು ಮಾಡಲಾರೆ
ನನಗೆ ಗೊತ್ತು
ಈ ಹ್ಯಾವಿನಿಂದ
ಏನೂ ಆಗದು
ನಿನಗೂ ಗೊತ್ತಿದೆ
ಹಠವಾದಿ ಪಡೆದರೂ
ಸಂಪೂರ್ಣ ಅವನದಾಗದು
ನಿನ್ನಂತೆ
ಆರ್ಭಟಿಸಲಾರೆ
ನನಗೆ ಗೊತ್ತು
ಅದೆಲ್ಲ ಭಯವಷ್ಟೇ..
ನಿನಗೂ ಗೊತ್ತಿದೆ
ಗರ್ಝನೆಯ ಮೋಡ
ಹನಿ ಸುರಿಸದು
ಗೊತ್ತಾಗಿಯೂ
ಎರಡು ದಾರಿಗಳು
ಕೊನೆಗೂ
ಎರಡಾಗಿಯೇ ಉಳಿದವು
ಅನಸೂಯ ಜಹಗೀರದಾರ
Super madam ji
Thank you so much..
ಮನದಳಲು ಮೂಡಿ ಬಂದ ಕವನ..
ಹಮೀದಾಬೇಗಂ ದೇಸಾಯಿ.
ಧನ್ಯವಾದಗಳು ಮೇಡಮ್.☺
ಸೂಪರ್ ಕವಿತೆ
ಧನ್ಯವಾದಗಳು.☺