ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
‘ಪ್ರತಿ ಹನಿಯೂ….’

ಮಳೆಗಾಲದ ಪ್ರತಿ ಹನಿಯೂ
ನಗುವ ಸಂಪಿಗೆ ಹೂವಂತೆ
ಹಸಿರೆಲೆಯ ಮೇಲಿರುವ ಉಸಿರೂ
ಪ್ರೀತಿ ಬದುಕಿನ ಒಲವಂತೆ
ದಾರಿಯುದ್ದಕ್ಕೂ ತರು ಲತೆ
ಚಿತ್ರವಾಗುವ ಹನಿ ಮಳೆ
ಹೊಳಲು ನೋಡಲು ಕತೆ
ಮಾತಾದರೆ ಇಳೆಗೆ ಕಳೆ

ಹಳ್ಳಿ ಹಸಿರು ನೋಡಲು ಚೆಂದ
ಹರಿವ ಝರಿ ಬದುಕ ಅಂದ
ಗುಡ್ಡ ಬೆಟ್ಟ ನದಿಯ ಸೊಬಗು
ಹಳ್ಳ ಹರಿವು ನೆಲದ ಬೆರಗು
ಮೋಡ ಮಳೆ ಗೆಲುವು
ಹಸಿರು ಉಸಿರು ಅರಿವು
ಮಣ್ಣ ಕಣದಿ ಹಿಗ್ಗಿದ ಸಾರ
ಜೀವ ಜಗದ ಸಗ್ಗದ ಹಾರ
ಉಳಿವ ಸೂತ್ರ ಸೋಜಿಗಕ್ಕೆ
ಮಣ್ಣ ಪಾತ್ರ ಜೀವಿತಕ್ಕೆ
ಮಳೆಯ ಹನಿ ಸಂತಸಕ್ಕೆ
ಮಳೆಬಿಲ್ಲಿನ ಚಂದ ಭಾವಕ್ಕೆ
ನಾಗರಾಜ ಬಿ.ನಾಯ್ಕ

ಸರಳ..ಚಂದ..
ಫಾಲ್ಗುಣ ಗೌಡ ಅಚವೆ
ಓದಿಗೆ ಧನ್ಯವಾದಗಳು
ಚಂದ.
ಧನ್ಯವಾದಗಳು
ಹಸಿ ಹಸಿ ಮಣ್ಣಂತೆ
ಹಸಿ ಹಸಿರು ಬಳ್ಳಿಯಂತೆ
ಹೊಸ ಹೊಸ ಹೂವಂತೆ
ರಾಮಮೂರ್ತಿ ಅಂಕೋಲಾ
ಧನ್ಯವಾದಗಳು
ಸುಂದರವಾಗ ಕವನ ಸರ್
ಶುಭಲಕ್ಷ್ಮಿ ನಾಯಕ
ಧನ್ಯವಾದಗಳು ತಮ್ಮ ಓದಿಗೆ
ಮಳೆಯ ಹನಿಗಳ ಮೇಲಿನ ಒಲವು
ಹಸಿರ ಜೊತೆಗಿನ ಚೆಲುವು
ಮಣ್ಣಿನ ಜೊತೆಗಿನ ಬಂಧ
ಮಳೆಗಾಲದ ಜೊತೆಯ ಅನುಬಂಧ
ಪ್ರತಿ ಸಾಲುಗಳು ಚಂದ ಚಂದ
ನಾನಾ ಬಾಡ
ಧನ್ಯವಾದಗಳು ತಮ್ಮ ಓದಿಗೆ
ಸುಂದರವಾದ ಸರಳವಾದ ಸಾಲುಗಳು ಅಭಿನಂದನೆಗಳು, ಸರ್